ಕನ್ನಡ ಕವಿತೆಗಳು

kannada  kavithegalu

ನಮ್ಮಪ್ಪ ಖರೆನ ಕವಿತೆ

ನಮ್ಮಪ್ಪ ಯಾವಾಗ್ಲೂ ಅವ್ವನ ಬದುಕು ಸಂತ್ಯಾಗ ಹೆಂಗ್ ಕಳ್ದೋದ್ನೋ ಅಂತಾ ಕೇಳ್ತಿದ್ದೆ ಅವ್ವ ಆ ಮಾತಿಗೆ ಮೂಕಿ.

ಅವ್ವ ಹೇಳ್ತಿದ್ಲು 'ನೀನ್ ಥೇಟ್ ನಿಮ್ ಅಪ್ಪನ್ ಹಂಗ' ಕಿವಿಗೆ ಬಿದ್ದೇಟಿಗೆ ಮುರುಕು ಕನ್ನಡಿ ಮುಂದ ನಿಂತು ಹುಡುಕ್ತಿದ್ದೆ ಕಾಣಲೇ ಇಲ್ಲ ಕಂಡಿದ್ದು ಅವ್ವನ ಒಡಕು ಬದುಕು ಮಾತ್ರ

ನನಗೆ ಕಂಡಿದ್ದು ಬದುವಷ್ಟ ಅದ್ರಾಗ ಇಣುಕಿ ಕಣ್ ಕಣ್ ಬಿಟ್ಟು ದ್ದೆ ಅಂಚಿನ ನೆರಳಾಗ ಕುಂತಪ್ಪ ನನ್ನ ನೋಡ್ತಾನನಕೊಂಡು.. ಅವ್ವನ ಕೊಳ್ಳಾಗಿನ ದ್ಯಾವ್ರು ಬೆವರು ಕುಡುದು ಕಳ್ಳಾಗ ಇಳುದು ಕುಣುದಿದ್ದ.

ತೆಲಿಮ್ಯಾಗ ಪುಟ್ಟಿ ಹೊತ್ತವ್ವ ಊರಾಡಾಕ ಹೊಂಟಾಗ ಯಾವುದಾರ ಮನಿಗೆ ಬಾಗಲಾಗ್ಯಾನೇನಂತ ಮನ್ಯಾನವ್ರನೆಲ್ಲಾ ಕೇಳಿದ್ದೆ. ಬಾಗಲಾಗಿ ಕಾಣದಪ್ಪ ಕನಸ್ನ್ಯಾಗ ಉಳುಕೊಂಡ.

ಒಲಿಮುಂದೆ ಕುಂತವ್ವ ರೂಟ್ಪೆ ಬಡಿಬಕಾರ ಕಣ್ಣಾಗ ಉಕ್ಕಿದ್ಲು ಗಂಗಮ್ಮ ತಾಯಿ ನನ್ನ ಕಣ್ಣಾಗ ಉಕ್ಕಿದ ಯಮುನೀನೂ ಕಲಿಸ್ಕೊಂಡು ನೀರುಹರಿದ ತಂಪಿನ ಜಾಡು ಒಳಗ ಅಪ್ಪ ಧಿಗ್ಗಂತಾ ಬಂದಾನೇನೋ ಅಂದ್ರ ಬಂದದ್ದು ಕಟ್ಟು ಕಥೆ ಹುದ್ಲು.

ಅವ್ವಗ ಆಕಿ ಅಪ್ಪ ಯಾರೊ ಯಾವಾಗ್ಲೂ ನನ್ನ ನೋಡಿ ನೀನ ನನ್ನಪ್ಪಂತೇಳಿ ಲಟುಗೆ ಮುರೀತಿದ್ಳು

ಈಕಿಗೆ ನಾ ಅಪ್ಪಾ ಆದಂಗ ನನ್ ಹೊಟ್ಯಾಗಾರ ನಮ್ಮಪ್ಪ ಹುಟ್ಟತಾನ ಅಂತಾ ಅನ್ಕಂಡೆ

ನಮ್ಮಪ್ಪ ಇಷ್ಟೆಲ್ಲಾ ಕತಿ ಹೇಳಿ ಕಣ್ಣಾಗ ನೀರು ತಗಿಬಕಾರೆ ನಂಗನ್ನಿಸ್ತಿತ್ತು ನಮ್ಮಪ್ಪ ಖರೆನಾ ಕವಿತೆ