
ಛತ್ರಪತಿ ಶಿವಾಜಿ
shivaji maharaj , chhatrapati shivaji maharaj , chatrapati sambhaji maharaj , chatrapati , shivaji ,ಛತ್ರಪತಿ ಶಿವಾಜಿ
ವಿಶಾಲ ಸಾಮ್ರಾಜ್ಯ ಸ್ಥಾಪನೆ
ಕಾಲ ಉರುಳುತಿದ್ದಂತೆ ಶಿವಾಜಿಯ ಪ್ರಾಬಲ್ಯ ಬಿಜಾಪುರ ಎಲ್ಲೆಲ್ಲೂ ಹರಡಿತು . ಈ ಸಂಗತಿ ಸುಲ್ತಾನನ ನಿದ್ದೆಗೆಡಿಸಿತು .
ಶಿವಾಜಿ ತನ್ನ ಮೇಲೆ ದಂಡೆತ್ತಿ ಬರಬಹುದೆಂದು ಯೋಚಿಸಿದ ಸುಲ್ತಾನನು ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿಟ್ಟುಕೊಂಡ .
ತೀರಾ ಸಾಮಾನ್ಯನಾಗಿದ್ದ ಶಿವಾಜಿ ತನ್ನ ಚುರುಕುತನದಿಂದ , ಸೂಕ್ಷ್ಮಬುದ್ಧಿಯಿಂದ ಮತ್ತು ದೂರದೃಷ್ಟಿಯಿಂದ ಹಂತ ಹಂತವಾಗಿ ಮೇಲೆಬಂದ .
ಚಿಕ್ಕ ವಯಸ್ಸಿನಲ್ಲಿಯೇ ಉನ್ನತಿಗೆ ಬಂದು ಮೊಗಲ್ ಚಕ್ರವರ್ತಿಗೆ ಸಮನಾಗಿ ನಿಂತ , ಇದು ಆಗ ಎಲ್ಲರನ್ನೂ ಚಕಿತಗೊಳಿಸಿದ ಸಂಗತಿಯೇ ಆಯಿತು .
ಅವನ ಯುದ್ಧ ನಿಮಣತೆ ಪರಾಕ್ರಮಿಗಳೂ ಸೇರಿದಂತೆ ಎಲ್ಲರನ್ನೂ ಬೆರಗಾಗಿಸಿತ್ತು . ಕೋಟೆ , ನಗರ , ಗ್ರಾಮ ಹೀಗೆ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡ ಶಿವಾಜಿ ಅಲ್ಪಕಾಲದಲ್ಲೇ ಧೀರ ಪುರುಷ ಎಂದು ಪ್ರಸಿದ್ಧನಾದನು .
ತೋರಣದುರ್ಗದಲ್ಲಿ ಸಿಕ್ಕ ಹಣವೆಲ್ಲ ವ್ಯಯವಾದ ನಂತರ , ಶಿವಾಜಿ ತನ್ನ ಸೈನಿಕರನ್ನು ಕರೆದುಕೊಂಡು ಕೊಂಕಣ ಪ್ರಾಂತ್ಯಕ್ಕೆ ಹೋದನು .
ಕ್ರಿ.ಶ. 1636 ರಲ್ಲಿ ಅಹಮದ್ನಗರವು ಮೊಗಲರಿಗೂ ಮತ್ತು ಬಿಜಾಪುರದ ಸಂಸ್ಥಾನದವರಿಗೂ ಹಂಚಿಕೆಯಾದಾಗ ಕೊಂಕಣದಲ್ಲಿರುವ ಕಲ್ಯಾಣನಗರ ಪ್ರದೇಶವು ಬಿಜಾಪುರದ ಸುಲ್ತಾನರ ಪಾಲಿಗೆ ಬಂದಿತು .
ಆ ಪ್ರದೇಶದ ಒಂದು ಭಾಗದಲ್ಲಿ ಮೂಲಾನ ಅಹಮ್ಮದ್ ಎಂಬುವನು ಸುಬೇದಾರನಾಗಿದ್ದನು .
ಅವನು ತನ್ನ ಪ್ರಾಂತ್ಯದ ಮೂಲ ಆದಾಯ ಹಣವನ್ನು ವಹರೆಯಟ್ಟು ಬಿಜಾಪುರಕ್ಕೆ ಕಳುಹಿಸುವಾಗ ಅದೇ ಸಮಯಕ್ಕೆ ಬಂದ ಶಿವಾಜಿ ಮತ್ತು ಅವನ ಸೈನಿಕರು ಹಣವನ್ನು ಕಸಿದುಕೊಂಡರು .
ಈ ಸಂಗತಿ ಬಿಜಾಪುರದ ಸುಲ್ತಾನನನ್ನು ಕೆರಳಿಸಿತು . ಮುಂದೆ ಇದೇ ವಿಷಯವು ಯುದ್ಧಕ್ಕೂ ನಾಂದಿಯಾಯಿತು .
ಈ ನಡುವೆ ಶಿವಾಜಿಯು ಲೋಹಗರ ಮೊದಲಾದ ಹಲವು ದುರ್ಗಗಳನ್ನು ವಶಪಡಿಸಿಕೊಂಡನು .
ಒಂದು ಕಡೆ ಶಿವಾಜಿಯು ದುರ್ಗಗಳನ್ನು ಗೆಲ್ಲುತ್ತಿರುವಂತೆ ,
ಅವನ ಸೇನಾಪತಿ ಮತ್ತು ಕೆಲವರು ಕಲ್ಯಾಣನಗರಕ್ಕೆ ಹೋಗಿ ,
ಮೂಲಾನ ಅಹಮ್ಮದ್ನನ್ನು ಸೆರೆಹಿಡಿದುಕೊಂಡು ಬಂದರು .
ಆದರೆ ಶಿವಾಜಿ ಅವನಿಗೆ ತೊಂದರೆ ನೀಡಲಿಲ್ಲ , ಬದಲಾಗಿ ಗೌರವ ನೀಡಿ ಬಿಜಾಪುರಕ್ಕೆ ಕಳುಹಿಸಿಕೊಟ್ಟನು .ಶಿವಾಜಿಯು ಎಂದೂ ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿರಲಿಲ್ಲ .
ಅವನು ಶುದ್ಧ ಚರಿತನು ಆಗಿದ್ದರು ಎಂಬುದಕ್ಕೆ ಕೊಂಕಣ ಪ್ರಾಂತ್ಯದಲ್ಲಿ ನಡೆದ ಒಂದು ಘಟನೆಯನ್ನು ಇತಿಹಾಸಕಾರರು ವಿಶೇಷವಾಗಿ ಉಲ್ಲೇಖಿಸಿದ್ದಾರೆ .
ಕಳೆದ ಮೂಲಾನ ಅಹಮ್ಮದ್ಗೆ ರೂಪವತಿಯಾದ ಸೊಸೆಯೊಬ್ಬಳಿದ್ದಳು .
ಶಿವಾಜಿಯ ಅಪ್ಪ ಸೇನಾಪತಿ ಆವಾಜಿ ಸೋನದೇವನು ಆಕೆಯನ್ನು ಶಿವಾಜಿಗೊಷಿಸಬೇಕೆಂದು ಅವನ ಬಳಿ ಕರೆತಂದನು , ಶಿವಾಜಿ ಪರನಾರಿ ಸಹೋದರನು , ಎಲ್ಲ ಸ್ತ್ರೀಯರನ್ನು ಗೌರವದಿಂದ ನೋಡುತ್ತಿದ್ದವನು .
ಅಹಮ್ಮದ್ನ ಸೊಸೆಯನ್ನು ಕಂಡು ಅವನು ಹೀಗೆಂದನು : “ ಯಾವನು ಯಶಸ್ಸನ್ನು ಪಡೆಯಬೇಕು ಎಂದುಕೊಂಡಿರುವನೋ , ಅವನೆಂದೂ ಪರಸ್ತಿಗೆ ಆಸೆಪಡಬಾರದು .
ಅಷ್ಟೇ ಅಲ್ಲ , ಪ್ರತಿಯೊಬ್ಬ ಪ್ರಜೆಯೂ ರಾಜನಿಗೆ ಮಕ್ಕಳ ಸಮಾನ , ಯಾವನು ಪಶುವಂತೆ ವರ್ತಿಸಿ ರಾಜರಿಗೂ ಪ್ರಜೆಗಳಿಗೂ ಇರುವ ಪವಿತ್ರ ಸಂಬಂಧವನ್ನು ಹಾಳುಮಾಡುವನೋ ಅವನು ನಾಶವಾಗುವನು ಸ್ತ್ರೀಯರನ್ನು ಗೌರವಿಸುವುದು ,
ಅವರ ಮಾನವನ್ನು ಕಾಪಾಡುವುದು ನಮ್ಮ ಧರ್ಮ ” ಶಿವಾಜಿ ಆ ಸ್ತ್ರೀಗೆ ಆಮೂಲ್ಯವಾದ ವಸ್ತ್ರಾಭರಣಗಳನ್ನು ಕೊಟ್ಟು ಬಿಜಾಪುರಕ್ಕೆ ಕಳುಹಿಸಿಕೊಟ್ಟನು ಕೈಕೆಳಗೆ ಕೊಂಕಣ ಪ್ರಾಂತ್ಯದಲ್ಲಿ ಶಿವಾಜಿ ಬಹಳ ಪ್ರಸಿದ್ಧನಾಗುತ್ತಿದ್ದಾನೆ ಎಂದು ತಿಳಿದ ಮಹಮ್ಮದ್ ಆದಿಲ್ ಷಾ ಕಿಡಿಕಿಡಿಯಾದನು ,
ತನ್ನ ನೌಕರಿಮಾಡುತ್ತಿರುವ ಶಾಹಜಿಯು ಅವನ ಮಗನಿಗೆ ಗುಟ್ಟಾಗಿ ಉಪದೇಶಮಾಡಿ ಈ ಕೆಲಸಗಳನ್ನು ಮಾಡಿಸುತ್ತಿದ್ದಾನೆ ಎಂದು ಭ್ರಮಿಸಿ ಶಾಹಜಿಗೆ ಎಚ್ಚರಿಕೆ ಕೊಟ್ಟನು , ಹೆದರಿದ ಶಾಹಜಿ , “ ಅವನು ಕೇವಲ ದೈಹಿಕವಾಗಿ ನನ್ನ ಮಗ ಹೊರತು , ನನಗೂ ನನ್ನ ಮಗನಿಗೂ ಯಾವ ಸಂಬಂಧವೂ ಇಲ್ಲ .
ಅವನು ಮಾಡುತ್ತಿರುವ ಎಲ್ಲ ಕಾರಗಳಿಗೂ ಅವನೇ ಜವಾಬ್ದಾರಿ , ಈ ಕಾರಣದಿಂದ ಅವನನ್ನು ನೀವು ದಂಡಿಸಬಹುದು ” ಎಂದು ಹೇಳಿದನು , ಆದರೆ ಆದಿಲ್ ಹಾಗೆ ಶಾಹಜಿ ಬಗ್ಗೆ ನಂಬಿಕೆ ಸಿಟ್ಟಿನಿಂದ ಕುದಿದ ಅವನು ಶಾಹಜಿಯನ್ನು ಮೋಸದಿಂದ ಬಂಧಿಸಿ ಸೆರೆಮನೆಗೆ ತಳ್ಳಿದನು .
ಅಷ್ಟಕ್ಕೆ ಸುಮ್ಮನಾಗದ ಸುಲ್ತಾನ ಶಾಹಜಿಗೆ ಹೀಗೆ ಹೇಳಿದನು : “ ಶಿವಾಜಿಯು ಆಕ್ರಮಿಸಿದ ಪ್ರದೇಶಗಳೆಲ್ಲವನ್ನೂ ಹಿಂದಿರುಗಿಸ ಬೇಕು , ಇಲ್ಲದಿದ್ದರೆ ನಿನ್ನನ್ನು ಮುಗಿಸಿಬಿಡುವೆನು .
ತಂದೆಯು ಅತ್ಯಂತ ಅಪಾಯದ ಸ್ಥಿತಿಯಲ್ಲಿದ್ದಾರೆಂದು ತಿಳಿದ ಶಿವಾಜಿ ಸಂಕಟಪಟ್ಟನು . ಈಗೇನು ಮಾಡುವುದು ? ತಂದೆಯವರನ್ನು ಹೇಗೆ ಉಳಿಸಿಕೊಳ್ಳುವುದು ? ಎಂದು ಚಿಂತಿಸಿ , ಚಿಂತಿಸಿ ಎರಡು ದಿನ ನಿದ್ದೆ ಇಲ್ಲದೆ ಕಳೆದನು .
ಕಡೆಗೆ ಪತ್ನಿ ಸಯಿಬಾಯಿಯ ಸಲಹೆ ಕೇಳಿದ . ಆಕೆ ತನ್ನ ಪ್ರಾಮಾಣಿಕ ಅನಿಸಿಕೆಯನ್ನು ಹೇಳಿದಳು : ” ಮಾವನವರ ಬಿಡುಗಡೆಯೂ ಆಗಬೇಕು , ಇತ್ತ ಯಾವ ಪ್ರದೇಶಗಳನ್ನೂ ನಾವು ಕಳೆದುಕೊಳ್ಳಬಾರದು , ಸ್ವಾರ್ಥವನ್ನು ಸಾಧಿಸುವುದರಲ್ಲಿ ದೇಶಕ್ಕೆ ಹಾನಿಯಾಗಬಾರದು .
” ಪತ್ನಿಯ ಸಲಹೆ ಶಿವಾಜಿಯ ಮನಸ್ಸಿಗೆ ಹಿಡಿಸಿತು . ” ಯುದ್ಧಮಾಡಿದರೆ ಸುಲ್ತಾನನು ತಂದೆಯನ್ನು ಕೊಲ್ಲುವನು .
ಸಂಧಿಯ ಪ್ರಸ್ತಾಪಮಾಡಿದರೆ ನಾವು ಹೇಡಿಗಳು ಎಂದು ತಿಳಿದು ಏನೇನೋ ಬೇಕೆನ್ನುವನು , ಈ ಕಾರಣದಿಂದ ನಾವು ಉಪಾಯದಿಂದ ತಂದೆಯವರನ್ನು ಬಿಡಿಸಿಕೊಳ್ಳಬೇಕು .
ದೆಹಲಿಯ ಚಕ್ರವರ್ತಿಯಾದ ಷಾಹಜಹಾನ್ನನ್ನು ಕಾಣುವುದೇ ಸರಿಯಾದ ಮಾರ್ಗ ” ಎಂದು ಮಂತ್ರಿಗಳಿಗೆ ಪತ್ನಿಗೆ ಹೇಳಿದನು . ಎಲ್ಲರೂ ಶಿವಾಜಿಯ ಉಪಾಯವನ್ನು ಮೆಚ್ಚಿಕೊಂಡರು .
ಅದೃಷ್ಟಕ್ಕೆ ಎಲ್ಲವೂ ಶಿವಾಜಿ ಅಂದುಕೊಂಡಂತೆ ಸುಗಮವಾಗಿ ಸಾಗಿತು . ಸುಲ್ತಾನ ಶಾಹಜಿಯನ್ನು ಬಿಡಗಡೆಮಾಡಿದನು .
ಆದರೆ 48 ತಿಂಗಳ ಕಾಲ ಬಿಜಾಪುರದಿಂದ ಆಚೆಗೆ ಹೋಗಕೂಡದೆಂದು ಆಜ್ಞೆ ಮಾಡಿದನು . ವಿಷಯ ತಿಳಿದ ಶಿವಾಜಿಗೆ ಮೊದಲು ಬೇಸರವಾದರೂ , ಸದ್ಯ ತನ್ನ ತಂದೆ ಬಂಧಮುಕ್ತರಾದರಲ್ಲ ಮತ್ತು ಪತ್ನಿಯ ಸಲಹೆ ಉತ್ತಮವಾಗಿ ಕೆಲಸಕ್ಕೆ ಬಂದಿತಲ್ಲ ಎಂದು ಸಂತೋಷಪಟ್ಟನು .
ಇಷ್ಟಾದರೂ ಶಿವಾಜಿಯ ಮನಸ್ಸಿನಲ್ಲಿ ಒಂದು ಆತಂಕದ ಎಳೆ ಉಳಿದುಕೊಂಡಿತ್ತು . ಹೀಗಾಗಿ , ಎಂದಾದರೊಂದು ದಿನ ತಂದೆಯನ್ನು ಸುಲ್ತಾನನು ಕೊಲ್ಲಿಸಬಹುದೆಂಬ ಅನಿಸಿಕೆಯಿಂದ ಅವನ ರಾಜ್ಯಕ್ಕೊಳಪಟ್ಟ ಗ್ರಾಮ ಭೂಮಿಗಳನ್ನು ಆಕ್ರಮಿಸುವುದಕ್ಕೆ ಹೋಗದ ಶಿವಾಜಿಯು
ಕ್ರಿ.ಶ. 1649-1653ರ ವರೆಗೆ ನಾಲ್ಕು ವರ್ಷಗಳ ಕಾಲ ಸುಮ್ಮನಿದ್ದನು .
ಇತ್ತ ಸುಲ್ತಾನನೂ ಕೂಡ ಅನವಶ್ಯಕವಾಗಿ ಸಮಸ್ಯೆಯನ್ನು ಮೈಮೇಲೆ ಹಾಕಿಕೊಳ್ಳುವುದು ಬೇಡ ಎಂದು ನಿರ್ಧರಿಸಿ ಶಿವಾಜಿಯನ್ನು ಎದುರುಹಾಕಿಕೊಳ್ಳಲು ಹೋಗಲಿಲ್ಲ .
ಇಷ್ಟಾದರೂ , ಶಿವಾಜಿಯನ್ನು ಹೇಗಾದರೂ ಮಾಡಿ ಹತೋಟಿಗೆ ತರಬೇಕೆಂದು ಬಿಜಾಪುರದ ಸುಲ್ತಾನ ಒಳಗೊಳಗೆ ಯೋಜನೆ ಹಾಕುತ್ತಲೇ ಇದ್ದನು .
ಕೊಂಕಣ ಪ್ರಾಂತ್ಯದ ಘಟ್ಟದ ಘಾಟಿಮಾಥ ಎಂದೂ ಘಟ್ಟದ ಕೆಳಭಾಗದ ಮೇಲ್ಬಾಗದ ಪ್ರದೇಶವನ್ನು ಪ್ರದೇಶವನ್ನು ತಲಕೊಂಕಣ ವೆಂದೂ ಕರೆಯುವುದು ರೂಢಿಯಲ್ಲಿತ್ತು .
ವರುಣಾ – ಕೃಷ್ಣಾ ನದಿಗಳ ನಡುವೆ ಇರುವ ಘಾಟಿಮಾಥವು ಬಿಜಾಪುರ ಸಂಸ್ಥಾನದವರಿಗೆ ಸೇರಿತ್ತು . ಇದರ ಸಮೀಪವಿದ್ದ ಜಾವಲಿ ಎಂಬ ಪ್ರದೇಶಕ್ಕೆ ಚಂದ್ರರಾವು ಮೋರೆ ಎಂಬುವವನು ಪ್ರಬಲ ನಾಯಕನಾಗಿದ್ದನು .
ಅವನ ಕೈಕೆಳಗೆ ಸುಮಾರು ಹತ್ತು ಸಾವಿರ ಸೈನಿಕರು ದುಡಿಯುತ್ತಿದ್ದರು . ಅನೇಕ ದುರ್ಗಗಳು ಮೋರೆಯ ಅಧೀನ ದಲ್ಲಿದ್ದವು .
ನೇರವಾಗಿ ಶಿವಾಜಿಯನ್ನು ಎದುರುಹಾಕಿಕೊಳ್ಳಲು ಹೆದರಿದ ಬಿಜಾಪುರದ ಸುಲ್ತಾನ , ಚಂದ್ರರಾವು ಮೋರೆಯ ಸಹಾಯವನ್ನು ಅಪೇಕ್ಷಿಸಿ ದನು .
ಮೋರೆಯು ಸುಲ್ತಾನನಿಗೆ ನೆರವು ನೀಡಲು ಒಪ್ಪಿ ಬಾಜಿ ಶಾಮರಾಯ ಎಂಬುವವನಿಗೆ ಜವಾಬ್ದಾರಿ ಹೊರಿಸಿದನು .
ಶಾಮರಾಯನು ಶಿವಾಜಿಯನ್ನು ಮಟ್ಟಹಾಕಲು ಜಾವಲಿಯ ಬೆಟ್ಟ – ಗುಡ್ಡಗಳಲ್ಲಿ ಹೊಂಚುಹಾಕಿದನು . ಶಿವಾಜಿ ಜಾಣಾಕ್ಷ , ಸುಲ್ತಾನನ ಕಪಟನಾಟಕವನ್ನು , ಒಳಸಂಚನ್ನು ತನ್ನ ಹಿತೈಷಿಗಳಿಂದ ಪತ್ತೆಮಾಡಿದನು . ಅವನು ಸುಮ್ಮನೆ ಕೂರಲಿಲ್ಲ .
ತಕ್ಷಣ ಹಲವು ಮಂದಿ ಮಾವಳಿಗಳ ದಂಡನ್ನು ಕಟ್ಟಿಕೊಂಡು ಬಾಜಿ ರಾಮರಾಯನ ಪಾಳ್ಯಕ್ಕೆ ಹೋದನು . ಬಾಜಿ ಶಾಮರಾಯ ಶಿವಾಜಿಯ ಆಕ್ರಮಣಕ್ಕೆ ಹೆದರಿ ಕಂಗಾಲಾದನು .
ನೂರಾರು ಸೈನಿಕರು ಹೆದರಿ ಜಾವಲಿಗೆ ಓಡಿಹೋದರು . ಬಿಜಾಪುರದ ಸುಲ್ತಾನ ಮತ್ತು ಚಂದ್ರರಾವು ಮೋರೆ ಸುದ್ದಿಯನ್ನು ಕೇಳಿ ದಂಗಾದರು . ಅವರಿಗೆ ಇನ್ನೊಂದು ಕೆಟ್ಟ ಸುದ್ದಿಯೂ ಇತ್ತು .
ಅವರಲ್ಲಿದ್ದ ಸುಮಾರು ಏಳುನೂರು ಮಂದಿ ಮುಸ್ಲಿಂ ಸೈನಿಕರು ಶಿವಾಜಿಯ ಆಶ್ರಯ ಪಡೆದು ಅವನ ಸೇನೆಗೆ ಸೇರಿದ್ದರು .
ಮುಂದಿನ ದಿನಗಳಲ್ಲಿ ಶಿವಾಜಿ ಎದುರಿಸಿದ ವಿರೋಧಿಗಳು ಹಿಂದೂಗಳಾಗಿದ್ದರೂ ಸರಿ , ಮುಸಲ್ಮಾನ ರಾಗಿದ್ದರೂ ಸರಿ ಈ ಸೈನಿಕರೆಲ್ಲ ಪ್ರಾಮಾಣಿಕವಾಗಿ ಅವರೊಡನೆ ಯುದ್ಧಮಾಡಿ ತಮ್ಮ ರಾಜಭಕ್ತಿಯನ್ನು ಪ್ರದರ್ಶಿಸಿದರು .
ಇಂಥ ಒಂದು ಯುದ್ಧದಲ್ಲಿ ಶಿವಾಜಿ ಜಾವಳಿ ಪ್ರದೇಶವನ್ನು ವಶಪಡಿಸಿಕೊಂಡನು . ಆದರೆ ಅಲ್ಲಿನ ನಿವಾಸಿಗಳಿಗೆ ಯಾವ ರೀತಿಯಲ್ಲೂ ತೊಂದರೆ ನೀಡಬಾರದೆಂದು ಶಿವಾಜಿ ತನ್ನ ಸೈನಿಕರಿಗೆ ಆಜ್ಞಾಪಿಸಿದನು .
ಹಲವು ಪ್ರಮುಖ ನಾಯಕರನ್ನು ಸೆರೆಹಿಡಿಯಲಾಯಿತು . ಜಾವಲಿ ಪ್ರದೇಶದ ಅಭಿವೃದ್ಧಿಗೆ ಶಿವಾಜಿ ತಕ್ಕ ವಿರ್ಪಾಡು ಮಾಡಿದನು .
ಚಂದ್ರರಾವು ಮೊರೆ ಪೂರ್ವಿಕರು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದ ಭಂಡಾರವು ಅವನ ಕೈಸೇರಿತು .
ಆ ಹಣದಿಂದ ಅವನು ಮಹಾಬಲೇಶ್ವರದಲ್ಲಿದ್ದ ಭವಾನಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿ ಅದರ ಸುತ್ತಲೂ ಕೋಟೆಯನ್ನು ನಿರ್ಮಿಸಿ ಅದಕ್ಕೆ ಪ್ರತಾಪಗಢ ಎಂಬ ಹೆಸರನ್ನಿಟ್ಟನು .
ನೂರಾರು ಜಾವಲಿಯನ್ನು ವಶಪಡಿಸಿಕೊಂಡ ನಂತರ ಶಿವಾಜಿಯು ಹಿರಡಸ್ ಮಾವಳ ಎ ೦ ಬ ಪ್ರಾಂತ್ಯದಲ್ಲಿದ್ದ ರೋಹಿಡಾ ಎಂಬ ದುರ್ಗಕ್ಕೆ ಮುತ್ತಿಗೆ ಹಾಕಿ ಅದನ್ನು ವಶಪಡಿಸಿಕೊಂಡನು .
ಆನಂತರ ಕೊಂಕಣದೇಶದ ಶೃಂಗಾರಪುರ ವನ್ನು ಗೆದ್ದುಕೊಂಡನು .
ಶಿವಾಜಿ ಬರುವನೆಂಬ ಭಯದಿಂದ ಅಲ್ಲಿಯ ದೊರೆ ಸುರಬೆ ಎಂಬುವವನು ಮುಂಚೆಯೇ ಪಲಾಯನಮಾಡಿದ್ದನು .
ಆದರೆ ಶಿವಾಜಿ ಅವನನ್ನು ವಾಪಸ್ಸು ಕರೆಸಿಕೊಂಡು ವರ್ಷಕ್ಕೊಮ್ಮೆ ಕಪ್ಪ ಕೊಡಬೇಕೆಂದೂ ಯುದ್ಧದ ಸಮಯದಲ್ಲಿ ಸಹಾಯ ಮಾಡಬೇಕೆಂದೂ ಆದೇಶಿಸಿ ರಾಯಗಢಕ್ಕೆ ಹೊರಟುಹೋದನು .
ಮೋರೋಪಂತ ಪಿಂಗಳನೆಂಬ ದೇಶಸ್ಥ ಬ್ರಾಹ್ಮಣನು ಶಿವಾಜಿಗೆ ಬಹಳ ಆಪ್ತನಾಗಿದ್ದನು .
ಅವನು ವೀರನೂ , ಧೀರನೂ , ಸಾಹಸಿಯೂ ಆಗಿದ್ದನಲ್ಲದೆ ಅನೇಕ ಯುದ್ಧಗಳನ್ನು ಮಾಡಿ ಕೈಬಿಟ್ಟುಹೋಗಿದ್ದ ಊರುಗಳನ್ನು ಮತ್ತೆ ವಶಪಡಿಸಿಕೊಂಡಿದ್ದನು ,
ಕೆಲವು ಪ್ರದೇಶಗಳಲ್ಲಿ ಕೋಟೆಗಳನ್ನು ನಿರ್ಮಿಸಿದ್ದನು . ಸೈನಿಕರಲ್ಲಿ ಶಿಸ್ತು ತಂದಿದ್ದನು . ಅವನು ನಿರ್ಮಿಸಿದ ‘ ಪ್ರತಾಪಗಢ ‘ ಇತಿಹಾಸದಲ್ಲಿ ಪ್ರಸಿದ್ಧವಾಗಿದೆ .
ಆ ಕೋಟೆಯ ವಿನೂತನ ನಿರ್ಮಾಣ ವಿನ್ಯಾಸವನ್ನು ಕಂಡ ಶಿವಾಜಿ ಮೋರೋಪಂತ ಪಿಂಗಳನ ಮೇಲೆ ವಿಶೇಷ ಪ್ರೀತಿ – ವಿಶ್ವಾಸಗಳನ್ನಿಟ್ಟಿದ್ದನು .
ಕ್ರಿ.ಶ. 1655 ರ ವೇಳೆಗೆ ಇಂದಿನ ಮಹಾರಾಷ್ಟ್ರದ ಜಾವಲಿ ,
ಪ್ರತಾಪಗಢ ,
ಸೂಪ ,
ದಾರಾಮತಿ ,
ಕಲ್ಯಾಣ ,
ರೋಹಿಡ ,
ತಿಕೋನ ,
ಲೋಹಗಢ , ಮುಂತಾದವುಗಳನ್ನು ಶಿವಾಜಿ ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿ ಯಾಗಿದ್ದನು .
ಇದೇ ಸಮಯದಲ್ಲಿ ಶಿವಾಜಿಯ ಪತ್ನಿ ಸಯಿಪಾಯಿ ಗಂಡುಮಗುವಿಗೆ ಜನ್ಮ ನೀಡಿದಳು . ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ . ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು .
ಬ್ರಾಹ್ಮಣರಿಗೂ – ಬಡವರಿಗೂ ದಾನ ಧರ್ಮ ಮಾಡಲಾಯಿತು . ಆ ಮಗುವಿಗೆ ಸಾಂಬಾಜಿ ಎಂದು ಹೆಸರಿಡಲಾಯಿತು .
ಸಮರ್ಥ ರಾಮದಾಸ ಶಿವಾಜಿಯ ಕಾಲದಲ್ಲಿದ್ದ ಮಹಾನ್ ಸಂತ ಶಿವಾಜಿ ರಾಜ್ಯವನ್ನು ಕಟ್ಟುವುದರಲ್ಲಿ ತೊಡಗಿದ್ದರೂ ಅವನಲ್ಲಿ ಧಾರ್ಮಿಕ ಪ್ರಜ್ಞೆ ಪ್ರಬಲವಾಗಿತ್ತು .
ಹೀಗಾಗಿ ಸಮರ್ಥ ರಾಮದಾಸರ ಭಕ್ತಿಪಂಥದಿಂದ ಆಕರ್ಷಿತರಾದವರಲ್ಲಿ ಛತ್ರಪತಿ ಶಿವಾಜಿ ಕೂಡ ಒಬ್ಬ .
ಒಮ್ಮೆ ರಾಮದಾಸರು ಶಿವಾಜಿಯಲ್ಲಿಗೆ ಬಂದು ತಮ್ಮ ಭಿಕ್ಷಾಪಾತ್ರೆಯನ್ನು ಚಾಚಿದಾಗ ಶಿವಾಜಿ ತನ್ನ ರಾಜ್ಯವಷ್ಟನ್ನೂ ಅವರಿಗೆ ಒಪ್ಪಿಸಿಬಿಟ್ಟ , ” ನನ್ನ ರಾಜ್ಯವನ್ನೆಲ್ಲ ನಿಮಗೆ ಒಪ್ಪಿಸಿದ್ದೇನೆ .
ಇನ್ನು ನಾನು ನಿಮ್ಮ ಶಿಷ್ಯ ” ಎಂದ . “ ಸನ್ಯಾಸಿಯಾದ ನನಗೆ ರಾಜ್ಯವೇಕೆ ? ಇದನ್ನು ಆಳಬೇಕಾದವನು ನೀನು , ಆಯ್ತು , ರಾಜ್ಯ ನನ್ನದೇ .
ಆದರೆ , ಅದನ್ನಾಳುವ ಹೊಗೆಯನ್ನು ನಿನಗೆ ವಹಿಸುತ್ತಿದ್ದೇನೆ ” ಎಂದು ಆಜ್ಞಾಪಿಸಿದರು ರಾಮದಾಸರ ಕೃಪೆಯ ಸಂಕೇತವಾಗಿ ಸನ್ಯಾಸಿಗಳ ಉಡುಪ ಆದ ಕೇಸರಿ ವಸ್ತ್ರವು ಶಿವಾಜಿಯ ಧ್ವಜವಾಯಿತು .
ಆಧ್ಯಾತ್ಮದ ವಿಚಾರದಲ್ಲೂ , ರಾಜಕಾರಣ ದಲ್ಲೂ ಅವರು ಶಿವಾಜಿಗೆ ಗುರುವಾದರು . “ ಈ ಜಗತ್ತಿನಲ್ಲಿ ಇನ್ನೂ ಇಲ್ಲದಂತಿರಬೇಕು .
ಮನಸ್ಸು ದೈವಚಿಂತನೆ ಯಲ್ಲಿದ್ದರೂ ದೇಹ ಪ್ರಪಂಚದ ಜನರೊಡನೆ ಬೆರೆಯಬೇಕು , ದೇವರ ಹೆಸರನ್ನು ಜನರಿಗೆ ಹಂಚ ಬೇಕಾದರೆ ಹೀಗೆ ಇರುವರು ಅಗತ್ಯ ಎಂದು ರಾಮದಾಸರು ಶಿವಾಜಿಗೆ ಉಪದೇಶಿಸಿದರು “ ದೇಶವನ್ನು ಆವರಣಗಳಿಂದ ಅಲರಿಕರಿಸುವುದರ ಬದಲು ಜ್ಞಾನದ ಬಟ್ಟೆಯನ್ನು ಧರಿಸ ಎಂದವರು ಹೇಳಿದರು .
ರಾಮ ದಾಸರ ಬೋಧನೆಗಳು ‘ ದಾಸ ಬೋರ್ ಎಂಬ ಮಹಾಗುರ ದಲ್ಲಿ ಅಡಕವಾಗಿವೆ . ‘ ಆನಂದ ವನ ವನ ‘ ಎಂಬುದು ಅವರು ಮರಾಠಿ ಭಾಷೆಯಲ್ಲಿ ಬರೆದಿರುವ ಇನ್ನೊಂದು ಗ್ರಹ , ರಾಜಯೋಗಗಳೆಲ್ಲ ಸುಲಭವಾಗಿ ಸಿಗುವಂತಿದ್ದರೂ ರಾಮದಾಸರು ಯೋಗಿಯ ಬದುಕನ್ನು … ಕ್ರಿ.ಶ. 1650 ರಲ್ಲಿ ಮೊಗಲ್ ಸಂತತಿಯ ಐದನೇ ಚಕ್ರವರ್ತಿ ಷಾಜಹಾನನ ನಾಲ್ವರು ಗಂಡು ಮಕ್ಕಳಲ್ಲಿ ಮೂರನೆಯವನಾದ ಔರಂಗಜೇಬನು ಎರಡನೇ ಬಾರಿಗೆ ದಕ್ಷಿಣ ದೇಶಕ್ಕೆ ಸುಬೇದಾರನಾಗಿ ಬಂದನು .
ಹಾಗೆ ಬಂದ ತತ್ಕ್ಷಣ ಖಡಕಿ ಎಂಬ ಪಟ್ಟಣವನ್ನು ಔರಂಗಾಬಾದ್ ಎಂದು ಬದಲಾಯಿಸಿದನು . ಕ್ರಿ.ಶ. 1656 ರಲ್ಲಿ ಗೋಲ್ಕಂಡ ಸಂಸ್ಥಾನಕ್ಕೆ ದಂಡೆತ್ತಿ ಹೋಗಿ ಹೈದರಾಬಾದ ಅನ್ನು ವಶಪಡಿಸಿಕೊಂಡನು .
ಅಲ್ಲಿಯ ಸುಲ್ತಾನನು ದಿರಂಗಜೇಬನಿಗೆ ಹಣವನ್ನು ಭೂಮಿಯನ್ನು ಮತ್ತು ಅವನ ಮಗನಿಗೆ ತನ್ನ ಮಗಳನ್ನು ಕೊಟ್ಟು ರಾಜ್ಯವನ್ನು ಉಳಿಸಿಕೊಂಡನು .
ಔರಂಗಜೇಬನು ಬಿಜಾಪುರಕ್ಕೆ ದಂಡೆತ್ತಿ ಬಂದನು , ಕೆಲವು ನಗರಗಳನ್ನು ವಶಪಡಿಸಿಕೊಂಡನು . ಅಷ್ಟರಲ್ಲಿ ಔರಂಗಜೇಬನ ತಂದೆ ಮರಣಕ್ಕೆ ಸನಿಹವಾಗಿರುವ ಸುದ್ದಿ ಬಂದಿತು .
ಹೀಗಾಗಿ ಅವನು ತತ್ಕ್ಷಣ ದೆಹಲಿಗೆ ಹಿಂದಿರುಗಿದನು . ಇದರಿಂದಾಗಿ ಬಿಜಾಪುರ ಸಂಸ್ಥಾನ ಅವನ ದಾಳಿಯಿಂದ ಉಳಿದುಕೊಂಡಿತು .
ಆದರೆ ಶಿವಾಜಿ ಚತುರ . ಔರಂಗಜೇಬನಿಗೆ ಶಿವಾಜಿಯ ಚಾಣಾಕ್ಷತನ , ಶೌರ್ಯ , ಸಾಹಸ , ಯುದ್ಧ ಕೌಶಲ್ಯ ಇವುಗಳೆಲ್ಲದರ ಬಗ್ಗೆ ಅರಿವಿತ್ತು .
ಹೀಗಾಗಿ ಹೇಗಾದರೂ ಮಾಡಿ ಅವನನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದನು . ಒಮ್ಮೆ ಶಿವಾಜಿಗೆ ಪತ್ರವನ್ನು ಕಳುಹಿಸಿದನು .
ಮೋಸಹೋಗುವ ವ್ಯಕ್ತಿಯಲ್ಲ . ಔರಂಗಜೇಬನು ಆದಷ್ಟು ಸ್ವಾರ್ಥ , ಕಪಟಿ ಎಂಬುದು ಶಿವಾಜಿಗೆ ತಿಳಿದಿತ್ತು . ತನ್ನ ಗೆಳೆತನ ಬಯಸುತ್ತಿರುವುದು ಕೇವಲ ಸ್ವಾರ್ಥಕ್ಕಾಗಿ ಕೆಲಸ ಕಾರ್ಯಗಳು ಮುಗಿದ ಮೇಲೆ ಮುಲಾಜಿಲ್ಲದೆ ಗೆಳೆತನವನ್ನು ಮುರಿಯುವಂತಹ ಈ ವ್ಯಕ್ತಿಯೊಡನೆ ಯಾವುದೇ ಸಂಬಂಧ ಬೇಡವೆಂದು ನಿರ್ಧರಿಸಿ ಔರಂಗಜೇಬನ ಪತ್ರವನ್ನು ಶಿವಾಜಿಯು ನಾಯಿಯ ಬಾಲಕ್ಕೆ ಕಟ್ಟಿಸಿದ .
ಈ ವಿಷಯ ತಿಳಿದನಂತರ ಔರಂಗಜೇಬನಿಗೆ ಶಿವಾಜಿಯ ಬಗ್ಗೆ ದ್ವೇಷವು ಹೆಚ್ಚಿತೆಂಬ ಪ್ರತೀತಿ ಇದೆ . ದಕ್ಷಿಣ ದೇಶದಲ್ಲಿ ಮೊಗಲರ ಪ್ರಾಬಲ್ಯ ಹೆಚ್ಚುತ್ತಿತ್ತು .
ಇಂಥ ಸಂದರ್ಭದಲ್ಲಿ ಗೋಲ್ಗೊಂಡ ಸಂಸ್ಥಾನ ಮತ್ತು ಬಿಜಾಪುರ ಸಂಸ್ಥಾನ ಮೊಗಲರ ಕೈವಶವಾದರೆ ಆನಂತರ ಅವರು ಬೇರೆ . ಯಾರನ್ನೂ ಉಳಿಸುವುದಿಲ್ಲ ಎಂಬ ನಿರ್ಧಾಕ್ಕೆ ಬಂದ ಶಿವಾಜಿ ಔರಂಗಜೇಬನ ಸ್ನೇಹವನ್ನು ತಿರಸ್ಕರಿಸಿದನು .
ದಿನಗಳೆದಂತೆ ಶಿವಾಜಿಯ ಕೀರ್ತಿ ಹೆಚ್ಚುತ್ತಹೋಯಿತು . ಶಿವಾಜಿಯನ್ನು ಹಾಡಿಹೊಗಳುವವರು ಹೆಚ್ಚಾದರು . ಅವನು ವೃದ್ಧಿಗೆ ಬಂದಹಾಗೆಲ್ಲ .
ಅವನಿಗೂ ಮತ್ತು ಬಿಜಾಪುರ ಸಂಸ್ಥಾನಕ್ಕೂ ವೈರತ್ವ ಹೆಚ್ಚುತ್ತ ಹೋಯಿತು . ಕ್ರಿ.ಶ. 1656 ರಲ್ಲಿ ಬಿಜಾಪುರ ಸಂಸ್ಥಾನದ ಸುಲ್ತಾನನು ಮೃತನಾದನು .
ಆ ಬಳಿಕ ಅವನ ಮಗನು ಸಿಂಹಾಸನಕ್ಕೆ ಬಂದನು . ಆದರೆ ಅವನಿಗೆ ಲೋಕಜ್ಞಾನವಿರಲಿಲ್ಲ . ಹೀಗಾಗಿ ಅವನ ತಾಯಿಯೇ ರಾಜ್ಯಕಾರ್ಯಗಳನ್ನು ನಿರ್ವಹಿಸುತ್ತಿದ್ದಳು . ಈಕೆಗೆ ಶಿವಾಜಿಯ ಬಗ್ಗೆ ವಿಪರೀತ ಸಿಟ್ಟಿತ್ತು .
ಹೇಗಾದರೂ ಮಾಡಿ ಅವನ ಹುಟ್ಟಡಗಿಸಬೇಕು ಎಂದು ಹಲ್ಲುಕಡಿಯುತ್ತಿದ್ದಳು . ಅದೇ ಸಮಯದಲ್ಲಿ ಮುರಾರಿಪಂತನೆಂಬ ಬ್ರಾಹ್ಮಣನು ಆ ಸಂಸ್ಥಾನದಲ್ಲಿ ಮಂತ್ರಿಯಾಗಿದ್ದನು .
ಅವನು ಶತ್ರುಗಳೊಡನೆ ಕೈಜೋಡಿಸಿದ್ದಾನೆ ಎಂದು ಸಂದೇಹಿಸಿ ಅವನನ್ನು ಕೊಲ್ಲಿಸಿದಳು , ತತ್ಕ್ಷಣ ಆಫ್ಜಲ್ ಖಾನ್ ಎಂಬುವನು ಮಂತ್ರಿಯಾದನು .
ಅವನು ಧೀರ , ಶೂರ , ಸಾಹಸಿ , ಆದರೆ ಅಹಂಕಾರಿ , ದೂರದೃಷ್ಟಿಯಿಲ್ಲದವನು , ರಾಣಿಯು ಸಂಸ್ಥಾನದ ಮುಖ್ಯಾಧಿಕಾರಿಗಳನ್ನೆಲ್ಲ ಕರೆಯಿಸಿ ಶಿವಾಜಿಯನ್ನು ಮುಗಿಸಿಬಿಡುವದರ ಬಗ್ಗೆ ಮಾತನಾಡಿದಳು , ಅವಳ ಮಾತು ಕೇಳಿದ ಅಫ್ಜಲ್ ಖಾನ್ ಈಗಲೇ ಅವನನ್ನು ಮುಗಿಸಿಬಿಡುವೆನು ಎಂದು ಆವೇಶಭರಿತನಾಗಿ ಮಾತನಾಡಿದನು .
ಅವನ ಮಾತನ್ನು ಕೇಳಿದ ಆಭರಣಗಳನ್ನು ಕೊಟ್ಟು ಯುದ್ಧಕ್ಕೆ ಕಳುಹಿಸಿದಳು . ರಾಣಿ ಖುಷಿಯಾಗಿ ಅವನಿಗೆ ದಳವಾಯಿ ಪಟ್ಟಕಟ್ಟಿ ವಿವಿಧ ಬಗೆಯ ವಸ್ತ್ರ , ಶಿವಾಜಿಯನ್ನು ಮುಗಿಸಿಬಿಡುವ ಉತ್ಸಾಹದಿಂದ ಅಫ್ಜಲ್ ಖಾನ ಬಿಜಾಮರದಿಂದ ಹೊರಟ , ಅವನ ಹಿಂದೆ ಇದ್ದವರು ಐದು ಸಾವಿರ ಸವಾರರು , ಏಳು ಸಾವಿರ ಕಾಲಾಳುಗಳು ಮತ್ತು ಹಲವು ಮಂದಿ ಜಿಲ್ಲಾಳುಗಳು . ಅವನು ಹೋಗುವಾಗ ಸುಮ್ಮನೆ ಹೋಗಲಿಲ್ಲ .
ದಾರಿಯಲ್ಲಿ ಸಿಕ್ಕ ಗುಡಿ – ಗೋಪುರಗಳನ್ನು ಧ್ವಂಸಮಾಡುತ್ತ , ಪ್ರಾಣಿಗಳನ್ನು ಕೊಲ್ಲುತ್ತಾ ಹೋದನು . ಆನಂತರ ಅವನು ಹೋಗಿ ಸೇರಿದ್ದು ತುಳುಜಾಮರಕ್ಕೆ ಇಲ್ಲಿಯ ಭವಾನಿ ಶಿವಾಜಿಯ ಕುಲದೇವತೆ . ಈ ವಿಷಯವನ್ನು ಅರಿತಿದ್ದ ಅಫಜಲ್ಖಾನ್ ಭವಾನಿ ದೇಗುಲವನ್ನು ನಾಶಮಾಡಿದನು .
ಅಡ್ಡಿಪಡಿಸಿ ದವರನ್ನು ಮುಲಾಜಿಲ್ಲದೆ ಕೊಂದುಹಾಕಿದನು . ನಂತರ ಪಂಡರಾಪುರಕ್ಕೆ ಹೋದನು . ಅಲ್ಲಿಯೂ ಒಂದಷ್ಟು ದೇವಸ್ಥಾನಗಳನ್ನು ಹಾಳುಗೆಡವಿದನು .
ಅಫಜಲ್ಖಾನ್ ಇಷ್ಟೆಲ್ಲ ಮುಂಡಾ ” ಆಡಿದ್ದರೂ , ಅವನ ಮನಸ್ಸಿನಲ್ಲಿ ಮಾತ್ರ ಶಿವಾಜಿಯ ಬಗ್ಗೆ ಭೀತಿ ಇದ್ದೇ ಇತ್ತು . ಒಂದು ವೇಳೆ ಯುದ್ಧದಲ್ಲಿ ಸೋತರೆ ಬಿಜಾಪುರದ ಜನತೆಗೆ ಮುಖ ತೋರಿಸುವುದು ಹೇಗೆ ? ಎಂಬುದೇ ಅವನ ಆತಂಕವಾಗಿತ್ತು .
ಅದಕ್ಕಾಗಿ ಅವನು ಶಿವಾಜಿಯನ್ನು ಹೇಗಾದರೂ ಮಾಡಿ ಕುಟಿಲೋಪಾಯದಿಂದ ಹಿಡಿಯಬೇಕೆಂದು ನಿರ್ಧರಿಸಿದನು .
ಸಹಾಯಕ್ಕಾಗಿ ಕೃಷ್ಣಾಜಿ ಭಾಸ್ಕರನೆಂಬ ಒಬ್ಬ ಕರ್ಮಚಾರಿ ಯನ್ನು ಉಪಯೋಗಿಸಿಕೊಂಡನು ಕೃಷ್ಣಾಜಿ ಹೆದರುತ್ತಲೇ ಶಿವಾಜಿಯನ್ನು ಭೇಟಿಮಾಡಿ ಅಫ್ಜಲ್ಖಾನ್ ಪರವಾಗಿ ಹೀಗೆ ಹೇಳಿದನು : ” ಶಾಹಜಿ ಮತ್ತು ನಾನು ಹಳೆಯ ಮಿತ್ರರು .
ನೀನು ಅವನ ಮಗನು ಹೀಗಾಗಿ ನೀನು ನನ್ನ ಮಗನ ಸಮಾನ , ಕೊಂಕಣ ದೇಶವನ್ನು ನಿನಗೆ ಜಹಗೀರಾಗಿ ಕೊಡಿಸುವೆನು , ನಿಮ್ಮ ತಂದೆ ಬಿಜಾಪುರ ಸಂಸ್ಥಾನದ ಗೌರವವನ್ನು ಹೇಗೆ ಬೆಳೆಸಿದನೊ , ಹಾಗೇಯೇ ನೀನೂ ಕೂಡ ಸಂಸ್ಥಾನದ ಗೌರವ ಉಳಿಸಲು ಪ್ರಯತ್ನಿಸು …
” ಹೀಗೆ ಅಫ್ಜಲ್ ಖಾನ್ ಶಿವಾಜಿಯನ್ನು ಮೃದು ಮಾತುಗಳಿಂದ ಒಲಿಸಿಳ್ಳಲು ಪ್ರಯತ್ನಿಸಿದನು . ಆದರೆ ಶಿವಾಜಿ ಅಫ್ಜಲ್ಖಾನ್ನ ಮುಖವಾಣಿ ಯಾಗಿದ್ದ ಕೃಷ್ಣಾಜಿ ಮಾತುಗಳನ್ನು ಕೇಳಿ ಸಂತುಷ್ಟನಾಗಲಿಲ್ಲ . ವಾಸ್ತವವಾಗಿ ಈ ಮಾತುಗಳು ಅವನನ್ನು ಕೆರಳಿಸಿದವು .
ಆಫ್ಜಲ್ಖಾನ್ ಎಂಥ ನೀಚ ಎಂಬ ಸಂಗತಿ ಶಿವಾಜಿಗೆ ಮೊದಲೇ ತಿಳಿದಿತ್ತು . ಅಷ್ಟೇ ಅಲ್ಲ , ಆತ ಇತ್ತ ಬರುವಾಗ ಹಲವು ಗುಡಿ ಗೋಪುರಗಳನ್ನು ಧ್ವಂಸಮಾಡಿದ್ದು , ಹೆಂಗಸರು , ಮಕ್ಕಳನ್ನು ನಿರ್ದಯವಾಗಿ ಕೊಂದಿದ್ದು ಹೀಗೆ ಎಲ್ಲ ವಿಷಯಗಳು ಶಿವಾಜಿಗೆ ಬಂದು ತಲುಪಿದ್ದವು .
ಶಿವಾಜಿ ತನ್ನ ಅಧಿಕಾರಿಗಳನ್ನು , ಸೇನಾಪತಿಗಳನ್ನು ಕರೆಯಿಸಿ ಆಫ್ಜಲ್ ಖಾನ್ ಮೇಲೆ ಯುದ್ಧಕ್ಕೆ ಹೋಗಬೇಕೆಂದು ಆಜ್ಞಾಪಿಸಿದನು . ಆದರೆ ಅವರೆಲ್ಲ , “ ಸದ್ಯದ ಪರಿಸ್ಥಿತಿಯಲ್ಲಿ ಬೇಡ , ರಾಜಿಮಾಡಿಕೊಳ್ಳೋಣ ” ಎಂದರು .
ಶಿವಾಜಿ ಒಪ್ಪಲಿಲ್ಲ . ಆಫ್ಜಲ್ಖಾನ್ನ ಸೊಕ್ಕು ಮುರಿಯಲೇಬೇಕೆಂದು ನಿರ್ಧರಿಸಿದ್ದ ಅವನು ತನ್ನ ಸೇನಾಪತಿಗಳಿಗೆ ಹೀಗೆ ಹೇ : “ ಅವನೊಬ್ಬ ಮೊಸಗಾರ . ನಮ್ಮ ತಂದೆಯನ್ನು ಸೆರೆಯಲ್ಲಿಡಿಸಿದ್ದು ಅವನೇ . ನಿಮಗೆ ಗೊತ್ತಿರುವಂತೆ ಅವನು ಹಲವು ದೇವಸ್ಥಾನಗಳನ್ನು ಹಾಳುಮಾಡಿದ್ದಾನೆ .
ನಮ್ಮ ಅಕ್ಕ – ತಂಗಿಯರನ್ನು , ಅಣ್ಣ – ತಮ್ಮಂದಿರನ್ನು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ . ಅಂಥವನ ಜೊತೆ ಒಡಂಬಡಿಕೆ ಮಾಡಿಕೊಳ್ಳುವುದೇ ? ” ಶಿವಾಜಿಯ ಆವೇಶಭರಿತ ಮಾತುಗಳನ್ನು ಕೇಳಿದ ಅಧಿಕಾರಿಗಳು , ಸೇನಾಪತಿಗಳು ಏನೂ ಮಾತನಾಡಲಿಲ್ಲ .
ಎಲ್ಲರೂ ಯುದ್ಧಕ್ಕೆ ಸನ್ನದ್ಧರಾದರು . ತಾಯಿಯ ಆಶೀರ್ವಾದ ಪಡೆದು ಶಿವಾಜಿ ರಾಯಗಢದಿಂದ ಪ್ರತಾಪಗಢಕ್ಕೆ ಹೊರಟನು . ಅಲ್ಲಿಗೆ ನೇತಾಜಿ ಪಾಲ್ಕರನೂ ಮೋರೋಪಂತ ಪಿಂಗಳೆ ಮೊದಲಾದವರೂ ಸೇನೆಯೊಂದಿಗೆ ಬಂದು ಸೇರಿದರು .
ಯುದ್ಧ ಮಾಡುವ ಮೊದಲು ಅಫ್ಜಲ್ಖಾನ್ನನ್ನು ಒಮ್ಮೆ ಭೇಟಿಮಾಡಲು ಶಿವಾಜಿ ನಿಶ್ಚಯಿಸಿದ್ದನು . ಪ್ರತಾಪಗಢವು ದುರ್ಗಮ ಪ್ರದೇಶ , ಶತ್ರುಗಳಿಗೆ ಪ್ರತಿಕೂಲವಾದ ಸ್ಥಳ ಎಂಬ ಕಾರಣಕ್ಕಾಗಿಯೇ ಶಿವಾಜಿ ಅಫ್ಜಲ್ ಖಾನ್ನನ್ನು ಅಲ್ಲಿ ಸಂಧಿಸಲು ಏರ್ಪಾಡುಮಾಡಿದ್ದ .
ಪ್ರತಾಪಗಢಕ್ಕೆ ಹೋದರೆ ಶಿವಾಜಿಯನ್ನು ಸುಲಭವಾಗಿ ಸೆರೆಹಿಡಿಯಬಹುದೆಂದು ಅಫ್ಜಲ್ ಖಾನ್ ಯೋಚಿಸಿದ್ದ .
ಶಿವಾಜಿ ಸಿದ್ಧಪಡಿಸಿದ್ದ ಬಿಡಾರದಲ್ಲಿ ಅಫ್ಜಲ್ ಖಾನ್ ಇಳಿದುಕೊಂಡ . ಶತ್ರುಗಳು ಹಠಾತ್ತಾಗಿ ಮೇಲೆ ಬಿದ್ದಾರೆಂಬ ಭಯದಿಂದ ಸೈನಿಕರೆಲ್ಲರೂ ರಾತ್ರಿಯೆಲ್ಲ ಎಚ್ಚರಿಕೆಯಿಂದಿರಬೇಕೆಂದು ಅಫ್ಜಲ್ಖಾನ್ ಆಜ್ಞೆಮಾಡಿದ್ದ .
ಇತ್ತ ಶಿವಾಜಿಯೂ ಗುಟ್ಟಾಗಿ ಯುದ್ಧದ ತಯಾರಿಯಲ್ಲಿದ್ದ . ಶಿವಾಜಿ ಅಫ್ಜಲ್ ಖಾನ್ ಮುಖಾಮುಖಿ ಭೇಟಿಯ ಸಮಯ ಸಮೀಪಿಸ ತೊಡಗಿದಂತೆ ಎಲ್ಲರಲ್ಲೂ ಆತಂಕ ಶುರುವಾಯಿತು . ಎರಡೂ ಬಣದವರು ಉದ್ವಿಗ್ನದಲ್ಲಿದ್ದರು .
ಯಾವುದೋ ಒಂದು ಕ್ಷಣ ಆಘಜಲ್ ಖಾನ ಡೇರೆಯೊಳಗೆ ಬಂದು ಕುಳಿತನು , ಕೆಲವು ಹೊತ್ತಿನ ನಂತರ ಶಿವಾಜಿಯೂ ಡೇರ ಯೊಳಗೆ ಪ್ರವೇಶಿಸಿದನು .
ಈ ಸಂದರ್ಭದಲ್ಲಿ ಆಫ್ ಅವನನ್ನು ಅಪ್ಪಿ ಕೊಳ್ಳಲು ಹೋದನು . ಅಪ್ಪಿ ಕೊಂಡಾಗ ಆಘಜಲ್ ಖಾನ ಶಿವಾಜಿಯನ್ನು ಕೊಲ್ಲಲು ಕತ್ತಿಯಿಂದ ಬಲವಾಗಿ ತಿವಿದನು .
ಆದರೆ ಶಿವಾಜಿಗೆ ಸ್ವಲ್ಪವೂ ಪೆಟ್ಟುತಾಗಲಿಲ್ಲ . ಕಾರಣ ಆತ ಲೋಹಕವಚ ತೊಟ್ಟಿದ್ದ . ನಿಮಿಷ ಮಾತ್ರದಲ್ಲಿ ಶಿವಾಜಿ ಚೂಪಾದ ಕತ್ತಿಯಿಂದ ಆಫ್ಜಲ್ ಖಾನ್ನ ಹೊಟ್ಟೆಗೆ ತಿವಿದನು .
ನಂತರ ಕೂಡಲೇ ಅವನ ಎದೆಯನ್ನು ತಿವಿದನು . ಕ್ಷಣಮಾತ್ರದಲ್ಲಿ ಆಫ್ಜಲ್ ಖಾನ್ ಸತ್ತುಬಿದ್ದನು . ಗಾಬರಿಗೊಂಡ ಆಫ್ಜಲ್ ಖಾನ್ನ ಹಿಂಬಾಲಕರು ಶಿವಾಜಿಯ ಮೇಲೆ ಎರಗಿದರು . ಆದರೆ ಅವರು ಸಫಲರಾಗಲಿಲ್ಲ .
ತತ್ಕ್ಷಣ ಶಿವಾಜಿ ತನ್ನ ಹಿಂಬಾಲಕರ ಸಮೇತ ದುರ್ಗಕ್ಕೆ ಹೋಗಿ ಗುಂಡನ್ನು ಹಾರಿಸುವಂತೆ ಅಫ್ಜಲ್ಖಾನ್ , ಕುತಂತ್ರಕ್ಕೆ ತಿರುಗೇಟು ಆಜ್ಞಾಪಿಸಿದನು . ಬಳಿಕ ಶಿವಾಜಿ ಬಣದವರು ಅಫ್ಜಲ್ಖಾನ್ ಬಣದವರ ಮೇಲೆ ಜೋರಾಗಿಯೇ ಎರಗಿದರು .
ಆಫ್ಜಲ್ ಖಾನ್ ಸತ್ತ ಸುದ್ದಿ ತಿಳಿದು ದಿಗ್ಗಾಂತರಾಗಿದ್ದ ಅಫ್ಜಲ್ಖಾನ್ನ ಕಡೆಯವರು ಈಗ ಮತ್ತಷ್ಟು ಗಾಬರಿಯಾದರು . ಇವರಿಬ್ಬರ ಮಧ್ಯೆ ಯುದ್ಧ ಘೋರವಾಗಿಯೇ ನಡೆಯಿತು . ಆಫ್ಜಲ್ಖಾನ್ನ ನೂರಾರು ಮಂದಿ ಸೈನಿಕರು ಮೃತಪಟ್ಟರು . ಹಲವರು ಕೈಸೆರೆಯಾದರು .
ಆನೆಗಳು , ಒಂಟೆಗಳು , ಕುದುರೆಗಳು , ಯುದ್ಧದ ಸಾಮಗ್ರಿ ಗಳು ಎಲ್ಲವೂ ಶಿವಾಜಿಯ ಕೈವಶವಾಯಿತು . ಶಿವಾಜಿಗೆ ಜಯವಾಯಿತು .
ತತ್ಕ್ಷಣ ಆತ ರಾಯಗಢದಲ್ಲಿದ್ದ ತಾಯಿಗೆ ಸುದ್ದಿ ಮುಟ್ಟಿಸಿದನು . ಆಕೆ ಸಂತೋಷದಿಂದ ದೇವಸ್ಥಾನಗಳಲ್ಲಿ ಪೂಜೆ ಮಾಡಿಸಿದಳು . ಜೊತೆಗೆ
ಬ್ರಾಹ್ಮಣರಿಗೂ , ದೀನರಿಗೂ , ಅನಾಥರಿಗೂ ಅನ್ನದಾನ , ವಸ್ತ್ರದಾನ ಮಾಡಿಸಿದಳು . ಯುದ್ಧದಲ್ಲಿ ಸತ್ತವರಿಗೆ ಶಿವಾಜಿಯು ಉಚಿತವಾದ ರೀತಿಯಲ್ಲಿ ಉತ್ತರಕ್ರಿಯೆಯನ್ನು ಮಾಡಿಸಿದನು .
ಅಂತೆಯೇ ಆಫ್ಜಲ್ಖಾನ್ ತನ್ನ ಶತ್ರುವೆಂಬ ಸಂಗತಿಯನ್ನು ಮರೆತು ಯಥೋಚಿತವಾಗಿ ಅವನ ದೇಹವನ್ನು ಸಮಾಧಿಮಾಡಿಸಿದನು .
ದ್ವೇಷವನ್ನು ಸಾಧಿಸುತ್ತ ಹೋಗುವುದು ಶಿವಾಜಿಯ ಗುಣವಾಗಿರಲಿಲ್ಲ , ಅವನು ವಿಶಾಲ ಮನೋಭಾವ ಹೊಂದಿದ್ದ ಎಂಬ ಸಂಗತಿ ಈ ಸನ್ನಿವೇಶದಿಂದ ತಿಳಿದುಬರುವುದು , ವೀರಮರಣ ಹೊಂದಿದ ಸೈನಿಕರ ಪತ್ನಿಯ ಮತ್ತು ಮಕ್ಕಳ ಪೋಷಣೆಗೂ ಶಿವಾಜಿ ಸಹಕರಿಸಿದ .
ಅವರಿಗೆ ಧನ ಯುದ್ಧದಲ್ಲಿ ವೀರತನವನ್ನು ಸಹಾಯಮಾಡಿದೆ , ವಿಶೇಷವಾಗಿ ತೋರಿಸಿದವರಿಗೆ ಬಹುಮಾನಗಳನ್ನು ಕೊಟ್ಟು ಅವರನ್ನು ಪ್ರೋತ್ಸಾಹಿಸಿದ ಪ್ರೀತಿ , ಕರುಣೆ , ಅನುಕಂಪ ಅವನಲ್ಲಿದ್ದವು ಎಂಬುದಕ್ಕೆ ಸಾಕ್ಷಿ ಈ ಘಟನೆಗಳು , ಸೆರೆಯಾದವರ ವಿಷಯದಲ್ಲಿಯೂ ಶಿವಾಜಿ ಸಾಕಷ್ಟು ಔದಾರ್ಯ ತೋರಿಸಿದ .
ಅವರೆಲ್ಲರನ್ನು ಆದರದಿಂದ ಕಂಡು ಅವರಿಗೆ ಹಣ , ವಸ್ತ್ರ , ಮುಂತಾದವುಗಳನ್ನು ಕೊಟ್ಟು ಕಳುಹಿಸಿದನು. ಆಫ್ಜಲ್ಖಾನನ ವಧೆಯ ನಂತರ ಶಿವಾಜಿಯು ಪನ್ಹಾಲ , ಪವನಗಢ ಮುಂತಾದ ದುರ್ಗಗಳನ್ನು ಜಯಿಸುವ ಸಲುವಾಗಿ ಅಣ್ಣಾಜಿದತ್ತನೆಂಬುವವನ ನಾಯಕತ್ವದಲ್ಲಿ ಒಂದಷ್ಟು ಸೈನಿಕರನ್ನು ಕಳುಹಿಸಿದನು ಅವನು ಅಲ್ಪಾವಧಿಯಲ್ಲಿ ಪಾಲ , ಪವನಗಢ ದುರ್ಗಗಳನ್ನು ಗೆದ್ದನು .
ಇದಾದ ಕೆಲವು ದಿನಗಳ ಬಳಿಕ ಶಿವಾಜಿಯು ತನ್ನ ಸೇನೆಯನ್ನು ತೆಗೆದುಕೊಂಡು ವಸಂತಗಡ ಎಂಬ ದುರ್ಗದ ಮೇಲೆ ದಾಳಿಮಾಡಿದನು . ಹೆಚ್ಚು ಕಷ್ಟ ಅನುಭವಿಸದೇ ಅದನ್ನು ತನ್ನ ವಶಕ್ಕೆ ತೆಗೆದುಕೊಂಡನು.
ಹೀಗೆ ಶಿವಾಜಿ ಹಂತ ಹಂತವಾಗಿ ಒಂದೊಂದೇ ದುರ್ಗವನ್ನು , ಊರನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಕೃಷ್ಣ ನದಿಯವರೆಗೂ ತನ್ನ ರಾಜ್ಯವನ್ನು ವಿಸ್ತರಿಸಿದನು . … ಶಿವಾಜಿಯ ನಿರಂತರ ಗೆಲುವು ಬಿಜಾಪುರದ ಸುಲ್ತಾನ್ನಲ್ಲಿ ಕಿಚ್ಚು ಹೊತ್ತಿಸಿತು .
ಶಿವಾಜಿಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ನಿರ್ಧರಿಸಿದ ಬಿಜಾಪುರದ ಸುಲ್ತಾನ ಮತ್ತೊಂದು ಸೇನೆಯನ್ನು ಕಳುಹಿಸಿದನು . ಆದರೆ ಶಿವಾಜಿಗೆ ಸೋಲೆಂಬುದೇ ಇರಲಿಲ್ಲ . ಸೇನೆಯನ್ನು ಬಗ್ಗುಬಡಿದನು .
ಇಷ್ಟಕ್ಕೇ ಸಮಾಧಾನಗೊಳ್ಳದ ಅವನು ಸೈನಿಕರನ್ನೆಲ್ಲ ಬಿಜಾಪುರದವರೆಗೂ ಅಟ್ಟಾಡಿಸಿಕೊಂಡು ಹೋದನು . ಇದೇ ಸಮಯದಲ್ಲಿ ಶಿವಾಜಿಯ ಸೇನಾನಾಯಕರು ದಾಬೋಲ್ , ರಾಜಪರ , ವಿಷಾಲಗಢ ( ಬೇಳನ ) ಮತ್ತು ರಾಂಗಣ ಎಂಬ ದುರ್ಗಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು , ಎಲ್ಲವೂ ಮುಗಿಯಿತು .
ಎಂದು ಶಿವಾಜಿ ಮತ್ತು ಆವನ ಸೇನಾಪತಿಗಳು ವಿಶ್ರಮಿಸಿಕೊಳ್ಳುತ್ತಿರುವಾಗ ಬಿಜಾಪುರದಿಂದ ಮತ್ತೊಂದು ಸೇನೆ ಇವರ ಮೇಲೆ ನುಗ್ಗಿಬಂದಿತು .
ಮತ್ತೆ ಭೀಕರ ಯುದ್ಧ ಶುರುವಾಯಿತು . ಈ ಯುದ್ಧ ಸುಮಾರು ಒಂದು ವರ್ಷಗಳ ಕಾಲ ನಡೆಯಿತೆಂದು ಇತಿಹಾಸಕಾರರು ಹೇಳಿದ್ದಾರೆ .
ಯುದ್ಧದ ಅಂತ್ಯದ ಸಮಯದಲ್ಲಿ ಬಿಜಾಪುರದ ಸುಲ್ತಾನನೇ ದಂಡೆತ್ತಿ ಬಂದ . ಆದರೆ ಆತನ ಯತ್ನ ಫಲಕಾರಿಯಾಗಲಿಲ್ಲ .
ಏನೂ ಮಾಡಲು ತೋಚದ ಸುಲ್ತಾನ ಬಿಜಾಪುರಕ್ಕೆ ಹಿಂದಿರುಗಿ ಶಾಹಜಿ ( ಶಿವಾಜಿ ತಂದೆ ) ಯನ್ನು ಮುಂದೆಬಿಟ್ಟು ರಾಜಿ ಪ್ರಸ್ತಾಪ ಮುಂದಿಟ್ಟ ಶಾಹಜಿಯು ಶಿವಾಜಿಯನ್ನು ಭೇಟಿಮಾಡಿದ . ಅವನಿಗೆ ಒಂದಷ್ಟು ಬುದ್ಧಿವಾದ ಹೇಳಿದ .
ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಿಜಾಪುರದ ಮೇಲೆ ಯುದ್ಧ ಮಾಡಬಾರದೆಂದು ಆದೇಶಿಸಿದ , ಶಿವಾಜಿ ತಂದೆಯ ಮಾತಿಗೆ ಬೆಲೆ ಕೊಡಬೇಕು ಎಂಬ ದೃಷ್ಟಿಯಿಂದ ಒಪ್ಪಿಕೊಂಡ .
ಬಿಜಾಪುರ ಸಂಸ್ಥಾನದವರು ತನ್ನ ಮೇಲೆ ದಂಡೆತ್ತಿ ಬರದೆ ತಮ್ಮ ಸಂಸ್ಥಾನದ ರಕ್ಷಣೆ ಮಾಡಿಕೊಂಡು ಇರಬೇಕೆಂದು ಹೇಳಿದ .
ಅಂತಿಮವಾಗಿ ಎರಡೂ ಕಡೆಯವರು ತಮ್ಮ ತಮ್ಮ ರಾಜ್ಯ ನೋಡಿಕೊಂಡು ಸುಮ್ಮನಿರಬೇಕೆಂದು ನಿರ್ಧಾರವಾಯಿತು . ಶಾಹಜಿ ಬಿಜಾಪುರಕ್ಕೆ ಹಿಂದಿರುಗಿದನು .
ಹೊರಡುವ ಮೊದಲು ಶಾಹಜಿ ಮಗನಿಗೊಂದು ಕತ್ತಿಯನ್ನು ಕೊಟ್ಟನು . ಶಿವಾಜಿಯು ಆ ಕತ್ತಿಗೆ ` ತುಳಜಾ ‘ ಎಂದು ಹೆಸರಿಟ್ಟು ತಂದೆಯ ಗುರುತಾಗಿ ಸದಾ ತನ್ನ ಬಳಿಯೇ ಇಟ್ಟುಕೊಂಡಿರುತ್ತಿದ್ದನು .
ಕ್ರಿ.ಶ. 1662 ರಲ್ಲಿ ಮುಂಬೈಯಿಂದ ಗೋವೆಯ ವರೆಗಿನ ಪ್ರದೇಶಗಳ ಸ್ವತಂತ್ರ ಅರಸನೆಂದು ಶಿವಾಜಿ ಪರಿಗಣಿತನಾದ . 17 ನೇ ಶತಮಾನದಲ್ಲಿ ಶಿವಾಜಿ ಅತ್ಯಂತ ಬಲಿಷ್ಠ ಅರಸನಾಗಿದ್ದ .
ಸುಮಾರು ಆರವತ್ತು ಸಾವಿರ ಪದಾತಿಯನ್ನೂ ಹದಿನೈದು ಸಾವಿರ ಕುದುರೆಗಳನ್ನೂ ಯುದ್ಧಕ್ಕೆ ತರಲು ಶಿವಾಜಿ ಸಮರ್ಥ ನಾಗಿದ್ದ .
ಆ ಸೇನೆಯೆಲ್ಲವೂ ಸದಾ ಯುದ್ಧಕ್ಕೆ ಸಿದ್ಧವಾಗಿರುತ್ತಿತ್ತು . ಅದಕ್ಕಿಂತ ಹೆಚ್ಚಾಗಿ ಸಾವಿರಾರು ಮಂದಿ ಯುವಕರು ಶಿವಾಜಿಯ ಸೈನ್ಯ ಸೇರಲು ಉತ್ಸುಕರಾಗಿದ್ದರು .
ಭಾರತದ ಇತರ ಸಂಸ್ಥಾನದ ರಾಜರು , ಪಾಳೆಗಾರರು ,ನಿಜಾಮರು , ಸುಲ್ತಾನರು , ಜನಸಾಮಾನ್ಯರು ಶಿವಾಜಿಯ ಸಾಹಸ ಮೆಚ್ಚಿ ಶೌರ್ಯ , ಅವನ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದರು .
ಇದೇ ಸಂದರ್ಭದಲ್ಲಿ ಶಿವಾಜಿಯು ಪ್ರತಾಪಗಢದ ದುರ್ಗದಲ್ಲಿ ಭವಾನಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ದನು .
ತನ್ನ ರಾಜ್ಯದ ರಕ್ಷಣೆ ಗಾಗಿ ನೌಕಾ ಸೇನೆಯನ್ನು ಸ್ಥಾಪಿಸಿ ದೊಡ್ಡ ದೊಡ್ಡ ಹಡಗುಗಳನ್ನು ಕಟ್ಟಿಸಿದನು . ಯುದ್ಧಕ್ಕೆ ಬೇಕಾದ ಸಾಮಗ್ರಿಗಳನ್ನು ಸಂಗ್ರಹಿಸಿದನು .
ಪೋರ್ಚುಗೀಸರು ಶಿವಾಜಿಗೆ ಫಿರಂಗಿ – ಮದ್ದುಗುಂಡುಗಳನ್ನು ಸರಬರಾಜುಮಾಡಿದರು .
ಈ ರೀತಿಯಲ್ಲಿ ಶಿವಾಜಿ ಸುಮಾರು ಹದಿನೈದು ವರ್ಷಗಳ ಅವಧಿಯಲ್ಲಿ ವಿಶಾಲವಾದ ಮತ್ತು ಅತ್ಯಂತ ಬಲಿಷ್ಠವಾದ ರಾಜ್ಯವನ್ನು ಸ್ಥಾಪನೆ ಮಾಡಿದನು .