ರಾಷ್ಟ್ರಪತಿ ಹುದ್ದೆಯ ಮಹತ್ವ
rashtrapati, ರಾಷ್ಟ್ರಪತಿ ಹುದ್ದೆಯ ಮಹತ್ವ, rashtrapati bhavan, rashtrapati bhavan museum,ರಾಷ್ಟ್ರಪತಿ , President of India
ಭಾರತದ ರಾಷ್ಟ್ರಪತಿ ಹುದ್ದೆಯು ಮೇಲ್ನೋಟಕ್ಕೆ ಉತ್ಸವಮೂರ್ತಿ , ರಬ್ಬರ್ ಸ್ಟಾಂಪ್ , ಎಂಬಂತೆ ಕಂಡು ಬಂದರೂ ತನ್ನದೇ ಆದ ಅಧಿಕಾರಗಳನ್ನು ಹೊಂದಿದೆ .
ಇವರು ಭಾರತದೇಶದ ಸವೋಚ್ಛ ಅಧಿಕಾರ ಹೊಂದಿರು ವವರಾಗಿದ್ದು ಕಾರ್ಯಾಂಗದ ಎಲ್ಲ ಕಾರ್ಯಗಳೂ ರಾಷ್ಟ್ರಪತಿಯ ಹೆಸರಿನಲ್ಲಿ ನಡೆಯುತ್ತವೆ .
ಇಂತಹ ಅಧಿಕಾರವನ್ನು ಪ್ರಧಾನಿ ಹಾಗೂ ಅವರ ಸಂಪುಟದ ಸಲಹೆ ಬದಲಾಯಿಸುವುದರಿಂದ ಹಾಗೂ ಭಾರತದ ರಾಷ್ಟ್ರಪತಿಯ ಹುದ್ದೆಯು ಬ್ರಿಟನ್ನಿನ ರಾಣಿಯ ಸ್ಥಾನಮಾನ ಹೋಲುತ್ತದೆ . ಇದೊಂದು ಅಲಂಕಾರಿಕ ಹುದ್ದೆ ಎಂಬ ಅಭಿಪ್ರಾಯ ಹೊಂದಿದ್ದಾರೆ .
ಅಂಬೇಡ್ಕರ್ ಅಭಿಪ್ರಾಯ “ ರಾಷ್ಟ್ರಪತಿ ಕೇವಲ ಸಂವಿಧಾನದ ಮುಖ್ಯಸ್ಥ ಹೊರತು ವಾಸ್ತವ ಕಾರ್ಯಾಂಗಾಧಿಕಾರಿ ಅಲ್ಲ . ಅವರು ರಾಷ್ಟ್ರದ ಮುಖ್ಯಸ್ಥ ಹೊರತು ಸರ್ಕಾರದ ಮುಖ್ಯಸ್ಥರಲ್ಲ ” ಎಂದಾಗಿದೆ .
ರಾಷ್ಟ್ರಪತಿ ಕೇವಲ ನಾನು ಮಾತ್ರ ಕಾರ್ಯಾಂಗಾಧಿಕಾರಿ ಕೆ.ಎಂ.ಮುನಿ
ಆದರೆ ವಿಶೇಷ ಸಂದರ್ಭಗಳಲ್ಲಂತೂ ರಾಷ್ಟ್ರಪತಿ ಅಧಿಕಾರವು ಪ್ರಮುಖ ಹಾಗೂ ಮಹತ್ವ ಪೂರ್ಣವಾದು ದಾಗಿದೆ . ಆದುದ್ದರಿಂದ ರಾಷ್ಟ್ರಪತಿ ಹುದ್ದೆಯು ಕೂಡ ತನ್ನದೇ ಆದ ಅಧಿಕಾರಗಳನ್ನು ಹೊಂದಿದ್ದು , ಅದರ ಮಾತ್ರ ಅದಕ್ಕೆ ಮಹತ್ವ ಬರುತ್ತದೆ . ಯಾವುದೇ ನಾಣ್ಯಕ್ಕೆ ಬೆಲೆ ಬರುವುದು ಅದರ ಚಲಾವಣೆಯಿಂದ ಮಾತ್ರ ಅದೇ ರೀತಿ ,
ಯಾವುದೇ ಅಧಿಕಾರ ಕಾನೂನಿಗೆ ಬೆಲೆ ಬರುವುದು ಅದು ಚಲಾವಣೆಗೆ ಬಂದಾಗ ಮಾತ್ರ , ಚಲಾವಣೆಯಿಂದ ರಾಷ್ಟ್ರಪತಿ ಅಧಿಕಾರಗಳು ಮತ್ತು ಕರ್ತವ್ಯಗಳು ಹೆಚ್ಚು ಕಡಿಮೆ ಬ್ರಿಟನ್ ರಾಣಿಯ ಅಧಿಕಾರ ಹಾಗೂ ಕರ್ತವ್ಯದಂತಿದೆ ಎಂದಿದ್ದಾರೆ.- ಎಂ.ವಿ.ಪೈಲ್
ಭಾರತದ ರಾಷ್ಟ್ರಪತಿಗಳು , ಸಂಪತ್ತನ್ನು ವಜಾಗೊಳಿಸುವ , ಆತಂತ್ರವಾದ ಸ್ಥಿತಿಯಲ್ಲಿ ಸಂಸತ್ ಉಂಟಾದಾಗ ತಮ್ಮ ವಿವೇಚನಾಧಿಕಾರವನ್ನು ಬಳಸಿ ಸರ್ಕಾರ ರಚಿಸಲು ಅವಕಾಶ ಕಲ್ಪಿಸುವ ಅಧಿಕಾರವನ್ನು ಹೊಂದಿದ್ದಾರೆ .
ಸರ್ಕಾರವು ತನ್ನ ಇತಿಮಿತಿಯನ್ನು ಮೀರಿ ಅಥವಾ ಸಂವಿಧಾನ ಬಾಹಿರವಾಗಿ ನಡೆದುಕೊಂಡಾಗ ಅಂತಹ ಸರ್ಕಾರವನ್ನು ವಜಾಗೊಳಿಸುವ ಅಧಿಕಾರವನ್ನು ಕೂಡ ಭಾರತದ ರಾಷ್ಟ್ರಪತಿಗಳು ಹೊಂದಿದ್ದಾರೆ .
ಸಮರ್ಥವಾದ ವ್ಯಕ್ತಿಗಳು ರಾಷ್ಟ್ರಪತಿಯಾದರೆ , ಸರ್ಕಾರವನ್ನು ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಮಾರ್ಗದರ್ಶಿಸುವ ಅಧಿಕಾರವನ್ನು ಹೊಂದಿದ್ದಾರೆ . ದೇಶದಲ್ಲಿ ತುರ್ತು ಪರಿಸ್ಥಿತಿಗಳನ್ನು ಹೇರಬೇಕಾದರೆ ರಾಷ್ಟ್ರಪತಿಗಳ ಅಗತ್ಯತೆ ಇದೆ . ಇಂತಹ ಅಧಿಕಾರಗಳನ್ನು ಬಳಕೆ ಮಾಡುವ ಮೂಲಕ ಭಾರತದ ರಾಷ್ಟ್ರಪತಿಗಳು ಸಮರ್ಥರೆಂದು ಮತ್ತು ಇವರು ಉತ್ಸವ ಮೂರ್ತಿ ಅಲ್ಲವೆಂಬುದನ್ನು ಸಾಬೀತು ಪಡಿಸಬಹುದು .
ಅಂತಹ ಅಧಿಕಾರವನ್ನು ಸಮರ್ಥವಾಗಿ ಚಲಾಯಿಸಿದ ದಕ್ಷರಾಷ್ಟ್ರಪತಿಗಳೂ ಇದ್ದಾರೆ , ಅದರ ಬಳಕೆ ಮಾಡದೇ ಪ್ರಧಾನಿ ಹಾಗೂ ಮಂತ್ರಿಮಂಡಲದ ಕೈಗೊಂಬೆಯಂತೆ ಕೆಲಸ ಮಾಡಿದ ರಾಷ್ಟ್ರಪತಿಗಳು ಇದ್ದಾರೆ . ಆದುದರಿಂದಲೇ ಇಂತಹ ಸಂದರ್ಭದಲ್ಲಿ ಈ ಮಾತು ಸೂಕ್ತವಾಗುತ್ತದೆ , ಯಾವುದೇ ಗುಂಡಿಗೆ ಶಕ್ತಿ ಬರುವುದು ಬಂದೂಕಿನ ಸಾಮರ್ಥ್ಯದಿಂದಲೇ ಹೊರತು ಗುಂಡಿನಿಂದಲ್ಲ . ಬಂದೂಕು ಅಸಮರ್ಥವಾದರೆ ಅದರಲ್ಲ ಇಟ್ಟುಸಿಡಿಸಿದ ಗುಂಡು ಕೂಡ ಅಸಮರ್ಥ , ವ್ಯರ್ಥ ಅದೇ ರೀತಿ ಗುಂಡಿಗೆ ಸಾಮರ್ಥ್ಯ ಬರಲು ಬಂದೂಕಿಗೆ ತಾಕತ್ತು , ನಿಯತ್ತು ಇರಬೇಕು . ಆಗ ಮಾತ್ರ ಗುರಿ ಮುಟ್ಟುತ್ತವೆ . ಅದೇ ರೀತಿ ರಾಷ್ಟ್ರಪತಿಯು ಸಮರ್ಥನಾದರೆ ತನ್ನ ಅಧಿಕಾರವನ್ನು ಸಮರ್ಥವಾಗಿ ಬಳಸಬಹುದು .
ಭಾರತದ ರಾಷ್ಟ್ರಪತಿ ( President of India )
ಕಾರ್ಯಾಂಗ ಅಧಿಕಾರ
ಭಾರತ ದೇಶದ ಗಣತಂತ್ರ ವ್ಯವಸ್ಥೆಯಲ್ಲಿ ರಾಹ ಅತ್ಯುನ್ನತ ಸ್ಥಾನವೇ ರಾಷ್ಟ್ರಪತಿ ಹುದ್ದೆಯಾಗಿದೆ .
ರಾಷ್ಟ್ರಪತಿಯು ಭಾರತ ದೇಶದ ಮೊದಲ ಪ್ರಜೆ ದೇಶದ ಕಾರ್ಯಾಂಗದ ಕಾರ್ಯಗಳೂ ಇವರ ಹೆಸರಿನಲ್ಲೇ ನಡೆಯುವುದರ ಜೊತೆ ಗೆ ದೇಶದ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ 3 ವಿಧದ ರಕ್ಷಣಾಪಡೆಯ ಮಹಾದಂಡನಾಯಕರಾಗಿದ್ದಾರೆ .
ರಾಷ್ಟ್ರಪತಿಗಳು ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ . ಒಕ್ಕೂಟದ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಕೇಂದ್ರ ಹಾಗೂ ರಾಜ್ಯಗಳು , ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿದ್ದಾರೆ .
ಭಾರತ ರಾಷ್ಟ್ರಪತಿಯ ಹುದ್ದೆ
ವಿಧಿ .52 . ಭಾರತದ ರಾಷ್ಟ್ರಪತಿ : -ಭಾರತಕ್ಕ ಒಬ್ಬ ರಾಷ್ಟ್ರಪತಿ ಇರತಕ್ಕುದು . ಭಾರತದ ಸಂವಿಧಾನದ 52 ನೇ ವಿಧಿಯು ಭಾರತ ದೇಶಕ್ಕೆ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ .
ಈ ಹುದ್ದೆಯು ಆಟನ್ ದೊರೆಯ ಹುದ್ದೆಯನ್ನು ಹೋಲುತ್ತದೆ .
ರಾಷ್ಟ್ರಪತಿಯ ಕಾರ್ಯಾಂಗ ಅಧಿಕಾರ
ವಿಧಿ 53. ಒಕ್ಕೂಟದ ಕಾರ್ಯಾಂಗ ಅಧಿಕಾರ ಸಂವಿಧಾನದ 53 ನೇ ವಿಧಿಯ ಅನ್ವಯ ಭಾರತದಲ್ಲಿ ಯಾವುದೇ ಕಾರ್ಯಾಂಗೀಯ ಅಧಿಕಾರಗಳು ರಾಷ್ಟ್ರಪತಿಯ ಅನುಮತಿ ಅನುಸಾರ ಜರುಗುತ್ತವೆ .
ದೇಶದಲ್ಲಿ ಯಾವುದೇ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಬೇಕಾದರೆ ರಾಷ್ಟ್ರಪತಿಗಳ ಅಂಕಿತ ಹಾಕಬೇಕು .
ಆಗ ಮಾತ್ರ ಕಾಯ್ದೆಯಾಗುತ್ತವೆ . ಇಂತಹ ಕಾರ್ಯಾಂಗೀಯ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳು ಹೊಂದಿದ್ದಾರೆ .
ವಿಮರ್ಶೆ : –
ಭಾರತ ದೇಶದಲ್ಲಿ ರಾಷ್ಟ್ರಪತಿಯ ಹೆಸರಿನಲ್ಲಿ ದೇಶದ ಎಲ್ಲಾ ಕಾರ್ಯಗಳು ನಡೆದರೂ ಅವುಗಳ ನಿರ್ದೇಶನ ನಿಯಂತ್ರಣ
ನಿರ್ವಹಣೆಗಳನ್ನು ಮಾಡುತ್ತಿರುವವರು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವ ಸಂಪುಟವಾದುದ್ದರಿಂದ ರಾಷ್ಟ್ರಪತಿಯನ್ನು ಉತ್ಸವ ಮೂರ್ತಿ , ನಾಮ ಮಾತ್ರ ಹುದ್ದೆ , ರಬ್ಬರ್ ಸ್ಟಾಂಪ್ ಎಂದು ಕರೆಯುತ್ತಾರೆ .
ರಾಷ್ಟ್ರಪತಿಯವರು ಕೇವಲ ಆಳುವವರೇ ಹೊರತು ಅಡಕತ ನಡೆಸುವವರಲ್ಲ
ಎಂಬ ಮಾತಿದೆ . ಇದರಿಂದ ರಾಷ್ಟ್ರಪತಿಗಳನ್ನು ನಾಮಮಾತ್ರ ಶಿರೋಮಣಿ ಎಂದು ಕರೆಯಲಾಗುತ್ತಿದೆ .
ಡಾ | ಬಿ.ಆರ್.ಅಂಬೇಡ್ಕರ್ ಕೂಡ ಹೇಳುವಂತೆ “ ರಾಷ್ಟ್ರಪತಿಗಳು ರಾಷ್ಟ್ರದ ಪ್ರಮುಖರೆಂದೂ , ಪ್ರಧಾನಿಗಳನ್ನೂ ಸರ್ಕಾರದ ಪ್ರಮುಖರೆಂದೂ ಕರೆದಿದ್ದಾರೆ ” .
ಕೆಲವು ವಿಶೇಷ ಸಂದರ್ಭ ಸನ್ನಿವೇಶಗಳನ್ನು ಗಣನೆಗೆ ತೆಗೆದುಕೊಂಡಾಗ ರಾಷ್ಟ್ರಪತಿ ಹುದ್ದೆಯ ಪಾತ್ರವು ಮಹತ್ವಪೂರ್ಣವಾದದ್ದು & ಕೆಲವೊಮ್ಮೆ ವಿವೇಚನಾಧಿಕಾರವನ್ನು ಬಳಸಬಹುದು .
0 Comments