June 26, 2022

ನ್ಯಾಯಾಂಗ ಅಧಿಕಾರಗಳು ( Judicial Powers )

rashtrapati , president of power, pocket veto, Judicial Powers, ನ್ಯಾಯಾಂಗ ಅಧಿಕಾರಗಳು, rashtrapati bhavan, rashtrapati bhavan museum

rashtrapati , president of power, pocket veto, Judicial Powers, ನ್ಯಾಯಾಂಗ ಅಧಿಕಾರಗಳು, rashtrapati bhavan, rashtrapati bhavan museum

 ರಾಷ್ಟ್ರಪತಿಗೆ ಕ್ಷಮಾದಾನ ನೀಡುವ ಅಧಿಕಾರ

ವಿದಿ 72. ಕೆಲವು ಪ್ರಕರಣಗಳಲ್ಲ ಕ್ಷಮಾದಾನ ಮುಂತಾದವುಗಳನ್ನು ಮಾಡಲು , ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು , ಮಾಫಿ ಅಥವಾ ಪರಿವರ್ತನ ಮಾಡಲು ರಾಷ್ಟ್ರಪತಿಯ ಅಧಿಕಾರ

 

  • ಅಪರಾಧಿಯೆಂದು ತೀರ್ಮಾನವಾದ ನಂತರ ಅಂತಹ ಅಪರಾಧಿಗೆ ಸೇನಾ ನ್ಯಾಯಾಲಯವು ವಿಧಿಸಿದ ದಂಡನೆ ಅಥವಾ ಯಾವುದೇ ನ್ಯಾಯಾಲಯವು ನೀಡಿರುವ ಶಿಕ್ಷೆ ಅಥವಾ ಮರಣದಂಡನೆ ಶಿಕ್ಷೆಯನ್ನು ಅಮಾನತುಗೊಳಿಸುವ ಕ್ಷಮಾದಾನ ನೀಡುವ ಮುಂದೂಡುವ ಅಥವಾ ವಜಾ ಮಾಡುವ ಅಥವಾ ಬೇರೊಂದು ಶಿಕ್ಷೆಗೆ ಪರಿವರ್ತಿಸುವ ಅಧಿಕಾರವನ್ನು ರಾಷ್ಟ್ರಪತಿಗಳು ಹೊಂದಿದ್ದಾರೆ ಎಂದು ಸಂವಿಧಾನದ 72 ನೇ ವಿಧಿ ತಿಳಿಸುತ್ತದೆ .
  • ಸಂವಿಧಾನದ 76 ನೇ ವಿಧಿ ಅನ್ವಯ ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾದ ಆಟಾರ್ನಿ ಜನರಲ್‌ನ್ನು ನೇಮಿಸುವ ಅಧಿಕಾರವಿದೆ .
  • 124 ನೇ ವಿಧಿ ಅನ್ವಯ ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಾಧೀಶರು & ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವಿದೆ . ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸುತ್ತಾರೆ .
  • 217 ನೇ ವಿಧಿ ಅನ್ವಯ ಹೈಕೋರ್ಟಿನ ನ್ಯಾಯಾಧೀಶರನ್ನು ನೇಮಕ ಮಾಡುತ್ತಾರೆ .
  • ರಾಷ್ಟ್ರಪತಿಯವರ ಅಧಿಕಾರವನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ ,
  • 143 ನೇ ವಿಧಿಯ ಪ್ರಕಾರ ಸಾರ್ವಜನಿಕ ವಿಷಯಗಳಿಗೆ ಗೊಂದಲ ಉಂಟಾದಾಗ ಸುಪ್ರೀಂಕೋರ್ಟ್ ಸಲಹೆ ಕೇಳುವ ಅಧಿಕಾರವಿದೆ .
  • ರಾಷ್ಟ್ರಪತಿಯವರ ಅಧಿಕಾರವಧಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕುವಂತಿಲ್ಲ .

ಮಿಲಟರಿ ಅಧಿಕಾರ  ( Military Powers )

  1. ಮೂರು ರಕ್ಷಣಾ ಪಡೆಯ ಮಹಾದಂಡನಾಯಕರು .
  2. ರಾಷ್ಟ್ರಪತಿಗಳು ಧೂಸೇನೆ , ವಾಯುಪಡೆ ನೌಕಾಪಡೆಯ ಮೂರು ಪಡೆಯ ಮುಖ್ಯಸ್ಥರನ್ನು ನೇಮಕ ಮಾಡುವ ಅಧಿಕಾರ ಹೊಂದಿರುತ್ತಾರೆ .
  3. ಯುದ್ಧವನ್ನು ಘೋಷಿಸುವ ಹಾಗೂ ಯುದ್ಧವನ್ನು ನಿಲ್ಲಿಸಿ ಶಾಂತಿ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ .

ಇತರೆ ಅಧಿಕಾರಗಳು :

  • ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವರಾಗಿದ್ದಾರೆ .
  • ವಿದೇಶಿಗಳಿಗೆ ರಾಯಭಾರಿಗಳನ್ನು ನೇಮಕ ಮಾಡುತ್ತಾರೆ . ಅಂತರರಾಷ್ಟ್ರೀಯ ಒಪ್ಪಂದಗಳನ್ನು ಕರಾರುಗಳನ್ನು ಇವರ ಸಮ್ಮುಖದಲ್ಲೇ ನಡೆಯುತ್ತವೆ . ಕೇಂದ್ರಾಡಳಿತ ಪ್ರದೇಶದ ಆಡಳಿತ ನಿರ್ವಹಣೆ.
  • 213 ( 1 ) ನೇ ವಿಧಿ ಪ್ರಕಾರ ರಾಜ್ಯಪಾಲರು ಕೆಲವು ವಿಷಯಗಳ ಮೇಲೆ ಸುಗ್ರಿವಾಜ್ಞೆ ತರಲು ರಾಷ್ಟ್ರಪತಿ ಸಮ್ಮತಿಬೇಕು

ಹಣಕಾಸಿನ ಅಧಿಕಾರಗಳು : Financial Powers :

ಸಂವಿಧಾನ 113 ( 1 ) , ವಿಧಿಯಂತೆ ಲೋಕಸಭೆಯ ಹಣಕಾಸು ಮಸೂದೆಯು ಜಾರಿಗೆ ಬರಲು ರಾಷ್ಟ್ರಪತಿ ಸಹಿ ಹಾಕಬೇಕು .

ಕೇಂದ್ರ ಹಾಗೂ ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಶಿಫಾರಸ್ಸು ಮಾಡಲು 5 ವರ್ಷಗಳ ಅವಧಿಗೆ ಹಣಕಾಸು ಆಯೋಗವನ್ನು ನೇಮಕ ಮಾಡುತ್ತಾರೆ .

ಸಂವಿಧಾನ 117 ( 3 ) ನೇ ವಿಧಿಯಂತೆ ಭಾರತದ ಸಂಚಿತ ನಿಧಿ ( Consolidated Fund ) ಹಣ ಖರ್ಚು ಮಾಡಲು ಅವಕಾಶ ಮಾಡಿಕೊಡುವ ಮಸೂದೆಯನ್ನು ರಾಷ್ಟ್ರಪತಿಗಳ ಶಿಫಾರಸ್ಸು ಇಲ್ಲದೆ ಸಂಸತ್ತಿನಲ್ಲಿ ಅಂಗೀಕೃತವಾಗುವುದಿಲ್ಲ .

 274 ನೇ ವಿಧಿಯಂತೆ ರಾಷ್ಟ್ರಪತಿ ಅನುಮತಿ ಇಲ್ಲದೇ ತೆ ರಿಗೆಗೆ ಸಂಬಂಧಿಸಿದ ಮಸೂದೆ ಜಾರಿಗೆ ಬರುವಂತಿಲ್ಲ . ಸಂವಿಧಾನದ 280 ನೇ ವಿಧಿ ಅನ್ವಯ ಕೇಂದ್ರ ಹಣಕಾಸು ಆಯೋಗದ ನೇ

Leave a Reply

Your email address will not be published.