ಕ್ವಾಡ್– ಕ್ವಾಡ್ರಿಲೇಟರಲ್ ಸೆಕ್ಯೂರಿಟಿ ಡೈಲಾಗ್ ಶೃಂಗಸಭೆ
quadrilateral security dialogue, quadrilateral, quad security dialogue, quadrilateral security, types of quadrilaterals, a quadrilateral
ಜಗತ್ತಿನ ನಾಲ್ಕು ಪ್ರಮುಖ ರಾಷ್ಟ್ರಗಳಾದ ಭಾರತ , ಅಮೆರಿಕ , ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿ ರಚಿಸಿಕೊಂಡಿರುವ ‘ ಕ್ವಾಡ್ ‘ ( Quadrilateral Security Dialogue ) ನ ವರ್ಚುವರ್ ಸಭೆ ನಡೆಯಿತು .
ಭಾರತದ ಪ್ರಧಾನಿ ನರೇಂದ್ರ ಮೋದಿ , ಅಮೆರಿಕದ ಅಧ್ಯಕ್ಷ ಜೋ ಜೈನ್ , ಜಪಾನ್ ಪ್ರಧಾನಿ ಯೋಶಿಹಿಸುಗಾ , ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಈ ಸಭೆಯಲ್ಲಿ ವಿವಿಧ ವ್ಯೂಹಾತ್ಮಕ ವಿಚಾರಗಳ ಕುರಿತು ಮಾತುಕತೆ ನಡೆಸಿದರು .
ಕೋವಿಡ್ ಲಸಿಕೆ ಪೂರೈಕೆಯಿಂದ ಹಿಡಿದು ಹವಾಮಾನ ವೈಪರೀತ್ಯದ ತನಕ ವಿವಿಧ ವಿಚಾರಗಳ ಕುರಿತು ಈ ನಾಯಕರು ಸಭೆಯಲ್ಲಿ ಮಾತನಾಡಿದರು . ನಾಲ್ಕೂ ದೇಶಗಳಿಗೆ ಅನ್ವಯವಾಗುವ ಪ್ರಾದೇಶಿಕ , ಜಾಗತಿಕ ವಿಚಾರಗಳ ಕುರಿತು ಚರ್ಚೆ ನಡೆಯಿತು .
ಅದೇ ರೀತಿ ಇಂಡೋ – ಪೆಸಿಫಿಕ್ ಪ್ರದೇಶದಲ್ಲಿ ಉಚಿತವಾದ , ಮುಕ್ತವಾದ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ , ಅಭಿಪ್ರಾಯ ಹಂಚಿಕೆ ಮುಂತಾದವುಗಳ ಕುರಿತು ಚಿಂತನೆ ನಡೆಯಲಿದೆ ,
ಇಂಡೋ – ಫೋಸಿಫಿಕ್ ಮತ್ತು ಇತರೆ ಪ್ರದೇಶಗಳಲ್ಲಿ ತೀವ ಪ್ರಾಲ್ಯ ಹೆಚ್ಚುತ್ತಿರುವ ಕಾರಣ ಸಂಭಾವ್ಯ ಸವಾಲು ಎದುರಿಸಲು ಈ ಒಕ್ಕೂಟ ರಚನೆಯಾಗಿರುವುದಾಗಿ ಬಿಂಬಿತವಾಗಿದೆ .
ಕ್ವಾಡ್ ಎಂದರೇನು ?
ಕ್ವಾಡಿಲೇಟರಲ್ ಸೆಕ್ಯೂರಿಟಿ ಡೈಲಾಗ್ . ಇದನ್ನು ಏಷ್ಯನ್ ನಾಟೋ ಎಂದೂ ಗುರುತಿಸಲಾಗುತ್ತಿದೆ . ಅಮೆರಿಕ , ಜಪಾನ್ , ಭಾರತ ಮತ್ತು ಆಸ್ಟ್ರೇಲಿಯಾ – ಈ ನಾಲ್ಕು ರಾಷ್ಟ್ರಗಳ ಅನೌಪಚಾರಿಕ ಗುಂಪು ಇದಾಗಿದೆ .
ಮೊದಲ ಸಭೆ 2007 ರಲ್ಲಿ
ಮನಿಲಾದಲ್ಲಿ 2007 ರ ಮೇ ತಿಂಗಳಲ್ಲಿ ಕ್ವಾಡ್ ಮೊದಲ ಉದ್ಘಾಟನಾ ಸಭೆ ನಡೆಯಿತು .
ಪಾಲುದಾರಿಕೆ ಕ್ಷೇತ್ರಗಳು
ಉಚಿತ ಮತ್ತು ಮುಕ್ತ ಇಂಡೋ – ಫೆಸಿಫಿಕ್ ಪ್ರದೇಶ , ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟ , ಸಮಾನ ಆಸಕ್ತಿ ಕ್ಷೇತ್ರಗಳಲ್ಲಿ ಸಹಕಾರ , ಪಾಲುದಾರಿಕೆ , ಅಂತರರಾಷ್ಟ್ರೀಯ ಕಾನೂನು ಪ್ರಜಾಸತ್ತಾತ್ಮಕ ವಿಚಾರಕ್ಕೆ ಬದ್ಧತೆ , ಕೊರೋನಾ ಲಸಿಕೆ ಉತ್ಪಾದನೆಗೆ ಸಹಕಾರ & ಪಾಲುದಾರಿಕೆ ,
ಕ್ವಾಡ್ ನಡೆದು ಬಂದ ಹಾದಿ
ಆರಂಭ :
2004 ರಲ್ಲಿ ಒಂದು ಮಹಾಸಾಗರದಲ್ಲಿ ಭೂಕಂಪ ಸಂಭವಿಸಿ , ಸುನಾಮಿ ಅನಾಹುತವಾದಾಗ ಈ 4 ರಾಷ್ಟ್ರಗಳು ಸೇರಿ ಹಂಗಾಮಿ ಸುನಾಮಿ ಕೋರ್ ಗ್ರೂಪ್ ರಚಿಸಿದ್ದವು . ಇದುವೇ ಆರಂಭಿಕ ಹಂತದ ಕ್ವಾಡ್ನ ಸ್ವರೂಪವಾಗಿತ್ತು .
ಕ್ವಾಡ್:
2007 ರ ಆರಂಭಿಕ ಕಾಲಘಟ್ಟದಲ್ಲಿ ಜಪಾನ್ನ ಅಂದಿನ ಪ್ರಧಾನಿ ಶಿಂಜೋ ಆದೆ . ಅವರು ಕ್ವಾಡ್ರಿಲೇಟರಲ್ ಸೆಕ್ಯೂಂಟಿ ಡೈಲಾಗ್ ಅಥವಾ ಕ್ವಾಡ್ರಿಲೇಟರಲ್ ಇನಿಷಿಯೇಟಿವ್ನ ಪ್ರಸ್ತಾವನೆ ಮುಂದಿಟ್ಟಿದ್ದರು . ಇದರಲ್ಲಿ ಭಾರತ , ಜಪಾನ್ , ಅಮೆರಿಕ , ಆಸ್ಟ್ರೇಲಿಯ ಭಾಗವಹಿಸುವ ವಿಚಾರ ಇತ್ತು .
ಈ ಪ್ರಸ್ತಾವನೆ ಬಹಿರಂಗವಾದ ಕೂಡಲೇ ಚೀನಾದಿಂದ ಭಾರಿ ವಿರೋಧ ವ್ಯಕ್ತವಾಗಿತ್ತು . ಕ್ವಾಡ್: 2017 ರ ನವೆಂಬರ್ನಲ್ಲಿ ಆಸಿಯಾನ್ ಶೃಂಗ ನಡೆದಾಗ ಈ ನಾಲ್ಕು ರಾಷ್ಟ್ರಗಳ ಗುಂಪು ಕಾಡ್ 20 ಮುಂದುವರಿಸಲು ತೀರ್ಮಾನಿಸಿತು . 2017-19ರ ಅವಧಿಯಲ್ಲಿ ಕ್ವಾಡ್ ರಾಷ್ಟ್ರಗಳು ಐದು ಬಾರಿ ಸಭೆ ಸೇರಿದ್ದವು .
ಚೀನಾದ ಒನ್ ಬೆಲ್ಟ್ | ಚಿಂತನೆಯನ್ನು ಉತ್ತೇಜಿಸುವ ಕಡೆಗೆ ಗಮನಹರಿಸಿದ್ದವು . ಒನ್ ರೋಡ್ಗೆ ಪರ್ಯಾಯವಾಗಿ ‘ ಶ್ರೀ ಆಂಡ್ ಓಪನ್ ಇಂಡೋ – ಫೆಸಿಫಿಕ್ ಮೊದಲ
ಮಲಬಾರ್ ಸಮರಾಭ್ಯಾಸ
ಕ್ವಾಡ್ನ ಮೂರು ರಾಷ್ಟ್ರಗಳಾದ ಅಮೆರಿಕಾ , ಜಪಾನ್ , ಭಾರತವು ನೌಕಾ ಸಮರಾಭ್ಯಾಸವಾದ ಮಲಬಾರ್ -1 ಗ ಕೈಗೊಳ್ಳುತ್ತಾ ಬಂದಿದೆ . 1992 ರಲ್ಲಿ ಭಾರತ ಮತ್ತು ಅಮೆರಿಕ ಮೊದಲ ನೌಕಾ ಸಮರಾಭ್ಯಾಸವನ್ನು ಮಲಬಾರ್ -1 ಎಂಬ ಹೆಸರಿನಲ್ಲಿ ಆರಂಭಿಸಿದವು .
ನಂತರ 2016 ರಲ್ಲಿ ಜಪಾನ್ ದೇಶವು ಈ ಸಮರಾಭ್ಯಾಸಕ್ಕೆ ಸೇರ್ಪಡೆಗೊಂಡಿತು . 2020 ರ ನವೆಂಬರ್ನಲ್ಲಿ ಬಂಗಾಳಕೊಲ್ಲಿಯ ವಿಶಾಖಪಟ್ಟಣಂ ಮತ್ತು ಅರಣ್ಯ ಸಮುದ್ರದಲ್ಲಿ ನಡೆದ ಅಭ್ಯಾಸದಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಭಾಗವಹಿಸಿತ್ತು .
ಉಚಿತ ಮತ್ತು ಮುಕ್ತ ಇಂಡೋ – ಫೆಸಿಫಿಕ್ / Free and Open Indo – Pacific
ಉಚಿತ ಮತ್ತು ಮುಕ್ತ ಇಂಡೋ – ಫೆಸಿಫಿಕ್ ಪರಿಕಲ್ಪನೆಯನ್ನು ಮೊದಲು ತಿಳಿಸಿದ್ದು ಜಪಾನ್ , ಇಂಡೋ- ಫೆಸಿಫಿಕ್ ಪ್ರದೇಶದಲ್ಲಿ ಇದೇ ರೀತಿಯ ಆಸಕ್ತಿ ಹೊಂದಿರುವ ದೇಶಗಳ ನಿರ್ದಿಷ್ಟ ತಂತ್ರಗಳನ್ನು ಇದು ಒಳಗೊಂಡಿದೆ .
ಜಪಾನೀಸ್ ಮತ್ತು ಅಮೆರಿಕನ್ ಸಹಕಾರದ ಮೂಲಕ ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲಾಗಿದೆ . ಅದನ್ನು ಔಪಚಾರಿಕವಾಗಿ 2016 ರಲ್ಲಿ ಒಂದು ತಂತ್ರವಾಗಿ ಪರಿಚಯಿಸಲಾಯಿತು . 2019 ರಲ್ಲಿ ಅಮೆರಿಕಾ ಉಚಿತ ಮತ್ತು ಮುಕ್ತ ಇಂಡೋ – ಪೆಸಿಫಿಕ್ ಪರಿಕಲ್ಪನೆಯನ್ನು ಔಪಚಾರಿಕಗೊಳಿಸುವ ವರದಿಯನ್ನು ಪ್ರಕಟಿಸಿತು .
OBOR – One Belt One Road ಒನ್ ಬೆಲ್ಟ್ ಒನ್ ರೋಡ್
ಚೀನಾ ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು , ಇದು ಏಷ್ಯಾ , ಆಫ್ರಿಕಾ ಮತ್ತು ಯುರೋಪ್ ಖಂಡಗಳಲ್ಲಿ ಹರಡಿರುವ ಅನೇಕ ದೇಶಗಳ ನಡುವೆ ಸಂಪರ್ಕ ಮತ್ತು ಸಹಕಾರವನ್ನು ಕೇಂದ್ರೀಕರಿಸುತ್ತದೆ .
OBOR ಸುಮಾರು 78 ದೇಶಗಳನ್ನು ವ್ಯಾಪಿಸಿದೆ ಆರಂಭದಲ್ಲಿ 2013 ರಲ್ಲಿ ಘೋಷಿಸಲ್ಪಟ್ಟ ಈ ಯೋಜನೆಯು ರಸ್ತೆಮಾರ್ಗಗಳು , ರೈಲ್ವೆಗಳು , ಕಡಲ ಬಂದರುಗಳು ,
ವಿದ್ಯುತ್ ಗ್ರಿಡ್ಗಳು , ತೈಲ ಮತ್ತು ಅನಿಲ ಪೈಪ್ಲೈನ್ಗಳು ಮತ್ತು ಸಂಬಂಧಿತ ಮೂಲಸೌಕರ್ಯ ಯೋಜನೆಗಳ ಜಾಲಗಳನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ .
ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ .
ಸಿಲ್ಕ್ ರೋಡ್ ಎಕನಾಮಿಕ್ ಬೆಲ್ಟ್ / Silk Road Economic Belt :
ಇದು ಭೂ – ಆಧಾರಿತವಾಗಿದ್ದು , ಚೀನಾವನ್ನು ಮಧ್ಯ ಏಷ್ಯಾ , ಪೂರ್ವ ಯುರೋಪ್ ಮತ್ತು ಪಶ್ಚಿಮ ಯುರೋಪಿನೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ .
21 ನೇ ಶತಮಾನದ ಕಡಲ ರೇಷ್ಮೆ ರಸ್ತೆ 21st Century Maritime Silk Road :
ಇದು ಸಮುದ್ರ ಆಧಾರಿತವಾಗಿದೆ ಮತ್ತು ಚೀನಾದ ದಕ್ಷಿಣ ಕರಾವಳಿಯನ್ನು ಮೆಡಿಟರೇನಿಯನ್ , ಆಫ್ರಿಕಾ , ಆಸ್ಟ್ರೇಯ ಏಷ್ಯಾ ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕಿಸುವ ನಿರೀಕ್ಷೆಯಿದೆ .
0 Comments