ಪ್ರಧಾನಿ ಅಧಿಕಾರಗಳು ( Power of The Prime Minister )
power of the prime minister, pradanamantri, pradanamantri avasyojana, pradanamantri avasyojana eligibility,pradanamantri avasyojana list
ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಮಂಡಲ ಮಂತ್ರಿಮಂಡಲದ
ಕೇಂದ್ರ ಮುಖ್ಯಸ್ಥರಾದ ಪ್ರಧಾನಮಂತ್ರಿಯವರು ಈ ಕೆಳಗಿನ ಅಧಿಕಾರ ಹೊಂದಿದ್ದಾರೆ .
1 ) ರಾಷ್ಟ್ರಪತಿಗಳು ಪ್ರಧಾನಮಂತ್ರಿಯ ಸಲಹೆ ಮೇರೆಗೆ ಮಂತ್ರಿಗಳನ್ನು ನೇಮಕ ಮಾಡುವರು .
2 ) ಪ್ರಧಾನಮಂತ್ರಿಗಳು ಮಂತ್ರಿಗಳಿಗೆ ಖಾತೆ ಹಂಚುವರು .
3 ) ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವರು ಹಾಗೂ ಸಂಪುಟದಲ್ಲಿ ನಿರ್ಣಯಗಳ ಮೇಲೆ ಪ್ರಭಾವ ಬೀರುವರು ,
4 ) ಸಂಪುಟದ ಮೇಲೆ ಭಿನ್ನಾಭಿಪ್ರಾಯ . ಉಂಟಾದಾಗ ವಜಾ ಮಾಡುವಂತೆ ರಾಷ್ಟ್ರಪತಿ ಸಲಹೆ ನೀಡುವ ಅಧಿಕಾರ ಹೊಂದಿದ್ದಾರೆ .
5 ) ಸಚಿವ ಸಂಪುಟದ ಸಚಿವರ ಮೇಲೆ ಭಿನ್ನಾಭಿಪ್ರಾಯ ಹೊಂದಿದಾಗ ಪ್ರಧಾನಮಂತ್ರಿಯವರು ಸಚಿವರನ್ನು ರಾಜೀನಾಮೆ ಕೇಳುವ ಅಧಿಕಾರವಿದೆ .
6 ) ಸಚಿವರುಗಳು ಎಲ್ಲಾ ಕಾರ್ಯವನ್ನು ಸಮನ್ವಯಿಸುವ , ನಿಯಂತ್ರಿಸುವ ನಿರ್ದೇಶಿಸುವ ಅಧಿಕಾರ ಹೊಂದಿದ್ದಾರೆ .
7 ) ಪ್ರಧಾನ ಮಂತ್ರಿಯವರು ತಾವು ರಾಜೀನಾಮೆ ನೀಡುವುದರ ಮೂಲಕ ಸಚಿವ ಸಂಪುಟವನ್ನು ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ . ಪ್ರಧಾನ ಮಂತ್ರಿಯು ಸಾವನ್ನಪ್ಪಿದರೆ ಅಥವಾ ರಾಜೀನಾಮೆ ನೀಡಿದ ತಕ್ಷಣ ತಮ್ಮ ಸಚಿವ ಸಂಪುಟ ಕೊನೆಗೊಳ್ಳುತ್ತದೆ .
ಪ್ರಧಾನಿ ಕಛೇರಿ – ( PMO )
ಪ್ರಧಾನ ಮಂತ್ರಿಯು ಕೇಂದ್ರ ಸರ್ಕಾರದ ಮುಖ್ಯಸ್ಥನಾದುದ್ದರಿಂದ ಎಲ್ಲಾ ಕಾರ್ಯಗಳು ಅವರ ನಿರ್ದೇಶನದಂತೆ ನಡೆಯುವುದರಿಂದ ಇಂತಹ ಕಾರ್ಯ ನಡೆಸುವ ಸಲುವಾಗಿ ಪ್ರತ್ಯೇಕವಾದ ಕಛೇರಿ ಇದೆ .
ಪ್ರಧಾನಿ ಕಛೇರಿಯು 1947 ರಲ್ಲಿ ಅಸ್ತಿತ್ವಕ್ಕೆ ಬಂದಿತು . 1947 ಕ್ಕೂ ಮೊದಲು ಗೌರರ್ ಜನರಲ್ರವರ ಕಛೇರಿಯಾಗಿತ್ತು .
ಪ್ರಧಾನಮಂತ್ರಿ ಕಛೇರಿಯನ್ನು 1977 ರ ವರೆಗೆ ( Prime minister secretariate ) dabog ಸಚಿವಾಲಯ ಎಂದು ಕರೆಯಲಾಗುತ್ತಿತ್ತು . ಪ್ರಧಾನಿ ಕಛೇರಿಯು ಪ್ರಧಾನಿ ಕಾರ್ಯಗಳನ್ನು ನಿರ್ವಹಿಸುತ್ತದೆ , ಇದು ಪ್ರತ್ಯೇಕ ಸಂವಿಧಾನಿಕ ಸಂಸ್ಥೆಯಾಗಿದೆ .
ಪ್ರಧಾನಿ ಕಛೇರಿಯ ಕಾರ್ಯಗಳು :
350 ಜನರನ್ನು ಒಳಗೊಂಡ ಈ ಕಛೇರಿಯು ಪ್ರಧಾನಿಯವರ ಕಾರ್ಯವನ್ನು ಸಮರ್ಥವಾಗಿ ಸನ್ನದ್ಧವಾಗಿದೆ . ಇದರ ಕಾರ್ಯಗಳೆಂದರೆ
1 ) ಪ್ರಧಾನಮಂತ್ರಿಯ ನಿರ್ವಹಿಸಲು ಕಾರ್ಯಗಳನ್ನು ನಿರ್ವಹಿಸುತ್ತದೆ , ಕೇಂದ್ರ ಸಚಿವಾಲಯ , ವಿವಿಧ ಇಲಾಖೆಗಳು ಹಾಗೂ ಸರ್ಕಾರಗಳು ರಾಜ್ಯ ಸಂಬಂಧವನ್ನು ಹೊಂದುತ್ತದೆ .
2 ) ಪ್ರಧಾನ ಮಂತ್ರಿಗಳ ಸಾರ್ವಜನಿಕ ಸಂಪರ್ಕಗಳ ನಿರ್ವಹಣೆ , ಮಾಧ್ಯಮಗಳ ಸಂಬಂಧಗಳು ನಿರ್ವಹಿಸುತ್ತದೆ .
3 ) ಪ್ರಧಾನ ಮಂತ್ರಿಗಳ ಎಲ್ಲಾ ವ್ಯವಹಾರಗಳನ್ನು ಕಾಯಿದೆ , ನಿಯಮಗಳು ಪಾಲಿಸುವ , ಸೂಚಿಸುವ ಕಾರ್ಯ ಮಾಡುತ್ತವೆ .
4 ) ಪ್ರಧಾನಮಂತ್ರಿಯ ಕಛೇರಿಯು ಪ್ರಧಾನಮಂತ್ರಿಯ Think Tank ಎಂದು ಪರಿಗಣಿಸಲಾಗುವುದು .
5 ) ಪ್ರಧಾನಿಗಳು ನೀತಿ ಆಯೋಗದ ಮುಖ್ಯಸ್ಥರಾಗಿ ನಿರ್ವಹಿಸುವ ಜವಾಬ್ದಾರಿಗಳಿಗೆ ಸಹಕರಿಸುತ್ತದೆ .
ಪ್ರಧಾನಮಂತ್ರಿಯ ಇತರೆ ಜವಾಬ್ದಾರಿಗಳು :
ಪ್ರಧಾನ ಮಂತ್ರಿಗಳು ಈ ಕೆಳಕಂಡ ಸಂಸ್ಥೆಗಳ ಪದ ನಿಮಿತ್ತ ಅಧ್ಯಕ್ಷರಾಗಿರುತ್ತಾರೆ .
1 ) ನೀತಿ ಆಯೋಗದ ಮುಖ್ಯಸ್ಥರು ( NITI Commission )
2 ) ನೀತಿ ಆಯೋಗದ ಆಡಳಿತ ಮಂಡಳಿಯ ಸಭೆ ( Governing Council of NITI ) ರಾಷ್ಟ್ರೀಯ ಭಾವೈಕ್ಯತೆ ಪರಿಷತ್ತು ( National Integration Council )
4 ) ಅಂತರಾಜ್ಯ ಪರಿಷತ್ ( Inter State Council )
5 ) ಆಡಳಿತ ಪಕ್ಷದ ಅಧ್ಯಕ್ಷರು
6 ) ಸೇವೆಗಳ ರಾಜಕೀಯ ಮುಖ್ಯಸ್ಥ
7 ) ಕೇಂದ್ರ ಸರ್ಕಾರದ ರಾಜಕೀಯ ವಕ್ತಾರ
8 ) ರಾಷ್ಟ್ರದ ಹಾಗೂ ರಾಜ್ಯಗಳ ಎಲ್ಲಾ ಜನರ ಭೇಟಿಮಾಡಿ ಸಮಸ್ಯೆ ಬಗ್ಗೆ ಮನವಿ ಪಡೆಯುವ ಹಾಗೂ ಬಗೆಹರಿಸುವ ರಾಷ್ಟ್ರ ನಾಯಕರಾಗಿದ್ದಾರೆ .
ಪ್ರಧಾನಮಂತ್ರಿ ಹಾಗೂ ವಿದೇಶಿ ಸಂಬಂಧ
ಪ್ರಧಾನ ಮಂತ್ರಿಗಳು ವಿಶ್ವದ ವಿವಿಧ ರಾಷ್ಟ್ರಗಳೊಡನೆ ಉತ್ತಮ ಸಂಬಂಧ ಹೊಂದಿರುತ್ತಾರೆ . ಇವರು ವಿದೇಶಿ ಗಣ್ಯರನ್ನು ಆಹ್ವಾನಿಸಿ ಒಡಂಬಡಿಕೆ ಮಾಡಿಕೊಳ್ಳುವ , ವಿದೇಶಿ ವ್ಯವಹಾರದಲ್ಲಿ ಭಾಗವಹಿಸುವ , ಅಂತರರಾಷ್ಟ್ರೀಯ ಸಂಬಂಧ ಹೆಚ್ಚಿಸಿ ವಿಶ್ವ ಸಂಸ್ಥೆಯೊಂದಿಗೆ ವ್ಯವಹರಿಸುವ ದೇಶದ ಪ್ರತಿನಿಧಿಯಾಗಿದ್ದಾರೆ . ಉತ್ತಮ ವಿದೇಶಾಂಗ ನೀತಿ ನೀಡುವ ಮೂಲಕ ನೆಹರುರವರು ಪ್ರಧಾನಿಗಳಿಗೆ ಮಾದರಿಯಾಗಿದ್ದಾರೆ .
ಪ್ರಧಾನಮಂತ್ರಿಗಳು ವಿವಿಧ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ವಿದೇಶ ಪ್ರವಾಸ ಕೈಗೊಂಡು ಆ ದೇಶದ ಮುಖ್ಯಸ್ಥರುಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿ , ಅವರೊಂದಿಗೆ ಆನೇಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ .
ಸರ್ಕಾರಿ ವ್ಯವಹಾರ ನಡವಳಿಕೆ : –
ದಿಧಿ .77 . ಭಾರತ ಸರ್ಕಾರದ ವ್ಯವಹಾರ ನಡವಆಕೆ
ಭಾರತ ಸರ್ಕಾರದ ಕಾರ್ಯಾಂಗದ ಸಮಸ್ತ ಕಾರ್ಯ ಗಳು ಕೂಡ ರಾಷ್ಟ್ರಪತಿ ಹೆಸರಿನಲ್ಲಿ ನಡೆಯಬೇಕೆಂದು ಸಂವಿಧಾನದ 77 ( 1 ) ನೇ ವಿಧಿ ತಿಳಿಸುತ್ತದೆ .
ರಾಷ್ಟ್ರಪತಿಗಳ ಆದೇಶಗಳನ್ನು ಹೆಸರಿನಲ್ಲಿ ಮಾಡಲಾದ ಮತ್ತು ಬರೆದು ಕೊಟ್ಟ ದಾಖಲೆಗಳನ್ನು , ರಾಷ್ಟ್ರಪತಿಗಳು ರಚಿಸಿದ ನಿಯಮಗಳಲ್ಲಿ ನಿಗಧಿಪಡಿಸಿದ ರೀತಿಯಲ್ಲಿ ಧೃಡೀಕರಿಸಬೇಕು ಎಂದು ಸಂವಿಧಾನದ 77 ( 2 ) ನೇ ವಿಧಿ ತಿಳಿಸುತ್ತದೆ .
ಭಾರತದ ಸರ್ಕಾರದ ವ್ಯವಹಾರವು ಹೆಚ್ಚು ಅನುಕೂಲ ಕರವಾಗಿ ನಡೆಯಲು ಮತ್ತು ಅಂತಹ ವ್ಯವಹಾರವನ್ನು ಮ ೦ ತ್ರಿಕೆಗಳಲ್ಲಿ ಹಂಚಿಕೆಯಾಗಲು ರಾಷ್ಟ್ರಪತಿಗಳು ನಿಯಮ ಗಳನ್ನು ರಚಿಸಬೇಕೆಂದು ಸಂವಿಧಾನದ 77 ( 3 ) ನೇ ವಿಧಿ ತಿಳಿಸುತ್ತದೆ .
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
0 Comments