
ಪರಿವಿಡಿ
Narendra Modi in kannada
ನರೇಂದ್ರ ಮೋದಿ
Narendra Modi in kannada, narendra modi, prime minister narendra modi, pm narendra modi, ನರೇಂದ್ರ ಮೋದಿ ಅವರ ಬಗ್ಗೆ ಪ್ರಬಂಧ
ಜನ್ಮದಿನ
ಸೆಪ್ಟೆಂಬರ್ 17 , 1950
ಮೇ 26 , 2014 ರಿಂದ ಮುಂದುವರಿದಿದ್ದಾರೆ . ಇವರು ಗುಜರಾತ್ನ ಮಾಜಿ ಮುಖ್ಯಮಂತ್ರಿಗಳು , ನರೇಂದ್ರ ಮೋದಿ ಅವರು ಭಾರತದ 15 ನೇ ಪ್ರಧಾನಿಯಾಗಿ 2014 ಮೇ 26 ರಂದು ಅಧಿಕಾರ ವಹಿಸಿಕೊಂಡರು .
ಇವರು ಗುಜರಾತಿನ 14 ನೇ ಮುಖ್ಯಮಂತ್ರಿಯಾಗಿಯೂ ಕೂಡ 2001 ರಿಂದ 2014 ರವರೆಗೆ ಕಾರ್ಯನಿರ್ವಹಿಸಿದ್ದರು .
ನರೇಂದ್ರ ಮೋದಿಯವರು 16 ನೇ ಲೋಕಸಭೆಗೆ ಗುಜರಾತಿನ ವಡೋದರ ಲೋಕಸಭಾ ಕ್ಷೇತ್ರ ಮತ್ತು ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು . ಪ್ರಸ್ತುತ ವಾರಣಾಸಿ ಕ್ಷೇತ್ರದಿಂದ ಮುಂದುವರೆದಿದ್ದಾರೆ .
ನರೇಂದ್ರ ಮೋದಿಯವರು ಮೇ 26 , 2014 ರಂದು ಭಾರತದ 15 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು . ಇವರಿಗೆ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪ್ರಮಾಣ ವಚನ ಬೋಧಿಸಿದರು .
ಪ್ರಮಾಣ ವಚನ ಸಮಾರಂಭದಲ್ಲಿ ಸಾರ್ಕ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಈ ಸಂದರ್ಭದಲ್ಲಿ ವಡೋದರದ ಟೀ ಮಾರಾಟಗಾರ ಕಿರಣ್ ಮಹಿದಾರ ರವರಿಗೂ ಆಹ್ವಾನ ನೀಡಲಾಗಿತ್ತು . ಸ್ವಾತಂತ್ರೋತ್ಸವ ಭಾಷಣ – 68 ನೇ ಸ್ವಾತಂತ್ರ್ಯದ ಮೋದಿಯವರ ಭಾಷಣ
ನರೇಂದ್ರ ಮೋದಿಯವರು ಆಗಸ್ಟ್ 15 , 2014 ರಂದು ಭಾರತದ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಿ 68 ನೇ ಸ್ವಾತಂತ್ರೋತ್ಸವವನ್ನು ಉದ್ದೇಶಿಸಿ ಮಾತನಾಡಿದರು .
ಈ ಸಂದರ್ಭದಲ್ಲಿ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳಾದ ಪ್ರಧಾನಮಂತ್ರಿ ಜನ್ಧನ್ ಯೋಜನೆ ,
ಮೇಕ್ ಇನ್ ಇಂಡಿಯಾ ,
ಸ್ವಚ್ಛ ಭಾರತ ,
ಡಿಜಿಟಲ್ ಇಂಡಿಯಾ ,
ಸಂಸದರ ಆದರ್ಶ ಗ್ರಾಮ ಯೋಜನೆ ,
ನೀತಿ ಆಯೋಗದ ರಚನೆ ಬಗ್ಗೆ ಘೋಷಣೆ ಮಾಡಿದರು . ‘
ನಾನೊಬ್ಬ ಪ್ರಧಾನ ಮಂತ್ರಿಯಲ್ಲಿ ಪ್ರಧಾನ ಸೇವಕ ‘ ಎಂಬ ಘೋಷಣೆಯೊಂದಿಗೆ 65 ನಿಮಿಷಗಳ ಭಾಷಣ ಮಾಡಿದರು .
2014 ನೇ ಸಾಅನಲ್ಲಿ ಜಾರಿಗೆ ತಂದ ಪ್ರಮುಖ ಕಾರ್ಯಕ್ರಮಗಳು
ನಮಾಮಿ ಗಂಗಾ ಯೋಜನೆ : –
2014 ರ ಜುಲೈ 10 ರಂದು ಜಾರಿಗೆ ತರಲಾಗಿದೆ . ಇದು ಗಂಗಾ ನದಿಯನ್ನು ವಿಸ್ತತವಾಗಿ ರಕ್ಷಣೆ ಮಾಡುವುದು ಮತ್ತು ಸ್ವಚ್ಛಗೊಳಿಸುವುದಾಗಿದೆ .
My govt website : ಉದ್ಘಾಟನೆ ಭಾರತದ ನಾಗರೀಕರು ನರೇಂದ್ರ ಮೋದಿಯವರು 2014 ರ ಜುಲೈ 26 ರಂದು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಉದ್ದೇಶದಿಂದ “ ಮೈ ಗವರ್ನಮೆಂಟ್ ” ಎಂಬ ವೆಬ್ಸೈಟ್ನ್ನು ಉದ್ಘಾಟಿಸಿದರು .
ರಾಷ್ಟ್ರೀಯ ಗೋಕುಲ್ ಮಿಷನ್ : –
2014 ರ ಜುಲೈ 28 ರಂದು ಜಾರಿಯಾಯಿತು . ದೇಶೀಯ ಗೋ ತಳಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಉದ್ದೇಶದಿಂದ ಗೋಕುಲ್ ಮಿಷನ್ ಜಾರಿಗೊಳಿಸಲಾಗಿದೆ . ಗೋತಳಿ ಹಾಗೂ ಹೈನುಗಾರಿಕೆ ಅಭಿವೃದ್ಧಿಗೆ ರಾಷ್ಟ್ರೀಯ ಕಾರ್ಯಕ್ರಮ ( NPBDD – National Programme for Bovine Breeding and Dairy Development ) a ಈ ಯೋಜನೆ ರೂಪಿಸಲಾಗಿದೆ .
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ 2014ರಂದು ಮೋದಿಯವರು ಆಗಸ್ಟ್ 19 ಹರಿಯಾಣದ ಕೈತಾಲ್ನಲ್ಲಿ ದೇಶಾದ್ಯಂತ ಜನರ ನೀರಾವರಿ ಅಗತ್ಯತೆ ಪೂರೈಸುವ 1000 ಕೋಟಿ ವೆಚ್ಚದ ಯೋಜನೆಯನ್ನು ಉದ್ಘಾಟಿಸಿದರು .
ಪ್ರಧಾನ ಮಂತ್ರಿ ಜನಧನ್ ಯೋಜನೆ
( PMJDY Pradhan Mantri Jan Dhan Yojana )
2014 ರ ಆಗಸ್ಟ್ 28 ರಂದು ಘೋಷಣೆ ಉದ್ದೇಶ : ಹಣಕಾಸು ಸಮನ್ವಯತೆ , ಅಂದರೆ ಹಣಕಾಸು ಸೇವೆಗಳಾದ ಬ್ಯಾಂಕ್ ಉಳಿತಾಯ , ಠೇವಣೆ ಖಾತೆಗಳು , ಸಾಲ , ವಿಮೆ , ಪಿಂಚಣಿ ಇತರೆ ಸೌಲಭ್ಯಗಳೆಲ್ಲವೂ ಎಲ್ಲರಿಗೂ ಲಭಿಸುವಂತೆ ಮಾಡಿಸುವುದು .
ಸೌಲಭ್ಯಗಳು :
ಎ ) ಶೂನ್ಯ ಮೊತ್ತದಲ್ಲಿ ಬ್ಯಾಂಕ್ ಖಾತೆ ತೆರೆಯುವುದು ,
ಬಿ ) ರೂಪೇ ಡೆಬಿಟ್ ಆಗಸ್ಟ್ ಹಂತದ ಯೋಜನೆ ( 2015 ಜನವರಿ 26 )
ಸಿ ) ರೂ . | ಲಕ್ಷದವರೆಗೆ ಆಕಷಿಕ ವಿಮೆ , ರೂ . 30,000 ಜೀವ ವಿಮೆ ಹಾಗೂ ರೂ 5000 ಮೀರದಂತೆ ಸೌಲಭ್ಯ ಒದಗಿಸುವುದು . 2015 ರ
ಡಿ ) 2015 ರ 15 ರಿಂದ 2018 ರ ಆಗಸ್ಟ್ 15 ರವರೆಗೆ 2 ನೇ ಯೋಜನೆ , ಜನವರಿ 20 , 2015 ರಂದು ಪ್ರಧಾನಮಂತ್ರಿ ಜನಧನ ಯೋಜನೆಯು ಗಿನ್ನಿಸ್ ದಾಖಲೆ ಸೇರಿದೆ .. ತುಮಕೂರಿನಲ್ಲಿ ‘ ಫುಡ್ ಪಾರ್ಕ್ ಉದ್ಘಾಟನೆ
2014 330 ಸೆಪ್ಟೆಂಬರ್ 24 ರಂದು ಮೋದಿಯವರು ತುಮಕೂರಿನ ವಸಂತನರಸಾಪುರದಲ್ಲಿ ಮೆಗಾ ಫುಡ್ ಪಾರ್ಕ್ನ್ನು ಸ್ಥಾಪಿಸಿದರು .
2015 ನೇ ಸಾಲಿನಲ್ಲಿ ಜಾರಿಗೆ ತಂದ ಪ್ರಮುಖ ಕಾರ್ಯಕ್ರಮಗಳು
ನೀತಿ ಆಯೋಗ ( NITI Ayoga )
ಜನವರಿ 1 , 2015 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗವನ್ನು ಸ್ಥಾಪಿಸಿದರು . ನೀತಿ ಎಂದು National Institution for Transforming India ‘ ಎಂದರ್ಥ , ನೀತಿ ಆಯೋಗದ ಮೊದಲ ಆಡಳಿತ ಸಭೆಯು ಫೆಬ್ರವರಿ 6,2015 ರಂದು ಜರುಗಿ ತು , ಫೆಬ್ರವರಿ 8 , 2015 ರಂದು ‘ ಟೀಂ ಇಂಡಿಂ ಮಾ ‘ ಎಂಬ ಹಣೆಪಟ್ಟಿಯೊಂದಿಗೆ ನವದೆಹಲಿಯಲ್ಲಿ ದೇಶದ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಂದರ್ಭದಲ್ಲಿ ಆರಂಭವಾಯಿತು .
ಆಯೋಗದ ರೂಪುರೇಷೆಗಳನ್ನು ಚರ್ಚಿಸಲಾಯಿತು .
ಯಾವ ಮಾದರಿ : Bottom -up – Approach
ಅಧ್ಯಕ್ಷರು : ಪ್ರಧಾನಿ ನರೇಂದ್ರ ಮೋದಿ
ಉಪಾಧ್ಯಕ್ಷರು : ಅರವಿಂದ್ ಪನಗಾರಿಯಾ
ಸಿಇಒ : ಅಮಿತಾಬ್ ಕಾಂತ್
ಇದೊಂದು ಸಂವಿಧಾನೇತರ ಸಂಸ್ಥೆಯಾಗಿದೆ .
ಇದರ ಪದನಿಮಿತ್ತ ಸದಸ್ಯರುಗಳು : ಕೇಂದ್ರ ಸಚಿವರಾದ
ರಾಜನಾಥ್ ಸಿಂಗ್ , ಅರುಣ್ ಜೇಟ್ಲಿ , ಸುರೇಶ್ ಪ್ರಭು ಮತ್ತು ರಾಧಾ ಮೋಹನ್ ಸಿಂಗ್
ವಿಶೇಷ ಆಹ್ವಾನಿತರು : ಕೇಂದ್ರ ಸಚಿವರಾದ ನಿತಿನ ಗಡ್ಕರಿ , ಸ್ಮೃತಿ ಇರಾನಿ , ತವರ್ ಚಂದ್ ಗಿಲೋಟ್
ಪೂರ್ಣಾವಧಿ ಸದಸ್ಯರು : ಬಿಬೇಕ್ ದೇಬಾಯ್ ( ಅರ್ಥಶಾಸ್ತ್ರಜ್ಜ ) , ವಿ.ಕೆ. ಸಾರಸ್ವತ್ ‘ ( ಡಿಆರ್ಡಿ ನ ಮಾಜಿ ಮುಖ್ಯಸ್ಥರು ) , ರಮೇಶ್ ಚಂದ್ ( ಕೃಷಿ ತಜ್ಞರು )
ಆಡಆತ ಮಂಡಳಿ : ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗೌರರ್ಗಳು
ನೀತಿ ಆಯೋಗದ ಅಡಆತ ಮಂಡಆಯ ಸಭೆಗಳು
1 ) ಮೊದಲ ಸಭೆ 2015 ರ ಫೆಬ್ರವರಿ 8
2 ) ಎರಡನೇ ಸಭೆ 2015 ರ ಜುಲೈ 15
3 ) ಮೂರನೇ ಸಭೆ 2017 ರ ಏಪ್ರಿಲ್ 23
2016 ನೇ ಸಾಲನಲ್ಲಿ ಜಾರಿಗೆ ತಂದ ಯೋಜನೆಗಳು
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ( PMFBY ):
ಈ ಯೋಜನೆಗೆ ಪ್ರಧಾನ ಮಂತ್ರಿ ನೇತೃತ್ವದ ಸಚಿವ ಸಂಪುಟವ 2016 ಜನವರಿ 13 ರಂದು ಅಂಗೀಕಾರ ನೀಡಿತು . ಇದೊಂದು ಬೆಳೆ ಪರಿಹಾರ ನಿಧಿಯಾಗಿದ್ದು , 2016 ಫೆಬ್ರವರಿ 18 ರಂದು ಉದ್ಘಾಟನೆಯಾಯಿತು . One Nation , One Scheme ಎಂಬುದು ಇದರ ಧೈಯವಾಕ್ಯವಾಗಿದೆ . ಈ ಯೋಜನೆಯನ್ನು ಅಸ್ತಿತ್ವದಲ್ಲಿದ್ದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗಳನ್ನು ಪರಿಷ್ಕರಿಸಿ ಜಾರಿಗೆ ತರಲಾಗಿದೆ .
ಆಕಾಲಿಕ ಮಳೆ ಹಾಗೂ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ರೈತರ ನೆರವಿಗಾಗಿ ಪರಿಹಾರ ಮೊತ್ತ ಹೆಚ್ಚಳ ಹಾಗೂ ಮಹಾರ ನೀಡಲು ನಿಗದಿಪಡಿಸಲಾದ ಮಿತಿ ಹೆಚ್ಚಳ , ಬರ , ಅನಾವೃಷ್ಟಿ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ಅಪಾರ ಹಾನಿ ಸಂಭವಿಸಿದ ಸಂದರ್ಭದಲ್ಲಿ ರೈತರಿಗೆ ನೆರವು ನೀಡುವ ಉದ್ದೇಶದಿಂದ ಹೊಂದಿದೆ . ಈ ಯೋಜನೆಯಲ್ಲಿ ಬೆಳೆ ವಿಮೆ ಕಂತಿನಲ್ಲಿ ಬಾರಿ ರಿಯಾಯಿತಿ ನೀಡಲಾಗಿದೆ . ಮುಂಗಾರಿನ ಬೆಳೆ ( ಖಾರಿಫ್ ) ಗೆ ವಿಮೆ ಪ್ರೀಮಿಯಂನ ಶೇ 2 ರಷ್ಟು ಹಾಗೂ ಹಿಂಗಾರು ಬೆಳೆ ( ರ ) ಗೆ ಪ್ರೀಮಿಯಂನ ಶೇ 1.5 ರಷ್ಟನ್ನು ರೈತರು ಪಾವತಿಸಿದರೆ ಸಾಕು , ಬೆಳೆ ಹಾನಿಯಾದಾಗ ನೀಡಲಾಗುತ್ತಿದ್ದ ಪರಿಹಾರ ಮೊತ್ತ ಒಂದೂವರೆ ಪಟ್ಟು ಹೆಚ್ಚಳ . ಈ ಹಿಂದೆ ಶೇ 50 ರಷ್ಟು ಬೆಳೆ ಹಾನಿಯಾದಲ್ಲಿ ಮಾತ್ರ ಪರಿಹಾರ ನೀಡಲಾಗುತ್ತಿತ್ತು . ಈಗ ಶೇ 33 ರಷ್ಟು ಬೆಳೆ ಹಾನಿಯಾದರೂ ಪರಿಹಾರ ನೀಡಲಾಗುತ್ತದೆ
ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶಾದ್ಯಂತ ಏಕ ತೆರಿಗೆ ವ್ಯವಸ್ಥೆ – ಜಿ.ಎಸ್.ಐ
ಪರೋಕ್ಷ ತೆರಿಗೆ ಪದ್ಧತಿ ಸುಧಾರಣೆ – ಒಂದು ರಾಷ್ಟ್ರ , ಒಂದು ಮಾರುಕಟ್ಟೆ , ಒಂದು ತೆರಿಗೆ ಪದ್ಧತಿ ಎಂಬ ಪರಿಕಲ್ಪನೆ
GST Network dead ಇನ್ಫೋಸಿಸ್ – ಪ್ರಕಾಶ್ ಕುಮಾರ್
122 ನೇ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ -2014 ,
ಮಸೂದೆಗೆ ರಾಜ್ಯಸಭೆಯಲ್ಲಿ 2016 ರ ಆಗಸ್ಟ್ 3 ರಂದು ಅಂಗೀಕಾರ , ಲೋಕಸಭೆಯಲ್ಲಿ 2016 ರ ಆಗಸ್ಟ್ 8 ರಂದು ಅಂಗೀಕಾರ .
ಭಾರತದ ರಾಷ್ಟ್ರಪತಿಗಳು 2016 ಸೆಪ್ಟೆಂಬರ್ 8 ರಂದು ಸಹಿ ಹಾಕಿದರು .
ಇದು ಸಂವಿಧಾನದ 101 ನೇ ತಿದ್ದುಪಡಿಯಾಗಿದೆ . ಸೆಪ್ಟೆಂಬರ್ 16 , 2016 ರಂದು ಕೇಂದ್ರ ಸರ್ಕಾರವು ಜಿ.ಎಸ್.ಟಿ ಗೆ ಅಧಿಸೂಚನೆ ಹೊರಡಿಸಿದೆ . ಅಂದರೆ 2017 ಜುಲೈ 1 ರಿಂದ ಅನುಷ್ಠಾನಕ್ಕೆ ಬರುತ್ತಿದೆ .
ಜಿ.ಎಸ್.ಟಿ ಮಸೂದೆಗೆ ಸಂಬಂಧಿಸಿದಂತೆ ನೇಮಿಸಲಾದ ಆಯ್ಕೆ ಸಮಿತಿ ( Select Committee ) ಯನ್ನು 2015 ರ ಮೇ 12 ರಂದು ಭೂಪೇಂದ್ರ ಯಾದವ್ ಅವರ ಅಧ್ಯಕ್ಷತೆಯಲ್ಲಿ ನೇಮಿಸಲಾಯಿತು .
ಜಿಎಸ್ಟಿ ಮಸೂದೆಗೆ ಅನುಮೋದನೆ ನೀಡಿದ ಮೊದಲ ರಾಜ್ಯ ಅಸ್ಸಾಂ ( 2016 ರ ಆಗಸ್ಟ್ 12 ) ,
2 ನೇ ರಾಜ್ಯ ಬಿಹಾರ ( 2016 ರ ಆಗಸ್ಟ್ 16 ) , 3 ನೇ ರಾಜ್ಯ ಜಾರ್ಖಂಡ್ ( 2016 ರ ಆಗಸ್ಟ್ 17 ) .
ಒಟ್ಟು 23 ರಾಜ್ಯಗಳು ಜಿಎಸ್ಟಿ ಮಸೂದೆಗೆ ಅನುಮೋದನೆ ನೀಡಿದವು . ಅನುಮೋದಿಸಿದ 23 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವು ಸೇರಿಲ್ಲ .
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತೆರಿಗೆ ಪದ್ಧತಿ ಅನ್ವಯಿಸುವುದಿಲ್ಲ .
ಅರುಣ್ ಜೇಟ್ಲಿ – ಜಿಎಸ್ಟಿ ಮಂಡಳಿ ಅಧ್ಯಕ್ಷರು ,
2015-16 ಹಣಕಾಸು ಮೂಲ ವರ್ಷ – ( ಜಿಎಸ್ಟಿ ನಷ್ಟ ಪರಿಹಾರ ನೀಡಲು )
ಶೇ 5 , ಶೇ 12 , ಶೇ 18 , ಶೇ 28 – 4 ಹಂತಗಳಲ್ಲಿ ತೆರಿಗೆ ಪದ್ಧತಿ , ತೆರಿಗೆ ಪದ್ಧತಿಯನ್ನು 2017 ಮೇ 18 , 19 ರಂದು ಶ್ರೀನಗರದಲ್ಲಿ ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಜಿ.ಎಸ್.ಟಿ ಮಂಡಳಿಯ ಸಭೆಯಲ್ಲಿ ವಿವಿಧ ಸರಕುಗಳಿಗೆ ನಿರ್ಧರಿಸಲಾಗಿದೆ .
2017 ನೇ ಸಾಲಿನಲ್ಲಿ ಜಾರಿಗೆ ತಂದ ಪ್ರಮುಖ ಕಾರ್ಯಕ್ರಮಗಳು
ಪ್ರಧಾನ್ ಮಂತ್ರಿ ಕೌಶಲ್ ಬಿರಾಸ್ ಯೋಜನೆ :
2017 ರ ಜನವರಿ 8 : ವಿದೇಶದಲ್ಲಿ ಉದ್ಯೋಗ ಪಡೆಯುವಂತೆ ಭಾರತೀಯ ಯುವಕರನ್ನು ತರಬೇತಿ ಗೊಳಿಸುವುದು ,
ಸಾವಯವ ಕೃಷಿಗೆ ಉತ್ತೇಜನ :
ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ 2016-17ನೇ ಸಾಲಿನ ಬಜೆಟ್ನಲ್ಲಿ ಸರ್ಕಾರವು 412 ಕೋಟಿ ರೂಗಳ ಅನುದಾನವನ್ನು ಮೀಸಲಿಟ್ಟಿದೆ . ಮುಂದಿನ 3 ವರ್ಷಗಳಲ್ಲಿ 5 ಲಕ್ಷ ರೈತರನ್ನು ಸಾವಯವ ಕೃಷಿಗೆ ಒಳಪಡಿಸುವ ಗುರಿ ಹೊಂದಲಾಗಿದೆ .
ಭೀಮ್ ಆಪ್ ಬಿಡುಗಡೆ
2017 ಏಪ್ರಿಲ್ 14 ರಂದು ಜಾರಿ , ಆಧಾರ್ ಆಧಾರಿತ ಬಯೋಮೆಟ್ರಿಕ್ ಆಧಾರಿತ ವ್ಯವಸ್ಥೆಯಾಗಿದ್ದು , ಈ ಆ್ಯಪ್ ಬಳಕೆಗೆ ನಮ್ಮ ಹೆಬ್ಬೆಟ್ಟು ಪಾಸ್ವರ್ಡ್ ಆಗಿದೆ . ಇದನ್ನು 2016 ಡಿಸೆಂಬರ್ 30 ರಂದು ನವದೆಹಲಿಯ ಡಿಜಿಧನ್ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಪಣೆ ಮಾಡಿದರು . ಡಾ || ಬಿ.ಆರ್ . ಅಂಬೇಡ್ಕರ್ ಅವರ ಹೆಸರಿನಲ್ಲಿನ ಡಿಜಿಟಲ್ ಪೇಮೆಂಟ್ , ನಗದು ರಹಿತ ವಹಿವಾಟು ಉತ್ತೇಜನಕಾರಿಯಾಗಿದೆ . ಭಾರತ ರಾಷ್ಟ್ರೀಯ ಪಾವತಿ ನಿಗಮವು ಇದನ್ನು ಅಭಿವೃದ್ಧಿಪಡಿಸಿದೆ . ಜನರು ತಮ್ಮ ಬ್ಯಾಂಕ್ ಖಾತೆಗೆ ಜೋಡಿಸಲಾದ ಮೊಬೈಲ್ ಸಂಖ್ಯೆ ಮೂಲಕ ಹಣ ಪಾವತಿಸಲು & ಸ್ವೀಕರಿಸಲು ಸಾಧ್ಯವಾಗಿಸಿದೆ .
ಉಡಾನ್ ( UDAN – Ude Desh Ka Aam Naagrik ) ಯೋಜನೆ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಸಾಮಾನ್ಯರೂ ಕೂಡ ವಿಮಾನ ಪ್ರಯಾಣ ಮಾಡಲು ಸಹಕಾರಿಯಾದ ‘ ಉಡಾನ್ ‘ ( Udan ) ಯೋಜನೆಗೆ 2017 ರ ಏಪ್ರಿಲ್ 27 ಹಿಮಾಚಲ ಪ್ರದೇಶದ ಶಿಮ್ಹಾ ಬಳಿಯ ನೀಡಿದರು . ಜುಬ್ಬರಟ್ಟಿ ವಿಮಾನ ನಿಲ್ದಾಣದಲ್ಲಿ ಚಾಲನೆ
ಟಾಮ್ ಯೋಜನೆ : –
ಸರ್ಕಾರದ ಯೋಜನೆಗಳು ಸಮರ್ಥವಾಗಿ ತಲುಪಲು ಭಾರತ ಸರ್ಕಾರವು ಜನಧನ್ , ಆಧಾರ್ , ಮೊಬೈಲ್ ಎಂಬ ಕಾರ್ಯಕ್ರಮ ಜಾರಿಗೆ ತಂದಿದ್ದು , ಇದೊಂದು ತ್ರಿವಳಿ ಯೋಜನೆಯಾಗಿದೆ . ಭಾರತ ಸರ್ಕಾರದ ಸಬ್ಸಿಡಿಗಳನ್ನು ಪಡೆಯುವವರಿಗೆ ಜನಧನ ಖಾತೆಯನ್ನು , ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ಗೆ ಸಂಪರ್ಕ ನೀಡಲಾಗುತ್ತದೆ . ಈ ಯೋಜನೆಯು ಸಬ್ಸಿಡಿ ಹಣವು ಅಪವ್ಯಯವಾಗುವುದನ್ನು ತಡೆಯುತ್ತದೆ .
ಸಂಪದ ಯೋಜನೆಗೆ ನೆರವು :
ಕೇಂದ್ರ ಸರ್ಕಾರದ ‘ ಸಂಪದ ‘ ಎನ್ನುವ ನೂತನ ಆಹಾರ ಸಂಸ್ಕರಣೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು 2017 ರ ಮೇ 26 ರಂದು ಚಾಲನೆ ನೀಡಿದರು . ಸಂಪದ ಎಂಬುದು ಸಾಗರ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಕೃಷಿ ಸಂಸ್ಕರಣೆ ಅಭಿವೃದ್ಧಿ ಎಂಬುದರ ಇಂಗ್ಲಿಷ್ ರೂಪದ ಸಂಕ್ಷಿಪ್ತ ರೂಪವಾಗಿದೆ .
ಏಮ್ಸ್ಗೆ ಶಿಲಾನ್ಯಾಸ
ಅಸ್ಸಾಂನ ಗುಹಾಟಿಯ ಬಳಿಯ ಚಂಗ್ ಸಾರಿ ಬಳಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ( AIIMS – All India Institute of Medi cal Sciences ) ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು 2017 ರ ಮೇ 26 ರಂದು ಶಿಲಾನ್ಯಾಸ ನೆರವೇರಿಸಿದರು . 1123 ಕೋಟಿ ರೂ ವೆಚ್ಚದಲ್ಲಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯ ಭಾಗವಾಗಿ ಆರಂಭಿಸಲಾಗುತ್ತಿದೆ .
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಪ್ರಮುಖ ಕಾಯ್ದೆಗಳು & ವಿದ್ದುಪಡಿಗಳು
99 ನೇ ಸಂವಿಧಾನ ತಿದ್ದುಪಡಿಯನ್ನು ತಂದಿದ್ದು , ಅದರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿತ್ತು . ಆದರೆ ಭಾರತದ ಸುಪ್ರಿಂಕೋರ್ಟ್ 2015 ರ ಅಕ್ಟೋಬರ್ 16 ರಂದು ಇದಕ್ಕೆ ತಡೆ ನೀಡಿದೆ .
ಸಂವಿಧಾನಾತ್ಮಕ 100 ನೇ ತಿದ್ದುಪಡಿಯಾಗಿ 2015 ರಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಕೆಲವು ಪ್ರದೇಶಗಳ ವಿನಿಮಯ ಮಾಡಿಕೊಳ್ಳಲು ಅಂಗೀಕಾರ ನೀಡಿತು .
101 ನೇ ಸಂವಿಧಾನಾತ್ಮಕ ತಿದ್ದುಪಡಿಯಾಗಿ ದೇಶಾದ್ಯಂತ ಏಕರೂಪ ಪರೋಕ್ಷ ತೆರಿಗೆಯನ್ನು ಜಾರಿಗೊಳಿಸುವ ಸರಕು ಮತ್ತು ಸೇವಾ ತೆರಿಗೆ ( ಜಿಎಸ್ಟಿ ) ಯನ್ನು ಅಂಗೀಕರಿಸಿದ್ದು , 2017 ರ ಜುಲೈ 1 ರಿಂದ ಜಾರಿಗೆ ಬರಲಿದೆ . ಈ ತಿದ್ದುಪಡಿಯನ್ನು ಸಂವಿಧಾನದ 122 ನೇ ತಿದ್ದುಪಡಿ ಮಸೂದೆ – 2014 ನ್ನು ಸಂಸತ್ನಲ್ಲಿ ಮಂಡನೆ ಮಾಡಿ ಅಂಗೀಕರಿಸಿದೆ .
ಪ್ರಮುಖ ಮಸೂದೆಗಳು
ಕಂಪನಿಗಳ ತಿದ್ದುಪಡಿ ಮಸೂದೆ -2011
ಆರ್ಥಿಕ ಸುರಕ್ಷತೆ ಮತ್ತು ದಿವಾಳಿ ಸಂಹಿತೆ ಮಸೂದೆ -2015
ಬೇನಾಮಿ ವ್ಯವಹಾರ ತಡೆ ತಿದ್ದುಪಡಿ ಮಸೂದೆ – 2015
ಕೈಗಾರಿಕಾ ಅಭಿವೃದ್ಧಿ ಮತ್ತು ನಿಯಂತ್ರಣ ತಿದ್ದುಪಡಿ ಮಸೂದೆ – 2015
ಭೂಸ್ವಾಧೀನ ತಿದ್ದುಪಡಿ ಮಸೂದೆ – 2015
( 2013 ರ ಭೂ ಸ್ವಾಧೀನ ಕಾಯ್ದೆಗೆ ಎನ್ಡಿಎ ಸರ್ಕಾರ ಪ್ರಮುಖ 5 ತಿದ್ದುಪಡಿಗಳನ್ನು 2014 ರಲ್ಲಿ ಮಾಡಿತ್ತು . ರಾಜ್ಯಸಭೆಯಲ್ಲಿ ಒಮ್ಮತ ಇಲ್ಲದ ಕಾರಣ 3 ಬಾರಿ ಸುಗ್ರೀವಾಜ್ಞೆ ಮೂಲಕ ಇದನ್ನು ಜಾರಿ ಮಾಡಲಾಯಿತು . ಇದಕ್ಕೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು . ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ ಮಾರ್ಗಗಳನ್ನು ಬಳಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು . ಅಂತಿಮವಾಗಿ ಒತ್ತಡಕ್ಕೆ ಮಣಿದ ಸರ್ಕಾರ ತಾನು ಮಾಡಿದ ತಿದ್ದುಪಡಿಗಳನ್ನು ಕೈ ಬಿಡಲು ನಿರ್ಧರಿಸಿತ್ತು . )
ಆಘೋಷಿತ ವಿದೇಶೀ ಆದಾಯ & ಆಸ್ತಿಗಳ ( ತೆರಿಗೆ ಹೇರಿಕೆ ) ಮಸೂದೆ – 2015
ರಿಯಲ್ ಎಸ್ಟೇಟ್ ( ನಿಯಂತ್ರಣ ಮತ್ತು ಅಭಿವೃದ್ಧಿ ) ಮಸೂದೆ – 2016
ನೌಕರರ ಪರಿಹಾರ ( ತಿದ್ದುಪಡಿ ಮಸೂದೆ ) -2016 + ಆಧಾರ್ ಮಸೂದೆ – 2016
ಮೋಟಾರ್ ವಾಹನ ( ತಿದ್ದುಪಡಿ ಮಸೂದೆ ) -2016 + ಲೋಕಪಾಲ್ ಮತ್ತು ಲೋಕಾಯುಕ್ತ ( ತಿದ್ದುಪಡಿ ಮಸೂದೆ ) – 2016
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .