ಕುವೆಂಪು ( 1904-1994 ) ಕುವೆಂಪು,kuvempu,malegalalli madumagalu,kuvempu information in kannada,kuvempu in kannada,kuvempu quotes,kuvempu books

 

ಕುವೆಂಪು,kuvempu,malegalalli madumagalu,kuvempu information in kannada,kuvempu in kannada,kuvempu quotes,kuvempu books

 

 

 

ಇವರ ಪೂರ್ಣ ಹೆಸರು . ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಇವರ ಜನನ -29 / 12 / 1904 ರಲ್ಲಿ ಸ್ಥಳ ಶಿವಮೊಗ್ಗಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ .

ತಂದೆ – ವೆಂಕಟಪ್ಪ ಗೌಡ , ತಾಯಿ ಸೀತಮ್ಮ , ಹೆಂಡತಿ – ಹೇಮಾವತಿಯವರು ಮೈಸೂರಿನಲ್ಲಿ ಎಂ.ಎ ಪದವಿ ವ್ಯಾಸಂಗ ಮಾಡಿದರು . ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಅಧ್ಯಾಪಕರಾಗಿ ಹಾಗೂ ಕುಲಪತಿಗಳಾಗಿ ಕೊನೆಯ ವರ್ಷ ಮಾನಸ ಗಂಗೋತ್ರಿಯನ್ನು ಆರಂಭಿಸಿದರು .

1922 ರಲ್ಲಿ ತಮ್ಮ ಮೊದಲ ಇಂಗ್ಲೀಷ್ ಪದ್ಯಗಳ ಸಂಕಲನವನ್ನು , ಬಿಗನರ್ ನ್ಯೂಸ್ ಪ್ರಕಟಿಸಿದರು . ಆಗ ಇವರ ಮೊದಲ ಕಾವ್ಯನಾಮ ಕಿಶೋರ ಚಂದ್ರ ವಾಣಿ ಎಂದಿತ್ತು . ಮುಂದೆ ಐರಿಷ್ ಕವಿ ಜೇಮ್ಸ್ ಕಸಿನ್ಸ್ ಕುವೆಂಪುರವರ ಇಂಗ್ಲೀಷ್ ವ್ಯಾಮೋಹ ಬಿಡಿಸಿ ಇವರಿಗೆ ಕನ್ನಡದಲ್ಲಿ ಬರೆಯುವಂತೆ  ಪ್ರೇರೇಪಿಸಿದರು .

ಕವನ ಸಂಕಲನ

1924 ರಲ್ಲಿ ಅಮಲನ ಕಥೆ ಇವರ ಮೊದಲ ಕನ್ನಡ ಕೃತಿ , ಪ್ರೇಮ ಕಾಶ್ಮೀರ , ಜೇನಾಗುವೆ , ಚಂದ್ರ ಮಂಚಕ್ಕೆ ಬಾ ಚಕೋರಿ , ಅನಿಕೇತನ , ಕೊಳಲು , ಕಿಂಕಿಣಿ , ಕಲಾಸುಂದರಿ , ಷೋಡಶಿ , ಅಗ್ನಿ , ಹಂಸ , ಕೋಗಿಲೆ , ಸೋವಿಯತ್ ರಷ್ಯಾ , ನವಿಲು , ಪಕ್ಷಿಕಾಶಿ , ಕದರಡಕೆ , ಕನ್ನಡ ಕಾವ್ಯಾಂಜಲಿ , ಇತ್ಯಾದಿ .

ಬಿ.ಎ.ಓದುವಾಗಲೇ ಬೊಮ್ಮನಹಳ್ಳಿ ನಾಟಕಗಳು ಕಿಂದರಿ ಶೂದ್ರ ತಪಸ್ವಿ

ಮಹಾರಾತ್ರಿ

ವಾಲ್ಮೀಕಿ ಜೋಗಿ ಪ್ರಕಟವಾಗಿತು

ಬೆರಳ್‌ಗೆ ಕೊರಳ್

ಜಲಗಾರ

ರಕ್ತಾಕ್ಷಿ

ಯಮನ ಸೋಲು

ಭಾಗ್ಯ

ಸ್ಮಶಾನ ಕುರು ಕ್ಷೇತ್ರಂ

ಬಲಿದಾನ

ಚಂದ್ರಹಾಸ

ಬಿರುಗಾಳಿ

ಕಥಾಸಂಕಲನ / ಪ್ರಬಂಧ – ನನ್ನ ದೇವರು , ಸನ್ಯಾಸಿ ಮತ್ತು ಇತರೆ ಕಥೆಗಳು , ಮಲೆನಾಡಿನ ಚಿತ್ರಣಗಳು ,

ಮಹಾಕಾದಂಬರಿಗಳು – ಕಾನೂರು ಹೆಗ್ಗಡತಿ , ಹೂವಯ್ಯ ಎಂಬ ಪಾತ್ರದ ನಡುವೆ ಕಥೆ ಹೆಣೆದುಕೊಂಡಿದೆ . ಬದಲಾವಣೆಯನ್ನು ಬಯಸುವಂತವ ನಾಗಿದ್ದಾರೆ

ಪುರೋಹಿತ ಶಾಹಿ , ಜೀತದಾಳು , ವಸಾಹತು ಶಾಹಿ ಈ ಮೂರು ವ್ಯವಸ್ಥೆಯ ಪ್ರತಿಭಟನೆ ಜೊತೆಗೆ ಪ್ರಕೃತಿ ವರ್ಣನೆ ರಮ್ಯವಾಗಿ ಮೂಡಿದೆ ) ಹಾಗೂ ಮಲೆಗಳಲ್ಲಿ ಮದುಮಗಳು ( ಮಧ್ಯಮ ವರ್ಗದ ಸಂಬಂಧಿಸಿದ್ದಾಗಿದೆ . & ಮಲೆನಾಡಿನ ಬದುಕಿಗೆ ವಿಹಾರ , ನಿಸರ್ಗವನ್ನು ಚಿತ್ರಿಸಲಾಗಿದೆ .

ವಿಮರ್ಶೆ / ಕಾವ್ಯಮಿಮಾಂಸೆ

ಕಾವ್ಯ ತಪೋನಂದನ ವಿಭೂತಿ ಪೂಜೆ , ದೌಪದಿಯ ಶ್ರೀ ಮುಡಿ “ ರಸೋ ವೈ ಸಃ ಜೀವನ ಚರಿತ್ರೆಗಳು – ಶ್ರೀ ರಾಮಕೃಷ್ಣ ಪರಮಹಂಸ , ಸ್ವಾಮಿ ವಿವೇಕಾನಂದ ಇವು ಗದ್ಯ ಬರಹದ ವಿಶೇಷತೆಯನ್ನು ಕಾಣುತ್ತವೆ .

ಅನುವಾದ ಗ್ರಂಥಗಳು – ವೇದಾಂತ , ಜನಪ್ರಿಯ ವಾಲ್ಮೀಕಿ ರಾಮಾಯಣ , ಗುರುವಿನೊಡನೆ ದೇವರಡೆಗೆ ಮಹಾಕಾವ್ಯ – ಶ್ರೀ ರಾಮಾಯಣ ದರ್ಶನಂ , ಖಂಡ ಕಾವ್ಯ – ಚಿತ್ರಾಂಗದ ( ಹೊಸ ಛಂದಸ್ಸು ಬಳಕೆ ) – ಆತ್ಮಕಥೆ – ನೆನಪಿನ ದೋಣಿಯಲ್ಲಿ ಇತರೆ – ಶಿಶು ಸಾಹಿತ್ಯ , ನನ್ನಮನೆ , ಮೋಡಣ್ಣನ ತಮ್ಮ , ಮರಿ ವಿಜ್ಞಾನಿ , ಮೇಘಾಪುರ , ನರಿಗಳಿಗೇಕೆ ಕೋಡಿಲ್ಲ .

kuvempu information in kannada

 ಬಿರುದು / ಪ್ರಶಸ್ತಿಗಳು-

2 ನೇ ರಾಷ್ಟ್ರಕವಿ  1964 ರಲ್ಲಿ , ಜ್ಞಾನಪೀಠ ಪ್ರಶಸ್ತಿ : 1967 , ಶ್ರೀ ರಾಮಾಯಣ ದರ್ಶನಂ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1955 ರಲ್ಲಿ ಮೊಟ್ಟ ಮೊದಲ ಪಂಪ ಪ್ರಶಸ್ತಿಯನ್ನು 1987 , 1958 ಪದ್ಮಭೂಷಣ , ಕರ್ನಾಟಕ ರತ್ನ ( 1992 ) , 1957 ರಲ್ಲಿ ಧಾರವಾಡದಲ್ಲಿ 37 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ರಸ ಋಷಿ ಎಂದು ಕರೆಯುತ್ತಿದ್ದರು .

2004 ರಲ್ಲಿ ಕುವೆಂಪು ನೆನಪಿಗಾಗಿ ಜನ್ಮ ಶತಮಾನೋತ್ಸವ ಕುವೆಂಪು ಭಾಷಾ ಭಾರತಿ ಎಂಬ ಸಂಸ್ಥೆಯನ್ನು ಕರ್ನಾಟಕ ಸ್ಥಾಪಿಸಿದೆ