
ಪರಿವಿಡಿ
ಸಂಧಿಗಳು
samskrutha sandhi in kannada, kannada sandhi, sandhi, kannada grammar sandhigalu, ಕನ್ನಡ ಸಂಧಿಗಳುr,lopa sandhi in kannada
ಆ ) ಮಳೆಗಾಲದ ದಿನಗಳಲ್ಲಿ ಮನೆಯಲ್ಲಿ ಸೊಳ್ಳೆಗಳಿಲ್ಲದಂತೆ ಎಚ್ಚರವಹಿಸಬೇಕು .
ಆ ) ಹೊಸಗನ್ನಡ ವ್ಯಾಕರಣವನ್ನು ಕಲಿಯದಿರುವುದು ಒಳ್ಳೆಯದಲ್ಲ .
ಮೇಲಿನ ವಾಕ್ಯಗಳನ್ನು ಹೀಗೆ ಬಿಡಿಸಿ ಬರೆಯಬಹುದು :
ಆ ) ಮಳೆಕಾಲದ ದಿನಗಳು ಅಲ್ಲಿ ಮನೆ ಅಲ್ಲಿ ಸೊಳ್ಳೆಗಳು ಇಲ್ಲದಂತೆ ಎಚ್ಚರವಹಿಸಬೇಕು .
ಆ ) ಹೊಸಕನ್ನಡ ವ್ಯಾಕರಣ ಅನ್ನು ಕಲಿಯದೆ ಇರುವುದು ಒಳ್ಳೆಯದು ಅಲ್ಲ .
ಮಳೆ + ಕಾಲ = ಮಳೆಗಾಲ , ದಿನಗಳು + ಅಲ್ಲಿ = ದಿನಗಳಲ್ಲಿ , ಮನೆ + ಅಲ್ಲಿ = ಮನೆಯಲ್ಲಿ ಸೊಳ್ಳೆಗಳು + ಇಲ್ಲದಂತೆ = ಸೊಳ್ಳೆಗಳಿಲ್ಲದಂತೆ ,
ಹೊಸ + ಕನ್ನಡ = ಹೊಸಗನ್ನಡ , ವ್ಯಾಕರಣ + ಅನ್ನು = ವ್ಯಾಕರಣವನ್ನು ಕಲಿಯದೆ + ಇರುವುದು = ಕಲಿಯದಿರು ವುದು , ಒಳ್ಳೆಯದು + ಅಲ್ಲ = ಒಳ್ಳೆಯದಲ್ಲ .
ನಾವು ಮಾತನಾಡುವಾಗ ಬರೆಯುವಾಗ ನಮ್ಮ ಅಭಿಪ್ರಾಯಗಳನ್ನು ವಾಕ್ಯಗಳ ಮೂಲಕ ತಿಳಿಸುತ್ತೇವೆ . ಆಗ ಪದಗಳನ್ನು ಬಿಡಿಸಿ ಹೇಳದೆ , ಕೂಡಿಸಿ ಹೇಳುವುದೇ ರೂಢಿ . ಇದರಿಂದ ಶ್ರಮ , ಕಾಲ ಮತ್ತು ಸ್ಥಳಗಳ ಉಳಿತಾಯವಾಗುತ್ತದೆ . ಕೇಳಲು , ಓದಲು ಸುಲಭವಾಗುತ್ತದೆ .
ಮಳೆ ಮತ್ತು ಕಾಲ ಕೂಡಿ ಮಳೆಗಾಲವಾಗಿದೆ . ಹೊಸ ಮತ್ತು ಕನ್ನಡ ಸೇರಿ ಹೊಸಗನ್ನಡವಾಗಿದೆ . ಈ ಉದಾಹರಣೆಗಳಲ್ಲಿ ‘ ಕ ‘ ಕಾರದ ಬದಲಾಗಿ ‘ ಗ ‘ ಕಾರ ಬಂದಿರುವುದನ್ನು ಕಾಣುತ್ತೇವೆ . ಹಾಗೆಯೇ
ದಿನಗಳು + ಅಲ್ಲಿ = ದಿನಗಳಲ್ಲಿ :
(ಉ+ಅ)
ಕಲಿಯದೆ + ಇರುವುದು = ಕಲಿಯದಿರುವುದು ;
( ಎ + ಇ )
ಸೊಳ್ಳೆಗಳು + ಇಲ್ಲದಂತೆ = ಸೊಳ್ಳೆಗಳಿಲ್ಲದಂತೆ ;
(ಉ+ಇ)
ಒಳ್ಳೆಯದು + ಅಲ್ಲ = ಒಳ್ಳೆಯದಲ್ಲ .
(ಉ+ಅ)
ಎನ್ನುವ ಉದಾಹರಣೆಗಳಲ್ಲಿ ಸ್ವರಕ್ಕೆ ಸ್ವರ ಸೇರಿದಾಗ ಮೊದಲ ಸ್ವರ ಕಾಣದೆ ಹೋಗಿದೆ .
ಮನೆ + ಅಲ್ಲಿ = ಮನೆಯಲ್ಲಿ ,
( ಎ + ಅ )
ಯ
ಎನ್ನುವಲ್ಲಿ ಸ್ವರಕ್ಕೆ ಸ್ವರ ಕೂಡಿದಾಗ ನಡುವೆ ಹೊಸ ಅಕ್ಷರವೊಂದು ಬಂದಿದೆ . ‘ ಸಂಧಿ ‘ ಎಂದರೆ ಕೂಡುವಿಕೆ ಅಥವಾ ಸೇರುವಿಕೆ .
ಸಂಧಿಗಳಲ್ಲಿ ಸ್ವರಸಂಧಿ , ವ್ಯಂಜನಸಂಧಿಗಳೆಂದು ಎರಡು ವಿಧಗಳಿವೆ .
ಸ್ವರದ ಮುಂದೆ ಸ್ವರ ಬ ೦ ದು ಸಂಧಿಯಾದರೆ ಅದು ಸ್ವರಸಂಧಿ,
ಸ್ವರದ ಮುಂದೆ ವೃ ೦ ಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿ ,
ಸಂಧಿಯಾದಾಗ ಅಥವಾ ಕೂಡಿಸಿದಾಗ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವ ವ್ಯತ್ಯಾಸವನ್ನು ಸಂಧಿಕಾರ್ಯವೆನ್ನುತ್ತಾರೆ .
ಸಂಧಿಕಾರ್ಯಗಳಲ್ಲಿ ಮೂರು ವಿಧ .
೧ . ಲೋಪ : ಒಂದು ಅಕ್ಷರ ಕಾಣದಾಗುವುದು .
೨ . ಆಗಮ : ಹೊಸದಾಗಿ ಒಂದು ಅಕ್ಷರ ಬರುವುದು .
೩. ಆದೇಶ : ಒಂದು ಅಕ್ಷರಕ್ಕೆ ಪ್ರತಿಯಾಗಿ ಇನ್ನೊಂದು ಅಕ್ಷರ ಬರುವುದು .
ಸಂಧಿಯಾದಾಗ ಈ ಮೂರು ಬಗೆಯ ಸಂಧಿಕಾರ್ಯಗಳಲ್ಲಿ ಯಾವುದಾದರೂ ಒಂದು ನಡೆಯುತ್ತದೆ .
ಕನ್ನಡ ಸಂಧಿಗಳು
ಕನ್ನಡ ಭಾಷೆಯ ಪದ – ಪ್ರತ್ಯಯಗಳು ಅಥವಾ ಪದ – ಪದಗಳು ಸೇರಿದಾಗ ಆಗುವ ಸಂಧಿಗಳನ್ನು ಕನ್ನಡ ಸಂಧಿಗಳೆಂದು ಲೋಪವಾದರೆ ಕರೆಯಲಾಗಿದೆ . ಲೋಪಸಂಧಿ ಆಗಮಿಸಂಧಿ , ಆದೇಶಸಂಧಿ ಮತ್ತು ಪ್ರಕೃತಿಭಾವ – ಇವನ್ನು ಕನ್ನಡ ಸಂಧಿಗಳು ಎನ್ನುತ್ತಾರೆ .
ಲೋಪಸಂಧಿ :
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು , ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು . ಅದಕ್ಕೆ ಲೋಪಸಂಧಿಯೆಂದು ಹೆಸರು
. ಉದಾ : ಸೊಳ್ಳೆಗಳು + ಇಲ್ಲದಂತೆ = ಸೊಳ್ಳೆಗಳಿಲ್ಲದಂತೆ
ಉ+ಇ( ಳ ಕಾರದ ಮೇಲಿರುವ ಉಕಾರ ಲೋಪ )
ಕಲಿಯದೆ + ಇರುವುದು = ಕಲಿಯದಿರುವುದು
ಎ + ಇ ( ದ ಕಾರದ ಮೇಲಿರುವ ಎಕಾರ ಲೋಪ )
ಒಳ್ಳೆಯದು + ಅಲ್ಲ = ಒಳ್ಳೆಯದಲ್ಲ
ಉ+ಅ ( ದ ಕಾರದ ಮೇಲಿರುವ ಉಕಾರ ಲೋಪ )
ಊರು + ಊರು = ಊರೂರು
ಉ+ಊ (ರ ಮೇಲಿರುವ ಉಕಾರ ಲೋಪ)
ದೇವರು + ಇಂದ = ದೇವರಿಂದ
ಉ+ಇ (ರ ಮೇಲಿರುವ ಉಕಾರ ಲೋಪ)
ಅವನ + ಅಂತೆ = ಅವನಂತೆ
ಅ+ಅ( ನ ಕಾರದ ಮೇಲಿರುವ ಅಕಾರ ಲೋಪ )
ನಿಯಮ :
ಸ್ವರದ ಮುಂದೆ ಸ್ವರ ಬಂದು ಸಂಧಿ ಮಾಡಿದಾಗ ಅರ್ಥ ಕೆಡದಂತಿದ್ದರೆ ಹಿಂದಿನ ಸ್ವರ ( ಪೂರ್ವದ ಲೋಪವಾಗುತ್ತದೆ ( ‘ ಲೋಪ’ವೆಂದರೆ ಇಲ್ಲದಂತಾಗುವುದು ) .
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
ಇತರೆ ವಿಷಯಗಳುಲಿಂಕ್ :