ಲಿಂಗಗಳು

ಕನ್ನಡ ಲಿಂಗಗಳು,kannada lingagalu,lingagalu in kannada,lingagalu in kannada examples,lingagalu,kannada grammar lingagalu

ಕನ್ನಡ ಲಿಂಗಗಳು,kannada lingagalu,lingagalu in kannada,lingagalu in kannada examples,lingagalu,kannada grammar lingagalu

ಜ್ಞಾನ ಅಥವಾ ಅಜ್ಞಾನದ ಕುರುಹಿನ ನಾಮ ಪ್ರಕೃತಿಯನ್ನು ‘ ಲಿಂಗ ‘ ಎನ್ನುವರು . ಇದು ಗಂಡಸು , ಹೆಂಗಸರನ್ನು ಸೂಚಿಸುವ ಶಬ್ದಗಳಾಗಿವೆ . ಕನ್ನಡದಲ್ಲಿ ಪುಲ್ಲಿಂಗ , ಸ್ತ್ರೀಲಿಂಗ , ಮತ್ತು ನಪುಂಸಕ ಲಿಂಗಗಳೆಂದು ಮೂರು ವಿಧಗಳಿವೆ .

 1 ಪುಲ್ಲಿಂಗ:

ಪುರುಷರನ್ನು ಸೂಚಿಸುವ ನಾಮಪದಗಳಿಗೆ ಮಾತ್ರ ‘ ಪುಲ್ಲಿಂಗ ‘ ಶಬ್ದಗಳು ಎಂದು ಹೆಸರು . ಉದಾ : ರಮೇಶ , ಮಂಜು , ಜಗದೀಶ

, ಮಾವ , ಹುಡುಗ , ಇತ್ಯಾದಿ .

2.ಸ್ತ್ರೀಲಿಂಗ :

ಸ್ತ್ರೀಯರನ್ನು ಸೂಚಿಸುವ ನಾಮಪದಗಳು ಮಾತ್ರ ‘ ಸ್ತ್ರೀಲಿಂಗ ‘ ಶಬ್ದಗಳು ಎಂದು ಹೆಸರು . ಉದಾ : ರುಕ್ಕಿಣಿ , ಭವಾನಿ , ಯಲ್ಲಮ್ಮ , ಹುಡುಗಿ , ಸಿಸಿಲಿಯಾ ,

  1. ನಪುಂಸಕಲಿಂಗ :

ಪ್ರಾಣಿವರ್ಗ ಹಾಗೂ ನಿರ್ಜಿವ ವಸ್ತುಗಳನ್ನು ಸೂಚಿಸುವ ನಾಮಪದಗಳು ‘ ನಪುಂಸಕಲಿಂಗ ‘ ಶಬ್ದಗಳು ಎಂದು ಹೆಸರು .

ಸೂಚನೆ : ಪ್ರಾಣಿ ವರ್ಗದಲ್ಲಿ ಗಂಡು – ಹೆಣ್ಣುಗಳಿದ್ದರೂ ಅವು ಬೌದ್ಧಿಕ ಸ್ತರದಲ್ಲಿ ಮನುಷ್ಯನಂತೆ ಜ್ಞಾನದ ಅರಿವು ಮಾಡಿಕೊಳ್ಳಲಾರವು . ಕಾರಣ ಕನ್ನಡದಲ್ಲಿ ಅವನ್ನು ‘ ನಪುಂಸಕಲಿಂಗ ‘ ಗಳೆಂದೇ ತಿಳಿಯುತ್ತಾರೆ . ಉದಾ : ಆಕಳು , ಎಮ್ಮೆ , ಎತ್ತು , ಆಡು , ಕುರಿ , ಟಗರು , ಹೊಲಮನೆ , ಪುಸ್ತಕ , ನಕ್ಷತ್ರ , ಕಾಡು , ಇತ್ಯಾದಿಗಳು ಸೂಚನೆ : ಇವುಗಳಲ್ಲದೆ ಲಿಂಗಗಳಲ್ಲಿ ಇನ್ನೂ ಕೆಲವು ವಿಧಗಳಿವೆ .

. ದ್ವಿಲಿಂಗ ಪದಗಳು : • ಈ ಪದಗಳು ಎರಡೆರಡು ಲಿಂಗಗಳಲ್ಲಿ ನಡೆಯುವ ಶಬ್ದಗಳು . ಇವನ್ನು ‘ ವಾಚ್ಯಲಿಂಗ ‘ ಅಥವಾ ‘ ಉಭಯ ಲಿಂಗ ‘ ಎಂದೂ ಕರೆಯುವರು .

  1. ಪುಸ್ತ್ರೀಅಂಗ ಶಬ್ದಗಳು : • ಇವು ಮಲ್ಲಿಂಗ , ಸ್ತ್ರೀಲಿಂಗ ಎರಡೂ ಲಿಂಗಗಳ ಅರ್ಥಕೊಡು ವಂತಹ ಶಬ್ದಗಳಾಗಿವೆ ಉದಾ : ಅವರು , ಇವರು , ಯಾರು , ಎಲ್ಲರೂ , ನೋಡಿದವರು ಹೋದವರು ಇತ್ಯಾದಿ .
  2. ಮುನ್ನಪುಂಸಕಲಿಂಗ ಶಬ್ದಗಳು : ಈ ಶಬ್ದಗಳು ಪುಲ್ಲಿಂಗ , ನಪುಂಸಕಲಿಂಗ ಎರಡೂ ಲಿಂಗಗಳ ಅರ್ಥಕೊಡುವ ಶಬ್ದಗಳು ಉದಾ : ಆಳು , ಮಾರುತ , ವರ , ಜನ , ಸೂರ್ಯ , ಮಂಗಳ , ವಸಂತ – ಗ್ರೀಷ್ಮ , ಇತ್ಯಾದಿಗಳು
  3. ಸ್ತ್ರೀನಪುಂಸಕಲಿಂಗ ಶಬ್ದಗಳು : ತಿಗಳ ಸ್ತ್ರೀಲಿಂಗ – ನಪುಂಸಕಲಿಂಗ ಎರಡೂ ಲಿಂಗಗಳ ಅರ್ಥ ಕೊಡುವ ಶಬ್ದಗಳು ಉದಾ : ತೊತ್ತು , ಸರಸ್ವತಿ , ನರ್ಮದೆ , ಗಂಗೆ
  4. ನಿತ್ಯನಪುಂಸಕ ಅಂಗ ಶಬ್ದಗಳು : ಯಾವಾಗಲೂ ನಪುಂಸಕಲಿಂಗ ಅರ್ಥವನ್ನೇ ಕೊಡುವ ಶಬ್ದಗಳಾಗಿವೆ . ಉದಾ : ಕೂಸು , ಮಗು , ಶಿಶು , ದಂಡು , ಗುಂಪು ಜನ ಮು ೦ ತಾದವುಗಳು .

  . ತ್ರಿಅಂಗಗಳು : ಇವು ಮೂರು ಲಿಂಗಗಳಲ್ಲಿ ನಡೆಯುವ ಶಬ್ದಗಳು . ಈ ಶಬ್ದಗಳು ಸರ್ವನಾಮ , ಪರಿಮಾಣವಾಚಕ , ಸಂಖ್ಯಾವಾಚಕ ಮುಂತಾದ ಶಬ್ದಗಳಿಗೆ ವಿಶೇಷಣಗಳಾಗುವುದರಿಂದ ಇವನ್ನು ‘ ವಿಶೇಷ್ಯಾದೀನಲಿಂಗ ‘ ಗಳೆಂದೂ ಕರೆಯುವರು . ಉದಾ : ನಾನು – ನಾವು , ಬಿಳಿಯ , ಕರಿಯ , ಒಂದು , ಒಬ್ಬನು ಒಬ್ಬಳು , ಇತ್ಯಾದಿಗಳು .ಕನ್ನಡ ಕವಿಗಳು

ವಚನಗಳು

ವಸ್ತು, ಪ್ರಾಣಿ ಅಥವಾ ವ್ಯಕ್ತಿಗಳ ಸಂಖ್ಯೆಯ ತಿಳಿಸುವ ಶಬ್ದಗಳನ್ನು ‘ ವಚನ ‘ ಎಂದು ಕರೆಯುತ್ತೇವೆ . ಇದು ಸಂಖ್ಯೆಯನ್ನು ಬೋಧಿಸುವ ಪ್ರತ್ಯಯವಾಗಿದೆ . ವಚನಗಳಲ್ಲಿ ಎರಡು ಪ್ರಕಾರಗಳು

  1. ಏಕವಚನ :
  2. ಒಬ್ಬ ವ್ಯಕ್ತಿ , ಒಂದು ವಸ್ತು , ಅಥವಾ ಒಂದು ಸ್ಥಳವನ್ನು ಸೂಚಿಸುವುದಕ್ಕೆ ‘ ಏಕವಚನ ‘ ಎನ್ನುವರು . ಇದು ಏಕತ್ವವನ್ನು ಸೂಚಿಸುತ್ತದೆ . ಉದಾ : { ರಾಣಿ , ಗೆಳತಿ , ಮರ , ಹಣ್ಣು , ಹುಡುಗ ಇತ್ಯಾದಿಗಳು )

  2.ಬಹುವಚನ :

ಒಂದಕ್ಕಿಂತ ಹೆಚ್ಚು ವಸ್ತು , ಸ್ಥಳ ಅಥವಾ ವ್ಯಕ್ತಿಗಳನ್ನು ಸೂಚಿಸುವುದಕ್ಕೆ ‘ ಬಹುವಚನ ‘ ಎನ್ನುವರು . ಇದು ಬಹುತ್ವವನ್ನು ಸೂಚಿಸುತ್ತದೆ . ಉದಾ : ರಾಣಿಯರು , ಗೆಳತಿಯರು , ಮರಗಳು , ಮಕ್ಕಳು , ಇತ್ಯಾದಿಗಳು

 


0 Comments

Leave a Reply

Avatar placeholder

Your email address will not be published. Required fields are marked *