ಅಂತರರಾಷ್ಟ್ರೀಯ ಮಹಿಳಾ ದಿನ
international women’s day , women’s day, women’s day 2021, happy women’s day, international women’s day 2021, happy women’s day 2021
ಪ್ರತಿ ವರ್ಷ ಮಾರ್ಚ್ -8 ರಂದು ವಿಶ್ವದಾದ್ಯಂತ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾರೆ . ಹಾಗೆಯೇ 2021 ರ ಮಾರ್ಚ್ 8 ರಂದು ಈ ” Women In Leader ship : Achieving and equal future in a COVID – 19 World ” ಎಂಬ ಧೈಯವಾಕ್ಯದೊಂದಿಗೆ ಆಚರಿಸಲಾಯಿತು .
ಭಾರತದಲ್ಲಿ 2021 ರ ಮಾರ್ಚ್ 8 ರಂದು ಈ ದಿನವನ್ನು “ Choose to Challenge ” ಎಂಬ ಧೈಯವಾಕ್ಯದೊಂದಿಗೆ ಆಚರಿಸಲಾಯಿತು .
ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನಲೆ
1909 ರ ಫೆಬ್ರವರಿ 28 ರಂದು ಅಮೆರಿಕಾದ ಸಮಾಜವಾದಿ ಪಕ್ಷವು ನ್ಯೂಯಾರ್ಕ್ನಲ್ಲಿ ಮಹಿಳಾ ದಿನವನ್ನು ಆಯೋಜಿಸಿತ್ತು .
1910 ರಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ಪ್ರತಿವರ್ಷ ಮಾರ್ಚ್ 8 ರಂದು ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು .
1917 ರ ಮಾರ್ಚ್ 8 ರಂದು ಸೋವಿಯತ್ ರಷ್ಯಾದ ಪೆಟ್ರೋಗ್ರಾಡ್ನಲ್ಲಿ ರಾಷ್ಟ್ರೀಯ ರಜಾ ದಿನವನ್ನು ಘೋಷಣೆ ಮಾಡಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗಿದೆ .
ಅಂತರರಾಷ್ಟ್ರೀಯ ಮಹಿಳಾ ವರ್ಷ
International Year of Women’s -1975 1975 ರ ಜೂನ್ 19 ರಿಂದ ಜುಲೈ 2 ರವರೆಗೆ ಮೆಕ್ಸಿಕೋದಲ್ಲಿ ಮೊದಲ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ವಿಶ್ವಸಂಸ್ಥೆಯು ಆಯೋಜಿಸಿದ್ದು ,
ಈ ಹಿನ್ನಲೆಯಲ್ಲಿ 1975 ನ್ನು ಅಂತರರಾಷ್ಟ್ರೀಯ ಮಹಿಳಾ ವರ್ಷವನ್ನಾಗಿ ಘೋಷಣೆ ಮಾಡಿತು . 1976 ರಿಂದ 1985 ರವರೆಗಿನ ಅವಧಿಯನ್ನು ಅಂತರರಾಷ್ಟ್ರೀಯ ಮಹಿಳಾ ದಶಕ ಎಂದು ಗುರುತಿಸಲಾಗಿತ್ತು ,
ಭಾರತದಲ್ಲಿ 2001 ಅನ್ನು ರಾಷ್ಟ್ರೀಯ ಮಹಿಳಾ ಸಬಲೀಕರಣ ವರ್ಷ ಎಂದು ಘೋಷಣೆ ಮಾಡಲಾಗಿತ್ತು .
ಫೆಬ್ರವರಿ 13 – National Women’s Day ರಾಷ್ಟ್ರೀಯ ಮಹಿಳಾ ದಿನ
ಭಾರತದಲ್ಲಿ ಪ್ರತಿವರ್ಷ ಫೆಬ್ರುವರಿ -13 ರಂದು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ . ಅಂದು ಭಾರತದ ಪ್ರಥಮ ಮಹಿಳಾ ರಾಜ್ಯಪಾಲೆ “ ಸರೋಜಿನಿ ನಾಯ್ಡು ” ಅವರ ಜನ್ಮದಿನವಾಗಿದೆ .
ಇವರು 1879 ಫೆಬ್ರವರಿ 13 ರಂದು ಹೈದರಾಬಾದ್ನಲ್ಲಿ ಜನಿಸಿದರು . ಅವರು ಭಾರತದಲ್ಲಿ ಮಹಿಳೆಯರ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಪರಿಗಣಿಸಿ ಅವರ ಜನ್ಮದಿನವನ್ನು ರಾಷ್ಟ್ರೀಯ ಮಹಿಳಾದಿನವನ್ನಾಗಿ ಆಚರಿಸಲಾಗುತ್ತದೆ .
ಭಾರತೀಯ ಮಹಿಳಾ ಸಂಘ ಮತ್ತು ಅಖಿಲ ಭಾರತೀಯ ಮಹಿಳಾ ಸಮ್ಮೇಳನ ಮೊಟ್ಟ ಮೊದಲ ಬಾರಿಗೆ “ ರಾಷ್ಟ್ರೀಯ ಮಹಿಳಾ ದಿನ ” ಆಚರಣೆ ಮಾಡಿವೆ .
ಸರೋಜಿನಿ ನಾಯ್ಡು
“ ಭಾರತದ ಕೋಗಿಲೆ ಭಾರತದ “ ನೈಟಿಂಗೇಲ್ ” , ಎನ್ನುವ ಹೆಸರಿನಿಂದ ಪ್ರಸಿದ್ಧರಾಗಿದ್ದ ಇವರು ಚಿಕ್ಕಂದಿನಿಂದಲೇ ಕವಯಿತ್ರಿ ಹಾಗೂ 1925 ರಲ್ಲಿ ಕಾನ್ಸುರದಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ನ 44 ನೇ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಭಾರತದ ಮೊಟ್ಟ ಮೊದಲ ಮಹಿಳೆ .
1917 ರಲ್ಲಿ ಅನಿಬೆಸೆಂಟ್ ಅವರು ಕಾಂಗ್ರೆಸ್ನ ಕೋಲ್ಕತ್ತಾ ಅಧಿವೇಶನದ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ಮತ್ತು ಉತ್ತರ ಪ್ರದೇಶದ ಮೊದಲನೆಯ ಮಹಿಳಾ ರಾಜ್ಯಪಾಲರಾ ( 1948-1949 ) ಗಿದ್ದರು . ಇವರ ಪ್ರಮುಖ ಕವಿತೆಗಳು –
1 ) ದಿ ಗೋಲ್ಡನ್ ತ್ರಿಗೋಲ್ಡ್ .
2 ) ದಿ ಬರ್ಡ್ ಆಫ್ ಟೈಮ್ ,
3 ) ದಿ ಬೋಕನ್ ಎಂಗ್ ,
4 ) ದಿ ಫೆದರ್ ಆಫ್ ಡಾನ್ , ಇಂಡಿಯನ್ ವೀವರ್ ,
ಭಾರತದ 10 ಹೆಮ್ಮೆಯ ನಾರಿಯರು
ಫೈಲಟ್ ಭಾವನಾ ಕಾಂತ್
ಬಿಹಾರ ಮೂಲದ ಭಾವನಾ ಕಾಂತ್ ಭಾರತದಲ್ಲಿ ಫೈಟರ್ ಜೆಟ್ ವಿಮಾನ ಹಾರಿಸಲು ಅರ್ಹತೆ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ .
ತಾನ ಶೇರ್ಗಿಲ್
2020 ರ ಗಣರಾಜ್ಯೋತ್ಸವದಲ್ಲಿ ಪುರುಷರ ತಂಡದ ಪಥಸಂಚಲನವನ್ನು ಮುನ್ನಡೆಸುವ ಮೂಲಕ ಪರೇಡ್ನಲ್ಲಿ ಮುರುಷರ ತಂಡದ ಪಥಸಂಚಲನವನ್ನು ಮುನ್ನಡೆಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ತಾನ್ಯಾ ಶೇರ್ಗಿಲ್ ಪಾತ್ರರಾಗಿದ್ದಾರೆ .
ಅವನಿ ಚತುರ್ವೇದಿ
ಭಾವನಾ ಕಾಂತ್ ಅವರತೆಯೇ ಹಗಲಿನ ಅವಧಿಯಲ್ಲಿ ಏಕಾಂಗಿಯಾಗಿ ಯುದ್ಧ ವಿಮಾನ ಹಾರಾಟ ನಡೆಸಿದ ಮಹಿಳಾ ಶೈಲಟ್ಗಳಲ್ಲಿ ಅವನಿ ಚತುರ್ವೇದಿ ಸಹ ಒಬ್ಬರು .
ಶಿಲ್ಪಾ ಹೆಗ್ಡೆ
ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದ ಶಿಲ್ಪಾ ಹೆಗ್ಡೆ ಆಸ್ಟ್ರೇಲಿಯಾದ ಆಡಳಿತಾರೂಢ ಲಿಬರಲ್ ಪಕ್ಷದ ಕಾರಕಾರಿ ಸದಸ್ಯರಾಗಿ ನೇಮಕವಾಗಿದ್ದಾರೆ .
ಗೀತಾ ಗೋಪಿನಾಥ್
ಗೀತಾ ಗೋಪಿನಾಥ್ ಭಾರತೀಯ – ಅಮೆರಿಕನ್ ಅರ್ಥಶಾಸ್ತ್ರಜ್ಞೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ( ಐಎಂಎಫ್ ) 2018 ರಲ್ಲಿ ಡಾ.ಗೀತಾ ಅವರನ್ನು ತನ್ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಜೆಯಾಗಿ ನೇಮಿಸಿತು .
ಕಮಲಾ ಹ್ಯಾರಿಸ್
ಚೆನ್ನೈ ಮೂಲದ ಕಮಲಾ ಹ್ಯಾರಿಸ್ ವಿಶ್ವದ ದೊಡ್ಡಣ್ಣ ಎಂದೇ ಕರೆಯುವ ಅಮೆರಿಕದ 49 ನೇ ಉಪಾಧ್ಯಕ್ಷೆ ಹುದ್ದೆಗೇರುವ ಮೂಲಕ ಭಾರತದ ಘನತೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದಾರೆ .
ಕಿರಣ್ ಮಜುಂದಾರ್ ಶಾ
ಕಿರಣ್ ಮದಾರ ಾ ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಮಜುಂದಾರ್ ಅವರ ‘ ಬಯೋಕಾನ್ ‘ ಸಂಸ್ಥೆ ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದಿದೆ .
ಸ್ವಾತಿ ಮೋಹನ್
ಮಂಗಳ ಗ್ರಹದಲ್ಲಿ ಜೀವಿಗಳು ವಾಸಿಸುತ್ತಿದ್ದವೇ ಎಂಬುದನ್ನು ಪತ್ತೆಹಚ್ಚಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಕಳುಹಿಸಿದ್ದ ‘ ಪರ್ಸೀವರೆನ್ಸ್ ‘ ರೋವರ್ ಅನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದ್ದು ಕನ್ನಡತಿ ಡಾ ಸ್ವಾತಿ ಮೋಹನ್ .
ಅರುಣಿಮಾ ಸಿನ್ಹಾ
ಅರುಣಿಮಾ ಸಿನ್ಹಾ ಉತ್ತರ ಪ್ರದೇಶದ ಮೂಲದ ಪರ್ವತಾ ರೋಹಿ ಮತ್ತು ಕ್ರೀಡಾಪಟು , ಮೌಂಟ್ ಎವರೆಸ್ಟ್ , ಮೌಂಟ್ ಕಿಲಿಮಂಜಾರೊ , ಮೌಂಟ್ ಎಲ್ಸಸ್ , ಮೌಂಟ್ ಕೊಸ್ಸಿಯುಸ್ಕೊ , ಮೌಂಟ್ ಅಕೊನ್ಯಾಗುವಾ , ಕಾರ್ಸ್ಟೆನ್ಸ್ ಪಿರಮಿಡ್ ಮತ್ತು ಮೌಂಟ್ ವಿನ್ಸನ್ ಏರಿದ ಮೊದಲ ಪರ್ವತಾರೋಹಿ .
ಹಿಮಾದಾಸ್
ಅಸ್ಸಾಂ ರಾಜ್ಯದ ಹಿಮದಾಸ್ 2018 ರಲ್ಲಿ ಫಿನ್ಲ್ಯಾಂಡ್ನಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು .
0 Comments