International Day of Yoga | ಅಂತಾರಾಷ್ಟ್ರೀಯ ಯೋಗ ದಿನ

ಅಂತಾರಾಷ್ಟ್ರೀಯ ಯೋಗ ದಿನ – ಜೂನ್ 21

international day of yoga , yoga day 2022 , yoga day , international yoga day 2022 , morning yoga , ಅಂತಾರಾಷ್ಟ್ರೀಯ ಯೋಗ ದಿನ

international day of yoga , yoga day 2022 , yoga day , international yoga day 2022 , morning yoga , ಅಂತಾರಾಷ್ಟ್ರೀಯ ಯೋಗ ದಿನ
# ಪ್ರತಿ ವರ್ಷ ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
★ ಹಿನ್ನೆಲೆ :-
# ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ – ಅಶೋಕ್ ಕುಮಾರ್ ಮಂಡಿಸಿದ್ದರು.
* ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು.
* ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.
* 2015 ಜೂನ್ 21 ನೇ ತಾರೀಖಿನಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.
* 2015ರ ಜೂನ್‌ 21ರಿಂದ ಪ್ರತಿ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.
★ 2020ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ (theme) – “Yoga for Health – Yoga at Home” (ಆರೋಗ್ಯಕ್ಕಾಗಿ ಯೋಗ – ಮನೆಯಲ್ಲೇ ಯೋಗ)
★ ಜೂನ್ 21 ರಂದು ಯಾಕೆ ಆಚರಣೆ ?
# ಜೂನ್ 21 ದೀರ್ಘಕಾಲ ಹಗಲು ಹೊಂದಿರುವ ದಿನ, ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ.
* ಈ ದಿನವನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು ( ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ ) ಕರೆಯಲಾಗುತ್ತದೆ.
* ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.
# 2020ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದ ಆತಿಥ್ಯ ವಹಿಸಲಿರುವ ಸ್ಥಳ – ಲಡಾಖ್‌ನ ರಾಜಧಾನಿ ಲೇಹ
★ ಅಂತರಾಷ್ಟ್ರೀಯ ಯೋಗ ದಿನ ನಡೆದ ಸ್ಥಳಗಳು
* 2015ರಲ್ಲಿ ನವದೆಹಲಿ,
* 2016ರಲ್ಲಿ ಚಂಡೀಗಢ,
* 2017ರಲ್ಲಿ ಲಕ್ನೋ,
* 2018ರಲ್ಲಿ ಡೆಹ್ರಾಡೂನ್ ಮತ್ತು
* 2019ರಲ್ಲಿ ರಾಂಚಿಯಲ್ಲಿ
ಅಂತರಾಷ್ಟ್ರಿಯ ಯೋಗ ದಿನ 2021 ಥೀಮ್ 
ಹಿಂದಿನ ವರ್ಷ ‘ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಯೋಗ’ ಎಂಬ ಥೀಮ್  ಮೂಲಕ ಯೋಗ ದಿನವನ್ನು ಆಚರಿಸಲಾಯಿತು.
ಆರೋಗ್ಯದಲ್ಲಿ ಚೇತರಿಕೆಯ ಜನತೆಗೆ ಜೀವನದಲ್ಲಿ ಆರಾಮವಾಗಿರಲು ಭರವಸೆಯನ್ನು ನೀಡುತ್ತದೆ. ಅದೇ ರೀತಿ ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನ 2021 ಥೀಮ್  ‘ಯೋಗಕ್ಕಾಗಿ ಯೋಗ’.
ಪ್ರಸ್ತುತದಲ್ಲಿನ ಸಾಂಕ್ರಾಮಿಕ ಸಮಯದಲ್ಲಿ ಯೋಗವು ಮಾನಸಿಕ ಸದೃಢತೆಯನ್ನು ತಂದುಕೊಡುತ್ತದೆ.
ಸಾಂಕ್ರಾಮಿಕದಿಂದ ಬಳಲಿದವರಿಗೆ ಖಿನ್ನತೆ, ಸುಸ್ತು ಈಗಲೂ ಇದೆ. ಹಾಗಿರುವಾಗ ‘ಯೋಗಕ್ಷೇಮಕ್ಕಾಗಿ ಯೋಗ’ ಎಂಬ ಉದ್ದೇಶದೊಂದಿಗೆ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಕೊವಿಡ್ -19 ಸಾಂಕ್ರಾಮಿಕದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ನಮ್ಮ ದೇಹ ಸಹಕರಿಸಬೇಕು.
ವೈರಸ್  ವಿರುದ್ಧ ಹೋರಾಡಬೇಕು.
ಹೀಗಿರುವಾಗ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ ಭಂಗಿಗಳು ಸಹಾಯ ಮಾಡುತ್ತವೆ.
ಪ್ರತಿನಿತ್ಯವು ಕೂಡಾ ಯೋಗ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳುವುದು ಉತ್ತಮ

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಶೋಷಣೆ ವಿರುದ್ಧದ ಹಕ್ಕು

ಮೇಕೆದಾಟು ಸಮಸ್ಯೆ,

Comments

Leave a Reply

Your email address will not be published. Required fields are marked *