
ಪರಿವಿಡಿ
ಇಂದಿರಾ ಗಾಂಧಿ
Indira Gandhi
ಅಧಿಕಾರ ಅವಧಿ
ಜ .24 , 1966 – ಮಾ .24 , 1977
ಸ್ಥಳ – ಉತ್ತರ ಪ್ರದೇಶದ ಅಲಹಾಬಾದ್
ಇಂದಿರಾ ಗಾಂಧಿ ಅವರ ಅಧಿಕಾರ ಅವಧಿಯಲ್ಲಿ 1971 ರ ಭಾರತ ಪಾಕಿಸ್ತಾನ ಯುದ್ಧದ ಮೂಲಕ ಬಾಂಗ್ಲಾದೇಶ ವಿಮೋಚನೆ ಮಾಡಲಾಯಿತು .
ಸಿಮ್ಲಾ ಒಪ್ಪಂದ ( ಜು .3.1972 ) ವಾಯಿತು.ಇವರ ಅವಧಿಯಲ್ಲಿ 1975 ರಲ್ಲಿ ರಾಷ್ಟ್ರೀಯ ಆಂತರಿಕ ತುರ್ತುಪರಿಸ್ಥಿತಿಯನ್ನು ( 1975-77 ) .ಘೋಷಣೆ ಮಾಡಲಾಯಿತು .
ಇವರು ಭಾರತದ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಇವರು ಉ.ಪ್ರದೇಶ ರಾಯ್ಬರೇಲಿ ಕ್ಷೇತ್ರದಿಂದ ಲೋಕಸಭೆಯನ್ನು ಆಯ್ಕೆಯಾಗಿದ್ದರು .
ಇಂದಿರಗಾಂಧಿಯವರು 1975 ರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೊಳಿಸಿದರು .
ಈ ಕಾರ್ಯಕ್ರಮವು ಆನೇಕ ಸಾಮಾಜಿಕ , ಆರ್ಥಿಕ ಅಂಶಗಳಾದ ಬಡತನ ನಿರ್ಮೂಲನೆ , ಉದ್ಯೋಗ ಒದಗಿಸುವುದು , ಶಿಕ್ಷಣ , ವಸತಿ , ಆರೋಗ್ಯ , ಕೃಷಿ ಮತ್ತು ಭೂ ಸುಧಾರಣೆ . ನೀರಾವರಿ , ಕುಡಿಯುವ ನೀರು , ದುರ್ಬಲ ವರ್ಗದವರನ್ನು ಸಂರಕ್ಷಿಸುವ ಮತ್ತು ಸಬಲಗೊಳಿಸುವುದು .
ಗ್ರಾಹಕರ ಸಂರಕ್ಷಣೆ , ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ಒಳಗೊಂಡಿತ್ತು . ಈ ಕಾರ್ಯಕ್ರಮಗಳನ್ನು 1982 ಹಾಗೂ 1986 ರಲ್ಲಿ ಮತ್ತೆ ಮನರ ರಚಿಸಲಾಯಿತು , ಇತ್ತೀಚೆಗೆ ಯು.ಪಿ.ಎ ಸರ್ಕಾರವು ಕೂಡ ಈ ಕಾರ್ಯಕ್ರಮವನ್ನು ಸಾಮಾನ್ಯ ಕನಿಷ್ಟ ಕಾರ್ಯಕ್ರಮದಡಿಯಲ್ಲಿ ಸೇರ್ಪಡೆ ಮಾಡಿಕೊಂಡಿತು .
1969 ರ ಜುಲೈ 19 ರಲ್ಲಿ 14 ಬ್ಯಾಂಕ್ಗಳನ್ನು ರಾಷ್ಟ್ರೀಕರಣ ಮಾಡಿದರು . 1980 ರಲ್ಲಿ ಮತ್ತೆ 6 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು . 1974 ರಲ್ಲಿ ಆಪರೇಷನ್ ಸ್ಟೈಲಿಂಗ್ ಬುದ್ಧ ಎಂಬ ಪ್ರೋಖಾನ್ -1 ಅಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರು .
1975 ರಲ್ಲಿ ಆರ್ಯಭಟ ಎಂಬ ಸ್ವದೇಶಿ ಉಪಗ್ರಹವನ್ನು ಉಡಾವಣೆ ಮಾಡಲಾಯಿತು . ಇವರ ಅಧಿಕಾರಾವಧಿಯಲ್ಲಿ 1969 ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಇಸ್ರೋ ಸಂಸ್ಥೆಯನ್ನು ಸ್ಥಾಪಿಸಲಾಯಿತು . 1972 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ .
ಇವರು 5 ನೇ ಪಂಚವಾರ್ಷಿಕ ಯೋಜನೆಯನ್ನು ಗರೀಬಿ ಹಠಾವೋ ಎಂಬ ಧೈಯರೊಂದಿಗೆ ಆರಂಭಿಸಿದರು . ಇವರು ತಮ್ಮ ಬಾಲ್ಯದ ದಿನಗಳಲ್ಲೇ ವಾನರ ಸೇನೆ ‘ ಎಂಬ ಸಂಘಟನೆಯನ್ನು ಆರಂಭಿಸಿ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದ್ದರು .
ಇವರಿಗೆ ರವೀಂದ್ರನಾಥ ಠಾಗೋರ್ ಅವರು ಪ್ರಿಯದರ್ಶಿನಿ ಎಂಬ ಹೆಸರು ನೀಡಿದರು . ಇವರು ಫಿರೋಜ್ ಗಾಂಧಿಯನ್ನು ವಿವಾಹವಾದ ಹಿನ್ನಲೆಯಲ್ಲಿ ಇಂದಿರಾ ಅವರಿಗೆ ಗಾಂಧಿ ಎಂಬ ಹೆಸರು ಸೇರಿತು . ಇವರು 1982 ರಲ್ಲಿ ನಬಾರ್ಡನ್ನು ಸ್ಥಾಪಿಸಿದರು .
ಈ ಮೂಲಕ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿಯ ಬ್ಯಾಂಕ್ನ್ನು ಸ್ಥಾಪಿಸಿದಂತಾಯಿತು . ಇಂದಿರಾಗಾಂಧಿ ಅವರು 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಕ್ರಮವನ್ನು ಕೈಗೊಂಡಿದ್ದರು . 1984 ಆಕ್ಟೋಬರ್ 31 ರಂದು ಅಂಗರಕ್ಷಕನಿಂದ ಇಂದಿರಾಗಾಂಧಿಯವರ ಹತ್ಯೆಯಾಯಿತು .
ಜನ್ಮದಿನ : – 1917 ನದಬರ್ 10
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .