ಪರಿವಿಡಿ

ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ ವಿಮರ್ಶೆಗಳು

( Criticism of Directive Principles )

Criticism of Directive Principles , indian constitution , directive principles of state policy , directive principles

Criticism of Directive Principles , indian constitution , directive principles of state policy , directive principles

ಭಾರತದ ಸಂವಿಧಾನದ ರಚನಾಕಾರರಲ್ಲಿ ಕೆಲವು ಸದಸ್ಯರು ಮತ್ತು ಸಂವಿಧಾನ ತಜ್ಞರು ಹಾಗೂ ರಾಜಕೀಯ ಪರಿಣಿತರು ರಾಜ್ಯ ನಿರ್ದೇಶಕ ತತ್ವಗಳನ್ನು ಈ ಕೆಳಕಂಡಂತೆ ವಿಶ್ಲೇಷಿಸಿದ್ದಾರೆ .

ಕಾನೂನಾತ್ಮಕ ತ್ಮಕ ಚಾರಿಗೆ ಅವಕಾಶವಿಲ್ಲ ( NoLegal Force )

ರಾಜ್ಯ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳಂತೆ ಜಾರಿಗೆ ತರಲು ಯಾವುದೇ ಕಾನೂನಾತ್ಮಕ ರಕ್ಷಣೆ ಹೊಂದಿಲ್ಲ . ಇವುಗಳು ನ್ಯಾಯ ರಕ್ಷಿತ ಹಕ್ಕು ( Non justiciable ) ಗಳಾಗಿಲ್ಲ . ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸದಿದ್ದರೆ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್‌ನಿಂದ ರಿಟ್‌ಗಳನ್ನು ತರುವಂತಹ ಅವಕಾಶವಿಲ್ಲ .

ಕೆ.ಟಿ.ಪಾ ಅವರು ಇವುಗಳನ್ನು Pious Super Flu ities ಎಂದಿದ್ದಾರೆ . & ಕೆ.ಟಿ.ಷಾ ಅವರು ಇದನ್ನು ” ಸಂಪನ್ಮೂಲವಿದ್ದಾಗ ಬ್ಯಾಂಕಿನಿಂದ ಹಣ ಪಡೆಯಲು ಅವಕಾಶ ಕಲ್ಪಿಸಿದ ಚೆಕ್‌ ಆಗಿದೆ ” ( A Cheque on a Bank , Payable only When the Resource of the bank Permit ) ಎಂದು ಹೇಳಿದ್ದಾರೆ .

ಟಿ.ಟಿ.ಕೃಷ್ಣಮಾಚಾರಿ  ಅವರು ರಾಜ್ಯ ನಿರ್ದೇಶಕ A veritable Dustbin of the senti ments ಎಂದು ಕರೆದಿದ್ದಾರೆ .

ಎನ್.ಶ್ರೀನಿವಾಸ್ ಅವರ ಪ್ರಕಾರ ರಾಜ್ಯ ನಿರ್ದೇಶಕ ತತ್ವಗಳು ಕ್ರಮಬದ್ಧವಾಗಿ ಜೋಡಣೆಯಾಗಿಲ್ಲ ಅಥವಾ ತಾರ್ಕಿಕವಾಗಿ ಕೂಡ ಜೋಡಣೆಗೊಂಡಿಲ್ಲ .

 ತಾರ್ಕಿಕವಾಗಿ ಜೋಡಣೆಯಾಗಿಲ್ಲ : –

ರಾಜ್ಯ ನಿರ್ದೇಶಕ ತತ್ವಗಳು ಯಾವುದೇ ತಾರ್ಕಿಕವಾದ ಜೋಡಣೆಯಿಂದ ರೂಪಿತಗೊಂಡಿಲ್ಲ . ಬದಲಿಗೆ ಇವು ತಾತ್ವಿಕ ನೆಲೆಗಟ್ಟಿನ ಮೇಲೆ ಉತ್ತಮಗೊಂಡಿವೆ .

ಸರ್ ಐವರ್ ಜೆನ್ನಿಂಗ್ಸ್ ಅವರು Pious Aspira tions ಎಂದು ಕರೆದಿದ್ದಾರೆ .

 ಸಂರಕ್ಷಿತವಾದವು : –

ಇವುಗಳು ಬೇರೆ ದೇಶಗಳಿಂದ ಎರವಲು ಪಡೆದು ಸಂರಕ್ಷಿತಗೊಂಡವುಗಳಾಗಿವೆ . ರಾಜ್ಯ ನಿರ್ದೇಶಕ ತತ್ವಗಳಲ್ಲಿ ಕೆಲವು ದೇಶದ ಅಗತ್ಯತೆಗಳನ್ನು ಆಧರಿಸಿ ರೂಪಿತಗೊಂಡಿಲ್ಲ .

ಸಂವಿಧಾನಾತ್ಮಕ ಗೊಂದಲಕ ಮಾಡುತ್ತದೆ : –

ರಾಜ್ಯ ನಿರ್ದೇಶಕ ತತ್ವಗಳು ರಾಜ್ಯ ಮತ್ತು ಕೇಂದ್ರದ ನಡುವೆ ರಾಷ್ಟ್ರಪತಿ & ಪ್ರಧಾನ ಮಂತ್ರಿಗಳ ನಡುವೆ , ರಾಜ್ಯಪಾಲರು & ಮುಖ್ಯಮಂತ್ರಿಗಳ ನಡುವೆ ಸಂವಿಧಾನಾತ್ಮಕ ಗೊಂದಲ ಉಂಟು ಮಾಡುತ್ತವೆ .

ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶಿಸುತ್ತವೆ . ರಾಜ್ಯಗಳು ಕೆಲವೊಮ್ಮೆ . ಇವುಗಳನ್ನು ಆದರೆ ಜಾರಿಗೊಳಿಸುವುದಿಲ್ಲ .

ಸಂಸತ್ತು ಕೆಲವು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರಲು ಸಂಸತ್ತಿನಲ್ಲಿ ಕಾಯ್ದೆ ರೂಪಿಸುತ್ತದೆ . ಆದರೆ ರಾಷ್ಟ್ರಪತಿಗಳು ಇಂತಹ ಕಾಯ್ದೆಗಳನ್ನು ತಮ್ಮ ವೀಟೋ ಅಧಿಕಾರದ ಮೂಲಕ ತಡೆಹಿಡಿಯಬಹುದು ಅಥವಾ ಮರುಪರಿಶೀಲನೆಗೆ ಕಳುಹಿಸಬಹುದು .

ರಾಜ್ಯಗಳಲ್ಲಿ ಶಾಸನ ಸಭೆಗಳು ರಾಜ್ಯ ನಿರ್ದೇಶಕ ತತ್ವ ಕ್ಕೆ ಅನುಗುಣವಾಗಿ ಕೆಲವು ಕಾಯ್ದೆಗಳನ್ನು ಶಾಸನ ಸಭೆಯಲ್ಲಿ ಅಂಗೀಕರಿಸುತ್ತವೆ . ಅದನ್ನು ರಾಜ್ಯಪಾಲರು ವೀಟೋ ಅಧಿಕಾರವನ್ನು ಬಳಸಿ ತಡೆ ಹಿಡಿಯಬಹುದು . ಮೂಲಕ ಸಂವಿಧಾನಾತ್ಮಕ ಗೊಂದಲಗಳು ಉಂಟಾಗುವ ಅವಕಾಶವಿದೆ .

ಸಂವಿಧಾನದ 42 ನೇ ತಿದ್ದುಪಡಿ

1976 ರಲ್ಲಿ ರಾಜ್ಯ ನಿರ್ದೇಶಕ ತತ್ವಕ್ಕೆ 4 ಹೊಸ ತತ್ವಗಳನ್ನು ಸೇರಿಸಲಾಯಿತು .

ಅವುಗಳೆಂದರೆ ;

1 ) 39 ನೇ ವಿಧಿಗೆ ಮಕ್ಕಳ ಆರೋಗ್ಯ ಬೆಳವಣಿಗೆಯ ಅವಕಾಶವನ್ನು ರಕ್ಷಣೆ ಮಾಡುವುದು .

2 ) 39 – ಎ ವಿಧಿ – ಬಡವರಿಗೆ ಉಚಿತ ಕಾನೂನು ಸೇವೆ ಮತ್ತು ಸಮಾನ ನ್ಯಾಯವನ್ನು ಒದಗಿಸುವುದು .

3 ) 43 – ಎ ವಿಧಿ – ಕೈಗಾರಿಕೆಗಳ ಆಡಳಿತದಲ್ಲಿ ಕಾರ್ಮಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು .

4 ) 48 – ಎ ವಿಧಿ – ವನ್ಯಜೀವಿಗಳು ಮತ್ತು ಅರಣ್ಯಗಳನ್ನು ರಕ್ಷಿಸುವುದರ ಮೂಲಕ ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವುದು .

86 ನೇ ತಿದ್ದುಪಡಿ -2002 ರಲ್ಲಿ 45 ನೇ ವಿಧಿಯನ್ನು ಬದಲಿಸಿ , 6 ವರ್ಷದೊಳಗಿನ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಯಿತು .

97 ನೇ ತಿದ್ದುಪಡಿ -2011 ರಲ್ಲಿ ರಾಜ್ಯ ನಿರ್ದೇಶಕ ತತ್ವಕ್ಕೆ 43 – ಬಿ ವಿಧಿಯನ್ನು ಸೇರಿಸಿ ಸಹಕಾರ ಸಂಘಗಳಲ್ಲಿ ನಿರ್ವಹಣೆ , ನಿಯಂತ್ರಣ & ಕಾರ್ಯದ ಬಗ್ಗೆ ಅವಕಾಶ ಕಲ್ಪಿಸಲಾಗಿದೆ


0 Comments

Leave a Reply

Avatar placeholder

Your email address will not be published. Required fields are marked *