ಭಾರತದಲಿ ಮಿಲಿಟರಿ ಸಾಮರ್ಥ್ಯ

ಭಾರತ 4 ನೇ ಸ್ಥಾನ

indian army, join indian army, indian army bharti 2021, indian armed forces,indian army bharti, ಭಾರತದಲಿ ಮಿಲಿಟರಿ ಸಾಮರ್ಥ್ಯ

 

indian army, join indian army, indian army bharti 2021, indian armed forces,indian army bharti, ಭಾರತದಲಿ ಮಿಲಿಟರಿ ಸಾಮರ್ಥ್ಯ

ಜಗತ್ತಿನ ಮಿಲಿಟರಿ ಸಾಮರ್ಥ್ಯದಲ್ಲಿ ಭಾರತ ಈಗ ನಾಲ್ಕನೇ ಸ್ಥಾನದಲ್ಲಿದೆ ಈ ಸ್ಥಾನಕ್ಕೆ ಏರಲು ನಮ್ಮ ಸೈನ್ಯ ಇಲ್ಲಿಯವರೆಗೂ ಸಾಗಿ ಬಂದ ದಾರಿ . ಭಾರತೀಯ ಸೈನ್ಯದ ಸಾಮರ್ಥ್ಯದ ಒಂದು ನೋಟ ಇಲ್ಲಿದೆ .

ಅಕ್ಕಪಕ್ಕ ದೇಶಗಳಿಗೆ ರಫ್ತು

ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ 60 ದೊಡ್ಡ ದೇಶಗಳ ಪಟ್ಟಿಯಲ್ಲಿ ಭಾರತ 23 ನೇ ಸ್ಥಾನದಲ್ಲಿದ್ದು , ತನ್ನ ಸುತ್ತಮುತ್ತಲಿನ ದೇಶಗಳಿಗೆ ಆಯುಧಗಳನ್ನು ನೀಡುತ್ತಿದೆ . ಈ ರಪ್ತಿನಲ್ಲಿ ಮಯನ್ಮಾರ್ ಶೇ .46 , ಶ್ರೀಲಂಕಾ ಶೇ .25 ಹಾಗೂ ಮಾರಿಷಸ್ ಶೇ .14 ಪಾಲು ಪಡೆದಿವೆ . ಈ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಇರಾದೆ ಹೊಂದಿದ್ದು , ಮುಂದಿನ ಐದು ವರ್ಷಗಳಲ್ಲಿ ಅದನ್ನು 500 ಕೋಟಿ ಡಾಲರ್ ಮೌಲ್ಯಕ್ಕೆ ತಲುಪಿಸುವ ಉದ್ದೇಶವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ . ಬಂದೂಕುಗಳು , ರಕ್ಷಣಾ ಕವಚಗಳು , ಕೆಲವು ಹೆಲಿಕಾಪ್ಟರ್‌ಗಳನ್ನು ಭಾರತ ಈ ದೇಶಗಳಿಗೆ ರಫ್ತು ಮಾಡುತ್ತಿದೆ . ವಿಯೆಟ್ನಾಂ , ಮಲೇಷ್ಯಾ , ಇಂಡೋನೇಷ್ಯಾಗಳಿಗೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶವನ್ನು ಭಾರತ ಹೊಂದಿದೆ . ಎಚ್‌ಎಎಲ್ ನಲ್ಲಿ ತಯಾರಾದ ತೇಜಸ್ ಹಗುರ ಯುದ್ಧವಿಮಾನ , ಧ್ರುವ , ರುದ್ರ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಬಂದಿದೆ .

 ಆಮದಿನಲ್ಲಿ ಎರಡನೇ ಸ್ಥಾನ

ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ . 2015 ರಿಂದ 2019 ರವರೆಗಿನ ಅವಧಿಯಲ್ಲಿ ಭಾರತ ಅತ್ಯಧಿಕ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ . ಹೀಗೆ ಆಯುಧ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಸೌದಿ ಅರೇಬಿಯಾ ಮೊದಲ ಸ್ಥಾನದಲ್ಲಿದ್ದರೆ , ಭಾರತ ಎರಡನೇ ಸ್ಥಾನದಲ್ಲಿದೆ . ಈಜಿಪ್ಟ್ , ಆಸ್ಟ್ರೇಲಿಯಾ ಹಾಗೂ ಚೀನಾಗಳು ಮೂರು , ನಾಲ್ಕು ಹಾಗೂ ಐದನೇ ಸ್ಥಾನಗಳಲ್ಲಿವೆ . ಜಾಗತಿಕ ಶಸ್ತ್ರಾಸ್ತ್ರ ವಹಿವಾಟಿನ ಬಗ್ಗೆ ಅಧ್ಯಯನ ನಡೆಸುವ ಸ್ಟಾಕ್ ಹೋಂ ಅಂತಾರಾಷ್ಟ್ರೀಯ ಶಾಂತಿ ಅಧ್ಯಯನ ಸಂಸ್ಥೆ ( ಸಿಪಿ ) ತನ್ನ ‘ ಅಂತರಾಷ್ಟ್ರೀಯ ಶಸ್ತ್ರಾಸ್ತ್ರ ವಹಿವಾಟಿನ ಟ್ರೆಂಡ್ -2019 * ಎಂಬ ವರದಿಯಲ್ಲಿ ಈ ಅಂಶಗಳನ್ನು ತಿಳಿಸಿದೆ . ರಷ್ಯಾದಿಂದ ಭಾರತ ಹೆಚ್ಚು ಶಸ್ತ್ರಾಸ್ತ್ರ ತರಿಸುತ್ತಿದೆ . ಇದರ ಒಟ್ಟಾರೆ ರಫ್ತು ಶೇ .2 ರವನ್ನು ಭಾರತಕ್ಕೆ ನೀಡುತ್ತಿದೆ . ಆದರೆ 2010-14ರ ಅವಧಿಗಿಂತ ಈ ಬಾರಿಯ ಆಮದು ಶೇ .47 ರಷ್ಟು ಕುಸಿದಿದೆ . ಮೊದಲ ಭಾರತದ ಆಮದಿನ 72 % ಆಯುಧಗಳು ರಷ್ಯಾದಿಂದ ಬರುತ್ತಿದ್ದರೆ ಈಗ ಅದು ಶೇ .56 ಕ್ಕೆ ಇಳಿದಿದೆ . ಈ ಜಾಗವನ್ನು ಅಮೆರಿಕ , ಇಸ್ರೇಲ್ , ಫ್ರಾನ್ಸ್ ಮುಂತಾದ ದೇಶಗಳು ತುಂಬಿವೆ , ಹಲವು ದೇಶಗಳಿಂದ ಅತ್ಯುತ್ತಮವಾದ ಆಯುಧಗಳನ್ನು ತರಿಸುವ ನೀತಿಯನ್ನು ಭಾರತ ಪಾಲಿಸುತ್ತಿದೆ . ಕಳೆದ ಅವಧಿಗೆ ಹೋಲಿಸಿದರೆ , ಈ ಅವಧಿಯಲ್ಲಿ ಅಮೆರಿಕದಿಂದ ಆಮದು ಕೂಡ ಶೇ .51 ರಷ್ಟು ಇಳಿದಿದೆ . ಇಸ್ರೇಲ್‌ನಿಂದ ಆಮದು ಶೇ .175 ರಷ್ಟು ಹಾಗೂ ಫ್ರಾನ್ಸ್‌ನಿಂದ ಶೇ .715 ರಷ್ಟು ಹೆಚ್ಚಿವೆ .

ಭಾರತದ ಸೇನಾ ಆಧುನೀಕರಣ

  • ಕಳೆದ ಐದಾರು ವರ್ಷಗಳಲ್ಲಿ ಭಾರತ ಸೈನ್ಯವನ್ನು ಮರಳಿ ಕಟ್ಟಲಾಗುತ್ತಿದೆ . ಭೂ , ವಾಯು , ನೌಕಾಪಡೆ , ಗಡಿ ಭದ್ರತಾ ಪಡೆ , ಅರೆಸೇನಾ ಕಮಾಂಡೋ ಶಕ್ತಿಗಳಿಗೆ ಹೆಚ್ಚಿನ ಬಲ ತುಂಬಲಾಗುತ್ತಿದೆ . ಅಂತಹ ಕೆಲವು ಕ್ರಮಗಳು ಇಲ್ಲಿವೆ . ಪಡೆ ,
  • ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನಗಳ ಆಗಮನ ಮುಂಚೂಣಿ ಯುದ್ಧದಲ್ಲಿ ಇದು ಹೀರೋ
  • ಕೆಲವೇ ದೇಶಗಳ ಬಳಿ ಇರುವ ಹೈಪರ್‌ಸಾನಿಕ್ ಕ್ಷಿಪಣಿ ಉಡಾವಣೆ ವ್ಯವಸ್ಥೆ ಈಗ ಭಾರತದ ಬಳಿ ಇದೆ .
  • ಶತ್ರುದೇಶಗಳ ಸ್ಯಾಟಲೈಟ್‌ಗಳನ್ನು ಕೆಡವಬಲ್ಲ ಉಪಗ್ರಹ ಉಡಾವಣೆ ತಂತ್ರಜ್ಞಾನ ಭಾರತದ ಮಿಲಿಟರಿ ಬಳಿ ಇದೆ .
  • ಹಿಮಾಲಯದಂಥ ಎತ್ತರದ , ಆಮ್ಲಜನಕ ಕಡಿಮೆಯಿರುವ ಪ್ರದೇಶದಲ್ಲಿ ಯುದ್ಧಮಾಡಬಲ್ಲ ಸಾಮರ್ಥ್ಯವನ್ನು ನಮ್ಮ ಯೋಧರು ಹೊಂದಿದ್ದಾರೆ .
  • ಇಸ್ರೇಲ್‌ನಿಂದ ಫಾಲ್ಕನ್ ವಾಯುಜಾತ ಮುನ್ನೆಚ್ಚರಿಕೆ ವ್ಯವಸ್ಥೆಗಳ ಆಮದು ಮಾಡಿಕೊಳ್ಳುತ್ತಿದೆ . ವಾಯುಯುದ್ಧದ ಸಂದರ್ಭದಲ್ಲಿ ನಮ್ಮ ವಿಮಾನಗಳಿಗೆ ಅಗತ್ಯವಾದ ನಿಖರ ಸೂಚನೆಗಳನ್ನು ನೀಡುತ್ತದೆ
  • ರಷ್ಯಾದಿಂದ ತರಿಸಿಕೊಳ್ಳಲಾದ ಇಗ್ಲಾ ಏರ್ ಡಿಫೆನ್ಸ್ ಸಿಸ್ಟಮ್‌ಗಳು ಗಡಿಯಲ್ಲಿ ಯೋಧರು ಭುಜದಿಂದಲೇ ಉಡಾಯಿಸಬಹುದು .
  • ಗಡಿಯಲ್ಲಿ ಘಾತಕ ಕಮಾಂಡೋಗಳು ಹಿಮದೇಶ , ಮರುಭೂಮಿ ಮುಂತಾದ ಸಂಕಷ್ಟಮಯ ಪ್ರದೇಶಗಳಲ್ಲಿ ಹಾಗೂ ಮಾರ್ಷಲ್ ಯುದ್ಧಕಲೆಗಳಲ್ಲಿ ತರಬೇತಿ ಪಡೆದವರು ಇದ್ದಾರೆ .
  • ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಸ್ವಾತಿ ರೇಡಾರ್‌ಗಳು ಗಡಿಪ್ರದೇಶ ದಲ್ಲಿ ಶತ್ರುಗಳ ಶೆಲ್ , ರಾಕೆಟ್ ಮುಂತಾದ ಆಯುಧಗಳನ್ನು 50 ಕಿಲೋಮೀಟರ್ ದೂರದಿಂದ ನಿಖರವಾಗಿ ಪತ್ತೆಹಚ್ಚಬಲ್ಲದು ,
  • ಡಿಆರ್‌ಡಿಒದಿಂದ ಅಗ್ನಿ -1 ಕ್ಷಿಪಣಿಯ ಅಭಿವೃದ್ಧಿ , ಅಗ್ನಿ -5 ಬ್ಯಾಲಿಸ್ಟಿಕ್ ಕ್ಷಿಪಣಿ , ನಿರ್ಭಯ್ ಕ್ಯೂಸ್ ಕ್ಷಿಪಣಿ , ಸಬ್‌ಮರೀನ್ ನಿಂದ ಉಡಾಯಿಸಬಲ್ಲ ಕೆ -15 ಕ್ಷಿಪಣಿ , ಟ್ಯಾಂಕ್‌ಗಳನ್ನು ಹೊಡೆದುರುಳಿಸುವ ನಾಗ್ ಕ್ಷಿಪಣಿ , ದೃಷ್ಟಿದೂರದಿಂದ ಆಚೆ ಹೋಗಬಲ್ಲ ಆಸ್ತ ಕ್ಷಿಪಣಿ , ಅರ್ಜುನ ಯುದ್ಧ ಟ್ಯಾಂಕ್‌ಗಳು ತಯಾರಾಗುತ್ತಿವೆ .
  • ರಷ್ಯದಿಂದ ತರಿಸಿರುವ ಎಸ್ -400 ಟ್ರಯಂಫ್ ಕ್ಷಿಪಣಿಗಳು ಜಗತ್ತಿನ ಅತ್ಯಾಧುನಿಕ ಕ್ಷಿಪಣಿನಾಶಕ , ಜೆಟ್ ನಾಶಕ ವ್ಯವಸ್ಥೆಯಾಗಿವೆ .
  • ಡಿಆರ್‌ಡಿಒ ಅತ್ಯಾಧುನಿಕ ‘ ಭಾರತ್ ‘ ಹೆಸರಿನ ಡೋನ್ ತಡೆ ವ್ಯವಸ್ಥೆಯೊಂದನ್ನು ರೂಪಿಸಿದೆ .
  • ಎಚ್ ಎಎಲ್ ನಿರ್ಮಿತ ತೇಜಸ್ ಯುದ್ಧವಿಮಾನದ ಬಲ

ಯಾರು ಬಲಿಷ್ಟರು

‘ ಮಿಲಿಟರಿ ಡೈರೆಕ್ಟ್ ‘ ಎಂಬ ಹೆಸರಿನ ಸೈನ್ಯದ ಕುರಿತ ಮಾಹಿತಿ- ಸುದ್ದಿಗಳನ್ನು ಒಳಗೊಂಡ ವೆಬ್ ಸೈಟ್ ‘ ದಿ ಅಲ್ಟಿಮೇಟ್ ಮಿಲಿಟರಿ ಇಂಡೆಕ್ಸ್ ‘ ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು , ಇದರಲ್ಲಿ ಜಗತ್ತಿನ 12 ಬಲಿಷ್ಠ ದೇಶಗಳ ಮಿಲಿಟರಿಯನ್ನು ಅಧ್ಯಯನ ಮಾಡಲಾಗಿದೆ . ನಂತರ ಅವುಗಳ ಸ್ಥಾನಕ್ಕೆ ಅನುಗುಣವಾಗಿ ವಿಂಗಡಿಸಲಾಗಿದ್ದು , ಭಾರತ ನಾಲ್ಕನೇ ಪಕ್ಷಕ್ಕೆ ಬಂದಿದೆ . ಮೊದಲ ಮೂರು ಸ್ಥಾನಗಳಲ್ಲಿ ಕ್ರಮವಾಗಿ ಚೀನಾ , ಅಮೆರಿಕ , ರಷ್ಯ , ಇವೆ . ಅಮೆರಿಕವನ್ನೂ ಹಿಂದಿಕ್ಕಿ ಚೀನಾ ಮೊದಲ ಸ್ಥಾನಕ್ಕೆ ಏರಿದೆ . ಆದರೆ ಮಿಲಿಟರಿಗಾಗಿ ಹೆಚ್ಚು ವೆಚ್ಚ ಮಾಡುತ್ತಿರುವುದು ಅಮೆರಿಕ , ಮಿಲಿಟರಿಗಾಗಿ ಅಮೆರಿಕ ವಾರ್ಷಿಕ 732 ಶತಕೋಟಿ ಡಾಲರ್ , ಚೀನಾ 261 ಶತಕೋಟಿ ಡಾಲರ್ ವೆಚ್ಚ ಮಾಡುತ್ತಿವೆ . ಭಾರತದ ವೆಚ್ಚ ಅಮೆರಿಕದ ಹತ್ತು ಪಟ್ಟು ಕಡಿಮೆ 71 ಶತಕೋಟಿ ಡಾಲರ್ .

ಶಸ್ತ್ರಾಸ್ತ್ರ ಸ್ವಾವಲಂಬನೆ

ಆಮದು ಮಾಡಿಕೊಳ್ಳುತ್ತಿದ್ದರೂ , ಕಳೆದ ಅವನಿಗೆ ಹೋಲಿಸಿದರೆ ಈ ಅವಧಿಯಲ್ಲಿ ಭಾರತದ ಆಮದು ಶೇ .12 ರಷ್ಟು ಕಡಿಮೆ ಆಗಿದೆ . ಇದಕ್ಕೆ ಕಾರಣ , ಭಾರತದ ಆಯುಧ ತಯಾರಿಕ ಕಂಪನಿಗಳು ಹೆಚ್ಚು ಹೆಚ್ಚು ಸಬಲರಾಗಿರುವುದು . ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಸಿಕ್ಕ ಉತ್ತೇಜನ , ಮಿಲಿಟರಿ ಆಸ್ತಿಗಳ ವಿಚಾರದಲ್ಲಿ ಸ್ವಾವಲಂಬನೆಯಾಗಬೇಕೆಂಬ ನೀತಿ ಇದಕ್ಕೆ ಕಾರಣ . ಭಾರತದ ಮಿಲಿಟರಿ ಆಯುಧಗಳ ತಯಾರಿಕೆಯಲ್ಲಿ ಸ್ವಂತಿಕೆ ಹಾಗೂ ಸ್ವಾವಲಂಬನೆಯನ್ನು ರೂಢಿಸಿಕೊಳ್ಳುತ್ತಿದೆ ಇದರಲ್ಲಿ ಮೂರು ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಪಾತ್ರಮುಖ್ಯವಾಗಿದೆ . ವಿಶ್ವದ ದೊಡ್ಡ 100 ಶಸ್ತ್ರಾಸ್ತ್ರ ಪೂರೈಕೆದಾರರ ಕಂಪನಗಳ ಪಟ್ಟಿಯಲ್ಲಿ ಈ ಮೂರು ಕಂಪನಿಗಳು ಇವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ . ( 38 ನೇ ರಾಂಕ್ ) , ಇಂಡಿಯನ್ ಆರ್ಡಿನ್ಸ್ ಫ್ಯಾಕ್ಟರೀಸ್ ( 56 ನೇ ಬ್ಯಾಂಕ್ ) ಹಾಗೂ ಭಾರತ್ ಎಲೆಕ್ಟ್ರಾನಿಕ್ಸ್ ( 62 ನೇ ಬ್ಯಾಂಕ್ ) ಇವು ಮೂರೂ ಸೇರಿ ಈ 100 ದೇಶಗಳ ಒಟ್ಟಾರೆ ಯುದ್ಧ ಆಯುಧ ವಹಿವಾಟಿನ ಶೇ .1.4 ರಷ್ಟು ನಿಭಾಯಿಸುತ್ತಿವೆ .

ದೇಸಿ ಯುದ್ಧೋಪಕರಣ

ಆತ್ಮನಿರ್ಭರ ಭಾರತ ಯೋಜನೆಯ ಅಂಗವಾಗಿ ಭಾರತ ಸರಕಾರ ಇತ್ತೀಚೆಗೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ 101 ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಿತ್ತು . ಇವುಗಳಿಗೆ ಪರ್ಯಾಯವಾದ ಸಾಧನೋಪಕರಣಗಳನ್ನು ದೇಶದೊಳಗೇ ಅಭಿವೃದ್ಧಿಪಡಿಸಲು ಡಿಆರ್‌ಡಿಒ ಮುಂದಾಗಿದೆ . ಸರಕು ಸಾಗಣೆ ವಿಮಾನ , ಹಗುರ ಯುದ್ಧ ವಿಮಾನ , ಸಾಂಪ್ರದಾಯಿಕ ಜಲಾಂತರ್ಗಾಮಿ , ಕ್ರೂಸ್ ಕ್ಷಿಪಣಿಗಳು ಸೇರಿವೆ . ಇನ್ನುಳಿದ ಸಣ್ಣಮಟ್ಟ ಹಾಗೂ ಮಧ್ಯಮ ಯುದ್ಧೋಪಕರಣಗಳನ್ನು ಸಿದ್ಧಪಡಿಸುವ 1800 ಸಣ್ಣ , ಮಧ್ಯಮ , ದೊಡ್ಡ ಉದ್ಯಮಗಳನ್ನು ಡಿಆರ್‌ಡಿಒ ಗುರುತಿಸಿದೆ . ಇವುಗಳಲ್ಲಿ ಸಣ್ಣ ಹಾಗು ದೊಡ್ಡ ಸಶಸ್ತ್ರ ವಾಹನಗಳು , ಬೆಟ್ಟದ ಕಾಲುಸೇತುವೆಗಳು , ಚಲಿಸುವ ಸೇತುವೆ , ನೆಲಬಾಂಬ್ ಹುಗಿಯುವ ಹಾಗೂ ಗುರುತುಮಾಡುವ ಸಾಧನೆ ಉಗ್ರವಾದ ತಡೆ ವಾಹನ , ಟ್ಯಾಂಕ್ ಸಾಗಣೆ , ಕ್ಷಿಪಣಿ ಕವಚ , ಕ್ಷಿಪಣಿ ಸಂಗ್ರಾಹಕ , ಸಮುದ್ರ ರಾಕೆಟ್ ಉಡಾವಣೆ ಸಾಧನ , ಸ್ಯಾಟ್‌ಲೈಟ್ ನ್ಯಾವಿಗೇಶನ್ ರಿಸೀವರ್ , ನ್ಯಾವಿಗೇಟರ್ ರೇಡಾರ್‌ಗಳೆಲ್ಲ ಇವೆ .

 ಚೀನಾ ಯಾಕೆ ಮೊದಲ ಸ್ಥಾನ ?

ಚೀನಾಕ್ಕೆ ಬಲಿಷ್ಠತೆ ಬಂದಿರುವುದು ಅದರ ನೌಕಾಪಡೆಯಿಂದ , ಜಗತ್ತಿನಲ್ಲೇ ಅತಿ ದೊಡ್ಡದಾದ ಹಾಗೂ ಬಲಿಷ್ಠವಾದ ನೌಕಾಪಡೆ ಚೀನಾದ ಬಳಿ ಇದೆ . ಹಾಗೆಯೇ ಚೀನಾದ ಬಳಿ ಇರುವ ಭೂಸೇನಾ ಯೋಧರ ಸಂಖ್ಯೆಯೂ ಇತರರು ಕಂಗೆಡುವಂತಿದೆ . ಆದರೆ , ವಾಯುಪಡೆಯ ಶಕ್ತಿಯೊಂದನ್ನು ಎಣಿಸಿದರೆ , ಅಮೆರಿಕದ ಶಕ್ತಿಯೇ ಅತ್ಯಂತ ಹೆಚ್ಚು , ರ , ಭಾರತ , ಚೀನಾ ಮೂರನ್ನೂ ಸೇರಿಸಿದರೆ ಎಷ್ಟಾಗಬಹುದೋ ಅಷ್ಟು ವೈಮಾನಿಕ ದಾಳಿಪಡೆ ಆಮೆರಿಕ ಒಂದರ ಬಳಿಯೇ ಇದೆ . ಹಾಗೂ ಭೂಸೇನೆಯ ಟ್ಯಾಂಕ್‌ಗಳು , ಮದ್ದುಗುಂಡು ಪ್ರಮಾಣದಲ್ಲಿ ರಷ್ಯದ ಕೈ ಮಿಗಿಲಾಗಿದೆ . ನಂತರದ ಸ್ಥಾನದಲ್ಲಿ ಅಮೆರಿಕ , ಚೀನಾ , ಆರನೇ ಸ್ಥಾನದಲ್ಲಿ ಭಾರತ ಇವೆ .

 ಸೈನ್ಯ ಶಕ್ತಿ

ಸ್ಥಾನ       ದೇಶಗಳು

1          ಚೀನಾ

2          ಅಮೆರಿಕ

3           ರಷ್ಯ

4           ಭಾರತ

5          ಫ್ರಾನ್ಸ್

 

ಸೇನಾ ಯೋಧರು

 ದೇಶಗಳು   ಸಂಖ್ಯೆ ( ಲಕ್ಷ )

ಚೀನಾ          24

ಅಮೆರಿಕ      14

ಭಾರತ        14

ರಷ್ಯ             9

 

ಮಿಲಿಟರಿ ಬಜೆಟ್

ದೇಶಗಳು   ಒಟ್ಟು ವೆಚ್ಚ ( ಶ.ಕೋ 5 )

ಅಮೆರಿಕ      732

ಚೀನಾ          261

ಭಾರತ         71

ರಷ್ಯಾ             65

ಅಣ್ವಸ್ತ್ರ ಬಲ

ದೇಶ                ಅಣ್ವಸ್ತ್ರ

ರಷ್ಯ              6375

ಅಮೆರಿಕ        5800

ಚೀನಾ              320

ಫ್ರಾನ್ಸ್               290

ಬ್ರಿಟನ್              215

ಭಾರತ              150

ಯುದ್ಧ ನಡೆದರೆ ಯಾರಿಗೆ ಜಯ

ಬಜೆಟ್ ಮೊತ್ತ ನೌಕಾಪಡೆ ಬಲ , ಸಕ್ರಿಯ ಯೋಧರ ಸಂಖ್ಯೆಯನ್ನು ಲೆಕ್ಕಹಾಕಿದಾಗ ಒಂದು ವೇಳೆ ಈಗ ಜಗತ್ತಿನಲ್ಲಿ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಮರ್ಥ್ಯ ಹೊಂದಿದೆ . ಕೇವಲ ಭೂಮಿಯ ಮೇಲೆ ಯುದ್ಧ ನಡೆದರೆ ಅಮೆರಿಕ ಗೆಲುವು ಸಾಧಿಸುವುದು , ಸಮುದ್ರದಲ್ಲಿ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ವರದಿ ತಿಳಿಸಿದೆ .

ಯೋಧರಿಗೆ ವೇತನ

ಯೋಧುಗೆ ಉತ್ತಮ ವೇತನ ನೀಡುವಲ್ಲಿ ಕೆನಡಾ , ಫ್ರಾನ್ಸ್ , ಬ್ರಿಟನ್ ಮೊದಲ 3 ಸ್ಥಾನದಲ್ಲಿದ್ದರೆ ಭಾರತ 11 ನೇ ಸ್ಥಾನದಲ್ಲಿದೆ .

ಶಕ್ತಿಶಾಲಿ ಯೋಧರು

ಯೋಧರ ಶಸ್ತ್ರಾಸ್ತ್ರ ಹೊತ್ತಯ್ಯಬಲ್ಲ ಸಾಮರ್ಥ್ಯ ಆಧರಿಸಿ ಶಕ್ತಿಶಾಲಿ ಯೋಧರ ಪಟ್ಟಿ ತಯಾರಿಸಲಾಗಿದ್ದು ರಷ್ಯಾ ( 70 ಕೆಜಿ . ) ಬ್ರಿಟನ್ ( 64 ಕೆಜಿ ) , ಅಮೆರಿಕ( 45 ಕೆಜಿ ) , ಮೊದಲ 3 ಸ್ಥಾನ ಪಡೆದಿವೆ . ಭಾರತೀಯ ಯೋಧರಿಗೆ 8 ನೇ ಸ್ಥಾನ ಸಿಕ್ಕಿದೆ ( 40 ಕೆಜಿ ) .


0 Comments

Leave a Reply

Avatar placeholder

Your email address will not be published. Required fields are marked *