
ಶಾಸನಗಳು [ Inscriptions ] :
karnataka shasanagalu,ಶಾಸನಗಳು,karnataka shasanagalu in kannada,history of karnataka,history of coorg,belgaum history
ಶಾಸನಗಳು
“ ಕಲ್ಲು ಅಥವಾ ತಾಮ್ರ ಅಥವಾ ಇನ್ನೂ ಮುಂತಾದ ಲೋಹಗಳ ಮೇಲೆ ಬರೆಯುವ ದಾಖಲೆಯೆ ಶಾಸನ ” ಎಂದು ಶ್ರೀನಿವಾಸ ರಿತ್ತಿ ಕರೆದರೆ ;
“ ರಾಜರ ಆಜ್ಞೆಗಳನ್ನು ತಿಳಿಸುವ ಬರಹವನ್ನು ಶಾಸನ ” ವೆಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ .
ರಾಜನಾದವನು ತನ್ನ ಆಜ್ಞೆಗಳನ್ನು ಬರಹದ ರೂಪದಲ್ಲಿಯೇ ಕಳುಹಿಸಬೇಕು ಎಂದು ಶುಕ್ರನೀತಿ ಸಾರಿ ಹೇಳುತ್ತದೆ . ಅದರ ಪ್ರಕಾರ , “ ಶಾಸನದಲ್ಲಿ ಅರಸನ ಸಹಿ ಮತ್ತು ಪ್ರಕಟಣೆಯ ದಿನಾಂಕವಿರಬೇಕು .
ಅಲ್ಲದೆ , ಶಾಸನದ ಸಾರವನ್ನು ಡಂಗುರವನ್ನು ಹೊಡೆಸಿ ತಿಳಿಸಬೇಕು ಮತ್ತು ನಾಲ್ಕು ದಾರಿಗಳು ಸೇರುವ ಪ್ರದೇಶದಲ್ಲಿ ಬರೆ ತಿಳಿಸಬೇಕು . ಇಲ್ಲದಿದ್ದರೆ ,
ಅಂಥ ಅನ್ಯಾಸಗಳನ್ನು ಚೋರರ ಆಜ್ಞಾ ಪತ್ರಗಳು ( Forged orders ) ಎಂದು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸುತ್ತದೆ .
ಯಾವುದೇ ಒಂದು ಘಟನೆ ಒಂದು ದಾನ ಅಥವಾ ಒಂದು ಕೆಲಸ ಮುಂದಿನ ಜನಾಂಗಕ್ಕೆ ದಾಖಲೆಯಾಗಿ ಉಳಿಯಬೇಕು ಎನ್ನುವ ಕಾರಣದಿಂದ , ವಸ್ತುವಿನ ಮೇಲೆ ಕಂಡರಿಸಿದ ಅಥವಾ ಕೆತ್ತಿಸಿದ ಬರಹವನ್ನು ಶಾಸನ
ಎಂದು ಪರಿಗಣಿಸಬಹುದು ಶಾಸನಗಳನ್ನು ಕೆತ್ತಿಸುವ ಕ್ರಿಯೆ ಭಾರತದಲ್ಲಿ ಆಶೋಕನ ಕಾಲಾವಧಿಯಲ್ಲಿ ಆರಂಭವಾಯಿತು
ಹಾಗಾಗಿ , ಆಶೋಕನನ್ನು ‘ ಫಿಲಾಲರದ ಪಿತಾಮಹ ‘
ಅಡ್ಡಸ್ತರಕ ಎಂದು ಕರೆಯಬಹುದಾಗಿದೆ . ಶಾಸನಗಳ ಅಧ್ಯಯನದ ವಿಚಾರದಲ್ಲಿ 1857 ವರ್ಷವನ್ನು ಬಹು ಮುಖ್ಯವಾದ ಘಟ್ಟವೆಂದು ಹೇಳಲಾಗಿದೆ .
ಆ ವರ್ಷ ಚೇನ್ಸ್ ಪ್ರಿಸ್ ( Jares Priroep ) ಎನ್ನುವವರು ಮೊದಲ ಬಾರಿಗೆ ಅಶೋಕನ ಶಾಸನಗಳನ್ನು ಓದಿದರು .
ಅದುವರೆಗೂ ಯಾರೂ ಆಶೋಕನ ಶಾಸನಗಳನ್ನು ಓದಿರಲಿಲ್ಲ . ಭಾರತದಲ್ಲಿ ಸು . 75,000 ಶಾಸನಗಳು ಲಭ್ಯವಾಗಿದೆ , ಹರಪ್ಪಾ ನಾಗರಿಕತೆಗೆ ಸಂಬಂಧಿಸಿದಂತೆ ಕೆಲ ಮುದ್ರೆಗಳು ( ಮಣ್ಣಿನ ಫಲಕಗಳು – Mud Planks ) ಲಭ್ಯವಿವೆ .
ಆದರೂ ಅವುಗಳನ್ನು ಇದುವರೆಗೂ ಸಮರ್ಪಕವಾಗಿ ಓದಲು ಸಾಧ್ಯವಾಗಿಲ್ಲ . ಕರ್ನಾಟಕದಲ್ಲಿ ಇದುವರೆಗೆ 30,000 ಕ್ಕೂ ಅಧಿಕ ಸಂಖ್ಯೆಯ ಶಾಸನಗಳು ಲಭ್ಯವಾಗಿದ್ದು , ಅವುಗಳಲ್ಲಿ 20,000 ಕ್ಕೂ ಅಧಿಕ ಸಂಖ್ಯೆಯ ಶಾಸನಗಳು ಪ್ರಕಟವಾಗಿವೆ .
ಇವುಗಳ ಪತ್ತೆ , ಸಂಗ್ರಹ ಮತ್ತು ವಿಶ್ಲೇಷಣಾ ಕಾರ್ಯವನ್ನು ಮಾಡುವ ಕಾರ್ಯದಲ್ಲಿ ಹಲವು ವಿದ್ವಾಂಸರುಗಳು ಕಾರ್ಯ ಪ್ರವೃತ್ತರಾಗಿದ್ದಾರೆ , ಅವರುಗಳಲ್ಲಿ ಪ್ರಮುಖರಾದವ ರೆಂದರೆ ,
ರಾಬರ್ಟ್ ಬ್ರೂಸ್ ಫೂಟ್
ಮಾರ್ಟಿಮರ್ ವೀಲರ್
ಕ್ಯಾಪ್ಟನ್ ಮೆಡೋಸ್
ಆಶೋಕನನ್ನು ಶಿಲಾಶಾಸನದ ಪಿತಾಮಹ ‘ ಎಂದು ಕರೆಯಲಾಗಿದೆ .
ಟೇಲರ್
ಸಂಪತ್ ಅಯ್ಯಂಗಾರ್
ಎಂ . ಎಸ್ . ನಾಗರಾಜರಾವ್ , ಜಡ್ಡಿ .
ಅನ್ಸಾರಿ
ಆರ್ . ವಿ . ಜೋಷಿ
ಕೆ . ಪದ್ದಯ್ಯ
ಎಂ . ಶೇಷಾದ್ರಿ
ಕರ್ನಲ್ ಮೆಕೆಂಜಿ
ಸ್ಟುವರ್ಟ್ ಎಲ್ಫಿನ್ಸ್ಟನ್ ಅ ಸುಂದರ ಜೆ . ಎಫ್ ಪ್ಲೇಟ್ ಬಿ . ಎಲ್ . ( ಬೆಂಜಮಿನ್ ಲೂಯಿ ) ರೈಸ್ ( ಎಪಿಗ್ರಾಫಿಯ ಕರ್ನಾಟಕ ಮಾಲೆಯನ್ನು 12 ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ )
ಆರ್ . ನರಸಿಂಹಾಚಾರ್ಯ
ಪಿ . ಬಿ . ದೇಸಾಯಿ
ಆರ್ . ಎಸ್ . ಪಂಚಮುಖಿ
ಇನ್ನೂ ಮುಂತಾದವರು . ಶಾಸನಗಳ ಸ್ವರೂಪ ( Nature ) ವನ್ನು ಆಧರಿಸಿ ಶಾಸನಗಳನ್ನು , ದಾನಶಾಸನಗಳು ( Gift inscriptions ) ( ದೇವಾಲಯಗಳ ನಿರ್ಮಾಣ ಪಂಡಿತರು ಧರ್ಮ ಕಾರ್ಯ , ವಿದ್ಯಾಭ್ಯಾಸ
ಇನ್ನೂ ಮುಂತಾದ ಕೆಲಸಗಳಿಗೆ ದಾನ ಮಾಡುವುದರಿಂದ ಸಾರ್ಥಕ ಜೀವನವನ್ನು ಸಾಗಿಸಿದಂತೆ ಆಗುತ್ತದೆ ಎನ್ನುವ ಕಲ್ಪನೆ ಇದ್ದಿತು .
ಹಾಗಾಗಿ , ದಾನವನ್ನು ನೀಡಿದ ಸಂದರ್ಭದಲ್ಲಿ ದಾನವನ್ನು ಮಾಡುತ್ತಿದ್ದ ವ್ಯಕ್ತಿಗಳು ಕೆತ್ತಿಸುತ್ತಿದ್ದ ಶಾಸನಗಳನ್ನು ದಾನಶಾಸನಗಳು ಎಂದು ಕರೆಯಲಾಗಿದೆ ) .
ಪ್ರಶಸ್ತಿ ಶಾಸನಗಳು ( Excellence inscriptions ) ( ರಾಜರ ದಿಗ್ವಿಜಯಗಳನ್ನು ತಿಳಿಸಲು ಕೆತ್ತಿಸಿರುವ ಶಾಸನಗಳು ) , ವೀರಗಲ್ಲುಗಳು ( Heroic inscriptions ) ( ಯುದ್ಧದಲ್ಲಿ ಹೋರಾಡಿ ಮಡಿದ ವೀರರ ಸ್ಮರಣಾರ್ಥ ನಿಲ್ಲಿಸಿರುವ ಕಲ್ಲುಗಳು )
ತುರುಗೋಳ್ ( Turugol ) ( ಬಂಗಾರಕ್ಕೆ ಸಮಾನವಾಗಿದ್ದ ಹಸುವನ್ನು ಸೆರೆ ಹಿಡಿದು ಅಥವಾ ಮಹಿಳೆಯರನ್ನು ಸೆರೆ ಹಿಡಿದು ಯುದ್ಧವನ್ನು ಸಾರುತ್ತಿದ್ದರು .
ಈ ರೀತಿಯ ಸಂದರ್ಭಗಳಲ್ಲಿ ಹಸುಗಳನ್ನು ಅಥವಾ ಸ್ತ್ರೀಯರನ್ನು ಸಂರಕ್ಷಿಸಲು ಹೋಗಿ ಹೋರಾಡಿ ಮಡಿದ ವೀರರಿಗೆ ಸಂಬಂಧಿಸಿದ ಕಲ್ಲುಗಳು ,
… ಮಾಸ್ತಿಕಲ್ಲು ಅಥವಾ ಮಹಾಸತಿ ಕಲ್ಲು ( Mahasati Stone ) [ ಗಂಡ ಸತ್ತಾಗ ಅವನೊಡನೆ ಚಿತೆಯೇರುವುದನ್ನು ( ಸಹಗಮನ ) ಮತ್ತು ಗಂಡ ಎಲ್ಲೋ ಸತ್ತ ವಿಷಯವನ್ನು ತಿಳಿದು ಚಿತೆಯನ್ನು ನಿರ್ಮಿಸಿ ಚಿತೆಗೇರುವುದನ್ನು ( ಅನುಗಮನ )