hijab vs burka । ಹಿಜಾಬ್ – ಶಾಲು

ಹಿಜಾಬ್ – ಶಾಲು hijab vs burka

hijab vs burka , hijab style, mohammed hijab, chiffon hijab , ಹಿಜಾಬ್ - ಶಾಲು, hijab,  burka ,shimoga hijab, karnataka hijab

hijab vs burka , hijab style, mohammed hijab, chiffon hijab , ಹಿಜಾಬ್ – ಶಾಲು, hijab,  burka ,shimoga hijab, karnataka hijab

ಶಾಲಾ – ಕಾಲೇಜುಗಳಲ್ಲಿ ಹಿಜಾಬ್ ( ಶಿರವಸ್ತ್ರ ) ಕೇಸರಿ ಶಾಲಿಗೆ ನಿರ್ಬಂಧ ವಿಧಿಸಿ , ಸಮವಸ್ತ್ರ ಕಡ್ಡಾ ಯಗೊಳಿಸಿರುವ ಶಿಕ್ಷಣ ಆದೇಶವನ್ನು ವಿದ್ಯಾರ್ಥಿಗಳು ಧಿಕ್ಕರಿಸಿ ದ್ದಾರೆ .

ಈ ಬೆನ್ನಲ್ಲೇ , ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ವಸ್ತ್ರ ರಾಜಕೀಯ ವಿವಾದ ‘ ಸೋಮವಾರ ಮತ್ತಷ್ಟು ಜಿಲ್ಲೆಗಳಿಗೆ ಹಬ್ಬಿದೆ . ಏತನ್ಮಧ್ಯೆ , ನಿರ್ಬಂಧ ಹಿಜಾಬಗೆ ವಿಧಿಸಿರುವ ಸರ್ಕಾರದ ಆದೇಶವನ್ನು ವಿರೋಧಿಸಿ ,

ಕೆಲವು ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸಿ , ಪ್ರತಿಭಟನಾ ಬೆಂಬಲ ಸೂಚಿಸಿದರು .

ಕಾಲೇಜುಗಳಲ್ಲಿ ಬೊಮ್ಮಾಯಿ ಐಡಿಎಸ್‌ಜಿ ಹಿಜಾಬ್ ನಿಷೇಧಿಸಬೇಕೆಂಬ ಪಟ್ಟು ಹಿಡಿದಿರುವ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಪ್ರತಿಭ ಟಿಸಿದ್ದೂ ನಡೆದಿದೆ . ಇದು ಕೆಲವು ಕಡೆ ವಾಗ್ವಾದಗಳಿಗೂ ಕಾರಣವಾಗಿದೆ .

ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಕೇಸರಿ ಶಾಲಿನ ಪೈಪೋಟಿಗೆ ಪರ್ಯಾಯವಾಗಿ ,

ಹಿಜಾಬ್ ಬೆಂಬಲಕ್ಕೆ ನಿಂತ ಬಹುಜನ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಬಂದಿದ್ದಲ್ಲದೇ ,

ಜೈ ಭೀಮ್ ಘೋಷಣೆ ಕೂಗಿದರು . ಕೇಸರಿ ನೀಲಿ ಶಾಲುಗಳನ್ನು ಹಾಕಿಕೊಂಡಿದ್ದ ವಿದ್ಯಾರ್ಥಿಗಳು ಕೆಲಹೊತ್ತು ಪರಸ್ಪರ ಮುಖಾಮುಖಿಯಾದರು .

ಹಾವೇರಿಯಲ್ಲಿ ರಾಷ್ಟ್ರಧ್ವಜ ಹಿಡಿದು ಬಂದಿದ್ದ ಎಸ್‌ಎಫ್‌ಐ ನೇತೃತ್ವದ ವಿದ್ಯಾರ್ಥಿಗಳ ತಂಡ , ವಿದ್ಯಾರ್ಥಿಗಳ ಏಕತೆ ಮುರಿಯಲು ಹಿಜಾಬ್ ಕೇಸರಿ ಶಾಲು ವಿವಾದ ಸೃಷ್ಟಿಸಲಾಗಿದೆ ಎಂದು ಆಪಾದಿಸಿತು .

ಗದಗ , ಮೈಸೂರು , ಚಾಮರಾಜ ನಗರ , ಬೆಳಗಾವಿ , ಹೊಸಪೇಟೆ ವಿಜಯಪುರ , ಯಾದಗಿರಿ , ಶಹಾಪುರ , ಹುಬ್ಬಳ್ಳಿ , ತುಮಕೂರು ಜಿಲ್ಲೆ ತಿಪಟೂರು ಸೇರಿ ಹಲವು ಕಡೆಗಳಲ್ಲಿ ವಿದ್ಯಾರ್ಥಿ ನಿಯರು ಹಿಜಾಬ್ ಧರಿಸಿ ಬಂದರೆ ,

. ಅದಕ್ಕೆ ಪ್ರತಿಯಾಗಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು . ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ಒಕ್ಕೂಟದ ಕಾರ್ಯಕರ್ತರು , ‘

ಹಿಜಾಬ್ ನಮ್ಮ ಹಕ್ಕು , ನಮ್ಮ ಕಿರೀಟ , ನಮ್ಮ ಸೌಂದರ್ಯ ಇದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ‘ ಎಂದು ಘೋಷಣೆ ಕೂಗಿದರು .

ರಾಜ್ಯದ ಹಲವು ಕಡೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ನ್ನು ಬೆಂಬಲಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ , ಬಿಜೆಪಿ ಸರ್ಕಾರ ಮತ್ತು ಸಂಘ ಪರಿವಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು .

 

ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಇಂದು ಈ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಏಕಸದಸ್ಯ ನ್ಯಾಯಪಿದ ಮಂಗಳವಾರ ( ಫೆ .8 ) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ .

ರಾಜ್ಯದ ಎಲ್ಲ ಶಾಲೆ ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ಸರ್ಕಾರ ಕಳೆದ ತಿಂಗಳ 31 ರಂದು ಹೊರಡಿಸಿರುವ ಸುತ್ತೋಲೆಯನ್ನು ಪ್ರಶ್ನಿಸಿದ ಅರ್ಜಿಯೂ ಇವುಗಳಲ್ಲಿ ಸೇರಿದೆ .

ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಮು ವಿದ್ಯಾರ್ಥಿಗಳಿಗೆ ಹಿಜಾಬ್ ( ಶಿವನ ) ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವು ದನ್ನು ಪ್ರಶ್ನಿಸಲಾದ ರಿಟ್ ಅರ್ಜಿಯ ಜತೆಗೆ ಇನ್ನೂ ನಾಲ್ಕು ಅರ್ಜಿಗಳು ಹೈಕೋರ್ಟ್‌ನಲ್ಲಿ ದಾಖಲಾಗಿವೆ .

ತನಿಖೆಗೆ ಮನವಿ :

ಉಡುಪಿಯಲ್ಲಿ ಶಿರವಸ್ತ್ರ ಧರಿಸಿ ತರಗತಿಯಲ್ಲಿ ಕೂರುವ ಬಗ್ಗೆ ಪಟ್ಟು ಹಿಡಿದ ಆರು ವಿದ್ಯಾರ್ಥಿನಿ ಯರ ಹಿಂದೆ ಯಾರು ಇದ್ದಾರೆ . ಯಾವ ಕುಮ್ಮಕ್ಕಿನಿಂದ ಈ ರೀತಿ ನಡೆದುಕೊಳ್ಳು .

ತ್ತಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು ‘ ಎಂದು ಉಡುಪಿ ಶಾಸಕ ರಘುಪತಿ ಭಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದಿದ್ದಾರೆ .

ಸಮವಸ್ತ್ರ ಸುತ್ತೋಲೆ ಪಾಲಿಸಿ :

ಬೊಮ್ಮಾಯಿ ಮನವಿ ನವದೆಹಲಿ : ದೇಶದ ಶಾಲೆ ಕಾಲೇಜುಗಳಲ್ಲಿ ಯಾವ ರೀತಿಯ ಸಮವಸ್ತ್ರ ಇರಬೇಕು ಎಂಬುದನ್ನು ದೇಶದ ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ ,

ಸಮವಸ್ತ್ರ ಸಂಬಂಧ ಸರ್ಕಾರ ಈಗಾಗಲೇ ಹೊರಡಿಸಿರುವ ಸುತ್ತೋಲೆಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು ,

ಸೊಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ವಿದ್ಯಾರ್ಥಿ ಗಳಿಗೆ ವಿದ್ಯಾರ್ಜನೆ ಮುಖ್ಯ , ಪರೀಕ್ಷೆಗಳು ಹತ್ತಿರ ಆಗುತ್ತಿರುವುದರಿಂದ ಹಿಜಾಬ್ ಮತ್ತು ಕೇಸರಿ ಶಾಲಿನ ಕುರಿತು ಗೊಂದಲ ಉಂಟು ಮಾಡಬಾರದು ಎಂದು ಕೋರಿದರು .

ಈ ಪ್ರಕರಣ ಹೈಕೋರ್ಟ್ ಮುಂದಿದ್ದು , ವಿಚಾರಣೆಯ ನಂತರ ತೀರ್ಮಾನ ಹೊರಬೀಳಲಿದೆ . ಅಲ್ಲಿಯವರೆಗೆ ಸುತ್ತೋಲೆಯನ್ನು ಪಾಲಿಸಬೇಕು . ಯಾರೂ ಶಾಂತಿಯನ್ನು ಕದಡುವ ಕೆಲಸಕ್ಕೆ ಮುಂದಾಗಬಾರದು ಎಂದು ಅವರು ಮನವಿ ಮಾಡಿದರು .

 

Comments

Leave a Reply

Your email address will not be published. Required fields are marked *