June 27, 2022

ಸೌರಮಂಡಲದ ಗ್ರಹಗಳ ಬಗ್ಗೆ ಸಂಕ್ಷಿಪ್ತ

ಮಾಹಿತಿ

planetas del sistema solar / ಸೌರ ಮಂಡಲ / surya mandala stotram / fotos del sistema solar y planetas / planets names in kannada

planetas del sistema solar / ಸೌರ ಮಂಡಲ / surya mandala stotram / fotos del sistema solar y planetas / planets names in kannada

☄️ ಸೂರ್ಯನ ಗುರುತ್ವಾಕರ್ಷಣೆಗೆ ಒಳಪಟ್ಟು ಗ್ರಹಗಳು ಸೂರ್ಯನ ಸುತ್ತಲೂ ಅಂಡಾಕಾರದ ಪಥದಲ್ಲಿ ಗಡಿಯಾರದ ದಿಕ್ಕಿಗೆ ವಿರುದ್ಧವಾಗಿ ಚಲಿಸುತ್ತವೆ

☄️ಸೌರವ್ಯೂಹದಲ್ಲಿ ಈ ಮುಂಚೆ “ಒಂಬತ್ತು” ಗ್ರಹಗಳು ಇದ್ದವು 2006ರಲ್ಲಿ ಜೆಕ್ ಗಣರಾಜ್ಯದ ಪ್ರೇಗ್ ನಲ್ಲಿ ನಡೆದ ಅಂತರಾಷ್ಟ್ರೀಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಎಂಬ ಗ್ರಹವನ್ನು ತೆಗೆದುಹಾಕಿ, ಈಗ ಪ್ರಸ್ತುತ 8 ಗ್ರಹಗಳಿವೆ

☄️ ಎಂಟು ಗ್ರಹಗಳು

1) ಬುಧ ಗ್ರಹ
2) ಶುಕ್ರ ಗ್ರಹ
3) ಭೂಮಿ ಗ್ರಹ
4) ಮಂಗಳ ಗ್ರಹ
5) ಗುರು ಗ್ರಹ
6) ಶನಿ ಗ್ರಹ
7) ಯುರೇನಸ್ ಗ್ರಹ
8) ನೆಪ್ಚೂನ್ ಗ್ರಹ

1} ಬುಧ ಗ್ರಹ (Mercury)

🌞 ಸೂರ್ಯನಿಗೆ ಸಮೀಪವಾದ ಗ್ರಹ, ಮತ್ತು ಸೌರಮಂಡಲದಲ್ಲಿ ಅತ್ಯಂತ ಚಿಕ್ಕದಾದ ಗ್ರಹವಾಗಿದೆ .

🌞 ಸೂರ್ಯನಿಗೆ ಅತಿ ಸಮೀಪ ವಾಗಿರುವ ದಿಂದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹವಾಗಿದೆ

🌞 ಬುಧ ಗ್ರಹವು ಕಂದು ಬಣ್ಣದಿಂದ ಕೂಡಿದೆ

🌞 ಈ ಗ್ರಹಕ್ಕೆ ಗುರುತ್ವಾಕರ್ಷಣೆ ಕಡಿಮೆ ಇರುವುದರಿಂದ ಯಾವುದೇ ಉಪಗ್ರಹ ಹೊಂದಿರುವುದಿಲ್ಲ
=====================

2} ಶುಕ್ರ ಗ್ರಹ (venus)

▪️ ಈ ಶುಕ್ರ ಗ್ರಹವನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯುತ್ತಾರೆ

▪️ ಸೌರವ್ಯೂಹದಲ್ಲಿ ಪರಿಭ್ರಮಣ( ಸೂರ್ಯನ ಸುತ್ತ) ಅವಧಿಗಿಂತ ಅಕ್ಷ ಭ್ರಮಣದ ( ತನ್ನ ಸುತ್ತ) ಅವಧಿ ಹೆಚ್ಚು ಹೊಂದಿರುವ ಗ್ರಹವಾಗಿದೆ

▪️ ಅತಿ ಹೆಚ್ಚು ಇಂಗಾಲದ ಡೈಯಾಕ್ಸೈಡ್ ಮತ್ತು ಸಲ್ಪೂರಿಕ್ ಆಮ್ಲ ಹೊಂದಿರುವುದರಿಂದ ಇದನ್ನು ಹಸಿರುಮನೆಯ ಗ್ರಹ ಎಂದು ಕರೆಯುತ್ತಾರೆ ,

▪️ ಇದು ಅತ್ಯಂತ ಪ್ರಕಾಶಮಾನವಾದ ಗ್ರಹ, ಮುಂಜಾನೆ ನಕ್ಷತ್ರ, ಬೆಳ್ಳಿಚುಕ್ಕಿ, ಮತ್ತು ರೈತನ ನಕ್ಷತ್ರ ಎಂದು ಕರೆಯುತ್ತಾರೆ
3} ಭೂಮಿ (Earth}

🔹  ಸೂರ್ಯನಿಗೆ ಮೂರನೇ ಸಮೀಪವಾದ ಗ್ರಹವಾಗಿದೆ

🔹  ಅತ್ಯಂತ ಭಾರವಾದ ಗ್ರಹ ಮತ್ತು ಅತಿ ಹೆಚ್ಚು ನೀರನ್ನು ಒಳಗೊಂಡಿರುವುದರಿಂದ ಇದನ್ನು ಜಲಾವೃತ ಗ್ರಹ ಎಂದು ಕರೆಯುತ್ತಾರೆ

🔹  ಜೀವರಾಶಿ ಮತ್ತು ವೈವಿಧ್ಯಮಯ ಸಸ್ಯಗಳಿಂದ ಕೂಡಿದ ಸೌರವ್ಯೂಹದ ಸುಂದರ ಗ್ರಹ’ಮತ್ತು ಜೀವಂತ ಗ್ರಹ ಎಂದು ಕರೆಯುತ್ತಾರೆ

🔹  ಗಾತ್ರದಲ್ಲಿ 5ನೇ ದೊಡ್ಡ ಗ್ರಹವಾಗಿದ್ದು ನೀಲಿ ಬಣ್ಣದಿಂದ ಕೂಡಿದೆ

🔹  ಅಕ್ಷ ಭ್ರಮಣ ಅವಧಿ 23 ಗಂಟೆ 56 ನಿಮಿಷ O.4 ಸೆಕೆಂಡ್ ಇದನ್ನು ನಾಕ್ಷತ್ರಿಕ ದಿನ ಎಂದು ಕರೆಯುತ್ತಾರೆ

🔹  ಪರಿಭ್ರಮಣ ಅವಧಿ 365 ದಿನ 5ಘಂಟೆ 48 ನಿಮಿಷ, ಇದನ್ನು ನಾಕ್ಷತ್ರಿಕ ವರ್ಷ ಎಂದು ಕರೆಯುತ್ತಾರೆ

🔹 ಭೂಮಿಯ ಒಟ್ಟು70.8% ನೀರು 29.2% ರಷ್ಟು ಭೂ ಭಾಗವಿದೆ

🔹  ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ

🔹 ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಂಟು ನಿಮಿಷಗಳು ಬೇಕಾಗುತ್ತೆ, ಅದೇ ರೀತಿ ಚಂದ್ರನ ಬೆಳಕು ಭೂಮಿಯನ್ನು ತಲುಪಲು 1.3 ಸೆಕೆಂಡ್ ಬೇಕು ,
=====================
4}  ಮಂಗಳ ಗ್ರಹ (Mars)

🔸 ಸೂರ್ಯನಿಗೆ 4ನೇ ಸಮೀಪವಾದ ಗ್ರಹವಾಗಿದ್ದು, ಇದು ಹೆಚ್ಚಾಗಿ ಕಬ್ಬಿನ ಆಕ್ಸೈಡ್ ಹೊಂದಿರುವುದರಿಂದ ಇದು ಕೆಂಪುಬಣ್ಣವನ್ನು ಹೊಂದಿದೆ

🔸 ಈ ಗ್ರಹಣ ರೋಮನ್ನರ ಯುದ್ಧದೇವತೆ, ಅಂಗಾರಕ, ಕುಜಗ್ರಹ ಎಂದು ಸಹ ಕರೆಯುತ್ತಾರೆ

🔸  ಫೋಬೋಸ್ ಮತ್ತು ಡಿಮೋಸ್ ಎಂಬ ಎರಡು ಉಪಗ್ರಹಗಳನ್ನು ಹೊಂದಿದೆ

🔸  ಹೊರಮೈ ಹಲವಾರು ಜ್ವಾಲಮುಖಿ ಪರ್ವತಗಳಿಂದ ಕೂಡಿದೆ .

🔸 ಇಸ್ರೋ ಬಾಹ್ಯಾಕಾಶ ಸಂಸ್ಥೆಯು 2013ರಲ್ಲಿ ಮಂಗಳಗ್ರಹಕ್ಕೆ, ಮಾರ್ಸ್ ಆರ್ಬಿಟಲ್ ಮಿಷನ್ ಎಂಬ ಉಪಗ್ರಹವನ್ನು ಉಡಾಯಿಸಿತು,
=====================

5)  ಗುರು ಗ್ರಹ

🌷 ಸೂರ್ಯನಿಗೆ 5ನೇ ಸಮೀಪವಾದ ಗ್ರಹ ಮತ್ತು ಸೌರಮಂಡಲದ ಅತ್ಯಂತ ದೊಡ್ಡ ಗ್ರಹ

🌷 ಶುಕ್ರಗ್ರಹದ ನಂತರ ಅತಿ ಹೆಚ್ಚು ಪ್ರಜ್ವಲಿಸುವ ಎಡನೇ ಗ್ರಹವಾಗಿದೆ

🌷 ಈ ಗುರು ಗ್ರಹ ಸೌರಮಂಡಲದಲ್ಲಿ ಅತಿ ಕಡಿಮೆ ಅಕ್ಷಭ್ರಮಣ ಅವಧಿಯನ್ನು ಹೊಂದಿರುವ ಗ್ರಹ (9ಘಂಟೆ 50ನಿಮಿಷ )

🌷 ಸರವ್ಯೂಹದಲ್ಲಿ ಅತಿ ಹೆಚ್ಚು ನೈಸರ್ಗಿಕ ಉಪಗ್ರಹಗಳನ್ನು ಹೊಂದಿರುವ ಗ್ರಹ ,

🌷 ಗುರುಗ್ರಹದ ಪ್ರಮುಖ ಉಪಗ್ರಹಗಳು ಗ್ಯಾನಿಮೇಡ್ , ಐಓ , ಯುರೋಪ್ , ಮತ್ತು ಕ್ಯಾಲಿಸ್ಟೊ , ಇವುಗಳನ್ನು ಗೆಲಿಲಿಯೋ ಗುರುತಿಸುವುದರಿಂದ ಗೆಲಿಲಿಯೋ ಉಪಗ್ರಹಗಳ ಎಂದು ಸಹ ಕರೆಯುತ್ತಾರೆ,

🌷 ಗಯಾನಿಮೇಡ್ ಎಂಬ ಉಪಗ್ರಹವು ಸೌರಮಂಡಲದಲ್ಲಿ ಅತಿದೊಡ್ಡ ಉಪಗ್ರಹವಾಗಿದೆ,

🌷 ಗುರುಗ್ರಹದ ಕೆಲವು ಉಪಗ್ರಹಗಳು ಗುರುಗ್ರಹದ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತವೆ .
=====================

6) ಶನಿ ಗ್ರಹ (Saturn)

🔅  ಸೌರಮಂಡಲದಲ್ಲಿ ಎರಡನೇ ದೊಡ್ಡ ಗ್ರಹವಾಗಿದೆ

🔅  ಸುತ್ತಲೂ ಬಳೆಗಳನ್ನು ಹೊಂದಿದೆ

🔅 ಸೌರಮಂಡಲದಲ್ಲಿಯೇ ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ

🔅  ಪ್ರಮುಖ ಉಪಗ್ರಹ ಟೈಟಾನ್

🔅  ಆಕಾಶಕಾಯಗಳಲ್ಲಿ ಉಂಗುರಗಳಿಂದ ಕೂಡಿದೆ, ಈ ಗ್ರಹವು ಉಂಗುರಗಳ ವ್ಯವಸ್ಥೆ ಹೊಂದಿದೆ ಎಂದು (1655ರಲ್ಲಿ )ತಿಳಿಸಿದರು ಕ್ರಿಶ್ಚಿಯನ್ ಹೇಗೇನ್ಸ್ ಅವರು. ನಂತರ1675ರಲ್ಲಿ ಕ್ಯಾಸಿನೊ ಅವರು ಈ ಗ್ರಹದ ಉಂಗುರಗಳು ಬಿಡಿಬಿಡಿಯಾಗಿ ವೆ, ಮತ್ತು ಮಂಜುಗಡ್ಡೆ ಅಂತ ವಸ್ತುಗಳಿಂದ ನಿರ್ಮಾಣವಾಗಿದೆ ಎಂದು ಹೇಳಿದರು

🔅  ಸೌರಮಂಡಲದಲ್ಲಿಯೇ ಅತಿಸುಂದರ ಗ್ರಹವಾಗಿದೆ
=====================

7) ಯುರೇನಸ್ ಗ್ರಹ (Urenus)

ಸೂರ್ಯನಿಗೆ 7ನೇ ಸಮೀಪವಾದ ಗ್ರಹ ,

 

 

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

https://t.me/samagratv_com

ಇತರೆ ವಿಷಯಗಳು :

ರಾಷ್ಟ್ರಪತಿ ನೇಮಕ

ಉಪರಾಷ್ಟ್ರಪತಿ ನೇಮಕ &ಅಧಿಕಾರ

ಪ್ರಧಾನ ಮಂತ್ರಿ ನೇಮಕ

ಪ್ರಧಾನ ಮಂತ್ರಿ ಅಧಿಕಾರ

 

Leave a Reply

Your email address will not be published.