June 26, 2022

ಕಣ್ಣು

eyes, glaucoma, astigmatism, eye doctor near me, ophthalmologist, pink eye, optometrist, hazel eyes, macular degeneration, cataract

eyes, glaucoma, astigmatism, eye doctor near me, ophthalmologist, pink eye, optometrist, hazel eye, macular degeneration, cataract

ಕಣ್ಣುಗಳು ದೃಷ್ಟಿಯ ಜ್ಞಾನೇಂದ್ರಿಯಗಳು , ನಮಗೆ , ವಸ್ತುವಿನ ಬಣ್ಣ , ಗಾತ್ರ ಮತ್ತು ದೂರದ ಅರಿವು , ಬೆಳಕಿನ ಸಮ್ಮುಖದಲ್ಲಿ ಕಣ್ಣುಗಳಿಂದಾಗುತ್ತದೆ . ಕಣ್ಣುಗಳು ತಲೆಯಲ್ಲಿ ಮುಖದ ಮುಂಭಾಗದಲ್ಲಿವೆ . ಒಂದೊಂದು ಕಣ್ಣ ಒಂದೊಂದು ಕಣ್ಣುಗುಡ್ಡೆಯನ್ನು ಹೊಂದಿದೆ .

ಈ ಕಣ್ಣುಗುಡ್ಡೆಗಳು ತಲೆ ಬುರುಡೆ ಯ ಗುಳಿಗಳಲ್ಲಿವೆ . ಪ್ರತಿ ಕಣ್ಣುಗುಡ್ಡೆಯು , ಸ್ನಾಯುಗಳಿಂದ ಬಂಧಿತವಾಗಿದ್ದು , ಕಣ್ಣುಗುಡ್ಡೆಯನ್ನು ನಾನಾ ದಿಕ್ಕುಗಳಿಗೆ ತಿರುಗಿಸಲು ಸಹಾಯಕವಾಗಿದೆ .

ನಮ್ಮ ಕಣ್ಣುಗಳ ಜೊತೆಗೆ ಇನ್ನೂ ಕೆಲವು ಭಾಗಗಳಿದ್ದು , ಅವು ಕಣ್ಣಿನ ಕಾರ್ಯಗಳಿಗೆ , ನೇರವಾಗಿ ಅಥವಾ ಪರೋಕ್ಷವಾಗಿ ಸಹಾಯಕವಾಗಿವೆ . ಇವುಗಳನ್ನು ಕಣ್ಣಿನ ಸಹಾಯಕ ಭಾಗಗಳು ( ac cessory parts ) ಎಂದು ಕರೆಯುತ್ತಾರೆ .

ಕೆಲವೊಮ್ಮೆ ನಮ್ಮ ಕಣ್ಣುಗಳು ಕಣ್ಣೀರನ್ನು ಸ್ರವಿಸುತ್ತವೆ . ನಮ್ಮಲ್ಲಿ ಕಣ್ಣೀರನ್ನು ಸ್ರವಿಸುವ ಅಶುಗ್ರಂಥಿ ( Lac rymal ) ಗಳಿವೆ . ಇವು ಮೇಲಿನ ರೆಪ್ಪೆಗಳ ಒಳಮೆನಲ್ಲಿವೆ . ಕಣ್ಣಿನ ಮುಂಭಾಗವನ್ನು ಪೂರ್ಣವಾಗಿ ಒಂದು ತೆಳುವಾದ , ಪಾರದರ್ಶಕ ಪೊರೆ ಆವರಿಸಿದೆ . ಇದೇ ಕಂಜಕ್ಟಿವೆ , ಇದು ಕಾರ್ನಿಯಾವನ್ನು ರಕ್ಷಿಸುತ್ತದೆ .

ಕಣ್ಣಿನ ರಚನೆ

ಮಾನವನ ಕಣ್ಣಿನ ನೀಳಛೇದದ ಚಿತ್ರ ( 20 . !! ) ವನ್ನು ಗಮನಿಸಿ , ಕಣ್ಣಿನಗುಡ್ಡೆ ಗೋಳಾಕಾರದಲ್ಲಿದೆ . ಇದರ ಭಿತ್ತಿ ಮೂರು ಪವರಗಳನ್ನು ಹೊಂದಿದೆ . ಅವು ಸ್ಟೀರಾ , ಕೊರಾಯಿಡ್ ಮತ್ತು ಅಕ್ಷಿಪಟಲ ( retina ) .

ಕಣ್ಣಿನ ಅತ್ಯಂತ ಹೊರಪದರ ರಾ ಬಿಳಿ ಬಣ್ಣದಲ್ಲಿದ್ದು , ದಪ್ಪಗಿದ್ದು , ಅಪಾರದರ್ಶಕವಾಗಿದೆ ಮತ್ತು ಫೈಬ್ರಸ್ ಸಂಯೋಜಕ ಅಂಗಾಂಶದಿಂದಾಗಿದೆ . ಕಣ್ಣು ಗುಡ್ಡೆಯ ಮುಂಭಾಗ ತೆಳುವಾಗಿ , ಪಾರದರ್ಶಕವಾಗಿದೆ . ಈ ಪೊರೆಯನ್ನು ಕಾರ್ನಿಯಾ ಎಂದು ಕರೆಯುತ್ತಾರೆ .

ಮಧ್ಯದಲ್ಲಿರುವ ಎರಡನೆಯ ಪದರವೇ ಕೊರಾಯಿಡ್ . ಇದರಲ್ಲಿ ಕಪ್ಪುವರ್ಣಿಕೆ ಇದ್ದು ಹೆಚ್ಚು ರಕ್ತನಾಳ ಮತ್ತು ನರಗಳಿಂದ ಕೂಡಿದೆ . ಆಟೋಡಿಸಿ ಕೊರಾಯಿಡ್ , ಕಣ್ಣಿನ ಮುಂಭಾಗದಲ್ಲಿನ ಮಧ್ಯಭಾಗವನ್ನು ಬಿಟ್ಟು ಉಳಿದೆಲ್ಲ ಭಾಗಗಳನ್ನು ಪೂರ್ಣವಾಗಿ ಆವರಿಸುತ್ತದೆ . ಮಧ್ಯಭಾಗದ ಈ ರಚನೆಯೇ ಕಣ್ಣುಪಾಜೆ ( pupil ) .

ಇದರ ಮೂಲಕವೇ ಬೆಳಕು , ಕಣ್ಣಿನ ಗುಡ್ಡೆಯೊಳಕ್ಕೆ ಹಾದುಹೋಗುತ್ತದೆ . ಕಂದು , ಕಪ್ಪು , ಬೂದು , ಕೆಲವೊಮ್ಮೆ ನೀಲಿ ಮತ್ತು ಹಸಿರು ಬಣ್ಣದ ಕಣ್ಣುಗಳಿರುವ ಜನರನ್ನು ನಾವು ನೋಡುತ್ತೇವೆ .

ಕಣ್ಣಿನ ವಿವಿಧ ಬಣ್ಣಗಳಿಗೆ ಕಾರಣವೇನು ? ಕಣ್ಣು ಗುಡ್ಡೆಯ ಮುಂಭಾಗದಲ್ಲಿ , ಕಣ್ಣುಪಾಪೆಯ ಸುತ್ತಲೂ , ಸ್ನಾಯುವಿನ ಒಂದು ಪದರವನ್ನು ಕೊರಾಯಿಡ್ ರಚಿಸಿದೆ . ಇದನ್ನು ವರ್ಣಪಟಲ ( iris ) , ಎನ್ನುವರು

. ವರ್ಣಪಟಲದಲ್ಲಿರುವ ಬಣ್ಣದ ವಸ್ತುಗಳು , ಜನರಲ್ಲಿನ ಕಣ್ಣಿನ ವಿವಿಧ ಬಣ್ಣಗಳಿಗೆ ಕಾರಣ .

ಕಣ್ಣಿನ ಅತ್ಯಂತ ಒಳಪದರ ಅಕ್ಷಿಪಟಲ , ಇದರಲ್ಲಿ ದೃಶ್ಯಗ್ರಾಹಕ ಕೋಶ ( visual receptors ) ಗಳಾದ ರಾಡ್ ಮತ್ತು ಕೋನ್‌ಗಳಿವೆ . ರಾಡ್ ಕೋಶಗಳು ಮಂದವಾದ ಬೆಳಕನ್ನು ಗ್ರಹಿಸಬಲ್ಲವು . ಆದರೆ ಬಣ್ಣಗಳನ್ನು ಗುರುತಿಸಲಾರವು .

ಕೋನ್ ಕೋಶಗಳು , ಪ್ರಕಾಶಮಾನವಾದ ಬೆಳಕನ್ನು ಗ್ರಹಿಸಬಲ್ಲವು ಮತ್ತು ಬಣ್ಣಗಳನ್ನು ಗುರುತಿಸಬಲ್ಲವು . ರಾಡ್ ಮತ್ತು ಕೋನ್ ಕೋಶಗಳು , ಅಕ್ಷಿಪಟಲದ ಮೇಲೆ ಸಮನಾಗಿ ಹರಡಿಕೊಂಡಿಲ್ಲ .

ಕಣ್ಣುಪಾಪೆಗೆ ಎದುರಾಗಿರುವ ಕಣ್ಣಿನ ಹಿಂಭಾಗದ ಬಳಿ , ಸ್ವಲ್ಪ ತಗ್ಗಿದ , ಅಕ್ಷಿಪಟಲದ ಭಾಗದಲ್ಲಿ ಕೋನ್ ಕೋಶಗಳು ಹೆಚ್ಚಾಗಿರುತ್ತವೆ . ಇದನ್ನು ಹಳದಿ ಪ್ರದೇಶ ( fovea ) , ಎಂದು ಕರೆಯುತ್ತಾರೆ . ಈ ಪ್ರದೇಶದಲ್ಲಿ ದೃಷ್ಟಿಯು ,

ಅತ್ಯಂತ ಹರಿತವಾಗಿ , ಸ್ಪಷ್ಟವಾಗಿರುತ್ತದೆ . ಆಕ್ಷಿಪಟಲದ ಎಲ್ಲ ಜ್ಞಾನವಾಹಿ ನರಗಳೂ ಒಟ್ಟಾಗಿ ಚಾಕ್ಷುಷ ( optic ) ನರವಾಗಿ ಹಳದಿ ಪ್ರದೇಶದ ಕೆಳಗೆ , ಕಣ್ಣುಗುಡ್ಡೆಯಿಂದ ಹೊರಬರುತ್ತದೆ .

ಈ ಪ್ರದೇಶದಲ್ಲಿ ಜ್ಞಾನವಾಹಿ ಕೋಶಗಳು ಇಲ್ಲದಿರುವುದರಿಂದ ಇಲ್ಲಿ ಯಾವುದೇ ಪ್ರತಿಬಿಂಬ ಮೂಡುವುದಿಲ್ಲ , ಅದಕ್ಕೆ ಈ ಪ್ರದೇಶವನ್ನು ಅಂಧಪ್ರದೇಶ ( blind Spot ) ಎನ್ನುವರು ,

ಚಾಕ್ಷುಷನರವು , ಜ್ಞಾನವಾಹಿ ನರವಾಗಿದ್ದು , ದೃಶ್ಯದ ಆವೇಗಗಳನ್ನು ಮಿದುಳಿನ ಮಹಾಮಸ್ತಿಷ್ಯಕ್ಕೆ ಒಯ್ಯುತ್ತದೆ .

ಕಣ್ಣಿನ ಮುಂಭಾಗದಲ್ಲಿ ಪಾಪೆಯ ಹಿಂಭಾಗದಲ್ಲಿ ಪಾರದರ್ಶಕವಾದ ಒಂದು ಉನ್ನತ ಮಸೂರವಿದೆ . ಸಿಲಿಯರಿ ಸ್ನಾಯುಗಳು , ಆಲಂಬಕ ಸ್ನಾಯುತಂತುಗಳು ಮಸೂರವು , ತನ್ನ ಸ್ಥಾನದಲ್ಲಿರುವಂತೆ ಹಿಡಿದಿಟ್ಟಿವೆ .

ಸಿಲಿಯರಿ ಸ್ನಾಯುಗಳು ತಮ್ಮ ಸಂಕುಚನೆ ಮತ್ತು ವಿಕಸನೆಯಿಂದ ಕಣ್ಣು ಹಾಗೂ ವಸ್ತುವಿನ ದೂರಕ್ಕನುಗುಣವಾಗಿ ಮಸೂರದ ವಕ್ರತೆಯನ್ನು ಹೊಂದಿಸುತ್ತವೆ .

ಮಸೂರ ಮತ್ತು ಕಾರ್ನಿಯಾದ ನಡುವೆ ಇರುವ ಚಿಕ್ಕ ಅವಕಾಶವನ್ನು ಜಲರಸಧಾತು ( aqueous humour ) ಎಂಬ ಪಾರದರ್ಶಕವಾದ ದ್ರವತುಂಬಿಕೊಂಡಿದೆ .

ಮಸೂರದ ಹಿಂದೆ ಇರುವ ದೊಡ್ಡ ಪ್ರದೇಶವನ್ನು ಕಾಚಕರಸಧಾತು ( vitreous humour ) ಎಂಬ ಮಂದವಾದ ದ್ರವ ತುಂಬಿಕೊಂಡಿದೆ .

 

ಮಾನವನ ಕಣ್ಣಿನ ಕಾರ್ಯವಿಧಾನ

ರಾಸಾಯನಿಕ ವಸ್ತುಗಳನ್ನು ನೋಡಲು ಬೆಳಕು ಅಗತ್ಯ ವಸ್ತುವಿನಿಂದ ಪ್ರತಿಫಲಿತವಾದ ಬೆಳಕಿನ ಕಿರಣಗಳು , ಕಂಜಕ್ಟಿವ , ಕಾರ್ನಿಯ , ಪಾಪೆ ಮತ್ತು ಮಸೂರದ ಮೂಲಕ ಕಣ್ಣನ್ನು ಪ್ರವೇಶಿಸಿ , ಅಕ್ಷಿಪಟಲದ ಮೇಲೆ ಕೇಂದ್ರೀಕರಿಸಿದಾಗ , ಚಿಕ್ಕದಾದ , ನೈಜ ಮತ್ತು ತಲೆಕೆಳಗಾದ ಪ್ರತಿಬಿಂಬವು ಅಕ್ಷಿಪಟಲದ ಮೇಲೆ ಉಂಟಾಗುತ್ತದೆ .

ದೃಶ್ಯಗ್ರಾಹಕಕೋಶ ( ರಾಡ್ಸ್ ಮತ್ತು ಕೋನ್ ) ಗಳಲ್ಲಿ ಬೆಳಕಿನ ಕಿರಣಗಳ ಚೋದನೆಯಿಂದ ಬದಲಾವಣೆಗಳಾಗುತ್ತವೆ . ಇವುಗಳನ್ನು ದ್ಯುತಿ ರಾಸಾಯನಿಕ ಬದಲಾವಣೆಗಳು ಎನ್ನುವರು .

ನಂತರ ಇವುಗಳನ್ನು ವಿದ್ಯುತ್ ಆವೇಗಗಳನ್ನಾಗಿ ಪರಿವರ್ತಿಸುತ್ತವೆ . ಚಾಕ್ಷುಷ ನರಗಳು ಈ ಆವೇಗಗಳನ್ನು ಮಸ್ತಿಷ್ಕದ ದೃಷ್ಟಿ ಕೇಂದ್ರಕ್ಕೆ ಸಾಗಿಸುತ್ತವೆ . ದೃಷ್ಟಿಕೇಂದ್ರವು , ಇವುಗಳನ್ನು ಅರ್ಥೈಸಿದಾಗ , ದೃಷ್ಟಿ ಪರಿಣಮಿಸುತ್ತದೆ

ಮಾನವನ ಕಣ್ಣುಗಳಿಗೆ ಹತ್ತಿರದ ಹಾಗೂ ದೂರದ ವಸ್ತುಗಳೆರಡನ್ನೂ ಸ್ಪಷ್ಟವಾಗಿ ನೋಡುವ ಸಾಮರ್ಥ್ಯವಿದೆ . ಇದಕ್ಕೆ ಕಾರಣ ಮಸೂರವು ಪ್ರತಿಬಿಂಬಗಳನ್ನು ಅಕ್ಷಿಪಟಲದ ಹಳದಿ ಪ್ರದೇಶದ ಮೇಲೆ ಸಂಧಿಗೂಡಿಸುವುದಕ್ಕಾಗಿ ತನ್ನ ಸಂಗಮದೂರವನ್ನು ಬದಲಾಯಿಸಿಕೊಳ್ಳುತ್ತದೆ .

ದೂರದ ವಸ್ತುವನ್ನು ನೋಡುವಾಗ ಮಸೂರದ ವಕ್ರತೆಯು ಕಡಿಮೆಯಾಗುತ್ತದೆ ಮತ್ತು ಕಣ್ಣುಗುಡ್ಡೆ ಚಪ್ಪಟೆಯಾಗುತ್ತದೆ . ಇದ ಕೈ ಬದಲಾಗಿ ಹತ್ತಿರದ ವಸ್ತುವನ್ನು ನೋಡುವಾಗ ಮಸೂರದ ವಕ್ರತೆ ಹೆಚ್ಚಾಗುತ್ತದೆ ಮತ್ತು ಕಣ್ಣುಗುಡ್ಡೆ ಉಬ್ಬುತ್ತದೆ . ಮಸೂರದ ಈ ಸಾಮರ್ಥ್ಯವನ್ನು ಕಣ್ಣಿನ ಹೊಂದಾಣಿಕೆ ( accommodation of the eye ) ಎಂದು ಕರೆಯಲಾಗುತ್ತದೆ .

ಕಣ್ಣಿನ ಸಾಮಾನ್ಯ ದೋಷಗಳು

ನಿಮ್ಮ ಕೆಲವು ಸ್ನೇಹಿತರು ಅಥವಾ ಅಕ್ಕಪಕ್ಕದವರು ಕನ್ನಡಕಗಳನ್ನು ಧರಿಸಿರುವುದನ್ನು ನೋಡಿದ್ದೀರಿ . ನಿಮ್ಮ ತಾಯಿ , ತಂದೆ ಅಥವಾ ಅಜ್ಜಿ , ಅಜ್ಜಂದಿರು , ಕನ್ನಡಕಗಳನ್ನು ಉಪಯೋಗಿಸುತ್ತಿರಬಹುದು .

ಅವರು ಏತಕ್ಕಾಗಿ ಕನ್ನಡಕಗಳನ್ನು ಧರಿಸುತ್ತಾರೆ ? ಅವರು ಕಣ್ಣಿನ ದೋಷಗಳನ್ನು ಹೊಂದಿರಬಹುದು . ಈ ದೋಷಗಳನ್ನು ಸರಿಯಾಗಿ ಪತ್ತೆಹಚ್ಚಿ ಸರಿಪಡಿಸಬಹುದೆ ? ಹತ್ತಿರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣುವ ಆದರೆ ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣದ ವ್ಯಕ್ತಿಯನ್ನು ನೋಡಿದ್ದೀರಾ ?

ಇಂಥ ವ್ಯಕ್ತಿಗೆ ದೂರದ ವಸ್ತುಗಳು ಅಸ್ಪಷ್ಟವಾಗಿ ಅಥವಾ ಮಸುಕಾಗಿ ಕಾಣುತ್ತವೆ . ಇದನ್ನು ಮಯೋಪಿಯ ಅಥವಾ ಸಮೀಪದೃಷ್ಟಿ ಎನ್ನುವರು . ಇಂಥ ಸಂದರ್ಭದಲ್ಲಿ ಆ ವ್ಯಕ್ತಿಯ ಕಣ್ಣಿನ ಗುಡ್ಡೆಯು ಸಹಜಸ್ಥಿತಿಯ ಕಣ್ಣಿಗಿಂತಲೂ ಉದ್ದವಾಗಿರುತ್ತದೆ .

ಅಥವಾ ಮಸೂರವು ಬಹಳ ಮಂದವಾಗಿದ್ದು ದೂರದ ವಸ್ತುಗಳ ಪ್ರತಿಬಿಂಬವು ಅಕ್ಷಿಪಟಲದ ಮುಂದೆ ಉಂಟಾಗುತ್ತದೆ . ಸೂಕ್ತ ಸಂಗಮ ದೂರವನ್ನು ಹೊಂದಿದ ನಿಮ್ನಮಸೂರ ( concave lens ) ವನ್ನು ಉಪಯೋಗಿಸಿ ಈ ದೋಷವನ್ನು ನಿವಾರಿಸಬಹುದು . ( ಬಳಸಿದ ಮಸೂರದ ಸಾಮರ್ಥ್ಯವನ್ನು ಮೈನಸ್ ( – ) ಎಂದು ಸೂಚಿಸುವರು . )

ದೂರದ ವಸ್ತುಗಳು ಸ್ಪಷ್ಟವಾಗಿ ಕಾಣುವ , ಹತ್ತಿರದ ವಸ್ತುಗಳು ಸರಿಯಾಗಿ ಕಾಣದ ವ್ಯಕ್ತಿಗಳನ್ನು ನೋಡಿದ್ದೀರಾ ? ಇಂಥವರಿಗೆ ಹತ್ತಿರದ ವಸ್ತುಗಳು ಅಸ್ಪಷ್ಟವಾಗಿ ಅಥವ ಮಸುಕಾಗಿ ಕಾಣುತ್ತವೆ . ಈ ಸ್ಥಿತಿಯನ್ನು ಹೈಪರ್ ಮೆಟ್ರೋಪಿಯ ಅಥವಾ ದೂರದೃಷ್ಟಿ ಎನ್ನುವರು ,

ಇಂತಹವರ ಕಣ್ಣು ಗುಡ್ಡೆಯ ಅಸ್ವಾಭಾವಿಕವಾಗಿ ಚಿಕ್ಕದಾಗಿರುವುದು ಅಥವಾ ಮಸೂರವು ತೆಳ್ಳಗಿರುವುದು . ಹೀಗಿದ್ದಾಗ ವಸ್ತುಗಳ ಪ್ರತಿಬಿಂಬವು ಆಕ್ಷಿಪಟಲದ ಹಿಂದೆ ಉಂಟಾಗುತ್ತದೆ . ಕಣ್ಣಿಗೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ದೊರಕದಿದ್ದಾಗ ಈ ದೋಷ ಉಂಟಾಗುವುದು .

ವಯಸ್ಸಾದ ಕೆಲವರಲ್ಲಿ ಕಣ್ಣಿನ ಹೊಂದಾಣಿಕೆಗೆ ಸಂಬಂಧಿಸಿದಂತೆ ದೋಷ ಉಂಟಾಗಬಹುದು . ಮಸೂರವು ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಳ್ಳಬಹುದು .

ಅಲ್ಲದೆ ಮಸೂರವು ಗಡುಸಾಗಿ ದೂರದೃಷ್ಟಿಗೆ ಕಾರಣವಾಗಬಹುದು , ಇದನ್ನೇ ಪ್ರೆಸ್‌ ಬಯೋಪಿಯ ಎನ್ನುವರು ಇದನ್ನು ಉನ್ನತಮಸೂರವನ್ನು ಉಪಯೋಗಿಸಿ ಸರಿಪಡಿಸಬಹುದು

ವಯಸ್ಸಾದ ಕೆಲವರು ಅಥವಾ ನಿಮ್ಮ ಅಜ್ಜ ಅಜ್ಜಂದಿರು ತಮ್ಮ ಮಸುಕಾದ ದೃಷ್ಟಿಯ ಬಗ್ಗೆ ಹೇಳಿರಬಹುದು . ಜತೆಗೆ ತಮ್ಮ ಕಣ್ಣಿನಲ್ಲಿ ಒಂದು ಮೊರೆ ಉಂಟಾಗಿರುವುದರ ಬಗ್ಗೆ ಹೇಳಿರಬಹುದು . ಇದನ್ನೇ ಚಾಳೀಸು ( ಕ್ಯಾಟರಾಕ್ಟ್ ) ಎನ್ನುವರು .

ಕಣ್ಣಿನ ಮಸೂರವು ಆಪಾರದರ್ಶಕವಾಗುವುದರಿಂದ ಕ್ಯಾಟರಾಕ್ಟ್ ಉಂಟಾಗುತ್ತದೆ . ಇದನ್ನು ಕೃತಕ ಮಸೂರ ಅಥವಾ ಕಾರ್ನಿಯಾವನ್ನು ಜೋಡಿಸಿ ಸರಿಪಡಿಸಬಹುದು . ಸತ್ಯವ್ಯಕ್ತಿಯ ದೇಹದಿಂದ ಕಣ್ಣು ಅಥವಾ ಕಾರ್ನಿಯಾವನ್ನು ತೆಗೆದು ಸಂರಕ್ಷಿಸಿ ಅಗತ್ಯ ವುಳ್ಳ ವ್ಯಕ್ತಿಗಳಿಗೆ ಕಸಿಮಾಡಬಹುದು .

ಡಯಾಬಿಟಿಸ್ , ಮಾನವನಿಗೆ ಬರುವ ಒಂದು ಹಾನಿಕಾರಕ ನ್ಯೂನತೆ ಎಂಬುದನ್ನು ಕೇಳಿದ್ದೀರಿ . ದೀರ್ಘಕಾಲದ ಡಯಾಬಿಟಿಸ್‌ನಿಂದ ನರಳುವ ವ್ಯಕ್ತಿ , ದೃಷ್ಟಿಯನ್ನು ಕಳೆದುಕೊಳ್ಳಬಹುದು .

ಇದಕ್ಕೆ ಕಾರಣ ಡಯಾಬಿಟಿಸ್ ರೆಟಿನೋಪತಿ ಈ ನ್ಯೂನತೆಯಲ್ಲಿ ಅಕ್ಷಿಪಟಲದಲ್ಲಿರುವ ರಕ್ತಲೋಮನಾಳಗಳು ಒಡೆದು , ರಕ್ತವು ಕಾಚಕ ರಸಧಾತುವನ್ನು ಸೇರಿ , ಅದನ್ನು ಅಪಾರ ದರ್ಶಕವನ್ನಾಗಿಸುತ್ತದೆ .

ಇದು ಕುರುಡುತನಕ್ಕೆ ಕಾರಣವಾಗುತ್ತದೆ . ಈ ದೋಷವನ್ನು ಲೇಸರ್ ಚಿಕಿತ್ಸೆಯಿಂದ ಅಥವಾ ವಿಟಿಮಿ ಎಂಬ ಶಸ್ತ್ರಚಿಕಿತ್ಸೆಯಿಂದ ನಿವಾರಿಸಬಹುದು .

 ಅಸಮ ದೃಷ್ಟಿ

ದೋಷ ಈ ದೋಷವಿರುವ ವ್ಯಕ್ತಿಗಳಲ್ಲಿ ಮಸೂರ ಅಥವಾ ಕಾರ್ನಿಯಾಗಳ ಪ್ರತಿಫಲನ ಮೇಲೆ ಅಸಮವಾಗಿರುವುದರಿಂದ , ಪ್ರತಿಬಿಂಬದ ಒಂದು ಭಾಗವು ಅಕ್ಷಿಪಟಲದ ಮೇಲೆ ಮಸುಕಾಗಿ ಮೂಡುತ್ತದೆ .

ಈ ಸ್ಥಿತಿಯನ್ನು ಅಸಮ ದೃಷ್ಟಿ ದೋಷ ( astigmatism ) , ಎನ್ನುವರು . ಈ ದೋಷವನ್ನು ಸಿಲಿಂಡರ್‌ ಆಕೃತಿಯ ಸೂಕ್ತ ಮಸೂರದ ಬಳಕೆಯಿಂದ ನಿವಾರಿಸಬಹುದು .

40-50 ವರ್ಷಗಳಿಗಿಂತ ಮೇಲ್ಪಟ್ಟ ಕೆಲವರು , ಕುರುಡುತನಕ್ಕೆ ಕಾರಣವಾಗುವಂಥ ಗಂಭೀರ ಕಾಯಿಲೆಯಿಂದ ನರಳುತ್ತಿರಬಹುದು . ಇದನ್ನು ಗ್ಲಾಕೋಮಾ ಎನ್ನುವರು .

ಈ ದೋಷದಿಂದ ನರಳುವವರು ಪ್ರಾರಂಭದಲ್ಲಿ ವಸ್ತುವಿನ ಸುತ್ತ ಬಣ್ಣ ಬಣ್ಣದ ಉಂಗುರಗಳನ್ನು ಕಾಣುವರು . ಇದು ಹೇಗೆ ಉಂಟಾಗುತ್ತದೆ ? ಕಣ್ಣು ಗುಡ್ಡೆಯು ಕ್ರಮೇಣವಾಗಿ ಗಡುಸಾಗುವುದೇ ಇದಕ್ಕೆ ಮುಖ್ಯಕಾರಣ ,

ಪ್ರಾರಂಭದಲ್ಲಿ ಔಷಧಿಗಳಿಂದ ಇದನ್ನು ನಿವಾರಿಸಬಹುದು . ಮುಂದುವರಿದ ಹಂತಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು .

ಕಣ್ಣಿನಲ್ಲಿ ಸೇರುವ ಹೊರವಸ್ತುಗಳನ್ನು ತೆಗೆಯಲು , ಪ್ರಥಮ ಚಿಕಿತ್ಸೆ

ಆಕಸ್ಮಿಕವಾಗಿ ಸಣ್ಣ ಕೀಟಗಳು , ಧೂಳಿನ ಕಣಗಳು , ಲೋಹದ ಅಥವಾ ಮರದ ಚೂರುಗಳು , ಕಣ್ಣನ್ನು ಪ್ರವೇಶಿಸಬಹುದು . ಇಂಥ ಸಂದರ್ಭದಲ್ಲಿ ಕಣ್ಣನ್ನು ಉಜ್ಜಿ ಪರಿಸ್ಥಿತಿಯನ್ನು ಹದಗೆಡಿಸಬಾರದು .

ಹೊರ ವಸ್ತುವು ಕಾಣುವಂತಿದ್ದರೆ ಸ್ವಚ್ಛವಾದ ಕೈನಿಂದ ಅಥವಾ ಒಂದು ಬಟ್ಟೆಯ ಚೂರಿನಿಂದ ತೆಗೆಯ ಬಹುದು ಇಲ್ಲವೆ ಸ್ವಚ್ಚವಾದ ನೀರು ಅಥವಾ ಬೋರಿಕ್ ದ್ರಾವಣ ಇರುವ ಬೋಗುಣಿಯಲ್ಲಿ ಕಣ್ಣನ್ನು ಕೆಲಕಾಲ ಮುಚ್ಚಿ ತೆರೆಯಬೇಕು .

 

ನಮ್ಮ ಕಣ್ಣುಗಳ ಬಗ್ಗೆ ಎಚ್ಚರ ವಹಿಸಬೇಕು . ಅಲ್ಲದೆ , ಕುರುಡುತನ ಉಂಟುಮಾಡುವಂತಹ ಸಂದರ್ಭಗಳನ್ನು ತಡೆಯಬೇಕು .

 ಕಣ್ಣಿನ ಬಗ್ಗೆ ಎಚ್ಚರಿಕೆ

ಮಸುಕಾದ ಬೆಳಕಿನಲ್ಲಿ ಚಿಕ್ಕ ಅಕ್ಷರಗಳಿರುವ ಪುಸ್ತಕಗಳನ್ನು ದೀರ್ಘಕಾಲ ಓದಿ ಕಣ್ಣಿಗೆ ಶ್ರಮ ಕೊಡಬಾರದು . . . . . .

ರಸ್ತೆ ಪ್ರಯಾಣ ಮಾಡುವಾಗ ಪುಸ್ತಕಗಳನ್ನು ಓದಬಾರದು .

ಬೆಳಕಿನ ಪ್ರಕಾಶ ಕಣ್ಣಿಗೆ ನೇರವಾಗಿ ಬೀಳುವುದನ್ನು ತಪ್ಪಿಸಬೇಕು .

ಕಣ್ಣನ್ನು ದಿನಕ್ಕೆ ಎರಡು ಬಾರಿಯಾದರೂ ಸ್ವಚ್ಛವಾದ ತಣ್ಣೀರಿನಿಂದ ತೊಳೆಯಬೇಕು .

ದೀರ್ಘಕಾಲ ತೀರ ಹತ್ತಿರದಿಂದ ಟೆಲಿವಿಷನ್ ವೀಕ್ಷಿಸಬಾರದು .

ಕಂಪ್ಯೂಟರ್‌ನ ಮಾನಿಟರ್ ಜೊತೆ ದೀರ್ಘಕಾಲ ಕಾರ್ಯ ನಿರ್ವಹಿಸುವುದನ್ನು ಬಿಡಬೇಕು .

ಯಾವುದೇ ತುರ್ತು ಸಂದರ್ಭದಲ್ಲಿ ನೇತ್ರ ತಜ್ಞರನ್ನು ಭೇಟಿ ಮಾಡಬೇಕು . ಸ್ವಯಂ ಚಿಕಿತ್ಸೆ ಮಾಡುವುದನ್ನು ಬಿಡಬೇಕು ,

 

Leave a Reply

Your email address will not be published.