ಸಂವಿಧಾನ ರಚನಾ ಸಭೆ
( Constituent Assembly )
Constituent Assembly, constitutional assembly, the constituent assembly,members of constituent assembly, drafting committee members
ಸಂವಿಧಾನದ ಅಂತಿಮ ಕರಡು ಪ್ರತಿಯ ಪರಿಷ್ಕರಣೆ
ಮೊದಲ ಓದು : –
ಸಂವಿಧಾನ ಕರಡು ಸಮಿತಿಯು ಅಂತಿಮ ಕರಡು ತಯಾರಿಸಿ 1948 ನವೆಂಬರ್ 4 ರಂದು ಮೊದಲ ಕರಡು ಪ್ರತಿಯನ್ನು ಓದಿತು . ಇದರ ಬಗ್ಗೆ ನವಂಬರ್ .9 , 1948 ರವರೆಗೆ 5 ದಿನಗಳು ಚರ್ಚೆ ನಡೆದು ಸಾಕಷ್ಟು ಬದಲಾವಣೆಗಳನ್ನು ಮಾಡಲಾಯಿತು .
ಎರಡನೇ ಓದು : –
1948 ನವೆಂಬರ್ , 15 ರಂದು 2 ನೇ ಬಾರಿ ಕರಡು ಪ್ರತಿಯನ್ನು ಓದಲಾಯಿತು . ಈ ಸಂದರ್ಭದಲ್ಲಿ 7,653 ತಿದ್ದುಪಡಿಗಳನ್ನು ಮನವಿ ಮಾಡಲಾಯಿತು . ಅವುಗಳಲ್ಲಿ 2475 ತಿದ್ದುಪಡಿಗಳನ್ನು ಅಕ್ಟೋಬರ್ 17 , 1949 ರವರೆಗೆ ಚರ್ಚಿಸಿ ತಿದ್ದುಪಡಿ ಮಾಡಲಾಯಿತು .
ಮೂರನೇ ಓದು : –
1949 ನವೆಂಬರ್ 14 ರಂದು ಅಂಬೇಡ್ಕರ್ ಮೂರನೇ ಬಾರಿಗೆ ಬಿ.ಆರ್ . ಓದಲಾಯಿತು .
ಅಂಗೀಕಾರ : –
ಕರಡು ಪ್ರತಿಯನ್ನು 1949 ನವಂಬರ್ 26 ರಂದು ಅಂಗೀಕರಿಸಲಾಯಿತು . ಈ ಸಂದರ್ಭದಲ್ಲಿ ಸಂವಿಧಾನ ರಚನಾ ಸಭೆಯ 299 ಸದಸ್ಯರಲ್ಲಿ 284 ಮಂದಿ ಹಾಜರಿದ್ದು ಸಹಿ ಹಾಕಿದರು .
ಸಂವಿಧಾನ ರಚನೆಗೆ ತೆಗೆದುಕೊಂಡ ಅವಧಿ :
ಸಂವಿಧಾನ ರಚನಾ ಸಭೆಯು ಒಟ್ಟು 11 ಅಧಿವೇಶನಗಳಲ್ಲಿ 2 ವರ್ಷ ತಿಂಗಳು 18 ದಿನಗಳಲ್ಲಿ , 1935 ರ ಭಾರತ ಸರ್ಕಾರ ಕಾಯ್ದೆಯನ್ನು ಆಧಾರವಾಗಿರಿಸಿ ಕೊಂಡು 60 ದೇಶಗಳ ಸಂವಿಧಾನದ ಉತ್ತಮ ಅಂಶಗಳನ್ನು ಎರವಲು ಪಡೆದುಕೊಂಡು ರಚಿಸಿದ ಸಂವಿಧಾನವು ನವಂಬರ್ 26 , 1949 ರಂದು ಸಂವಿಧಾನ ರಚನಾ ಸಭೆಯಿಂದ ಅಂಗೀಕಾರ ಪಡೆಯಿತು .
ಮೂಲ ಸಂವಿಧಾನದಲ್ಲಿದ್ದ ಭಾಗಗಳು , ವಿಧಿಗಳು ಮತ್ತು
ಅನುಸೂಚಿಗಳು : –
1949 ನವಂಬರ್ 26 ರಂದು ಅಂಗೀಕರಿಸಲ್ಪಟ್ಟ ಮೂಲ ಸಂವಿಧಾನವು 395 ವಿಧಿಗಳನ್ನು 8 ಅನುಸೂಚಿಗಳನ್ನು , ಒಳಗೊಂಡ 22 ಭಾಗವನ್ನು ಹೊಂದಿದೆ .
ಇಂಗ್ಲೀಷ್ ಭಾಷೆಯಲ್ಲಿ 117 , 369 ಪದಗಳಿಂದ ಕೂಡಿತ್ತು . ಸಂವಿಧಾನ ಅಂಗೀಕರಿಸಿದ ಸಂದರ್ಭದಲ್ಲಿ ಪೌರತ್ವ ,
ಚುನಾವಣೆ ,
ತಾತ್ಕಾಲಿಕ ಸಂಸತ್ತು ,
ಕಿರು ಶೀರ್ಷಿಕೆ ಮುಂತಾದವುಗಳಿಗೆ ಸಂಬಂಧಿಸಿದಂತೆ ಸಂವಿಧಾನದ ವಿಧಿಗಳಾದ 5,6,7,8,9,
60 , 324 , 366 , 367 ,
379 , 380. 388 ,
391 , 392 , 393 . 394 , ವಿಧಿಗಳು ಜಾರಿಗೆ ಬಂದವು ಉಳಿದ ವಿಧಿಗಳು ಹಾಗೂ ಸಂವಿಧಾನವು ಸಂಪೂರ್ಣವಾಗಿ ಜನವರಿ 26,1950 ರಲ್ಲಿ ಜಾರಿಗೆ ಬಂದಿತು .
ಪ್ರಸ್ತುತ ಸಂವಿಧಾನ : –
ಭಾರತದ ಸಂವಿಧಾನವು ಮೂಲತಃವಾಗಿ 22 ಭಾಗಗಳು , 8 ಅನುಸೂಚಿಗಳು ಮತ್ತು 395 ವಿಧಿಗಳನ್ನು ಒಳಗೊಂಡಿತ್ತು . ಸಂಸತ್ತಿನ ಮೂಲಕ ಕಾಲಕಾಲಕ್ಕೆ ಸಂವಿಧಾನಕ್ಕೆ ಕೆಲವು ಅಂಶಗಳನ್ನು ಸೇರ್ಪಡೆ ಮಾಡುತ್ತಾ ಕೆಲವು ಅಂಶಗಳನ್ನು ತೆಗೆದುಹಾಕುತ್ತಾ ,
ಪ್ರಸ್ತುತವಾಗಿ 25 ಭಾಗಗಳು ,
12 ಅನುಸೂಚಿಗಳು
450 ಕ್ಕೂ ಹೆಚ್ಚು ವಿಧಿಗಳನ್ನು
ಒಳಗೊಂಡ ಸಂವಿಧಾನವು ಜಾರಿಯಲ್ಲಿದೆ .
ಭಾರತದ ಸಂವಿಧಾನವನ್ನು ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕೈ ಬರಹದಲ್ಲಿ ದಾಖಲಿಸಲಾಗಿತ್ತು .
“ ಪ್ರೇಂ ಬಿಹಾರಿ ನಾರಾಯಣ್ ರಾಯ್ಜಾ ‘ ರವರ ಹಾಗೂ “ ನಂದನ್ ಲಾಲ್ ಬೋಸ್ ಮತ್ತು ಇತ ರೆ ಕಲಾವಿದರು ಬಿಡಿಸಿದ ಚಿತ್ರಗಳನ್ನು ಒಳಗೊಂಡ , ಸಂವಿಧಾನವು ಸಿದ್ಧಗೊಂಡಿತು
ಭಾರತ ಸಂವಿಧಾನದ ಜಾರಿ ( Enforcement of Constitution of India )
ಭಾರತದ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೊಳಿಸಿ ಅದನ್ನು ಸಂವಿಧಾನದ ಪ್ರಾರಂಭದ ದಿನ “ The date of Comencement ” ಎಂದು ನಿಗಧಿ ಪಡಿಸಲಾಯಿತು .
ಅಂದಿನಿಂದ ಭಾರತದ ಸಂವಿಧಾನವು ಕಾಶ್ಮೀರವನ್ನು ಹೊರತು ಪಡಿಸಿ ಭಾರತದ ಸಂಪೂರ್ಣ ಭೂಪ್ರದೇಶಕ್ಕೆ ಜಾರಿಯಾಯಿತು .
ಜನವರಿ 26 ನ್ನು ಪ್ರಾರಂಭದ ದಿನವಾಗಿ ಆಯ್ಕೆ -ಭಾರತ ಸಂವಿಧಾನವನ್ನು ಜಾರಿಗೆ ಜನವರಿ 26 ರಂದು ತರಲು ಕಾರಣ ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆದ 1929 ರ ಲಾಹೋರ್ ಅಧಿವೇಶನದಲ್ಲಿ ಮುಂದಿನ ವರ್ಷ ಅಂದರ 1930 ಜನವರಿ 26 ರನ್ನು ಪೂರ್ಣ ಸ್ವರಾಜ್ಯ ದಿನ ಎಂದು ಆಚರಿಸಲು ನಿರ್ಧರಿಸಲಾಯಿತು .
ಅದರ ಜ್ಞಾಪಕಾರ್ಥವಾಗಿ ಜನವರಿ 26 ರಂದು ಭಾರತದ ಸಂವಿಧಾನವನ್ನು ಜಾರಿಗೆ ತರಲಾಯಿತು . ಅದೇ ರೀತಿ ಜಮ್ಮು ಕಾಶ್ಮೀರದ ಸಂವಿಧಾನ ವನ್ನು ಜನವರಿ 26 1957 ರಲ್ಲಿ ಜಾರಿಗೆ ತರಲಾಯಿತು
0 Comments