1986 ಪೌರತ್ವ ಕಾಯ್ದೆ ತಿದ್ದುಪಡಿ

citizenship amendment act 1986, 1955 act, citizenship act 1955, citizenship act 1955 upsc, the citizenship act 1955, ಪೌರತ್ವ

citizenship amendment act 1986, 1955 act, citizenship act 1955, citizenship act 1955 upsc, the citizenship act 1955, ಪೌರತ್ವ

ಭಾರತ ಸರ್ಕಾರದ ಪೌರತ್ವ ಕಾಯ್ದೆ 1955 ನ್ನು 1986 ರಲ್ಲಿ ತಿದ್ದುಪಡಿ ಮಾಡಿ ಭಾರತದ ನೆರೆ ದೇಶಗಳಾದ ಶ್ರೀಲಂಕಾ , ಬಾಂಗ್ಲಾದೇಶ ಹಾಗೂ ಇತರ ದೇಶಗಳಿಂದ ವಲಸೆ ಬಂದು ಹಾಗೂ ಸುಲಭವಾಗಿ ಪೌರತ್ವವನ್ನು ಪಡೆಯುತ್ತಿದ್ದ ವಿಧಾನವನ್ನು ಈ ತಿದ್ದುಪಡಿಯಿಂದ ಕಠಿಣಗೊಳಿಸಲಾಯಿತು .

ಈ ತಿದ್ದುಪಡಿಯ ಮೂಲಕ ಭಾರತದ ಪೌರತ್ವ ಪಡೆಯಲು ಈ ಕೆಳಕಂಡ ಅಂಶಗಳನ್ನು

ಹೊಂದಿರಬೇಕು .

1 ) 1956 ರ ಜನವರಿ 26 ರಂದು ಅಥವಾ ಅಂದರೆ 1986 ನವಂಬರ್ 26 ಕ್ಕೆ ಮೊದಲು ಭಾರತದಲ್ಲಿ ಜನಿಸಿದವರು . ಪೌರತ್ವಕ್ಕೆ ಅರ್ಹರಾಗುತ್ತಾರೆ .

2 ) 1986 ರ ತಿದ್ದುಪಡಿ ಕಾಯ್ದೆ ಪ್ರಾರಂಭವಾದ ನಂತರ ಭಾರತದಲ್ಲಿ ಜನಿಸಿದವರು , ಆದರೆ ಜನನ ಕಾಲದಲ್ಲಿ ಆತನ ತಂದೆ ಅಥವಾ ತಾಯಿ ಯಾರಾದರೊಬ್ಬರು ಭಾರತದ ಪೌರಾಗಿರಬೇಕು . ನೊಂದಣಿ ಮೂಲಕ ಪೌರತ್ವ ಪಡೆಯಲು ಅವಧಿಯನ್ನು 6 ತಿಂಗಳಿಂದ 5 ವರ್ಷಕ್ಕೆ ಹೆಚ್ಚಿಸಲಾಯಿತು .

ಭಾರತದಲ್ಲಿ ಏಕಪೌರತ್ನ :

ಭಾರತವು ಸಂಯುಕ್ತ ಪದ್ಧತಿಯನ್ನು ಹೊಂದಿದ್ದರು ಕೂಡ ಬ್ರಿಟನ್ ಮಾದರಿಯ ಏಕಪೌರತ್ವ ಹೊಂದಿದೆ . ಅಮೇರಿಕಾ , ಸಿಡರ್ಲೆಂಡ್‌ನಂತಹ ದೇಶಗಳು ದ್ವಿಪೌರತ್ವವನ್ನು ಹೊಂದಿದೆ . ಭಾರತ ದೇಶದ ಎಲ್ಲ ನಾಗರೀಕರು ಒಂದೇ ಪೌರತ್ವ , ಒಂದೇ ರಾಷ್ಟ್ರೀಯತೆಯನ್ನು ಹೊಂದಿರುತ್ತಾರೆ .

ಉದಾ : – ರಾಜಸ್ಥಾನ , ಕರ್ನಾಟಕ ಹೀಗೆ ದೇಶದ ಎಲ್ಲ ರಾಜ್ಯದ ನಾಗರೀಕರು ಭಾರತೀಯರೆಂದು ಹೇಳಲಾಗುತ್ತದೆ.ರಾಷ್ಟ್ರೀಯತೆಯಲ್ಲಿ ಭಾರತೀಯ ಎಂದ

ಎಲ್ಲ ರಾಜ್ಯದ ನಾಗರೀಕರು ಬರೆಯಬೇಕಾಗುತ್ತದೆ .

ಅಮೆರಿಕದಲ್ಲಿ ರಾಜ್ಯದ ಪೌರತ್ವ ಮತ್ತು ದೇಶದ ಪೌರತ್ವ ಎರಡನ್ನೂ ಕೂಡ ಪ್ರತಿನಿಧಿಸುತ್ತಾರೆ . ಆದುದ್ದರಿಂದ ಅಮೆರಿಕದಲ್ಲಿ ದ್ವಿಪೌರತ್ವ ಪದ್ಧತಿ ಜಾರಿಯಲ್ಲಿರುತ್ತದೆ

ಉದಾ : – ಆಮೆರಿಕದ ಇಲೋನಿಯಸ್ ಪ್ರಾಂತ್ಯದ ಪ್ರಜೆಯು ಇಲೋನಿಯಸ್‌ ಪ್ರಜೆ ಮತ್ತು ಅಮೆರಿಕ ಪ್ರಜೆ ಎಂದು ಹೇಳುತ್ತಾನೆ . ಇದು ದ್ವಿ ಪೌರತ್ವ ಹೊಂದಿರುವುದನ್ನು ಸೂಚಿಸುತ್ತದೆ . ಅನೇಕ ದೇಶಗಳಲ್ಲಿ ರಾಜ್ಯ ಮತ್ತು ದೇಶವನ್ನು ಪ್ರತಿನಿಧಿಸುವ ದ್ವಿಪೌರತ್ವ ವ್ಯವಸ್ಥೆಯಿದೆ .

 

ಭಾರತದಲ್ಲಿ ಕಾಮನ್ವೆಲ್ತ್ ಪೌರತ್ವ

1955 ರ ಪೌರತ್ವ ಕಾಯ್ದೆಯು ಕಾಮನ್‌ವೆಲ್ತ್ ಪೌರತ್ವ ಮನ್ನಣೆ ನೀಡಿದೆ . ಕಾಮನ್‌ವೆಲ್ತ್ ದೇಶದಲ್ಲಿ ಭಾರತದ ಪ್ರಜೆಗೆ ನೀಡುವ ಹಕ್ಕುಗಳನ್ನು ಭಾರತದಲ್ಲೂ ಕಾಮನ್‌ವೆಲ್ತ್ ದೇಶದ ಪ್ರಜೆಗೆ ನೀಡಲಾಗುತ್ತದೆ .

ಭಾರತದ ಮೂಲದವರಿಗೆ ದ್ವಿರಾಷ್ಟ್ರ ಪೌರತ್ವ

ಭಾರತದ ಸಂಸತ್ತು ತಿದ್ದುಪಡಿ ತಂದು , ಜ .7,2005 ವಿದೇಶಿಯಲ್ಲಿ ವಾಸಿಸುವ ಭಾರತೀಯ ಮೂಲದವರಿಗೆ ದ್ವಿ ರಾಷ್ಟ್ರ ಪೌರತ್ವವನ್ನು ನೀಡಲು ಈ ಕಾಯ್ದೆ ನಿರ್ಧರಿಸಿತು . ಅನ್ವಯ ವಿದೇಶಿ ಪೌರತ್ವ ಪಡೆದ ಭಾರತೀಯರು ಎಷ್ಟು ವರ್ಷ ಕಾಲ ಬೇಕಾದರೂ ಭಾರತದಲ್ಲಿ ವಾಸಿಸಬಹುದು . ಆದರೆ ಮತದಾನ ಮಾಡುವ ಹಾಗೂ ಸಾರ್ವಜನಿಕ ಹುದ್ದೆಗೆ ಆಯ್ಕೆ ಇರುವುದಿಲ್ಲ .

 

ಆಧುನಿಕ ಕಾಲದಲ್ಲಿ ಪೌರತ್ವ ಪರಿಕಲ್ಪನೆ : –

ಒಂದು ನಾಗರೀಕ ಸಮಾಜದ ಅಥವಾ ರಾಜ್ಯದ ಸದಸ್ಯತ್ವವನ್ನು ಹೊಂದಿ , ತಾನು ವಾಸಿಸುವ ರಾಜ್ಯಕ್ಕೆ ನಿಷ್ಠೆಯಿಂದ ಇದ್ದು , ರಾಜ್ಯವು ನೀಡುವ ನಾಗರೀಕ ಮತ್ತು ರಾಜಕೀಯ ಹಕ್ಕುಗಳನ್ನು ಅನುಭವಿಸುವ ಯಾವುದೇ ವ್ಯಕ್ತಿಯನ್ನು ಪೌರನೆಂದು ಕರೆಯಲಾಗಿದೆ .

 ವ್ಯಾಚೆಲ್ ಅವರ ವ್ಯಾಖ್ಯಾನದಂತೆ : –

ನಾಗರೀಕ ಸಮಾಜದ ಸದಸ್ಯನಾಗಿದ್ದು , ನಿರ್ಧಿಷ್ಟ ಕರ್ತವ್ಯಗಳಿಗೆ ಬದ್ಧನಾಗಿ ಸಾಮಾನ್ಯ ಪ್ರಾಧಿಕಾರಕ್ಕೆ ಒಳಪಟ್ಟು ಅದು ನೀಡುವ ಸೌಲಭ್ಯಗಳನ್ನು ಸಮಾನವಾಗಿ ಅನುಭವಿಸುವವನೇ ಪೌರ ಎಂದು ವ್ಯಾಖ್ಯಾನಿಸಲಾಗಿದೆ .

 

ಏಕ ಪೌರತ್ವ ( Single Citizenship ) :

ದೇಶದ ನಾಗರೀಕರೆಲ್ಲಾ ರಾಷ್ಟ್ರದ ಪೌರತ್ವವನ್ನು ಹೊಂದಿರುವುದು . ದೇಶದ ಎಲ್ಲಾ ನಾಗರೀಕರು ಕೂಡ ಒಂದೇ ಪೌರತ್ವ ಹೊಂದಿರುತ್ತಾರೆ .

ಉದಾ : ಭಾರತದಲ್ಲಿ ಎಲ್ಲಾ ರಾಜ್ಯದ ಪ್ರಜೆಗಳೂ ಕೂಡ ಭಾರತೀಯ ನಾಗರೀಕರಾಗಿರುವುದು . ಉದಾ : ಭಾರತ & ಬ್ರಿಟನ್

ದ್ವಿಪೌರತ್ವ ( Dual Citizenship ) :

ಒಂದು ದೇಶದ ನಾಗರೀಕನು ರಾಷದ & ರಾಜ್ಯದ ಎರಡೂ ಪೌರತ್ವವನ್ನು ಹೊಂದಿದ್ದರೆ ಅದನ್ನು ದ್ವಿಪೌರತ್ವ ಎಂದು ಕರೆಯುತ್ತಾರೆ . ಉದಾ : ಅಮೆರಿಕಾ & ಸ್ವಿಡ್ವರ್ಲೆಂಡ್ ,

 

ರಾಜ್ಯಶಾಸ್ತ್ರದ ಮೂಲ : –

ರಾಜ್ಯಶಾಸ್ತ್ರದ ಮೂಲವು ಗ್ರೀಸ್ ದೇಶದ್ದು , ಗ್ರೀಕ್ ತತ್ವಜ್ಞಾನಿಯಾದ ಸಾಕ್ರಟೀಸ್ ಮತ್ತು ಆತನ ಶಿಷ್ಯ ಪ್ಲೇಟೋ ರಾಜ್ಯಶಾಸ್ತ್ರ ಚಿಂತಕರಾಗಿದ್ದರು . ಪ್ಲೇಟೋ ತನ್ನ ” ರಿಪಬ್ಲಿಕ್ ” ಎಂಬ ಮಹಾಕೃತಿಯಲ್ಲಿ ಪ್ರಥಮ ಬಾರಿಗೆ ರಾಜ್ಯ ಮತ್ತು ಸರ್ಕಾರದ ಸ್ವರೂಪ ಮತ್ತು ಕರ್ತವ್ಯಗಳ ಬಗ್ಗೆ ಉಲ್ಲೇಖಿಸಿದ್ದಾರೆ .

ಅರಿಸ್ಟಾಟಲ್ : –

ಗ್ರೀಕ್ ತತ್ವಜ್ಞಾನಿಯಾದ ಅರಿಸ್ಟಾಟಲ್‌ನ್ನು ರಾಜ್ಯಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ . ಅರಿಸ್ಟಾಟಲ್ ರಾಜ್ಯಶಾಸ್ತ್ರವನ್ನು ಕುರಿತು ಜಗತ್ತಿನಲ್ಲೇ ಪ್ರಥಮ ಗ್ರಂಥವಾದ ” ಪಾಱಟಕ್ಸ್ ” ಎಂಬ ಕೃತಿಯನ್ನು ರಚಿಸಿದರು .

ಕೌಟಲ್ಯ : –

ಇವರನ್ನು ವಿಷ್ಣುಗುಪ್ತ , ಚಾಣಕ್ಯ ಎಂದು ಕರೆಯುತ್ತಾರೆ . ಇವರು ಅರ್ಥಶಾಸ್ತ್ರದಲ್ಲೂ ಕೂಡ ರಾಜಕೀಯ ನೀತಿಗಳ ಬಗ್ಗೆ ವಿವರಣೆಯಿದೆ .

 ಪಾಲಿಟಿಕ್ಸ್ :

ಪಾಲಿಟಿಕ್ಸ್ ಎಂಬ ಪದವು ನಗರ ರಾಜ್ಯ ( City – State ) ಎಂಬ ಅರ್ಥವುಳ್ಳದ್ದಾಗಿದೆ . ಈ ಪದದ ಮೂಲ ಗ್ರೀಕ್ ಪದದ ಪೊಲಿಸ್ ( Polis ) ಎಂಬ ಪದದಿಂದ ಬಂದಿದ್ದು , ಗ್ರೀಕರಿಗೆ ನಗರವೇ ರಾಜ್ಯವಾಗಿತ್ತು .

 


0 Comments

Leave a Reply

Avatar placeholder

Your email address will not be published. Required fields are marked *