chhatrapati shivaji maharaj | ಛತ್ರಪತಿ ಶಿವಾಜಿ

 

ಛತ್ರಪತಿ ಶಿವಾಜಿ

shivaji maharaj

shivaji maharaj , chhatrapati shivaji , chhatrapati shivaji maharaj ,shivaji , shivaji maharaj information , shivaji maharaj story

ದುರ್ಗದ ಸ್ವಾಧೀನ

 

ಔರಂಗಜೇಬನಿಂದ ತಪ್ಪಿಸಿಕೊಂಡು ಹಿಂದಿರುಗಿದ ಶಿವಾಜಿ ಹೊಸ ಉತ್ಸಾಹ ತಳೆದ . ಸೆರೆಯಲ್ಲಿದ್ದಾಗ ತಾನು ಮನಃ ತನ್ನ ತಾಯಿ , ಹೆಂಡತಿ , ಜನಗಳನ್ನು ನೋಡುತ್ತೇನೋ ಇಲ್ಲವೋ ಎಂಬ ಶಂಕೆ ಅವನಲ್ಲಿ ಉಂಟಾಗಿತ್ತು .

ಅದೃಷ್ಟದಿಂದ ಮತ್ತು ಪ್ರಯತ್ನದಿಂದ ಅವನು ಮತ್ತೆ ತನ್ನ ರಾಜ್ಯಕ್ಕೆ ಹಿಂದಿರುಗಿದ್ದ . ಸುಮಾರು ಒಂದು ವರ್ಷ ಅವನು ತನ್ನ ಜನರಿಂದ ಬಹುದೂರವಿದ್ದ .

ಶಿವಾಜಿ ರಾಜ್ಯ ಬಿಟ್ಟು ಹೊರಟಾಗ ಅದು ಯಾವ ಸ್ಥಿತಿಯಲ್ಲಿತ್ತೋ , ಅವನು ಹಿಂದಿರುಗಿದಾಗಲೂ ಅದೇ ಸ್ಥಿತಿಯಲ್ಲಿತ್ತು .

ಹೀಗಾಗಿ ಶಿವಾಜಿಗೆ ತಕ್ಕಮಟ್ಟಿಗೆ ಸಮಾಧಾನವೂ ರಾಜಕಾರ್ಯಗಳೆಲ್ಲವೂ ಆಯಿತು .

ಸುಸೂತ್ರವಾಗಿ ನಡೆಯುತ್ತಿದ್ದವು . ಶಿವಾಜಿಯ ಅನುಪಸ್ಥಿತಿ ಯಲ್ಲೂ ಸಂಸ್ಥಾನದ ಅಧಿಕಾರಿಗಳೆಲ್ಲ ಶ್ರದ್ಧಾ ಭಕ್ತಿಯಿಂದ ತಮ್ಮ ತಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದರು .

ಉನ್ನತ ಅಧಿಕಾರಿಗಳಿಂದ ಹಿಡಿದು ಸಾಮಾನ್ಯ ದರ್ಜೆಯ ನೌಕರ ರವರೆಗೆ ಯಾರೂ ಕೆಲಸ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ ತೋರಿರಲಿಲ್ಲ .

ಅಂದರೆ ಶಿವಾಜಿಯ ಬಗ್ಗೆ ಅವನ ಪ್ರಜೆಗಳು ಎಷ್ಟರಮಟ್ಟಿಗೆ ಗೌರವವಿಟ್ಟಿದ್ದರು ಎಂಬುದು ಸ್ಪಷ್ಟವಾಗುತ್ತದೆ ,

ಯಾರೂ ರಾಜ್ಯ ಬಿಟ್ಟು ಹಸುಗಳ ಜೊತೆಗೆ ಸೇರಿ ನಡೆಸಿರಲಿಲ್ಲ , ಇ

ದರಿಂದ ತಮ್ಮ ರಾಜ್ಯದ ಬಗ್ಗೆ ಅವರೆಲ್ಲರಿಗೂ ಪ್ರಾಮಾಣಿಕ ಪ್ರೀತಿ ಮತ್ತು ಅಭಿಮಾನ ಇತ್ತೆಂಬ ಅಂತ ಗೊತ್ತಾಗುತ್ತದೆ .

ಇತ್ತ ಶಿವಾಜಿಯ ಸಂಘಟರಾ ಬಾಸುರವನ್ನೂ ಪ್ರಶಂಸಿಸಬೇಕು .

ಅವರು ಸಂಸ್ಥಾನದ ಪ್ರಜೆಗಳನ್ನು ಒಟ್ಟುಗೂಡಿಸಿದ್ದಲ್ಲದ ಎಲ್ಲರಲ್ಲೂ ಕರ್ತವ್ಯ ಪ್ರಶ್ನೆಯನ್ನು ಉಂಟುಮಾಂಧ್ಯ , ನಡೆಸಿ ರಾಜನನ್ನು ಕೊಂದು ಸಿಂಹಾಸನ ಬರುವದು ಆ ಕಾಲದಲ್ಲಿ ಸವ ಸಾಮಾನ್ಯವಾಗಿತ್ತು .

ಇಂತಹ ಯಾವುದೇ ಆಹುತ ಶಿವಾಜಿಯ ವಿಷಯದಲ್ಲಿ ನಡೆಯದೇ ಇದ್ಘಾಲಕ್ಕೆ ಅವನು ತನ್ನ ಜನರತ್ತ ತೋರಿಸುತ್ತಿದ್ದ ಪ್ರೀತಿಯೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ .

ಎರಡು ಶಿವಾಜಿಯ ದಿನಚರಿ ಎಂದಿನಂತೆ ನಡೆಯ  ರಾಜಕಾರ್ಯಗಳು ಅಚ್ಚುಕಟ್ಟಾಗಿ ನಗುತ್ತಿದ್ದವು , ಆತ್ಮ ವಿಜಾಸುವ ಸಂಸ್ಕಾಕ್ಕೂ ಮೊಗಲರಿಗೂ ಯುದ್ಧ ನಡೆಯುತ್ತಿತ್ತು .

ಕ್ರಿ.ಶ. 1667 ರಲ್ಲಿ ಔರಂಗಜೇಬನು ಜಯಸಿಂಹನನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದುಕೊಂಡಿದ್ದರು . ಅಷ್ಟರಲ್ಲಿ ಜಯಸಿಂಹ ನಿಧನನಾದನು .

ಈ ಸಂದರ್ಭದಲ್ಲಿ ಔರಂಗಜೇಬನ ಮಗ ಮುಜಿಮ್ ಮತ್ತು ಕೋರಸುರ ಮಹಾರಾಜ ಯಶವಂತ ಸಿಂಹ ಔರಂಗಾಬಾದ್‌ಗೆ ಬಂದು ಶಿವಾಜಿಯ ದೂತರನ್ನು ಭೇಟಿಯಾದರು .

ಮುಳಮ್ ಶಿವಾಜಿಯ ದೂರನ್ನು ಪ್ರೀತಿಯಿಂದ ಕಂಡು ಗೌರವಿಸಿದರು , ಒಡಂಬಡಿಕೆ ಮೇರೆಗೆ ಔ cons ಬನು ಶಿವಾಜಿಗೆ ರಾಜನೆಂಬ ಬಿರುದನ್ನು , ಬೇರಾರಿನಲ್ಲಿ ಒಂದು ಜಹಗೀರನ್ನು ಕೊಟ್ಟರು .

ಪುರಂದರ , ಸಿಂಹಗಡ ಎಂಬ ದುರ್ಗಗಳನ್ನು ಬಿಟ್ಟು ಮಣೆ , ಕಣ ,

ರೂಪ ಎಂಬ ಜಹಗೀರುಗಳನ್ನು ಶಿವಾಜಿಗೆ ಹಿಂದಕ್ಕೆ ಕೊಟ್ಟು ,

ಯುದ್ಧಕಾಲದಲ್ಲಿ ಔರಂಗಜೇಬನಿಗೆ ಸಹಾಯಮಾಡುವ ದೃಷ್ಟಿಯಿಂದ ಶಿವಾಜ ಒಂದಷ್ಟು ಕುದುರೆಗಳನ್ನು ಕೊಟ್ಟು .

ಈ ಕುದುರೆಗಳನ್ನು ಔರಂಗಾಬಾದ್‌ನಲ್ಲಿ ಇರಿಸಿ ಆ ಅಶ್ವಸೇನೆಗೆ ಪ್ರತಾಪ್ ರಾವ್ ಗುಜರ್ ಎಂಬುವರನ್ನು ಸೇನಾಪತಿಯನ್ನಾಗಿ ನೇಮಿಸಿದರು ಇದು ಶಿವಾಜಿಯು ಔರಂಗಜೇಬನೊಡನೆ ಮಾಡಿಕೊಂಡ ಅತ್ಯಂತ ಪ್ರಮುಖ ಒಪ್ಪಂದ , ಕ್ರಿ.ಶ. ರಲ್ಲಿ ಈ ಒಡಂಬಡಿಕೆ ನೆರವೇರಿತು ,

ಎರಡು ವರ್ಷಗಳ ಕಾಲ ಉಭಯ ಬಣದವರು ಒಡಯರಿಕೆಯ ಅನುಸಾರ ನಡೆದುಕೊಂಡರು ಕ್ರಿ.ಶ. 1669 ರಲ್ಲಿ ಮೊಗಲರು ಮತ್ತು ಬಿಜಾಪುರ ಸಂಸ್ಥಾನದವರು ಪರಸ್ಪರ ಸ್ನೇಹ ಹಸ್ತ ಚಾಚಿ ಸಂಧಿಮಾಡಿಕೊಂಡರು.

ಒಪ್ಪಂದದ ಪ್ರಕಾರ ಬಿಜಾಪುರ ಸಂಸ್ಥಾನದವರು ಶಿವಾಜಿಗೆ ವರ್ಷಕ್ಕೆ 3 ಲಕ್ಷ ರೂಪಾಯಿ ನೀಡಬೇಕೆಂದು ಮತ್ತು ಗೋಳ್ಕೊಂಡ ಸಂಸ್ಥಾನದವರು ಶಿವಾಜಿಗೆ 5 ಲಕ್ಷ ರೂಪಾಯಿ ಕೊಡಬೇಕೆಂದು ನಿರ್ಧರಿಸಲಾಯಿತು ,

ಒಟ್ಟಾರೆ ಕ್ರಿ.ಶ. 1669 ರಲ್ಲಿ ಶಿವಾಜಿಯ ಬಲವು ವೃದ್ಧಿಯಾಯಿತು .

ಕಳೆದುಕೊಂಡಿದ್ದ ಜಹಗೀರುಗಳೂ ದುರ್ಗಗಳೂ ಹಿಂದಕ್ಕೆ ಬಂದವು . ಔರಂಗಜೇಬನು ಅವನಿಗೊಂದು ಜಹಗೀರನ್ನು ಕೊಟ್ಟು ಅವನ ಮಗ ಸಾಂಬಾಜಿಗೆ ಪ್ರಮುಖ ಹುದ್ದೆ ಕೊಟ್ಟನು .

ಇತಿಹಾಸಕಾರರ ಪ್ರಕಾರ ಕ್ರಿ.ಶ. 1668 ಮತ್ತು 1669 ರಲ್ಲಿ ಶಿವಾಜಿ ಸ್ವಲ್ಪಮಟ್ಟಿಗೆ ನೆಮ್ಮದಿಯಿಂದ ಜೀವನ ಸಾಗಿಸಿದನು . ಯಾವ ಯುದ್ಧದ ಕಿರಿಕಿರಿಯೂ ಇರಲಿಲ್ಲ .

ಜೀವನದ ಬಂಡಿ ಸುಗಮವಾಗಿ ಸಾಗಿತು . ಆದರೆ ಅವನು ಸೋಮಾರಿತನದಿಂದ ದಿನಗಳನ್ನು ಕಳೆಯಲಿಲ್ಲ .

ಇದು ಕರ್ಮಭೂಮಿ , ಕರ್ಮವನ್ನು ಮಾಡುವುದಕ್ಕಾಗಿಯೇ ನಾವು ಈ ಭೂಮಿಗೆ ಬಂದಿರುವೆವು ” ಎಂದು ಪ್ರಜಾಪಾಲನೆ ಬಗ್ಗೆ ಯೋಚಿಸುತ್ತಿದ್ದ .

ಹೇಳುತ್ತಾ ಶಿವಾಜಿ ಸದಾ ಏನಾದರೊಂದು ಕೆಲಸಮಾಡುತ್ತಿದ್ದ .

ದೇಶ ರಕ್ಷಣೆ , ಹೀಗಿರುವಾಗ ಕ್ರಿ.ಶ. 1670 ರಲ್ಲಿ ಒಂದು ದಿನ ಔರಂಗಜೇಬನು ತನ್ನ ನರಿಬುದ್ಧಿಯನ್ನು ತೋರಿಸಿದ , ಒಪ್ಪಂದ , ಒಡಂಬಡಿಕೆ , ಸಂಧಿ ಎಲ್ಲವನ್ನು ಮೂಲೆಗುಂಮುಮಾಡಿದ .

ಅತ್ತ ಔರಂಗಜೇಬನು ತನ್ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ತೆರಿಗೆ ವಿಧಿಸಿದ ಅವನ ಸೈನಿಕರು ಕಾಶಿ ವಿಶ್ವೇಶ್ವರ ದೇವಸ್ಥಾನವನ್ನು ಹಾಳುಗೆಡವಿದರು .

ಈ ಎಲ್ಲಾ ಸುದ್ದಿಗಳನ್ನು ಕೇಳಿದ ಶಿವಾಜಿಗೆ ರಕ್ತ ಕುದಿಯಿತು . ತತ್‌ಕ್ಷಣ ಔರಂಜೇಬನಿಗೆ ಪತ್ರ ಬರೆದು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ .

ಇತ್ತ ಪ್ರತಾಪ್ ಗುರ್ಜ ಔರಂಗಾಬಾದ್‌ನಿಂದ ಮಣೆಗೆ ಬಂದ . ಶಿವಾಜಿ ಗುಪ್ತ ಸಭೆ ನಡೆಸಿ ಯುದ್ಧಕ್ಕೆ ಸಜ್ಜಾದನು . ಸಿಂಹದಂತೆದ್ದು ಗರ್ಜಿಸಿದನು . ಸಿಂಹಗಢ , ಪುರಂದರದುರ್ಗಗಳನ್ನು ವಶಪಡಿಸಿಕೊಳ್ಳಬೇಕೆಂದು ಹಲ್ಲುಕಡಿದು ನಿರ್ಧರಿಸಿದನು .

ಈ ಎರಡೂ ಪ್ರದೇಶಗಳನ್ನು ಹೇಗಾದರೂ ಮಾಡಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಸೈನಿಕರನ್ನು ಹುರಿದುಂಬಿಸಿ ಕಳುಹಿಸಿದನು .

ಮೊಟ್ಟ ಮೊದಲಿಗೆ ಕ್ರಿ.ಶ. 1670 ರಲ್ಲಿ ಸಿಂಹಗಢ ಶಿವಾಜಿಯ ವಶವಾಯಿತು , ದಕ್ಷಿಣ ಭಾಗದಲ್ಲಿ ಸಿಂಹಗಢ ಒಂದು ಪ್ರಧಾನ ದುರ್ಗ , ಈ ಕಾರಣಕ್ಕಾಗಿಯೇ ಈ ದುರ್ಗದ ರಕ್ಷಣೆಗಾಗಿ ಔರಂಗಜೇಬನು ಸುಮಾರು ಒಂದು ಸಾವಿರ ವೀರರನ್ನು ನೇಮಿಸಿದ್ದನು .

ಇವರ ನಾಯಕ ಉದಯಭಾನು ಎಂಬ ರಜಪೂತ ವೀರ , ಶಿವಾಜಿಯ ಆಪ್ತ ತಾನಾಜಿ ಮತ್ತು ಅವನ ತಮ್ಮ ಸೂರ್ಯಾಜಿ ಆರುನೂರು ಮಂದಿ ಮಾವಳಿಗಳನ್ನು ಕರೆದುಕೊಂಡು ರಾತ್ರೋ ರಾತ್ರಿ ರಾಯಗಢದಿಂದ ಹೊರಟರು .

ಎಲ್ಲರಲ್ಲೂ ಉತ್ಸಾಹ ತುಂಬಿತ್ತು . ಗೆಲ್ಲಲೇಬೇಕೆಂದು ಪಣತೊಟ್ಟಿದ್ದರು . ಹಗ್ಗದ ಸಹಾಯದಿಂದ ಮಾವಳಿ ವೀರರು ಕೋಟೆಯ ಮೇಲೇರಿದರು .

ಎಲ್ಲೆಲ್ಲೂ ಕತ್ತಲು , ಚಳಿ , ಆದರೂ ಯಾರು ಧೃತಿಗೆಡಲಿಲ್ಲ . ಮೊದಲು ಹತ್ತಿದ್ದು ತಾನಾಜಿ , ನಂತರ ಮಾವಳಿಗಳು ಒಬ್ಬೊಬ್ಬರಾಗಿ ಮೇಲೆ ಹತ್ತಿದರು .

ಅಂದು ಪೂರ್ಣಿಮೆ ಇದ್ದುದ್ದರಿಂದ ಬೆಟ್ಟದ ಮೇಲೆ ಅಲ್ಪ ಸ್ವಲ್ಪ ಬೆಳಕು ಇತ್ತು ; ಜೊತೆಗೆ ನೀರವ ಮೌನ , ಇಂಥ ಸಮಯದಲ್ಲಿ ಸುಮಾರು 300-400 ಮಾವಳಿಗಳು ದುರ್ಗದ ಮೇಲೆ ಹತ್ತಿದರು .

ಇನ್ನೂರು ಮಂದಿ ಸೂರ್ಯಾಜಿಯ ಸಂಗಡ ದುರ್ಗದ ಕೆಳಗೆ ನಿಂತರು . ಈ ಸಮಯದಲ್ಲಿ ಏನೋ ಶಬ್ದವಾದಂತಾಗಿ ಮೊಗಲರ ಕಡೆಯ ಸೈನಿಕರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಮಾವಳಿಗಳ ಮೇಲೆ ಹಲ್ಲೆಮಾಡಲು ಸಜ್ಜಾದರು .

ತತ್‌ಕ್ಷಣವೇ ತಾನಾಜಿ ಸೇನೆಯೊಡನೆ ಅವರ ಮೇಲೆ ಬಿದ್ದನು .ಎರಡೂ ಬಣದವರ ನಡುವೆ ಭೀಕರ ಕಾಳಗ ಆರಂಭವಾಯಿತು .

ಒಂದೆರಡು ಗಂಟೆಗಳ ಅವಧಿಯಲ್ಲಿ ಐನೂರು ಮಂದಿ ಮೊಗಲರ ಬಣದವರು ಪ್ರಾಣ ಕಳೆದುಕೊಂಡರು . ಹಲವರು ಹೆದರಿ ಓಡಿಹೋದರು .

ಈ ಸಮಯದಲ್ಲಿ ಬೆಟ್ಟದಿಂದ ಬಿದ್ದು ಸತ್ತವರು ಅದೆಷ್ಟೋ ಮಂದಿ  ಸೆರೆಯಾದರು .

ಇತಿಹಾಸದ ಈ ಪ್ರಸಿದ್ಧ ಯುದ್ಧದಲ್ಲಿ ವೀರತನ ತೋರಿದರು , ಸೂರ್ಯಾಜಿ ತಾನಾಜಿಯೂ ಸೇರಿ ಅರವತ್ತು ಮಂದಿ ಮಾವಳಿಗಳು ಅತಿಮಾನುಷ ವಿಜಯದ ಸಂಕೇತವೆಂದು ಬೆಟ್ಟದ ಶಿವಾಜಿ ಬಣದವರು ಮೇಲಿದ್ದ ಕೆಲವು ಗುಡಿಸಲುಗಳಿಗೆ ಬೆಂಕಿಯಿಟ್ಟನು .

ಆದರೆ ದುರದೃಷ್ಟವಶಾತ್ ರು ತಾನಾಜಿಯನ್ನು ಕಳೆದುಕೊಂಡರು . ಆತ ಯುದ್ಧದಲ್ಲಿ ವೀರಮರಣ ಅಪ್ಪಿದ . ಸಂಪೂರ್ಣ ಸುದ್ದಿ ಶಿವಾಜಿಗೆ ತಲಪಿತು .

ಒಂದು ಕಡೆ ಸಿಂಹಗಢ ಸ್ವಾಧೀನವಾದ ವಿಷಯ ಸಂತೋಷ ಉಂಟುಮಾಡಿದರೆ , ಮತ್ತೊಂದು ಕಡೆ ತಾನಾಜಿ ಸತ್ತ ಸುದ್ದಿ ಬೇಸರ ತರಿಸಿತು .

ಆಗ ಶಿವಾಜಿ ದುಃಖಿಸುತ್ತ “ ಸಿಂಹದ ಗುಹೆ ಕೈಸೇರಿತು . ನಿಜ , ಆದರೆ ಸಿಂಹವು ಹೋಯಿತು ” ಎಂದನು . ತಾನಾಜಿಯ ಸಾವು ಶಿವಾಜಿಯನ್ನು ಬಹಳವಾಗಿ ಬಾಧಿಸಿತು .

ಅವನು ದುಃಖದಿಂದ ಹನ್ನೆರಡು ದಿನಗಳ ಕಾಲ ತಲೆಗೆ ರುಮಾಲನ್ನು ಹಾಕಿಕೊಳ್ಳಲಿಲ್ಲ .

ತಾನಾಜಿ ಕೇವಲ ಸೇನೆಯ ಮುಖ್ಯಸ್ಥ ಮಾತ್ರ ಆಗಿರಲಿಲ್ಲ . ಶಿವಾಜಿಯ ಆಪ್ತಮಿತ್ರನೂ ಆಗಿದ್ದನು , ‘ ಕೊಂಡನ’ವೆ ೦ ಬ ಯಾವ ದುರ್ಗವನ್ನು ಜಯಿಸಿ ಯುದ್ಧ ನಿಮಣತೆಯಿಂದ ಎಲ್ಲರನ್ನೂ ಬೆರಗುಮಾಡಿದ್ದನೋ , ಯಾರು ವೀರತನಕ್ಕೆ ಗುರುತಾಗಿದ್ದನೋ ಅಂತಹ ತಾನಾಜಿಯು ವಿಧಿವಶನಾಗಿದ್ದು ಶಿವಾಜಿಯ ದುಃಖವನ್ನು ದಿನೇ ದಿನೇ ಇಮ್ಮಡಿಸಿದವು .

ಆದರೆ ಅಳುತ್ತಾ ಕುಳಿತರೆ ಮುಂದಿನ ಕೆಲಸ ಕಾರ್ಯಗಳೆಲ್ಲ ನಿಂತುಹೋಗುವವು ಎಂದುಕೊಳ್ಳುತ್ತಾ ಸಮಾಧಾನಮಾಡಿಕೊಂಡು ಶಿವಾಜಿಯು ಸೂರ್ಯಾಜಿಯನ್ನು ಸಿಂಹಗಢಕ್ಕೆ ಕಿಲ್ಲೇದಾರ ಎಂದು ನೇಮಿಸಿ ಉಳಿದ ಸೈನಿಕರಿಗೆ ಬಹುಮಾನ ಮತ್ತು ಉನ್ನತ ಪದವಿಯನ್ನು ಕೊಟ್ಟನು .

ಸೆರೆಯಾಳುಗಳಾಗಿದ್ದ ಮೊಗಲರ ಸೈನಿಕರನ್ನು ಉದಾರ ಮನಸ್ಸಿನಿಂದ ಬಿಡುಗಡೆಮಾಡಿದನು . ಶಿವಾಜಿ ಇಷ್ಟಕ್ಕೆ ಸುಮ್ಮನಾಗಲಿಲ್ಲ . ಪುರಂದರದುರ್ಗವನ್ನು ವಶಪಡಿಸಿ

ಕೊಳ್ಳಬೇಕೆಂದು ನಿರ್ಧರಿಸಿದ . ಅವನು ಸೂರ್ಯಾಜಿಯನ್ನು ಹುರಿ ದುಂಬಿಸಿದನು . ಕೇವಲ ಒಂದೇ ಒಂದು ತಿಂಗಳಲ್ಲಿ ಸೂರ್ಯಾಜಿ ಪುರಂದರದುರ್ಗವನ್ನು ಸ್ವಾಧೀನಪಡಿಸಿಕೊಂಡನು .

ಇದಾದ ಬಳಿಕ ಪ್ರತಾಪರಾಯ , ಆಣ್ಣಾಜಿಪಂತ , ನೀಲೋಪಂತ , ಮೋರೋಪಂತ ಮೊದಲಾದವರು ಶಿವಾಜಿಯ ಪ್ರಾಂತ್ಯದಲ್ಲಿ ಮೊಗಲರು ನಿಲ್ಲಲ್ಲೂ ಜಾಗ ಇಲ್ಲದಂತೆ ಮಾಡಿದರು .

ನೋಡನೋಡುತ್ತಿದ್ದಂತೆ ಕೊಂಕಣದಲ್ಲಿಯ ಕಲ್ಯಾಣ ಪ್ರಾಂತ್ಯ ಶಿವಾಜಿಯ ಮಡಿಲಿಗೆ ಸೇರಿತು . ಆದರೆ ಒಂದೆರಡು ಸಣ್ಣ ಕಾಳಗದಲ್ಲಿ ಅವನಿಗೆ ಮುಖಭಂಗ ಉಂಟಾಯಿತು .

ಜುನ್ನಾರ್ ಎಂಬ ಪಟ್ಟಣದ ಹತ್ತಿರ ತನ್ನ ಜನ್ಮಸ್ಥಾನವಾಗಿದ್ದ ಶಿವನೇರಿದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ , ಸಾಧ್ಯವಾಗಲಿಲ್ಲ . ತರುವಾಯ ಶಿವಾಜಿ ಜಿಂಜೀರ್ ಎಂಬ ದುರ್ಗಕ್ಕೆ ದಂಡೆತ್ತಿ ಹೋದನು . ಅಲ್ಲಿಯೂ ಯಶಸ್ಸು ಕಾಣಲಿಲ್ಲ .

ಕೆಲವು ತಿಂಗಳು ಸುಮ್ಮನಿದ್ದ ಶಿವಾಜಿ ಸೂರತ್ ಮೇಲೆ ದಾಳಿ ಮಾಡಿದ , ಹಠಾತ್ತನೆ ಶಿವಾಜಿಯ ಸೈನ್ಯ ನುಗ್ಗಿದ್ದರಿಂದ ಹೆದರಿದ ಅಲ್ಲಿನ ನಿವಾಸಿಗಳು ಸಮೀಪದ ಹಳ್ಳಿಗಳಿಗೆ ಪಲಾಯನ ಮಾಡಿದರು .

ಅಲ್ಲಿದ್ದ ರಾಜಕುಮಾರನ ಆಸ್ತಿಯೆಲ್ಲವೂ ಶಿವಾಜಿ ಬಣದ ವಶಕ್ಕೆ ಬಂದಿತು . ವರ್ಷಕ್ಕೆ ಹನ್ನೆರಡು ಲಕ್ಷ ರೂಪಾಯಿಯನ್ನು ಕೊಡಬೇಕು , ಇಲ್ಲದಿದರೆ ಪ್ರತಿವರ್ಷವೂ ಆ ನಗರದ ಮೇಲೆ ದಾಳಿಮಾಡುವೆನೆಂದು ಹೇಳಿದ ಶಿವಾಜಿ ಅಲ್ಲಿಂದ ರಾಯಗಢಕ್ಕೆ ಹೊರಟನು .

ಇದೇ ಸಮಯದಲ್ಲಿ ಮೊಗಲ್ ಸೇನಾಪತಿಗಳಾದ ದಾವೂದ್ ಖಾನ್ ಮತ್ತು ಇಖಿಲಾಸ್ ಖಾನ್ ಶಿವಾಜಿಯನ್ನು ಬಗ್ಗುಬಡಿಯಲು ಯತ್ನಿಸಿದರು . ಕಾಂಚನಮಂಚನವೆಂಬ ಕಣಿವೆಯ ಸಮೀಪದಲ್ಲಿ ಮರಾಠಿಯವರಿಗೂ ಮೊಗಲರಿಗೂ ಕಾಳಗ ನಡೆಯಿತು .

ಮರಾಠಿಯವರ ಕೈಮೇಲಾಯಿತು . ಹೆದರಿದ ಮೊಗಲರು ಓಡಿಹೋದರು . ಶಿವಾಜಿ ರಾಯಗಢವನ್ನು ಸೇರಿ , ವ್ಯವಸ್ಥಿತವಾಗಿ ದಿಕ್ಕುದಿಕ್ಕಿಗೂ ಸೇನೆಗಳನ್ನು ಕಳುಹಿಸಿದನು .

ಅಲ್ಲಿನ ದುರ್ಗಗಳನ್ನು ಜಯಗಳಿಸುವುದಕ್ಕಾಗಿ ಮೋರೋಪಂತನಿಗೆ ಇಪ್ಪತ್ತು ಸಾವಿರ ಕಾಲಾಳುಗಳನ್ನು ಕೊಟ್ಟನು . ಮತ್ತೊಂದು ಕಡೆ ಪ್ರತಾಪರಾಯನಿಗೆ ಹತ್ತು ಸಾವಿರ ಕುದುರೆ ಸವಾರರನ್ನು ಕೊಟ್ಟು ಕಳುಹಿಸಿದನು .

ಮುಂಬೈ , ಬರೋಡ ನಗರಗಳನ್ನು ಆಕ್ರಮಿಸಬೇಕೆಂದು ಹೇಳಿದನು . ಒಂದು ಸಂದರ್ಭದಲ್ಲಿ ಮರಾಠಿಯವರು ಪೋರ್ಚುಗೀಸರ ಒಂದು ಹಡಗನ್ನು ಹಿಡಿದು ರತ್ನಗಿರಿಯಲ್ಲಿರುವ ದಾಬೋಲಿ ಎಂಬ ಸ್ಥಳಕ್ಕೆ ಸಾಗಿಸಿಕೊಂಡು ಹೋದರು .

ಅದಕ್ಕೆ ಪ್ರತೀಕಾರವಾಗಿ ಮೋರ್ಚಗೀಸರು ಮರಾಠಿಯವರ ಹನ್ನೆರಡು ಹಡಗುಗಳನ್ನು ಹಿಡಿದರು . ಇತ್ತ ಪ್ರತಾಪರಾಯನು ಮೊಗಲರ ಸ್ವಾಧೀನದಲ್ಲಿದ್ದ ಅನೇಕ ಪಟ್ಟಣಗಳ ಮೇಲೆ ದಂಡೆತ್ತಿಹೋಗಿ ಸಾಕಷ್ಟು ಹಣ ಸಂಪಾದಿಸಿಕೊಂಡು ಒಂದು ಶಿವಾಜಿಗರ್ಪಿಸಿದನು .

ಮೋರೊಪಂತನು ಸಾಲೇರಿ , ಔಂಧ , ಪಟ್ಟ ಮೊದಲಾದ ದುರ್ಗಗಳನ್ನು ಜಯಿಸಿದನು . ಕಾಲ ಉರುಳಿತು . ವಿಜಯಲಕ್ಷ್ಮಿ ಶಿವಾಜಿಗೆ ಒಲಿದಳು . ಅವನ ಕೀರ್ತಿಪತಾಕೆ ಎಲ್ಲೆಡೆ ಹಾರಾಡತೊಡಗಿತು . ಈ ವಿಷಯ ತಿಳಿದ ಔರಂಗಜೇಬನು ಕಿಡಿಕಿಡಿಯಾದನು .

ಬೇಸರ , ಮತ್ಸರ ಅವನಲ್ಲಿ ಕಂಡುಬಂದವು ವಿಚಿತ್ರವೆಂದರೆ , ಯಶವಂತಸಿಂಹ ಮತ್ತು ತನ್ನ ಮಗನ ಮೇಲೆ ಔರಂಗಜೇಬನಿಗೆ ಸಂಶಯ ಉಂಟಾಯಿತು . ಇವರಿಬ್ಬರ ‘ ಹೊಂದಾಣಿಕೆ ಯಿಂದ ‘ ಶಿವಾಜಿ ಎಲ್ಲೆಡೆ ಜಯಭೇರಿ ಬಾರಿಸುತ್ತಿರಬಹುದೇ ಎಂಬ ಪ್ರಶ್ನೆ ಉದ್ಭವಿಸಿತು .

ಯಶವಂತಸಿಂಹನಿಗೆ ಶಿವಾಜಿಯ ಬಗ್ಗೆ ಅವನಲ್ಲಿ ದ್ವೇಷವಿರಲಿಲ್ಲ . ಮೊಗಲರ ಪ್ರಾಂತ್ಯಗಳಲ್ಲಿ ಶಿವಾಜಿಯ ಹಾವಳಿ ಹೆಚ್ಚುತ್ತಿದ್ದರೂ ತನ್ನ ಮಗ ಯಾಕೆ ಸುಮ್ಮನಿದ್ದಾನೆ ಎಂಬ ಪ್ರಶ್ನೆ ಔರಂಗಜೇಬನನ್ನು ಆದರೆ ಅವನ ಪ್ರಶ್ನೆಗೆ ಉತ್ತರ ಸಿಗಲಿಲ್ಲ .

ಸಮಯ ಸಂದರ್ಭ ಬಂದರೆ ಶಿವಾಜಿಯಂತಹ ವೀರನ ಸಹಾಯ ಬೇಕಾಗಬಹುದು ಎಂದು ಮುಅಜಿಮ್ ಶಿವಾಜಿಯ ವಿರೋಧ ಕಟ್ಟಿಕೊಳ್ಳಲು ಇಷ್ಟಪಡಲಿಲ್ಲ .

 

ಶಿವಾಜಿಯನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಯೋಚಿಸಿದ ಔರಂಗಜೇಬನು ಯಶವ ೦ ತಸಿ ೦ ಹನನ್ನು ವಾಪಸ್ ಕರೆಸಿಕೊಂಡು ಮೊಹಬತ್ ಖಾನ್ ಎಂಬುವ ನನ್ನು ಸೇನಾಪತಿ ಯನ್ನಾಗಿ ನೇಮಿಸಿ ದಕ್ಷಿಣ ಭಾರತಕ್ಕೆ ಕಳುಹಿಸಿದನು .

ಸುಮಾರು ನಲವತ್ತು ಸಾವಿರ ಸೈನಿಕರು ಅವನ ಹಿಂದೆ ಹೋದರು . ಕ್ರಿಶ 1672 ರಲ್ಲಿ ಮೊಗಲರು ಸಾಲೇರಿದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು .

ಮರಾಠರ ಮತ್ತು ಮೊಗಲರ ನಡುವೆ ಭೀಕರ ಯುದ್ಧ ನಡೆಯಿತು . ಎರಡೂ ಕಡೆಯ ಸೈನಿಕರು ಪರಾಕ್ರಮದಿಂದ ಕಾದಾಡಿದರು . ಈ ಬಾರಿಯೂ ವಿಜಯಲಕ್ಷ್ಮಿ ಶಿವಾಜಿಗೆ ಒಲಿದಳು . ಮೊಗಲರ ಬಣದ ಆನೇಕ ಶೂರರು , ಸಾಹಸಿಗಳು ಮೃತಪಟ್ಟರು .

ಅನೇಕರು ಸೆರೆಯಾದರು . ಈ ಘೋರ ಯುದ್ಧದಲ್ಲಿ ಶಿವಾಜಿಯ ಬಾಲ್ಯ ಸ್ನೇಹಿತ ಜಾವಲಿ ರಾಯರಿ , ಮತ್ತೊಬ್ಬ ವೀರಯೋಧ ಸೂರ್ಯರಾವ್ ಕಾಂಕಡೆ ಹತರಾದರು . ಶಿವಾಜಿಯು ಎಂದಿನಂತೆ ತನ್ನ ಮಾನವೀಯತೆ ಸ್ವಭಾವವನ್ನು ತೋರಿದನು .

ಯುದ್ಧದಲ್ಲಿ ಗಾಯಗೊಂಡಿದ್ದ ಶತ್ರುಗಳಿಗೆ ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟನು . ಕೆಲವರಿಗೆ ತನ್ನ ಸಂಸ್ಥಾನದಲ್ಲೇ ಕೆಲಸ ಕೊಟ್ಟನು . ಸ್ವಾರಸ್ಯಕರ ಸಂಗತಿಯೆಂದರೆ ಅನೇಕರು ಮೊಗಲ್ ಸೇನೆಯನ್ನು ಬಿಟ್ಟು ಶಿವಾಜಿಯ ಸೈನ್ಯದಲ್ಲಿ ಕೆಲಸಕ್ಕೆ ಸೇರಿದರು .

ಸಾಲೇರಿದುರ್ಗ ಶಿವಾಜಿಯ ಬಳಿಯೇ ಉಳಿಯಿತು . ಔರಂಗಜೇಬನು ಮತ್ತೆ ಕಿಡಿಕಿಡಿಯಾದ . ತನ್ನ ಸೈನಿಕರೆಲ್ಲ ಹುಳುಗಳಂತೆ ಸಾಯುತ್ತಿರುವುದನ್ನು ಕಂಡು ತಲೆಯ ಮೇಲೆ ಕೈಹೊತ್ತು ಕುಳಿತ . ಆದರೆ ಮನಸ್ಸು ಮಾತ್ರ ಕುದಿಯುತ್ತಲೇ ಇತ್ತು .

ಶಿವಾಜಿಗೆ ಹೇಗಾದರೂ ಮಾಡಿ ತಕ್ಕ ಪಾಠ ಕಲಿಸಬೇಕು ಎಂದುಕೊಂಡ ಅವನು ಗುಜರಾತಿನ ಸುಬೇದಾರನಾದ ಬಹುದೂರ್ ಖಾನ್‌ನನ್ನು ದಕ್ಷಿಣದತ್ತ ಕಳುಹಿಸಿದ .

ತನ್ನ ಮಗನನ್ನು ಮತ್ತು ಮೊಹಬತ್ ಖಾನ್‌ನನ್ನು ಹಿಂದಕ್ಕೆ ಕರೆಸಿಕೊಂಡ . ಇದೇ ಸಮಯದಲ್ಲಿ ಶಿವಾಜಿ ಗೋಳ್ಕೊಂಡ ಮೇಲೆ ದಂಡೆತ್ತಿ ಹೋಗಿ ಸುಲ್ತಾನನಿಂದ ಸಾಕಷ್ಟು ಹಣಪಡೆದು ರಾಯಗಢಕ್ಕೆ ಹಿಂದಿರುಗಿದ

ಆನಂತರ ದಕ್ಷಿಣದಲ್ಲಿ ಸೊಂಡವೆಂಬ ದುರ್ಗದವರೆಗೂ ಕೊಂಕಣದೇಶವನ್ನೂ ಸಹ್ಯಾದಿಗೆ ಪೂರ್ವಕ್ಕಿರುವ ಪಶ್ಚಿಮ ಪ್ರಸ್ಥಭೂಮಿಯನ್ನೂ ಜಯಿಸಿದನು .

ಕ್ರಿಶ 1673 ರಲ್ಲಿ ಶಿವಾಜಿಯು ವಿಶಾಲಗಢದಲ್ಲಿ ಒಂದು ದೊಡ್ಡ ದಂಡನ್ನು ಜೋಡಿಸಿಟ್ಟು ಸಂಸ್ಥಾನದವರ ಕೈಸೇರಿದ್ದ ಪನ್ಹಾಲದುರ್ಗವನ್ನು ಸ್ವಾಧೀನ ಬಿಜಾಪುರ ಪಡಿಸಿಕೊಂಡನು .

ಶಿವಾಜಿಯು ಬಿಜಾಪುರ ಸಂಸ್ಥಾನದ ಆಧೀನದಲ್ಲಿದ್ದ ಪಶ್ಚಿಮ ಕರಾವಳಿ ಪ್ರದೇಶವನ್ನು ವಶಪಡಿಸಿಕೊಳ್ಳಬೇಕೆಂದು ಕಾರವಾರಕ್ಕೆ ಯುದ್ಧದ ಹಡಗು ಗಳನ್ನು ಕಳುಹಿಸಿದನು .

ಮರಾಠರು ಕಾರವಾರ , ಅಂಕೋಲ ಊರುಗಳ ಮೇಲೆ ದಾಳಿಮಾಡಿ ಬಿಜಾಪುರ ಸಂಸ್ಥಾನದ ವಶದಲ್ಲಿದ್ದ ದುರ್ಗಗಳನ್ನೆಲ್ಲ ಸ್ವಾಧೀನಪಡಿಸಿಕೊಂಡರು .

ಬಿದನೂರು ಸಂಸ್ಥಾನದ ರಾಜ ಶಿವಪ್ಪನಾಯಕನು ಶಿವಾಜಿಗೆ ಕಪ್ಪವನ್ನು ಕೊಡಲೊಪ್ಪಿದನು . ಹೀಗೇ ಹಲವು ಗ್ರಾಮ , ದುರ್ಗ , ಪ್ರಾಂತ್ಯಗಳನ್ನು ಶಿವಾಜಿಯು ವಶಪಡಿಸಿಕೊಳ್ಳುತ್ತಿರುವುದನ್ನು ಕಂಡ ಬಿಜಾಪುರದ ಸಂಸ್ಥಾನದ ಕರೀಂಖಾನ್‌ಗೆ ಮೈ ಉರಿಯಿತು .

ಶಿವಾಜಿಯ ಮುನ್ನಡೆಗೆ ಮಂಗಳಹಾಡಬೇಕು ಎಂದು ನಿರ್ಧರಿಸಿ ಆತನ ಮೇಲೆ ದಂಡೆತ್ತಿ ಬಂದ , ಆದರೆ ಶಿವಾಜಿಗೆ ಕರೀಂಖಾನ್ ಲೆಕ್ಕಕ್ಕಿಲ್ಲದಂತಾದನು . ಪ್ರತಾಪರಾಯ ಸಾಕಷ್ಟು ಸೇನೆಯನ್ನು ತೆಗೆದುಕೊಂಡು ಹೋಗಿ ಕರೀಂಖಾನ್‌ನನ್ನು ಸುಲಭವಾಗಿ ಮಣಿಸಿದನು .

ಅಷ್ಟೇ ಅಲ್ಲ , ಇನ್ನು ಮುಂದೆ ಶಿವಾಜಿಯ ಮೇಲೆ ಯಾವತ್ತೂ ಯುದ್ಧ ಮಾಡುವುದಿಲ್ಲವೆಂದು ಅವನ ಕೈಲಿ ಪ್ರಮಾಣ ಮಾಡಿಸಿದನು . ಕರೀಂಖಾನ್ ನಾಗರಹಾವಿನಂತೆ ಸೇಡು ತೀರಿಸಿಕೊಳ್ಳಲು ಸಮಯಕ್ಕಾಗಿ ಕಾದುಕುಳಿತನು .

ಕ್ರಿ.ಶ. 1674 ರಲ್ಲಿ ಕರೀಂಖಾನ್ ಮತ್ತೆ ಶಿವಾಜಿಯ ಮೇಲೆ ದಂಡೆತ್ತಿ ಬಂದ . ಈ ಬಾರಿ ಆತ ಸ್ವಲ್ಪ ಮಟ್ಟಿಗೆ ಮೇಲುಗೈ ಸಾಧಿಸಿದ . ಪನ್ಸಾಲ್ ಸಮೀಪವಿದ್ದ ಕೆಲವು ಪ್ರದೇಶಗಳನ್ನು ಹಾಳುಗೆಡವಿದ . ಪ್ರತಾಪರಾಯ ಸ್ವಲ್ಪ ರೋಷದಿಂದಲೇ ಕರೀಂಖಾನ್ ಮೇಲೆ ನುಗ್ಗಿದ .

ಬಿಜಾಪುರಕ್ಕೂ ಮತ್ತು ಮೀರಜ್‌ಗೂ ನಡುವೆ ಇದ್ದ ಉಂಬರಾಣಿಯೆಂಬ ಸ್ಥಳದಲ್ಲಿ ಎರಡೂ ಘೋರ ಯುದ್ಧ ನಡೆಯಿತು . ದುರದೃಷ್ಟವಶಾತ್ ಪ್ರತಾಪರಾಯ ಮೃತನಾದ .

ಈತನ ಸಾವು ಮಾವಳಿಗಳಿಗೆ ಆಘಾತ ಉಂಟುಮಾಡಿತು . ರೊಚ್ಚಿನಿಂದ ಅವರು ಕರೀಂಖಾನ್ ಸೈನಿಕರ ಮೇಲೆ ಮುಗಿಬಿದ್ದರು . ಶಿವಾಜಿಯ ಬಣದಲ್ಲಿದ್ದ ಹಂಸಾಜಿ ಮೋಹಿತೆಯೆಂಬುವನು ನಾಲ್ಕು ಸಾವಿರ ಮಂದಿ ಸೈನಿಕರೊಂದಿಗೆ ವೈರಿಗಳನ್ನು ಮುತ್ತಿಗೆ ಹಾಕಿದನು .

ಆಗ ಕರೀಂಖಾನ್‌ನ ಜಂಘಾಬಲವೇ ಉಡುಗಿಹೋಯಿತು . ಬೇರೆ ದಾರಿ ಕಾಣದೆ ಉಳಿದ ಸೈನಿಕರೊಡನೆ ಬಿಜಾಪುರಕ್ಕೆ ಓಡಿಹೋದನು . ಮರಾಠರು ಗೆಲವು ಸಾಧಿಸಿದರು .

ಶಿವಾಜಿಯು ಕೈ ಬಿಟ್ಟುಹೋಗಿದ್ದ ನಾಡುಗಳನ್ನೆಲ್ಲ ಮತ್ತೆ ಸ್ವಾಧೀನಕ್ಕೆ ತಂದುಕೊಂಡು ನಾಲ್ಕು ದಿಕ್ಕುಗಳಲ್ಲೂ ತನ್ನ ರಾಜ್ಯವನ್ನು ವಿಸ್ತರಿಸಿದನು .

ಅವನ ವಿಜಯ ಉತ್ತರದಲ್ಲಿ ಸೂರತ್‌ವರೆಗೂ , ದಕ್ಷಿಣದಲ್ಲಿ ಹುಬ್ಬಳ್ಳಿ ಮತ್ತು ಬಿದನೂರುವರೆಗೂ , ಪೂರ್ವದಲ್ಲಿ ಬಿರಾರು , ಬಿಜಾಪುರ ಗೋಲ್ಗೊಂಡ ಸಂಸ್ಥಾನಗಳವರೆಗೂ ಹಬ್ಬಿತು .

ಹಲವು ರಾಜರು ಶಿವಾಜಿಗೆ ಕಪ್ಪವನ್ನು ಕೊಟ್ಟು ತಮ್ಮ ತಮ್ಮ ರಾಜ್ಯಗಳನ್ನು ಉಳಿಸಿಕೊಂಡರು .

 

Comments

Leave a Reply

Your email address will not be published. Required fields are marked *