Atal Bihari Vajpayee । ಆಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಪ್ರಬಂಧ

ಆಟಲ್ ಬಿಹಾರಿ ವಾಜಪೇಯಿ

Atal Bihari Vajpayee

atal bihari vajpayee , vajpayee, atal bihari, ab vajpayee, atal bihari vajpayee in kannada , bihari vajpayee, atal ji

atal bihari vajpayee , vajpayee, atal bihari, ab vajpayee, atal bihari vajpayee in kannada , bihari vajpayee, atal ji

ಜನ್ಮದಿನ – 1924  ಡಿ25

ಅಧಿಕಾರ ಅವಧಿ 

19.ಮಾ .1998 – 22.ಮೇ , 2004

ಸ್ಥಳ – ಗ್ವಾಲಿಯರ್

ಆಟಲ್ ಬಿಹಾರಿ ವಾಜಪೇಯಿ ಅವರು ಅಜಾತಶತ್ರು ಎಂದೇ ಖ್ಯಾತರಾದವರು , ಜೋಪಾನ ಅಣು ಪರೀಕ್ಷೆ ( ಮೇ .11.1998 ರಲ್ಲಿ 3 ಪರೀಕ್ಷೆಗಳು – ಮೇ .13,1998 ರಲ್ಲಿ ಎರಡು ಪರೀಕ್ಷೆಗಳು ) ಒಟ್ಟು ಐದು ಪರೀಕ್ಷೆಗಳು “ ಆಪರೇಷನ್ ಶಕ್ತಿ ” ಎಂಬ ಹೆಸರಿನಲ್ಲಿ ನಡೆದವು , ಮೇ 11 , 1998 ರಲ್ಲಿ ಯಶಸ್ವಿಯಾಗಿ ಪ್ರೋಖಾನ್ ಪರೀಕ್ಷೆ ನಡೆಸಿದ ಪರಿಣಾಮವಾಗಿ ಮೇ 11 ನ್ನು ಪ್ರತಿವರ್ಷ ರಾಷ್ಟ್ರೀಯ ತಂತ್ರಜ್ಞಾನದಿನವಾಗಿ ಪ್ರತಿವರ್ಷ ಆಚರಿಸಲಾಗುತ್ತಿದೆ .

ಈ ಸಂದರ್ಭದಲ್ಲಿ ವಾಜಪೇಯಿ ಅವರು ಜೈ ಜವಾನ್ , ಜೈ ಕಿಸಾನ್ ಈ ವಿಜ್ಞಾನ ಎಂಬ ಘೋಷಣೆ ನೀಡಿದರು . ಸರ್ವಶಿಕ್ಷಣ ಅಭಿಯಾನ ಯೋಜನೆ 2001 ರಿಂದ ಪಾರಂಭವಾಯಿತು .

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ ,

ನಾಲ್ಕು ನಗರಗಳಾದ ದೆಹಲಿ ,

ಮುಂಬೈ ,

ಚೆನ್ನೈ ಕೋಲ್ಕತ್ತಾಗಳನ್ನು ಸೇರಿಸುವ ಸುವರ್ಣ ಚತುಕ್ಕೋನ ಯೋಜನೆ , ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು 2000 ಡಿಸೆಂಬರ್ 25 ರಂದು ಆರಂಭಿಸಲಾಯಿತು.

ಇವರ ಜನ್ಮದಿನವಾದ ಡಿಸೆಂಬರ್ 25 ನ್ನು ಉತ್ತಮ ಅಡಕತ ದಿನ ಎಂದು 2014 ರಿಂದ ಆಚರಿಸಲಾಗುತ್ತಿದೆ .

1996 ರಲ್ಲಿ ವಾಜಪೇಯಿ ಅವರು 13 ದಿನಗಳ ಕಾಲ ಪ್ರಧಾನಿಯಾಗಿದ್ದರು . ನಂತರ 1998 ರಿಂದ 2004 ರವರೆಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ .

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ , ಇತರೆ ಪಕ್ಷದಿಂದ 5 ವರ್ಷ ಪೂರ್ಣಗೊಳಿಸಿದ ಪ್ರಧಾನಿಯಾಗಿದ್ದಾರೆ .

1977 ರಲ್ಲಿ ಮೊರಾರ್ಜಿದೇಸಾಯಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು .

ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲಿಗರೆನಿಸಿದ್ದಾರೆ .

ಇವರು 4 ರಾಜ್ಯ ( ಉ.ಪ್ರದೇಶ , ಗುಜರಾತ್ , ಮಧ್ಯಪ್ರದೇಶ , ದೆಹಲಿ ) ಗಳಿಂದ ಸಂಸತ್‌ಗೆ ಆಯ್ಕೆಯಾಗಿ ಬಂದಿದ್ದಾರೆ . ಇವರಿಗೆ 2014 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ .

ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಇವರೂ ಒಬ್ಬರು , ನಂತರ 1980 ರಲ್ಲಿ ಭಾರತೀಯ ಜನತಾ ಪಕ್ಷವನ್ನು ಅದರ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು .

ಇವರ ಅಧಿಕಾರಾವಧಿಯಲ್ಲಿ 2000 ನವೆಂಬರ್ 1 ಮಧ್ಯಪ್ರದೇಶದಿಂದ ಛತ್ತೀಸ್‌ಗಡ ರಾಜ್ಯ , 2000 ನವೆಂಬರ್ 9 ರಂದು ಉ.ಪ್ರದೇಶದಿಂದ ಉತ್ತರಾಖಂಡ ರಾಜ್ಯ ಬಿಹಾರದಿಂದ ಜಾರ್ಖಂಡ್ ರಾಜ್ಯವನ್ನು ಪ್ರತ್ಯೇಕಿಸಿ , ಕ್ರಮವಾಗಿ 26 , ನೇ ರಾಜ್ಯವಾಗಿ ಸ್ಥಾಪಿಸಿದರು .

ಇವರು 2002 ರಲ್ಲಿ 86 ನೇ ಸಂವಿಧಾನಾತ್ಮಕ ತಿದ್ದುಪಡಿಯನ್ನು ತಂದು 21 ( ಎ ) ವಿಧಿಯನ್ನು ಸಂವಿಧಾನಕ್ಕೆ ಸೇರ್ಪಡೆ ಮಾಡಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವುದನ್ನು ಮೂಲಭೂತ ಹಕ್ಕನ್ನಾಗಿ ಮಾಡಿದರು .

ಈ ತಿದ್ದುಪಡಿಯಲ್ಲಿ 51 ( ಕೆ ) ವಿಧಿಯನ್ನು ಸೇರಿಸಿ 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಪೋಷಕರ ಕರ್ತವ್ಯ ಎಂದು ತಿದ್ದುಪಡಿ ಮಾಡಲಾಯಿತು . ಇವರು ಮೂಲತಃ ಪತ್ರಕರ್ತರಾಗಿದ್ದು .

ರಾಷ್ಟ್ರಧರ್ಮ , ಪಾಂಚಜನ್ಯ , ಸ್ವದೇಶ , ವೀರ ಆರ್ಜುನ್ ‘ ಎಂಬ ಪತ್ರಿಕೆಗಳ ಸಂಪಾದಕರಾಗಿದ್ದರು . ಇವರ ಅಧಿಕಾರವಧಿಯಲ್ಲಿ 1999 ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು .

ಈ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿ ಜುಲೈ 26 ನ್ನು ಕಾರ್ಗಿಲ್ ವಿಜಯದ ದಿವಸ’ವಾಗಿ ಆಚರಿಸಲಾಯಿತು ,

ಇವರ ಅಧಿಕಾರಾವಧಿಯಲ್ಲಿ 2001 ಡಿಸೆಂಬರ್ 13 ರಂದು ನವದೆಹಲಿ ಪಾರ್ಲಿಮೆಂಟ್ ಭವನದ ಮೇಲೆ ಲಷ್ಕರ ತೋಯ್ದಾ ಉಗ್ರರು ದಾಳಿ ನಡೆಸಿದರು .

ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಮೋಟಾ ( POTA – Prevention of Terrorist Act ) ನ್ನು ಜಾರಿಗೆ ತರಲಾಯಿತು .

ಈ ಕಾಯ್ದೆಯನ್ನು 2004 ರಲ್ಲಿ ಯು.ಪಿ.ಎ ಸರ್ಕಾರವು ನಿರಸನಗೊಳಿಸಿತು . ವಾಜಪೇಯಿ ಅವರ ಅವಧಿಯಲ್ಲಿ ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ದೆಹಲಿಯಿಂದ ಲಾಹೋರ್‌ಗೆ 1999 ಫೆಬ್ರವರಿ 19 ರಂದು ಬಸ್ ಸಂಚಾರ ಆರಂಭವಾಯಿತು .

ಈ ಬಸ್ ಸೇವೆಯನ್ನು Sada – E – Sarhad ಎನ್ನುವರು .ಈ ಸೇವೆಯನ್ನು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಯಿತು .

ಇವರಿಗೆ 1992 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು . 2015 ರಲ್ಲಿ ಬಾಂಗ್ಲಾ ದೇಶವು ” ಲಿಬರೇಷನ್ ವಾರ್ ಅವಾರ್ಡ್ ನ್ನು ನೀಡಿತು .

2000 ಡಿಸೆಂಬರ್ 25 ರಂದು ವಾಜಪೇಯಿ ಅವರು ಗ್ರಾಮೀಣ ಭಾಗದಲ್ಲಿ ಎಲ್ಲ ಋತುಗಳಲ್ಲೂ ರಸ್ತೆ ಸಂಪರ್ಕವನ್ನು ಕಲ್ಪಿಸುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ” ಯನ್ನು ಉದ್ಘಾಟಿಸಿದರು .

ಈ ಮೂಲಕ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸಿದರು . 1998 ರಲ್ಲಿ ರಾಷ್ಟ್ರೀಯ ಭದ್ರತೆ ಸಲಹೆಗಾರ ಹುದ್ದೆಯನ್ನು ಆರಂಭಿಸಲಾಯಿತು .

ಈ ಹುದ್ದೆಯು ಪ್ರಧಾನಮಂತ್ರಿಗಳಿಗೆ ಪ್ರಮುಖ ಸಲಹೆಗಾರರಾಗಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭದ್ರತೆಗೆ ಸಲಹೆ ನೀಡುವ ಹುದ್ದೆಯಾಗಿದೆ .

1998 ನವೆಂಬರ್ 19 ರಂದು ಬ್ರಿಜೇಶ್ ಮಿಶ್ರಾ ಅವರನ್ನು ರಾಷ್ಟ್ರೀಯ ಭದ್ರತೆ ಸಲಹೆಗಾರರಾಗಿ ನೇಮಿಸಲಾಯಿತು . ಇವರ ಅವಧಿಯಲ್ಲಿ ದೆಹಲಿ ಮೆಟ್ರೋ ರೈಲನ್ನು 2002 ಡಿಸೆಂಬರ್ 24 ರಂದು ಉದ್ಘಾಟಿಸಲಾಯಿತು .

ಈ ಮೆಟ್ರೋ ಜಗತ್ತಿನ ದೊಡ್ಡ ಮೆಟ್ರೋಗಳಲ್ಲಿ ಒಂದಾಗಿದೆ . ಮತ್ತು ಜಗತ್ತಿನ ಉತ್ತಮ ಮೆಟ್ರೋಗಳಲ್ಲಿ 2 ನೇ ಸ್ಥಾನವನ್ನು ಪಡೆದಿದೆ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ಕನ್ನಡ ಕವಿಗಳು 

ಶಾಸನಗಳು 

ಅಕ್ಕಮದೇವಿ …..

 

Comments

Leave a Reply

Your email address will not be published. Required fields are marked *