
ಪರಿವಿಡಿ
1919 ರ ಮಾಂಟೆಗೊ – ಜೇಮ್ಸ್ ಫರ್ಡ್ ಸುಧಾರಣಿ
( Montagu – Chelmsford Act )
montagu chelmsford act , 1919 act, rowlatt act, montagu chelmsford reforms, montague chelmsford reform,1919 ರ ಮಾಂಟೆಗೊ – ಜೇಮ್ಸ್ ಫರ್ಡ್ ಸುಧಾರಣಿ
ಮೊದಲ ಮಹಾಯುದ್ಧ ಸಂದರ್ಭದಲ್ಲಿ ಭಾರತೀಯರು ಸಕ್ರಿಯವಾಗಿ ಭಾಗವಹಿಸಿದ ಫಲವಾಗಿ ಭಾರತಕ್ಕೆ ಸೆಕ್ರೆಟರಿ ಆಗಿದ್ದ ಮಾಂಟಿಗೋರವರು 1917 , ಆಗಸ್ಟ್ 30 ರಂದು ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಮಾತನಾಡಿ ಆಡಳಿತದ ಎಲ್ಲಾ ರಂಗಗಳಲ್ಲೂ ಭಾರತೀಯರು ಭಾಗವಹಿಸಲು ಅವಕಾಶ ಕೊಡಲಾಗುವುದು ಎಂದು ಹೇಳಿ ಜವಾಬ್ದಾರಿ ಸರ್ಕಾರವನ್ನು ರಚಿಸುವ ಭರವಸೆ ನೀಡಿದರು .
ಇಂತಹ ಭರವಸೆಯನ್ನು ಈಡೇರಿಸಲು ಲಾರ್ಡ್ಮಂಟೆಗೂ ಹಾಗೂ ಆಗಿನ ಭಾರತದ ವೈಸ್ ರಾಯ್ ‘ ‘ ಜೇಮ್ಸ್ ಫರ್ಡ್ ‘ ಭಾರತದಲ್ಲಿ ಸಂಚಾರ ನಡೆಸಿ , ಆನೇಕ ಸುಧಾರಣೆಗಳನ್ನು ಮೇ 24 ಮತ್ತು ಜೂನ್ 7 1918 ರಂದು ಬ್ರಿಟಿಷ್ ಪಾರ್ಲಿಮೆಂಟ್ಗೆ ವರದಿ ಮಾಡಿದರು .
ಬ್ರಿಟಿಷ್ ಪಾರ್ಲಿಮೆಂಟ್ ಈ ವರದಿಯನ್ನು ಅಂಗೀಕರಿಸಿ, 1919 ಭಾರತ ಸರ್ಕಾರದ ಕಾಯಿದೆ ” ಎಂದು ಜಾರಿಗೊಳಿಸಿತು .
ಈ ಕಾಯ್ದೆಯಲ್ಲಿ ಅನೇಕ ಸುಧಾರಣೆಗಳಿದ್ದು ಇಂತಹ ಸುಧಾರಣೆಗಳನ್ನು ಮಾಂಟಿಗೋ ಚೇಮ್ಸ್ಫರ್ಡ್ 1919 ಸುಧಾರಣೆಗಳು ‘ ಕಾಯಿದೆಯು 1919 ರಿಂದ ಈ ಎನ್ನುವರು . 1929 ರವರೆಗೆ 10 ವರ್ಷ ಜಾರಿಯಲ್ಲಿತ್ತು
ಈ ಕಾಯಿದೆಯ ಪ್ರಮುಖ ಉದ್ದೇಶಗಳೆಂದರೆ
1 ) ಜವಾಬ್ದಾರಿ ಸರ್ಕಾರ ರಚಿಸುವುದು .
2 ) ಆಡಳಿತದ ಎಲ್ಲಾ ರಂಗದಲ್ಲೂ ಭಾಗವಹಿಸುವಂತೆ ಮಾಡುವುದು . ಭಾರತೀಯರು
3 ) ಭಾರತವನ್ನು ಬ್ರಿಟಿಷ್ ಸಾಮಾಜ್ಯದ ಅಂಗವನ್ನಾಗಿ ಉಳಿಸುವುದು .
ಈ ಕಾಯಿದೆಯ ಪ್ರಮುಖ ಅಂಶಗಳೆಂದರೆ
1 ) ಲೆಫ್ಟಿನೆಂಟ್ ರಾಜ್ಯಪಾಲರುಗಳಿಗೆ ರಾಜ್ಯಪಾಲರುಗಳಾಗಿ ಬಡ್ತಿ ನೀಡಲಾಯಿತು . ಮುಂಬಯ
2 ) ಮದ್ರಾಸ್ , ಮತ್ತು ಬಂಗಾಳ ರಾಜ್ಯಪಾಲರುಗಳ ವಿಶಿಷ್ಟ ಸವಲತ್ತುಗಳನ್ನು ಮುಂದುವರಿಸಲಾಯಿತು .
3 ) ಮೊದಲ ಬಾರಿಗೆ ಸಂವಿಧಾನಾತ್ಮಕ ಬೆಳವಣಿಗೆಯ ಧೈಯವನ್ನು ಇಟ್ಟು ಕೊಂಡು ಜವಾಬ್ದಾರಿ ಸರ್ಕಾರ ರಚಿಸಿತು ಈ ಕಾಯ್ದೆಯ ಮಹತ್ವದ ಅಂಶವೆಂದರೆ ದ್ವಿ ಸರ್ಕಾರ ಪದ್ಧತಿ ಯನ್ನು ಸ್ಥಾಪಿಸಿತು .
3 ) ಕಾಯಿದೆಯು ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳ ನಡುವಿನ ಕಾರ್ಯಗಳನ್ನು ಸ್ಪಷ್ಟವಾಗಿ ವಿಂಗಡಿಸಿ ಕೌನ್ಸಿಲ್ನಲ್ಲಿ ಇಬ್ಬರಿಗೆ ಬದಲಾಗಿ 3 ಜನ ಭಾರತೀಯರನ್ನು ನೇಮಕ ಮಾಡಿಕೊಳ್ಳಲು ಅಧಿಕಾರ ಕೊಡಲಾಯಿತು . ಕೌನ್ಸಿಲ್ ಅಧಿಕಾರವಧಿಯನ್ನು 7 ರಿಂದ 5 ವರ್ಷಕ್ಕೆ ಇಆಸಲಾಯಿತು .
4 ) ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ಸಂಖ್ಯೆಯು ಎರಡರಿಂದ ಮೂರಕ್ಕೆ ಏರಿತು ,
ವೈಸ್ರಾಯ್ನನ್ನು ಭಾರತದಲ್ಲಿ ರಾಜನ ಪ್ರತಿನಿಧಿ ಎಂದು ಭಾವಿಸಿ ಉನ್ನತ ಗೌರವ ಸ್ಥಾನ ನೀಡಲಾಯಿತು . ಅವರು ದೇಶಕ್ಕೆ ಬೇಕಾಗುವ ಕಾಯಿದೆ ರಚಿಸುವ ಅಧಿಕಾರ ನೀಡಲಾಯಿತು ,
5 ) ವೈಸ್ರಾಯ್ನಿಗೆ ವಿಟೋ ಅಧಿಕಾರವನ್ನು ನೀಡಲಾಯಿತು .
6 ) ಪ್ರಾಂತೀಯ ಕಾರ್ಯಾಂಗದಲ್ಲಿ ಪ್ರತಿಯೊಂದು ಪಾಂತ್ಯಕ್ಕೂ ಚಕ್ರವರ್ತಿಯಿಂದ ನೇಮಕಗೊಂಡ ಗೌರರ್ ಇರುತ್ತಿದ್ದರು .
7 ) ಕೇಂದ್ರ ಶಾಸಕಾಂಗದಲ್ಲಿ ಸ್ಟೇಟ್ಸ್ ಕೌನ್ಸಿಲ್ ಮತ್ತು ಶಾಸನ ಸಭೆ ( ಸೆಂಟ್ರಲ್ ಲೆಜಸ್ಟೇಟಿವ್ ಅಸೆಂಬ್ಲಿ ) ಎಂಬ ಎರಡು ಸದನಗಳು ಬಂದವು ,
ಶಾಸನ ಸಭೆ ( ಕೆಳಮನೆ ) ಇದರ ಅವಧಿ ಮೂರು ವರ್ಷಗಳಾಗಿದ್ದು , 144 ಜನ ಒಳಗೊಂಡಿದ್ದು , ಅದರಲ್ಲಿ 104 ಜನರು ನೇರ ಚುನಾವಣೆಯಿಂದ ಆಯ್ಕೆಯಾದರೆ 40 ಮಂದಿ ನಾಮಕರಣಗೊಳ್ಳುತ್ತಾರೆ . ಶಾಸನ ಸಭೆಯ ಸದಸ್ಯರನ್ನು ಆಯ್ಕೆ ಮಾಡಲು ಮತದಾನದ ಹಕ್ಕನ್ನು ನೀಡಲಾಯಿತು .
ಮತ್ತು ಕೌನ್ಸಿಲ್ ಆಫ್ ಸ್ಟೇಟ್ಸ್ ( ಮೇಲ್ಮನೆ ) ನಲ್ಲಿ 10 ಸ್ಥಾನಗಳಿದ್ದು ಅದರಲ್ಲಿ 34 ಸ್ಥಾನಗಳು ಚುನಾವಣೆಯಿಂದ ಆಯ್ಕೆಯಾದರೆ 26 ಸ್ಥಾನಗಳನ್ನು ನಾಮಕರಣ ಮಾಡಲಾಗುತ್ತಿತ್ತು . ( ಇವು ಕ್ರಮವಾಗಿ ಇಂದಿನ ಲೋಕಸಭೆ ಹಾಗೂ ರಾಜ್ಯ ಸಭೆಗೆ ತಳಹದಿ ಹಾಕಿದವು ) ,
8 ) ಭಾರತದ ವ್ಯವಹಾರಗಳ ಕಾರ್ಯದರ್ಶಿಯ ಅಧಿಕಾರ ಮೊಟಕುಗೊಳಿಸಿ , ಭಾರತಕ್ಕೆ ಒಬ್ಬ ಹೈಕಮಿಷನರ್ ನೇಮಕ ಮಾಡಲಾಯಿತು .
9 ) ಸ್ವಯಂ ಆಡಳಿತವುಳ್ಳ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಆಶ್ವಾಸನೆ ನೀಡಲಾಯಿತು .
10 ) ಸರ್ಕಾರದ ಆಡಳಿತವನ್ನು ಕಾಯ್ದಿಟ್ಟ ( Reserved ) ವರ್ಗಾಯಿಸಲ್ಪಟ್ಟ ( Transfered list ) ಹಾಗೂ ಸಹಾಯದಿಂದ ಎಂಬ ಎರಡು ವಿಷಯಗಳಾಗಿ ವಿಂಗಡಿಸಲಾಯಿತು .
ವರ್ಗಾಯಿಸಲ್ಪಟ್ಟ ವಿಷಯಗಳು ಕೃಷಿ ,
ಆರೋಗ್ಯ ,
ಶಿಕ್ಷಣ ಒಳಗೊಂಡಿದ್ದು ವರ್ಗಾಯಿಸಲ್ಪಟ್ಟ ವಿಷಯಗಳನ್ನು ಗೌರರ್ ಮಂತ್ರಿ ಮಂಡಲದ ನಡೆಸಬೇಕಾಗಿತು ,
ಮೀಸಲಿಟ್ಟ ವಿಷಯಗಳು ರಕ್ಷಣೆ ( ಮಿಲಿಟರಿ ) ,
ವಿದೇಶಿ ವ್ಯವಹಾರ ,
ಸಂವಹನ ಒಳಗೊಂಡಿದೆ . ಮೀಸಲಿಟ್ಟ ವಿಷಯಗಳನ್ನು ವೈಸ್ರಾಯ್ ಸಹಾಯದಿಂದ ನಡೆಸಬೇಕಾಗಿತ್ತು
11 ) ಪ್ರಾಂತೀಯ ಶಾಸಕಾಂಗದಲ್ಲಿ ಸದಸ್ಯರ ಸಂಖ್ಯೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನವಾಗಿತ್ತು . ಕೋಮುವಾರು ನೀಡಲಾಯಿತು .
ಮತಕ್ಷೇತ್ರಗಳನ್ನು ಮುಸ್ಲಿಂ , ಸಿಖ್ , ಆಂಗ್ಲೋ ಇಂಡಿಯನ್ ಮತ್ತು ಯುರೋಪಿಯನ್ನರಿಗೆ ಆಧ್ಯತೆ ಕೇಂದ್ರದ ಆಯವ್ಯಯದಿಂದ ಪ್ರಾಂತ್ಯಗಳ ಆಯವ್ಯಯವನ್ನು ಬೇರ್ಪಡಿಸಿತು .
ಮಾಂಟೆಗೊ & ಚೆಲ್ ಫರ್ಡ್
ಎಲ್ಡನ್ ಸುಮೆಲ್ ಮಾಂಟೆಗೊ ಅವರು ಭಾರತ ಸರ್ಕಾರದ ಕಾರ್ಯದರ್ಶಿ ( Secretary of the State for India ) ಯಾಗಿ 1917 ರಿಂದ 1922 ರವರೆಗೆ ಕಾರ್ಯನಿರ್ವಹಿಸಿದ್ದರು .
ಕಾರ್ಡ್ ಭಾರತದ ಚೆಲ್ಸ್ಫರ್ಡ್ ವೈಸ್ರಾಯ್ ಹಾಗೂ ಗೌರರ್ ಜನರಲ್ ಆಗಿ 1916 ರಿಂದ 1921 ರವರೆಗೆ ಕಾರ್ಯನಿರ್ವಹಿಸಿದ್ದರು . ಇವರುಗಳು ವರದಿಯನ್ನು ಸಿದ್ಧಪಡಿಸಿ , ಭಾರತದಲ್ಲಿ ತರಬಹುದಾದ ಸುಧಾರಣೆಗಳ ಬಗ್ಗೆ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದರು .
ಈ ವರದಿಯ ಆಧಾರದ ಮೇಲೆ ಭಾರತ ಸರ್ಕಾರ ಕಾಯ ಜಾರಿಗೆ ತರಲಾಯಿತು . ಇದನ್ನು ಮಾಂಟೆಗೊ ಚೆಲ್ಸ್ಫರ್ಡ್ ಸುಧಾರಣೆ ಎನ್ನುವರು .