1858 ಭಾರತ ಸರ್ಕಾರದ ಕಾಯ್ದೆ

1858 ರ ಭಾರತ ಸರ್ಕಾರದ ಕಾಯ್ದೆ, government of india act 1858, govt of india act 1858, the government of india act 1858, 1858 act in india

1858 ರ ಭಾರತ ಸರ್ಕಾರದ ಕಾಯ್ದೆ, government of india act 1858, govt of india act 1858, the government of india act 1858, 1858 act in india

ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತ ಹಾಗೂ ಭಾರತೀಯರ ವಿರೋಧಿ ಕಾಯ್ದೆಗಳ ಫಲವಾಗಿ ಮೇ .10 , ( 857 , ಭಾರತದ ಮೀರತ್‌ನಲ್ಲಿ ‘ ಸಿಪಾಯಿ ದಂಗೆ ಉಂಟಾಯಿತು .

ಅಂತಹ ಸಂದರ್ಭದಲ್ಲಿ ಕಂಪನಿಯ ಆಡಳಿತವು ಬ್ರಿಟನ್ ರಾಣಿಗೆ ಹಸ್ತಾಂತರವಾಯಿತು 1858 ರಿಂದ ಬ್ರಿಟಿಷ್ ಪಾರ್ಲಿಮೆಂಟ್ ನೇರವಾಗಿ ಭಾರತದ ಆಳ್ವಿಕೆಯನ್ನು ಪ್ರಾರಂಭಿಸಿತು .

1858 ರಿಂದ ಬ್ರಿಟಿಷ್ ಪಾರ್ಲಿಮೆಂಟ್ ಭಾರತದಲ್ಲಿ ಆಳ್ವಿಕೆ ನಡೆಸಲು – ಹೊರಡಿಸಿದ ಕಾಯ್ದೆಗಳನ್ನು “ ಬ್ರಿಟಿಷ್ ಸರ್ಕಾರದ ಕಾಯ್ದೆ ” ಗಳೆನ್ನುವರು .

ಬ್ರಿಟಿಷ್ ಸರ್ಕಾರದ ಕಾಯ್ದೆಗಳು  ಪ್ರಾರಂಭವಾಗಿ ಭಾರತಕ್ಕೆ 1947 ರಲ್ಲಿ ಅಧಿಕಾರ ಹಸ್ತಾಂತರವಾಗುವವರೆಗೆ ಜಾರಿಯಲ್ಲಿದ್ದವು . ಅಷ್ ಸರ್ಕಾರ ಭಾರತದಲ್ಲಿ ಜಾರಿಗೆ ತಂದ ಕಾಯ್ದೆಗಳು

1858 ಭಾರತ ಸರ್ಕಾರದ ಕಾಯ್ದೆ

ಭಾರತದಲ್ಲಿ 1857 ರ ಸಿಪಾಯಿ ದಂಗೆಯು ಕಂಪನಿಯ ಆಡಳಿತವನ್ನು ಕೊನೆಗಾಣಿಸಿತು , ಹಾಗೂ ಬ್ರಿಟಿಷ್ ಸರ್ಕಾರ ( ರಾಣಿಯ ) ನೇರವಾಗಿ ಆಳ್ವಿಕೆಗೆ ಒಳಪಡು ವಂತಾಯಿತು .

ನವಂಬರ್ 1. 1858 ರಂದು ಬ್ರಿಟಷ್ ರಾಣಿ ವಿಕ್ಟೋರಿಯಾ ಒಂದು ಘೋಷಣೆ ಹೊರಡಿಸಿ ತಮ್ಮ ಆಡಳಿತದ ಅವಧಿಯಲ್ಲಿ ಭಾರತದ ಎಲ್ಲಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಘೋಷಿಸಿದರು .

ಭಾರತ ದೇಶದ ಆಡಳಿತಕ್ಕೆ ಸಂಬಂಧಿಸಿದಂತೆ ಆಗಸ್ಟ್ 2 , 1858 ರಂದು ಬ್ರಿಟನ್ ಸಂಸತ್ತಿನಲ್ಲಿ ಕಾಯ್ದೆಯನ್ನು ಅ ೦ ಗೀಕರಿಸಿದರು . ಅಂತಹ ಕಾಯ್ದೆಯೇ 1858 ಭಾರತ ಸರ್ಕಾರ ಕಾಯ್ದೆ ಇದರ ಮೂಲ ಹೆಸರು ” An Act for the Better Government of In dial ” ಎಂದಾಗಿತ್ತು .

ಈ ಶಾಸನ ಭಾರತದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ . ಇದನ್ನು ಭಾರತದ ಸುಧಾರಿತ ಆಡಳತದ ಕಾನೂನು ಎನ್ನುವರು .

1 ) ಈ ಕಾಯ್ದೆ ಅನ್ವಯ ಈಸ್ಟ್ ಇಂಡಿಯಾ ಕಂಪನಿ ಮಾನ್ಯತೆ ರದ್ದುಗೊಳಿಸಿ . ಸರ್ಕಾರದ , ಭೂಪ್ರದೇಶದ ಕಂದಾಯದ ಅಧಿಕಾರವನ್ನು ರಾಣಿಗೆ ವರ್ಗಾವಣೆಯಾಯಿತು , ನೀಡಿದರು . ರಾಣಿಯ ನೇರ

2 ) ಗೌರರ್‌ ಜನರಲ್ ಹುದ್ದೆಯ ಪದನಾಮವನ್ನು ಬದಲಾಯಿಸಿ “ ವೈಸ್‌ರಾಯ್ ” ಎಂಬ ಪದನಾಮವನ್ನು ವೈಸ್‌ರಾಯ್ ಪ್ರತಿನಿಧಿಯಾದರು , ಮೊಟ್ಟ ಮೊದಲ ವೈಸರಾಯ್ ಆಗಿ “ ಲಾರ್ಡ್ ಕ್ಯಾನಿಂಗ್ ” ನೇಮಕಗೊಂಡರು .

3 ) ಬ್ರಿಟಿಷ್ ಆಡಳಿತದಲ್ಲಿ ಭಾರತ ಎರಡು ಭಾಗವಾಗಿತ್ತು . ಬ್ರಿಟಿಷ್ ಇಂಡಿಯಾ ಸುಮಾರು 2/3 ರಷ್ಟು ಭೂ ಪ್ರದೇಶವನ್ನು ಹೊಂದಿದ್ದು , ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆಗೆ ಒಳಪಟ್ಟಿತ್ತು . ದೇಶಿಯ ಸಂಸ್ಥಾನಗಳು ದೇಶಿಯ ರಾಜರುಗಳ ಆಳ್ವಿಕೆಗೆ ಒಳಪಟ್ಟಿದವು

4 ) ಬೋರ್ಡ್ ಆಫ್ ಡೈರೆಕ್ಟರ್‌ನ್ನು ವಜಾಗೊಳಿಸಿ ದ್ವಿಸರ್ಕಾರ ಪದ್ಧತಿಯನ್ನು ರದ್ದುಗೊಳಿಸಲಾಯಿತು .

5 ) ಈ ಕಾಯ್ದೆ ಅನ್ವಯ ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಸ್ಥಾನವನ್ನು ಬ್ರಿಟಿಷ್ ಸರ್ಕಾರ ಸೃಷ್ಟಿಸಿತು ಬ್ರಿಟಿಷ್ ಮಂತ್ರಿ ಮಂಡಲದ ಸದಸ್ಯರಾಗಿದ್ದ ಇವರು ಭಾರತದ ಆಡಳಿತವನ್ನು ಲಂಡನ್ ನಗರದಿಂದ ನೋಡಿಕೊಳ್ಳುತ್ತಿದ್ದರು .

ಇವರಿಗೆ ಸಹಾಯ ಮಾಡಲು 15 ಸದಸ್ಯರಿದ್ದ ಭಾರತಮಂಡಲಿ ( ಕೌನ್ಸಿಲ್ ಆಫ್ ಇಂಡಿಯಾ ) ಅಸ್ಥಿತ್ವಕ್ಕೆ ಬಂದಿತು . ಹೀಗೆ ಲಂಡನ್ ನಗರದಿಂದ ಬ್ರಿಟಿಷ್ ಪಾರ್ಲಿಮೆಂಟ್ ಮತ್ತು ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ,

ಬ್ರಿಟಿಷ್ ಇಂಡಿಂ ಮಾದ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು ,

ಬ್ರಿಟಿಷ್ ಸರ್ಕಾರದಿಂದ 5 ವರ್ಷದ ಅವಧಿಗೆ ನೇಮಕವಾಗುತ್ತಿದ್ದ ವೈಸರಾಯ್ ಭಾರತದಲ್ಲಿ ಬ್ರಿಟಿಷ್ ಇಂಡಿಯಾ ಸರ್ಕಾರದ ಮುಖ್ಯಸ್ಥರಾಗಿದ್ದರು .

ಈ ಕಾಯ್ದೆಯನ್ನು 1917 ರವರೆಗೆ ” ಮ್ಯಾಗ್ನಕಾರ್ಟ ” ಎಂದು ಕರೆಯಲಾಗುತ್ತಿತ್ತು .

ಲಾರ್ಡ್ ಕ್ಯಾನಿಂಗ್

ಮೊಟ್ಟ ಮೊದಲ ವೈಸ್‌ರಾಯ್  1858 ರ ರಾಣಿ ಘೋಷಣೆಯಂತೆ ಭಾರತದ ಗೌರರ್ ಜನರಲ್ ಹುದ್ದೆಯನ್ನು ವೈಸ್‌ರಾಯ್ ಎಂದು ನಾಮಕರಣ ಮಾಡಿದ ನಂತರ ಮೊಟ್ಟ ಮೊದಲ ವೈಸ್‌ರಾಯ್ ಆಗಿ ಲಾರ್ಡ್ ಕ್ಯಾನಿಂಗ್ ಅವರು ಕಾರ್ಯನಿರ್ವಹಿಸಿದ್ದರು .

ವೈಸ್ ರಾಯ್ ಹುದ್ದೆ ಮುಂದುವರೆದು ನಂತರ ವೈಸ್‌ರಾಯ್ ಮತ್ತು ಗೌರರ್ ಜನರಲ್ ಎಂಬ ಹುದ್ದೆಯು ಮುಂದುವರೆಯಿತು .

 


0 Comments

Leave a Reply

Avatar placeholder

Your email address will not be published. Required fields are marked *