ಹೈಡ್ರೋಕಾರ್ಬನ್‌ಗಳು | hydrocarbon

ಹೈಡ್ರೋಕಾರ್ಬನ್‌ಗಳು

hydrocarbon, alkanes, saturated hydrocarbon,unsaturated hydrocarbon,aromatic hydrocarbons, aliphatic hydrocarbons,alkane to alkene

hydrocarbon, alkanes, saturated hydrocarbon,unsaturated hydrocarbon,aromatic hydrocarbons, aliphatic hydrocarbons,alkane to alkene

ನಿಮ್ಮ ದೈನಂದಿನ ಜೀವನದಲ್ಲಿ , ನಿಮ್ಮ ಮನೆಯ ಸುತ್ತಮುತ್ತಲು ನೋಡಿದಿರಾದರೆ ಖಂಡಿತವಾಗಿ ಹೈಡ್ರೋಕಾರ್ಬನ್ ಉತ್ಪನ್ನಗಳನ್ನು ನೋಡಿರುತ್ತೀರಿ .

ನ್ಯಾಪ್ತಲೀನನ್ನು ಪತಂಗ ವಿಕರ್ಷಕವಾಗಿ , ಮೇಣವನ್ನು ಕ್ಯಾಂಡಲ್ ( ಮೇಣದಬತ್ತಿ ) ತಯಾರಿಕೆಯಲ್ಲೂ , LPG , ಸೀಮೆ ಎಣ್ಣೆ ಮತ್ತು ಪೆಟ್ರೋಲ್‌ಗಳನ್ನು ಇಂಧನಗಳಾಗಿಯೂ ಬಳಸಲಾಗುತ್ತಿದೆ .

ಖಾದ್ಯ ತೈಲಗಳು ,

ಶುಚಿಕಾರಕ ಉತ್ಪನ್ನಗಳು ಶುಚಿಕಾರಕಗಳು ( ಮರದೆಣ್ಣೆ , ಅಂಟುಪಟ್ಟಿ ಹಾಗೂ ಪೈನ್‌ಗಳಂತಹ ) ,

ಕಲೆ ನಿವಾರಕ ಮತ್ತು ಪೀಠೋಪಕರಣಗಳ ಪಾಲಿಶ್‌ಗಳು ,

ಸೌಂದಯ್ಯ ಪ್ರಸಾಧನಗಳು ಮಗುವಿನ ಕೇಶತೈಲ ಮತ್ತು ಸ್ನಾನದ ತೈಲಗಳು ,

ಸೂರ್ಯರಶ್ಮಿ ರಕ್ಷಕಗಳು ಉಗುರು ಮೆರುಗಿನ ಶುಷ್ಕಕಾರಕಗಳು ,

ಮತ್ತು ಪ್ರಸಾಧನ ನಿವಾರಕಗಳು , ( make up remover )

ಪ್ಲಾಸ್ಟಿಕ್ ಚೀಲಗಳು ಮತ್ತು ಥರ್ಮೋಕೋಲ್‌ಗಳು ಹೈಡ್ರೋಕಾರ್ಬನ್ ಸರಪಳಿ ಇರುವ ಸಂಯುಕ್ತಗಳೇ .

ಹಾಗಾದರೆ ಹೈಡ್ರೋಕಾರ್ಬನ್ ಗಳು ಎಂದರೇನು ?

ಹೈಡೋಜನ್ ಮತ್ತು ಕಾರ್ಬನ್ ಪರಮಾಣುಗಳನ್ನು ಮಾತ್ರ ಒಳಗೊಂಡ ದ್ವಿಧಾತು ಸಂಯುಕ್ತಗಳು . ಇವು ನಿಸರ್ಗದಲ್ಲಿ ಪೆಟ್ರೋಲಿಯಂ , ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲಿನ ರೂಪಗಳಲ್ಲಿ ಹೇರಳವಾಗಿ ಇವೆ .

ಹೈಡ್ರೋಕಾರ್ಬನ್ ಗಳು ಇತರ ಸಾವಯವ ಸಂಯುಕ್ತಗಳ ಆಕರಗಳಾಗಿದ್ದು , ಈ ಹೈಡ್ರೋಕಾರ್ಬನ್ ಒಂದು ಅಥವಾ ಹೆಚ್ಚಿನ ಹೈಡೋಜನ್ ಪರಮಾಣುಗಳು ಸೂಕ್ತಕ್ತಿಯಾಗುಂಪಿನಿಂದ ಪಲ್ಲಟನಗೊಂಡು ವಿವಿಧ ಸಾವಯವ ಸಂಯುಕ್ತಗಳು ಉಂಟಾಗಿವೆ ಎಂದು ಭಾವಿಸಲಾಗಿದೆ .

ಹೈಡ್ರೋಕಾರ್ಬನ್ ಗಳು ಅನಿಲಗಳಾಗಿರಬಹುದು ( ಉದಾ : ಮಿಥೇನ್ ಮತ್ತು ಪ್ರೊಪೇನ್ ) ,

ದ್ರವಗಳಾಗಿರಬಹುದು ( ಉದಾ ಹೆಕ್ಟೇನ್ ಮತ್ತು ಬೆಂಜೀನ್ ) , ಅಥವಾ ಕಡಿಮೆ ದ್ರವನ ಬಿಂದುವಿರುವ ಘನಗಳಾಗಿರಬಹುದು . ( ಉದಾ : ಪ್ಯಾರಾಫಿನ್ ಮೇಣ ಮತ್ತು ನ್ಯಾಪ್ತಲೀನ್ ) ಅಥವಾ ಪಾಲಿಮರ್‌ಗಳಾಗಿರಬಹುದು .  (ಉದಾ : ಪಾಲಿ ಈಥೈಲೀನ್ , ಪಾಲಿ ಪ್ರೋಪೈಲೀನ್ ಮತ್ತು ಪಾಲಿ ಸ್ಟೈರೀನ್ ) ,

ಹೈಡ್ರೋಕಾರ್ಬನ್ ಗಳು ಆರ್ಥಿಕವಾಗಿ ಮಹತ್ವದವು . ಏಕೆಂದರೆ ಪ್ರಮುಖ ಫಾಸಿಲ್ ಇಂಧನಗಳಾದ ಕಲ್ಲಿದ್ದಲು , ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳು ಮತ್ತು ಅದರ ಉತ್ಪನ್ನಗಳಾದ ಪ್ಲಾಸ್ಟಿಕ್‌ಗಳು ,

ಪ್ಯಾರಾಫಿನ್ ಮೇಣಗಳು ಮತ್ತು ದ್ರಾವಕಗಳು , ಹೈಡ್ರೋಕಾರ್ಬನ್ ಗಳೇ ಆಗಿವೆ .

ಪ್ರಸಕ್ತ ಸನ್ನಿವೇಶದಲ್ಲಿ ಮತ್ತು ಉಷ್ಣಶಕ್ತಿಯ ಪ್ರಮುಖ ಆಕರಗಳಾಗಿವೆ . ಉರಿಸಿದಾಗ ಉತ್ಪತ್ತಿಯಾಗುವ ಶಕ್ತಿಯನ್ನು ನೇರವಾಗಿ ಮನೆಗಳಲ್ಲಿ ಉಷ್ಣವಾಗಿ ಬಳಸಲಾಗುತ್ತಿದೆ .

ಹೈಡ್ರೋಕಾರ್ಬನ್ ಗಳನ್ನು ಉರಿಸಿದಾಗ ಉತ್ಪತ್ತಿಯಾಗುವ ಉಷ್ಣವನ್ನು ಬಳಸಿ ನೀರನ್ನು ಕಾಸಲಾಗುತ್ತದೆ . ಕೈಗಾರಿಕೆಗಳಲ್ಲಿ ಈ ಉಷ್ಣವನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ .

ಹೈಡ್ರೋಕಾರ್ಬನ್ ಗಳನ್ನು ಬಳಸಿ ಅನೇಕ ವರ್ಣಕಗಳು , ಮದ್ದುಗಳು ಮೊದಲಾದ ರಾಸಾಯನಿಕಗಳನ್ನು ಪಡೆಯಲಾಗುತ್ತದೆ .

ಘನರೂಪದಲ್ಲಿ ಹೈಡೋಕಾರ್ಬನ್‌ಗಳು ಆಸ್ಪಾಲ್ಸ್ ರೂಪದಲ್ಲಿರುತ್ತವೆ ,

ಆವಿಶೀಲ ಹೈಡ್ರೋಕಾರ್ಬನ್ ಮಿಶ್ರಣವನ್ನು ಈಗ ಕ್ಲೋರೋ ಫ್ಲೋರೋ ಕಾರ್ಬನ್‌ಗಳ ( CFC ) ಬದಲಿಗೆ ಏರೋಸಾಲ್ ಸ್ಟೇಗಳಲ್ಲಿ ‘ ನೋದಕವಾಗಿ ‘ ( Propellant ) ಬಳಸಲಾಗುತ್ತಿದೆ . ಏಕೆಂದರೆ ಸಿ . ಎಫ್ . ಸಿಗಳು ಓರೋನ್ ಪದರವನ್ನು ನಾಶಪಡಿಸುತ್ತವೆ .

ಹೈಡೋಕಾರ್ಬನ್‌ಗಳ ಆಕರಗಳು

ಪೆಟ್ರೋಲಿಯಂ ಮತ್ತು ಕಲ್ಲಿದ್ದಲುಗಳು ಹೈಡ್ರೋಕಾರ್ಬನ್ ಗಳ ಅತಿ ಮುಖ್ಯ ಆಕರಗಳು . ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳನ್ನು ಮುಖ್ಯವಾಗಿ ಪೆಟ್ರೋಲಿಯಂನಿಂದ ಪಡೆದರೆ ,

ಆರೋಮ್ಯಾಟಿಕ್ ಹೈಡ್ರೋಕಾರ್ಬನ್ ಗಳನ್ನು ಪ್ರಮುಖವಾಗಿ ಕಲ್ಲಿದ್ದಲ್ಲಿನಿಂದ ಪಡೆಯುತ್ತಾರೆ . ಓರೋಕೆರೈಟ್ ( ನೈಸರ್ಗಿಕ ಮೇಣ ) ಮತ್ತು ಸಸ್ಯಗಳಿಂದ ಪಡೆದ ಇತರೇ ಮೇಣಗಳೂ ಉನ್ನತ ಆಲೇನ್‌ಗಳನ್ನು ಒಳಗೊಂಡಿವೆ .

 ವರ್ಗೀಕರಣ

ರಚನೆಯ ಆಧಾರದಲ್ಲಿ ಹೈಡ್ರೋಕಾರ್ಬನ್ ಗಳನ್ನು 2 ಮುಖ್ಯಗುಂಪುಗಳಾಗಿ ವರ್ಗೀಕರಿಸಲಾಗಿದೆ .

1. ತೆರೆದ ಸರಪಳಿ ಹೈಡ್ರೋಕಾರ್ಬನ್ ಗಳು

2. ಮುಚ್ಚಿದ ( ಉಂಗುರ ) ಸರಪಳಿ ಹೈಡ್ರೋಕಾರ್ಬನ್ ತೆರೆದ ಸರಪಣಿ ಹೈಡ್ರೋಕಾರ್ಬನ್ ಗಳನ್ನು ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳು ಎಂದೂ ಕರೆಯುತ್ತಾರೆ . ಈ ಹೈಡ್ರೋಕಾರ್ಬನ್ ಗಳು ಕಾರ್ಬನ್‌ನ , ನೇರ ಸರಪಳಿ ಅಥವಾ ಕವಲೊಡೆದ ಸರಪಳಿಗಳಿಂದಾಗಿವೆ .

ಮಿಲಿಯನ್‌ಗಟ್ಟಲೆ ಸಂಖ್ಯೆಯಲ್ಲಿರುವ ಹೈಡೋಕಾರ್ಬನ್‌ಗಳನ್ನು ವೈಯಕ್ತಿಕವಾಗಿ ಅಧ್ಯಯನ ಮಾಡುವುದು ಕ್ಲಿಷ್ಟಕರ ,

ಅಧ್ಯಯನವನ್ನು ಸರಳಗೊಳಿಸುವ ಉದ್ದೇಶದಿಂದ ಹೈಡೋಕಾರ್ಬನ್‌ಗಳನ್ನು ವಿವಿಧ ಗುಂಪುಗಳು ಮತ್ತು ಉಪಗುಂಪುಗಳಾಗಿ ವರ್ಗೀಕರಿಸಲಾಗಿದೆ .

ಅಲಿಫ್ಯಾಟಿಕ್ ಹೈಡ್ರೋಕಾರ್ಬನ್ ಗಳು

ಕಾರ್ಬನ್ ಪರಮಾಣುಗಳ ನಡುವೆ ಇರುವ ಏಕ ಬಂಧ , ದ್ವಿಬಂಧ ಮತ್ತು ತ್ರಿಬಂಧಗಳ ಆಧಾರದಲ್ಲಿ ,

ಅಲಿಫ್ಯಾಟಿಕ್ ಹೈಡೋಕಾರ್ಬನ್‌ಗಳನ್ನು ಪರ್ಯಾಪ್ತ ( ಆಲೈನ್‌ಗಳು ) ಮತ್ತು ಅಪರ್ಯಾಪ್ತ ಹೈಡ್ರೋಕಾರ್ಬನ್ ( ಆಲೀನ್ ಮತ್ತು ಆಲೈನ್ ) ಗಳೆಂದು ವರ್ಗೀಕರಿಸಲಾಗಿದೆ

ಪರ್ಯಾಪ್ತ ಹೈಡೋಕಾರ್ಬನ್‌ಗಳು ಅಥವಾ ಆಲೈನ್‌ಗಳು

ಇವು ಅತ್ಯಂತ ಸರಳ ಸಂಯುಕ್ತಗಳು . ಇವುಗಳಲ್ಲಿ ಕಾರ್ಬನ್ ಪರಮಾಣುಗಳ ನಡುವೆ ಕೇವಲ ಏಕ ಬಂಧವಿದೆ . ಇವುಗಳು ನೇರ ಸರಪಣಿ ಅಥವಾ ಕವಲೊಡೆದ ಸರಪಳಿ ರಚನೆಯನ್ನು ಹೊಂದಿವೆ .

ಕಾರ್ಬನ್ ಪರಮಾಣುಗಳ ನಡುವಣ ಏಕಬಂಧದಿಂದಾಗಿ ,

ಹೈಡೋಕಾರ್ಬನ್‌ಗಳಲ್ಲಿ ಕಾರ್ಬನ್ ಪರಮಾಣುಗಳು ಗರಿಷ್ಟ ಸಂಖ್ಯೆಯ ಹೈಡೋಜನ್ ಪರಮಾಣುಗಳೊಂದಿಗೆ ಕೋವಲೆಂಟ್ ( ಸಹವೇಲೆನ್ಸಿ ) ಬಂಧವನ್ನುಂಟು ಮಾಡಿವೆ .

ಅಲ್ಲೇನ್‌ಗಳ ನಾಮಕರಣ ವ್ಯವಸ್ಥೆ ( ಹೆಸರಿಸುವಿಕೆ )

ಕೆಳಗಿನ ಪಟ್ಟಿಯಲ್ಲಿ ಒಂದರಿಂದ 10 ಕಾರ್ಬನ್ ಪರಮಾಣುಗಳಿರುವ ಹೊಂದಿರುವ ಆಲೈನ್‌ಗಳನ್ನು ಹೆಸರಿಸಲಾಗಿದೆ .

ಈ ಸಂಯುಕ್ತಗಳ ಹೆಸರು ‘ ಏನ್ ‘ ಎಂಬ ಅಂತ್ಯಪ್ರತ್ಯಯದೊಂದಿಗೆ ಕೊನೆಗೊಳ್ಳುತ್ತದೆ .

ಆಲೈನ್‌ಗಳ ಹೆಸರಿನ ಪೂರ್ವಪದವನ್ನು ಕಾರ್ಬನ್ ಪರಮಾಣುಗಳ ಸಂಖ್ಯೆಗನುಗುಣವಾಗಿ ಗ್ರೀಕ್ ಅಥವಾ ಲ್ಯಾಟಿನ್ ಭಾಷೆಯಿಂದ ಪಡೆಯಲಾಗಿದೆ .

ಕಾರ್ಬನ್ ಸರಪಳಿಯ ಉದ್ದವನ್ನು ಹೆಚ್ಚಿಸಿ 100 ಅಥವಾ 1000 ಅಥವಾ 1 ಮಿಲಿಯನ್‌ನಷ್ಟು ಅಗಣಿತ ಸಂಖ್ಯೆಯ ಹೈಡೋಕಾರ್ಬನ್‌ಗಳನ್ನು ಪಡೆಯಬಹುದು .

ಇವುಗಳನ್ನು ಕ್ರಮಬದ್ಧವಾಗಿ ಕಾರ್ಬನ್ ಸಂಖ್ಯೆಯನ್ನು ಪ್ರತಿನಿಧಿಸುವ ಪೂರ್ವಪ್ರತ್ಯಯಕ್ಕೆ ‘ ಏನ್ ‘ ಎಂಬ ಅಂತ್ಯ ಪದ ಸೇರಿಸಿ ಹೆಸರಿಸಲಾಗುವುದು .

ಕಾರ್ಬನ್ ಸಂಖ್ಯೆಗಳನ್ನು ಪ್ರತಿನಿಧಿಸುವ ಪೂರ್ವಪ್ರತ್ಯಯಗಳು ಈ ಕೆಳಗಿನಂತಿವೆ

ಪೂರ್ವ ಪ್ರತ್ಯಯ              ಕಾರ್ಬನ್ ಪರಮಾಣುಗಳ ಸಂಖ್ಯೆ

ಮೀಥ್ ( meth )                                       1

ಈಥ್ ( Eth )                                             2

ಪ್ರೋಪ್ ( Prop )                                       3

ಬ್ಯೂಟ್  ( But )                                        4

ಪೆಂಟ್   ( Pent )                                       5

ಹೆಕ್ಸ್   ( Hex )                                            6

ಹೆಪ್ಟ್  ( Hept)                                           7

ಒಕ್ಟ್  ( Oct )                                              8

ನೊನ್  ( Non )                                          9

ಡೆಕ್   ( Dec )                                          10

 

ಮೀಥೇನ್‌  ‘ ಚೌಗು ಅನಿಲ

ತೈಲಬಾವಿಯಿಂದ ಪಡೆದ ನೈಸರ್ಗಿಕ ಅನಿಲದಲ್ಲಿ ಮೀಥೇನ್ ಅನಿಲ ಕಂಡುಬರುತ್ತದೆ . ಇದು ಕಲ್ಲಿದ್ದಲು ಅನಿಲದ ( Coalgas ) ಘಟಕವಾಗಿದೆ .

ಚೌಗು ನೆಲದಲ್ಲಿ ಬ್ಯಾಕ್ಟಿರಿಯಾಗಳು ಸಸ್ಯಕಾಯವನ್ನು ವಿಘಟಿಸುವ ಮೂಲಕ ಮೀಥೇನ್ ಉತ್ಪತ್ತಿಯಾಗುತ್ತದೆ . ಆದ್ದರಿಂದ ಇದನ್ನು ಚೌಗು ಅನಿಲ ಎಂದು ಕರೆಯುತ್ತಾರೆ .

ಮೀಥೇನ್ , ಆಲೈನ್ ಕುಟುಂಬದ ( ಪರಾಪ್ತ ಹೈಡೋಕಾರ್ಬನ್ ) ಮೊದಲ ಸದಸ್ಯ . ಇಲ್ಲಿ ಕಾರ್ಬನ್ , ನಾಲ್ಕು ಹೈಡೋಜನ್ ಪರಮಾಣುಗಳೊಂದಿಗೆ ಏಕ ಸಹವೇಲೆನ್ಸಿ ಬಂಧವನ್ನು ಹೊಂದಿದೆ .

ಸಾಮಾನ್ಯವಾಗಿ ಹೈಡೋಜನ್ ಪರಮಾಣುಗಳು ಕಾರ್ಬನ್ ಪರಮಾಣುಗಳೊಂದಿಗಿನ ಪರಸ್ಪರ ಕೋವಲೆಂಟ್ ಬಂಧದ ನಂತರದ ಪ್ರಾಪ್ತ ಬಂಧನ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತವೆ

ಬೌತ ಗುಣಗಳು

ಮಿಥೇನ್ – ಬಣ್ಣವಿಲ್ಲದ , ವಾಸನೆಯಿಲ್ಲದ ಅನಿಲ , ಇದು ಗಾಳಿಗಿಂತ ಹಗುರ , ನೀರಿನಲ್ಲಿ ಇದರ ವಿಲೀನತೆ ಕಡಿಮೆ , ಆದರೆ ಸಾವಯವ ಸಂಯುಕ್ತಗಳಾದ ಆಲೋಹಾಲ್ ಮತ್ತು ಈಥರ್‌ಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಲೀನಗೊಳ್ಳುತ್ತದೆ .

 ರಾಸಾಯನಿಕ ಗುಣಗಳು

ಮೀಥೇನ್ ಪರ್ಯಾಪ್ತ ಸಂಯುಕ್ತವಾಗಿರುವುದರಿಂದ ರಾಸಾಯನಿಕವಾಗಿ ಜಡ , ಆದ್ದರಿಂದ ಇದು ಆಮ್ಲ ,

ಪ್ರತ್ಯಾಮ್ಲ ಹಾಗೂ ಪ್ರಬಲ ಸಲ್ಯೂರಿಕ್ ಆಮ್ಲ , ನೈಟ್ರಿಕ್ ಆಮ್ಲ ಮತ್ತು ಪೊಟ್ಯಾಸಿಯಂ ಪರ್ಮ್ಯಾಂಗನೇಟ್‌ಗಳಂತಹ ಉತ್ಕರ್ಷಣಕಾರಿಗಳೊಂದಿಗೆ ವರ್ತಿಸುವುದಿಲ್ಲ .

 

Comments

Leave a Reply

Your email address will not be published. Required fields are marked *