
ಪರಿವಿಡಿ
ಹಕ್ಕಿ ಜ್ವರ ( Bird flu )
bird flu, h10n3, bird flu news, h5n1, bird flu symptoms, avian flu, avian influenza, h10n3 bird flu, bird flu avian influenza, ಹಕ್ಕಿ ಜ್ವರ
ಇದು ಹಕ್ಕಿಗಳಿಗೆ ಸೋಂಕುತಗುಲುವ ಒಂದು ಬಗೆಯ ಇನ್ಯೆಂಜಾ ಜ್ವರ , ಈ ವೈರಸ್ಗಳ ಉತ್ಪರಿವರ್ತಿತ ರೂಪದಿಂದ ಮನುಷ್ಯರಿಗೂ ಸೋಂಕು ತಗುಲಬಹುದು
ಈ ವೈರಸ್ನಿಂದಾಗಿ ಸಹಸ್ರಾರು ಜನರು ರೋಗಕ್ಕೆ ಈಡಾಗುತ್ತಿದ್ದಾರೆ . ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸುಮಾರು ಶೇಕಡಾ 60 ರಷ್ಟು ಜನ ಸಾವಿಗೂ ಈಡಾಗುತ್ತಾರೆ .
ಇದು ಹೇಗೆ ಹರಡುತ್ತದೆ ?
ಹಕ್ಕಿ ಜ್ವರದ ವೈರಸ್ಗೆ ಅತಿ ದೀರ್ಘಕಾಲ ಪರಿಸರದಲ್ಲಿ ಬದುಕುಳಿಯುವ ಸಾಮರ್ಥ್ಯ ಇದೆ . ಸೋಂಕಿರುವ ಜಾಗಗಳನ್ನು ಸ್ಪರ್ಶಿಸುವುದರಿಂದಲೇ ವೈರಸ್ಗಳು ಹರಡಬಹುದು ,
ಸೋಂಕು ತಗುಲಿದ ಹಕ್ಕಿಗಳ ಮಲ ಹಾಗೂ ಎಂಜಲಿನಲ್ಲಿ ಈ ವೈರಸ್ಗಳು ಹತ್ತುದಿನಕ್ಕೂ ಹೆಚ್ಚು ಕಾಲ ಬದುಕಿರಬಹುದು .
ರೋಗದ ಲಕ್ಷಣಗಳು
ವೈರಸ್ನ ಬಗೆಯನ್ನು ಅವಲಂಬಿಸಿರುತ್ತವೆ . ಸೋಂಕು ತಗುಲಿದವರಲ್ಲಿ ಕೆಮ್ಮು , ಭೇದಿ , ಉಸಿರಾಟದ ತೊಂದರೆಗಳು , 38 ° C ಗಿಂತಲೂ ಮೇಲಿರುವ ಜ್ವರ , ತಲೆನೋವು ,
ಮೈ ಕೈನೋವು , ಸೋರುತ್ತಿರುವ ಮೂಗು , ಗಂಟಲಿನ ಕೆರೆತ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು .
ತಡೆಯುವ ವಿಧಾನಗಳು
ಸೋಂಕಿತ ಪ್ರದೇಶಗಳಲ್ಲಿರುವ ಹಕ್ಕಿ ಮಾರುಕಟ್ಟೆಗಳಿಗೆ ಪ್ರವಾಸಿಗರು ಹೋಗಬಾರದು . ಹಕ್ಕಿಗಳ ಜೊತೆ ಸಂಪರ್ಕ ಇರುವವರು ರಕ್ಷಣಾತ್ಮಕ ಉಡುಗೆಯ ಜೊತೆಗೆ ನಾಸಿಕದ ಮುಸುಕು ಧರಿಸಬೇಕು .
ಬೇಯಿಸದ ಹಾಗೂ ಆರೆಬೆಂದ ಹಕ್ಕಿ ಮಾಂಸವನ್ನು ಸೇವಿಸಬಾರದು .
ಸಿಫಿಲಿಸ್ ( syphilis )
ಲೈಂಗಿಕ ಸಂಪರ್ಕದಿಂದ ಹರಡುವ ಒಂದು ಗುಹ್ಯ ರೋಗ , ರೋನಿಮಾ ವ್ಯಾಲಿಡಂ ( Trepornema pallidum ) ಎಂಬ ಬ್ಯಾಕ್ಟಿರಿಯಾ ಇದಕ್ಕೆ ಕಾರಣ .
ಸೋಂಕು ತಗುಲಿದ , ತಾಯಿಯಿಂದ ಭ್ರೂಣಕ್ಕೆ ಜರಾಯುವಿನ ಮೂಲಕ ಹಾಗೂ ಸೋಂಕು ತಗುಲಿದ ರಕ್ತದ ನೇರ ಸಂಪರ್ಕದಿಂದ ಈ ರೋಗ ಹರಡುತ್ತದೆ .
ಮೂಗು , ಗಂಟಲು , ಕಾಲಿನ ಕೆಳಭಾಗದಲ್ಲೆಲ್ಲ ಹುಣ್ಣುಗಳು ಕಾಣಿಸಿಕೊಳ್ಳಬಹುದು , ಮಿದುಳು , ನರಗಳು , ಕಣ್ಣುಗಳು , ಹೃದಯ , ರಕ್ತನಾಳಗಳು , ಪಿತ್ತಜನಕಾಂಗ , ಕೀಲುಗಳು ಹಾಗೂ ಮೂಳೆಗಳಿಗೆ ಹಾನಿ ಉಂಟಾಗಬಹುದು .
ದೇಹದ ಸ್ನಾಯುಗಳ ಚಲನೆಯಲ್ಲಿ ತೊಂದರೆ , ಪಾರ್ಶ್ವವಾಯು , ಮರೆವು ಹಾಗೂ ಕ್ರಮೇಣ ಅಂಧತ್ವ ಕಾಣಿಸಿಕೊಳ್ಳಬಹುದು . ಕೊನೆಗೆ ಸಾವು ಸಂಭವಿಸಬಹುದು .
ತಡೆಯುವ ವಿಧಾನ
ಸೋಂಕಿತ ವ್ಯಕ್ತಿಗಳ ನಡುವಣ ಲೈಂಗಿಕ ಸಂಪರ್ಕದಿಂದ ದೂರ ಇರುವುದು , ರೋಗ ಹರಡದಿರುವುದಕ್ಕೆ ಖಚಿತ ಮಾರ್ಗ .
ಗೊನೋರಿಯ ( Gonorrhea )
ಇದು ನೈಸೀರಿಯಾ ಗೊನೋರಿಯ ( Neisserna Gonorrheae ) ಎಂಬ ಬ್ಯಾಕ್ಟಿರಿಯಾ ಸೋಂಕಿನಿಂದ ಬರುವ ಲೈಂಗಿಕ ರೋಗ , ಪುರುಷರಲ್ಲಿ ಸಾಮಾನ್ಯ ಲಕ್ಷಣವೆಂದರೆ ಪ್ರಜನನಾಂಗಗಳಿಂದ ಸ್ರವಿಕೆಯಾಗುವಾಗ ಹಾಗೂ ಮೂತ್ರ ವಿಸರ್ಜನೆಯ ಸಂದರ್ಭಗಳಲ್ಲಿ ಉರಿ ಉಂಟಾಗುವುದು .
ಸ್ತ್ರೀಯರಲ್ಲಿ ಯೋನಿಯಿಂದ ಶ್ರವಿಕೆ ಹಾಗೂ ಸೊಂಟನೋವು ಪ್ರಮುಖ ಲಕ್ಷಣಗಳು .
ತಡೆಯುವ ವಿಧಾನ
ಸೋಂಕಿತ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕದಿಂದ ದೂರ ಇರುವುದು ಅತ್ಯಂತ ಸುರಕ್ಷಿತ ವಿಧಾನ , ಕಾಂಡೋಮ್ ಬಳಸುವುದರಿಂದ ಸೋಂಕಿನ ಅಪಾಯವನ್ನು ತಪ್ಪಿಸಬಹುದು .
ಹೆಪಟೈಟಿಸ್ ಬಿ
ಪಿತ್ತಜನಕಾಂಗದಲ್ಲಿ ಸೋಂಕು ( ಸಿರೋಸಿಸ್ ) ಎಂಬ ರೋಗದ ಬಗ್ಗೆ ನೀವು ಕೇಳಿರಬಹುದು . ಇದು ಹೆಪಟೈಟಿಸ್ – ಬಿ ಎಂಬ ರೋಗಕ್ಕೆ ಸಂಬಂಧಿಸಿದೆ .
ಹೆಪಟೈಟಿಸ್ – ಬಿ ವೈರಸ್ ( HIV ) ನಿಂದ ಈ ಸೋಂಕು ಉಂಟಾಗುತ್ತದೆ . ರಕ್ತದಲ್ಲಿ ಈ ವೈರಸ್ಗಳ ಪ್ರಮಾಣ ಅತಿ ಹೆಚ್ಚು ಕಂಡುಬರುತ್ತದೆ .
ಲಾಲಾರಸ , ಗಾಯಗಳಿಂದ ಒಸರುವ ದ್ರವ , ವೀರ್ಯ , ಯೋನಿದ್ರವ ಮುಂತಾದ ದೇಹದ್ರವಗಳಲ್ಲಿ ಈ ವೈರಸ್ನ ಪ್ರಮಾಣ ಕಡಿಮೆ ಇರುತ್ತದೆ .
ರಕ್ತದಲ್ಲಿ ಕಂಡುಬರಬಹುದಾದ ಎಚ್ಐವಿ ಎಚ್ಸಿಎ ಮುಂತಾದ ವೈರಸ್ಗಳಿಗಿಂತ ಎಚ್ಬಿವಿ ಹೆಚ್ಚು ಸುಲಭವಾಗಿ ಹರಡುತ್ತದೆ ಮತ್ತು ಸೋಂಕು ಸ್ಥಿರವಾಗಿರುತ್ತದೆ .
ಸೋಂಕಿತ ರಕ್ತ ಅಥವಾ ದೇಹದ್ರವಗಳ ಸಂಪರ್ಕದಿಂದ ಈ ರೋಗ ಹರಡುತ್ತದೆ . ಸೋಂಕಿತ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕ ಹಾಗೂ ಮಾದಕ ದ್ರವ್ಯಗಳ ಚುಚ್ಚು ಮದ್ದಿನ ಮೂಲಕವೂ ಈ ಸೋಂಕು ಹರಡುತ್ತದೆ .
ತಡೆಯುವ ವಿಧಾನ
ಹೆಪಟೈಟಿಸ್ – ಬಿ ಇಮ್ಯೂನ್ ಗ್ಲಾಬ್ಯುಲಿನ್ ( HBIG ) ಎಂಬ ಲಸಿಕೆಯೊಂದು ಮೂರರಿಂದ ಆರು ತಿಂಗಳ ಕಾಲ ತಾತ್ಕಾಲಿಕವಾಗಿ ಎಚ್ಐವಿ ಸೋಂಕಿನಿಂದ ರಕ್ಷಣೆ ಒದಗಿಸುತ್ತದೆ .