ಸ್ವಾತಂತ್ರ್ಯದ ಹಕ್ಕು ( Rights to Freedom )
fundamental rights, constitution of india, rights to freedom, right against exploitation, right to constitutional remedies
19 , 20 ನೇ ವಿಧಿ , 21 ನೇ ವಿಧಿ , 213 , 22 ನೇ ವಿಧಿಗಳು ಸ್ವಾತಂತ್ರ್ಯದ ಹಕ್ಕುಗಳಿಗೆ ಸಂಬಂಧಿಸಿದೆ .
ವಿಧಿ , 19. ವಾಕ್ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ ,
19 ನೇ ವಿಧಿಯು 6 ವಿಧದ ಸ್ವಾತಂತ್ರ್ಯವನ್ನು ವ್ಯಕ್ತಿಗಳಿಗೆ ಒದಗಿಸಿದೆ . ಮೂಲ ಸಂವಿಧಾನದಲ್ಲಿ ಏಳು ವಿಧದ ಸ್ವಾತಂತ್ರ್ಯವಿದ್ದವು . ಆದರೆ 1978 ರ 44 ನೇ ತಿದ್ದುಪಡಿಯಲ್ಲಿ ಆಸ್ತಿಯನ್ನು ಹೊಂದುವ , ಮಾರುವ ಹಕ್ಕನ್ನು ಮೂಲಭೂತ ಸ್ವಾತಂತ್ರ್ಯದಿಂದ ತೆಗೆದು ಹಾಕಲಾಯಿತು . 19 ನೇ ವಿಧಿಯು ಮಹತ್ವದ ವಿಧಿ ಆಗಿದ್ದು , ಇವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ರಾಷ್ಟ್ರದ ಏಕತೆ ವೈಯಕ್ತಿಕ ಶ್ರೇಷ್ಠತೆಯ ಯ ಸಂಕೇತವಾಗಿದ್ದು , ಪ್ರಜಾಪ್ರಭುತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ .
ಇವು ಸಂವಿಧಾನದ ಜೀವ ಮತ್ತು ಆತ್ಮವಾಗಿವೆ ಎಂದು ಅನೇಕ ತಜ್ಞರ ಅಭಿಪ್ರಾಯವಾಗಿದೆ .
ಎ ) ವಾಕ್ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
19 ( ಎ ) ವಿಧಿ ಅನ್ವಯ ಪ್ರತಿಯೊಬ್ಬ ನಾಗರೀಕನು ತನ್ನ ಭಾವನೆಗಳನ್ನು ಬರವಣಿಗೆ ಮೂಲಕ , ಮೌಖಿಕವಾಗಿ ಮತ್ತು ಮುದ್ರಣದ ಮೂಲಕ , ಚಿತ್ರದ ಮೂಲಕ , ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವಿದೆ . ಭಾರತದ ಸುಪ್ರೀಂಕೋರ್ಟ್ ವಾಕ್ ಸ್ವಾತಂತ್ರ್ಯದ ಬಗ್ಗೆ ಈ ಕೆಳಕಂಡಂತೆ ಅಭಿವ್ಯಕ್ತಗೊಳಿಸಬಹುದೆಂದು ಹೇಳಿದೆ .
1 ) ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವಿದೆ .
2 ) ಮಾಧ್ಯಮದ ಸ್ವಾತಂತ್ರ್ಯ ನೀಡಿದೆ .
3 ) ವಾಣಿಜ್ಯ ಜಾಹಿರಾತನ್ನು ನೀಡಲು ಅವಕಾಶ ಕಲ್ಪಿಸಿದೆ
4 ) ಸಂಘಟನೆ ಅಥವಾ ರಾಜಕೀಯ ಪಕ್ಷವು ಮುಷ್ಕರವನ್ನು ಹೊಡಲು ಅವಕಾಶ ಕಲ್ಪಿಸಿದೆ .
5 ) ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಯಾವುದೇ ರೀತಿಯ ಸರ್ಕಾರವು ನಿರ್ಬಂಧ ಬರುವಂತಿಲ್ಲ .
6 ) ಸರ್ಕಾರದ ಕಾರ್ಯಗಳ ಬಗ್ಗೆ ತಿಳಿಯುವ ಹಕ್ಕನ್ನು ಹೊಂದಿದ್ದಾರೆ ಬಿ ) ಶಾಂತಿಯಿಂದ & ನಿರಾಯುಧರಾಗಿ ಸಭೆ ಸೇರುವ
ಬಿ ) ಶಾಂತಿಯಿಂದ & ನಿರಾಯುಧರಾಗಿ ಸಭೆ ಸೇರುವ
19(ಬಿ )ವಿಧಿ ಅನ್ವಯ ಪ್ರತಿಯೊಬ್ಬ ನಾಗರೀಕನು ಕೂಡ ಆಯುಧಗಳಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಹೊಂದಿದ್ದಾನೆ . ಸಾರ್ವಜನಿಕ ಸಭೆ ನಡೆಸುವ ಹಕ್ಕನ್ನು ಕೂಡ ಹೊಂದಿರುತ್ತಾನೆ . ಈ ವಿಧಿಗೆ ರಾಜ್ಯವು ಕೆಲವು ನಿರ್ಬಂಧ ಗಳನ್ನು ಹೇರಿದ್ದು ದೇಶದ ಸಾರ್ವಭೌಮತ್ವ ಅಥವಾ ಏಕತೆಗೆ ಧಕ್ಕೆ ಬರುವಂತಹ ಸಭೆ ಸಮಾರಂಭವನ್ನು ನಿರ್ಬಂಧಿಸುತ್ತದೆ ಹಾಗೂ 144 ನೇ ಕಲಂ ಜಾರಿಯಲ್ಲಿದ್ದಾಗ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿರ್ಬಂಧಿಸಿದೆ ಐಪಿಸಿಯ ( ಭಾರತ ದಂಡ ಸಂಹಿತೆ ) 141 ನೇ ಕಲಂ ಜಾರಿಯಲ್ಲಿದ್ದಾಗ ಅಥವಾ ಅದಕ್ಕಿಂತ ಹೆಚ್ಚುಜನರು ಕೆಲವು ಚಟುವಟಿಕೆಗಳಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ .
ಸಿ ) ಸಂಸ್ಥೆಗಳನ್ನು ಅಥವಾ ಸಂಘ ರಚಿಸುವ
19 ( ಸಿ ) ವಿಧಿ ಅನ್ವಯ ಪ್ರತಿಯೊಬ್ಬ ನಾಗರೀಕನು ಕೂಡ ಸಂಘ , ಸಂಸ್ಥೆ , ಒಕ್ಕೂಟಗಳನ್ನು ಸ್ಥಾಪಿಸಲು ಅವಕಾಶವಿದೆ . ಈ ವಿಧಿ ಅನ್ವಯ ಸಾರ್ವಭೌಮ ಮತ್ತು ಏಕತೆಗೆ ಧಕ್ಕೆ ಆಗುವಂತಹ ಸಂಘ ಸಂಸ್ಥೆಗಳನ್ನು ಸ್ಥಾಪಿಸುವಂತಿಲ್ಲ . ಹಾಗೂ ಕಾನೂನು ರಹಿತವಾದ ಚಟುವಟಿಕೆಯನ್ನು ನಡೆಸುವ ಸಂಘ ಸಂಸ್ಥೆಗಳನ್ನು ಸ್ಥಾಪಿಸಲು ನಿರ್ಬಂಧವನ್ನು ಹೇಳಿದೆ .
ಉದಾ : – ಸಿಮಿ ೩ ಉತ್ಪಾ ಸಂಘಟನೆಗಳು
ಡಿ) ಭಾರತದ ರಾಜ್ಯಕ್ಷೇತ್ರದಲ್ಲಿ , ಅಬಾಧಿತವಾಗಿ ಸುರ್ವತ್ರ ಸಂಚಾರ ಮಾಡುವ
19 ವಿಧಿ ಅನ್ವಯ ಪ್ರತಿಯೊಬ್ಬ ನಾಗರೀಕನು ಭಾರತದ ಭೂ ಪ್ರದೇಶದಲ್ಲಿ ಸ್ವತಂತ್ರವಾಗಿ ಸಂಚರಿಸುವ ಹಕ್ಕನ್ನು ನೀಡಿದೆ.ಸಂಚಾರ ಸ್ವಾತಂತ್ರ್ಯದಲ್ಲಿ 2 ವಿಧಗಳಿದ್ದು
1 ) ಅಂತರಿಕ- ಆಂತರಿಕ ಎಂದರೆ ದೇಶದೊಳಗಿನ , ಇದಕ್ಕೆ 19 ನೇ ವಿಧಿಯು ರಕ್ಷಣೆ ನೀಡುತ್ತದೆ .
2 ) ಬಾಹ್ಯ – ದೇಶದಿಂದ ಹೊರಗೆ ಹೋಗಿ ಮತ್ತೆ ಹೊರ ದೇಶದಿಂದ ಮತ್ತೆ ಸ್ವದೇಶಕ್ಕೆ ಬರುವುದು . ಇದಕ್ಕೆ ಸಂವಿಧಾನದ 21 ನೇ ವಿಧಿಯು ರಕ್ಷಣೆ ನೀಡುತ್ತದೆ .
ನಿರ್ಬಂಧಗಳು :
ಈ ಕೆಳಕಂಡ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಹೇರಿದೆ .
1 ) ಪರಿಶಿಷ್ಟ ಪಂಗಡದ ಹಿತರಕ್ಷಣೆಯನ್ನು ಕಾಯಲು ಪರಿಶಿಷ್ಟ ಪಂಗಡದ ಪ್ರದೇಶಗಳಲ್ಲಿ ಆ ವಿಶಿಷ್ಟವಾದ ಭಾಷೆ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವ ಉದ್ದೇಶದಿಂದ ಹಾಗೂ ಅವರನ್ನು ಮುಕ್ತಗೊಳಿಸಲು ನಿರ್ಬಂಧ ಹೇರಲಾಗಿದೆ .
2 ) ಸಾರ್ವಜನಿಕ ಹಿತದೃಷ್ಟಿಯನ್ನು ಕಾಪಾಡು ಕೆಲವೊಂದು ಸ್ಥಳಗಳಲ್ಲಿ ರಾಜ್ಯವು ನಿರ್ಬಂಧ ಹೇರಿದೆ
ಸುಪ್ರೀಂ ಕೋರ್ಟ್ ನಿರ್ಬಂಧ : –
ಸುಪ್ರೀಂ ಕೋರ್ಟ್ ವೇಶೈಯರ ಸಂಚಾರವನ್ನು ಸಾರ್ವಜನಿಕ ಆರೋಗ್ಯ ಸಾರ್ವಜನಿಕರ ನೈತಿಕತೆ ದೃಷ್ಟಿಯಿಂದ ನಿರ್ಬಂದಿಸಿದೆ .
ಇ) ಭಾರತದ ರಾಜ್ಯಕ್ಷೇತ್ರದಲ್ಲಿ ಯಾವುದೇ ಭಾಗದಲ್ಲಿ ವಾಸ ಮಾಡುವ ಮತ್ತು
ನೆಲಸುವ ಸ್ವಾತಂತ್ರ್ಯ
ಭಾರತದ ನಾಗರೀಕನು ಭಾರತದ ಭೂ ಪ್ರದೇಶದ ಭಾಗದಲ್ಲಿ ವಾಸಿಸುವ ಹಕ್ಕನ್ನು ಯಾವುದೇ ಹೊಂದಿದ್ದಾನೆ . ಈ ಮೂಲಕ ರಾಷ್ಟ್ರೀಯತೆಯನ್ನು ಉಂಟು ಮಾಡಲು ಸಹಕಾರಿಯಾಗಿದೆ .
ನಿರ್ಬಂಧಗಳು : –
1 ) ರಾಜ್ಯವು ಎರಡು ನಿರ್ಬಂಧಗಳನ್ನು ಹೇರಿದೆ .
2 ) ಸಾರ್ವಜನಿಕ ಹಿತದೃಷ್ಟಿಯಿಂದ 3 ) ಬುಡಕಟ್ಟು ಜನಾಂಗದ ಹಿತ ದೃಷ್ಟಿಯಿಂದ
ಸುಪ್ರೀಂಕೋರ್ಟನ ನಿರ್ಬಂಧಗಳು: –
ಸುಪ್ರೀಂ ಕೋರ್ಟ್ ವೇಶ್ಯಯರ ಹಾಗೂ ವೃತ್ತಿಪರ ಅಪರಾಧಿಗಳ ಮೇಲೆ ನಿರ್ಬಂಧವನ್ನು ಹೇರಿದೆ .
ಎಫ್ ) ಇದನ್ನು ಕೈಇಡಲಾಗಿದೆ . –
ಇದು ಆಸ್ತಿಯನ್ನು ಹೊಂದುವ ಹಕ್ಕಾಗಿದ್ದು ಇದನ್ನು 1978 ರ ಸಂವಿಧಾನದ 44 ನೇ ತಿದ್ದುಪಡಿಯ ಮೂಲಕ ತೆಗೆದು ಹಾಕಿ 300 ಎ ಅಡಿಯಲ್ಲಿ ಕಾನೂನು ಹಕ್ಕನ್ನು ಮಾಡಲಾಗಿದೆ .
ಜಿ ) ಯಾವುದೇ ವೃತ್ತಿಯನ್ನು ನಡೆಸುವ ಅಥವಾ ಕಸುಬನ್ನು ವ್ಯಾಪಾರವನ್ನು ಅಥವಾ ವ್ಯವಹಾರವನ್ನು ನಡೆಸುವ ಹಕ್ಕನ್ನು ಹೊಂದಿರತಕ್ಕುದು .
19 ವಿಧಿ ಅನ್ವಯ ಭಾರತದ ನಾಗರೀಕನು ತನ್ನ ಜೀವನ ನಡೆಸಲು ಯಾವುದೇ ರೀತಿಯ ಹುದ್ದೆಯನ್ನು , ವ್ಯಾಪಾರವನ್ನು ಮಾಡಲು ಸ್ವತಂತ್ರನಾಗಿದ್ದಾನೆ .
ನಿರ್ಬಂಧಗಳು : –
ರಾಜ್ಯವು ಈ ಕೆಳಕಂಡ ಸಂದರ್ಭದಲ್ಲಿ ಸಾರ್ವಜನಿಕ ಹಿತಾದೃಷ್ಟಿಯಿಂದ ನಿರ್ಬಂಧಗಳನ್ನು ಹೇರಿದೆ .
1 ) ಕೆಲವು ವೃತ್ತಿಗಳನ್ನು ನಡೆಸಲು ನಿರ್ಬಂಧವನ್ನು ಹೇರಿದೆ .
2 ) ಅನೈತಿಕ ವ್ಯವಹಾರದಲ್ಲಿ ಹೆಣ್ಣುಮಕ್ಕಳನ್ನು ಅಥವಾ ಮಕ್ಕಳನ್ನು ಬಳಕೆ ಮಾಡುವ ವೃತ್ತಿಯನ್ನು ನಿರ್ಬಂಧಿಸಿದೆ .
3 ) ಅಪಾಯಕಾರಿ ಔಷಧಗಳು ಹಾಗೂ ಮಾಧಕ ವಸ್ತುಗಳ ವ್ಯಾಪಾರ ಮಾಡುವುದನ್ನು ನಿರ್ಬಂಧಿಸಿದೆ . ಅವುಗಳ ಮೇಲೆ ಪರವಾನಿಗೆಯನ್ನು ಕಡಿತಗೊಳಿಸಿದೆ .
ವಿಧಿ 20. ಅಪರಾಧಗಳ ಬಗ್ಗೆ ಅಪರಾಧಿಯೆಂದು ನಿರ್ಣಯಿಸುವ ಸಂಬಂಧದಲ್ಲ ಸಂರಕ್ಷಣೆ
ಅಪರಾಧಿಗೂ ಕೂಡ ಕೆಲವು ನೀಡಿದ್ದು ಅವರಿಗೆ ನ್ಯಾಯಾಲಯ ಸಂಬಂಧಿಸಿದಂತೆ ಸ್ವಾತಂತ್ರ್ಯವನ್ನು ಒದಗಿಸಿದೆ . ಮಾಡಿದನೆಂದು ಕೃತ್ಯವನ್ನು
ಅಪರಾಧ ಆರೋಪಿಸಲಾಗಿರುವ ಆರೋಪಿಯನ್ನು ಅಪರಾಧಿಯೆಂದು ತೀರ್ಮಾನಿಸುವವರೆಗೆ ಅಪರಾಧಿ ಎಂದು ಪರಿಗಣಿಸತಕ್ಕದಲ್ಲ , ಹಾಗೂ ಅಪರಾಧವು ನಡೆದ ಸಮಯದಲ್ಲಿ ಜಾರಿಯಲ್ಲಿದ್ದ ಶಿಕ್ಷೆಯನ್ನು ವಿಧಿಸಬೇಕೆ ಹೊರತು ಅದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ವಿಧಿಸಬಾರದು ಎಂದು ಸಂವಿಧಾನದ 20 ( 1 ) ನೇ ವಿಧಿ ತಿಳಿಸುತ್ತದೆ .
ಯಾವುದೇ ಅಪರಾಧಿಗೆ ಒಂದು ಅಪರಾಧಕ್ಕೆ ಒಂದು ಸಲ ಮಾತ್ರ ಶಿಕ್ಷಿಸಬಹುದೇ ಹೊರತು ಹೆಚ್ಚು ಬಾರಿ ತಿಳಿಸುತ್ತದೆ . ಶಿಕ್ಷಿಸಬಾರದು ಎಂದು ಸಂವಿಧಾನದ 20 ( 2 ) ನೇ ವಿಧಿ ಯಾವುದೇ ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಂವಿಧಾನದ ತನ್ನ ವಿರುದ್ಧವೇ ಸಾಕ್ಷಿ ಹೇಳುವಂತೆ ಒತ್ತಾಯಿಸಬಾರದೆಂದು 20 ( 3 ) ನೇ ವಿಧಿ ತಿಳಿಸುತ್ತದೆ .
ಜೀವಿಸುವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ( Protection of Life and Personal Liberty )
ವಿಧಿ . 21. ಜೀವ ಸಂರಕ್ಷಣೆ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಸಂರಕ್ಷಣೆ ಈ ವಿಧಿ ಅನ್ವಯ ಪ್ರತಿಯೊಬ್ಬ ನಾಗರೀಕನಿಗೂ ಜೀವಿಸುವ ಹಕ್ಕನ್ನು ನೀಡಲಾಗಿದೆ . ಕಾನೂನಿನ ಮೂಲಕ ರೂಪಿಸಿರುವ ನಿಯಮಗಳ ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಯ ಜೀವವನ್ನು ಅಥವಾ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವಂತಿಲ್ಲ . ಇದನ್ನು ಭಾರತದ ಪೌರನಿಗೆ ಹಾಗೂ ಪೌರನಲ್ಲದವನಿಗೂ ಕೊಡ ಒದಗಿಸಿದೆ . ಇದೊಂದು ವ್ಯಕ್ತಿ ಸ್ವಾತಂತ್ರ್ಯವಾಗಿದೆ . ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನದ 21 ನೇ ವಿಧಿಯನ್ನು ಮೊಟಕುಗೊಳಿಸುವಂತಿಲ್ಲ . ಈ ಹಕ್ಕು ಭಾರತದ ನಾಗರೀಕರಿಗೆ & ನಾಗರೀಕರಲ್ಲದವರಿಗೆ ಒದಗಿಸುವಂತಹ ಹಕ್ಕಾಗಿದೆ .
ಸುಪ್ರೀಂ ಕೋರ್ಟ್ ಮನೇಕಾ ಪ್ರಕರಣದಲ್ಲಿ 21 ನೇ ವಿಧಿಯ ಭಾಗವಾಗಿ ಅನೇಕ ಹಕ್ಕುಗಳನ್ನು ಕೂಡ ಸೂಚಿಸಿದೆ .
ಅವುಗಳೆಂದರೆ :
1 ) ಮಾನವನ ಘನತೆ
2 ) ಮಾನವನಿಗೆ ಉತ್ತಮವಾದ ಪರಿಸರ ಒದಗಿಸುವುದು .
3 ) ಜೀವನೋಪಾಯ ಹಕ್ಕು
4 ) ವಸತಿ ಹಕ್ಕು
5 ) ಆರೋಗ್ಯದ ಹಕ್ಕು
6 ) ಉಚಿತ ಕಾನೂನಿನ ನೆರವು
7 ) ತ್ವಂತ ವಿಚಾರಣೆ
8 ) ಸಂಕೋಲೆಯ ವಿರುದ್ಧದ ಹಕ್ಕು
9 ) ಮಾಹಿತಿ ಹಕ್ಕು
10 ) ವಿಶ್ರಾಂತಿ ಹಕ್ಕು
0 Comments