
ಪರಿವಿಡಿ
ಸೈಮನ್ ಆಯೋಗ(Simon Commission 1927 )
ಸೈಮನ್ ಆಯೋಗ, simon commission,simon commission year, the simon commission, saimon komison, simon commission report
ಭಾರತದಲ್ಲಿ 1919 ರ ಕಾಯ್ದೆ ಜಾರಿಗೆ ಬಂದ ನಂತರದ ಬೆಳವಣಿಗೆ ಅಧ್ಯಯನ ವಿಶ್ಲೇಷಣೆ ಹಾಗೂ ಭಾರತ ಸ್ವಾತಂತ್ರ್ಯ ಪಡೆಯಲು ಎಷ್ಟು ಯೋಗ್ಯ ಎಂದು ಅಧ್ಯಯ ನ ಮಾಡಲು 1927 ನವಂಬರ್ನಲ್ಲಿ ಸರ್ ಜಾನ್ ಸೈಮನ್ರವರ ಅಧ್ಯಕ್ಷತೆಯ ಏಳು ಜನ ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯರ ಒಳಗೊಂಡ ಆಯೋಗ ರಚಿಸಿತು . ಈ ಆಯೋಗದಲ್ಲಿ ಯಾವುದೇ ಭಾರತೀಯ ಪ್ರತಿನಿಧಿ ಇರಲಿಲ್ಲ .
ಸೈಮನ್ ಆಯೋಗವು 1927 ಫೆಬ್ರವರಿ 3 ರಂದು ಬಾಂಬೆಗೆ ಬಂದಿಳಿಯಿತು . ಭಾರತೀಯರ ಪ್ರಾತಿನಿಧ್ಯವಿಲ್ಲದ ಈ ಆಯೋಗವನ್ನು ಕಾಂಗ್ರೆಸ್ ಬಹಿಷ್ಕರಿಸಿತು , ಸೈಮನ್ ಹೋದೆಡೆಯೆಲ್ಲ “ ಸೈಮನ್ ಹಿಂದಿರುಗಿ ” ಎಂಬ ಘೋಷಣೆ ಕೂಗಿತು .
1928 ಅಕ್ಟೋಬರ್ 30 ರಂದು ಸೈಮನ್ ಆಯೋಗ ಲಾಹೋರಿಗೆ ಹೋದಾಗ ಲಾಲಾ ಲಜಪತ್ ರಾಯ್ ಅವರು ಬೃಹತ್ ಪ್ರತಿಭಟನೆ ನಡೆಸಿದರು .
ಸೈಮನ್ ಆಯೋಗದ ಸದಸ್ಯರು
1 ) ಜಾನ್ ಸೈಮನ್ -ಅಧ್ಯಕ್ಷರು
ಸದಸ್ಯರುಗಳು
2 ) ಕ್ಲಮೆಂಟ್ ಆಟ್ಲಿ
3 ) ಹ್ಯಾರಿ ಲೆವಿ – ಲಾಸನ್
4 ) ಎಡ್ವರ್ಡ್ ಕಾಡೋಗಾನ್
5 ) ವೆರ್ನನ್ ಹಾರ್ಟ್ ಸಾಮ್
6 ) ಜಾರ್ಜ್ಲಾನೆ ಪಾಕ್ಸ್
7 ) ಡೋನಾಡ್ ಹಾವರ್ಡ್
ಲಾಲಾ ಲಜಪತ ರಾಯ್ರವರು ಈ ಪ್ರತಿಭಟನೆಯಲ್ಲಿ ಬ್ರಿಟಿಷ್ ಪೋಲಿಸ್ ಅಧಿಕಾರಿ ಸ್ಯಾಂಡರ್ಸ್ ಮಾಡಿಸಿದ ಲಾಠಿ ಪ್ರಹಾರದಿಂದ 1928 ನವಂಬರ್ 17 ರಂದು ನಿಧನರಾದರು .
ಇದರಿಂದ ಪ್ರತಿಭಟನೆ ತೀವ್ರಗೊಂಡು ಸೈಮನ್ ಆಯೋಗ 1929 ಏಪ್ರಿಲ್ 14 ರಂದು ಇಂಗ್ಲೆಂಡಿಗೆ ಹಿಂದಿರುಗಿತು . ಸೈಮನ್ ಆಯೋಗವು ಪ್ರತಿಭಟನೆ ನಡುವೆಯು ವರದಿ ತಯಾರಿಸಿತು , 1930 ರಲ್ಲಿ 17 ಸಂಪುಟದ ವರದಿಯನ್ನು ಬ್ರಿಟಿಷ್ ಸರ್ಕಾರಕ್ಕೆ ನೀಡಿತು .
ವರದಿಯ ಮುಖ್ಯಾಂಶಗಳು
1 ) ಪ್ರಾಂತ್ಯಗಳಲ್ಲಿ ದ್ವಿಪ್ರಭುತ್ವವನ್ನು ರದ್ದುಗೊಳಿಸಿ ಅದಕ್ಕೆ ಸ್ವಾಯತ್ತತೆ ನೀಡುವುದು .
2 ) ಕೋಮುವಾರು ಚುನಾವಣಾ ಕ್ಷೇತ್ರಗಳನ್ನು ಮುಂದುವರಿಸುವುದು .
3 ) ಬರ್ಮಾವನ್ನು ಭಾರತದಿಂದ ಹಾಗೂ ಸಿಂಧೂ ಪ್ರಾಂತ್ಯವನ್ನು ಬಾಂಬೆಯಿಂದ ಪ್ರತ್ಯೇಕಿಸಬೇಕೆಂದು ಶಿಫಾರಸ್ಸು ಮಾಡಿತು .
4 ) ಭಾರತದ ಸಂವಿಧಾನ ಫೆಡರಲ್ ವ್ಯವಸ್ಥೆಯನ್ನು ಹೊಂದಿರಬೇಕು .
5 ) ಗೌರರ್ ಜನರಲ್ಗೆ ಕ್ಯಾಬಿನೆಟ್ ನ ಸದಸ್ಯರುಗಳನ್ನು ನೇಮಕ ಮಾಡುವ ಸಂಪೂರ್ಣ ಅಧಿಕಾರವನ್ನು ನೀಡಬೇಕೆಂದು ಶಿಫಾರಸ್ಸು ಮಾಡಿತು .
ಸೈಮನ್ ಆಯೋಗದ ವಿರುದ್ಧ ಭಾರತದಲ್ಲಿ ತೀವ್ರ ಪ್ರತಿಭಟನೆ ಆರಂಭವಾದ ಹಿನ್ನಲೆಯಲ್ಲಿ ಭಾರತೀಯ ಪ್ರತಿನಿಧಿಗಳ ಸಮಾವೇಶವೊಂದನ್ನು ಕರೆಯಲು ಬ್ರಿಟಿಷ್ ಸರ್ಕಾರ ನಿಶ್ಚಯಿಸಿತು .
ಈ ಸಮಾವೇಶದಲ್ಲಿ ಮುಂದಿನ ಸಂವಿಧಾನಾತ್ಮಕ ಬೆಳವಣಿಗೆಗಳ ಸ್ವರೂಪವನ್ನು ರೂಪಿಸಲು , ಭಾರತೀಯರಿಗೆ ಅವಕಾಶ ಕಲ್ಪಿಸಲಾಯಿತು . ಇದರ ಫಲವೇ ದುಂಡು ಮೇಜಿನ ಪರಿಷತ್ತಿನ ಸಮಾವೇಶಗಳು ,
ಲಾಲಾ ಲಜಪತರಾಯ್
ಪಂಜಾಜನ ಕೇಸರಿ ಎಂದೇ ಖ್ಯಾತರಾದ ತಾಲಾ ಬಾಲ ಲಜಪತ ರಾಯ್ ಅವರು 1928 ನವೆಂಬರ್ 17 ರಂದು ಲಾಹೋರ್ನಲ್ಲಿ ಸೈಮನ್ ಆಯೋಗದ ವಿರುದ್ಧ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಹಾರದಿಂದ ಸಾವನ್ನಪ್ಪಿದ್ದರು .
ಇವರು ಭಾರತದ ತೀವ್ರಗಾಮಿ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ .
ಲಾಲ್ ಬಾಲ್ ಪಾಲ್ ( ಲಾಲಾ ಲಜಪತರಾಯ್ , ಗ೦ಗಾಧರ್ ತಿಲಕ್ , ಬಿಪಿನ್ ಚಂದ್ರಪಾಲ್ ) ಎಂಬ ಮೂವರು ತೀವ್ರಗಾಮಿ ಹೋರಾಟಗಾರರಾಗಿದ್ದರು .
ಲಾಲಾ ಲಜಪತರಾಯ್ ಅವರು 1894 ರಲ್ಲಿ ಸ್ಥಾಪನೆಯಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಸಂಸ್ಥಾಪಕರು , ಇವರು ” ಸರ್ವೆಂಟ್ಸ್ ಆಫ್ ಪೀಪಲ್ಸ್ ಸೊಸೈಟಿ ‘ ಯ ಸಂಸ್ಥಾಪಕರು .
ಇವರು ಅನ್ಹ್ಯಾಪಿ ಇಂಡಿಯಾ ,
ಯಂಗ್ ಇಂಡಿಯಾ , ಆರ್ಯ ಸಮಾಜ ,
ದ ಸ್ಟೋರಿ ಆಫ್ ಮೈ ಡೆಪಾರ್ಟೀಷನ್ ಎಂಬ ಪುಸ್ತಕಗಳನ್ನು ಬರೆದಿದ್ದಾರೆ .
ಜಾನ್ ಸೈಮನ್ ( John Simon )
1919 ರ ಸರ್ಕಾರ ಕಾಯ್ದೆ ಭಾರತ ( ಮಿಂಟೊ ಮಾರ್ಲೆ ಸುಧಾರಣೆ ) ಪ್ರಕಾರ 10 ವರ್ಷದ ಕೊನೆಯಲ್ಲಿ ಒಂದು ಆಯೋಗವನ್ನು ನೇಮಿಸುವ ಪ್ರಸ್ತಾಪದ ಮುನ್ಸೂಚನೆಯನ್ನು ವ್ಯಕ್ತಪಡಿಸಲಾಗಿತ್ತು .
ಕಾಯ್ದೆಯ 1919 ಕಾರ್ಯವೈಖರಿಯನ್ನು ತಿಳಿದು , ಅಗತ್ಯಾನುಸಾರವಾಗಿ ಸೂಕ್ತ ಬದಲಾವಣೆಯ ವರದಿಯನ್ನು ಅದು ಸರ್ಕಾರ ಸಲ್ಲಿಸಬೇಕಿತ್ತು .
ಅದರಂತೆ 1927 ರಲ್ಲಿ ಜಾನ್ ಸೈಮನ್ ಅವರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಯಿತು .
ಜಾನ್ ಸೈಮನ್ ಅವರು ಬ್ರಿಟನ್ನಲ್ಲಿ ಲಾರ್ಡ ಛಾನ್ಸಲರ್ ಆಗಿ ಕಾರ್ಯನಿರ್ವಹಿಸಿದ್ದರು .