ಸುಗಮ ಜೀವನ ಸೂಚ್ಯಂಕ | ease of living index

ಸುಗಮ ಜೀವನ ಸೂಚ್ಯಂಕ -2020

ease of living index, ease of living index 2020, ease of living index 2021, ease living index, ಸುಗಮ ಜೀವನ ಸೂಚ್ಯಂಕ

ease of living index, ease of living index 2020, ease of living index 2021, ease living index, ಸುಗಮ ಜೀವನ ಸೂಚ್ಯಂಕ

2020 ರ ಸುಗಮ ಜೀವನ ಸೂಚ್ಯಂಕ ( Ease of Living Index -EoLl ) ಹಾಗೂ ನಗರಸಭೆ ನಿರ್ವಹಣೆ ಸೂಚ್ಯಂಕ ( ಮುನ್ಸಿ ಪಾಲಿಟಿ ಪರ್‌ಫಾರ್ಮೆನ್ಸ್ ಇಂಡೆಕ್ಸ್ ಎಂಪಿಐ ) ಪಟ್ಟಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ .

ಈ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದ್ದು , ಕರ್ನಾಟಕದ ಇನ್ನಿತರ ಹಲವು ನಗರಗಳೂ ಇದರಲ್ಲಿದೆ . ಈ ಬಗ್ಗೆ ವಿವರ ಇಲ್ಲಿದೆ . ಏನಿದು ಇಒಎಲ್‌ಐ ( EoLl ) ಸೂಚ್ಯಂಕ ? ಈಸಿ ಆಫ್ ಲಿವಿಂಗ್ ಇಂಡೆಕ್ಸ್ ( ಇಪಿಎಲ್‌ಐ ) – ಸುಗಮ ಜೀವನ ಸೂಚ್ಯಂಕ ವನ್ನು ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಪ್ರತಿವರ್ಷ ಪ್ರಕಟಿಸುತ್ತದೆ .

ದೇಶದ ಪ್ರಮುಖ ನಗರಗಳ ಜೀವನಮಟ್ಟವನ್ನು ವೈಜ್ಞಾನಿಕ ಮಾನದಂಡಗಳ ಮೂಲಕ ಪರಿಶೀಲಿಸಿ , ಪ್ರತಿ ನಗರವನ್ನು ಅನುಕ್ರಮವಾಗಿ ಪಟ್ಟಿ ಮಾಡುತ್ತದೆ . ‘ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳು ‘ ಮತ್ತು ‘ ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳು ‘ ಎಂದು ಎರಡು ಪಟ್ಟಿಯಲ್ಲಿ ಸೂಚ್ಯಂಕವನ್ನು ಎಂಗಡಿಸಲಾಗಿದೆ

. 2020 ರ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 111 ನಗರಗಳು ಭಾಗವಹಿಸಿದ್ದವು . ‘ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ’ಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಹಾಗೂ ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆ’ಯ ನಗರಗಳ ಪಟ್ಟಿಯಲ್ಲಿ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸಾಧಕ ನಗರಗಳಾಗಿ ಹೊರಹೊಮ್ಮಿದೆ

 

ಸೂಚ್ಯಂಕ ಲೆಕ್ಕಾಚಾರ ಹೇಗೆ ?

ಸುಗಮ ಜೀವನಕ್ಕೆ ಕಾರಣವಾಗುವ ಎಲ್ಲ ಅಂಶಗಳನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನಗರಗಳ ಬಗ್ಗೆ ಕಲೆಹಾಕಿ , ಪರಿಶೀಲನೆ ನಡೆಸುತ್ತದೆ . 2020 ರ ಸಮೀಕ್ಷೆಯಲ್ಲಿ 111 ನಗರಗಳಿಂದ 322 ಲಕ್ಷ ನಾಗರಿಕರು ಪಾಲ್ಗೊಂಡಿದ್ದರು .

ಗುಣಮಟ್ಟದ ಜೀವನ , ತಲಾವಾರು ಆರ್ಥಿಕ ಸಾಮರ್ಥ್ಯ , ಜೀವನದ ಸುಸ್ಥಿರತೆಗಳೇ ಬದುಕಿನ ಗುಣಮಟ್ಟದ ಮಾಪಕಗಳು , ಇದಕ್ಕಾಗಿ ನಗರ ಬದುಕಿನ 13 ವಿಚಾರಗಳನ್ನು ಎತ್ತಿಕೊಂಡು ಅವುಗಳ ಮೌಲ್ಯಮಾಪನ ಮಾಡಲಾಗುತ್ತದೆ

. ಅವುಗಳೆಂದರೆ ಶಿಕ್ಷಣ , ಆರೋಗ್ಯ , ವಸತಿ , ಸ್ವಚ್ಛತೆ , ಶುಚಿತ್ವ ಮತ್ತು ಘನ ತ್ಯಾಜ್ಯ ನಿರ್ವಹಣೆ , ಸಾರಿಗೆ , ಸುರಕ್ಷತೆ ಮತ್ತು ಭದ್ರತೆ , ಮನರಂಜನೆ , ಆರ್ಥಿಕ ಅಭಿವೃದ್ಧಿಯ ಮಟ್ಟ , ಔದ್ಯಮಿಕ ಅವಕಾಶಗಳು , ಪರಿಸರ , ಹಸಿರು ಸ್ಥಳ ಮತ್ತು ಕಟ್ಟಡಗಳು , ಇಂಧನ ಬಳಕೆ , ನಗರ ಸ್ಥಿತಿಸ್ಥಾಪಕತ್ವ .

ಇವುಗಳಿಂದ ಶೇ .70 ರಷ್ಟು ಮೌಲ್ಯಮಾಪನ ನಡೆಯುತ್ತದೆ . ಶೇ .30 ರಷ್ಟು ಕೃಪಾಂಕ ಕೂಡ ಇದೆ . ಇದು ಸಮೀಕ್ಷೆಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯ ಮೂಲಕ ಸಂಗ್ರಹವಾಗುತ್ತದೆ .

 ಬೆಂಗಳೂರು

ಸುಗಮ ಜೀವನ ಸೂಚ್ಯಂಕ 2020 ರ ವರದಿಯಲ್ಲಿ ಬೆಂಗಳೂರು ಮೊದಲ ಸ್ಥಾನವನ್ನು ಪಡೆದಿದೆ . 2019 ರ ವರದಿಯಲ್ಲಿ 58 ನೇ ಸ್ಥಾನದಲ್ಲಿದ್ದ ಬೆಂಗಳೂರು ನಗರ ಈಗ ಮೊದಲ ಸ್ಥಾನವನ್ನು ಪಡೆದಿದೆ .

ಪ್ರಮುಖ ಮಾನದಂಡಗಳಲ್ಲಿ ಆರ್ಥಿಕ ಸಾಮಾರ್ಥ್ಯದ ವಿಭಾಗದಲ್ಲಿ ದೇಶದ ಇತರ ನಗರಗಳಿಗಿಂತ ಬಹಳಷ್ಟು ಮುಂದುವರೆದು ಇತರ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ .

 ದಾವಣಗೆರೆ

ಸುಗಮ ಜೀವನ ಸೂಚ್ಯಂಕದಲ್ಲಿ 10 ಲಕ್ಷ ಒಳಗಿನ ಜನಸಂಖ್ಯೆಯಿರುವ ನಗರಗಳಲ್ಲಿ ದಾವಣಗೆರೆ ದೇಶದಲ್ಲಿ 9 ನೇ ಸ್ಥಾನ , ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ . ಟಯರ್‌ ಟೂ ಸಿಟಿಯಾದ ದಾವಣಗೆರೆ ನಗರ ಸುಲಲಿತ ಜೀವನ ನಡೆಸಲು ಅನುಕೂಲ

ಇರುವ ಕೆಲವೇ ಸಿಟಿಗಳ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದಂತಾಗಿದೆ . 2017 ರ ಸಮೀಕ್ಷೆಯಲ್ಲಿ 100 ಸ್ಮಾರ್ಟ್ ನಗರಗಳಲ್ಲಿ ದಾವಣಗೆರೆ 83 ನೇ ಸ್ಥಾನದಲ್ಲಿತ್ತು , ಈ ಬಾರಿ 9 ನೇ ಸ್ಥಾನಕ್ಕೆ ಏರಿದೆ .

ಇದರ ಜತೆಗೆ ಪುರಸಭೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತದಲ್ಲಿ 4 ನೇ ಸ್ಥಾನ ಹಾಗೂ ಕರ್ನಾಟಕದಲ್ಲಿ 5 ನೇ ಸ್ಥಾನ ಪಡೆದಿದೆ .

ನಾಗರಿಕರ ಅಭಿಪ್ರಾಯ ಸಂಗ್ರಹಣಾ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಮೊದಲ ಸ್ಥಾನ ಹಾಗೂ ಭಾರತದಲ್ಲಿ 3 ನೇ ಸ್ಥಾನ ಪಡೆದಿದೆ . ಈ ಸಮೀಕ್ಷೆಯಲ್ಲಿ ನಗರದ 15,236 ಜನ ಪಾಲ್ಗೊಂಡಿದ್ದರು .

 ಪುರಸಭೆ ನಿರ್ವಹಣಾ ಸೂಚ್ಯಂಕ

ಸುಗಮ ಜೀವನ ಸೂಚ್ಯಂಕದಂತೆಯೇ ಪರಸಭೆ ನಿರ್ವಹಣೆಯ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದ್ದು , ಇದನ್ನು ಪುರಸಭೆ ನಿರ್ವಹಣೆ ಸೂಚ್ಯಂಕ ( ಎಂಪಿಐ ) ಮೂಲಕ ಗುರುತಿಸಲಾಗುತ್ತದೆ . ಇಲ್ಲೂ ‘ ಹತ್ತು ಲಕ್ಷಕ್ಕಿಂತ ಹೆಚ್ಚಿನ ‘ ಹಾಗೂ ` ಹತ್ತು ಲಕ್ಷಕ್ಕಿಂತ ಕಡಿಮೆ ‘ ಜನಸಂಖ್ಯೆಯ ಪುರಸಭೆಗಳನ್ನು ಪರೀಕ್ಷಿಸಿ ಪಟ್ಟಿ ಸಿದ್ಧಪಡಿಸಲಾಗಿದೆ .

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಪುರಸಭೆಗಳ ವಿಭಾಗದಲ್ಲಿ ಇಂದೋರ್ ಅತ್ಯುತ್ತಮ ಪುರಸಭೆಯಾಗಿ ಹೊರಹೊಮ್ಮಿದೆ . ಹತ್ತು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ ವಿಭಾಗದಲ್ಲಿ ದೆಹಲಿ ಅತ್ಯುತ್ತಮ ಮರಸಭೆಯಾಗಿ ಹೊರ ಹೊಮ್ಮಿದೆ .

111 ಪುರಸಭೆಗಳಲ್ಲಿ ಎಂಪಿಐ ಪರಿಶೀಲನೆ ನಡೆಸಲಾಗಿದೆ . ಪುರಸಭೆಗಳ ಸಾಧನೆ ಸೂಚ್ಯಂಕವನ್ನು ಸುಲಭ ಜೀವನ ಸೂಚಕಗಳ ಆಧಾರದ ಮೇಲೆ ಲೆಕ್ಕಿಸಲಾಗುತ್ತದೆ . ಸ್ಥಳೀಯ ಆಡಳಿತದಲ್ಲಿ ಪೌರ ಸಂಸ್ಥೆಗಳು ನೀಡುವ ಸೇವೆಗಳು , ಹಣಕಾಸು , ನೀತಿ , ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆಯನ್ನು ಪರಿಶೀಲಿಸಲಾಗುತ್ತದೆ .

ಇದು ಸ್ಥಳೀಯ ಆಡಳಿತದಲ್ಲಿನ ಸಂಕೀರ್ಣತೆಗಳನ್ನು ಸರಳೀಕರಿಸಲು , ಮೌಲ್ಯಮಾಪನ ಮಾಡಲು , ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ .

ಕರ್ನಾಟಕದ ನಗರಗಳು

ಸುಗಮ ಜೀವನ ಸೂಚ್ಯಂಕದ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯ 111 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಎರಡು ನಗರಗಳಿವೆ . ಮೊದಲ ಸ್ಥಾನದಲ್ಲಿ ಬೆಂಗಳೂರು ಹಾಗೂ 37 ನೇ ಸ್ಥಾನದಲ್ಲಿ ಹುಬ್ಬಳ್ಳಿ ಧಾರವಾಡ ಸ್ಥಾನ ಪಡೆದಿವೆ .

ಸೂಚ್ಯಂಕದ ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಐದು ನಗರಗಳಿವೆ . 9 ನೇ ಸ್ಥಾನದಲ್ಲಿ ದಾವಣಗೆರೆ , 20 ನೇ ಸ್ಥಾನದಲ್ಲಿ ಮಂಗಳೂರು , 23 ನೇ ಸ್ಥಾನದಲ್ಲಿ ತುಮಕೂರು , 26 ನೇ ಸ್ಥಾನದಲ್ಲಿ ಶಿವಮೊಗ್ಗ , 47 ನೇ ಸ್ಥಾನದಲ್ಲಿ ಬೆಳಗಾವಿ .

ಪುರಸಭೆ ನಿರ್ವಹಣೆ ಸೂಚ್ಯಂಕದ ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನ ಸಂಖ್ಯೆಯ ನಗರಗಳ ಪಟ್ಟಿಯಲ್ಲಿ ಕರ್ನಾಟಕದಲ್ಲಿ ಎರಡು ನಗರಗಳಿವೆ . 21 ನೇ ಸ್ಥಾನದಲ್ಲಿ ಹುಬ್ಬಳ್ಳಿ – ಧಾರವಾಡ , 31 ನೇ ಸ್ಥಾನದಲ್ಲಿ ಬೆಂಗಳೂರು ಜಾಗ ಪಡೆದಿವೆ .

ಪುರಸಭೆ ನಿರ್ವಹಣೆ ಸೂಚ್ಯಂಕದ 10 ಲಕ್ಷಕ್ಕಿಂತ ಕಡಿಮೆ ಜನ ಸಂಖ್ಯೆಯ ನಗರಗಳ ಪಟ್ಟಿಯಲ್ಲಿ ಐದು ನಗರಗಳಿವೆ . 23 ನೇ ಸ್ಥಾನದಲ್ಲಿ ತುಮಕೂರು , 33 ನೇ ಸ್ಥಾನದಲ್ಲಿ ಬೆಳಗಾವಿ , 34 ನೇ ಸ್ಥಾನದಲ್ಲಿ ಶಿವಮೊಗ್ಗ , 42 ನೇ ಸ್ಥಾನದಲ್ಲಿ ಮಂಗಳೂರು , 46 ನೇ ಸ್ಥಾನದಲ್ಲಿ ದಾವಣಗೆರೆ .

 

ಸುಗಮ ಜೀವನ ಸೂಚ್ಯಂಕ ( ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ)

ಬೆಂಗಳೂರು

ಪುಣೆ

ಅಹಮದಾಬಾದ್

ಚೆನ್ನೈ

ಸೂರತ್

ನವಮುಂಬಯಿ

ಕೊಯಮತ್ತೂರು

ವಡೋದರಾ

ಇಂದೋರ್

ಗ್ರೇಟರ್ ಮುಂಬಯಿ

 

ಸುಗಮ ಜೀವನ ಸೂಚ್ಯಂಕ ( ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ )

ಶಿಮ್ಲಾ

ತಿರುಚಿನಾಪಳ್ಳಿ

ಅಗರ್ತಲಾ

ಅಜ್ಮೇರ್

ಪುದುಚೆರಿ

ದಿಯು

ಕರ್ನೂಲು

ಪಣಜಿ

ತಿರುನಲ್ವೇಲಿ

ತಿರುಪ್ಪೋರು

 

ಸುಗಮ ಜೀವನ ಸೂಚ್ಯಂಕದಲ್ಲಿ ಸರಾಸರಿ ಅಂಕ ಹೋಲಿಕೆ

ವಿಷಯಗಳು                                   ಬೆಂಗಳೂರು    ಭಾರತ

ಜೀವನಗುಣಮಟ್ಟ                            55.68          51.93

ಆರ್ಥಿಕ ಸಾಮರ್ಥ್ಯ                            78.83         13.52

ಸುಸ್ಥಿರತೆ                                             59.96         56.11

ಜನಾಭಿಪ್ರಾಯ                                     78              76.8

 

Comments

Leave a Reply

Your email address will not be published. Required fields are marked *