ಸಿಲಿಕಾನ್

silicon ,silicon dioxide,sicl4 , silicon nitride, silicon tetrachloride , si periodic table, silicon periodic table ,silicon metal

silicon ,silicon dioxide,sicl4 , silicon nitride, silicon tetrachloride , si periodic table, silicon periodic table ,silicon metal

ಮನುಷ್ಯನು ಮರಳಿನ ರಾಸಾಯನಿಕ ಸಂರಚನೆಯ ಬಗ್ಗೆ – ಅದು ಭೂಮಿಯ ಘನ ಕವಚದ ಪ್ರಮುಖ ಭಾಗವಾದರೂ – ಅರಿಯಲು ಪ್ರಾರಂಭಿಸಿದ್ದು ಬಹಳ ವಿಳಂಬವಾಗಿ , ಇದಕ್ಕೆ ಕಾರಣವೂ ಉಂಟು . ಮರಳನ್ನು ಕಾಸಿದಾಗ ಅದು ರಾಸಾಯನಿಕ ಕ್ರಿಯೆಗೆ ಒಳಪಡುವುದಿಲ್ಲ .

ಮರಳು , ಬೆಣಚು ( quartz ) ಮೊದಲಾದ ರೂಪಗಳಲ್ಲಿ ಕಂಡು ಬರುವ ಸಿಲಿಕಾನ್ ಸಂಯುಕ್ತಗಳನ್ನು ಬಹಳ ಕಾಲದವರೆಗೆ ಧಾತು ಎಂದೇ ಪರಿಗಣಿಸಲಾಗಿತ್ತು . ( ಸಿಲಿಕಾನ್ ಡೈ ಆಕ್ಸೆಡ್‌ನಿಂದ ಕಚ್ಚಾ ಸಿಲಿಕಾನನ್ನು ತಯಾರಿಸಿದ್ದು ಬರ್ಜಿಲಿಯಸ್‌ನ ಸಾಧನೆ . )

ಮರಳನ್ನು ಸಿಲಿಕಾ ಎಂದೇ ಗುರುತಿಸಲಾಗಿದ್ದು , ಅದು ಸಂಯುಕ್ತವೇ ಹೊರತು ಧಾತುವಲ್ಲ ಎಂದು ಆತ ಸಾಧಿಸಿದ್ದು ವಿಶೇಷ . ಸಿಲಿಕಾನಿನ ಲಕ್ಷಣಗಳ ಕುರಿತ ಅಜ್ಞಾನ ,

ಸಿಲಿಕಾದ ರಾಸಾಯನಿಕ ವಿಭಜನೆಯ ಸಮಸ್ಯೆಗಳು , ಉಪಕರಣ ಮತ್ತು ತಂತ್ರಜ್ಞಾನದ ಅಭಾವದಿಂದಾಗಿಯೋ ಉಪಯೋಗವಾಗಲೀ ಬಹಳ ವರ್ಷಗಳವರೆಗೆ ನಡೆಯಲೇ ಇಲ್ಲ .

 

ಸಿಲಿಕಾನಿನ ಸಾಮಾನ್ಯ ಲಕ್ಷಣಗಳು

ಸಂಕೇತ : Si

ಪರಮಾಣು ಸಂಖ್ಯೆ : 14

ರಾಶಿ ಸಂಖ್ಯೆ : 28

ಇಲೆಕ್ಟ್ರಾನ್ ವಿನ್ಯಾಸ : 1s² , 2s² 2p , 3s² 3p ಅಥವಾ [ Ne ] 3s 3p

ಬಹುರೂಪಗಳು : ಅಸ್ಪಟಿಕ ಮತ್ತು ಸ್ಪಟಿಕ

ಲಭ್ಯತೆ

ಭೂಮಿಯ ಗಡಸು ಪದರದಲ್ಲಿ ಹೇರಳತೆಯಲ್ಲಿ ಆಕ್ಸಿಜನ್ ಅನಂತರದ ಸ್ಥಾನ ಸಿಲಿಕಾನಿನದು . ಸಿಲಿಕಾ ಅಥವಾ ಸಿಲಿಕೇಟ್‌ಗಳು ಧೂಳು ಇಲ್ಲವೆ ಮರಳಿನ ರೂಪದಲ್ಲಿ ಅನೇಕ ಗ್ರಹಗಳಲ್ಲಿ ಲಭ್ಯ .

ಗಾರ್ನೆಟ್ , ಝರ್‌ಕಾನ್ , ಟೊಪಾಜ್ , ಓಪಲ್‌ಗಳಂತಹ ರತ್ನ ಮತ್ತು ಉಪರತ್ನಗಳಲ್ಲಿ ಸಿಲಿಕಾನ್ ಸಂಯುಕ್ತಗಳಿರುತ್ತವೆ . ಸಿಲಿಕಾನ್ ಸ್ಪಟಿಕ ಮತ್ತು ಅಸ್ಪಟಿಕ .

ಉದ್ದರಣೆ

ಚೆನ್ನಾಗಿ ಪುಡಿ ಮಾಡಿದ ಸಿಲಿಕಾವನ್ನು ( ಮರಳು ಅಥವಾ ಬೆಣಚು ) ಮೆನ್ನೀಸಿಯಮ್ ಪುಡಿಯೊಂದಿಗೆ ಮಿಶ್ರಣಮಾಡಿ ಜೇಡಿ ಮೂಸೆಯಲ್ಲಿ ಕಾಸಿದಾಗ ಮೆಗ್ನಿಸಿಯಮ್ ಆಕ್ಸೆಡ್ ಮತ್ತು ಸಿಲಿಕಾನ್ ಉಂಟಾಗುತ್ತದೆ .

ಈ ಉತ್ಪನ್ನವನ್ನು ಸಾರರಿಕ ಹೈಡೊಕ್ಲೋರಿಕ್ ಆಮ್ಲದೊಂದಿಗೆ ತೊಳೆದು ಮೆನ್ನೀಸಿಯಮ್ ಆಕ್ಸೆಡ್‌ನ್ನು ವಿಲೀನಗೊಳಿಸಲಾಗುತ್ತದೆ .

ಅನಂತರ ರಾಸಾಯನಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದ ಸಿಲಿಕಾವನ್ನು ( ಸಿಲಿಕಾನ್ ಡೈ ಆಕ್ಸೆಡ್ ) ಬೇರ್ಪಡಿಸಲು ಹೈಡೊಣ್ಣೂರಿಕ್ ಆಮ್ಲದಿಂದ ತೊಳೆಯಲಾಗುತ್ತದೆ . ಉಳಿಯುವ ಪುಡಿಯೇ ಅಸ್ಪಟಿಕ ರೂಪದ ಸಿಲಿಕಾನ್ .

 SiO₂ + 2Mg → Si + 2MgO

 

ಸ್ಪಟಿಕ ಸಿಲಿಕಾನ್ ಉದ್ದರಣೆ

ಕೋಕ್‌ನೊಂದಿಗೆ ಸಿಲಿಕಾವನ್ನು ಅಪಕರ್ಷಿಸಿ ಸ್ಪಟಿಕ ಸಿಲಿಕಾನನ್ನು ಪಡೆಯಲಾಗುತ್ತದೆ . ಹೆಚ್ಚಿನ ಪ್ರಮಾಣದ ಸಿಲಿಕಾವನ್ನು ಕೋಕ್‌ನೊಂದಿಗೆ ವಿದ್ಯುತ್‌ ಕುಲುಮೆಯಲ್ಲಿ ಗಾಳಿಯ ಸಂಪರ್ಕವಿಲ್ಲದೆಯೇ ಕಾಸಿದಾಗ ಕಡುಬೂದು ಬಣ್ಣದ ಸ್ಪಟಿಕ ಸಿಲಿಕಾನ್ ದೊರಕುತ್ತದೆ . .

( ಈ ವಿಧಾನದಲ್ಲಿ ಹೆಚ್ಚಿನ ಪ್ರಮಾಣದ ಸಿಲಿಕಾವನ್ನು ಬಳಸುವುದು ಅತಿ ಅವಶ್ಯ . ಇಲ್ಲವಾದಲ್ಲಿ ಕಾರ್ಬೊರಂಡಮ್ ( SIC ) ಉತ್ಪತ್ತಿಯಾಗುತ್ತದೆ . )

 Sio , + 2C Si + 2C0

ಸಿಲಿಕಾನಿನ ರಾಸಾಯನಿಕ ಗುಣಗಳು

ಆಸ್ಪಟಿಕ ಸಿಲಿಕಾನ್‌ವು ಸ್ಪಟಿಕ ಸಿಲಿಕಾನ್‌ಗಿಂತಲೂ ಹೆಚ್ಚು ಕ್ರಿಯಾಪಟ ಡೈಆಕ್ಸೆಡ್ ಉತ್ಪತ್ತಿಯಾಗುತ್ತದೆ . ಆಸ್ಪಟಿಕ ಸಿಲಿಕಾನ್ ಗಾಳಿಯಲ್ಲಿ ಪ್ರಕಾಶಮಾನವಾಗಿ ಮತ್ತು ಆಕ್ಸಿಜನ್‌ನಲ್ಲಿ ಕ್ಷಿಪ್ರವಾಗಿ ಉರಿದು ಸಿಲಿಕಾನ್

Si + O₂ → SiO₂

 

ಈ ಕ್ರಿಯೆಯಲ್ಲಿ ಉಷ್ಣ ಬಿಡುಗಡೆಯಾಗುತ್ತದೆ . ಇಂಥ ರಾಸಾಯನಿಕ ಕ್ರಿಯೆಗಳಿಗೆ ಬಹಿರುಷ್ಣಕ ( Exothermic ) ಕ್ರಿಯೆಗಳೆನ್ನುತ್ತಾರೆ .

ಸಿಲಿಕಾನ್ ನೀರಿನಲ್ಲಿ ವಿಲೀನವಾಗುವುದಿಲ್ಲ . ಆದರೆ ಕೆಂಪಾಗಿ ಕಾದಾಗ ಹಬೆಯನ್ನು ವಿಭಜಿಸಿ ಹೈಡೋಜನನ್ನು ಬಿಡುಗಡೆ ಮಾಡುತ್ತದೆ .

 Si + 2H₂O → SiO₂ + 2H₂

 

ಸಿಲಿಕಾನ್ ಮತ್ತು ಕೋಕ್‌ನ ಮಿಶ್ರಣವನ್ನು ವಿದ್ಯುತ್‌ ಕುಲುಮೆಯಲ್ಲಿ ಕಾಸಿದಾಗ ಸಿಲಿಕಾನ್ ಕಾರ್ಬೈಡ್ ( ಕಾರ್ಬೊರಂಡಮ್ ) ಉತ್ಪತ್ತಿಯಾಗುತ್ತದೆ .

Si + C  →  SiC

 . ಈ ರಾಸಾಯನಿಕ ಕ್ರಿಯೆ ನಡೆದಾಗ ಉಷ್ಣ ಹೀರಿಕೆಯಾಗುತ್ತದೆ . ಉಷ್ಣ ಹೀರಿಕೆಯಾಗುವ ಇಂತಹ ರಾಸಾಯನಿಕ ಕ್ರಿಯೆಗಳಿಗೆ ಅಂತರುಷ್ಠಕ ( Endothermic ) ಕ್ರಿಯೆಗಳೆನ್ನುತ್ತಾರೆ .

 

ಸಿಲಿಕಾನ್ ಸಂಯುಕ್ತಗಳ ಉಪಯೋಗಗಳು

  1.  ಗಾಜಿನ ತಯಾರಿಕೆಯಲ್ಲಿ ಮರಳಿನ ಬಳಕೆ .
  2.  ಕತ್ತರಿಸುವ ಮತ್ತು ಉಜ್ಜುವ ಸಾಧನಗಳಲ್ಲಿ ಸಿಲಿಕಾನ್ ಕಾರ್ಬೈಡ್‌ ಬಳಕೆ ,
  3.  ಜಿಯೋಲೈಟ್ ಅನ್ನು ಗಡಸು ನೀರನ್ನು ಅ ಮೆದು ನೀರನ್ನಾಗಿ ಪರಿವರ್ತಿಸಲು ಉಪಯೋಗಿಸುತ್ತಾರೆ .
  4. ಕಟ್ಟಡಗಳ ತಯಾರಿಕೆಯಲ್ಲಿ ಬಳಕೆಯಾಗುವ ಕಾಂಕ್ರೀಟ್ ಮಿಶ್ರಣದ ತಯಾರಿಕೆಯಲ್ಲಿ ಮರಳಿನ ಬಳಕೆ ,
  5.  ಸಿಲಿಕಾ ಗಡಿಯಾರಗಳ ತಯಾರಿಕೆಯಲ್ಲಿ ಬಳಕೆ ಹಾಗೂ ಕ್ರೋಮಟೋಗ್ರಾಫಿಯಲ್ಲೂ ಬಳಕೆ
  6.  ಝರ್ ಕಾನ್ , ಟೋಪಾಡ್‌ಗಳನ್ನು ಆಭರಣಗಳ ತಯಾರಿಕೆಯಲ್ಲಿ ಬಳಕೆ

ಸಿಲಿಕೋನ್‌ಗಳ ( ಕಾರ್ಬನಿಕ್ ಪಾಲಿಮರ್ ) ತಯಾರಿಕೆಯಲ್ಲಿ ಬಳಸುತ್ತಾರೆ . ಸಿಲಿಕೋನ್ ವಿದ್ಯುತ್ ಮೋಟಾರ್ ಮತ್ತು ಇತರೆ ಸಲಕರಣೆಗಳ ಸುತ್ತಲೂ ಕವಚವಾಗಿ ಬಳಕೆಯಾಗುತ್ತದೆ .

ಇದು ರಬ್ಬರ್ ಹಾಗೆ ಇರುತ್ತದೆ . ನೀರಿನ ನಿರೋಧಕವಾಗಿ , ಇನ್ಸುಲೇಟರ್‌ವಾಗಿ ಬಳಕೆಯಾಗುತ್ತದೆ . ವಿದ್ಯುತ್ ಸಲಕರಣೆಗಳ ಸುತ್ತಲಿನ ಕವಚ ಕಾಯ್ದಾಗ ಮೆದುವಾಗುವುದಿಲ್ಲ .

ಸಿಲಿಕಾನ್ ಸಹಜ ಅರೆವಾಹಕ . ಇದನ್ನು ಪ್ರಭಾವಕಾರಿಯಾದ ಅಸಹಜ ಅರೆವಾಹಕವನ್ನಾಗಿ ಡೋಪಿಂಗ್ ಮೂಲಕ ಪರಿವರ್ತಿಸಬಹುದು . ಈ ರೀತಿಯ ಅರೆವಾಹಕವನ್ನು ಟ್ರಾನ್ಸಿಸ್ಟರ್ , ಡಯೋಡ್ ಅನುಕಲಿತ ಮಂಡಲಗಳ ( I , C ) ತಯಾರಿಕೆಯಲ್ಲಿ ಬಳಸುತ್ತಾರೆ .

ಕತ್ತರಿ , ಚಾಕುಗಳನ್ನು ಚಕ್ರದ ಮೂಲಕ ಹರಿತ ಮಾಡುವವರನ್ನು ನೀವು ನೋಡಿರಬಹುದು .

ಅವರು ಬಳಸುವ ಚಕ್ರವು ಸಿಲಿಕಾನ್ ಕಾರ್ಬೈಡ್‌ದಿಂದ ಮಾಡಿದ್ದು , ಗ್ರಾನೈಟ್ ಅನ್ನು ಪಾಲಿಶ್ ಮಾಡಬೇಕಾದರೂ ಸಿಲಿಕಾನ್ ಕಾರ್ಬೈಡ್‌ಅನ್ನು ಬಳಸುತ್ತಾರೆ .

ಸಾಧ್ಯವಾದರೆ ಸಿಲಿಕಾನ್ ಕಾರ್ಬೈಡ್‌ನ ಚೂರೊಂದನ್ನು ಸಂಗ್ರಹಿಸಿ , ಅದನ್ನು ಸೀಸದ ಕಡ್ಡಿಯನ್ನು ಚೂಪು ಮಾಡಲು ಬಳಸಿ ,

ಮರಳಿನ ಕಣಗಳನ್ನು ಕಾಗದಕ್ಕೆ ಅಂಟಿಸಿ ತಯಾರಿಸಿದ್ದನ್ನು ಮರಳು ಕಾಗದ ಅಥವಾ ಉಜ್ಜು ಕಾಗದ ( Emery Paper ) ಎನ್ನುವರು .

ಉಷ್ಣಧಾರಣೆ ಹಾಗೂ ಅದಹ್ಯತೆಯಿಂದಾಗಿಯೇ ಮರಳನ್ನು ಮರಳು ತಪ್ತಕ ( Sand bath ) ವಾಗಿ ಪ್ರಯೋಗಶಾಲೆಯಲ್ಲಿ ಮತ್ತು ಹುರಿಯುವಲ್ಲಿ ಬಳಕೆ ಮಾಡುತ್ತಾರೆ .

 

ಜೈವಿಕ ಪ್ರಾಮುಖ್ಯ ಹಾಗೂ ಹಾನಿ

ಡಯಾಟಮ್‌ಗಳು , ರೆಡಿಯೊಲೆರಿಯಾ ವರ್ಗಕ್ಕೆ ಸೇರಿದ ಏಕಕೋಶೀಯ ಜೀವಿಗಳು ಮತ್ತು ಸಿಲಿಕಾಯುಕ್ತ ಸ್ಪಾಂಜು ಪ್ರಾಣಿಗಳು ತಮ್ಮ ಹೊರಕವಚ ರೂಪಿಸಿಕೊಳ್ಳಲು ಜೀವಿ ಮೂಲದ ಸಿಲಿಕಾವನ್ನು ಬಳಸಿಕೊಳ್ಳುತ್ತವೆ ಭತ್ತ ಮುಂತಾದ ಕೆಲವು ಸಸ್ಯಗಳ ಬೆಳವಣಿಗೆಗೆ ಸಿಲಿಕಾನ್ ಅವಶ್ಯಕ .

ಕಲ್ನಾರು ( asbestos ) , ಗಾಜು , ಸಿಮೆಂಟ್ ಮುಂತಾದ ಕಾರ್ಖಾನೆಗಳಲ್ಲಿ , ಗಣಿಯಲ್ಲಿ ಕೆಲಸ ಮಾಡುವವರು ಹಾಗೂ ಕಲ್ಲು ಒಡೆಯುವವರು ಕೆಲವೊಮ್ಮೆ ಸಿಲಿಕೋಸಿಸ್ ಎಂಬ ವೃತ್ತಿ ಸಂಬಂಧಿ ಕಾಯಿಲೆಯಿಂದ ಬಳಲುವರು . ಸಿಲಿಕಾದ ಕಣಗಳು ಶ್ವಾಸಕೋಶಗಳಲ್ಲಿ ನುಸುಳುವುದರಿಂದ ಹೀಗಾಗುತ್ತದೆ .

ದೀರ್ಘಕಾಲದವರೆಗೆ ಮಾಲಿನ್ಯಯುತ ಕೈಗಾರಿಕಾ ವಾತಾವರಣದಲ್ಲಿ ಉಸಿರಾಡುವುದರಿಂದ ಗಾಳಿಯಲ್ಲಿ ತೇಲಾಡುವ ಸಿಲಿಕಾದ ಕಣಗಳು ಶ್ವಾಸಕೋಶಗಳನ್ನು ಪ್ರವೇಶಿಸುತ್ತವೆ . ಅದಕ್ಕೆಂತಲೇ ಕೆಲಸಗಾರರಿಗೆ ಅವರ ಉತ್ತಮ ಆರೋಗ್ಯಕ್ಕಾಗಿ ಅನಿಲ ಮುಖವಾಡ ರಕ್ಷಕಗಳನ್ನು ಪೂರೈಸಲೇಬೇಕು .


0 Comments

Leave a Reply

Avatar placeholder

Your email address will not be published. Required fields are marked *