ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು

( Cultural and Educational Rights )

right to education act , fundamental rights , cultural and educational rights , right to education , rte act , right against exploitation

right to education act , fundamental rights , cultural and educational rights , right to education , rte act , right against exploitation

ಸಂವಿಧಾನದ 29 ಹಾಗೂ 30 ನೇ ವಿಧಿಗಳು ಸಾಂಸ್ಕೃತಿಕ , ಧಾರ್ಮಿಕ ಹಾಗೂ ಭಾಷಾ ಅಲ್ಪ ಸಂಖ್ಯಾತರ ಹಿತರಕ್ಷಿಸುತ್ತವೆ .

ಅಲ್ಪಸಂಖ್ಯಾತರ ಸಾಂಸ್ಕೃತಿಕ ಹಿತಾಸಕ್ತಿ ರಕ್ಷಣೆ

ವಿಧಿ 29. ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ

ಈ ವಿಧಿಯು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರೀಕನು ತನ್ನದೇ ಆದ ಧರ್ಮ , ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸಿಕೊಳ್ಳಲು ಹಾಗೂ ಆಚರಿಸಲು ಅವಕಾಶ ಕಲ್ಪಿಸಿದೆ . ಹಾಗೂ ಈ ವಿಧಿ ಅನ್ವಯ ಯಾವುದೇ ಶಾಲೆಯಲ್ಲಿ ಜಾತಿ ಜನಾಂಗ ಸಂಸ್ಕೃತಿ ಭಾಷೆಯ ಮೇಲೆ ಪ್ರವೇಶವನ್ನು ನಿರಾಕರಿಸದಂತೆ ತಡೆ ಯುತ್ತದೆ , 29 ನೇ ವಿಧಿಯು ಭಾಷಾ ಅಲ್ಪಾಸಂಖ್ಯಾತರ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹಿತರಕ್ಷಣೆಯನ್ನು ಕಾಯ್ದುಕೊಂಡಿದೆ .

29 ( 1 ) ನೇ ವಿಧಿ ಪ್ರಕಾರ ದೇಶದ ಯಾವುದೇ ಭಾಗದಲ್ಲಿ ನೆಲೆಸಿರುವ ಯಾವುದೇ ಪ್ರಜೆಗಳು ಭಾಷೆ , ಲಿಪಿ , ಅಥವಾ ಸಂಸ್ಕೃತಿಯನ್ನು ಹೊಂದಿದ್ದರೆ ಅವುಗಳನ್ನು ರಕ್ಷಿಸುವ ಹಕ್ಕನ್ನು ಪಡೆದಿದ್ದಾರೆ .

29 ( 2 ) ನೇ ವಿಧಿ ಪ್ರಕಾರ ರಾಜ್ಯದಿಂದ ನಡೆಸಲ್ಪಡುವ ಅಥವಾ ರಾಜ್ಯದಿಂದ ಧನ ಸಹಾಯ ಪಡೆಯುತ್ತಿರುವ ಯಾವುದೇ ವಿದ್ಯಾಸಂಸ್ಥೆ , ಧರ್ಮ , ಕುಲ , ಜಾತಿ , ಭಾಷೆ ಅಥವಾ ಅವುಗಳ ಯಾವುದೇ ಆಧಾರದ ಮೇಲೆ ಯಾವ ಪೌರನಿಗೂ ಪ್ರವೇಶವನ್ನು ನಿರಾಕರಿಸುವಂತಿಲ್ಲ .

ಪ್ರತಿಯೊಂದು ಧರ್ಮದವರು ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ . ಇಲ್ಲಸಂಖ್ಯಾತರ ಶೈಕ್ಷಣಿಕ ಹಿತಾಸಕ್ತಿ ರಕ್ಷಣೆ

ವಿಧಿ .30 . ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ ಮತ್ತು ಅವುಗಳ ಆಡಳತ ನಡೆಸುವುದಕ್ಕೆ ಅಲ್ಪಸಂಖ್ಯಾತರ ಹಕ್ಕು  ಈ ವಿಧಿ ಅನ್ವಯ ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸಾಹಿಸಲು ಅವಕಾಶ ಕಲಿಸಿತು . ಈ ಇವರು ಅಲ್ಪಸಂಖ್ಯಾತರು ಬಹುಸಂಖ್ಯಾತರ ನಡುವೆ ಸಮಾನತೆಯನ್ನು ತರುವಲ್ಲಿ ಸಹಕಾರಿಯಾಗಿದೆ .

ಅಲ್ಲದೆ ಅಲ್ಪಸಂಖ್ಯಾತರು ನಡೆಸುವ ಸಂಸ್ಥೆಗಳಿಗೆ ಅನುದಾನದಲ್ಲಿ ತಾರತಮ್ಯ ಮಾಡದಂತೆ ಸಂವಿಧಾನವು ನಿರ್ದೇಶಿಸಿದೆ . ಮೂಲಕ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಕಾಪಾಡಲು ಪ್ರಯತ್ನ ಸಾಗಿದೆ .

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೂಡ ಅಲ್ಪಸಂಖ್ಯಾತರ ಕಾಪಾಡಲು ಆಯೋಗಗಳನ್ನು ಹಿತಾಸಕ್ತಿಯನ್ನು ನೇಮಿಸಿದರು .

ಕರ್ನಾಟಕ ಸರ್ಕಾರವು 1983 ರಲ್ಲಿ ಅಲ್ಪಸಂಖ್ಯಾತರ ಸಮಸ್ಯೆಯನ್ನು ಅಧ್ಯಯನ ಮಾಡಲು ಮೊದಲ ಆಯೋಗವನ್ನು ಆರ್.ಎಚ್ . ಗೋಡ್ ವಾಲಾರವರ ಅಧ್ಯಕ್ಷತೆಯಲ್ಲಿ ನೇಮಕ ಮಾಡಿತು .

ಅದೇ ರೀತಿ ಭಾರತ ಸರ್ಕಾರವು ಕೂಡ 1993 ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವನ್ನು ನೇಮಕ ಮಾಡಿತು .

ಇತ್ತೀಚೆಗೆ ಅಲ್ಪಸಂಖ್ಯಾತರಾದ ಮುಸ್ಲಿಂ ಜನಾಂಗದ ಸಾಮಾಜಿಕ , ಆರ್ಥಿಕ & ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ಸಾಚರ್ ಸಮಿತಿ , ರಂಗನಾಥ್ ಮಿಶ್ರಾ ಸಮಿತಿಯನ್ನು ನೇಮಿಸಿತ್ತು .

ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಗಿದೆ .

ವಿಧಿ .31 . ( ಸ್ವತ್ತಿನ ಕಡ್ಡಾಯ ಆರ್ಜನೆ ) ಸಂವಿಧಾನದ ( 44 ತಿದ್ದುಪಡಿ ) ಅಧಿನಿಯಮದ 6 ನೆಯ ಪ್ರಕರಣದ ಮೂಲಕ 20-6 1979 ರಿಂದ ಜಾರಿಗೆ ಬರುವಂತೆ ನಿರಸನ ಗೊಳಿಸಲಾಗಿದೆ .

ಮೂಲ ಸಂವಿಧಾನದಲ್ಲಿ 31 ನೇ ವಿಧಿಯ ಅನ್ವಯ ಆಸ್ತಿ ಹಕ್ಕನ್ನು ಪ್ರತಿಯೊಬ್ಬ ಒದಗಿಸಲಾಯಿತ್ತು . ಆದರೆ 1978 ರ 44 ನೇ ತಿದ್ದುಪಡಿಯಲ್ಲಿ ಸಂವಿಧಾನವು ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನ ಪಟ್ಟಿಯಿಂದ ತೆಗೆದು 300 ಎ ವಿಧಿ ಅನ್ವಯ ಕಾನೂನಿನ ಹಕ್ಕನ್ನಾಗಿ ಮಾಡಲಾಯಿತು .

ಈ ಮೂಲಕ ಮೂಲ ಸಂವಿಧಾನದಲ್ಲಿದ್ದ 7 ಮೂಲಭೂತ ಹಕ್ಕುಗಳು 6 ಮೂಲಭೂತ ಹಕ್ಕುಗಳಾದವು , ನಂತರ 2002 ರಲ್ಲಿ 86 ನೇ ತಿದ್ದುಪಡಿಯಲ್ಲಿ 21 ಎ ಕಲಂ ನಲ್ಲಿ ಶಿಕ್ಷಣದ ಹಕ್ಕನ್ನು ಸೇರಿಸಲಾಯಿತು .

21 ಎ ವಿಧಿಯು ಉಪವಿಧಿ ಸಮಾನತೆಯ ಹಕ್ಕನ್ನು ಸೂಚಿಸುವುದರಿಂದ ಮೂಲಭೂತ ಹಕ್ಕುಗಳ ಸಂಖ್ಯೆ 6 ಎಂದೇ ಪರಿಗಣಿಸಲಾಗಿದೆ .

44 ನೇ ಸಂವಿಧಾನಾತ್ಮಕ ತಿದ್ದುಪಡಿ 1978 :

ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾದ ಮೊರಾರ್ಜಿ ದೇಸಾಯಿ ಅವರ ಸರ್ಕಾರವು , ಸಂವಿಧಾನದ 3 ನೇ ಭಾಗದ 31 ನೇ ವಿಧಿಯಲ್ಲಿದ್ದ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದುಹಾಕಿ.

ಸಂವಿಧಾನದ 12 ನೇ ಭಾಗದ 300 ಎ ವಿಧಿಯಲ್ಲಿ ಕಾನೂನಿನ ಹಕ್ಕನ್ನಾಗಿ ಮಾಡಲಾಯಿತು . ಈ ಮೂಲಕ ಆಸ್ತಿಗಳನ್ನು ಸರ್ಕಾರದ ರೈಲ್ವೆ ಕಾಮಗಾರಿಗಳು , ಕೈಗಾರಿಕೆಗಳಿಗೆ , ಸಾರ್ವಜನಿಕ ಉದ್ದೇಶಗಳಿಗೆ ಬಳಕೆ ಮಾಡಲು ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲು ಸಹಕಾರಿಯಾಯಿತ


0 Comments

Leave a Reply

Avatar placeholder

Your email address will not be published. Required fields are marked *