ಸಮಾಸಗಳು
ಸಮಾಸಗಳು,samasagalu in kannada,samasagalu kannada grammar,samasagalu in kannada ,samasagalu kannada vyakarana,ಸಮಾಸಗಳು
ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ ನಡುವಿನ ವಿಭಕ್ತಿ ಪ್ರತ್ಯಯವನ್ನು ಲೋಪಮಾಡಿ , ಒಂದು ಪದವಾಗಲು ಸಮಾಸ ಎನಿಸುತ್ತದೆ . ಸಮಾಸ ಪದವೆಂಬುದರ ಅರ್ಥ ಸಮಸ್ತ ಪದ ಎಂದು , ಎರಡು ಪದಗಳು ಅರ್ಥಕ್ಕನುಸಾರವಾಗಿ ಸೇರಿ ಇಲ್ಲಿ ವಿಶೇಷ ಅರ್ಥವನ್ನು ಸೂಚಿಸುತ್ತವೆ . ಸಮಸ್ತ ಪದವನ್ನು ಅರ್ಥಕ್ಕನುಸಾರವಾಗಿ ಬಿಡಿಸಿದರೆ ಅದನ್ನು ವಿಗ್ರಹ ವಾಕ್ಯವೆಂದು ಕರೆಯುತ್ತಾರೆ . ಪದಗಳು ಸೇರುವಾಗ ಅವುಗಳ ನಡುವಿನ ಪ್ರತ್ಯಯಗಳಾಗಲೀ ವಿವರಣೆಯ ಮಾತುಗಳಾಗಲಿ ಬಿಟ್ಟು ಹೋಗುತ್ತವೆ . ಸಮಾಸ ಪದದ ಮೊದಲ ಪದವು ‘ ಪೂರ್ವಪದ’ವೆಂದು , ನ ೦ ತರದ ಪದವು ‘ ಉತ್ತರಪದ’ವೆ ೦ ದೂ ಕರೆಯಲಾಗುತ್ತದೆ . ಆರಮನೆ ವಿಗ್ರಹವಾಕ್ಯ = ಅರಸನ + ಮನೆ ಸಮಾಸ ಪದ = ಪೂರ್ವಪದ + ಉತ್ತರಪದ
ಕನ್ನಡದಲ್ಲಿ ಎಂಟು ವಿಧದ ಸವಾಸಗಳನ್ನು ಗುರುತಿಸಬಹುದು . ಅವು
1.ತತ್ಪುರುಷ ಸಮಾಸ
ಎರಡು ನಾಮಪದಗಳು ಸೇರಿ ಸಮಾಸವಾಗುವಾಗ , ಉತ್ತರಪದದ ಅರ್ಥವು ಪ್ರಧಾನವಾದರೆ ಅದನ್ನು ತತ್ಪುರುಷ ಸಮಾಸವೆನ್ನುತ್ತೇವೆ .
ಉದಾ : – ಸಂಜೆಗೆಂಪು = ಸಂಜೆಯ + ಕೆಂಪು
ತಲೆನೋವು = ತಲೆಯಲ್ಲಿ + ನೋವು
ಮರಗಾಲು = ಮರದ + ಕಾಲು
ಕಲ್ಲು ಹಾಸಿಗೆ = ಕಲ್ಲಿನ + ಹಾಸಿಗೆ
ಬೆಟ್ಟದಾವರೆ= ಬೆಟ್ಟದ + ತಾವರೆ
ಕಣ್ಣುರುಡ = ಕಣ್ಣಿನಿಂದ + ಕುರುಡ
ತೇರುಮರ = ತೇರಿಗೆ + ಮರ
ಹಗಲುಗನಸು = ಹಗಲಿನಲ್ಲಿ + ಕನಸು
2.ಕರ್ಮಧಾರೆಯ ಸಮಾಸ
ಪೂರ್ವೋತ್ತರ ಪದಗಳು ಲಿಂಗ , ವಚನ , ವಿಭಕ್ತಿಗಳಿಂದ ಸಮಾನವಾಗಿದದ್ದು , ವಿಶೇಷಣ ವಿಶೇಷ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸವೆನ್ನುತ್ತೇವೆ . ಇಲ್ಲಿ ಉತ್ತರ ಪದದ ಅರ್ಥವು ಪ್ರಧಾನವಾಗಿರುತ್ತದೆ .
ಉದಾ : – ಕೆಂಪಾದ + ತಾವರೆ = ಕೆಂದಾವರೆ
ಕರಿದು + ಮೋಡ =ಕಾರ್ಮೋಡ
ಕೆಚ್ಚನೆ + ಪವಳ = ಕೆಂಬವಳ
ಮುಖವು + ಕಮಲದಂತೆ = ಕಮಲಮುಖ
ನಳನೆಯ + ರಾಜ = ನಳರಾಜ
ಇಪಾದ + ಸ್ವರ = ಇಂಚರ
3.ಕ್ರಿಯಾ ಸಮಾಸ
ಪೂರ್ವಪದದಲ್ಲಿ ದ್ವಿತೀಯಾ ವಿಭಕ್ತಿಯ ನಾಮಪದ ವಿದ್ದು , ಉತ್ತರಪದದಲ್ಲಿ ಕ್ರಿಯಾಪದ ಅಥವಾ ಕೃದಂತವಿದ್ದು ಸಮಾಸವಾದರೆ ಅದನ್ನು ಕ್ರಿಯಾಸಮಾಸವೆನ್ನುತ್ತೇವೆ .
ಉದಾ : – ತಲೆಯನ್ನು + ಮುಟ್ಟು = ತಲೆಮುಟ್ಟು
ನೀರನ್ನು + ಎಣಿಸು = ನೀರುಣಿಸು
ಕೈಯನ್ನು + ಹಿಡಿ = ಕೈಹಿಡಿ
ಕಣ್ಣನ್ನು + ಮುಚ್ಚಿ = ಕಣ್ಮುಚ್ಚಿ
ನೀರಿನಲ್ಲಿ + ಮಿಂದು = ನೀರ್ಮಿಂದು
ನೀರಿನಿಂದ + ಕುಡಿ = ನೀರ್ಗೂಡಿಸಿಡಿ
ತಲೆಯನ್ನು + ತಗ್ಗಿಸು = ತಲೆ ತಗ್ಗಿಸು
4.ದ್ವಂದ್ವ ಸಮಾಸ
ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ತೋರಿ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗುಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎನ್ನುತ್ತಾರೆ . ಇಲ್ಲಿ ಸಮಾಸವಾಗುವಲ್ಲಿ ಆ ಎಲ್ಲಾ ಪದಗಳು ಮುಖ್ಯವಾಗಿದ್ದರೆ ಅದು ದ್ವಂದ್ವ ಸಮಾಸವಾಗುತ್ತದೆ .
ಉದಾ : – ಗುಡುಗು + ಮಿಂಚು + ಸಿಡಿಲು = ಗುಡುಗು ಮಿಂಚು , ಸಿಡಿಲುಗಳು
ಧನವೂ + – ಧಾನ್ಯವೂ = ಧನಧಾನ್ಯಗಳು
ಕೃಷ್ಣನೂ + ಅರ್ಜುನನೂ = ಕೃಷ್ಣಾರ್ಜುನರೂ
ಗಿಡವೂ + ಮರವೂ + ಬಳ್ಳಿಯೂ = ಗಿಡಮರಬಳ್ಳಿಯೂ
ಕೆರೆಯೂ + ಕಟ್ಟೆಯೂ + ಬಾವಿಯ = ಕೆರೆಕಟ್ಟೆಬಾವಿಗಳು
ಆನೆಯೂ + ಕುದುರೆಯೂ + ಒ ೦ ಟೆಯೂ = ಆನೆ ಕುದುರೆ ಒಂಟೆಗಳು
ಆಟ + ಓಟ = ಆಟೋಟ
5.ದ್ವಿಗು ಸಮಾಸ
ಪೂರ್ವಪದವು ಸಂಖ್ಯಾವಾಚಕವಾಗಿದ್ದು ಉತ್ತರ ಪದದಲ್ಲಿ ರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ “ ದ್ವಿಗುಸಮಾಸ
ಉದಾ : ಪಂಚ + ಇಂದ್ರಿಯ = ಪಂಚೇಂದ್ರೀಯ
ದಶ + ಮುಖ = ದಶಮುಖ
ಸಪ್ತವಾದ + ಸಾಗರ = ಸಪ್ತಸಾಗರ
ಎರಡು + ಮಡಿ = ಇಮ್ಮಡಿ
ಮೂರು + ಮಡಿ = ಮುಮ್ಮಡಿ
6.ಬಹುವೀಹಿ ಸಮಾಸ
ಎರಡು ಅಥವಾ ಹೆಚ್ಚು ಪದಗಳು ಸೇರಿ ಸಮಾಸವಾಗುವಾಗ , ಆ ಪದಗಳ ಅರ್ಥ ಮುಖ್ಯವಾಗದೆ , ಬೇರೊಂದು ಪದದ ಅರ್ಥ ಪ್ರಧಾನವಾಗಿ ಬರುವುದಕ್ಕೆ ಬಹುವೀಹಿ ಸಮಾಸ ಎಂದು ಹೆಸರು .
ಉದಾ : ಹಣೆಯಲ್ಲಿ + ಕಣ್ಣುಳ್ಳವ = ಹಣೆಗಣ್ಣ
ಮೂರು + ಕಣ್ಣುಳ್ಳವ = ಮುಕ್ಕಣ್ಣ
ಕೆಂಪು + ಕಣ್ಣುಳ್ಳವ =ಕೆಂಗಣ್ಣ ( ಶಿವ )
7.ಗಮಕ ಸಮಾನ
ಪೂರ್ವ ಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸವನ್ನು ಗಮಕ ಸಮಾಸ ಎಂದು ಹೆಸರು ಉದಾ : ಅವನು + ಹುಡುಗ = ಆ ಹುಡುಗ
ಇದು + ನಾಯಿ = ಈ ನಾಯಿ
ಉಡುವುದು + ದಾರ = ಉಡುದಾರ
ಇದು + ಶಾಲೆ = ಈ ಶಾಲೆ
ಕಡೆಯುವುದು . + ಕೋಲು = ಕಡಗೋಲು
ಅರಳುವುದು + ಮೊಗ್ಗು = ಅರಳುಮೊಗ್ಗು
8.ಅಂಶಿ ಸಮಾರ
ಪೂರ್ವಪದವು ಅಂಶವಾಚಕವಾಗಿಯೂ , ಉತ್ತರ ಪದವು ಅಂಶಿವಾಚಕವಾಗಿದ್ದು , ಪೂರ್ವ ಪದದ ಅರ್ಥವು ಪ್ರಧಾನವಾಗಿರುವ ಸಮಾಸಕ್ಕೆ ಅಂತಿ ಸಮಾಸ ಎನ್ನುವರು . ಇಲ್ಲಿ ಸಮಸ್ತ ಪದದಲ್ಲಿ ಪೂರ್ವೋತ್ತರ ಪದಗಳು ಹಿಂದು ಮುಂದಾಗುತ್ತವೆ .
ಉದಾ : ಕಾಲಿನ + ಅಡಿ = ಅಂಗಾಲು
ನಾಲಗೆಯ + ತುದಿ= ತುದಿನಾಲಗೆ
ಗೋಡೆಯ + ನಡುವೆ = ನಡುಗೋಡೆ
ಕೈಯ + ಅಡಿ = ಅಂಗೈ
ಕಾಲ + ಮೇಲು = ಮೇಂಗಾಲು
ಕೈಯ + ಮುಂದು = ಮುಂಗೈ
ಕಣ್ಣು + ಕಡೆ = ಕಡೆಗಣ್ಣು
ಹುಬ್ಬಿನ + ಕುಡಿ = ಕುಡಿಹುಬ್ಬು
ಮೂಗಿನ + ತುದಿ = ತುದಿಮೂಗು
ಮೈಯ + ಒಳಗು = ಒಳಮೈ
ಅರಿ ಸಮಾಸ
ಕನ್ನಡ ಮತ್ತು ಸಂಸ್ಕೃತ ಶಬ್ದಗಳನ್ನು ಸೇರಿಸಿ ಸಮಾಸ ಮಾಡುವುದು ವ್ಯಾಕರಣ ನಿಯಮಕ್ಕೆ ವಿರುದ್ಧವಾದುದ್ದು , ಆ ರೀತಿ ಸಮಾಸ ಮಾಡಿದಾಗ ಅದನ್ನು ಅರಿ ಸಮಾಸ ಎನ್ನಲಾಗುವುದು . ಈ ಸಮಾಸದದಲ್ಲಿ ಕನ್ನಡದ ಪದ ಮತ್ತು ಸಂಸ್ಕೃತದ ಪದ ಸೇರಿ ಅರಿ ಸಮಾಸವಾಗುತ್ತದೆ . ಉದಾ : – ಭೂತಾಯಿ , ಮಲ್ಲಿಗೆ ಪುಷ್ಟ , ಶಿರೋನೋವು
,
0 Comments