ಸಚಿವ ಸಂಪುಟ । sachiva samputa । Cabinet

ಸಚಿವ ಸಂಪುಟ Cabinet

cabinet, sachiva samputa, kitchen cabinets,bathroom cabinets, ಸಚಿವ ಸಂಪುಟ, glass display cabinet, glass cabinet, media console

cabinet, sachiva samputa, kitchen cabinets,bathroom cabinets, ಸಚಿವ ಸಂಪುಟ, glass display cabinet, glass cabinet, media console

ಕೇಂದ್ರ ಸರ್ಕಾರದ ಪ್ರತಿಯೊಂದು ನಿರ್ಧಾರ , ನಿರ್ವಹಣೆ , ಎಲ್ಲವೂ ಸಚಿವ ಸಂಪುಟವನ್ನು ಅವಲಂಬಿಸಿದೆ , ಇಂತಹ ಸಚಿವ ಸಂಪುಟದ ಮುಖ್ಯಸ್ಥರು ಪ್ರಧಾನ ಮಂತ್ರಿಗಳಾಗಿರುತ್ತಾರೆ .

ಸಚಿವ ಸಂಪುಟದ ಸಚಿವರು ಸೌರವ್ಯೂಹದ ಗ್ರಹಗಳಂತಿದ್ದರೆ , ಪ್ರಧಾನಮಂತ್ರಿಯು ಸೂರ್ಯನನ್ನು ಹೋಲುತ್ತಾರೆ , ಸರ್ಕಾರದ ವ್ಯವಸ್ಥೆಯಲ್ಲಿ ಪ್ರಧಾನ ಮಂತ್ರಿಗಳ ಮೇಟಿ ಇದ್ದಂತೆ .

ಇಂತಹ ಪ್ರಧಾನಿ ಹುದ್ದೆಯನ್ನು “ ಪ್ರಧಾನಿ ಚುನಾಯಿತ ರಾಜ ” ಎಂಬುದಾಗಿ ಬಣ್ಣಿಸಿದ್ದಾರೆ . ಪ್ರಧಾನಮಂತ್ರಿಗಳು ಕೇಂದ್ರ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ . ಇವರು ಲೋಕಸಭೆಗೆ ಜವಾಬ್ದಾರಿಯುತರಾಗಿರುತ್ತಾರೆ .

 

ಕೇಂದ್ರದ ಕಾರ್ಯಾಂಗದ ಅಧಿಕಾರಗಳು :

ವಿಧಿ 73 , ಒಕ್ಕೂಟದ ಕಾರ್ಯಾಂಗದ ಅಧಿಕಾರದ ವ್ಯಾಪ್ತಿ

ಸಂಸತ್ತು ಕಾನೂನು ಮಾಡುವ ಅಧಿಕಾರವನ್ನು ಹೊಂದಿರುವ ವಿಷಯಗಳಿಗೆ ಮತ್ತು ಯಾವುದೇ ಒಪ್ಪಂದದ ಅಥವಾ ಜಾರಿಗೊಳಿಸುವುದಕ್ಕಾಗಿ ಭಾರತ ಚಲಾಯಿಸಬಹುದಾದ ಅಧಿಕಾರ ಒಡಂಬಡಿಕೆಯನ್ನು ಸರ್ಕಾರವು ಪ್ರಾಧಿಕಾರದ ಚಲಾವಣೆಗೆ ಹಕ್ಕುಗಳ

, ವ್ಯಾಪ್ತಿಯ ಅಧಿಕಾರ ವ್ಯಾಪ್ತಿಯನ್ನು ಮತ್ತು ಕೇಂದ್ರ ಕಾರ್ಯಾಂಗದ ವಿಸ್ತರಿಸಬಹುದು . ಎಂದು ಸಂವಿಧಾನದ 73 ನೇ ವಿಧಿ ತಿಳಿಸುತ್ತದೆ .

ಷರತ್ತು ಯಾವುದೇ ರಾಜ್ಯದ ವಿಧಾನ ಮಂಡಲವು ಕೂಡ ಕಾನೂನು ಮಾಡಲು ಅಧಿಕಾರ ಹೊಂದಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಯಾವುದೇ ಕಾರ್ಯಾಂಗ ಅಧಿಕಾರವನ್ನು ವಿಸ್ತರಿಸುವಂತಿಲ್ಲ .

ಕೇಂದ್ರ ಮಂತ್ರಿಮಂಡಲ

ವಿಧಿ 74. ರಾಷ್ಟ್ರಪತಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿ ಮಂಡಲ

ರಾಷ್ಟ್ರಪತಿಗೆ ನೆರವು ಮತ್ತು ಸಲಹೆ ನೀಡಲು ಪ್ರಧಾನ ಮಂತ್ರಿ ನೇತೃತ್ವದ ಒಂದು ಮಂತ್ರಿಮಂಡಲವಿರಬೇಕೆಂದು ರಾಷ್ಟ್ರಪತಿಗಳು ತಮ್ಮ ಕಾರ್ಯವನ್ನು ಮಂತ್ರಿಮಂಡಲದ ಸಲಹೆಗನುಸಾರವಾಗಿ ಕಾರ್ಯ ನಿರ್ವಹಿಸಬೇಕೆಂದು ಸಂವಿಧಾನದ 74 ( 1 ) ನೇ ವಿಧಿ ತಿಳಿಸುತ್ತದೆ .

ಯಾವುದೇ – ಮಂತ್ರಿಗಳು ರಾಷ್ಟ್ರಪತಿಗೆ ನೀಡಿದಂತಹ ಸಲಹೆಗಳನ್ನು ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡುವಂತಿಲ್ಲ ಎಂದು ಸಂವಿಧಾನದ 74 ( 2 ) ನೇ ವಿಧಿ ತಿಳಿಸುತ್ತದೆ .

ಪ್ರಧಾನಿ ಸಚಿವ ಸಂಪುಟ ಹಾಗೂ ರಾಷ್ಟ್ರಪತಿ ನಡುವೆ ಕೊಂಡಿ ಇದ್ದಂತೆ , ಸಂವಿಧಾನದ ವಿಧಿ 74 ರಂತೆ ರಾಷ್ಟ್ರಪತಿಗಳ ಬಹುತೇಕ ಕಾರ್ಯಗಳು ಕೂಡ ಪ್ರಧಾನ ಮಂತ್ರಿ ಸಲಹೆ ಮೇರೆಗೆ ನಡೆಯುತ್ತವೆ .

ಭಾರತ ಸರ್ಕಾರದ ಪ್ರಮುಖ ಹುದ್ದೆಗಳಾದ ಭಾರತದ ಆಟಾರ್ನಿ ಜನರಲ್ , ಭಾರತದ ಕಂಸ್ಟೋಲರ್ ಹಾಗೂ ಆಡಿಟರ್ ಜನರಲ್ ,

ಚುನಾವಣಾ ಆಯೋಗದ ಅಧ್ಯಕ್ಷರ ಸದಸ್ಯರನ್ನು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಸದಸ್ಯರು ನೇಮಕ ಮಾಡಲು , ಹಣಕಾಸು ಆಯೋಗ , ಇತ್ಯಾದಿ

ನೇಮಕ ಮಾಡಲು ಪ್ರಧಾನಮಂತ್ರಿ ನೇತೃತ್ವದ ಮಂತ್ರಿಮಂಡಲ ಸಲಹೆ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುತ್ತಾರೆ .

ಮಂತ್ರಿಮಂಡಲಕ್ಕೆ ರಾಷ್ಟ್ರಪತಿಗಳು ಪ್ರಮಾಣವಚನ ಬೋಧಿಸುತ್ತಾರೆ .

 ಸಚಿವ ಸಂಪುಟದ ಗಾತ್ರ : –

ಭಾರತದ ಸಂವಿಧಾನದ 91 ನೇ ತಿದ್ದುಪಡಿ -2003 ನ್ನು ತಂದು ಸಚಿವ ಸಂಪುಟದ ಗಾತ್ರವನ್ನು ಶೇ 15 ರಷ್ಟಕ್ಕೆ ನಿಗದಿ ಪಡಿಸಲಾಯಿತು .

ಈ ತಿದ್ದುಪಡಿ ಅನ್ವಯ ಪ್ರಧಾನ ಮಂತ್ರಿಗಳು ಸೇರಿ ಸಚಿವ ಸಂಪುಟದ ಸಚಿವರ ಸಂಖ್ಯೆಯು ಲೋಕಸಭೆಯ ಒಟ್ಟು ಸ್ಥಾನದ ಶೇ 15 ರಷ್ಟನ್ನು ಮೀರಬಾರದೆಂದು ನಿಗದಿ ಪಡಿಸಲಾಗಿದೆ .

9 ನೇ ತಿದ್ದುಪಡಿ -2003 ರಲ್ಲಿ ಮಾಡಲಾದ ಈ ತಿದ್ದುಪಡಿಯಲ್ಲಿ ಸಂಸತ್ತಿನ ಯಾವುದೇ ಸದನದ ಸದಸ್ಯರು ಯಾವುದಾದರೂ ರಾಜಕೀಯ ಪಕ್ಷದಿಂದ ಪಕ್ಷಾಂತರ ನಿಷೇಧದ ಅನ್ವಯ ಅನರ್ಹತೆ ಹೊಂದಿದ್ದರೆ ಮಂತ್ರಿ ಸ್ಥಾನದಿಂದ ಅನರ್ಹನಾಗುತ್ತಾನೆ .

ಸಚಿವರ ಅರ್ಹತೆಗಳು : –

ಸಚಿವ ಸಂಪುಟದಲ್ಲಿ ಸಚಿವರಾಗಲು ಸಂಸತ್ತಿನ ಯಾವುದಾದರೂ ಒಂದು ಸದನದ ಸದಸ್ಯರಾಗಿರಬೇಕು . ಅಥವಾ ಸಚಿವರಾಗಿ ಆಯ್ಕೆಯಾದ 6 ತಿಂಗಳೊಳಗೆ ಸಂಸತ್ತಿನ ಯಾವುದಾದರೂ ಸದನದ ಸದಸ್ಯರಾಗಿ ಆಯ್ಕೆಯಾಗಬೇಕು .

ಸಚಿವರ ಸಂಬಳ : – ಸಚಿವರುಗಳು ಸಂಸತ್ತು ಕಾಲಕಾಲಕ್ಕೆ ನಿರ್ಧರಿಸಿದ ಸಂಬಳ & ಸವಲತ್ತುಗಳನ್ನು ಪಡೆಯುತ್ತಾರೆ .

ಸಚಿವರ ಅಧಿಕಾರಾವಧಿ : ಕೇಂದ್ರ ಸಚಿವರುಗಳು ರಾಷ್ಟ್ರಪತಿಗಳ ಇಚ್ಚೆ ಇರುವವರೆಗೂ ಅಧಿಕಾರದಲ್ಲಿರುತ್ತಾರೆ .

ಸಚಿವ ಸಂಪುಟದ ಜವಾಬ್ದಾರಿ : – ಸಚಿವ ಸಂಪುಟದ ಲೋಕಸಭೆಗೆ ಸಚಿವರು ಸಾಮೂಹಿಕವಾಗಿ ಜವಾಬ್ದಾರರಾಗಿರುತ್ತಾರೆ .

ಸಂಸತ್ತಿನ ಯಾವುದೇ ಸದಸ್ಯರು ಮಂತ್ರಿಗಳಾಗಬಹುದು . ಸಂಸತ್ತಿನ ಎರಡೂ ಸದನದ ಯಾವುದೇ ಸದನದಲ್ಲಿ ಸದಸ್ಯರು ಕೂಡ ಮಂತ್ರಿಗಳಾಗಿ ನೇಮಕಗೊಳ್ಳಬಹುದು .

ಮಂತ್ರಿಗಳಾಗಿ ನೇಮಕವಾದ ಸಂದರ್ಭದಲ್ಲಿ ಯಾವುದೇ ತಿಂಗಳೊಳಗೆ ಸದನದ ಸದಸ್ಯರಾಗಿರದಿದ್ದರೆ 6 ಚುನಾವಣೆಯ ಮೂಲಕ ಅಥವಾ ನಾಮಕರಣದ ಮೂಲಕ ಆಯ್ಕೆಯಾಗಬೇಕಾಗುತ್ತದೆ .

ಇಲ್ಲದಿದ್ದರೆ ಮಂತ್ರಿ ಸ್ಥಾನವು ನಿಂತು ಹೋಗುತ್ತದೆ .

ಸಚಿವರು ಮತದಾನ ನೀಡುವ ಅಧಿಕಾರ : –

ಸಂಸತ್ತಿನ ಎರಡೂ ಸದನದ ಕಲಾಪದಲ್ಲೂ ಭಾಗವಹಿಸುವ , ಮಾತನಾಡುವ ಅಧಿಕಾರವನ್ನು ಹೊಂದಿರುತ್ತಾರೆ . ಆದರೆ ಸಂಸತ್ತಿನ ಯಾವ ಸದನದಿಂದ ಆಯ್ಕೆಯಾಗಿರುತ್ತಾ ರೋ ಆ ಸದನದಿಂದ ಮಾತ್ರ ಮತದಾನ ಮಾಡುವ ಅಧಿಕಾರ ಹೊಂದಿರುತ್ತಾರೆ .

 ಸಂವಿಧಾನದ 88ನೇ ವಿಧಿ ಪ್ರಕಾರ ಸದನಗಳಿಗೆ ಸಂಬಂಧಿಸಿದಂತೆ ಸಚಿವರ ಹಕ್ಕುಗಳು : –

ಪ್ರತಿಯೊಬ್ಬ ಸಚಿವರು ಯಾವುದೇ ಭಾಗವಹಿಸುವ ಮತ್ತು ಹೊಂದಿರುತ್ತಾರೆ . ಸದನಗಳ ಸದನದ ಕಲಾಪಗಳಲ್ಲಿ ಮಾತನಾಡುವ ಹಕ್ಕನ್ನು ಯಾವುದೇ ಜಂಟಿ ಸಭೆ & ಸಂಸತ್ತಿನ ಯಾವುದೇ ಸಮಿತಿಗಳ ಸದಸ್ಯರಾಗಿ ನೇಮಿಸಬಹುದಾಗಿದೆ . ಆದರೆ ಮತದಾನ ಮಾಡುವ ಹಕ್ಕಿರುವುದಿಲ್ಲ .

Comments

Leave a Reply

Your email address will not be published. Required fields are marked *