
ಸಂಸ್ಕೃತ ಸಂಧಿಗಳು
ಸಂಸ್ಕೃತ ಸಂಧಿಗಳು,samskrutha sandhi in kannada,kannada sandhigalu,sandhigalu in kannada,kannada grammar sandhigalu,sandhigalu,ಕನ್ನಡ ಸಂಧಿಗಳು
ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು .
ಸಂಸ್ಕೃತ ಸಂಧಿಗಳಲ್ಲಿ ಸ್ವರ , ವ್ಯಂಜನ ಸಂಧಿಗಳಿವೆ .
1 ) ಸವರ್ಣ ದೀರ್ಘಸಂಧಿ
ಸ್ತರಗಳು ( ಅ , ಆ , ಇ , ಈ , ಉ , ಊ ) ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ಒಂದು ದೀರ್ಘವಾದ ಸವರ್ಣ ಸ್ವರ ಆದೇಶವಾಗಿ ಬರುವುದು . ಇದಕ್ಕೆ ಸವರ್ಣದೀರ್ಘಸಂಧಿ ‘ ಎಂದು ಹೆಸರು .
ಉದಾ : –
1 ) ದೇವಾಸುರ = : ದೇವ + ಅಸುರ
2 ) ಸುರಾಸುರ = ಸುರ + ಅಸುರ
3 ) ಮಹಾತ್ಮ = ಮಹಾ + ಆತ್ಮ
4 ) ಗಿರೀಶ = ಗಿರಿ + ಈಶ
5 ) ಕವೀಂದ್ರ = ಕವಿ + ಇಂದ್ರ
6 ) ಗುರೂಪದೇಶ = ಗುರು + ಉಪದೇಶ
7 ) ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ
8 ) ಶುಭಾಶಯ = : ಶುಭ + ಆಶಯ
9 ) ರವೀಂದ್ರ = ರವಿ + ಇಂದ್ರ
2) ಗುಣಸಂಧಿ
ಪೂರ್ವಪದದ ಕೊನೆಯ ಸ್ವರವು ಅ , ಆ , ಕಾರಗಳ ಮುಂದೆ ಇ , ಈ ಕಾರಗಳಿದ್ದರೆ ಏ ಕಾರವೂ ಉ , ಊ ಕಾರಗಳಿದ್ದರೆ ಓ ಕಾರವೂ , ಋ ಕಾರವಿದ್ದರೆ “ ಅರ್ ‘ ಎಂಬುದು ಆ ಎರಡು ಸ್ವರಗಳ ಜಾಗದಲ್ಲಿ ಆದೇಶವಾಗಿ ಬರುತ್ತದೆ . ಈ ಸಂಧಿಗೆ ಗುಣ ಸಂಧಿ ಎಂದು ಹೆಸರು .
ಉದಾ : –
1 ) ಸುರೇಂದ್ರ = ಸುರ + ಇಂದ್ರ
2) ಧರೇಂದ್ರ = ಧರಾ + ಇಂದ್ರ
3 ) ಚಂದ್ರೋದಯ = ಚಂದ್ರ + ಉದಯ
4 ) ಏಕೋನ = ಏಕ + ಊನ
5 ) ದೇವರ್ಷಿ = ದೇವ + ಋಷಿ
6 ) ಮಹರ್ಷಿ = ಮಹಾ + ಋಷಿ
7 ) ಮಹೇಶ = ಮಹಾ + ಈಶ
8 ) ಸೂಯ್ಯೋದಯ = ಸೂರ್ಯ + ಉದಯ
9 ) ಸುರೇಶ = ಸುರ + ಈಶ
10 ) ಕಮಲೋದಯ = ಕಮಲ + ಉದಯ
3) ವೃದ್ಧಿಸಂಧಿ
ಅ , ಆ . ಕಾರಗಳ ಮುಂದೆ ಏ , ಐ , ಓ , ಔ ಕಾರಗಳು ಪರವಾದಾಗ , ಐ , ಔಕಾರವು ಆದೇಶವಾದರೆ ವೃದ್ಧಿಸಂಧಿಯಾಗುವುದು . ಅ , ಆ + ಏ , ಐ = ಐ ಅ , ಅ + ಓ , ಔ ಐ , ಔ ಕಾರಗಳಿಗೆ ವೃದ್ಧಿಯೆಂಬ ಸಂಜ್ಞೆ ಇದೆ
ಉದಾ : –
1 ) ಏಕೈಕ = ಏಕ + ಏಕ = ಅ + ಏ
2 ) ಅಷ್ಟೆಶ್ವರ = ಅಪ್ಪ + ಐಶರ . ವಶಿ
3 ) ಘನೌದಾರ = ಘನ + ಔದಾರ
4 ) ವನೌಷಧಿ = ವನ + ಔಷಧಿ
5 ) ಮಹೌನ್ನತ್ಯ = ಮಹಾ + ಔನ್ನತ್ಯ
6 ) ಮಹೌದಾರ = ಮಹಾ + ಔದಾರ
7 ) ಲೋಕೈಕವೀರ = ಲೋಕ + ಏಕವೀರ
8 ) ಜನೈಕ್ಯ = ಜನ + ಐಕ್ಯ
9 ) ವಿದ್ಯೆಶ್ವರ ವಿದ್ಯಾ + ಐಶ್ವರ
10 ) ಶಿವೈಕ್ಯ = ಶಿವ + ಐಕ್ಯ
4) ಯಣ್ಸಂಧಿ
ಇ , ಈ , ಉ , ಊ , ಋಕಾರಗಳಿಗೆ ಮುಂದೆ ಸವರ್ಣವಲ್ಲದ ಸ್ವರ ಬಂದಾಗ ಇ , ಈ , ಗಳಿಗೆ ಯಕಾರವೂ ಉ , ಊಗಳಿಗೆ ವಕಾರವೂ ಋ ಕಾರಕ್ಕೆ ರೇಫ್ ( ರ್ ) ಕಾರವೂ ಆದೇಶವಾಗುವುದಕ್ಕೆ ` ಯಣ್ಸಂಧಿ ‘ ಎಂದು ಕರೆಯುವರು .
ಉದಾ : –
1 ) ಕೋಟ್ಯಾಧೀಶ = ಕೋಟಿ + ಅಧೀಶ ಯ
2 ) ಜಾತ್ಯತೀತ= ಜಾತಿ + ಅತೀತ
3 ) ಮನ್ವಂತರ= ಮನು + ಅಂತರ
4 ) ಪ್ರತ್ಯುತ್ತರ ಪ್ರತಿ + ಉತ್ತರ
5 ) ಮನ್ವಾದಿ = ಮನು + ಆದಿ
6 ) ಗತ್ಯಂತರ = ಗತಿ + ಅಂತರ
7 ) ಅತ್ಯಂತ = ಅತಿ + ಅಂತ
8 ) ಗುರವಾಜ್ಞೆ = ಗುರು + ಆಜ್ಞೆ ( ಗುಲ್ವಾಜ್ಞೆ )
ವ್ಯಂಜನ ಸಂಧಿಗಳು
*ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮಾಕ್ಷರಗಳಿಗೆ ಯಾವ ವರ್ಣ ( ಕ , ಚ , ಟ , ತ , ಪ ) ಎದುರಾದರೂ ಅದೇ ವರ್ಗದ ಮೂರನೇ ಅಕ್ಷರ ಆದೇಶವಾಗಿ ಬಂದು ಸಂಸ್ಕೃತ ವ್ಯಂಜನ ಸಂಧಿಗಳು
1.ಜತ್ತ್ವಸಂಧಿ
ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮಾಕ್ಷರಗಳಿಗೆ ಯಾವ ವರ್ಣ ( ಕ , ಚ , ಟ , ತ , ಪ ) ಎದುರಾದರೂ ಅದೇ ವರ್ಗದ ಮೂರನೇ ಅಕ್ಷರ ( ಗ , ಜ , ಡ , ದ , ಬ ) ಆದೇಶವಾಗಿ ಬಂದು ಜನ್ಮ ಸಂಧಿಯಾಗುವುದು . ಜಶ್ = ಪ್ರತಿ ವರ್ಗದ ಮೂರನೇ ಅಕ್ಷರ ಎಂದರ್ಥ .
ಉದಾ : –
1 ) ದಿಗಂತ = ದಿಕ್ + ಅಂತ ( ಕ – ಗ ಆದೇಶ )
2 ) ಅಜಂತ = ಅಚ್ + ಅಂತ ( ಚ- ಗ ಆದೇಶ )
3 ) ವಾಗ್ದವಿ = ವಾಕ್ + ದೇವಿ
4 ) ಷಡಂಗ = ಷಟ್ + ಅಂಗ
5 ) ಸದ್ಭಾವ = ಸತ್ + ಭಾವ
6 ) ಚಿದಾನಂದ = ಚಿತ್ + ಆನಂದ
2.ಶ್ಚುತ್ವ ಸಂಧಿ
ಪೂರ್ವಪದದ ಕೊನೆಯಲ್ಲಿ , ಸಕಾರವಾಗಲಿ , ‘ ತ ‘ ವರ್ಗವಾಗಲಿ ಇದ್ದು ಉತ್ತರ ಪದದ ಮೊದಲಲ್ಲಿ ಶ ಕಾರ ‘ ಚ ‘ ವರ್ಗವೂ ಆದೇಶವಾಗಿ ಬರುತ್ತದೆ . ಇದಕ್ಕೆ ‘ ಶ್ಚುತ್ವ ಸಂಧಿ’ಎಂದು ಹೆಸರಸು
. ಉದಾ : –
1 ) ಯಶಶ್ಚಂದ್ರಿಕೆ = ಯಶಸ್ + ಚಂದ್ರಿಕೆ
2 ) ಸಚಿತ್ರ = ಸತ್ + ಚಿತ್ರ
3 ) ಜಗಜ್ಯೋತಿ = ಜಗತ್ + ಜ್ಯೋತಿ
4 ) ಮನಶ್ಯಾಂತಿ = ಮನಸ್ + ಶಾಂತಿ
3.ಷ್ಟುತ್ವ ಸಂಧಿ
ಸ’ಕಾರ ತ ವರ್ಗಗಳು ‘ ಷ ‘ ಕಾರ ಟ ವರ್ಗಗಳು ಮುಂದೆ ಬಂದರೆ ಆಯಾ ವ್ಯಂಜನದ ಅನುನಾಸಿಕವು ಆದೇಶವಾಗುವುದು .ಉದಾ : – ತಪಷಡ್ಡಾಗ = ತಪಸ್ + ಷಡ್ಡಾಗ ಉಡ್ಡಯನ = ಉತ್ + ಡಯನ
4.ಅನುನಾಸಿಕ ಸಂಧಿ
ಪೂರ್ವಪದದ ಕೊನೆಯಲ್ಲಿ ವ್ಯಂಜನದ ಅಕ್ಷರಗಳ ಮುಂದೆ ಅನುನಾಸಿಕವಿದ್ದರೆ ಆಯಾ ವ್ಯಂಜನದ ಅನುನಾಸಿಕವು ಆದೇಶವಾಗುವುದು . ಉದಾ : –
1 ) ಸನ್ಮಾನ = ಸತ್ + ಮಾನ
2 ) ಚಿನ್ಮಯ 3 ) ಉನ್ಮಾದ ಸ
4 ) ಷಣ್ಮುಖ 5 ) ವಾಜಯ = ಚಿತ್ರ + ಮಯ
5) ಮಾದ ಷಟ್ + ಮುಖ ಪಾಕ್ + ಮಯ
5.ವಿಸರ್ಗ ಸಂಧಿ
ಆ ‘ ಕಾರದ ಮುಂದಿನ ವಿಸರ್ಗಕ್ಕೆ ‘ ಆ ‘ ಕಾರವಾಗಲಿ ಮೃದು ವ್ಯಂಜನವಾಗಲಿ ಪರವಾದರೆ ವಿಸರ್ಗದ ಸ್ಥಳದಲ್ಲಿ ‘ ಉ ‘ ಕಾರಾದೇಶವಾಗುತ್ತದೆ . ಬಳಿಕ ‘ ಉ’ಕಾರವು ತನ್ನ ಹಿಂದಿನ ‘ ಆ ‘ ಕಾರದೊಡನೆ ಕೂಡಿ ಗುಣಸಂಧಿಯಂತೆ ಓ ಕಾರವಾ ಗುತ್ತದೆ . ಈ ‘ ಓ ‘ ಕಾರದ ಮುಂದೆ ‘ ಆ ‘ ಕಾರವಿದ್ದರೆ ‘ ಆ ‘ ಲೋಪವಾಗುತ್ತದೆ
. ಉದಾ : – ಮನಃ + ಅನುರಾಗ = ಮನೋನುರಾಗ ಮನಃ । ಗಮನ = ಮನೋಗಮನ