ಕನ್ನಡಛಂದಸ್ಸು

ಕನ್ನಡಛಂದಸ್ಸು,chandassu in kannada,kannada chandassu,chandassu kannada grammar examples,chandassu kannada grammar

 

ಕನ್ನಡಛಂದಸ್ಸು,chandassu in kannada,kannada chandassu,chandassu kannada grammar examples,chandassu kannada grammar

 

ಪದ್ಯ ರಚನೆಯ ನಿಯಮಗಳ ಶಾಸ್ತ್ರಕ್ಕೆ ಛಂದಸ್ಸು ಹೆಸರು , ಛದ್ ಅಥವಾ ಛಂದ್ ಎಂಬ ಧಾತುವಿನಿಂದ ಛಂದಸ್ಸು ಎಂಬ ಶಬ್ದ ನಿಷ್ಪನ್ನವಾಗಿದೆ . ಛಂದ್ ಅಥವಾ ಛದ್ ಪದದ ಅರ್ಥ ಆಚ್ಛಾದಿಸು , ಮುಚ್ಚುವುದು , ಹೊದಿಸುವುದು , ಮುಚ್ಚಿಕೊಳ್ಳುವುದು ಎಂದರ್ಥ . ಹೆಗಲ್ ಪ್ರಕಾರ ಛಂದಸ್ಸೆಂದರೆ ಕಾವ್ಯಕ್ಕೆ ಒಂದು ವಾತಾವರಣ ಒಂದು ಆಚ್ಛಾದನ ವಿದ್ದಂತೆ ಎನ್ನುತ್ತಾರೆ . ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವಾಗ ಗದ್ಯ ಹಾಗೂ ಪದ್ಯ ಎಂದು ವಿಭಾಗ ಮಾಡುತ್ತೇವೆ . ಗದ್ಯ ಹಾಗೂ ಪದ್ಯ ಎರಡಕ್ಕೂ ವ್ಯಾಕರಣವು ಆನ್ವಯಿಸಿದರೆ ಕೇವಲ ಪದ್ಯಕ್ಕೆ ಮಾತ್ರ ಛಂದಸ್ಸು ಅನ್ವಯವಾಗುತ್ತದೆ . ಸಾಹಿತ್ಯದಲ್ಲಿ ಕಾವ್ಯಕ್ಕೆ ಗದ್ಯಕ್ಕಿಂತಲೂ ಮಹತ್ವದ ಸ್ಥಾನವು ಲಭಿಸುತ್ತದೆ . ರಸ , ಧ್ವನಿ , ಆಲಂಕಾರ ಇವೆಲ್ಲಾ ಕಾವ್ಯದ ಆಂತರಿಕ ಅಂಗಗಳಾದರೆ ಛಂದಸ್ಸು ಕಾವ್ಯದ ಬಾಹ್ಯ ಅಂಗ , ಇದು ಭರತ ಖಂಡದಲ್ಲಿ ಬಹು ಪ್ರಾಚೀನ ಕಾಲದಿಂದಲೂ ಒಂದು ಅಧ್ಯಯನ ಯೋಗ್ಯವಾದ ಶಾಸ್ತ್ರವಾಗಿದೆ . ಕವಿಯು ತನ್ನ ಭಾವನೆ ಅಥವಾ ಅನುಭವಗಳನ್ನು ಪ್ರಕಟಗೊಳಿಸುವ ರೀತಿ ಛಂದಸ್ಸು , ಛಂದಸ್ಸಿನಿಂದಾಗಿ ಭಾಷೆ ಮೈದಾಳುತ್ತದೆ . ಕವಿಯ ಅನುಭವ ಅಥವಾ ಚಿಂತಕನ ಅನುಭವ ಅಥವಾ ಮಾತಾನಾಡುವವನ ಭಾವನೆ ಅಥವಾ ಆಲೋಚನೆಗಳ ಪ್ರಕಟನೆಗೆ ಸಾಧನವಾದದ್ದು ಛಂದಸ್ಸು ಆಗಿದೆ . ಹೀಗೆ ಅನೇಕ ಪ್ರಯೋಜನಗಳು ಇವೆ , ಅವುಗಳೆಂದರೆ

1 ) ಸ್ಮರಣೆಗೆ ಸುಲಭವಾದ ಮಾರ್ಗ

2 ) ವಿಸ್ತಾರವಾದ ವಿಚಾರವನ್ನು ಸಂಕ್ಷಿಪ್ತವಾಗಿಯೂ , ಪ್ರಭಾವಯುತವಾಗಿಯೂ ಛಂದಸ್ಸು ತಿಳಿಸುತ್ತದೆ . 3 ) ಉಕ್ಕಂದವಾಗಿ ಹರಿಯುವ ಭಾವವನ್ನು ನಿಯತವಾಗಿ ಚೌಕಟ್ಟಿನಲ್ಲಿ ಪರಿಣಾಮಕಾರಿಯಾಗುವಂತೆ ಅಡಕ ಮಾಡುವ ವಿಧಾನವಾಗಿದೆ .

4 ) ಭಾವಕ್ಕೆ ತಕ್ಕ ಭಾಷೆ , ಭಾಷೆಗೆ ತಕ್ಕ ಬಂಧದ ರಚನೆಗೆ ಛಂದಸ್ಸು ಉಪಯುಕ್ತವಾಗುತ್ತದೆ . ಇದರಿಂದಲೇ ಶ್ರೀವಿಜಯ ಪದ್ಯಂ ಸಮಸ್ತ ಜನ ಹೃದ್ಯಂ ಎಂದು ಹೇಳಿದ್ದಾರೆ .

5 ) ಕವಿ ಹೃದಯವು ಕಂಡುಕೊಂಡ ಅತಿ ಸೂಕ್ಷ್ಮವೂ

ಕನ್ನಡ ಛಂದಸ್ಸು ಆವೇಶ ಯುತವೂ ಆದ ಅನುಭವ ವಿಶೇಷಗಳನ್ನು ಸಹೃದಯರಿಗೆ ಹೃದಯಸಂವಾದವೂಂಟಾಗುವಂತೆ ಮಾಡುತ್ತದೆ

ಮಾತ್ರೆ

  • ಮಾತ್ರೆ ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚಾರ ಮಾಡಲು ತೆಗೆದುಕೊಳ್ಳುವ ಕಾಲ ಎಂದು ಅರ್ಥ . ಈ ಮಾತ್ರೆಗಳು ಮೂರು ತೆರನಾಗಿ ಇರುತ್ತವೆ . ಅವುಗಳೆಂದರೆ
  • ಲಘು , ಗುರು , ಪುತ ಲಘು ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚಾರ ಮಾಡುವುದಕ್ಕೆ ತೆಗೆದುಕೊಳ್ಳುವ ಕಾಲ . ಇದನ್ನು ಛಂದಶಾಸ್ತ್ರದಲ್ಲಿ ‘ U ‘ ಎಂಬ ಚಿಹ್ನೆಯಿಂದ ಗುರ್ತಿಸುತ್ತಾರೆ . ಇದಕ್ಕೆ ಅದರದೇ ಆದ ಬೆಲೆಯಿದೆ . ಆದ್ದರಿಂದ ಇದರ ಬೆಲೆ ಒಂದು ಮಾತ್ರೆ
  • ಗುರು ಎಂದರೆ ಒಂದು ದೀರ್ಘಾಕ್ಷರವನ್ನು ಉಚ್ಛರಿಸಲು ತೆಗೆದುಕೊಳ್ಳುವ ಕಾಲ . ಇದನ್ನು ‘ ಎಂಬ ಚಿಹ್ನೆಯಿಂದ ಗುರ್ತಿಸುತ್ತಾರೆ . ಇದಕ್ಕೆ ಎರಡು ಮಾತ್ರೆಯ ಬೆಲೆ ಇರುತ್ತದೆ .
  • ಪ್ಲುತ ಎಂದರೆ ಕೆಲವು ಸಂದರ್ಭದಲ್ಲಿ ದೀರ್ಘಾಕ್ಷರವನ್ನು ಸ್ವಲ್ಪ ಎಳೆದು ಉಚ್ಛರಿಸಬೇಕಾಗುತ್ತದೆ . ಇದು ಲಘುವಿನ ಮೂರರಷ್ಟಿರುತ್ತದೆ . ಇದರ ಬೆಲೆ ಮೂರು ಮಾತ್ರೆ ಇದನ್ನು ‘ s ‘ ಚಿಹ್ನೆಯಿಂದ ಗುರ್ತಿಸುತ್ತೇವೆ .

ಲಘು ಬರುವ ಸಂದರ್ಭಗಳು

ಒತ್ತಕ್ಷರದ ಹಿಂದಿನ ಪ್ರಸ್ವಾಕ್ಷರಗಳನ್ನು ಬಿಟ್ಟು ಉಳಿದೆಡೆ ಬರುವ ಎಲ್ಲ ಪ್ರಸ್ವ ಅಕ್ಷರಗಳು ಲಘುವಾಗಿರುತ್ತವೆ . ಹಿಂದಿನ ಅಕ್ಷರ ಪ್ರಸ್ವಾಕ್ಷರವಾಗಿದ್ದರೆ ಲಘುವಾಗಿಯೇ ಇರುತ್ತದೆ . ‘ ಶಿಥಿಲದ್ವಿತ್ವ ‘ – ಎಂದರೆ ತೇಲಿಸಿಉಚ್ಛರಿಸುವುದು

ಒತ್ತಕ್ಷರವಾಗಿ ದೃರೂ ಅದು ಶಿಥಿಲದ್ವಿತ್ವ , ಆದ್ದರಿಂದ ಇದರ ಹಿಂದಿನಶ್ವರ ‘ ಳಿ ‘ ಎಂಬುದು ಗುರುವಾಗಬೇಕಾಗಿದ್ದರೂ ಲಘುವಾಗಿರುವುದನ್ನು ಕಾಣಬಹುದು .

 ಗುರು ಬರುವ ಸಂದರ್ಭ :

  1. ದೀರ್ಘಾಕ್ಷರಗಳೆಲ್ಲವು ಗುರುವಾಗುತ್ತವೆ
  2. ಒತ್ತಕ್ಷರದ ಹಿಂದಿನ ಅಕ್ಷರ ದೀರ್ಘವೇ ಆಗಿರಲಿ ಅಥವಾ ಹಸ್ತವೇ ಆಗಿರಲಿ ಅದು ಗುರುವಾಗುತ್ತದೆ
  3. ಸೊನ್ನೆಯಿಂದ ಕೂಡಿದ್ದರೆ ಅದು ಗುರುವಾಗುತ್ತದೆ
  4. ನಿಸರ್ಗದಿಂದ ಕೂಡಿದ್ದರೆ ಅದು ಗುರುವಾಗುತ್ತದೆ .
  5. ವ್ಯಂಜನದ ಹಿಂದಿನಾಕ್ಷರ ಲಘುವಾಗಿರಲಿ ಅಥವ ಗುರುವಾಗಿರಲೀ ಅವೆರಡೂ ಸೇರಿ ಗುರುವಾಗುತ್ತದೆ .
  6. ಷಟ್ಟದಿಯ ಅರ್ಧ ಪದ್ಯಗಳ ಕೊನೆಯಲ್ಲಿ ಇರುವ ಅಕ್ಷರ ಲಘುವಾಗಿದ್ದರೂ ಗುರುವಾಗಿರುತ್ತದೆ