
ಸಂಸದೀಯ ಪದ್ಧತಿ ಸರ್ಕಾರ
( Parliamentary form of Government )
parliamentary form of government, parliamentary system,parliamentary system of government,features of parliamentary system of government
ಜಗತ್ತಿನ ಬಲಿಷ್ಟ ರಾಷ್ಟ್ರವಾದ ಅಮೇರಿಕಾವು ಅಧ್ಯಕ್ಷ ಮಾದರಿಯ ಸರ್ಕಾರವನ್ನು ಅಳವಡಿಸಿಕೊಂಡಿದ್ದರೆ ,ಬ್ರಿಟನ್ ದೇಶವು ಸಂಸದೀಯ ಮಾದರಿಯ ಸರ್ಕಾರವನ್ನು ಅಳವಡಿಸಿ ಕೊಂಡಿದೆ .
ಭಾರತದ ಸಂವಿಧಾನ ರಚನಾಕಾರರು ಯಾವ ಮಾದರಿಯ ಸರ್ಕಾರವನ್ನು ಭಾರತದಲ್ಲಿ ಅಳವಡಿಸಿ ಕೊಳ್ಳಬೇಕೆಂಬ ಗೊಂದಲದಲ್ಲಿದ್ದರು , ಇದಕ್ಕಾಗಿ ಸಂವಿಧಾನ ರಚನಾಕಾರರಲ್ಲಿ ಅಧ್ಯಕ್ಷ ಮಾದರಿಯ ಹಾಗೂ ಪಾರ್ಲಿ ಮೆಂಟ್ ಮಾದರಿಯ ಸರ್ಕಾರ ರಚನೆ ಬೆಂಬಲಿಸುವ ಎರಡು ಗುಂಪುಗಳು ಪ್ರಾರಂಭವಾದವು .
ಪಂಡಿತ್ ಜವಹರಲಾಲ್ ನೆಹರು ,
ಕೆ.ಎಂ.ಮುನ್ನಿ ,
ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ,
ಭಾರತೀಯರು ಬ್ರಿಟೀಷ್ ಆಡಳಿತದಲ್ಲಿ ಕ್ಯಾಬಿನೇಟ್ ಪದ್ಧತಿಯ ಬಗ್ಗೆ ಅನುಭವ ಹೊಂದಿರುವುದರಿಂದ ಅದಕ್ಕೆ ಹೊಂದಿಕೊಳ್ಳುವ ವ್ಯವಸ್ಥೆಯಾಗಿರುವುದರಿಂದ ಪದ್ಧತಿಯನ್ನು ಪಾರ್ಲಿಮೆಂಟರಿ ಅಳವಡಿಸಿಕೊಳ್ಳಬೇಕೆಂದು ಪ್ರತಿಪಾದಿಸಿದರು
ಈ ಸರ್ಕಾರದಲ್ಲಿ ಪ್ರಜೆಗಳಿಂದ ಪದ್ಧತಿಯ ಆಯ್ಕೆಯಾದ ಪಾರ್ಲಿಮೆಂಟ್ ಪರಮಾಧಿಕಾರವನ್ನುಹೊಂದಿದ್ದು ಆಡಳಿತ ನಡೆಸುವ ಮಂತ್ರಿಮಂಡಲವನ್ನು ಪದಚ್ಯುತಗೊಳಿಸುವ ಅಧಿಕಾರ ಹೊಂದಿದೆ .
ಪಾರ್ಲಿ ಮೆಂಟಿನ ಪರಮಾಧಿಕಾರವನ್ನು ಸಂವಿಧಾನದ 24 ಮತ್ತು 42 ನೇ ತಿದ್ದುಪಡಿಗಳು ಕೂಡ ಖಚಿತಗೊಳಿಸಿದೆ . ಸಂಸದೀಯ ಪದ್ಧತಿಯ ಸರ್ಕಾರ ಸಂವಿಧಾನದ ಒಂದು ಮೂಲ ರಚನೆಯೆಂದು ಸುಪ್ರೀಂ ಕೋರ್ಟ್ 1973 ರ ಮೊಕದ್ದಮೆಯಲ್ಲಿ ಸ್ಪಷ್ಟಪಡಿಸಿದೆ .
ಕೆ.ಟಿ. ಷಾ , ಬ್ರಿಜೇಶ್ವರ ಪ್ರಸಾದ್ , ರಾಮ ನಾರಾಯಣ ಸಿಂಗ್ರಂತವರು ಪಾರ್ಲಿಮೆಂಟರಿ ಸರ್ಕಾರ ಪದ್ಧತಿಯು ಭ್ರಷ್ಟಾಚಾರವನ್ನು ಬೆಳೆಸುವ , ಪೋಷಿಸುವ ಸರ್ಕಾರವಾಗುತ್ತದೆ ಎಂದು ದೂಷಿಸಿ ,
ಭಾರತದಲ್ಲಿ ಅಮೇರಿಕಾದಂತೆ ಅಧ್ಯಕ್ಷ ಮಾದರಿಯ ರಚಿಸಬೇಕೆಂದು ವಾದಿಸಿದರು . ಮತ್ತೆ ಬೇಗಂಯೆಜಾಜ್ , ರಾಸುಲ್ರವರು ಸ್ವಿಸ್ ಸರ್ಕಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ವಾದಿಸಿದರು .
ಬಿ.ಆರ್ . ಅಂಬೇಡ್ಕರ್ ಕೂಡ ಪ್ರಾರಂಭದಲ್ಲಿ ಅಧ್ಯಕ್ಷ ಮಾದರಿಗೆ ಬೆಂಬಲ ಸೂಚಿಸಿದರು . ಡಾ || ನಂತರದಲ್ಲಿ ಬ್ರಿಟನ್ ಮಾದರಿಯ ಪಾರ್ಲಿಮೆಂಟರಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಒಪ್ಪಿದರು . ಸಂವಿಧಾನ ರಚನಾ ಸಭೆಯ ಬಹುತೇಕ ಸದಸ್ಯರು ಹಾಗೂ ಕೇಂದ್ರ ಸಂವಿಧಾನ ಸಮಿತಿ , ಪ್ರಾಂತೀಯ ಸಂಸದೀಯ ಅಳವಡಿಸಿಕೊಂಡಿತು . ಭಾರತದ ಸಂವಿಧಾನ ಸಮಿತಿ , ಹಾಗೂ ಕರಡು ಸಮಿತಿಗಳು ಬ್ರಿಟೀಷ್ ಮಾದರಿಯ ಪಾರ್ಲಿಮೆಂಟರಿ ಪದ್ಧತಿಗೆ ಬೆಂಬಲ ಸೂಚಿಸಿದ್ದರಿಂದ ಭಾರತದ ಸಂವಿಧಾನವು ಮಾದರಿಯ ಸರ್ಕಾರವನ್ನು ಆದುದ್ದರಿಂದ ಸರ್ಕಾರವನ್ನು ‘ ವೆಸ್ಟ್ ಮಿನಿಸ್ಟರ್ ಮಾದರಿ ‘ ಎನ್ನುವರು . ಈ ಪದ್ಧತಿಯಲ್ಲಿ ಕ್ಯಾಬಿನೆಟ್ ಅಥವಾ ಮಂತ್ರಿ ಮಂಡಲ ವಾಸ್ತವವಾಗಿ ಆಡಳಿತ ನಡೆಸುವುದರಿಂದ ಇದನ್ನು ಕ್ಯಾಬಿನೆಟ್ ಮಾದರಿಯ ಸರ್ಕಾರ ಎಂದು ಕರೆಯುತ್ತಾರೆ . ರಾಜ್ಯ ಮಟ್ಟದಲ್ಲೂ ಪಾರ್ಲಿಮೆಂಟರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ .