ಸಂಸತ್ತು । Parliament

ಸಂಸತ್ತು  

Parliament

Parliament , Parliament of india , new parliament building , member of parliament , parliament live , parliamentary government , ಸಂಸತ್ತು

Parliament , Parliament of india , new parliament building , member of parliament , parliament live , parliamentary government , ಸಂಸತ್ತು

ಭಾರತವು ಸಂಸದೀಯ ಪದ್ಧತಿ ಸರ್ಕಾರ ಹೊಂದಿದೆ . ಭಾರತದ ಸಂಸದೀಯ ಪದ್ಧತಿ ಸರ್ಕಾರವನ್ನು ವೆಸ್ಟ್ ಮಿನಿಸ್ಟರ್ ಮಾದರಿ ಸರ್ಕಾರ “ Westminister model of Government ” ಎಂದು ಕರೆಯುವರು . ಭಾರತದ ಸಂಸತ್ತು ಕೇಂದ್ರ ಸರ್ಕಾರದ ಶಾಸಕಾಂಗೀಯ ಅಂಗವಾಗಿದೆ .

ಸಂಸತ್ತು ಎಂಬುದು ಶಾಸಕಾಂಗದ ಸದಸ್ಯರು ಶಾಸನ ಕಾರ್ಯಗಳನ್ನು ನೆರವೇರಿಸಲು ಸೇರುವ ಜಾಗ ಸಂಸದೀಯ ಪದ್ಧತಿಯಲ್ಲಿ ಸರ್ಕಾರಗಳಲ್ಲಿ ಶಾಸಕಾಂಗವೇ ಅತ್ಯಂತ ಪ್ರಬಲ ವಿಭಾಗವಾಗಿದೆ . ಆದುದ್ದರಿಂದ ಸಂಸದೀಯ ಮಾದರಿ ಇರುವ ಸರ್ಕಾರಗಳಲ್ಲಿ ಸಂಸತ್ತು ಹೆಚ್ಚು ಪ್ರಬಲವಾದ ಅಂಗವಾಗಿದೆ .

ಇಂಗ್ಲೀಷ್‌ನಲ್ಲಿ ಕರೆಯುತ್ತಾರೆ . ಪಾರ್ಲಿಮೆಂಟ್ ಎಂಬ ಇಂಗ್ಲೀಷ್ ಪದವನ್ನು ಫ್ರೆಂಚ್ ಪದವಾದ ನಿರೂಪಿಸುವ ( Parler ) ಎಂಬ ಪದದಿಂದ ಆರಿಸಲಾಗಿದೆ . ಇದರ ಅರ್ಥ ಮಾತನಾಡುವುದು .

ಇಂಗ್ಲೆಂಡ್‌ನಲ್ಲಿ ಪಾರ್ಲಿಮೆಂಟ್ 1215 ರಲ್ಲಿ ಅಸ್ಥಿತ್ವಕ್ಕೆ ಬಂದಿತು . ಇಂಗ್ಲೆಂಡಿನ ಪಾರ್ಲಿಮೆಂಟ್‌ನ ರೂವಾರಿ ದೊ ರೆ ಹೆನ್ರಿ- ಬಹುತೇಕ ಸಂಸತ್ತುಗಳು ಒಂದು ಅಥವಾ ಎರಡು ವಿಭಾಗಗಳನ್ನು ಹೊಂದಿರುತ್ತವೆ .

ಈ ವಿಭಾಗಗಳನ್ನು ಮನೆಗಳು ಎಂದು ಕರೆ ಯುತ್ತಾರೆ . ಎರಡು ಮನೆಗಳಿರುವ ಸಂಸತ್ತಿನಲ್ಲಿ ಸಾಮಾನ್ಯವಾಗಿ ಕೆಳಮನೆಯು ಶಾಸನಗಳನ್ನು ಕಾರ್ಯವನ್ನು ಹೊಂದಿದ್ದು , ಮೇಲ್ಮನೆಯು ಈ ನಿರೂಪಿತ ಶಾಸನಗಳ ಮೇಲೆ ನಿಗಾ ವಹಿಸುವ ಕಾರ್ಯವನ್ನು ಹೊಂದಿದೆ .

ಅಧ್ಯಕ್ಷ ಮಾದರಿಯು ಸಂಸದೀಯ ಮಾದರಿಗಿಂತ ಭಿನ್ನವಾಗಿದೆ . ಅಧ್ಯಕ್ಷ ಮಾದರಿಯಲ್ಲಿ ರಾಷ್ಟ್ರಪತಿಗಳು ಕಾರ್ಯಾಂಗದ ಮುಖ್ಯಸ್ಥನಾಗಿದ್ದು , ಶಾಸಕಾಂಗಕ್ಕೆ ಸರಿಸಮಾನವಾದ ಶಕ್ತಿಯನ್ನು ಹೊಂದಿರುತ್ತಾರೆ .

ಆದರೆ ಸಂಸದೀಯ ಮಾದರಿ ಸರ್ಕಾರದಲ್ಲಿ ಕಾನೂನುಗಳೆಲ್ಲ ರೂಪಿತವಾಗುವುದು ಸಂಸತ್ತಿನಲ್ಲಿ , ಇಂಗ್ಲೆಂಡ್ ಸಂಸತ್ತನ್ನು ‘ ಮಾತೃ ಸಂಸತ್ತು ‘ ಎನ್ನುವರು .

ಭಾರತದ ಸಂಸತ್ತಿನ ಇತಿಹಾಸ

ಭಾರತದ ಸಂಸತ್ತು ತನ್ನದೇ ಆದ ಇತಿಹಾಸವನ್ನು ಹೊಂದಿದೆ . ಪ್ರಾಚೀನ ಭಾರತದ ವೇದ ಸಾಹಿತ್ಯದಲ್ಲಿ ಇಂಡೋ ಆರ್ಯನ್ ಸಾಮ್ರಾಜ್ಯಗಳು ಸೇರುತ್ತಿದ್ದ ಸಭಾ ಮತ್ತು ಸಮಿತಿ ಎಂಬ ಎರಡು ಸಂಸತ್ತಿನ ಬಗ್ಗೆ ಉಲ್ಲೇಖಿ ಸಲಾಗಿದೆ . ಬುದ್ಧನ ಕಾಲದಲ್ಲಿ ಅನೇಕ ರಾಜ್ಯಗಳು ‘ ಸಂಗಾಸ್ ‘ ಎಂಬ ಗಣತಂತ್ರವನ್ನು ಒಳಗೊಂಡಿದ್ದವು .

ಈ ಸಂಗಾಸ್‌ಗಳು ಚುನಾಯಿತವಾದಂತಹ ಪ್ರತಿನಿಧಿಗಳ ಸಭೆಯಾಗಿತ್ತೆಂದು ಇತಿಹಾಸ ತಜ್ಞರು ಹೇಳುತ್ತಾರೆ . ಇದೇ ರೀತಿ ಬೆಳೆದು ಬಂದಂತಹ ಸಭಾ ಮತ್ತು ಸಮಿತಿಗಳ ಆಧುನಿಕ ರೂಪಹೊಂದಿ ಬ್ರಿಟಿಷರ ಕಾಲದಲ್ಲಿ ಸೆಂಟ್ರಲ್ ಲೆಜಿಸ್ಟ್ರೇಟಿವ್ ಅಸೆಂಬ್ಲಿಯಾಗಿ 1919 ರ ಕಾಯ್ದೆಯಾಗಿ ಪ್ರಾರಂಭವಾಯಿತು .

ಭಾರತ ಸ್ವತಂತ್ರ್ಯ ಪಡೆದ ನಂತರ ಸಂಸತ್ತಾಗಿ ರೂಪಗೊಂಡಿತು . ಹಿಂದಿನ ಕಾಲದ ಸಭಾಗಳಿಂದ ಸಂಸತ್ತು ವಿಕಾಸ ಹೊಂದಿದ್ದರಿಂದ ಸಂಸತ್ತಿನ ಎರಡೂ ಸದನಗಳಲ್ಲೂ ಕೂಡ ಸಭಾಗಳೆಂದು ಉಳಿಸಿಕೊಳ್ಳಲಾಗಿದೆ .

ಭಾರತದ ಸಂಸತ್ತಿನ ಸಂರಚನೆ

ಸಂವಿಧಾನದ 5 ನೇ ಭಾಗದ ,

79 ನೇ ವಿಧಿಯಿಂದ 122 ನೇ ವಿಧಿವರೆಗೆ ಸಂಸತ್ತಿನ ಎರಡು ಸದನಗಳಾದರಾಜ್ಯಸಭೆ ,

ಲೋಕಸಭೆಗಳ ರಚನೆ ,

ಅವಧಿ ,

ಅಧಿಕಾರಿಗಳು ,

ಸವಲತ್ತುಗಳು ,

ವಿಧಾನಗಳು ,

ಅಧಿಕಾರಗಳ ಬಗ್ಗೆ ತಿಳಿಸುತ್ತದೆ .

ವಿಧಿ . 79. ಸಂಸತ್ತಿನ ರಚನೆ

ಕೇಂದ್ರವು ಒಂದು ಸಂಸತ್ತನ್ನು ಹೊಂದಿರತಕ್ಕುದು ಮತ್ತು ಆ ಸಂಸತ್ತು ರಾಷ್ಟ್ರಪತಿಯನ್ನು ಹಾಗೂ ರಾಜ್ಯ ಸಭೆ ಮತ್ತು ಲೋಕಸಭೆ ‘ ಎಂಬ ಹೆಸರುಗಳನ್ನುಳ್ಳ ಎರಡು ಸದನಗಳನ್ನು ಹೊಂದಿರತಕ್ಕುದು ಎಂದು ಸಂವಿಧಾನದ 79 ನೇ ವಿಧಿ ತಿಳಿಸುತ್ತದೆ .

ಭಾರತದ ಸಂಸತ್ತಿನ ಬಗ್ಗೆ ಸಂವಿಧಾನದ 5 ನೇ ಭಾಗದ ಲ್ಲಿ ವಿವರಿಸಲಾಗಿದೆ . ಭಾರತದ ಸಂಸತ್ತು ರಾಷ್ಟ್ರಪತಿ , ರಾಜ್ಯ ಸಭೆ , ಲೋಕಸಭೆಗಳನ್ನು ಒಳಗೊಂಡಿದೆ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಸ್ವಾತಂತ್ರ್ಯದ ಹಕ್ಕು

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

ಕೇಂದ್ರಮಂತ್ರಿ ಮಂಡಲ

ಅಟಾರ್ನಿ ಜನರಲ್

Comments

Leave a Reply

Your email address will not be published. Required fields are marked *