ಸಂಸತ್ತಿನ ಸಚಿವಾಲಯ
( Secretariat of Parliament )
sachivalaya , secretariat of parliament , lok sabha recruitment , lok sabha secretary general ,lok sabha secretariat
ವಿಧಿ . 98. ಸಂಸತ್ತಿನ ಸಚಿವಾಲಯ
ಸಂಸತ್ತಿನ ಎರಡೂ ಸದನಗಳಲ್ಲೂ ಕೂಡ ಸಚಿವಾಲಯದ ಸಿಬ್ಬಂಧಿಯನ್ನು ಹೊಂದಿರಬೇಕೆಂದು ಸಂವಿಧಾನದ 98 ( 1 ) ನೇ ವಿಧಿ ತಿಳಿಸುತ್ತದೆ .
ಸಂಸತ್ತಿನ ಉಭಯ ಸದನಗಳ ಸಚಿವಾಲಯದ ಸಿಬ್ಬಂದಿಯ ನೌಕರಿಯನ್ನು ಭರ್ತಿಯನ್ನು ಹಾಗೂ ನೌಕರರ ಸೇವಾ ಷರತ್ತುಗಳನ್ನು ಸಂಸತ್ತಿನ ಕಾನೂನಿನ ಮೂಲಕ ರೂಪಿಸಬೇಕೆಂದು ತಿಳಿಸುತ್ತದೆ .
ಪ್ರಧಾನ ಕಾರ್ಯದರ್ಶಿ
ಸಂಸತ್ತಿನ ಪ್ರತಿಯೊಂದು ಸರಸರ ಸಚಿವಾಲಯದಲ್ಲಿ ಮುಖ್ಯಸ್ಥರಾಗಿ ಪ್ರಧಾನ ಕಾರ್ಯದರ್ಶಿ ಕಾರ್ಯ ನಿರ್ವಹಿಸುತ್ತಾನೆ . ಇವರು ಲೋಕಸಭೆಯ ಮೂರನೇ ಮುಖ್ಯ ಅಧಿಕಾರಿ ಪ್ರಧಾನ ಕಾರ್ಯದರ್ಶಿಯು ಸಂಸದೀಯ ಕಾರ್ಯಗಳ ನಿರ್ವಹಣೆ ಚಟುವಟಿಕೆ ಮತ್ತು ಆಚರಣೆಗೆ ಸಂಬಂಧಿಸಿದಂತೆ ಸಭಾಪತಿಗೆ , ಸದನಕ್ಕೆ ಮತ್ತು ಸದಸ್ಯರಿಗೆ ಸಲಹೆಗಾರನಾಗಿರುತ್ತಾನೆ
ಇವರು ಖಾಯಂ ಅಧಿಕಾರಿ ಇವರು ಬೇರೆ ಬೇರ ಸದನಗಳಿಗೂ ಸಭಾಪತಿಗಳಿಗೂ ನಡುವೆ ಸಂಪರ್ಕ ಬೆಸೆಯುವ ಕೊಂಡಿಯಾಗಿರುತ್ತಾರೆ . ಇವರ ಸದನವನ್ನು ನಡೆಸಿಕೊಂಡು ಹೋಗಿ ಯಶಸ್ವಿಗೊಳಿಸಿದ್ದಾರೆ .
ಅನುಭವವನ್ನು ಆಧರಿಸಿ ಅಧ್ಯಕ್ಷರುಗಳು ಸಂಸತ್ತಿನ ಮೂಲಕ ಸದಸ್ಯರಿಗೆ ಒದಗಬೇಕಾದ ಎಲ್ಲಾ ಸವಲತ್ತು ಮತ್ತು ರಕ್ಷಣೆಗಳನ್ನು ಒದಗಿಸುವುದರೊಂದಿಗೆ ಸದನದ ಕಾರ್ಯಗಳನ್ನುನಿರ್ವಹಿಸುವಂತಹವರಾಗಿದ್ದಾರೆ .
ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರುವುದಿಲ್ಲ ಮಹಾಕಾರ್ಯದರ್ಶಿಯು ರಾಷ್ಟ್ರಪತಿ ಪರವಾಗಿ ಸದನದ ಅಧಿವೇಶನಕ್ಕೆ ಹಾಜರಾಗಬೇಕೆಂದು ಆದೇಶ ಕಳುಹಿಸುತ್ತಾರೆ .
ಸಭಾ ಪತಿಯ ಗೈರು ಹಾಜರಿಯಲ್ಲಿ ಮಸೂದೆಗಳನ್ನು ಪ್ರಮಾಣಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ . ಸದನಕ್ಕೆ ಸಂಬಂಧಿಸಿದ ಎಲ್ಲಾ ಪತ್ರವ್ಯವಹಾರಗಳನ್ನು ಕೂಡ ನಿರ್ವಹಿಸುತ್ತಾರೆ ಹಾಗೂ ಸಂಸತ್ತಿನ ಹಣಕಾಸಿಗೆ ಸಂಬಂಧಿಸಿದಂತೆ ನಿಯಂತ್ರಣವನ್ನು ಹೊಂದಿರುತ್ತಾರೆ .
ಕಾಮನ್ವೆಲ್ತ್ ಸ್ಪೀಕರ್ ಸಮ್ಮೇಳನವು ದೇಶದಲ್ಲಿ ನಡೆಯುವ ಸಂದರ್ಭದಲ್ಲಿ ಲೋಕಸಭೆಯ ಮಹಾಕಾರ್ಯದರ್ಶಿಯು ಅಂತಹ ಸಮ್ಮೇಳನದ ಪದನಿಮಿತ ಮಹಾಕಾರ್ಯದರ್ಶಿಯಾಗಿರುತ್ತಾರೆ . ಸಂಸತ್ತಿಗೆ ಸಂಬಂಧಿಸಿದಂತೆ ವಿದೇಶಗಳೊಂದಿಗೆ ಇರುವ ಎಲ್ಲಾ ಸಂಬಂಧಗಳಿಗೆ ಸಂಬಂಧಪಟ್ಟಂತೆ ಜವಾಬ್ದಾರಿಯಾಗಿದೆ .
ಲೋಕನಭೆಯ ನಾಯಕ ( Leader of Lok Sabha )
ಲೋಕಸಭೆಯ ಕಾನೂನಿನ ನಿಯಮಗಳ ಪ್ರಕಾರ ಪ್ರಧಾನ ಮಂತ್ರಿಗಳು ಲೋಕಸಭೆಯ ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ .
ಪ್ರಧಾನಮಂತ್ರಿಗಳಿಂದ ನೇಮಕವಾದಂತಹ ಲೋಕಸಭಾ ಸದಸ್ಯರು ಅಥವಾ ಲೋಕಸಭಾ ಸದಸ್ಯರಾಗಿ ಮಂತ್ರಿಯಾದವರನ್ನು ಲೋಕಸಭೆಯ ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ .
ಇವರು ಲೋಕಸಭೆಯ ಎಲ್ಲಾ ವಿದ್ಯಾಮಾನಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ . ಪ್ರಧಾನ ಮಂತ್ರಿಗಳು ಲೋಕಸಭೆಯ ಉಪನಾಯಕರನ್ನು ನೇಮಕ ಮಾಡುತ್ತಾರೆ .
ಪ್ರಸ್ತುತ 2014 ಮೇ 26 ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 16 ನೇ ಲೋಕಸಭೆಗೆ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಇದೇ ಪದ್ಧತಿ ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲೂ ಕೂಡ ಸಭಾ ನಾಯಕರಿದ್ದು ಅವರನ್ನು ಬಹುಮತ ಪಡೆದ ನಾಯಕ ( Majority leader ) ಎಂದು ಕರೆಯುತ್ತಾರೆ .
ರಾಜ್ಯಸಭಾ ನಾಯಕ ( Leader of Rajya Sabha )
ರಾಜ್ಯಸಭೆಗೆ ನಾಯಕರಾಗಿ ಪ್ರಸ್ತುತವಾಗಿ ಆರುಣ್ ಜೇ ಟ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ . ಕ್ಯಾಬಿನೆಟ್ ದರ್ಜೆಯ ಸಚಿವರನ್ನು ಅಥವಾ ಇತರೆ ಸಚಿವರನ್ನು ನೇಮಕ ಮಾಡಬಹುದು .
ವಿರೋಧ ಪಕ್ಷದ ನಾಯಕ ( Leader of Opposition )
ಸಂಸತ್ತಿನ ಪ್ರತಿಯೊಂದು ಸದನದಲ್ಲೂ ಕೂಡ ವಿರೋಧ ಪಕ್ಷದ ನಾಯಕರಿರುತ್ತಾರೆ . ಪ್ರತಿಯೊಂದು ಸದನದಲ್ಲಿ ಹೆಚ್ಚು ಸಂಖ್ಯೆ ಹೊಂದಿರುವ 2 ನೇ ದೊಡ್ಡ ಪಕ್ಷದ ಶಾಸಕಾಂಗೀಯ ನಾಯಕನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗುತ್ತಾನೆ . ವಿರೋಧ ಪಕ್ಷದ ನಾಯಕ ಹುದ್ದೆಯು ಬ್ರಿಟೀಷರ ಕಾಲದಲ್ಲೇ ಜಾರಿಗೆ ಬಂದದ್ದು .
ಇದನ್ನು ‘ ಸೆಂಟ್ರಲ್ ಲೆಜಿಸ್ಲಟಿವ್ ಅಸೆಂಬ್ಲಿ’ಯಲ್ಲಿ ಈ ಹುದ್ದೆಯನ್ನು ಪ್ರಾರಂಭಿಸಲಾಯಿತು , ಸ್ಪರ್ಧಾ + ಮೋತಿಲಾಲ್ ನೆಹರುರವರು 1923 ರಿಂದ 1926 ರವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು .
ವಿರೋಧ ಪಕ್ಷದ ನಾಯಕರು ಸಂಸತ್ತಿನಲ್ಲಿ ಪ್ರಮುಖ ಪಾತ್ರವಹಿಸಿದ್ದು , ಸರ್ಕಾರದ ನೀತಿ ನಿಯಮಗಳನ್ನು ರಚನಾತ್ಮಕವಾಗಿ ವಿಮರ್ಶಿಸಿ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ .
1969 ರಲ್ಲಿ ವಿರೋಧ ಪಕ್ಷಗಳು ಅಧಿಕೃತವಾದಂತಹ ನಾಯಕನನ್ನು ಗುರ್ತಿಸಿದವು . 1977 ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರ ಹುದ್ದೆಗೆ ಸ್ವಾಯತತ್ತೆ , ನೀಡಿ ಕ್ಯಾಬಿನೇಟ್ ದರ್ಜೆಯ ಸ್ಥಾನಮಾನ ನೀಡಿ ಸಂಬಳ ಮತ್ತು ಸವಲತ್ತುಗಳನ್ನು ಒದಗಿಸಲಾಯಿತು .
ಆನೇಕ ದೇಶಗಳು ಕೂಡ ಈ ಪದ್ಧತಿಯನ್ನು ಅಳವಡಿಸಿಕೊಂಡಿವೆ . ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿರೋಧ ಪಕ್ಷದ ನಾಯಕರನ್ನು ಅಲ್ಪ ಸಂಖ್ಯಾತರ ನಾಯಕ ( Minority Leader ) ಎಂದು ಕರೆಯುತ್ತಾರೆ .
ಬ್ರಿಟಿಷ್ ಸರ್ಕಾರದಲ್ಲಿ ವಿರೋಧ ಪಕ್ಷವು ಒಂದು ಚಿಕ್ಕ ಸರ್ಕಾರದಂತೆ ಕೆಲಸ ಮಾಡುತ್ತದೆ . ಇದು ಕೂಡ ತನ್ನದೇ ಆದ ಸಚಿವ ಸಂಪುಟವನ್ನು ಹೊಂದಿದ್ದು ಅಂತಹ ಸಚಿವ ಸಂಪುಟವನ್ನು ‘ ನೆರಳಿನ ಸಚಿವ ಸಂಪುಟ ‘ ( Shadow Cabinet ) ಎನ್ನುವರು , ಬ್ರಿಟನ್ನಲ್ಲಿ ವಿರೋಧ ಪಕ್ಷದ ನಾಯಕರನ್ನು ಪರ್ಯಾಯ ಪ್ರಧಾನ ಮಂತ್ರಿ ಎನ್ನುವರು .
ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್ನ ಗುಲಾಂ ನಬಿ ಆಜಾದ್ ಕಾರ್ಯನಿರ್ವಹಿಸುತ್ತಿದ್ದಾರೆ .
ಆದರೆ 16 ನೇ ಲೋಕಸಭೆಯಲ್ಲಿ ಯಾವುದೇ ಪಕ್ಷಕ್ಕೆ ನಿಗದಿತ ಕೋರಂ ( 10 ) ಇಲ್ಲದಿದ್ದ ಕಾರಣ ವಿರೋಧ ಪಕ್ಷದ ನಾಯಕರ ಹುದ್ದೆ ಇರುವುದಿಲ್ಲ .
ಆತ್ಮೀಯರೇ …
ನಮ್ಮ samagratv.com ವೆಬ್ಸೈಟ್ ನಲ್ಲಿ ಭಾರತದ ಸಂವಿಧಾನ ( constitution of india ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .
ಟೆಲಿಗ್ರಾಮ್ ಲಿಂಕ್
samagratv.com
ಇತರೆ ವಿಷಯಗಳ ಲಿಂಕ್
0 Comments