ಸಂವಿಧಾನ ಪ್ರಸ್ತಾವನೆ | Preamble of the Constitution

ಸಂವಿಧಾನ ಪ್ರಸ್ತಾವನೆ

Preamble of the Constitution

Preamble of the Constitution, preamble of the constitution,preamble of india, the preamble, preamble words

Preamble of the Constitution, preamble of the constitution,preamble of india, the preamble, preamble words

ನಾವು ಇನ್ನೂ ಮುಂದಿನ ಕಾರ್ಯದಲ್ಲಿ ತೊಡಗುವುದಕ್ಕೆ ಮೊದಲು ನಾವು ಎಲ್ಲಗೆ ಹೋಗುತ್ತಿದ್ದೇವೆ ಹಾಗೂ ಏನನ್ನು ನಿರ್ಮಿಸಲು ಬಯಸಿದ್ದೇವೆ ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕು .

ಇಂತಹ ಸಂದರ್ಭದಲ್ಲಿ ವಿವರಗಳು ಅನಗತ್ಯ ಎಂಬುದು ಸ್ಪಷ್ಟ . ಕಟ್ಟಡ ಕಟ್ಟುವಾಗ ನೀವು ಸಾಕಷ್ಟು ಯೋಚಿಸಿದ ನಂತರವೇ ಪ್ರತಿಯೊಂದು ಇಟ್ಟಿಗೆಯನ್ನು ಬಳಸುತ್ತೀರಿ .

ಸಾಮಾನ್ಯವಾಗಿ ಒಂದು ಕಟ್ಟಡವನ್ನು ಕಟ್ಟ ಬಯಸುವಾಗ ಅದರ ರಚನೆಯ ನಕ್ಷೆಯನ್ನು ಹೊಂದಿರಬೇಕು . ನಂತರ ಅದಕ್ಕೆ ಬೇಕಾಗುವ ಸಾಮಗ್ರಿಯನ್ನು ಸಂಗ್ರಹಿಸಬೇಕು .1947 ಜನವರಿ 22 ರಂದು ಭಾರತದ ಸಂವಿಧಾನ ರಚನಾ ಸಭೆಯಲ್ಲಿ ” ಧೈಯಗಳ ನಿರ್ಣಯ ” ಮಂಡಿಸುವ ಮುನ್ನಾ ಜವಾಹರಲಾಲ್ ನೆಹರುರವರು ಗುರಿ ನಿರ್ಣಯದ ಮಹತ್ವವನ್ನು ಸಂವಿಧಾನ ರಚನಾ ಸಭೆಗೆ ಮೇಲಿನ ಪದಗಳ ಮೂಲಕ ಹೇಳಿದರು

ಭಾರತದ ಸಂವಿಧಾನವು ಜಗತ್ತಿನ ಇತರ ದೇಶಗಳ ಸಂವಿಧಾನವು ಪ್ರಾರಂಭವಾಗುವಂತೆ ಪ್ರಸ್ತಾವನೆಯಿಂದ ಪ್ರಾರಂಭವಾಗುತ್ತದೆ . ಪ್ರಸ್ತಾವನೆಯು ಸಂವಿಧಾನದ ಪೀಠಿಕೆಯಾಗಿದ್ದು ,

ಇದು ಸಂವಿಧಾನದ ಗುರಿ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವಂತಹ ಆರಂಭಿಕ ಹೇಳಿಕೆಯಾಗಿದೆ . ಪ್ರಸ್ತಾವನೆಯು ಆ ದೇಶದ ಸಂವಿಧಾನದ ತಿರುಳನ್ನು ಒಳಗೊಂಡಿದ್ದು ಇದು ಸಂವಿಧಾನಕ್ಕೆ ಚೌಕಟ್ಟನ್ನು ನೀಡುತ್ತದೆ .

 ಭಾರತದ ಸಂವಿಧಾನದ ಪ್ರಸ್ತಾವನೆ ಹಿನ್ನೆಲೆ

ಭಾರತ ದೇಶದ ಕನಸುಗಳು ಹಾಗೂ ಆಶೋತ್ತರಗಳಿಗೆ ಮುದ್ರಿತ ಹಾಗೂ ಪದಗಳಲ್ಲಿ ರೂಪಕೊಡುವ ಉನ್ನತ ಸಾಹಸ ಕಾರ್ಯವಾದ ಸಂವಿಧಾನ ರಚನೆಯಲ್ಲಿ ತೊಡಗುವುದಕ್ಕೆ ಮುಂಚೆ ಸಂವಿಧಾನಕ್ಕೆ ಆಧಾರ ಸ್ವರೂಪವಾದ ಅದರ ಗುರಿಗಳು ಮತ್ತು ಮಾರ್ಗದರ್ಶಿ ತತ್ವಗಳನ್ನು ರೂಪಿಸುವುದು ಸಂವಿಧಾನ ರಚನಾಕಾರರ ಮೊದಲ ಕಾರ್ಯವಾಗಿತ್ತು .

ತಾವು ಯಾವ ಮೌಲ್ಯಕ್ಕೆ ಅಂಟಿಕೊಂಡಿದ್ದೇವೆ ಹಾಗೂ ನಮ್ಮ ದೇಶ ಹೇಗಿರಬೇಕು ಎಂಬುದನ್ನು ತಿಳಿಸುವುದು ನಮ್ಮ ಸಂವಿಧಾನ ರಚನಾಕಾರರ ಆದ್ಯ ಕರ್ತವ್ಯವಾಗಿತ್ತು .

ಈ ಉದ್ದೇಶಕ್ಕಾಗಿ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯನ್ನು ಒದಗಿಸಬಹುದಾದ ಪದಗಳ ಚಿತ್ರವನ್ನು ರಚಿಸಬೇಕಾಗಿತ್ತು . ಇಂತಹ ಮಹಾನ್ ಕಾರ್ಯವನ್ನು ಪಂಡಿತ್ ಜವಹರಲಾಲ್ ನೆಹರುರವರು 1946 ಡಿಸೆಂಬರ್ 13 ರಂದು ಸಂವಿಧಾನ ರಚನಾ ಸಭೆಯಲ್ಲಿ ಮಂಡಿಸಿದ ಗುರಿ ನಿರ್ಣಯ ಈಡೇರಿಸುವಂತಿತ್ತು .

ಧ್ಯೇಯಗಳ ನಿರ್ಣಯ ( Objectives resolution )

ಧ್ಯೇಯಗಳ ನಿರ್ಣಯವು ಸಂವಿಧಾನದ ಮೂಲಭೂತ ಧ್ಯೇಯಗಳ , ಮೌಲ್ಯಗಳು , ದಿಕ್ಕುಗಳನ್ನು ಸ್ಪಷ್ಟಪಡಿಸುವ , ಬೇರೆ ಉದ್ದೇಶಗಳನ್ನು ಒಳಗೊಂಡಂತೆ ಮುನ್ನುಡಿಯಾಗಿತ್ತು . ಸಂವಿಧಾನವು ಹೇಗಿರಬೇಕೆಂಬುದನ್ನು ತಿಳಿಸುವಂತಹ ಬೇರೆ

ಇಂತಹ ಧೈಯಗಳ ನಿರ್ಣಯದ ಮಹತ್ವವನ್ನು ಅರಿತ ಸಂವಿಧಾನ ರಚನಾ ಸಭೆ 1947 ಜನವರಿ 22 ರಂದು ಗೌರವದಿಂದ ಎಲ್ಲರೂ ಎದ್ದು ನಿಂತು ಸ್ವೀಕರಿಸುವುದರ ಮೂಲಕ ಧೈಯ ನಿರ್ಣಯಗಳನ್ನು ಅಂಗೀಕರಿಸಿದರು

ಪ್ರಸ್ತಾವನೆ ( Preamble )

ಇಂತಹ ಧೈಯ ನಿರ್ಣಯವನ್ನು ಅನೇಕ ಮಾರ್ಪಾಡು ಹೊಂದಿ ಪ್ರಸ್ತಾವನೆಯಾಗಿ ಭಾರತದ ಸಂವಿಧಾನದ ಭಾಗವಾಗಿ 1949 ಅಕ್ಟೋಬರ್ 17 ರಂದು ಮತದಾನದ ಮೂಲಕ ನಿರ್ಧರಿಸಲ್ಪಟ್ಟಿತು .

ಭಾರತದ ಸಂವಿಧಾನ ರಚನಾ ಸಭೆಯಿಂದ ಅಂಗೀಕಾರವಾದ ಭಾರತದ ಪ್ರಸ್ತಾವನೆಯು ಸಂವಿಧಾನದ ಒಂದು ಅವಿಭಾಜ್ಯವಾದ ಭಾಗವಾಗಿ ರೂಪಗೊಂಡಿದೆ . ಭಾರತದ ಪ್ರಸ್ತಾವನೆಯು ಈ ಕೆಳಕಂಡಂತಿದೆ . “

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ,

ಸಮಾಜವಾದಿ ,

ಜಾತ್ಯಾತೀತ ,

ಪ್ರಜಾಸತಾತ್ಮಕ ,

ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು , ಮತ್ತು ಅದರ ಎಲ್ಲ ಪೌರರಿಗೆ ಸಮಾಜಿಕ , ಆರ್ಥಿಕ ಮತ್ತು ರಾಜಕೀಯ ನ್ಯಾಯ  ವಿಚಾರ , ಅಭಿವ್ಯಕ್ತಿ , ನಂಜಕ ,

ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ  ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ ಎಲ್ಲರಿಗೂ ದೊರೆಯುವಂತೆ ಮಾಡುವುದಕ್ಕೆ  ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿ ,

ಭ್ರಾತೃತ್ವ ಭಾವನೆಯನ್ನು ವೃದ್ಧಿಗೊಆಸುವುದಕ್ಕಾಗಿ ಧೃಢ ಸಂಕಲ್ಪ ಮಾಡಿ , ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್ 26. 1949 ರಂದು ಈ ಸಂವಿಧಾನವನ್ನು ಅ೦ಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ .

Comments

Leave a Reply

Your email address will not be published. Required fields are marked *