ಸಂವಿಧಾನ ಪರಿಹಾರ ಹಕ್ಕು

( Right to Constitutional Remedies )

right to constitutional remedies , constitutional remedies , samvidhana rachane in kannada , constitutional remedies meaning

right to constitutional remedies , constitutional remedies , samvidhana rachane in kannada , constitutional remedies meaning

ವಿಧಿ 32 ಈ ಭಾಗದಿಂದ ಪ್ರದತ್ತವಾಗಿರುವ ಹಕ್ಕುಗಳ ಜಾರಿಗಾಗಿ ಪರಿಹಾರೋಪಾಯಗಳು ಅವುಗಳನ್ನು ಸುಪ್ರೀಂಕೋರ್ಟಿನಲ್ಲಿ ಹಾಗೂ ಸಂವಿಧಾನದ 32 ನೇ ವಿಧಿ ಅನ್ವಯ ಮೂಲಭೂತ ಹಕ್ಕುಗಳು ಉಲ್ಲಂಘನೆಯಾದಾಗ ಸಂರಕ್ಷಿಸಲು ಹೈಕೋರ್ಟಿನಲ್ಲಿ ರಿಟ್‌ಗಳ ಮೂಲಕ ಪ್ರಶ್ನಿಸಬಹುದು ಈ ರಿಟ್‌ಗಳ ಮೂಲಕ 32 ನೇ ವಿಧಿ ಅನ್ವಯ ಸುಪ್ರೀಂಕೋರ್ಟ್‌ನಲ್ಲಿ 139 ನೇ ವಿಧಿ ಅನ್ವಯ ಮೂಲಭೂತ ಹಕ್ಕುಗಳಿಗೆ ರಕ್ಷಣೆ ಪಡೆದರೆ , 22 ನೇ ವಿಧಿ ಅನ್ವಯ ಹೈಕೋರ್ಟಿನಲ್ಲಿ ರಕ್ಷಣೆ ಪಡೆಯ ಬಹುದು ಅಂತಹ ರಿಟ್‌ಗಳೆಂದರೆ

 

1 ) ಹೇಬಿಯಸ್ ಕಾರ್ಪಸ್ ( ಬಂಧ ಪ್ರತ್ಯಕ್ಷೀಕರಣ )

ಹೆಬಿಯಸ್ ಕಾರ್ಪಸ್ ಎಂಬುದು ಒಂದು ವಿಧದ ರಿಟ್ ಆಗಿದ್ದು ಇದು ಯಾವುದಾದರೂ ವ್ಯಕ್ತಿಯನ್ನು ಪೊಲೀಸರು ಅಥವಾ ಬೇರೆ ಯಾರಾದರೂ ವ್ಯಕ್ತಿ ಬಂಧನದಲ್ಲಿಟ್ಟಾಗ ಈ ರಿಟ್‌ನ್ನು ಬಳಸಿ ಬಂಧಿತನನ್ನು ಸಹಕಾರಿಯಾಗಿದೆ .

32 ನೇ ಬಿಡಿಸಲು ಅಡಿಯಲ್ಲಿ ಈ ರಿಟ್‌ನ್ನು ಸುಪ್ರೀಂ ಕೋರ್ಟಿನಲ್ಲಿ 139 ನೇ ವಿಧಿಯನ್ವಯ ಹಾಗೂ ಹೈಕೋರ್ಟಿನಲ್ಲಿ 226 ನೇ ವಿಧಿ ಅನ್ವಯ ಕೋರಿಕೆ ಸಲ್ಲಿಸಬಹುದು .

ಹೇಬಿಯಸ್ ಕಾರ್ಪಸ್ ಎಂಬುದು ಲ್ಯಾಟಿನ್ ಭಾಷೆ ಪದವಾಗಿದ್ದು ಇದರ ಅರ್ಥವು ” To have a body ” ಎಂದಾಗಿದೆ . ಈ ರಿಟ್‌ನ ಅನ್ವಯ ಬಂಧಿತನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಕಂಡು ಬಂದರೆ ಬಂಧಿತನನ್ನು 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಅವನ ನ್ಯಾಯಾಲಯವು ಆದೇಶಿಸುತ್ತದೆ .

ಈ ರಿಟ್ ಖಾಸಗಿ ವ್ಯಕ್ತಿಗಳ ಹಾಗೂ ಸಂಸ್ಥೆಗಳ ನಿರಂಕುಶ ವರ್ತನೆಯನ್ನು ಹಾಗೂ ದೌರ್ಜನ್ಯವನ್ನು ತಡೆಯಲು ಸಹಕಾರಿಯಾಗಿದೆ .

ಆದರೆ ಈ ರಿಟನ್ನು ಕ್ರಿಮಿನಲ್ ಅಪರಾಧ ಮಾಡಿದ ಅಪರಾಧಿಯನ್ನು ನ್ಯಾಯಾಲಯವು ಆಜ್ಞೆ ಹೊರಡಿಸಿದ್ದರೆ ಅಂತಹ ಸಂದರ್ಭದಲ್ಲಿ ಈ ರಿಟ್ ಅನ್ವಯವಾಗುವುದಿಲ್ಲ . ಪ್ರಾಧಿಕಾರಗಳು & ಖಾಸಗಿ ಇದನ್ನು ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ಹೂಡಬಹುದು .

 2 ) ಮ್ಯಾಂಡಮನ್ Mandamus

ಮ್ಯಾಂಡಮಸ್ ಎಂಬುದು ಲ್ಯಾಟಿನ್ ಭಾಷೆಯ ಪದವಾಗಿದ್ದು , ಇದರ ಅರ್ಥವು We command or We Order ಎಂದಾಗುತ್ತದೆ . ಈ ರಿಟ್ ಅರ್ಜಿಯನ್ನು ನ್ಯಾಯಾಲಯವು ಸರ್ಕಾರಿ ಅಧಿಕಾರಿಗೆ ತನ್ನ ಕಾರ್ಯವನ್ನು ಮಾಡಲು ಈ ಕೆಳಗಿನ ಸಂದರ್ಭಗಳಲ್ಲಿ ಈ ರಿಟ್‌ನ್ನು ಸಲ್ಲಿಸಬಹುದು .

1 ) ಮೂಲಭೂತ ಹಕ್ಕುಗಳನ್ನು ರಕ್ಷಿಸಲು

2 ) ಸಂವಿಧಾನ ಬಾಹಿರ ಕಾನೂನನ್ನು ಜಾರಿಗೆ ತರದಂತೆ ಅಧಿಕಾರಿ ಅಥವಾ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ನೀಡಲು ಸಲ್ಲಿಸಬಹುದು .

3 )ಯಾವುದೇ ವ್ಯಕ್ತಿ ತನ್ನ ಸಾರ್ವಜನಿಕ ಕರ್ತವ್ಯವನ್ನು ಮಾಡುವಂತೆ ನಿರ್ದೇಶಿಸಲು ಈ ರಿಟ್‌ನ್ನು ಹೈಕೋರ್ಟ್ ಸಲ್ಲಿಸಬಹುದು .

4 ) ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ಚಲಾಯಿಸಲು ನಿರ್ಲಕ್ಷ್ಯ ವಹಿಸಿದಾಗ ಅವನು ಅಧಿಕಾರ ಚಲಾಯಿಸುವಂತೆ ಆದೇಶ ನೀಡಲು ಹೈಕೋರ್ಟ್‌ಗೆ ಸಲ್ಲಿಸಬಹುದು .

5 ) ಕರ್ತವ್ಯವನ್ನು ಮಾಡಲು ನಿರಾಕರಿಸಿದ ನ್ಯಾಯಾಲಯ ನಿರ್ವಹಿಸುವಂತೆ ನಿರ್ದೇಶಿಸಲು ಅಥವಾ ನ್ಯಾಯಿಕ ಮಂಡಲಿಗೆ ತನ್ನ ಕರ್ತವ್ಯವನ್ನು ಹೈಕೋರ್ಟ್‌ಗೆ ಸಲ್ಲಿಸಬಹುದು .

ವಿನಾಯಿತಿ : – ಮ್ಯಾಂಡಮಸ್ ರಿಟ್‌ನ್ನು ಈ ಕೆಳಗಿನ ಸಂದರ್ಭದಲ್ಲಿ ಸಲ್ಲಿಸುವಂತಿಲ್ಲ ,

1 ) ರಾಷ್ಟ್ರಪತಿಗಳ ವಿರುದ್ಧ

2 ) ರಾಜ್ಯಪಾಲರ ವಿರುದ್ಧ

3 ) ಖಾಸಗಿ ವ್ಯಕ್ತಿಗಳು / ಸಂಸ್ಥೆಗಳ ವಿರುದ್ಧ

3 )ಸರ್ಷಿಯೊರರಿ ( Certiorari )

ಇದರ ಶಬ್ದಾರ್ಥವು ” To be certified or to be Informed ” ಎಂದಾಗಿದೆ . ಬಳಿ ಉನ್ನತ ನ್ಯಾಯಾಲಯವು ಕೆಳ ನ್ಯಾಯಾಲಯ ಅಥವಾ ಟ್ರಿಬ್ಯುನಲ್ಸ್‌ಗಳಿಗೆ ತಮ್ಮ ಇರುವ ಮೊಕದ್ದಮೆಗಳನ್ನು ಕೇಳುವುದಾಗಿದ್ದು ವರ್ಗಾಯಿಸುವಂತೆ ಹಾಗೂ ಕೆಳನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ತೀರ್ಪು ನೀಡದಂತೆ ತಡೆಯಲು ಮೊಕದ್ದಮೆ ವರ್ಗಾವಣೆ . ಇದನ್ನು ಖಾಸಗಿ ವ್ಯಕ್ತಿಗಳ ವಿರುದ್ಧ , ಶಾಸನ ಸಭೆಗಳ ವಿರುದ್ಧ ತರುವಂತಿಲ್ಲ .

4 ) ಕೊ – ವಾರೆಂಟ್ Quo warranto

ಯಾವುದಾದರೂ ಒಬ್ಬ ವ್ಯಕ್ತಿ ಅಕ್ರಮವಾಗಿ ಸಾರ್ವಜನಿಕ ಹುದ್ದೆಯನ್ನು ಅಥವಾ ಸರ್ಕಾರದ ಉನ್ನತ ಸ್ಥಾನವನ್ನು ಅಕ್ರಮವಾಗಿ ಪಡೆದಿದ್ದರೆ ಅಂತವರ ವಿರುದ್ಧ ಈ ರಿಟ್ ಮೂಲಕ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು .

Quo warranto ಎಂದರೆ ಶಬ್ದಾರ್ಥದಲ್ಲಿ by what authority or warrant oond . ರಿಟ್ ನ್ನು ಸಾಮಾನ್ಯವಾಗಿ ಜೇಷ್ಠತೆಯ ಆಧಾರವನ್ನು ಪರಿಗಣಿಸದೆ ಕೆಲವೊಮ್ಮೆ ಸರ್ಕಾರಗಳು ತಮಗೆ ಬೇಕಾದ ವ್ಯಕ್ತಿಗಳನ್ನು ಉನ್ನತ ಹುದ್ದೆಗೆ ತಂದಾಗ ಈ ರಿಟ್‌ನ ಮೂಲಕ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಾರೆ .

5 ) ಪ್ರೊಹಿಬಿಷನ್ Prohibition

ಪ್ರೊಹಿಬಿಷನ್ ಎಂಬುದು ಕೆಳಗಿನ ನ್ಯಾಯಾಲಯವು ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ತೀರ್ಪು ನೀಡದಂತೆ ತಡೆಯಲು ಸುಪ್ರಿಂ ಕೋರ್ಟ್ ಅಥವಾ ಹೈ ಕೋರ್ಟ್ ಈ ರಿಟ್‌ನ್ನು ಹೊರಡಿಸುತ್ತದೆ .

ಈ ರಿಟ್‌ನ್ನು ನ್ಯಾಯಿಕ ಅಧಿಕಾರವನ್ನು ಹೊಂದಿರುವವರ ವಿರುದ್ಧ ಮಾತ್ರ ಸಲ್ಲಿಸಬೇಕಾಗಿರುವುದರಿಂದ ಇತರ ಅಧಿಕಾರಿಗಳ ತಮ ಅರ್ಥ ವಿರುದ್ಧ ಸಲ್ಲಿಸುವಂತಿಲ್ಲ . Prohibition ಶಬ್ದಾರ್ಥದ to forbid .

ಇದನ್ನು ನ್ಯಾಯಾಂಗೀಯ ಅಥವಾ ಅರೆ ನ್ಯಾಯಾಂಗೀಯ ಪ್ರಾಧಿಕಾರಗಳ ವಿರುದ್ಧ ಹೊರಡಿಸಬಹುದು ಆದರೆ ಇದನ್ನು ವೈಯಕ್ತಿಕ ವ್ಯಕ್ತಿಗಳು ಅಥವಾ ಸಂಸ್ಥೆ ಆಡಳಿತಾತ್ಮಕ & ಶಾಸನಾತ್ಮಕ ಪ್ರಾಧಿಕಾರಗಳ ವಿರುದ್ಧ ಜಾರಿಗೊಳಿಸುವಂತಿಲ್ಲ .

ಸಂವಿಧಾನ ಪರಿಹಾರ ಹಕ್ಕು ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಅವುಗಳಿಗೆ ಕಾನೂನಿನ ರಕ್ಷಣೆ ನೀಡುವ ರಿಟ್‌ಗಳನ್ನು ಒದಗಿಸಿದೆ .

ಇದರ ಮಹತ್ವವನ್ನು ಅರಿತ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನ ಪರಿಹಾರ ಹಕ್ಕನ್ನು ಭಾರತದ ‘ ಸಂವಿಧಾನದ ಆತ್ಮ ಹಾಗೂ ಹೃದಯ ‘ ಇದ್ದಂತೆ ಎಂದಿದ್ದಾರೆ .

ಸಂವಿಧಾನ ಪರಿಹಾರ ಹಕ್ಕನ್ನು ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಸಂವಿಧಾನದ ಮೂರನೇ ಭಾಗದಲ್ಲಿ 32 ನೇ ವಿಧಿಯಲ್ಲಿ ಸೇರಿಸಲಾಯಿತು .

ಇಂತಹ ಸಂವಿಧಾನ ಪರಿಹಾರ ಹಕ್ಕನ್ನು ಮೂಲಭೂತ ಹಕ್ಕು ಎಂದು 1950 , 1959 , 1963 ರಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತು

 

ಸಶಸ್ತ್ರ ಪಡೆಗಳ ಹಕ್ಕುಗಳಿಗೆ ಸಂಬಂಧಿಸಿದ ಸಂಸತ್ತಿನ ಅಧಿಕಾರ

ವಿಧಿ 33 , ಈ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಸಶಸ್ತ್ರ ಬಲಗಳು ಮುಂತಾದವುಗಳಿಗೆ ಅನ್ವಯಿಸುವಲ್ಲ . ಅವುಗಳನ್ನು ಮಾರ್ಪಡಿಸಲು ಸಂಸತ್ತಿಗಿರುವ ಅಧಿಕಾರ

ಸಂಸತ್ತು ಕಾನೂನಿನ ಸದಸ್ಯರಿಗೆ ಮೂಲಕ ಸಶಸ್ತ್ರಪಡೆಯ ಸಾರ್ವಜನಿಕ ರಕ್ಷಣೆ ನೀಡುವ ಜವಾಬ್ದಾರಿ ಹೊಂದಿರುವ ಬಲಗಳ ಸದಸ್ಯರಿಗೆ ಗುಪ್ತ ವಾರ್ತೆಗಾಗಿ ರಾಜ್ಯ ಸ್ಥಾಪಿಸಿರುವ ಯಾವುದೋ ಒಂದು ದಳದಲ್ಲಿ ನಿಯೋಜಿಸಿರುವ ವ್ಯಕ್ತಿಗಳಿಗೆ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಅವರ ಕರ್ತವ್ಯ ನಿರ್ವಹಣೆ ಮತ್ತು ಶಿಸ್ತುಪಾಲನೆಗೆ ಸಂಬಂಧಿಸಿದಂತೆ ಮಾರ್ಪಡಿಸಬಹುದು ಅಥವಾ ರದ್ದುಗೊಳಿಸುವ ಅಧಿಕಾರವನ್ನು ಹೊಂದಿದೆ ಎಂದು ಸಂವಿಧಾನದ 33 ನೇ ವಿಧಿ ತಿಳಿಸುತ್ತದೆ .

ಲಷ್ಕರೀ ಕಾನೂನು ಜಾರಿಯಲ್ಲಿರುವ ಪ್ರದೇಶಗಳಿಗೆ ಹಕ್ಕುಗಳ ನಿರ್ಬಂಧ

 ವಿಧಿ 34. ಯಾವುದೇ ಪ್ರದೇಶದಲ್ಲಿ ಲಷ್ಕರೀ ಕಾನೂನು ಜಾರಿಯಲ್ಲಿರುವಾಗ ಈ ಭಾಗದಿಂದ ಪ್ರದತ್ತವಾದ ಹಕ್ಕುಗಳ ಮೇಲೆ ನಿರ್ಬಂಧ

ಕೇಂದ್ರದ ಕಾನೂನು ಅಥವಾ ರಾಜ್ಯದ ಸೇವೆಯಲ್ಲಿರುವ ಯಾವುದೇ ವ್ಯಕ್ತಿಯು ಭಾರತ ದೇಶದ ಲಷ್ಕರ್ ಕಾನೂನು ಜಾರಿಯಲ್ಲಿರುವ ಯಾವುದೇ ಪ್ರದೇಶದಲ್ಲಿ ಮತ್ತು ಸುವ್ಯವಸ್ಥೆಯ ಕಾರ್ಯಕ್ಕೆ ಸಂಬಂಧಿಸಿದಂತೆ ಅವರಿಗೆ ರಕ್ಷಣೆ ನೀಡಬಹುದು ಅಂಥಹ ಪ್ರದೇಶದಲ್ಲಿ ಲಷ್ಕರ್ ಕಾನೂನಿನ ಮೇರೆಗೆ ಯಾವುದೇ ಶಿಕ್ಷೆ ಆದೇಶವನ್ನು ವಿಧಿಸಿದ ದಂಡನೆಯನ್ನು ಮಾಡಲಾದ ಮುಟ್ಟುಗೋಲಿನ ಆದೇಶವನ್ನು ಸಿಂಧುಗೊಳಿಸಬಹುದು ಎಂದು ಸಂವಿಧಾನದ 34 ನೇ ವಿಧಿ ತಿಳಿಸುತ್ತದೆ .

 ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತ ಸಂಸತ್ತಿಗೆ ಕಾನೂನು ಮಾಡುವ

ಅಧಿಕಾರ

ವಿಧಿ 35. ಈ ಭಾಗದ ಉಪಬಂಧಗಳನ್ನು ಜಾರಿಗೆ ತರುವುದಕ್ಕಾಗಿ ಕಾನೂನು ರಚನೆ

ಭಾರತದ ಸಂಸತ್ತು ಕಾನೂನಿನ ಮೂಲಕ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತಹ ಕೆಲವು ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿದೆ . ಆದರೆ , ರಾಜ್ಯ ವಿಧಾನ ಮಂಡಲಕ್ಕೆ ಇಂತಹ ಕಾನೂನು ತರುವ ಅಧಿಕಾರವಿರುವುದಿಲ್ಲ . ಎಂದು ಸಂವಿಧಾನದ 35 ನೇ ವಿಧಿ ತಿಳಿಸುತ್ತದೆ

 


0 Comments

Leave a Reply

Avatar placeholder

Your email address will not be published. Required fields are marked *