ಸಂವಿಧಾನ ದಿನ । Constitutional Day

ಸಂವಿಧಾನ ದಿನ ( Constitutional Day ) 

ನವೆಂಬರ್ 26

ಸಂವಿಧಾನ ದಿನ, constitutional day, national constitution day, constitution day india, fundamental duties day, constitution of day

ಸಂವಿಧಾನ ದಿನ, constitutional day, national constitution day, constitution day india, fundamental duties day, constitution of day

ಭಾರತದ ಸಂವಿಧಾನವನ್ನು ನವೆಂಬರ್ 26 , 1949 ರಂದು ಅಂಗೀಕರಿಸಲಾಯಿತು . ಸಂವಿಧಾನವನ್ನು ಅಂಗೀಕರಿಸಿದ ದಿನವಾದ ನವೆಂಬರ್ 26 ನ್ನು ದೇಶಾದ್ಯಂತ

ಸಂವಿಧಾನ ದಿನ ” ವಾಗಿ ಆಚರಿಸಿ ಜನರಲ್ಲಿ ಸಂವಿಧಾನದ ಬಗ್ಗೆ ಮತ್ತು ಸಂವಿಧಾನ ರಚನಾಕಾರರ ಬಗ್ಗೆ , ಮಾಹಿತಿ ನೀಡುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ .

ಸಂವಿಧಾನದ ಶಿಲ್ಪಿ ” ಡಾ | ಬಿ.ಆರ್ . ಅಂಬೇಡ್ಕರ್ ರವರ 125 ನೇ ವರ್ಷದ ಜನ್ಮ ದಿನಾಚರಣೆಯಾದ 2015 ನವೆಂಬರ್ 26 ರಂದು ಮೊದಲ ಬಾರಿಗೆ ಭಾರತ ಸಂವಿಧಾನ ದಿನವನ್ನು ದೇಶಾದ್ಯಂತ ಆಚರಿಸಲಾಗಿದೆ .

ಇಂತಹ ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾರತದ 2015 ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 2 ದಿನಗಳ ಕಾಲ ಸಂವಿಧಾನದ ಕುರಿತು ಚರ್ಚೆ ನಡೆಸಲಾಯಿತು .

ಭಾರತದ ಗಣರಾಜ್ಯೋತ್ಸವದ ಹಿನ್ನಲೆ

1930 ರಂದು ಅಂದಿನ ಜನವರಿ 26 , ಹೋರಾಟಗಾರರು ಸ್ವಾತಂತ್ರ್ಯ “ ಪೂರ್ಣ ಸ್ವರಾಜ್ಯ ದಿನ ” ವನ್ನು ಆಚರಿಸಿದರು . ಆದುದ್ದರಿಂದ ಭಾರತ ದೇಶದಲ್ಲಿ ಜನವರಿ 26 ಮಹತ್ವದ ದಿನವಾಗಿದೆ .

ಈ ದಿನದ ಅಂಗವಾಗಿ ಭಾರತದ ಸಂವಿಧಾನವನ್ನು ಜನವರಿ 26 , 1950 ರಂದು ಭಾರತದ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು .

ಈ ಹಿನ್ನೆಲೆಯಲ್ಲಿ ಜನವರಿ 26 ನ್ನು ದೇಶಾದ್ಯಂತ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ . ಅಂದು ಭಾರತದ ರಾಷ್ಟ್ರಪತಿಗಳು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ .

1950 ರಿಂದ ಭಾರತ ದೇಶದ ಗಣರಾಜ್ಯೋತ್ಸವದ ಸಮಾರಂಭಕ್ಕೆ ವಿದೇಶದ ಮುಖ್ಯ ಅತಿಥಿಗಳನ್ನು ಆಹ್ವಾನಿಸಲಾಗುತ್ತಿದೆ

.1950 ರಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಸುಕಾರ್ನೊ ಭಾರತದ ಗಣರಾಜ್ಯೋತ್ಸವದ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ

. ಪ್ರತಿ ವರ್ಷವೂ ಕೂಡ ಭಾರತದ ಗಣರಾಜ್ಯೋತ್ಸವಕ್ಕೆ ಬೇರೆ ದೇಶದ ಗಣ್ಯರನ್ನು ಆತಿಥಿಯಾಗಿ ಆಹ್ವಾನಿಸಲಾಗುತ್ತದೆ . ಭಾರತದ ದೇಶವು ‘ ವಿವಿಧತೆಯಲ್ಲಿ ಏಕತೆ ‘ ಹೊಂದಿದೆ .

ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿಭಿನ್ನ ಸಂಸ್ಕೃತಿ , ಭೌಗೋಳಿಕ , ಸಾಮಾಜಿಕ ವ್ಯವಸ್ಥೆ ಹೊಂದಿವೆ .

ಇಂತಹ ವೈವಿಧ್ಯತೆಯನ್ನು ಜಗತ್ತಿಗೆ ತೋರಿಸುವ ಸಂದರ್ಭವೇ “ ಗಣರಾಜ್ಯೋತ್ಸವ ಪೆರೇಡ್ “ಪ್ರತಿವರ್ಷ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ದೇಶದ ರಕ್ಷಣಾ ವ್ಯವಸ್ಥೆ , ಸಾಂಸ್ಕೃತಿಕ , ಭೌಗೋಳಿಕ ವೈವಿಧ್ಯತೆ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಸ್ತಬ್ಧ ಚಿತ್ರವನ್ನು  ಜನವರಿ 26 ರಂದು  ಗಣರಾಜ್ಯೋತ್ಸವದಲ್ಲಿ  ಪ್ರದರ್ಶಿಸಲಾಗುತ್ತದೆ

ಭಾರತ ಸಂವಿಧಾನದ ಜಾರಿ ( Enforcement of Constitution of India )

ಭಾರತದ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೊಳಿಸಿ ಅದನ್ನು ಸಂವಿಧಾನದ ಪ್ರಾರಂಭದ ದಿನ “ The date of Comencement ” ಎಂದು ನಿಗಧಿ ಪಡಿಸಲಾಯಿತು .

ಅಂದಿನಿಂದ ಭಾರತದ ಸಂವಿಧಾನವು ಕಾಶ್ಮೀರವನ್ನು ಹೊರತು ಪಡಿಸಿ ಭಾರತದ ಸಂಪೂರ್ಣ ಭೂಪ್ರದೇಶಕ್ಕೆ ಜಾರಿಯಾಯಿತು .

ಜನವರಿ 26 ನ್ನು ಪ್ರಾರಂಭದ ದಿನವಾಗಿ ಆಯ್ಕೆ -ಭಾರತ ಸಂವಿಧಾನವನ್ನು ಜಾರಿಗೆ ಜನವರಿ 26 ರಂದು ತರಲು ಕಾರಣ ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆದ 1929 ರ ಲಾಹೋರ್ ಅಧಿವೇಶನದಲ್ಲಿ ಮುಂದಿನ ವರ್ಷ ಅಂದರ 1930 ಜನವರಿ 26 ರನ್ನು ಪೂರ್ಣ ಸ್ವರಾಜ್ಯ ದಿನ ಎಂದು ಆಚರಿಸಲು ನಿರ್ಧರಿಸಲಾಯಿತು .

ಅದರ ಜ್ಞಾಪಕಾರ್ಥವಾಗಿ ಜನವರಿ 26 ರಂದು ಭಾರತದ ಸಂವಿಧಾನವನ್ನು ಜಾರಿಗೆ ತರಲಾಯಿತು . ಅದೇ ರೀತಿ ಜಮ್ಮು ಕಾಶ್ಮೀರದ ಸಂವಿಧಾನ ವನ್ನು ಜನವರಿ 26 1957 ರಲ್ಲಿ ಜಾರಿಗೆ ತರಲಾಯಿತು

Comments

Leave a Reply

Your email address will not be published. Required fields are marked *