
ಪರಿವಿಡಿ
ಷಟ್ಟದಿ
shatpadi in kannada,bhamini shatpadi in kannada,vardhaka shatpadi examples in kannada,shatpadi kannada grammar,ಷಟ್ಟದಿ,kannada gramar
ಷಟ್ಟದಿಯ ಇತಿಹಾಸ
ಷಟ್ಟದಿ ಮೊಟ್ಟಮೊದಲು ಕಾಣಬರುವುದು ಚಂದ್ರರಾಜನ ‘ ಮದನ ತಿಲಕದಲ್ಲಿ ” ( ಕಾಲ 11 ನೇ ಶತಮಾನ ) ಅನಂತರ ಬೇರೆ ಬೇರೆ ಶಾಸನಗಳಲ್ಲಿ ಷಟ್ಟದಿ ಕಾಣಬರುತ್ತದೆ . ಉದಾ : ಚಿತ್ರದುರ್ಗ ಶಾಸನ , ಚಡಚಣ ಶಾಸನ , ಅಮ್ಮಿನಭಾವಿ ಶಾಸನ , ಗಂಗಾಪುರ ಶಾಸನ , ಇತ್ಯಾದಿ . ಷಟ್ಟದಿಯು ಕರ್ನಾಟಕ ವಿಷಯ ಜಾತಿಯ ಛಂದಸ್ಸು ಗಳಲ್ಲೆಲ್ಲಾ ಅತ್ಯಂತ ಪ್ರಸಿದ್ಧವಾದದ್ದು . ಇದರ ಲಕ್ಷಣವನ್ನು ಮೊದಲು ನಾಗವರ್ಮನು ಗ್ರಂಥವಾದ ಛಂದೋಬುದಿ ಯಲ್ಲಿ ತನ್ನ ಹೇಳುತ್ತಾನೆ . ಇವನಲ್ಲದೆ ಜಯಕೀರ್ತಿ , ಶಾರ್ಙ್ಗದೇವ ಮೊದಲಾದವರು ಷಟ್ನದಿಯ ಪ್ರಸ್ತಾಪ ಮಾಡುತ್ತಾರೆ . ಷಟ್ನದಿಯ ಮೂಲದಲ್ಲಿ ಇದ್ದದ್ದು ಒಂದೇ ಒಂದು . ಅಂಶಗಳ ಆಧಾರದ ಮೇಲೆ ರಚನೆಯಾದಂಥದ್ದು . ಅಂಶ ಷಟ್ಟದಿ : – ಇದರಲ್ಲಿ ಒಟ್ಟು 6 ಚರಣಗಳಿ ರುತ್ತವೆ . ಪೂರ್ವಾಧದಂತೆಯೇ ಉತ್ತಾರಾರ್ಧವೂ ಇರುತ್ತವೆ . ಮೊದಲ ಅರ್ಧದ ಚರಣಗಳಲ್ಲಿ ಮೊದಲಿಂದ ಕ್ರಮವಾಗಿ 6 ಚರಣಗಳು ಇದ್ದು 3 ನೇ ಚರಣದಲ್ಲಿ ಕೊನೆಯಲ್ಲಿ ಒಂದು ರುದ್ರ ಗಣವೂ ಸೇರಿ ಒಟ್ಟು ಏಳು ಗಣಗಳಿರುತ್ತವೆ.ಇದೇ ನಿಯಮ ಉಳಿದ ಅರ್ಧಪದ್ಯಕ್ಕೂ ಅನ್ವಯವಾಗುತ್ತದೆ
ಅಂಶಗಣಾನ್ವಿತವಾದ ಮೂಲ ಷಟ್ಟದಿ 12 ನೇಯ ಶತಮಾನದಲ್ಲಿ ಮಾತ್ರಾಗಣಗಳಾಗಿ ಪರಿವರ್ತಿತವಾದುದೇ ಅಲ್ಲದೆ ಆರು ಷಟ್ಟದಿಗಳಾಗಿ ಕವಲೊಡೆಯಿತು . ಈ ಆರು ಷಟ್ನದಿಗಳ ಲ್ಲದೆ ರಾಘವಾಂಕನು ತನ್ನ ‘ ವೀರೇಶ ಚರಿತೆ’ಯಲ್ಲಿ ‘ ಉದ್ದಂಡ ಷಟ್ಟದಿ’ಯೊಂದನ್ನು ಬಳಸಿದ್ದಾನೆ . ಆರು ಷಟ್ಟದಿಗಳೆಂದರೆ : 1 ) ಶರ ಷಟ್ಟದಿ 2 ) ಕುಸುಮ ಷಟ್ಟದಿ 3 ) ಭೋಗ ಷಟ್ಟದಿ 4 ) ಭಾಮಿನೀ ಷಟ್ನದಿ 5 ) ಪರಿವರ್ಧಿನಿ ಷಟ್ಟದಿ 6 ) ವಾರ್ಧಕ ಷಟ್ಟದಿ
ಶರ ಷಟ್ಟದಿ
ಆರು ಸಾಲುಗಳುಳ್ಳ ಪದ್ಯವಾಗಿದ್ದು , ಒಂದು , ಎರಡು ನಾಲ್ಕು ಐದನೆಯ ರೀತಿಯಾಗಿದ್ದು , ಒಂದೇ ಅವೆಲ್ಲಾ ನಾಲ್ಕು ಮಾತ್ರೆಗಳಿಂದ ಕೂಡಿರುವ ಎರಡೆರಡು ಗಣಗಳು ಪ್ರತಿ ಸಾಲಿನಲ್ಲಿಯೂ ಕಂಡು ಬರುತ್ತದೆ . ಉಳಿದ 3 ಹಾಗೂ 6 ನೇ ಚರಣಗಳು ಒಂದೇ ರೀತಿಯಾಗಿದ್ದು , ಪ್ರತಿ ಸಾಲಿನಲ್ಲಿ ನಾಲ್ಕು ಮಾತ್ರೆಯ 3 ಗಣಗಳು ಹಾಗೂ ಕೊನೆಯಲ್ಲಿ ಒಂದು ಗುರು ಬರುತ್ತದೆ .
ಉದಾ : –
ಕೇಶದ ವಿಧ ವಿಧ 4 : 4
ಪಾಶದ ಹರಿದುವಿ 4 : 4
ಲಾಸದಿ ಸತ್ಯವ ತಿಳಿವನ ವೇ 4 : 4 : 4 :
ಕುಸುಮ ಷಟ್ಟದಿ
6 ಸಾಲುಗಳುಳ್ಳ ಪದ್ಯವಾಗಿದ್ದು , 1 , 2 & 4 , 5 ನೇ ಸಾಲು ಗಳಲ್ಲಿ 5 ಮಾತ್ರೆಯ ಎರಡೆರಡು ಗಣಗಳಿಂದ ಕೂಡಿರುತ್ತವೆ . 3 & 6 ನೇ ಸಾಲಿನಲ್ಲಿ ಐದೈದು ಮಾತ್ರೆಯ ಮೂರು ಗಣಗಳಿಂದ ಹಾಗೂ ಕೊನೆಯಲ್ಲಿಒಂದು ಗುರುವಿನಿಂದ ಕೂಡಿದೆ .
ಉದಾ :
ನಾಡುಮನ ಸಿಜನೊಲವಿ = 5 : 5
ನಾಡು ವೆಡೆ ಸಂತತಂ = 5 : 5
ಬೀಡು ರತಿ ಪತಿಗೆ ಸತ ತ ನಿಧಾನ ವು = 5 : 5 : 5 :
ಭೋಗ ಷಟ್ಟದಿ
1 , 2 & 4 , 5 ನೇ ಸಾಲಿನಲ್ಲಿ 3 ಮಾತ್ರೆಯ ನಾಲ್ಕು ನಾಲ್ಕು ಗಣಗಳೂ , 3 , 6 ನೇಯ ಚರಣಗಳಲ್ಲಿ 3 ಮಾತ್ರೆಯ ಆರು ಆರು ಗಣಗಳೂ ಕೊನೆಯಲ್ಲಿ ಒಂದು ಗುರು ಬಂದಿರುತ್ತದೆ .
ಉದಾ :
ಪುರದ ರಾಜ ಸತ್ತ ನವಗೆ = 3 : 3 : 3 : 3
ವರ ಕು ಮಾರ ರಿಲ ದಿರಲು = 3 : 3 : 3 : 3
ಕರಿಯ ಕೈಗೆ ಕುಸುಮ ಮಾಲೆ ಯಿತ್ತು ಮುರದೊಳು = 3 : 3 : 3 : 3 : 3 : 3 :
ಪರಿವರ್ಧಿನಿ ಷಟ್ಟದಿ
1 , 2 & 4 , 5 ನೇ ಚರಣಗಳಲ್ಲಿ ನಾಲ್ಕು ನಾಲ್ಕುಯ ಮಾತ್ರೆಯ ನಾಲ್ಕು ಗಣಗಳು , ಮೂರು & 6 ನೇಯಚರಣಗಳಲ್ಲಿ ನಾಲ್ಕು , ನಾಲ್ಕು ಮಾತ್ರೆಯ ಆರು ಗಣಗಳು ಒಂದು ಕೊನೆಯಲ್ಲಿ ಒಂದು ಗುರು ಉಳಿಯುತ್ತದೆ .
ಉದಾ :
ಸರಸರ ಸಂತಪ ಣೆಯ ಮನೆ ಸುಗ್ಗಿಯ = 4 : 4 : 4 : 4
ಮೊರವಾ ಗರ ಭೂ ವಾಲಯ ವಪ್ಪಂ = 4 : 4 : 4 : 4
ತಿರೆ ಪೇ ಅದನಮ್ ರುಕವನು ದೇಪಮ ಹೀಪತಿ ಕನ್ನಡಿ ಸಿ = 4 4 : 4 : 4 : 4 : 4 :
ಭಾಮಿನಿ ಷಟ್ಟದಿ
1 , 2 & 4 , 5 ನೇಯ ಚರಣಗಳಲ್ಲಿ 3 , 4 , ಮಾತ್ರೆಯಂತೆ ಕ್ರಮವಾಗಿ ನಾಲ್ಕು , ನಾಲ್ಕು ಗಣಗಳಿವೆ . 3 , 6 ನೆಯ ಸಾಲಿನಲ್ಲಿ ಕ್ರಮವಾಗಿ 3 , 4 ಮಾತ್ರೆಗಳಂತೆ 6 ಗಣಗಳೂ ಕೊನೆಯಲ್ಲಿ ಒಂದೊಂದು ಗುರು ಬರುತ್ತದೆ .
ಉದಾ : –
ಕೇಳು ಜನಮೇ ಜಯ ಧರಿತ್ರೀ = 3 : 4 , 3 : 4
ವಾಲ ಕಾರವ ನೃಪನ ತಂದು ಕೃ = 3 : 4 , 3 : 4
ಪಾಳುವಿನ ಚರಣಾಗ್ರದಲ್ಲಿ ಕೆಡಹಿದನು ಕಲಿ ಪಾರ್ಥ = 3 : 4 : 3 : 4 : 3 : 4 :
ವಾರ್ಧಕ ಷಟ್ಟದಿ
1 , 2 & 4 , 5 ನೆಯ ಚರಣಗಳಲ್ಲಿ ಐದೈದು ಮಾತ್ರೆಯ ನಾಲ್ಕು ಗಣಗಳು ಬರುತ್ತವೆ . 3 , 6 ನೆಯ ಸಾಲಿನಲ್ಲಿ ಐದೈದು ಮಾತ್ರೆಯ 6 ಗಣಗಳು ಬಂದು , ಕೊನೆಯಲ್ಲಿ 1 ಗುರುವೂ ಬ ೦ ದಿದೆ .
ಉದಾ :
ಎಡೆಲಾಯ್ಡು ಒಂದ ತ ಪಂ ಹಿಡಿದು ಸಾಧಿಸದೆ = 5 : 5 : 5 : 5
ಕಡೆತನಕ ಬಂದಲೇ ಸಿಂಗೆತಲೆ ದೂಗತಲೆ = 5 : 5 : 5 : 5
ಯೊಡೆವುದೇ ಜೀನೆಯರಿ ಯದ ನೀರ ಸರಸೇಕೆ ಮುಟ್ಟಿಸಿದ ನಬುಜವಭ ನು = 5 : 5 : 5 : 5 : 5 : 5 :
ಉದ್ದಂಡ ಷಟ್ಟದಿ
ಈ ಷಟ್ಟದಿಯಲ್ಲಿ ಆರು ಸಾಲುಗಳಿದ್ದು , ಒಂದು ಎರಡು & ನಾಲ್ಕು , 5 ನೇ ಸಾಲಿನಲ್ಲಿ ನಾಲ್ಕು ಮಾತ್ರೆಯ ಐದು ಗಣಗಳು ಹಾಗೂ 3 & 6 ನೇ ಸಾಲಿನಲ್ಲಿ 4 ಮಾತ್ರೆಯ 6 ಗಣ ಕಂಡು ” ಬರುತ್ತದೆ . ರಾಘವಾಂಕನ ವಿರೇಶ ಚರಿತೆಯಲ್ಲಿ ಗಮನಿಸಬಹುದು . ಈ ಷಟ್ನದಿಯನ್ನು ಪ್ರಥಮವಾಗಿ ಬಳಸಿದ ಕವಿ ರಾಘವಾಂಕ ಹಾಗೂ ಇವನೇ ಈ ಷಟ್ಟದಿಗೆ ಅಂತ್ಯವಾಗಿದ್ದಾನೆ .
ಉದಾ :
ಪರಿಣಾಮದ ಕಣಿ ಶಾಂತಿಯ ನಿಧಿ ಭಕ್ತಿಯ ಸಾ = 4 : 4 : 4 : 4 : 4
ಗರಮೇ ಕೋನಿಷ್ಠೆಯ ಹರಸತಿ ಸಾಮರ್ಥ್ಯದ = 4 : 4 : 4 : 4 : 4
ತರು ನೀತಿಯ ಕಡಲುದಯಾಗಾರಂ ಪುಣ್ಯದ ಪರಿಜಂ ಸತ್ಯದಸದರಾ = 4 : 4 : 4 : 4 : 4 : 4 : 4 : 4
ತಲ ಷಟ್ಟದಿ
ಪ್ರತಿ ಚರಣದಲ್ಲಿ 3 ಮಾತ್ರೆಯ 2 ಗಣಗಳು * ಪ್ರತಿ ಹಿರಿಯ ಚರಣದಲ್ಲಿ 3 ಮಾತ್ರೆಯ 3 ಗಣಗಳು ಮತ್ತು ಕೊನೆಗೊಂದು ಗುರು ಬರುತ್ತದೆ . ಇದು ಹೊಸಗನ್ನಡದಲ್ಲಿ ಬಳಕೆಯಾಗಿದೆ
ಉದಾ :
ನನ್ನಹರಣ = 3 : 3
ನಿನಗೆ ಶರಣ = 3 : 3
ಸಕಲ ಕಾರ್ಯಕಾರಣ = 3 : 3 : 3 :
ಜಲ ಷಟ್ಟದಿ
ಪ್ರತಿ ಕಿರಿ ಚರಣದಲ್ಲಿ 3 ಮಾತ್ರೆಯ ಗಣದ ಮುಂದೆ 4 ಮಾತ್ರೆಯ ಗಣ . ಪ್ರತಿ ಹಿರಿಯ ಚರಣದಲ್ಲಿ 3 ಮಾತ್ರೆಯ ಗಣದ ಮುಂದೆ 4 ಮಾತ್ರೆಯ ಗಣ , ಮತ್ತೊಂದು 3 ಮಾತ್ರೆಯ ಗಣ ಮೇಲೊಂದು ಗುರು ಬರುತ್ತದೆ .
ಉದಾ :
ದೋಣಿ ಸಾಗಲಿ = 3 : 4
ಮುಂದೆ ಹೋಗಲಿ = 3 : 4
ದೂರ ತೀರವ ಸಾಗಲಿ = 3 : 4 : 3