ಶಾಸನಗಳ ಮಹತ್ವ

ಶಾಸನಗಳ ಮಹತ್ವ,shasana, shasana meaning in kannada ,karnataka history in kannada , karnataka history,shasanagalu in kannada

shasana, shasana meaning in kannada ,karnataka history in kannada , karnataka history,shasanagalu in kannada

ಶಾಸನಗಳ ಮಹತ್ವ ( Importance of the Inscriptions ) :

ಆಸ್ಥಾನದ ಕವಿಗಳು ಅಥವಾ ರಾಜನ  ಆಸ್ಥಾನದ ನೌಕರರು ರಚಿಸಲ್ಪಡುತ್ತಿದ್ದ ಶಾಸನಗಳು ಲಭ್ಯವಿರುವುದರಿಂದ ,

ಶಾಸನಗಳು ಸಾಮಾಜ್ಯದ ಎಲ್ಲೆ ( Extention of Empire ) ಯನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತವೆ .

ಉದಾ : ಆಶೋಕನ ಶಾಸನ ಗಳನ್ನು ಆಧರಿಸಿಯೆ ಅವನ ಸಾಮ್ರಾಜ್ಯದ ಎಲ್ಲೆಯನ್ನು ಗುರುತಿಸಲಾಗಿದೆ ಕರ್ನಾಟಕದ ಅರ್ಧಕ್ಕೂ, ಹೆಚ್ಚು ಭಾಗ ಆಶೋಕನ ಸಾಮ್ರಾಜ್ಯದಲ್ಲಿ ಸೇರ್ಪಡೆಯಾಗಿದ್ದ ಅಂಶ ಶಾಸನಗಳಿಂದ ತಿಳಿದುಬರುತ್ತದೆ .

ಆಳುವ ಆರಸನ ಜೀವನ ( Life of a King ) ಕ್ಕೆ ಸಂಬಂಧಿಸಿದ ಕಾಲ ,

ಘಟನಾವಳಿಗಳು ಮತ್ತು ಅವನ ಸಾಧನೆಗಳನ್ನು ತಿಳಿದುಕೊಳ್ಳಬಹುದು .

ಶಾಸನವನ್ನು ಹೊರಡಿಸಿದ ಕಾಲದ ರಾಜಕೀಯ , ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ .

ಹಲವು ಸಲ ಶಾಸನಗಳನ್ನು ಆಧರಿಸಿ ಅಂದಿನ ಕಾಲದ ಕಲಾ ಮತ್ತು ವೈಜ್ಞಾನಿಕ ನೈಪುಣ್ಯತೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ .

ಉದಾ : ಗುಪ್ತರ ಕಾಲದ ಮೆಹರೌಲಿ ಕಬ್ಬಿಣದ ಶಾಸನ

ದತ್ತಿ ಶಾಸನವಾಗಿದ್ದರೆ , ದತ್ತಿಯನ್ನು ನೀಡಿದ ಉದ್ದೇಶ ,

ದತ್ತಿಯ ನಿಯಮಗಳು ಮತ್ತು ದತ್ತಿಯ ನಿಯಮಗಳನ್ನು ಉಲ್ಲಂಘಿಸಿದವರಿಗೆ ಯಾವ ರೀತಿಯ ಶಿಕ್ಷೆಯನ್ನು ನೀಡಲಾಗುತ್ತಿತ್ತು ಎನ್ನುವುದನ್ನು ತಿಳಿದುಕೊಳ್ಳಬಹುದು .

ದತ್ತಿ ನೀಡಿದ ಭೂಮಿಯ ಬೆಲೆ ಮತ್ತು ವಿಸ್ತಾರ ,

ಇನ್ನೂ ಮುಂತಾದ ವಿಷಯಗಳನ್ನು ಶಾಸನ ಒಳಗೊಂಡಿರುತ್ತಿತ್ತು .

ಯುದ್ಧದಲ್ಲಿ ಹೋರಾಡಿ ಮಡಿದ ವೀರರ ಶೌರ್ಯ ಸಾಹಸಗಳನ್ನು , ಸ್ತ್ರೀಯರ ಸ್ಥಾನಮಾನಗಳನ್ನು ತಿಳಿದುಕೊಳ್ಳಲು ಸಹಾಯಕವಾಗಿವೆ

. ರಾಜ ಮಹಾರಾಜರು ಮಾತ್ರವಲ್ಲದೆ , ಜನಸಾಮಾನ್ಯರೂ ಕೂಡ ಶಾಸನಗಳಿಂದ ತಿಳಿದುಕೊಳ್ಳಬಹುದು . ದೇವಾಲಯಗಳನ್ನು ನಿರ್ಮಿಸಿರುವ ವಿಚಾರವನ್ನು ಕಲ್ಯಾಣಿ ಚಾಲುಕ್ಯರ ಈ ರೀತಿಯ ಅಂಶಗಳನ್ನು ಆಧರಿಸಿ , ಶಾಸನಗಳನ್ನು “ ನಂಬಿಕೆಗೆ ಅರ್ಹವಾದ ಮಾಹಿತಿಗಳ ಆಧಾರಗಳು ” ಎಂದು ವಿ . ಎ . ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ .

ಶಾಸನಗಳನ್ನು ಅಧ್ಯಯನ ಮಾಡುವುದರಿಂದ ರಾಜ್ಯಗಳು / ಸಾಮ್ರಾಜ್ಯಗಳ ವಿಸ್ತಾರ ಮತ್ತು ಗಡಿಗಳು , ರಾಜಕೀಯ ಸ್ಥಿತಿ , ರಾಜ್ಯಾಡಳಿತ , ಸಾಮಾಜಿಕ ವ್ಯವಸ್ಥೆ , ಧಾರ್ಮಿಕ ವ್ಯವಸ್ಥೆ , ಆರ್ಥಿಕ ಪರಿಸ್ಥಿತಿ , ತೆರಿಗೆ ಪದ್ಧತಿ , ಕಲೆ , ಇನ್ನೂ ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬಹುದು .

 ಶಾಸನಗಳ ಲೋಪಗಳು ( Defects of the Inscriptions ) :

ಶಾಸನಗಳು ಅತಿಯಾದ ಹೊಗಳಿಕೆ ಮತ್ತು ಉತ್ತೇಕ್ಷೆಯಿಂದ ಕೂಡಿರುತ್ತಿದ್ದವು . ಉದಾ : ತಮ್ಮ ಒಡೆಯರನ್ನು ಕೆಲವೊಮ್ಮೆ ಸಮಸ್ತ ಜಗತ್ತಿಗೆ ಸಾರ್ವಭೌಮರು ಎಂದು ( ಪ್ರಶಸ್ತಿ ಶಾಸನಗಳಲ್ಲಿ ) ಉಲ್ಲೇಖಿಸುತ್ತಿದ್ದರು .

ಕೆಲವೊಮ್ಮೆ ಕೂಟ ಶಾಸನಗಳೂ ಇರುವ ಸಾಧ್ಯತೆ ಇರುತ್ತದೆ . ಶಾಸನಗಳನ್ನು ಐತಿಹಾಸಿಕ ದಾಖಲೆಗಳು ಎಂದು ಪುರಸ್ಕರಿಸುವ ಸಂದರ್ಭದಲ್ಲಿ ಪರಿಶೀಲನೆಗೆ ಒಳಪಡಿಸುವುದು ಒಳಿತು .

 


0 Comments

Leave a Reply

Avatar placeholder

Your email address will not be published. Required fields are marked *