ಶಾಸನಗಳು

ಶಾಸನಗಳು, karnataka history, karnataka shasanagalu in kannada , shasanagalu, karnataka history in kannada, shasanagalu in kannada

ಶಾಸನಗಳು, karnataka history, karnataka shasanagalu in kannada , shasanagalu, karnataka history in kannada, shasanagalu in kannada

ಯೂಪಶಾಸನ ( Sacrificial Inscriptions ) ( ಯಾಗದ ಸಂದರ್ಭದಲ್ಲಿ ಬಲಿ ಕೊಡುವ ಹಸುಗಳನ್ನು ಕಟ್ಟಿಹಾಕಲು ನೆಟ್ಟಿರುವ ಸ್ತಂಬಗಳೇ ಯೂಪಶಾಸನಗಳು ,

ಇಷ್ಟಾರ್ಥ ಸಿದ್ಧಿಗಾಗಿ ಯಾಗಗಳನ್ನು ಮಾಡುವಾಗ ಹಸುಗಳನ್ನು ಬಲಿ ಕೊಡುತ್ತಿದ್ದರು ) ಮತ್ತು ಕೂಟಶಾಸನ ( Fraud inscriptions )

( 1169 ರಲ್ಲಿ ಬಂಡೆಗಲ್ಲು ಶಾಸನದ ಮೂಲಕ ಒಬ್ಬ ಬ್ರಾಹ್ಮಣ ಕನೌಜ್‌ನ ಗಹದ್ವಾಲ ಅರಸ ವಿಜಯಚಂದ್ರನ ಅಧಿಕಾರಿಗೆ ಲಂಚವನ್ನು ನೀಡಿ ಕೃತಕ ಶಾಸನದ ಮೂಲಕ 2 ಹಳ್ಳಿಗಳನ್ನು ದಾನ ಪಡೆದಿರುವುದು ಬೆಳಕಿಗೆ ಬಂದಿದೆ .

ಅಲ್ಲದೆ , ರಾಜನ ಬಟ್ಟೆಗೆ ಹಾಕಿಸಿದ ಶಾಸನಗಳಿಗೆ ವಿರುದ್ಧವಾಗಿ ಸ್ವಹಿತಾಸಕ್ತಿಗೆ ಹಾಕಿಸಿದ ಶಾಸನಗಳನ್ನು ಕೂಟಶಾಸನಗಳು ಎಂದು ಹೇಳಬಹುದು .

ಇವುಗಳಲ್ಲಿ ಸುಳ್ಳು ದಾಖಲೆಗಳು ಇರುತ್ತವೆ ) ಗಳು ಎಂದು ವರ್ಗಿಕರಿಸಬಹುದು . ಇತಿಹಾಸ ರಚನೆಯಲ್ಲಿ ಶಾಸನಗಳು ಯಾವ ರೀತಿಯ ಪಾತ್ರವನ್ನು ವಹಿಸುತ್ತವೆ ಎನ್ನುವುದನ್ನು ಕೆಲವೊಂದು ಉದಾಹರಣೆಗಳ ಮೂಲಕ ತಿಳಿದುಕೊಳ್ಳಬಹುದು .

 ಅಶೋಕ ಮಹಾಶಯನ ಕಿರು ಬಂಡೆ ಶಾಸನಗಳು ( Minor rock edicts of Ashoka ) :

ಕರ್ನಾಟಕದಲ್ಲಿ ಅಶೋಕ ಮಹಾಶಯನ ಒಟ್ಟು 09 ಕಿರು ಬಂಡೆ ( ಗೌಣ ಶಿಲಾ ) ಶಾಸನಗಳು [ ಬ್ರಹ್ಮಗಿರಿ , ಜಟಿಂಗ ರಾಮೇಶ್ವರ , ಸಿದ್ದಾಪುರ ( ಚಿತ್ರದುರ್ಗ ಜಿಲ್ಲೆ ) , ಕೊಪ್ಪಳ ( ಕೊಪ್ಪಳ ಜಿಲ್ಲೆ ) , ಮಸ್ಕಿ ( ರಾಯಚೂರು ಜಿಲ್ಲೆ ) , ಇತ್ಯಾದಿ . ] ಲಭ್ಯವಾಗಿವೆ .

ಈ ಶಾಸನಗಳು ಜನಸಾಮಾನ್ಯರ ಉನ್ನತಿಗೋಸ್ಕರ ನೀತಿ ಬೋಧನೆಗಳನ್ನು ಒಳಗೊಂಡಿರುವ ಶಾಸನಗಳಾಗಿವೆ .  ಈ ಶಾಸನಗಳಿಂದ ಮೌರ್ಯರ ( ಮಗಧ ಸಾಮ್ರಾಜ್ಯ ) ಸಾಮ್ರಾಜ್ಯದ ಗಡಿಗಳನ್ನು ( ದಕ್ಷಿಣ ಭಾರತದಲ್ಲಿ ) ಗುರುತಿಸಲು ಸಾಧ್ಯವಾಗಿದೆ .

ಮಸ್ಕಿಯ ಗೌಣ ಶಿಲಾಶಾಸನ :

ಮಸ್ಕಿಯಲ್ಲಿ ಸಿಕ್ಕಿರುವ ಗೌಣ ಶಿಲಾಶಾಸನ ಅತ್ಯಂತ ಪ್ರಮುಖವಾದುದು . ಕಾರಣ , ‘ ದೇವನಾಂಪಿಯ ಪಿಯದಸಿ ‘ ( ದೇವಾನಾಂಪ್ರಿಯ , ಪ್ರಿಯದರ್ಶಿ ) ಎನ್ನುವ ವಿಶೇಷ ನಾಮ ಅಶೋಕನದೇ ಎನ್ನುವುದು ಈ ಶಾಸನ ಲಭ್ಯವಾಗುವವರೆಗೂ ತಿಳಿದಿರಲಿಲ್ಲ .

ಮಸ್ಕಿ ಶಾಸನದಲ್ಲಿ ಅಶೋಕನನ್ನು ‘ ದೇವನಾಂಪ್ರಿಯ ಅಶೋಕ ‘ ಎಂದು ಸಂಬೋಧಿಸಲಾಗಿದೆ . ಹಾಗಾಗಿ , ಶಾಸನಗಳ ಅಧ್ಯಯನದಿಂದ ಈ ರೀತಿಯ ತೊಡಕುಗಳನ್ನು ನಿವಾರಿಸಿಕೊಳ್ಳಬಹುದು .

 ನಾನ್ ಘಾಟ್ ಗುಹಾಂತರ ದೇವಾಲಯದ ಶಾಸನ :

ಸಾತವಾಹನ ಅರಸ | ನೇ ಶಾತಕರ್ಣಿ ಆಂಗಿಕ ವಂಶದ ನಯನಿಕ ( ನಾಗನಿಕಾ ) ಳನ್ನು ಮದುವೆ ಯಾಗುವುದರ ಮೂಲಕ ತನ್ನ ಶಕ್ತಿಯನ್ನು ವೃದ್ಧಿಸಿಕೊಂಡನು . ಈಕೆ ನಾನ್‌ಘಾಟ್‌ನ ಗುಹಾಂತರ ದೇವಾಲಯದಲ್ಲಿ ಒಂದು ಶಾಸನವನ್ನು ಕೆತ್ತಿಸಿದ್ದಾಳೆ .

ಚಂದ್ರವಳ್ಳಿ ( ಮಯೂರವರ್ಮನ ) ( ಚಿತ್ರದುರ್ಗ ಜಿಲ್ಲೆ ) ಶಾಸನ

( ಕ್ರಿ.ಶ. 345 ) ಕದಂಬ ಆರಸ ಮಯೂರವರ್ಮ ಇಲ್ಲಿರುವ ಕೆರೆಯನ್ನು ದುರಸ್ತಿಗೊಳಿಸಿದ್ದಲ್ಲದೆ , ಉದ್ಯಾನವನವನ್ನು ಸುಂದರಗೊಳಿಸಿದ ವಿಚಾರ ಈ ಶಾಸನದಲ್ಲಿ ಉಲ್ಲೇಖಿತ ವಾಗಿದೆ ಎಂದು ಪ್ರೊ , ಬಿ . ರಾಜಶೇಖರಪ್ಪ ಅಭಿಪ್ರಾಯಪಟ್ಟಿದ್ದಾರೆ .

ತಾಳಗುಂದದ ( ಶಿವಮೊಗ್ಗ ಜಿಲ್ಲೆ ) ಸ್ತಂಭ ಶಾಸನ ( ಕ್ರಿ . ಶ . 450 ) :

ಸಂಸ್ಕೃತ ಭಾಷೆಯಲ್ಲಿ ಇರುವ ಈ ಶಾಸನದಿಂದ ಕದಂಬ ವಂಶದ ಮೂಲ , ಕಾಂಚಿಯಲ್ಲಿ ಮಯೂರ ಶರ್ಮನ ವಿದ್ಯಾಭ್ಯಾಸ , ಅಲ್ಲಿ ಆತ ಅವಮಾನಿತನಾದ ಪ್ರಸಂಗ ,

ಬನವಾಸಿಯಲ್ಲಿ ಪಲ್ಲವರ ಅಧಿಕಾರವನ್ನು ಕೊನೆಗಾಣಿಸಿದ ವಿಷಯ , ಕದಂಬ ರಾಜ್ಯ ಸ್ಥಾಪನೆ , ಕಾಕುಸ್ಥವರ್ಮ ತಾಳಗುಂದದಲ್ಲಿ ಕೆರೆ ಕಟ್ಟಿಸಿದ ವಿಷಯ ,

ಇನ್ನೂ ಮುಂತಾದ ವಿಷಯಗಳನ್ನು ಈ ಶಾಸನದಿಂದ ತಿಳಿದುಕೊಳ್ಳಬಹುದು .

ಹಡಿ ( ಕಾಕುತ್ಸವರ್ಮನ ) ( ಹಾಸನ ಜಿಲ್ಲೆ ) ಶಾಸನ ‘ ( ಸು . ಕ್ರಿ . ಶ . 450 ) :

ಕನ್ನಡದ ಮೊಟ್ಟಮೊದಲ ಶಾಸನವೆಂದರೆ ,

ಹಳ್ಳಿ ಶಾಸನ . ಯುವರಾಜನಾಗಿದ್ದ ಮೃಗೇಶವರ್ಮನು ಪಲ್ಲವರ ವಿರುದ್ಧ ಹೋರಾಡಿ ವಿಜಯವನ್ನು ಸಾಧಿಸುತ್ತಾನೆ

ಆಗ ಶೌರ್ಯವನ್ನು ತೋರಿದ ವಿಜಯ ಅರನಿಗೆ ಹಡಿ ಮತ್ತು ಮೂಳಿವಳ್ಳಿ ಗಳನ್ನು

ಉಂಬಳಿಯಾಗಿ ನೀಡಿದ ವಿಚಾರವನ್ನು ಈ ಶಾಸನ ತಿಳಿಸುತ್ತದೆ

 


0 Comments

Leave a Reply

Avatar placeholder

Your email address will not be published. Required fields are marked *