ಶಬ್ದ
shabda , shabda ratnakaram, shabda meaning, telugu shabda ratnakaram, shabda ratnakaram online, andhra shabda ratnakaram , ಶಬ್ದ
ಶಬ್ದವು ಶಕ್ತಿಯ ಒಂದು ರೂಪವು , ಶಬ್ದದ ಮೂಲಕ ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳನ್ನು ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ . ಶಬ್ದದ ಅಧ್ಯಯನದಿಂದ ನಾ ಮಾತನಾಡುವ ಬಗೆ ಹೇಗೆ ಎಂದು ತಿಳಿದುಕೊಳ್ಳ ಬಹುದು .
ಶರೀರ ಶಾಸ್ತಜ್ಜರು ಉಚ್ಚಾರ ಲೋಪ ದೋಷಗಳ ಪರಿಹಾರ ಕಂಡುಹಿಡಿಯುವುದರಲ್ಲಿ ಶಬ್ದದ ಅಧ್ಯಯನವು ಮುಖ್ಯ ಪಾತ್ರವಹಿಸುತ್ತದೆ .
ಹೃದಯ ಮತ್ತು ಶ್ವಾಸಕೋಶದಿಂದ ಹೊರ ಹೊಮ್ಮುವ ಶಬ್ದದ ಮುಖಾಂತರ , ಅದರಲ್ಲಿರುವ ತೊಂದರೆಯನ್ನು ಕಂಡುಹಿಡಿಯಬಹುದು .
ಭಾಷೆಗಳ ವಿಕಸನಕ್ಕೆ , ಮನುಷ್ಯನು ಉಂಟುಮಾಡುವ ಧ್ವನಿಯ ಏರಿಳಿತವೇ ಮುಖ್ಯ ಕಾರಣ .
ಶಬ್ದವು ದ್ರವ್ಯಗಳ ಮೇಲೆ ಪಲಿಣಾಮ ಉಂಟು ಮಾಡುತ್ತವೆಯೇ ?
ಹದಿನೆಂಟನೇ ಶತಮಾನದಲ್ಲಿ ಜರ್ಮನ್ ವಿಜ್ಞಾನಿ ಹಾಗೂ ಸಂಗೀತಕಾರ ಅರ್ನೆಸ್ಟ್ ಕ್ಲಾಡ್ನೀಯು ಶಬ್ದ ಕಂಪನ ದ್ರವ್ಯದಲ ಕಂಪನ ಉಂಟುಮಾಡುತ್ತದೆ ಎಂಬುದನ್ನು ಪ್ರತಿಪಾದಿಸಿದನು .
ಅವನು ಒಂದು ತಟ್ಟೆಯಲ್ಲಿ ಮರಳನ್ನು ಹರಡಿ , ತಟ್ಟೆಯ ತುದಿಯಲ್ಲಿ ಪಿಟೀಲಿನ ಕಮಾನನ್ನು ಅನ್ನು ಎಳೆದಾಗ ಮರಳನಲ್ಲಿ ಜ್ಯಾಮಿತೀಯ ರೇಖಾ ಕೃತಿಗಳು ಉಂಟಾದವು .
ಪ್ರತಿಧ್ವನಿ
ನೀವು ಯಾವುದಾದರೂ ಬೆಟ್ಟಗುಡ್ಡ ಪ್ರದೇಶಕ್ಕೆ ಭೇಟಿ ನೀಡಿರಬಹುದು . ದೂರದಲ್ಲಿರುವ ಬೆಟ್ಟ ಅಥವಾ ಗುಡ್ಡದ ಎದುರು ನಿಂತು ಚಪ್ಪಾಳೆ ತಟ್ಟಿದಲ್ಲಿ ನೀವು ಅದೇ ಶಬ್ದವನ್ನು ಕೇಳುವಿರಿ ಅಥವಾ ಜೋರಾಗಿ ಕೂಗಿದಲ್ಲಿ , ಸ್ವಲ್ಪ ಸಮಯದ ನಂತರ ಅಲ್ಲವೇ ?
ಇವರ ಯಾವುದೇ ಪ್ರತಿಫಲಿಸುವ ಅದಮ್ಯ ಮೇನಿಂದ ( ಬೆಟ್ಟ ಗುಡ್ಡ , ಕಟ್ಟಡದ ಗೋಡೆ ) ಪ್ರತಿಫಲನಗೊಂಡ ಶಬ್ದವೇ ಪ್ರತಿಧ್ವನಿ .
ನೀವು ಯಾವುದಾದರೂ ಒಂದು ಎತ್ತರದ ಕಟ್ಟಡದಿಂದ . ‘ d ‘ ದೂರದಲ್ಲಿದ್ದೀರ ಎಂದು ಊಹಿಸಿಕೊಳ್ಳಿ , ಗಾಳಿಯಲ್ಲಿ ಶಬ್ದದ ‘ ಜವ ‘ ವು ‘ v ms ಇರಲಿ , ನೀವು ಜೋರಾಗಿ ಕೂಗಿದಾಗ , ನಿಮ್ಮ ಧ್ವನಿಯು ಗಾಳಿಯಲ್ಲಿ ಚಲಿಸಿ ಬೆಟ್ಟದಿಂದ ಪ್ರತಿಫಲಿಸಿದ ಶಬ್ದವನ್ನು ಕೇಳಬಹದು .
ಶಬ್ದವು ಚಲಿಸಿದ ದೂರವು ‘ 2d ‘ ಆಗಿರುತ್ತದೆ ( ಶಬ್ದವು ನಿಮ್ಮಿಂದ ಕಟ್ಟಡಕ್ಕೆ ಮತ್ತು ಕಟ್ಟಡದಿಂದ ನಿಮ್ಮಲ್ಲಿಗೆ ಚಲಿಸುತ್ತದೆ ) ಮತ್ತು ಶಬ್ದವು ಚಲಿಸುವ ಕಾಲಾವಧಿ t ಆಗಿರುತ್ತದೆ ಎಂದು ಕೊಳ್ಳೋಣ .
ಶಬ್ದದ ಸಂವೇದನೆಯು ನಮ್ಮ ಕಿವಿಯಲ್ಲಿ 0.1 s ಗಳ ಕಾಲ ಸಾತತ್ಯವಾಗಿರುತ್ತದೆ . ನೀವು ಪ್ರತಿಧ್ವನಿಯನ್ನು ಕೇಳಬೇಕಾದರೆ ,
ಮೂಲ ಧ್ವನಿ ಮತ್ತು ಪ್ರತಿಧ್ವನಿಗಳ ನಡುವಿನ ಕಾಲಾಂತರವು 0.15 ಆಗಿರಬೇಕಾಗುತ್ತದೆ ಮತ್ತು ಶಬ್ದದ ವೇಗ ( ಗಾಳಿಯಲ್ಲಿ ) 340 ms ಮೇಲೆ ತಿಳಿಸಿರುವ ಸಮೀಕರಣದಲ್ಲಿ t – 0.1 s , v = 340 ms¹ od eden d = 340 x 0.1 17 m ಆದ್ದರಿಂದ ನಾವು ಪ್ರತಿಧ್ವನಿಯನ್ನು ಕೇಳ ಬೇಕಾಗಿದ್ದಲ್ಲಿ ,
ಪ್ರತಿಫಲಿಸುವ ಮೇಲೆ ಹೇಳುಗನಿಂದ ಕನಿಷ್ಠ 17 m ದೂರದಲ್ಲಿ ಇರಬೇಕಾಗುತ್ತದೆ .
ಒಬ್ಬ ಹುಡುಗ ಒಂದು ಗುಡ್ಡದ ಮುಂದೆ ನಿಂತು ನಿಂತು ಚಪ್ಪಾಳೆ ತಟ್ಟುತ್ತಾ ಪ್ರತಿಧ್ವನಿಯನ್ನು 28 ಗಳ ನಂತರ ಕೇಳಿಸಿಕೊಳ್ಳುತ್ತಾನೆ .
ಗಾಳಿಯಲ್ಲಿ ಶಬ್ದದ ಜವವು 340 ms ‘ ಆಗಿದ್ದಲ್ಲಿ , ಹುಡುಗನು ಗುಡ್ಡದಿಂದ ಎಷ್ಟು ದೂರದಲ್ಲಿದ್ದಾನೆ ? ಪರಿಹಾರ .
ಗುಡ್ಡದಿಂದ ಹುಡುಗನು ‘ d ‘ ದೂರದಲ್ಲಿದ್ದಾನೆ ಎಂದು ಕೊಳ್ಳೋಣ ಗುಡ್ಡವು ‘ d ‘ ದೂರದಲ್ಲಿದೆ . ಧ್ವನಿ ಚಲಿಸುವ ದೂರ- 2d V = 2d d = vxt_340x2-340 m ಹುಡುಗನು ಗುಡ್ಡದಿಂದ 340 m ದೂರದಲ್ಲಿದ್ದಾನೆ . ಕೌದ್ಧಯ
ಪ್ರತಿಧ್ವನಿಯ ಕುತೂಹಲಕಾರಿ ವಿಷಯಗಳು
ಪ್ರತಿಧ್ವನಿಯನ್ನು ಒಂದಕ್ಕಿಂತ ಹೆಚ್ಚು ಸಲ ಕೇಳಬಹುದು ಧ್ವನಿಯು ಹಲವಾರು ಪ್ರತಿಫಲಿಸುವ ಮೇಲೆಯಿಂದ ಪ್ರತಿ ಫಲಿಸಿದಾಗ ನಾವು ಅನೇಕ ಪ್ರತಿಧ್ವನಿಯನ್ನು ಕೇಳಬಹುದು .
ಮೋಡಗಳ ಅನೇಕ ಪ್ರತಿಫಲಿಸುವ ಮೇಲ್ಮನಿಂದ ಪ್ರತಿಫಲನಗೊಳು ಧ್ವನಿಯೇ ಗುಡುಗು ,
ಬಿಜಾಪುರದಲ್ಲಿರುವ ಗೋಲ್ ಗುಂಬಜ್ನ ಪಿಸುಗುಟ್ಟುವ ಅಂಕಣದಲ್ಲಿ ( whispering gallery ) ಧ್ವನಿ ಏಳುಬಾರಿ ಪ್ರತಿಧ್ವನಿಸುತ್ತದೆ .
ಪ್ರಪಂಚದ ಅತಿ ವಿಸ್ಮಯಕಾರಿ ಪ್ರತಿಧ್ವನಿಯು ಐಗ್ಲೆಂಡ್ನ ಕಿಲ್ಲರ್ನೀ ಬೆಟ್ಟದಿಂದ ಉಂಟಾಗುತ್ತದೆ . ಒಂದು ಧ್ವನಿಯು ಈ ಸವಾರು ನೂರು ಬಾರಿ ಪ್ರತಿಧ್ವನಿಸುತ್ತದೆ
ಶ್ರವಣಣಾತೀತ ತರಂಗ
ವಸ್ತುವು ನಿರ್ದಿಷ್ಟ ವ್ಯಾಪ್ತಿಯಲ್ಲಿ ಕಂಪಿಸಿದಾಗ , ಶಬ್ಬವು ಉತ್ಪತ್ತಿಯಾಗುತ್ತದೆ ಎಂದು ನೀವೀಗಾಗಲೇ ತಿಳಿದಿದ್ದೀರ . ವಸ್ತುವು ಅನೇಕ ಆವೃತ್ತಿಯಲ್ಲಿ ಕಂಪಿಸುತ್ತದೆ ಯಾದರೂ ಹಬ್ಬ ಕೇಳುವುದು ಕೆಲವೇ ವ್ಯಾಪ್ತಿಯಲ್ಲಿ ಕಂಪಿಸಿದಾಗ ಮಾತ್ರ
ಎಲ್ಲಾ ಆವೃತ್ತಾಂಕಗಳಲ್ಲಿ ಕಂಪಿಸುವ ವಸ್ತುವಿನಿಂದ ಹೊರ ಹೊಮ್ಮುವ ಹಬ್ಬದ ಸಂವೇದನೆ ಆಗುತ್ತದೆಯೇ ? ಎಲ್ಲಾ ಕಂಪನಗಳು ನಾವು ಕೇಳಬಹುದಾದಂತಹ ಕಟ್ಟವನ್ನು ಉಂಟು ಮಾಡುವುದಿಲ್ಲ .
ಆದರೆ ನಾವು ಕೇಳಬಹುದಾದಂತಹ ಕಲ್ಪವು ಕಂಪನದಿಂದಲೇ ಉಂಟಾಗುತ್ತದೆ . ಇದೊಂದು ವಿಪರ್ಯಾಸ ಎನಿಸಿತೇ ? ಹಾಗಿದ್ದಲ್ಲಿ ಯಾವ ಆವೃತ್ತಿಯಲ್ಲಿ ಕಂಪಿಸುವ ವಸ್ತುವಿನಿಂದ ಹೊರಹೊಮ್ಮುವ ಧ್ವನಿಯನ್ನು ಕೇಳಬಹುದು ?
ಇದು ಸಹಜವಾಗಿ ಉಂಟಾಗುವ ಪ್ರಶ್ನೆ , ಕಂಪನ ಅವರ್ತಾಂಕ ಶ್ರೇಣಿ : 20 Hz ನಿಂದ 20,000 Hz ಇದ್ದಲ್ಲಿ ನಮಗೆ ಶಬ್ದ ಸಂವೇದನೆಯಾಗುತ್ತದೆ , ಈ ಕಂಪನವನ್ನು ಶ್ರವಣ ಕಂಪನವೆಂದು ಮತ್ತು ಆ ಅವರ್ಕಾರಿಕದ ಶ್ರೇಣಿಯನ್ನು ತವ ಶ್ರೇಣಿ ಎಂದು ಕರೆಯುತ್ತೇವೆ .
ಯಾವುದೇ ವಸ್ತುವಿನ ಕಂಪನದ ಆವೃತ್ತಿ 20 Hz ಗಿಂತ ಕಡಿಮೆ ಇದ್ದಲ್ಲಿ ಅಥವಾ 20,000 Hz ಗಿಂತ ಹೆಚ್ಚಾಗಿದ್ದಲ್ಲಿ , ಹಾಗೆ ಕಂಪಿಸುವ ವಸ್ತುವಿನಿಂದ ಹೊರಹೊಮ್ಮುವ ಧ್ವನಿಯ ಸಂವೇದನೆ ನಮಗಾಗುವುದಿಲ್ಲ ,
ವಸ್ತುವಿನ ಕಂಪನದ ಆವೃತ್ತಿ 20 Hz ಗಿಂತ ಕಡಿಮೆ ಇದ್ದಾಗ ಹೊರಹೊಮ್ಮುವ ಧ್ವನಿಯನ್ನು ಅವರು ಎಂದು ಕರೆಯುತ್ತಾರೆ .
ಹಾಗೆಯೇ , ವಸ್ತುವು 20,000 Hz Nಂ ಅಧಿಕ ಆವೃತ್ತಿಯಲ್ಲಿ ಕಂಪಿಸಿದಾಗ ಹೊಮ್ಮುವ ಧ್ವನಿಯನ್ನು ಶ್ರವಣಾತೀತ ಡಾ . ಎನ್ನುತ್ತಾರೆ , ಮತ್ತು ಈ ಆವೃತ್ತದ ಧನಿಯ ಅಧ್ಯಯನವನ್ನು ಶ್ರವಣಾತೀತ ಶಾಸ್ತ್ರ ಎಂದು ಕರೆಯುತ್ತಾರೆ ,
ನಾಯಿ , ಬೆಕ್ಕು , ಬಾವುಲಿಗಳಂತಹ ಪ್ರಾಣಿಗಳಿಗೆ ಕೆಲವು ಶ್ರವಣಾತೀತ ಧ್ವನಿಯ ಸಂವೇದನೆಯಾಗುತ್ತದೆ ಎಂಬುದು ಸೋಜಿಗ !
ಶ್ರವಣಾತೀತ ತರಂಗಗಳು ಅಧಿಕ ಆವೃತ್ತಿಯದಾದ್ದರಿಂದ ಅದರ ಶಕ್ತಿಯು ಹೆಚ್ಚು ( ಶಕ್ತಿಯು ಆವೃತ್ತಾಂಶಕ್ಕೆ ಅನುಗುಣವಾಗಿರುತ್ತದೆ ) ಶ್ರವಣಾತೀತ ತರಂಗಗಳ ಮತ್ತು ಶಬ್ದ ತರಂಗಗಳ ವೇಗವು ( ಗಾಳಿಯಲ್ಲಿ ) ಒಂದೇ ಆಗಿರುತ್ತದೆ .
ಒಂದು ತೆಳುವಾದ ಕ್ವಾರ್ಟ್ ಜಿಲ್ಲೆಯನ್ನು ಎರಡು ಲೋಹದ ಫಲಕಗಳ ನಡುವೆ ಇಟ್ಟು , ಲೋಹ ಫಲಕಗಳ ಮೂಲಕ 20 kHz ಗಿಂತ ಹೆಚ್ಚಿನ ಅವರ್ಕಾಂಕವುಳ್ಳ
ಪರ್ಯಾಯ ವಿದ್ಯುತ್ತನ್ನು ಒದಗಿಸಿದಾಗ ಕಾರ್ಟ್ಸ್ ಜಿಲ್ಲೆಯು 20 kHz ಆವರ್ತಾಂಕಕ್ಕಿಂತ ಹೆಚ್ಚು ಆವೃತ್ತಿಯಲ್ಲಿ ಕಂಪಿಸಿ , ಶ್ರವಣಾತೀತ ತರಂಗವನ್ನು ಉಂಟುಮಾಡುತ್ತದೆ .
ಶ್ರವಣಾತೀತ ತರಂಗಗಳಲ್ಲಿನ ಕಂಪನ ವರ್ಗಾವಣೆಯು ಬಹಳ ಉಪಯುಕ್ತವಾಗಿದೆ .
ಶ್ರವಣತೀತ ತರಂಗಗಳು ಒಂದು ಮಾಧ್ಯಮದಲ್ಲಿ ಚಲಿಸುವುದನ್ನು ಅಧ್ಯಯನ ಮಾಡಿದಾಗ , ಆ ಮಾಧ್ಯಮದ ಸ್ಥಿತಿಸ್ಥಾಪಕತೆ ಮತ್ತು ಅದರ ವಿನ್ಯಾಸದ ಏರಿಳಿತ ಕಂಡು ಹಿಡಿಯಬಹುದು .
ಶ್ರವಣಾತೀತ ತರಂಗಗಳನ್ನು ಲೋಹದ ಅಚ್ಚುಗಳಲ್ಲಿನ ಒಡಕು / ಸೀಳುಗಳನ್ನು ಕಂಡುಹಿಡಿಯುವುದಕ್ಕೆ ಬಳಸುತ್ತಾರೆ . ಲೋಹದ ಅಚ್ಚುಗಳ ಮೂಲಕ ,
ಶ್ರವಣಾತೀತ ತರಂಗಗಳನ್ನು ಪ್ರಸರಿಸಿ , ಅದನ್ನು ಪರೀಕ್ಷಿಸುತ್ತಾರೆ . ಯಾವುದೇ ಲೋಪ ಇದ್ದಲ್ಲಿ ತರಂಗವು ಪ್ರತಿಫಲಿಸುತ್ತದೆ .
ಬಾವಲಿಗಳು ರಾತ್ರಿ ವೇಳೆಯಲ್ಲಿ ಯಾವ ಅಡಚಣೆಯೂ ಇಲ್ಲದೆ , ಸುಲಭವಾಗಿ ಹಾರಾಡುತ್ತವೇಕೆ ? ಭಾವಲಿಗಳು ಶ್ರವಣಾತೀತ ತರಂಗಗಳನ್ನು ( 100 kHz ತನಕ ) ಉಂಟು ಮಾಡುತ್ತವೆ . ಮತ್ತು ಅದನ್ನು ಸಂವೇದನೆ ಮಾಡುವ ಶಕ್ತಿಯು ಅದಕ್ಕಿದೆ .
ಅವು ಹಾರಾಡುವಾಗ ಯಾವುದೇ ಅಡಚಣೆ ಇದ್ದಲ್ಲಿ , ಅದರಿಂದ ಪ್ರತಿಫಲಿಸಿದ ತರಂಗವನ್ನು ಸಂವೇದಿಸಿ , ಅಡಚಣೆಯ ದೂರ ಅಂದಾಜುಮಾಡಿ ಯಾವುದೇ ತೊಂದರೆ ಇಲ್ಲದೆ ಹಾರಾಡುತ್ತವೆ .
ಶ್ರವಣಾತೀತ ತರಂಗಗಳ ಆವರ್ತಾಂಕ ಹೆಚ್ಚಾಗಿರುವುದರ ಉಪಯೋಗ
ಶ್ರವಣಾತೀತ ತರಂಗಗಳ ಆವರ್ತಾಂಕ ಹೆಚ್ಚಾಗಿರುವುದರಿಂದ , ಇದನ್ನು ಮಿಶ್ರಲೋಹ ತಯಾರಿಕೆ , ಛಾಯಾಚಿತ್ರ ಫಿಲ್ಮಗಳಿಗೆ ಎಮಲ್ಲನ್ಗಳನ್ನು ತಯಾರಿಸುತ್ತಾರೆ .
ಕಂಪನದಿಂದ ಏಕರೂಪ ಮಿಶ್ರಣ ದೊರೆಯುತ್ತದೆ . ಬಟ್ಟೆಗಳಲ್ಲಿನ ಗೀಸ್ , ಕೊಳೆ ಮುಂತಾದವುಗಳನ್ನು ಹೋಗಲಾಡಿಸಲೂ ಸಹ ಶ್ರವಣಾತೀತ ಕಂಪನ ಉಪಯೋಗಕಾರಿಯಾಗಿದೆ .
ಕೂಡುವಿಕೆಯನ್ನು ಕಂಪನದಿಂದಾಗಿ ಸಾಧಿಸ ಬಹುದು . ಶ್ರವಣಾತೀತ ಧ್ವನಿಯನ್ನು ಕೀಟಗಳನ್ನು ವಿಕರ್ಷಿಸುವುದಕ್ಕೂ , ಬ್ಯಾಕ್ಟಿರಿಯಾವನ್ನು ಕೊಲ್ಲಲು ಬಳಸುತ್ತಾರೆ .
ವೈದ್ಯಕೀಯ ಕ್ಷೇತ್ರದಲ್ಲಿ , ನರವೇದನೆ ಮತ್ತು ಸಂಧಿವಾತ ವೇದನೆಗಳನ್ನು ಹೋಗಲಾಡಿಸಲು ಬಳಸುತ್ತಾರೆ .
ಶಸ್ತ್ರ ಚಿಕಿತ್ಸೆಗೆ ಬಳಸುವ ಉಪಕರಣಗಳನ್ನು ಶ್ರವಣಾತೀತ ತರಂಗ ಆವೃತ್ತಿಯಲ್ಲಿ ಕಂಪಿಸುವುದರ ಮೂಲಕ ರಕ್ತಸವಿಕೆ ಇಲ್ಲದೆ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ .
ಪಿತ್ತಕೋಶದ ಕಲ್ಲುಗಳನ್ನು ಚೂರಾಗಿಸುವುದರಲ್ಲೂ ಶ್ರವಣಾತೀತ ಧ್ವನಿಯು ಉಪಯೋಗಕಾರಿ
ಸೋನಾರ್
ಪಾಣಿಗಳು ( ಡಾಲಿನ್ ಮತ್ತು ಬಾವುಲಿಗಳು ) ಶ್ರವಣಾತೀತ ಧ್ವನಿಯನ್ನು ಸಂಪರ್ಕ ಮತ್ತು ತಮ್ಮ ಸುತ್ತ ಮುತ್ತಲಿನಲ್ಲಿರುವ ವಸ್ತುಗಳ ಇರುವಿಕೆಯ ದೂರವನ್ನು ಅಂದಾಜಿಸಲು ಬಳಸಿಕೊಂಡಿವೆ .
1930 ರಲ್ಲಿ ಅಮೆರಿಕನ್ ಎಂಜಿನಿಯರ್ಗಳು ನೀರಿನಲ್ಲಿರುವ ವಸ್ತುಗಳ ದೂರ ಅಂದಾಜಿಗೆ ತಮ್ಮದೆ ಆದ ಧ್ವನಿ ಪತ್ತೇದಾರಿ ತಂತ್ರಜ್ಞಾನವನ್ನು ಬಳಸುತ್ತಿದ್ದರು .
ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕನ್ನರು ಈ ತಂತ್ರಜ್ಞಾನವನ್ನು ‘ ಸೋನಾರ್ ‘ ಎಂದು ಕರೆದರು .
ಸೋನಾರ್ ಎಂದರೆ ” ಸೆಂಡ್ ನಾವಿಗೇಷನ್ ಅಂಡ್ ರೇಂಜಿಂಗ್ ( Sound Navigation and Ranging ) ಈ ತಂತ್ರಜ್ಞಾನದಲ್ಲಿ ಶ್ರವಣಾತೀತ ಧ್ವನಿಯನ್ನು ನೀರಿನಲ್ಲಿರುವ ಎರಡು ವಸ್ತುಗಳ ನಡುವೆ ಇರುವ ಅಂತರ ,
ವಸ್ತುಗಳು ಇರುವ ದಿಕ್ಕು ಮತ್ತು ಅವುಗಳ ಜವವನ್ನು ಕಂಡು ಹಿಡಿಯಲು ಬಳಸುತ್ತಾರೆ . ಈ ತಂತ್ರಜ್ಞಾನದ ಸಹಾಯದಿಂದ ಸಾಗರದ ಆಳ ,
ನೀರಿನ ಒಳಗೆ ಇರುವ ಬೆಟ್ಟಗುಡ್ಡಗಳು ,
ಸಬ್ಮರೀನ್ಗಳು ಹಾಗೂ ತೇಲುವ ಇಸ್ಬರ್ಗ್ ,
ಮುಳುಗಿ ಹೋಗಿರುವ ಹಡಗುಗಳನ್ನು ಪತ್ತೆಮಾಡಲು ಸಾಧ್ಯ
ಸೋನಾರ್ನಲ್ಲಿ ಒಂದು ಪ್ರೇಷಕವೂ ಮತ್ತು 10 ಒಂದು ಪಕಾರಿ ಇರುತ್ತದೆ .
ಈ ಚಿತ್ರದಲ್ಲಿರುವಂತೆ ಇವುಗಳನ್ನು ಜೋಡಿಸಿರುತ್ತಾರೆ . ಪ್ರೇಷಕವು ಶ್ರವಣಾತೀತ ತರಂಗವನ್ನು ಉತ್ಪತ್ತಿ ಮಾಡುತ್ತದೆ ಮತ್ತು ಅದನ್ನು ಪ್ರಸರಿಸುತ್ತದೆ .
ಶ್ರವಣಾತೀತ ತರಂಗಗಳು ಯಾವುದಾದರೂ ವಸ್ತುವಿಗೆ ತಾಕುವವರೆಗೂ ನೀರಿನಲ್ಲಿ ಚಲಿಸಿ ,
ಪ್ರತಿಫಲನಗೊಂಡು ಸೋನಾರ್ಗೆ ಹಿಂತಿರುಗುತ್ತವೆ ಪಶ್ವೇಕಾರಿಯು ಅವುಗಳನ್ನು ಗ್ರಹಿಸಿ ಅದನ್ನು ವಿದ್ಯುತ್ ಸಂಜ್ಞೆಗಳಾಗಿ ಮಾರ್ಪಡಿಸುತ್ತದೆ ಹಾಗೂ ಅದನ್ನು ಅರ್ಥೈಸುತ್ತದೆ
ಪ್ರೇಕ್ಷಣೆಗೂ ಮತ್ತು ಗ್ರಹಣಕ್ಕೂ ಇರುವ ಕಾಲವನ್ನು ದಾಖಲುಮಾಡಿ ಕೊಳ್ಳಲಾಗುತ್ತದೆ . ಇದರ ಸಹಾಯದಿಂದ ವಸ್ತುವಿನ ದೂರವನ್ನು ಲೆಕ್ಕ ಹಾಕಲಾಗುತ್ತದೆ ,
ವಿನ್ಯಾಸದ ಏರುಪೇರನ್ನಾಧರಿಸಿ , ಆ ವಸ್ತುವಿನ ಚಲನೆ ಹಾಗೂ ವೇಗ ಮತ್ತಿತರ ವಿವರಗಳನ್ನು ನಿರ್ಧರಿಸಲಾಗುತ್ತದೆ .
ಶ್ರವಣಾತೀತ ಸಂಖ್ಯೆಗಳ ಪ್ಲೇಷಣೆಗೂ ಮತ್ತು ಗ್ರಹಣಕ್ಕೂ ಇರುವ ಕಾಲ ‘ ‘ ಆಗಿದ್ದಲ್ಲಿ ಹಾಗೂ ನೀರಿನಲ್ಲಿರುವ ವಸ್ತುವಿನ ‘ d ‘ ಆಗಿದ್ದಲ್ಲಿ ,
d = ಸ್ತ್ರೀ ಆಗಿರುತ್ತದೆ . ( ಈ ಹಿಂದೆ ಸೂತ್ರವನ್ನು ಪಡೆಯಲಾಗಿದೆ )
ಸೋನಾರ್ ಸಾಧನವನ್ನು ಬಳಸಿಕೊಂಡು ನೀರಿನಲ್ಲಿರುವ ವಸ್ತುಗಳ ದೂರವನ್ನು ಕಂಡು ಹಿಡಿಯುವುದಕ್ಕೆ ಪ್ರತಿಧ್ವನಿವ್ಯಾಪ್ತಿ ನಿರ್ಧಾರ ಎನ್ನುತ್ತಾರೆ.
ಶ್ರವಣಾತೀತ ತರಂಗಗಳ ಕ್ರಮಲೋಕಕಗಳು
ಶ್ರವಣಾತೀತ ತರಂಗಗಳ ಪ್ರತಿಧ್ವನಿ ವ್ಯಾಪ್ತಿಯನ್ನು ಬಳಸಿಕೊಂಡು , ಮಾನವನ ಶರೀರದ ಅಂತರಿಕ ಅಂಗಗಳ ಬಿಂಬವನ್ನು ಪಡೆಯಬಹುದು .
ಇದಕ್ಕೆ ಬಳಸುವ ಉಪಕರಣವೇ ಶ್ರವಣಾತೀತ ತಮ ಲೋಕಗಳು , ಈ ತಂತ್ರಜ್ಞಾನವನ್ನು ನಮ್ಮ ಶರೀರದ ದ್ರವ ಭರಿತ ಅಂತರಿಕ ಅಂಗಗಳಾದ ಮೂತ್ರಕೋಶ ಮೂತ್ರಜನಕಾಂಗ , ಮೇದೋಜೀರಕ , ಅಂಡಾಶಯಗಳನ್ನು ಪರೀಕ್ಷಿಸಲು ಬಳಸುತ್ತಾರೆ .
ಶ್ರವಣಾತೀತ ತರಂಗಗಳು X- ಕಿರಣಗಳಿಗಿಂತ ಕಡಿಮೆ ಅಪಾಯಕಾರಿ , ಆದುದ್ದರಿಂದ ಕ್ರಮ ವೀಕ್ಷಣೆಯಲ್ಲಿ ಶ್ರವಣಾತೀತ ತರಂಗಗಳು ಬಹು ಉಪಯುಕ್ತ ,
ಹೃದಯ ಪರೀಕ್ಷೆಗೆ ಶವಣಾತೀತ ಧ್ವನಿಯ ಬಳಕೆಗೆ ವಿದ್ಯುತ್ ಹೃಲ್ಲೇಖನ ( echo cardiography ) ಎನ್ನುತ್ತಾರೆ.
ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭವನ್ನು ( ಪೀಟಸ್ ) ಪರೀಕ್ಷಿಸಿ ,
ಅದರ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಶ್ರವಣಾತೀತ ಕ್ರಮ ಲೋಕಕಗಳ ಅನ್ವಯ ಬಹುಖ್ಯಾತಿ ,
ಶ್ರವಣಾತೀತ ತರಂಗಗಳನ್ನು ಶರೀರದ ನಿರ್ದಿಷ್ಟ ಸ್ಥಳಕ್ಕೆ ಗುರಿಯಿಟ್ಟು ಹಾಯಿಸ ಬಹುದು ,
ಈ ತರಂಗಗಳು ಶರೀರದ ಊತಕ ( tissues ) ಮತ್ತು ದ್ರವಗಳ ಮೂಲಕ ಸುಲಭವಾಗಿ ಚಲಿಸುತ್ತವೆ . ಊತಕ ಸಾಂದ್ರತೆ ಬದಲಾದಲ್ಲಿ , ಈ ತರಂಗಗಳು ಪ್ರತಿಫಲಿಸುತ್ತವೆ .
ಉದಾ : ಶ್ರವಣಾತೀತ ತರಂಗವು ಹೃದಯದಲ್ಲಿನ ರಕ್ತದಲ್ಲಿ ಸುಲಭವಾಗಿ ಚಲಿಸುತ್ತದೆ . ಆದರೆ , ಈ ತರಂಗವು ಘನಕವಾಟಗಳಿಂದ ಪ್ರತಿಫಲಿಸುತ್ತದೆ .
ಶ್ರವಣಾತೀತ ತರಂಗ ಕ್ರಮ ಲೋಕಕಗಳು ಕೆಲಸ ಮಾಡುವ ವಿಧಾನ
ಪರಿಕರ್ಮಿಯು ಪರೀಕ್ಷಕವನ್ನು ( Probe- ದಪ್ಪ ಪೆನ್ನಿನಂತಹ ವಸ್ತು ) ಪರೀಕ್ಷೆ ಮಾಡಬೇಕಾದ ದೇಹದ ಭಾಗದ ಮೇಲಿಡುತ್ತಾರೆ .
ಚರಬಿ ಜಲ್ಲಿಯನ್ನು ( lubricating jelly ) ಚರ್ಮದ ಮೇಲೆ ಸವರಿ ಪರೀಕ್ಷಕ , ದೇಹಕ್ಕೂ ಸರಿಯಾಗಿ ಸಂಪರ್ಕ ಏರ್ಪಡುವಂತೆ ಮಾಡುತ್ತಾರೆ .
ಪರೀಕ್ಷಕವನ್ನು ತಂತಿಯ ಮೂಲಕ ಶ್ರವಣಾತೀತ ಉತ್ಪಾದಕ ಯಂತ್ರ ಮತ್ತು ದರ್ಶಕಕ್ಕೆ ( monitor ) ಸಂಪರ್ಕಿಸಲಾಗುತ್ತದೆ .
ಶ್ರವಣಾತೀತ ಮಿಡಿತಗಳನ್ನು ಪರೀಕ್ಷಕದ ಮೂಲಕ ದೇಹಕ್ಕೆ ವರ್ಗಾಯಿಸಲಾಗುತ್ತದೆ . ಶ್ರವಣಾತೀತ ತರಂಗವು ದೇಹದ ವಿವಿಧ ರಚನೆಗಳಿಂದ ಹಿಮ್ಮೆಟ್ಟಿ ಹಿಂತಿರುಗುತ್ತದೆ .
ಇದನ್ನು ಪರೀಕ್ಷಕದ ಮೂಲಕ ಪತ್ತೆಮಾಡಿ ಶ್ರವಣಾತೀತ ತರಂಗಗಳ ಉತ್ಪಾದಕ ಯಂತ್ರಕ್ಕೆ ಕಳಿಸಲಾಗುತ್ತದೆ , ಅದನ್ನು ಪ್ರದರ್ಶಕ ತೆರೆಯ ಮೇಲೆ ಬಿಂಬಿಸಲಾಗುತ್ತದೆ .
ಡಾಪ್ಲರ್ ಪರಿಣಾಮ
ತರ೦ಗದ ಜವವು , ಅದು ಪ್ರಸರಿಸುವ ಮಾಧ್ಯಮವನ್ನು ಅವಲಂಬಿಸಿರುತ್ತದೆ . ತರಂಗವು ಯಾವುದಾದರೂ ಮಾಧ್ಯಮದಲ್ಲಿ ಪ್ರಸರಿಸುವಾಗ ಅದರ ಜವ ಮತ್ತು ಆವೃತ್ತಿ ಒಂದೇ ಆಗಿರುತ್ತದೆ .
ಆದರೆ ತರಂಗದ ಆಕರ ( Source ) ಮತ್ತು ವೀಕ್ಷಕರ ಸಾಪೇಕ್ಷ ಚಲನೆ ಇದ್ದಲ್ಲಿ ತರಂಗದ ಆವೃತ್ತಿಯು ಬದಲಾದಂತೆ ಭಾಸವಾಗುತ್ತದೆ . ಇದನ್ನು ಡಾಪ್ಲರ್ ಪರಿಣಾಮ ಎನ್ನುತ್ತಾರೆ .
ತರಂಗದ ಆಕರ ಮತ್ತು ವೀಕ್ಷಕನ ಸಾಪೇಕ್ಷ ಚಲನೆಯಿಂದಾಗಿ , ತರಂಗದ ಅವೃತ್ತಿ ಬದಲಾದಂತೆ ವ್ಯಕ್ತವಾಗುತ್ತದೆ .
ಡಾಪ್ಲರ್ ಪರಿಣಾಮವಾಗಲು , ತರಂಗದ ಆಕರ ಅಥವಾ ವೀಕ್ಷಕ ಚಲಿಸುತ್ತಿರಬೇಕು . ಅಥವಾ ಎರಡೂ ಸಾಪೇಕ್ಷವಾಗಿ ಚಲಿಸುತ್ತಿರಬೇಕು .
ಆಕರ ಮತ್ತು ವೀಕ್ಷಕರು ಒಂದೇ ದಿಕ್ಕಿನಲ್ಲಿ ಒಂದೇ ಜವದಲ್ಲಿ ಚಲಿಸುತ್ತಿರುವಾಗ ಡಾಪ್ಲರ್ ಪರಿಣಾಮವಾಗುವುದಿಲ್ಲ .
ಶಬ್ದ ಮತ್ತು ಬೆಳಕು ಇವೆರಡೂ ತರಂಗಗಳಾದ ಕಾರಣ ಡಾಪ್ಲರ್ ಪರಿಣಾಮ ಎರಡರಲ್ಲೂ ಉಂಟು
ಒಂದು ತರಂಗದ ಆಕರ ನಿಂತಿರುವ ವೀಕ್ಷಕನೆಡೆಗೆ ಚಲಿಸುತ್ತಿರುವಾಗ , ಆಕರದ ಮುಂದಿನ ತರಂಗಗಳು ಸಂಪೀಡನಗೊಂಡಂತೆ ಕಾಣುತ್ತದೆ . ತರಂಗ ದೂರ ಕಡಿಮೆಯಾಗುತ್ತದೆ .
ವೀಕ್ಷಕನೆಡೆಗೆ ಹೆಚ್ಚು ತರಂಗಗಳು ಬಂದು ತಲುಪುತ್ತವೆ . ಆದ್ದರಿಂದ ಧ್ವನಿ ತರಂಗದ ಆವರ್ತವು ಹೆಚ್ಚಾದಂತೆ ಭಾಸವಾಗುತ್ತದೆ . ವೀಕ್ಷಕರಿಗೆ ಕೇಳಿಸುವ ಧ್ವನಿಯ ಸ್ಥಾಯಿ ಹೆಚ್ಚಾದಂತೆ ಭಾಸವಾಗುತ್ತದೆ .
ವೀಕ್ಷಕನು , ಒಂದು ಸ್ಥಾಯಿ ಶಬ್ದಕಾರಕದೆಡೆಗೆ ಚಲಿಸುತ್ತಿದ್ದಾಗಲೂ ಸಹ ಇದೇ ಪರಿಣಾಮವಾಗುತ್ತದೆ .
ಒಂದು ತರಂಗದ ಆಕರ ನಿಂತಿರುವ ವೀಕ್ಷಕನಿಂದ ದೂರ ಚಲಿಸುತ್ತಿರುವಾಗ , ಆಕರದ ಹಿಂಬಾಗದಲ್ಲಿರುವ ತರಂಗಗಳು ವಿರಳನಗೊಳ್ಳುತ್ತವೆ . ತರಂಗ ದೂರ ಹೆಚ್ಚಾಗುತ್ತದೆ .
ವೀಕ್ಷಕನೆಡೆಗೆ ಕಡಿಮೆ ತರಂಗಗಳು ಬಂದು ತಲುಪುತ್ತೆ . ಆದ್ದರಿಂದ ಧ್ವನಿ ತರಂಗದ ಆವರ್ತವು ಕಡಿಮೆಯಾದಂತೆ ಭಾಸವಾಗುತ್ತದೆ .
ವೀಕ್ಷಕನಿಗೆ ಕೇಳಿಸುವ ಧ್ವನಿಯ ಸ್ಥಾಯಿ ಕಡಿಮೆಯಾದಂತೆ ಭಾಸವಾಗುತ್ತದೆ . ವೀಕ್ಷಕನು ಒಂದು ಸ್ಥಾಯಿ ಶಬ್ಬಕಾರಕದಿಂದ ದೂರ ಚಲಿಸುತ್ತಿದ್ದಾಗಲೂ ಸಹ ಇದೇ ಪರಿಣಾಮವಾಗುತ್ತದೆ .
ಡಾಪ್ಲರ್ ಪರಿಣಾಮದ ಅನ ಅನ್ವಯಗಳು
ಕೃತಕ ಉಪಗ್ರಹಗಳನ್ನು ಪತ್ತೆ ಹಚ್ಚಲು ಡಾಪ್ಲರ್ ಪರಿಣಾಮವನ್ನು ಬಳಸುತ್ತಾರೆ . ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಲು ಮತ್ತು ಅದರ ವೇಗವನ್ನು ಅಂದಾಜಿಸಲು ಡಾಪ್ಲರ್ ಪರಿಣಾಮವನ್ನು ಉಪಯೋಗಿಸುತ್ತಾರೆ .
ಬೆಳಕಿನ ಒಂದು ಆಕರವು ವೀಕ್ಷಕನಿಂದ ಹೆಚ್ಚು ದೂರ ಚಲಿಸುತ್ತಿದ್ದಾಗ , ಆವರ್ತವು ಕಡಿಮೆಯಾದಂತೆ ಭಾಸವಾಗುತ್ತದೆ . ಬೆಳಕಿನ ಬಣ್ಣವು , ದೃಗ್ಗೋಚರ ರೋಹಿತದಲ್ಲಿ ಕೆಂಪು ತುದಿಗೆ ಪಲ್ಲಟ ಹೊಂದುತ್ತದೆ .
ಈ ಪರಿಣಾಮವನ್ನು ಕೆಂಪು ಪಲ್ಲಟ ಎನ್ನುತ್ತಾರೆ . ನಕ್ಷತ್ರಗಳು , ಉತ್ಸರ್ಜಿಸುವ ಬೆಳಕು , ಕೆಂಪು ಪರಿಣಾಮವನ್ನೊಳ ಗೊಂಡಿರುತ್ತದೆ .
ನಕ್ಷತ್ರಗಳ ಬೆಳಕಿನ ರೋಹಿತವನ್ನು ಪರೀಕ್ಷಿಸಿದಾಗ ,
ನಕ್ಷತ್ರವು ನಮ್ಮಿಂದ ದೂರಕ್ಕೆ ಹೆಚ್ಚು ವೇಗದಲ್ಲಿ ಚಲಿಸುತ್ತಿದೆ ಎಂದು ತಿಳಿದುಬರುತ್ತದೆ . ಇದರ ಪರಿಣಾಮವೇ ವಿಶ್ವದ ಹಿಗ್ಗುವಿಕೆ .
ಬೆಳಕಿನ ಒಂದು ಆಕರವು ವೀಕ್ಷಕನೆಡೆಗೆ ಹೆಚ್ಚು ವೇಗದಲ್ಲಿ ಚಲಿಸುತ್ತಿದ್ದಾಗ , ಆವರ್ತವು ಹೆಚ್ಚಾದಂತೆ ಭಾಸವಾಗುತ್ತದೆ . ಬೆಳಕಿನ ಬಣ್ಣವು ದೃಗ್ಗೋಚರ ರೋಹಿತದಲ್ಲಿನ ನೀಲಿ ತುದಿಗೆ ಪಲ್ಲಟ ಹೊಂದುತ್ತದೆ . ಇದನ್ನು ನೀಲಿ ಪಲ್ಲಟ ಎನ್ನುತ್ತಾರೆ .
ಭೌತ ಶಾಸ್ತ್ರದಲ್ಲಿ ಡಾಪ್ಲರ್ ಪರಿಣಾಮವನ್ನು ಶನಿಗ್ರಹದ ಉಂಗುರಗಳು , ಗೆಲಾಕ್ಸಿಗಳು ಮತ್ತು ಜೋಡಿ ನಕ್ಷತ್ರಗಳು , ಇವುಗಳ ಅಧ್ಯಯನಕ್ಕಾಗಿ ಬಳಸಲಾಗುತ್ತದೆ .
ನಕ್ಷತ್ರಗಳ ಭ್ರಮಣೆ ಮತ್ತು ಗೆಲಾಕ್ಸಿಗಳ ಜವವನ್ನು ಅಂದಾಜು ಮಾಡಲೂ ಸಹ ಡಾಪ್ಲರ್ ಪರಿಣಾಮವನ್ನು ಬಳಸುತ್ತಾರೆ .
ರೆಡಾರ್
ರೇಡಿಯೋ ತರಂಗಗಳು ಲೋಹದ ವಸ್ತುಗಳಿಂದ ಪ್ರತಿಫಲಿಸುತ್ತವೆ , ಎಂದು 1886 ನೇ ದಶಕದಲ್ಲಿ ಜರ್ಮನ್ ಭೌತ ಶಾಸ್ತ್ರಜ್ಞ ಹೆನ್ರಿಕ್ ಹರ್ ತಿಳಿಪಡಿಸಿದನು .
ಸೋನಾರ್ನಂತೆ ಶ್ರವಣಾತೀತ ಧ್ವನಿಗೆ ಪರ್ಯಾಯವಾಗಿ ಈ ಅವಿಷ್ಕಾರ ಪೂರಕ . ಇಲ್ಲಿ ವಿದ್ಯುತ್ ಕಾಂತೀಯ ಕಂಪನಗಳನ್ನು ಬಳಕೆ ( boshed Bo ಮಾಡಲಾಗುತ್ತದೆ .]
ರೆಡಾರ್ ತಂತ್ರಜ್ಞಾನವನ್ನು ಯಾವುದೇ ಜಡ ಅಥವಾ ಚಲಿಸುವ ವಸ್ತುವಿನ ದೂರ ,
ಎತ್ತರ ( ಭೂಮಿಯಿಂದ ) ಚಲಿಸುವ ವೇಗ ಮತ್ತು ದಿಕ್ಕುಗಳನ್ನು ರೇಡಿಯೋ ತರಂಗಗಳನ್ನು ಬಳಸಿಕೊಂಡು ಕಂಡು ಹಿಡಿಯುತ್ತಾರೆ ,
ರೇಡಾರ್ನಲ್ಲಿ ( ಸೋನಾರ್ನಂತೆ ) ರೇಡಿಯೋ ತರಂಗಗಳನ್ನು ಉತ್ಪತ್ತಿ ಮಾಡಿ ಅಂಟೆನಾಗಳ ಮೂಲಕ ಪ್ರಸರಿಸುತ್ತಾರೆ .
ಯಾವುದೇ ವಸ್ತುವಿನಿಂದ ( ಹವಾಜಹಜು , ಮೋಟಾರು ವಾಹನ ) ಪ್ರತಿಫಲಿಸಿದ ತರಂಗ ವೇಗ ಮತ್ತು ಪ್ರತಿಫಲನದ ಸಮಯವನ್ನು ತಿಳಿಯುವುದರ ಮೂಲಕ ,
ಆ ವಸ್ತುವಿನ ದೂರವನ್ನು ಕಂಡುಹಿಡಿಯುತ್ತಾರೆ ರೆಡಾರ್ ಪರಿಕರ್ಮಿ ( Operator ) ರೆಡಾರ್ ಆಕರ ಮತ್ತು ವಸ್ತುವಿನ ನಡುವಿನ ದೂರವನ್ನು ಅಂದಾಜು ಮಾಡುತ್ತಾನೆ .
ಸಂಚಾರ ನಿಯಂತ್ರಣ ಅಧಿಕಾರಿಗಳು , ವೇಗ ಮಿತಿಯನ್ನು ಮೀರಿ ಚಲಿಸುವ ವಾಹನಗಳನ್ನು ಪತ್ತೆ ಹೆಚ್ಚಲು ಡಾಪ್ಲರ್ ಪರಿಣಾಮವನ್ನು ಉಪಯೋಗಿಸುತ್ತಾರೆ .
ರೇಡಿಯೋ ತರಂಗಗಳನ್ನು ಚಲಿಸುತ್ತಿರುವ ವಾಹನ ದಿಕ್ಕಿನಲ್ಲಿ ಪ್ರಸರಿಸಿ ,
ಪ್ರತಿಫಲಿಸಿದ ಅಲೆಗಳನ್ನು ಪಡೆಯಲಾಗುತ್ತದೆ . ಪ್ರತಿಫಲಿಸಿದ ತರಂಗದ ಆವೃತ್ತಿಯಲ್ಲಿನ ಬದಲಾವಣೆಯನ್ನು ಗ್ರಹಿಸುವುದರ ಮೂಲಕ ವಾಹನದ ವೇಗವನ್ನು ಕಂಡುಹಿಡಿಯ ಬಹುದು .
ಇದಕ್ಕಾಗಿ ಬಳಸುವ ಉಪಕರಣಕ್ಕೆ ರೆಡಾರ್ಗನ್ ( Radar Gun ) ಎಂದು ಹೆಸರು
0 Comments