ವ್ಯಂಜನಗಳು  । kannada vyanjanagalu

ವ್ಯಂಜನಗಳು

kannada vyanjanagalu , vyanjanagalu in kannada , kannada swaragalu vyanjanagalu , swaragalu vyanjanagalu , ವ್ಯಂಜನಗಳು

kannada vyanjanagalu , vyanjanagalu in kannada , kannada swaragalu vyanjanagalu , swaragalu vyanjanagalu , ವ್ಯಂಜನಗಳು

ಸ್ವರದ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಗಳೇ ವ್ಯಂಜನಗಳು . ವ್ಯಂಜನಗಳ ಮೂಲರೂಪ ಹೀಗಿರುತ್ತದೆ – ಕ್ , ಚ್ , ಟ್ , ತ್ , ಪ್ – ಇತ್ಯಾದಿ .

ಈ ವ್ಯಂಜನಗಳಿಗೆ ಯಾವ ಸ್ವರವನ್ನಾದರೂ ಸೇರಿಸಿ ಉಚ್ಚರಿಸಬಹುದು . ವರ್ಣಮಾಲೆಯಲ್ಲಿ ಮೊದಲ ಸ್ವರವಾದ ಆಕಾರವನ್ನು ಸೇರಿಸಿದ ವ್ಯಂಜನಗಳನ್ನು ಕೊಡಲಾಗಿದೆ . ಟ್ + ಅ = ಟ ; ತ್ + ಅ = ತ ; ಪ್ + ಅ = ಪ . ಪ್ರತಿಯೊಂದು ಸ್ವರಕ್ಕೂ ಅದರದೇ ಆದ ಚಿಹ್ನೆ ( ಸಂಕೇತ ) ಇದೆ .

ವ್ಯಂಜನಗಳಿಗೆ ಆ ಸ ೦ ಕೇತವನ್ನು ಸೇರಿಸಿ ಬರೆದಾಗ ಉಚ್ಚರಿಸಲು ಅನುಕೂಲವಾಗುತ್ತದೆ . ಇವನ್ನು ಸ್ವರಚಿಹ್ನೆಗಳು ಎನ್ನುತ್ತಾರೆ .

ಕಾಗುಣಿತಾಕ್ಷರವನ್ನು ಬಳಸಿ ರಚಿಸಿರುವ ಪದ್ಯ :

ಕಮಲದಳನಯನ ಕಾಳಿಯ ಮಥನಕಿಸಲಯೋ ಪಮಚರಣ ಕೀಶಪತಿಸೇವ ಕುಜಹರ ಕೂರ್ಮ ಸಮಸತ್ಕಪೋಲ ಕೇಯೂರಧರ ಕೈರವಶ್ಯಾಮ ಕೋಕನದ ಗೃಹೆಯ ರಮಣಕೌಸ್ತುಭಶೋಭ ಕಂಬುಚಕ್ರಗದಾಬ್ದ ವಿಮಲಕರ ಕಸ್ತೂರಿಕಾತಿಲಕ ಕಾವುದೆಂ ದಮಿತಪ್ರಭಾಮೂರ್ತಿಯಂ ನುತಿಸಲಾತನಂ ಹರಿನೆಗಪಿದಂ ಕೃಪೆಯೊಳು ||

ಸಹಜ ವ್ಯಂಜನ ಅಥವಾ ಮೂಲವ್ಯಂಜನಕ್ಕೆ ಹೀಗೆ ಸ್ವರಚಿಹ್ನೆಯನ್ನು ಸೇರಿಸಿ ಬರೆದಾಗ ಅದನ್ನು ಗುಣಿತಾಕ್ಷರವೆನ್ನುತ್ತಾರೆ . ಮೊದಲ ವ್ಯಂಜನವಾದ ಕೌಕಾರಕ್ಕೆ ಸ್ವರಚಿಹ್ನೆಗಳನ್ನು ಸೇರಿಸಿ ಹೇಳಿರುವುದರಿಂದ ವ್ಯಂಜನಗಳಿಗೆ ಸ್ವರಸೇರಿಸಿ ಹೇಳುವುದನ್ನು ಕಾಗುಣಿತವೆಂದೇ ಕರೆಯುತ್ತಾರೆ . ಹಿಂದೆ ಶಾಲೆಗಳಲ್ಲಿ ಕಾಗುಣಿತವನ್ನು ಬಾಯಿಪಾಠ ಮಾಡಿಸುವ ಪದ್ಧತಿಯಿತ್ತು .

ಸ್ವರಾಕ್ಷರಗಳನ್ನು , ಕಾಗುಣಿತವನ್ನು ನೆನಪಿನಲ್ಲಿರಿಸಿಕೊಳ್ಳಲು ಈ ಶಿಶುಗೀತೆಗಳನ್ನು ಕಂಠಪಾಠ ಮಾಡಿಕೊಳ್ಳಬಹುದು

೧.

ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ

ಆನೆಯ ಸೊಂಡಿಲ ಮೊಗವಿತ್ತು .

ಇಲಿಯನ್ನೇರಿದ ಯಾರಿದು ಎಂದೆನು

ಈಶ್ವರಸುತನೆಂದನು ಅಪ್ಪ ,

ಉಮಾಕುಮಾರನ ಚೆಲು ಹಬ್ಬದ ದಿನ

ಊಟಕೆ ಬಂದರು ಅತಿಥಿಗಳು

ಕೃಪಣತೆಯಿಲ್ಲದೆ ಸ್ವಾಗತವಿತ್ತರು

ಎಲೆಯನ್ನಿರಿಸಿ ಅನ್ನವ ಬಡಿಸಲು

ಏಕಾಗ್ರತೆಯಲ್ಲಿ ಜನರುಣಲು

ಐದು ಬಗೆಯ ಸಿಹಿಭಕ್ಷ್ಯಗಳಿದ್ದುವು

ಒಗ್ಗರಣೆಯ ಹುಳಿ ಮೊಸರಿತ್ತು

ಓಡುವ ತಿಳಿಪಾಯಸವನು ಮೆಲ್ಲುತ

ಔತಣದೂಟವ ಹೊಗಳಿದರು .

ಅ೦ದದ ಊಟದ ನಂತರ ಅಡಿಕೆಯ

ಅಃ ಎ೦ದರು ಜನ ಸವಿಯುತಲಿ ॥

೨.

ಕರೆಯುವೆ ನಿನ್ನ ಕಣ್ಮಣಿಯನ್ನ

ಕಾಡಿಗೆ ಕಣ್ಣಿನ ಓ ನವಿಲೇ

ಕಿಟಕಿಯೊಳಿಂದ ಬಾ ಮುದದಿಂದ

ಕೀಟಲೆ ಮಾಡೆನು ನಾ ನಿನಗೆ

ಕುಡಿಯಲು ಹಾಲು ತರಲೇನ್ ಹೇಳು

ಕೂಗುತ ನಲಿಯುತ ಬಂದುಬಿಡು

ಕೃತಜ್ಞತೆ ತೋರಲು ಕುಣಿದುಬಿಡು

ಕೆಣಕುವುದಿಲ್ಲ ಮೋಸವಿದಲ್ಲ

ಕೇಕೇಗಾನವ ಮಾಡುತ್ತಿರು

ಕೈಯಲ್ಲಿರುವ ಹಣ್ಣನು ಕೊಡುವೆ

ಕೊರಳನು ಬಾಗುತ ಬಾಬಾಬಾ

ಕೋರಿಕೆಯನ್ನ ನೀ ಸಲಿಸೆನ್ನ

ಕೌತುಕಪಡುವನು ನಿನಗಾಗಿ

ಕಂದನ ಕರೆಯಿದು ಪ್ರೇಮದ ಕುರುಹಿದು

ಕಃ ಎನ್ನದೆ ಬಾ ಕುಣೀಕುಣಿ !

 

ವ್ಯಂಜನಗಳಲ್ಲಿ ಮುಖ್ಯವಾಗಿ ಎರಡು ಗುಂಪುಗಳಿವೆ :

( ೧ ) ವರ್ಗಿಯ ವ್ಯಂಜನಗಳು ,

( ೨ ) ಅವರ್ಗೀಯ ವ್ಯಂಜನಗಳು , ‘

ವರ್ಗ ‘ ಎಂದರೆ ಗು ೦ ಪು , ಸಮೂಹ . ಕೆಲವೊಂದು ನಿಯಮಗಳಿಗೆ ಅನುಗುಣವಾಗಿ ಗುಂಪಾಗಿ ವಿಂಗಡಿಸಿರುವ ವ್ಯಂಜನಗಳೇ ವರ್ಗಿಯ ವ್ಯಂಜನಗಳು .

ಯಾವ ಅಕ್ಷರಗಳು , ಸಮಾನವಾದ ಪ್ರಯತ್ನದಿಂದ ಹುಟ್ಟುವ ಮಹಾಪ್ರಾಣವನ್ನೂ , ಅನುಸ್ವಾರಗಳನ್ನೂ ಹೊಂದುತ್ತವೋ , ಅವುಗಳನ್ನು ಒಂದು ವರ್ಗವೆಂದು ವಿಭಾಗಿಸಿದ್ದಾರೆ . ಉದಾ : – ಕ = ಖ . ಗ = ಘ . ಗ + ಅನುಸ್ವಾರ , ಅನುನಾಸಿಕ = ಙ

 . ವರ್ಗಿಯ ವ್ಯಂಜನಗಳು

( ೧ ) ಪ್ರತಿವರ್ಗದಲ್ಲೂ ಐದು ವ್ಯಂಜನಗಳಿರುತ್ತವೆ .

( ೨ ) ಪ್ರತಿವರ್ಗದ ಒಂದು ಮತ್ತು ಮೂರನೆಯ ವ್ಯಂಜನಗಳು ಅಲ್ಪಪ್ರಾಣಗಳು .

( ೩ ) ಪ್ರತಿವರ್ಗದ ಎರಡು ಮತ್ತು ನಾಲ್ಕನೆಯ ವ್ಯಂಜನಗಳು ಮಹಾಪ್ರಾಣಗಳು ,

( ೪ ) ಪ್ರತಿವರ್ಗದ ಐದನೆಯ ವ್ಯಂಜನ ಅನುನಾಸಿಕವಾಗಿರುತ್ತದೆ .

ಪ್ರಾಣ ಎಂದರೆ ಉಸಿರು ( ಗಾಳಿ ) , ಅಲ್ಪಪ್ರಾಣಾಕ್ಷರಗಳನ್ನು ಉಚ್ಚರಿಸಲು ಸ್ವಲ್ಪ ಉಸಿರು ಸಾಕು . ಉದಾ : ಕ , ಗ , ಚ , ಜ , ಟ , ಡ , ತ , ದ , ಪ , ಬ ( ೧೦ )

ಮಹಾಪ್ರಾಣಾಕ್ಷರಗಳನ್ನು ಉಚ್ಚರಿಸಲು ಹೆಚ್ಚು ಉಸಿರು ಬೇಕು . ಉದಾ : ಖ , ಘ , ಛ , ಝ , ಠ , ಡ , ಥ , ದ , ಫ , ಭ . ( ೧೦ )

ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಂಜನಗಳೇ ಅನುನಾಸಿಕಗಳು , ಉದಾ : ಜಿ , ಞ , ಣ , ನ , ಮ . ( ೫ )

ಈ ಮೇಲಿನ ಯಾವ ನಿಯಮಗಳಿಗೂ ಒಳಪಡದಿರುವ ವ್ಯಂಜನಗಳೇ ಅವರ್ಗೀಯ ವ್ಯಂಜನಗಳು . ಉದಾ : ಯ , ರ , ಲ , ವ , ಶ , ಷ , ಸ , ಹ , ಳ , ( ೯ )

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳು :

ಕನ್ನಡ ಕವಿಗಳು 

ಶಾಸನಗಳು 

ಕನ್ನಡ ವರ್ಣಮಾಲೆ

Comments

Leave a Reply

Your email address will not be published. Required fields are marked *