
ಪರಿವಿಡಿ
ವಿಶ್ವ ಸ್ವಾತಂತ್ರ್ಯದ ಸೂಚ್ಯಂಕ
freedom in the world report, world press freedom index, press freedom index, world press freedom index 2021, world press index
ಅಮೆರಿಕಾ ಮೂಲದ ಫ್ರೀಡಂ ಹೌಸ್ನ ( Freedom House’s ) ‘ ಫ್ರೀಡಂ ಇನ್ ದಿ ವರ್ಲ್ಡ್ ರಿಪೋರ್ಟ್ 2021 ( ‘ Freedom in the World Report 2021 ) ರಲ್ಲಿ ಭಾರತದ ಸ್ಥಿತಿಯನ್ನು ಮುಕ್ತ ದೇಶದಿಂದ ( “ free ‘ coun try ) ಮೊದಲ ಬಾರಿಗೆ ‘ ಭಾಗತಃ ಮುಕ್ತ ದೇಶಕ್ಕೆ ( ‘ partly free country ) ಇಳಿಸಿ , ಅದಕ್ಕೆ 67/100 ಅಂಕಗಳನ್ನು ನೀಡಿದೆ .
210 ದೇಶಗಳ ಸಮೀಕ್ಷೆ ನಡೆಸಿರುವ ಅಮೆರಿಕಾದ ಥಿಂಕ್ ಟ್ಯಾಂಕ್ , ಸುಮಾರು 125 ವಿಶ್ಲೇಷಕರು ಮತ್ತು 40 ಕ್ಕೂ ಹೆಚ್ಚು ಸಲಹೆಗಾರರ ಸಹಾಯದಿಂದ ಪ್ರತಿ ದೇಶದ ಸ್ಥಾನವನ್ನು ನಿರ್ಣಯಿಸಲಾಗಿದೆ . ಫ್ರೀಡಂ ಹೌಸ್ ಪ್ರತಿ ದೇಶದ ಅಥವಾ ಪ್ರದೇಶವನ್ನು ಎರಡು ಮುಖ್ಯ ನಿಯತಾಂಕಗಳ ಆಧಾರದ ಮೇಲೆ ನಿರ್ಣಯಿಸುತ್ತದೆ :
ಅವುಗಳೆಂದರೆ ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು , ನಂತರ ಅವುಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ . ಈ ವಿಭಾಗಗಳನ್ನು ಮತ್ತಷ್ಟು ಪ್ರಶ್ನೆಗಳಾಗಿ ವಿಂಗಡಿಸಲಾಗಿದೆ ಮತ್ತು ಒಂದು ದೇಶವು ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ ಪ್ರತಿ ಪ್ರಶ್ನೆಗೆ 4 ಅಂಕವನ್ನು ನೀಡಲಾಗುತ್ತದೆ .
ರಾಜಕೀಯ ಹಕ್ಕುಗಳ ವಿಭಾಗವು ಅಂತಹ 10 ಪ್ರಶ್ನೆಗಳನ್ನು ಹೊಂದಿದ್ದರೆ , ನಾಗರಿಕ ಸ್ವಾತಂತ್ರ್ಯನ 15 ಶ್ನೆಗಳನ್ನು ಹೊಂದಿದೆ . ಇದು ವಿವಾದಿತ ವರ್ಗಗಳನ್ನು ಪ್ರತ್ಯೇಕವಾಗಿ ನಿರ್ಣಯಿಸುತ್ತದೆ . ರಾಜಕೀಯ ಹಕ್ಕುಗಳ ವಿಭಾಗದಲ್ಲಿ ಭಾರತ 40 ಅಂಕಗಳಲ್ಲಿ 34 ಅಂಕಗಳನ್ನು ಗಳಿಸಿದೆ ,
ಆದರೆ ನಾಗರಿಕ ಸ್ವಾತಂತ್ರ್ಯದ ಮೇಲೆ 60 ರಲ್ಲಿ 33 ಅಂಕಗಳನ್ನು ಗಳಿಸಿದೆ .
ವಿಶ್ವ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಮುಂಚೂಣಿ ಮತ್ತು ಕೊನೆಯ
ಸ್ಥಾನ ಪಡೆದಿರುವ ರಾಷ್ಟ್ರಗಳು
ದೇಶಗಳು (ಕಳಪೆ ರಾಷ್ಟ್ರಗಳು ) ರ್ಯಾಂಕ್
ಸಿರಿಯಾ , ಟೆಬೆಟ್ 1
ಎರಿಟ್ರಿಯಾ , ದಕ್ಷಿಣ ಸೂಡಾನ್ , ತುರ್ಕಿಮೆಸ್ಥಾನ 2
ಉತ್ತರಕೊರಿಯಾ 3
ಪಶ್ಚಿಮ ಸಹರಾ 4
ಗಿನಿಯಾ 5
ಕ್ರಿಮಿಯಾ , ಸೋಮಾಲಿಯಾ , ಸೌದಿ ಅರೇಬಿಯಾ 7
ತಜಕೀಸ್ತಾನ 8
ಚೀನಾ , ಕೇಂದ್ರ ಆಫ್ರಿಕನ್ ರಿಪಬ್ಲಿಕ್ , ಲಿಬಿಯಾ 9
ಅಜರ್ ಬೈಜನ್ 10
ದೇಶಗಳು ( ಉತ್ತಮ ಸ್ಥಾನ ) ರ್ಯಾಂಕ್
ಬಹಾಮಸ್ 91
ಪಲಾವು , ಮೈಕ್ರೋನೇಶಿಯಾ 92
ಯುನೈಟೆಡ್ ಕಿಂಗ್ಡಂ , ತುವಾಲು , ಸ್ಯಾನ್ ಮ್ಯಾರಿನೋ , ಡೋಮೈನಿಕಾ , ಆಸ್ಟ್ರಿಯಾ 93
ತೈವಾನ್ , ಐಸ್ಲ್ಯಾಂಡ್ , ಜರ್ಮನಿ , ಎಸ್ಟೋನಿಯಾ , ಸೈಪ್ರಸ್ 94
ಸ್ಟೋವೆನಿಯಾ , ಬಾರ್ಬಡೋಸ್ 95
ಸ್ವಿಜರ್ಲ್ಯಾಂಡ್ , ಪೋರ್ಚಗಲ್ , ಜಪಾನ್ , ಬೆಲ್ವಿಯಂ 96
ಲಗ್ನಂಬರ್ಗ್ , ಐರ್ಲೆಂಡ್ , ಡೆನ್ಮಾರ್ಕ್ , ಆಸ್ಟ್ರೇಲಿಯಾ 97
ಉರುಗೈ , ನೆದರ್ಲ್ಯಾಂಡ್ , ಕೆನಡಾ 98
ನ್ಯೂಜಿಲ್ಯಾಂಡ್ 99
ಸ್ವೀಡನ್ , ನಾರ್ವೆ , ಫಿನ್ಲ್ಯಾಂಡ್ 100
ಪ್ರಮುಖ ಸಂಘಟನೆಗಳು ವಿಶ್ವ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಸದಸ್ಯ ರಾಷ್ಟ್ರಗಳ ಸ್ಥಾನ
ಬ್ರಿಕ್ಸ್ನ 5 ರಾಷ್ಟ್ರಗಳು ರಷ್ಯಾ -20 , ಬ್ರೆಜಿಲ್ -74 , ಚೀನಾ -9 , ದ.ಆಫ್ರಿಕಾ -79 , ಭಾರತ -67
ಕ್ವಾಡ್ನ 4 ರಾಷ್ಟ್ರಗಳು ಭಾರತ -67 , ಜಪಾನ್ -96 , ಅಮೆರಿಕಾ -83 , ಆಸ್ಟ್ರೇಲಿಯಾ -97
ಸಾರ್ಕ್ನ 8 ರಾಷ್ಟ್ರಗಳು ಅಫ್ಘಾನಿಸ್ತಾನ -27 , ಬಾಂಗ್ಲಾದೇಶ -39 , ಭೂತಾನ್ -61 , ಭಾರತ -67 ,
ಮಾಲೀವ್ -40 , ನೇಪಾಳ -87 , ಪಾಕಿಸ್ತಾನ -37 , ಶ್ರೀಲಂಕಾ -56
ಬಿಮ್ಸೆಕ್ 7 ರಾಷ್ಟ್ರಗಳು ಶ್ರೀಲಂಕಾ -56 , ಥೈಲ್ಯಾಂಡ್ -42 , ಭಾರತ -67 , ಭೂತಾನ್ – 61
ಬಾಂಗ್ಲಾದೇಶ -39 , ಮಯನ್ಮಾರ್ -28 , ನೇಪಾಳ -56
ಜಿ -4 ರಾಷ್ಟ್ರಗಳು ಬ್ರೆಜಿಲ್ -74 , ಭಾರತ -67 ಜಪಾನ್ -23 , ಜರ್ಮನಿ -29
ಜಿ -7 ರಾಷ್ಟ್ರಗಳು ಕೆನಡಾ -98 , ಫ್ರಾನ್ಸ್ -90 , ಜರ್ಮನಿ -94 , ಇಟಲಿ -90 , ಜಪಾನ್ -96
ಯನೈಟೆಡ್ ಕಿಂಗ್ಡಮ್ -93 , ಅಮೆರಿಕಾ -83
ಹಿಂದಿನ ವರ್ಷಗಳಲ್ಲಿ ಭಾರತದ ಸ್ಥಾನ
2014 – 79
2015 – 80
2016 – 81
2017 – 77
2018 – 77
2019 – 75
2020 – 71
2021 – 67
ಫ್ರೀಡಂ ಹೌಸ್ನ ಪ್ರಕಾರ ಅಂತರ್ಜಾಲ ಸ್ವತಂತ್ರ ರಾಷ್ಟ್ರಗಳ ಸ್ಥಾನಮಾನ- 2021
ರಾಷ್ಟ್ರಗಳು ಸ್ಥಾನ
ಚೀನಾ 10
ಪಾಕಿಸ್ತಾನ 26
ರಷ್ಯಾ 30
ಸೌದಿ 26
ಶ್ರೀಲಂಕಾ 52
ಅಮೆರಿಕಾ 76
ಭಾರತ 51
ಆಸ್ಟ್ರೇಲಿಯಾ 76
ಬಾಂಗ್ಲಾದೇಶ 42
ಬ್ರೆಜಿಲ್ 63
ಇರಾನ್ 15
ಯುಎಇ 29
ಫ್ರೀಡಂ ಹೌಸ್ / Freedom House
ಸ್ಥಾಪನೆ – 1941
ಕೇಂದ್ರ ಕಛೇರಿ – ವಾಷಿಂಗ್ಟನ್ ಡಿಸಿ , ಅಮೆರಿಕಾ
ಮುಖ್ಯಸ್ಥರು – ಮೈಕೆಲ್ ಚೆರ್ಟಾಫ್ & ಮೈಕಲ್ ಜೆ ಅಬ್ರಮೋವಿಟ್ಸ್
ಕಾರ್ಯ – ಸಂಶೋಧನಾ ಸಂಸ್ಥೆ ( ಚಿಂತಕರ ಛಾವಡಿ )
ಸಂಶೋಧನಾ ಆಯಾಮಗಳು – ಪ್ರಜಾಪ್ರಭುತ್ವ , ರಾಜಕೀಯ ಸ್ವಾತಂತ್ರ್ಯ & ಮಾನವ ಹಕ್ಕುಗಳು ,
ಅನುದಾನ – ಅಮೆರಿಕಾ ಸರ್ಕಾರ
ವಿಶ್ವ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿಯಲು ಕಾರಣ
” ನರೇಂದ್ರ ಮೋದಿ ಅವರು 2014 ರಲ್ಲಿ ಪ್ರಧಾನಿಯಾದ ನಂತರ ದೇಶದಲ್ಲಿ ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳು ಹದಗೆಟ್ಟಿವೆ , ಮಾನವ ಹಕ್ಕುಗಳ ಸಂಘಟನೆಗಳ ಮೇಲೆ ಹೆಚ್ಚಿನ ಒತ್ತಡ , ಶಿಕ್ಷಣ ತಜ್ಞರು ಮತ್ತು ಪತ್ರಕರ್ತರ ಬೆದರಿಕೆ ಹೆಚ್ಚುತ್ತಿದೆ ಮತ್ತು ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಲಿಂಚಿಂಗ್ ಸೇರಿದಂತೆ ಧರ್ಮಾಂಧ ದಾಳಿಗಳು ಹೆಚ್ಚಳವಾಗಿದೆ ‘ ಎಂದು ವರದಿ ತಿಳಿಸಿದೆ . ” 2019 ರಲ್ಲಿ ಮೋದಿಯವರು ಮರು ಆಯ್ಕೆಯಾದ ನಂತರವೇ ಅವನತಿ ವೇಗಗೊಂಡಿದೆ . “