ವಚನ ಸಾಹಿತ್ಯ

ವಚನ ಸಾಹಿತ್ಯ,vachana sahitya in kannada,vachana sahitya in kannada pdf,ಬಸವಣ್ಣನ ವಚನಗಳು,akkamahadevi vachanagalu

ವಚನ ಸಾಹಿತ್ಯ,vachana sahitya in kannada,vachana sahitya in kannada pdf,ಬಸವಣ್ಣನ ವಚನಗಳು,akkamahadevi vachanagalu

ಜೇಡರ ದಾಸಿಮಯ್ಯ ( ದೇವರ ದಾಸಿಮಯ್ಯ )

11 ನೇ ಶತಮಾನದ ಅಂತ್ಯ ಹಾಗೂ 12 ನೇ ಶತಮಾನದ ಆದಿಯಲ್ಲಿದ್ದ ಆದ್ಯ ವಚನಕಾರ ವೃತ್ತಿ ನೇಯ್ದೆ ಯವರಾದ ಇವರು ಸುರಪುರ ತಾಲ್ಲೂಕಿನ ಮುಡಿನೀರು ( ಮುದನೂರು ) ಇವರ ಜನ್ಮ ಸ್ಥಳ .

“ ರಾಮನಾಥ ” ಎಂಬುದು ಇವರ ವಚನಗಳ ಅಂಕಿತ . ಕನ್ನಡದ ಮೊದಲ ವಚನಕಾರ . ಅಂದಿನ ಸಮಾಜದಲ್ಲಿ ರೂಢಿಯಲ್ಲಿದ್ದ ಸಾಮಾಜಿಕ & ಧಾರ್ಮಿಕ ಲೋಪದೋಷಗಳ ಬಗ್ಗೆ ತನ್ನವಚನಗಳಲ್ಲಿ ವಿಡಂಬಿಸಿದ್ದಾನೆ . “

ಬರುಶಟಗನ ಭಕ್ತಿ ದಿಟವೆಂದು ನಚ್ಚಲು ಬೇಡ ” “ ಮಠದೊಳಗಣ ಬೆಕ್ಕು ಇಲಿಯ ಕಂಡು ಪಟನೆಗೆದಂತಾಯಿತ್ತು ”

“ ಎಳ್ಳು ಇಲ್ಲದ ಗುಣದಲ್ಲಿ ಎಣ್ಣೆಯುಂಟೆ ” ಮತ್ತು “ ಹರಿದ ಗೋಣಿಯಲೊಬ್ಬ ಕಳವೆಯ ತುಂಬಿ ಇರುಳೆಲ್ಲ ನೆಡೆದ ಎಂದು ಹೀಗೆ ಡಾಂಭಿಕ ಭಕ್ತಿಯ ಬಗ್ಗೆ ವ್ಯಂಗ್ಯವನ್ನು ಕಾಣಬಹುದಾಗಿದೆ .

ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡ ಶರಣನ ನುಡಿಗಡಣವೇ ಕಡಗೀಲು ಎಂಬ ಉಕ್ತಿ – ಜೇಡರ ದಾಸಿಮಯ್ಯನವರದು

ಬಸವಣ್ಣ ( 1150 )

12 ನೇ ಶತಮಾನದ ಕ್ರಾಂತಿ , ಪುರುಷ ಭಕ್ತಿ ಭಂಡಾರಿ ಬಸವಣ್ಣ ಸಮಾಜ ಸುಧಾರಕನಾಗಿ , ವಿಚಾರವಾದಿಯಾಗಿ , ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯುಂಟುಮಾಡಿದ ಮಹಾನ್ ದಾರ್ಶನಿಕ

, ಈತನ ವಚನಗಳ ಅಂಕಿತ – ಕೂಡಲ ಸಂಗಮ ದೇವ

ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದ . ಇವನ ತಂದೆ – ಮಾದರಸ , ತಾಯಿ ಮಾದಲಾಂಭಿಕೆ ಹಾಗೂ ಇವನ ಪತ್ನಿಯರು ಗಂಗಾಂಭಿಕೆ , ನೀಲಾಂಭಿಕೆ .

ಇವರು ಕಲಚೂರಿನ ರಾಜನಾದ ಬಿಜ್ಜಳನ ಆಸ್ಥಾನದಲ್ಲಿ ಭಂಡಾರಿಯಾಗಿ ,  ಮಂತ್ರಿಯಾಗಿದ್ದಂತಹವನು . ಮಂಗಳವಾಡದಲ್ಲಿ ಅನಂತರ ಕಲ್ಯಾಣದಲ್ಲಿ ಬಿಜ್ಜಳನ ಜೊತೆಯಲ್ಲಿದ್ದನು .

ಇವರ ವಚನದಲ್ಲಿ ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿ ಮುಖ್ಯ ಎಂಬುದನ್ನು ಲೋಕಕ್ಕೆ ಸಾರಿದವನು .

ಕಲ್ಲ ನಾಗರವ ಕಂಡರೆ ಹಾಲೆರೆ ಎಂಬುವರು ದಿಟದ ನಾಗರವ ಕಂಡರೆ ಕೊಲ್ಲೆಂಬರು ” , “ ಲೋಕದ ಡೊಂಕ ನೀವೇಕೆ ತಿದ್ದುವಿರಿ ? “ ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ “ ಆಚಾರವೇ ಸ್ವರ್ಗ ಅನಾಚಾರವೇ ನರಕ ” “ ದಯವಿಲ್ಲದ ” 1 ಧರ್ಮ ಯಾವುದಯ್ಯ

ಹೀಗೆ ಸಾಮಾಜಿಕ ಜೀವನದಲ್ಲಿ ಲೋಪದೋಷಗಳ ಬಗ್ಗೆ ವಿಡಂಬನೆಯನ್ನು ಅವರ ವಚನಗಳಲ್ಲಿ | ಕಾಣಬಹುದಾಗಿದೆ .

ಕಾಯಕವೇ ಕೈಲಾಸ ” ಎಂಬ ತತ್ವವನ್ನು ಪ್ರಚಲಿತಕ್ಕೆ ತಂದ ಮಹಾನ್ ಮೇಧಾವಿ ಬಸವಣ್ಣ . ಗಾದೆ ಮಾತುಗಳನ್ನು ನಿದರ್ಶನವಾಗಿ ನೀಡಿದ್ದಾರೆ .

ಅಂದರೆ “ ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಬದಲು ಹಾಗಬಲ್ಲದೆ ಸಗಣಿಯ ಬೆನಕಂಗೆ ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ ” ಎಂದಿದ್ದಾರೆ .

ಹೀಗೆ ಅನೇಕ ರೀತಿಯಲ್ಲಿ ಸಾಮಾಜಿಕ ಮೂಢನಂಬಿಕೆಗಳನ್ನು & ಧೋರಣೆಗಳನ್ನು ನಿದರ್ಶನದ ಮೂಲಕ ವ್ಯಕ್ತಪಡಿಸಿದ್ದಾರೆ .

ಅಲ್ಲಮ ಪ್ರಭು

ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯಲ್ಲಿ ಜನಿಸಿದ ಅಲ್ಲಮ ಪ್ರಭು ಪ್ರಮುಖ ವಚನಕಾರರಲ್ಲಿ ಒಬ್ಬನು .

ಇವರ ವಚನದ ಅಂಕಿತ – ಗುಹೇಶ್ವರ

ಅನುಭವ ಮಂಟಪದ – ಅಧ್ಯಕ್ಷರಾಗಿ ಹಾಗೂ ಶೂನ್ಯ ಸಿಂಹಾಸನಾಧೀಶ್ವರರೆಂದು ಪ್ರಖ್ಯಾತಿಯನ್ನು ಪಡೆದಿದ್ದಾರೆ . ಇವರ ವಚನದಲ್ಲಿ ಒಗಟು , ಗಾದೆ , ಉಪಮಾಲಂಕಾರ ಮೊದಲಾದ ಕಾವ್ಯ ಸಂಪತ್ತು ಅಡಗಿದೆ . ಇವರು ಒಬ್ಬ ಪ್ರವಾದಿ ಎಂದರೆ ತಪ್ಪಾಗಲಾರದು . –

“ ಹೊನ್ನು ಮಾಯೆಯೆಂಬುದು , ಹೆಣ್ಣು ಮಾಯೆಯೆಂಬರು … ಅನುಭವದ ತೀವ್ರತೆಯನ್ನು ಕಾಣಬಹುದಾಗಿದೆ .

ತಲೆಯಿಲ್ಲದೆ ತಲೆಯಾದಂತೆ , ಕರುಳಿಲ್ಲದ ಒಡಲು ನೋಡು ಎಂದವರು ಅಲ್ಲಮಪ್ರಭುಗಳು ,

ದೇವರಿಗೆ ದೇವಾಲಯವನ್ನು ಕಟ್ಟುವಂತಹವರಿಗೆ “ ಬೆಟ್ಟಕ್ಕೆ ಚಳಿಯಾದೆಡೆ ಏನ ಹೊದಿಸುವರಯ್ಯಾ ” ಎಂದು ಪ್ರಶ್ನಿಸುತ್ತಾರೆ . ಬದುಕು . ಮಾಡಬೇಕೆಂಬ

ಈತ ವೈರಾಗ್ಯ ಮೂರ್ತಿ ಎನಿಸಿದರು . ವೈಯಕ್ತಿಕ ಸಮಾಜದ ಮನರ್ ನಿರ್ಮಾಣ ಕಳಕಳಿಯ ಮಹತ್ವಾಕಾಂಕ್ಷೆಯನ್ನು ಅಭಿವ್ಯಕ್ತಿ ಪಡಿಸುತ್ತವೆ . ಆತನ ವಚನಗಳು

ಇವರ ಬಗ್ಗೆ ಹರಿಹರ ಬೆರೆದ ಪ್ರಭುದೇವರ ರಗಳೆ ಒಂದು ಉತ್ಕೃಷ್ಟ ಕೃತಿಯಾಗಿದೆ .

ಅಕ್ಕ ಮಹಾದೇವಿ

ಕನ್ನಡ ಸಾಹಿತ್ಯದ ಮೊದಲ ಕವಯತ್ರಿ ವಚನಕಾರ್ತಿ

ಚೆನ್ನಮಲ್ಲಿಕಾರ್ಜುನ ” ಎಂಬ ವಚನಗಳನ್ನು ರಚಿಸಿದ್ದಾಳೆ .

ಉಡುತಡಿಯಲ್ಲಿ ಸುಮತಿಯರೆಂಬ ಅಂಕಿತದಿಂದ ನಿರ್ಮಲ ಶೆಟ್ಟಿ ಮತ್ತು ದಂಪತಿಗಳ ವೀರಶೈವ ಮಗಳಾಗಿ ಜನಿಸಿದ ಅಕ್ಕಮಹದೇವಿ ಕೌಶಿಕನೊಡನೆ ವಿವಾಹವಾಗಿ ಭೂಗ – ಭಾಗ್ಯವನ್ನೆಲ್ಲ ತ್ಯಜಿಸಿ , ವಿರಕ್ತ ದಿಗಂಬರೆಯಾಗಿ ಅಲೌಕಿಕ ಗಂಡನನ್ನು ಹರಸುತ್ತಾ ಹೊರಟ ದಿಟ್ಟ ಮಹಿಳೆ , ಸಾಂಪ್ರಾದಾಯಕ ಪುರುಷ ಸಮಾಜದ ನಿಯಮಗಳನ್ನು ದಿಕ್ಕರಿಸಿ , ಪ್ರಧಾನ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ನಿಕೃಷ್ಣ ಸ್ಥಾನಮಾನ

ಕಿರುಕುಳ , ಹಿಂಸೆಗಳ ವಿರುದ್ಧ ಪ್ರತಿಭಟಿಸಿದ ಮಹಿಳೆ ,

ಅವಳ ಭಕ್ತಿ ಭಾವ ಶರಣರ ಸತಿ ಲಿಂಗ ಪತಿ ಸ್ವರೂಪದ್ದು ವೇದನೆ – ವಾದನೆಯ ಎರಡೂ ರೂಪ ರಸಸ್ವಾದನೆಯು ಈಕೆಯ ವಚನಗಳಲ್ಲಿವೆ . ಮಾನಸಿಕ

ಇವಳ ವಚನಗಳಲ್ಲಿ ಸಮಾಜದ ವಿಮರ್ಶೆಗಿಂತ ಸ್ವವಿಮರ್ಶೆಯೇ ಹೆಚ್ಚಾಗಿದೆ . ತನ್ನ ತುಮುಲಗಳನ್ನು ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವ , ಏರಿಲ್ಲದ ಗಾಯದಲ್ಲಿ ನೊಂದನವ್ವ ” ಎಂಬಲ್ಲಿಯೂ ತರಣಿಯ ಹುಳು ತನ್ನ ಸ್ನೇಹದಲ್ಲಿ ಮನೆಯ ಮಾಡಿ , ತನ್ನ ನೂಲು ತನ್ನನ್ನೇ ಸುತ್ತಿ ಸಾವ ತೆರನಂತೆ , ಜೀವುತ್ತಿದ್ದೆನಯ್ಯಾ ” ಮನ ಬಂದುದ ಬಯಸಿ ಎಂಬಲ್ಲಿಯೂ ಗುರುತಿಸಬಹುದಾಗಿದೆ .

ತನ್ನ ಅಲೌಕಿಕ ಗಂಡನಾದ ಚನ್ನಮಲ್ಲಿಕಾರ್ಜುನನ್ನು ಹುಡುಕುವಲ್ಲಿ “ ಅಳಿಸಂಕುಳವೇ , ಬೆಳದಿಂಗಳೇ , ಕೋಗಿಲೆಯೇ ಮಾಮರವೇ , ನಿಮ್ಮ ನಿಮ್ಮ ನೆಲ್ಲರನ್ನೂ ಒಂದ ಬೇಡುವೆನು ಎನ್ನೊಡೆಯ ಚೆನ್ನ ಮಲ್ಲಿಕಾರ್ಜುನ ದೇವನ ಕಂಡರೆ ಕರೆದು ತೋರಿರೆ “ ಎಂಬಲ್ಲಿ ಅವಳ ವಿರಹವೇದನೆ , ನೋವುಗಳನ್ನು ಕಾಣಬಹುದಾಗಿದೆ …. ” ಎಂಬಲ್ಲಿ ಮಾನವನ ಸಮಾಜದಲ್ಲಿ ಎಂತಹ ಕಠಿಣ ಪರಿಸ್ಥಿತಿ ಒದಗಿದರೂ ಮನುಷ್ಯರಲ್ಲಿ ಬರಬೇಕೆಂಬ ಆ ಗಂಡಾಂತಗಳನ್ನು ನಿಭಾಯಿಸುವ ಧೈರ – ಸೈಯ್ಯ ಧೀರೋದಾತ್ತ ಹೇಳಿಕೆಯಾಗಿದೆ .

ಯೋಗಾಂಗತ್ರಿವಿಧಿ ” ಎಂಬುದು ಅಕ್ಕಮಹಾದೇವಿಯಚಿಕ್ಕ ಕೃತಿ , ಮೊದಲು ತ್ರಿಪದಿಯಲ್ಲಿ ರಚಿತವಾಗಿರುವ ಈ ಕೃತಿಯಲ್ಲಿ ವೈಯಕ್ತಿಕ ಅಂಶಗಳನ್ನು ಬೆಡಗಿನ ಮಾದರಿಯ ಅಂಶಗಳಲ್ಲಿ ನಿರೂಪಿಸಿದ್ದಾಳೆ .

ಇವರು ದಕ್ಷಿಣ ಭಾರತದ ಮೀರಾದೇವಿ ಎಂದೇ ಹೆಸರಾಗಿದ್ದರು .

 ಚೆನ್ನ ಬಸವಣ್ಣ

ಜ್ಞಾನ ನಿಧಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಅಂದರೇ ಇವರ ವಚನಗಳಲ್ಲಿ ಜ್ಞಾನ ತುಂಬಿ ತುಳಿಕುತ್ತಿದೆ ಎಂದರ್ಥ . ಇವರ ಅಂಕಿತನಾಮ ಚೆನ್ನ ಸಂಗಯ್ಯ .

ಸೂರೆಯ ಮಡಕೆಗೆ ಬೂದಿ ಪೂಜಿಸಿದರೆ ನು , ಒಳಗೆ ಶುದ್ಧವಾಗದನ್ನಕ್ಕರ , ಕಬ್ಬುನದ ಶುನಕನ ತುಂದು ಪುರುಷವ ಮುಟ್ಟಿಸಲು ಹೊನ್ನ ಶುನಕವಪ್ಪುದು , ಅದು ಪುರುಷ ವಾಗಲರಿಯದು ನೋಡಾ ! ಮಹಾಪಾತಕವ ಪರಸ್ತ್ರೀಯ ಸಂಗ , ಪಂಚ ತುಂದಿತ್ತು ಎಂದಿದ್ದಾರೆ .

ಹೀಗೆ ವಚನಗಳಲ್ಲಿ ಜ್ಞಾನ ಭಂಡಾರ ಬಗ್ಗೆ ತಿಳಿಸಿದ್ದಾರೆ . – ಅಲ್ಲಮ ಪ್ರಭುವಿನಿಂದ ಮಹಾಜ್ಞಾನಿ ಎಂದು ಹೊಗಳಿಸಿಕೊಂಡಿದ್ದಾರೆ .

ಸಿದ್ಧರಾಮ

ಅಂಕಿತ ನಾಮ – ಕಪಿಲ ಸಿದ್ಧ ಮಲ್ಲಿಕಾರ್ಜುನ “ ಭಕ್ತ ನಾದರೆ ಬಸವಣ್ಣನಂತಾಗಬೇಕು . ಜಂಗಮನಾದರೆ ಪಭುವಿನಂತಾಗಬೇಕು .

ಭೋಗಿಯಾದರೆ ಬಸವಣ್ಣನಂತಾಗಬೇಕು . ನನ್ನಂತಾಗಬೇಕು ” ಹೇಳಿಕೊಂಡಿದ್ದಾರೆ . ಆಷಾಡದಲ್ಲಿಯ ಚಂಡಮಾರುತದಂತಿರಬೇಕು ,

ಸರ್ವರಲಿ ಸರ್ವರಂತಾಗಬೇಕು ಎಂದು ದೇಹವೊತ್ತು ದೇಹಿಯಾದರೂ ದೇಹದಾಚೆಯ ಪರತತ್ವವನ್ನು ತಿಳಿಯುವ ಜನರ ಮಧ್ಯೆಯು ಜನಾರ್ಧನನನ್ನು ಕಾಣುವ ಬಗೆಯನ್ನು ಬಣ್ಣಿಸಿದ್ದಾನೆ .

ಕರ್ಮಯೋಗಿ ಸೋಲ್ಲಾಪುರದ ಸಿದ್ದರಾಮ , ಹೀಗೆ ಹೆಸರುಗಳನ್ನು ಉಳ್ಳ ಇವನು ಅನೇಕ ಕೆರೆಗಳನ್ನು , ಕಟ್ಟೆಗಳನ್ನು , ಕಟ್ಟಿ ಜನರುಗಳ ಭಾವನೆಗಳಿಗೆ ಸ್ಪಂಧಿಸಿದ ಮಹಾಪುರುಷ ಎನ್ನಬಹುದಾಗಿದೆ .

ಹರಿಹರ : ( 13 ನೇ ಶತಮಾನ )

ವೀರಶೈವ ಸಾಹಿತ್ಯದಲ್ಲಿ ಹಿರಿಯನೂ ಪ್ರಮುಖನೂ ಆದ ಪ್ರಾಚೀನ ಕವಿ . ಶಿವ ಕವಿ , ಭಕ್ತಿ ಕವಿ ಕ್ರಾಂತಿ ಕವಿ , ರಗಳೆಕವಿ ಅನೇಕ ಹೆಸರುಗಳಿವೆ . * ಕನ್ನಡ ಸಾಹಿತ್ಯಕ್ಕೆ ಮೊದಲು ರಗಳೆ ಪರಿಚಯಸಿದವನು ಹರಿಹರ . ಹಾಗೂ ಹೊಯ್ಸಳ ರಾಜ ವೀರನರಸಿಂಹ ಬಲ್ಲಾಳನಲ್ಲಿ ಕರುಣಿಕನಾಗಿದ್ದನೆಂದು ಹೇಳಲಾಗಿದೆ . ಗಿರಿಜಾ ಕಲ್ಯಾಣ , ಪಂಪಶತಕ , ರಕ್ಷಾ ಶತಕ , ಮುಡಿಗೆಯ ಅಷ್ಟಕ , ಶಿವಶರಣರ ರಗಳೆಯನ್ನು ರಚಿಸಿದ್ದಾನೆ . + ಹರಿಹರನು ರಚಿಸಿದ್ದರೂ * ಗಿರಿಜಾ ಕಲ್ಯಾಣವನ್ನು ಚಂಪೂ ಮಾರ್ಗದಲ್ಲಿ ಶಿವಶರಣರ ರಗಳೆಗಳು ಹರಿಹರನ ಪತಾಕೆಗಳು .

ತಮಿಳಿನ ಪೆರಿಯಾ ಪುರಾಣದಲ್ಲಿ ಹೇಳಿರುವ 63 ಪುರಾತನರ ಮತ್ತು ಬೇರೆ , ಬೇರೆ ಶಿವಭಕ್ತರ ಹಾಗೂ ವೀರಶೈವ ಶರಣರ ಚರಿತ್ರೆಗಳನ್ನು ತನ್ನ ರಗಳೆಗಳಲ್ಲಿ ನಿರೂಪಿಸಿದ್ದಾನೆ . * ಕಾವ್ಯಂ ತಾನಿದು ನವರಸ ಸೇವಂ ಎಂದು ಹೊಗಳಿರುವ ಕಾವ್ಯ – ಗಿರಿಜಾಕಲ್ಯಾಣವಾಗಿದೆ . * ಚಂಪೂ ಕಾವ್ಯಗಳಲ್ಲಿ ವಿರಳವಾಗಿ ಬಳಕೆಯಲ್ಲಿದ್ದ ರಗಳೆಯನ್ನು ಹರಿಹರನು ಕಥೆ , ವರ್ಣನೆ ಮುಂತಾದ ಅಖಂಡ ವಾಹಿನಿಗೆ ಮೊತ್ತ ಮೊದಲು ಬಳಸಿದ್ದಾನೆ . ಅವುಗಳಲ್ಲಿ ಮುಖ್ಯವಾದವು , ಬಸವರಾಜ ದೇವರಗಳ – ಹರಿಹರನ ಶ್ರೇಷ್ಠ ಕೃತಿಯಾಗಿದೆ . ದೇವರ ರಗಳೆ ,

ಇದು ಬಸವಣ್ಣ ಜೀವನ ವೃತ್ತಾಂತ ಈ ಗ್ರಂಥ ನಂಬಿಯಣ್ಣನ ರಗಳೆ , ತಿರುನೀಲ ಕಂಠರ ಮಹಾದೇವಿಯಕ್ಕನ ರಗಳೆ , ಪ್ರಭು ಗುಂಡಯ್ಯನ ರಗಳೆ ಹಾಗೂ ಪುಷ್ಪರಗಳೆ ( ಇದು ಸುಂದರ ಭಾವಗೀತೆಯಾಗಿದೆ ) ಮುಂತಾದವು ಹರಿಹರನ ಪ್ರಸಿದ್ಧ ರಗಳೆಗಳಾಗಿವೆ . ಶಿವ ಶರಣರ ಜೀವನ ಚರಿತ್ರೆಯೇ ಕಾವ್ಯದ ವಸ್ತು ವನ್ನಾಗಿ ಮಾಡಿಕೊಂಡಿರುವುದರಿಂದ “ ಶಿವ ಕವಿ ಎಂದು ಬಿರುದನ್ನು ಪಡೆದು ಕೊಂಡಿದ್ದಾನೆ . ಕನ್ನಡ ಭಾಷೆ , ಸಾಹಿತ್ಯ ಚರಿತ್ರೆ , ಛಂದಸ್ಸುನಲ್ಲಿ ರಗಳೆ ಎಂದರೇ ಪರಿಹರನ ನೆನಪು ಎಲ್ಲರ ಮನಸ್ಸುನಲ್ಲಿ ಮೂಡುತ್ತದೆ ಎಂದರೆ – ಒಟ್ಟಿನಲ್ಲಿ ತಪ್ಪಾಗಲಾರದು

 ರಾಘವಾಂಶ : ( 13 ನೇ ಶತಮಾನ )

ಹರಿಹರನ ಸೋದರಳಿಯನಾದ ರಾಘವಾಂಕನು , ಹರಿಹರನ ಶಿಷ್ಯನೂ ಹೌದು ,

ರಾಘವಾಂಕನು ತನ್ನ ಕೃತಿಗಳನ್ನು ವಾರ್ಧಕ ಷಟ್ನಧಿಯಲ್ಲಿ ರಚಿಸಿ ” ಷಟ್ಟದಿ ಬ್ರಹ್ಮ ” ಎಂದು ಪ್ರಸಿದ್ದಿಯನ್ನು ಹೊಂದಿದ್ದಾನೆ .

ಉಭಯ ಕವಿ ಕಮಲ ಕವಿ / ಕವಿ ಶರಭ ಬಿರುದುಗಳಾಗಿವೆ ಭೇರುಂಡ , ಪಟ್ಟದಿ ಬ್ರಹ್ಮ ಇವು ರಾಘವಾಂಕನಿಗಿದ್ದ *

ಅವನ ಕೃತಿಗಳು -1 ) – ಹರಿಶ್ಚಂದ್ರ ಕಾವ್ಯ 2 ) ಸೋಮನಾಥಚರಿತೆ 4 ) 3 ) ವೀರೇಶ ಚರಿತ್ರ ಸಿದ್ಧರಾಮ ಚರಿತ್ರೆ 5 ) ಶರಭಚಾರಿತ್ರ್ಯ -ಈ 5 ಕಾವ್ಯಗಳಲ್ಲಿ 2 ಕಾವ್ಯಗಳು ಉಪಲಬ್ಧವಾಗಿಲ್ಲ .

“ ಸಿದ್ಧರಾಮ ಚಾರಿತ್ರ್ಯವು ” 12 ನೇ ಶತಮಾನದ ಶಿವ ಶರಣನಾದ ಸಿದ್ದರಾಮನ ಜೀವನ ಚರಿತೆಯಾಗಿದೆ . ”

ವೀರೇಶ ಚರಿತೆಯನ್ನು ” ಉದ್ದಂಡ ಪಟ್ಟಧಿಯಲ್ಲಿ ರಚಿಸಿದ್ದಾನೆ . ಇದರಲ್ಲಿ ” ವೀರಭದ್ರನ ಅವತಾರದ ಕಥೆ ಇದೆ . –

” ಹರಿಶ್ಚಂದ್ರ ಕಾವ್ಯ ರಾಘವಾಂಕನ ಮಹತ್ವದ ಕೃತಿಯಾಗಿದೆ .,

“ ಸತ್ಯ ವೆಂಬುದೇ ಹರನು , ಹರನೆಂಬುದೇ ಸತ್ಯ ಎಂಬ ತತ್ವನ್ನು ನಾಟಕೀಯತೆ . ಕೈಗನ್ನಡಿ ಎನ್ನಬಹುದಾಗಿದೆ . ಹರಿಶ್ಚಂದ್ರ ಪ್ರೇರಣೆಗೊಂಡಿದೆ . ಉದ್ದಂಡ ಷಟ್ಟದಿಯಾಗಿದೆ . ‘ ಕಥಾ ಬೀಜವಿ ಬೀಜಮಂ ಬಿತ್ತಿ ಬೆಳಸಿದರೆ ನೀ ಕಾವ್ಯ ವೃಕ್ಷಮಂ ” ಎಂಬ ಮಾತನ್ನು ರಾಘವಾಂಕ ಹೇಳಿದ್ದಾನೆ .

 ಕುಮಾರ ವ್ಯಾಸ :-

ಕನ್ನಡ ಭಾರತ , ಗದುಗಿನ ಭಾರತ , ಕುಮಾರ ವ್ಯಾಸ ಭಾರತ ಎಂದು ಪ್ರಸಿದ್ಧವಾಗಿರುವ ಕರ್ಣಾಟಕ ಭಾರತ ಕಥಾಮಂಜರಿ ” ಎಂಬ ಭಾಮಿನೀ ಷಟ್ನದಿಯ ಕಾವ್ಯವನ್ನು ರಚಿಸಿದವನು ಕುಮಾರವ್ಯಾಸ ,

ತನ್ನ ಕಾವ್ಯದಲ್ಲಿ ತಾನು ವೀರನಾರಾಯಣನ ಕಿಂಕರನೆಂದು ವೀರನಾರಾಯಣನೆ ಕವಿ ಲಿಪಿಕಾರ *ಕುಮಾರವ್ಯಾಸ ಎಂದು ಹೇಳಿಕೊಂಡಿದ್ದಾನೆ . ನಾರಾಣಪ್ಪ , ಗದುಗಿನ ಹತ್ತಿರದ ಕೋಳಿವಾಡ ಎಂಬ ಗ್ರಾಮಕ್ಕೆ ಸೇರಿದವನು . + ಕರ್ಣಾಟ ಭಾರತ ಕಥಾಮಂಜರಿ ಎಂಬ ಕಾವ್ಯವನ್ನು ಸಂಸ್ಕೃತದ ವ್ಯಾಸ ಭಾರತದಿಂದ ವಸ್ತುವನ್ನು ಆಯ್ದು ಕೊಂಡಿದ್ದರಿಂದ ತಾನು ವ್ಯಾಸನಿಗೆ ಋಣಿ ಎಂಬರ್ಥದಲ್ಲಿ ಕುಮಾರ ವ್ಯಾಸ ಎಂಬ ನಾಮಾಂಕಿತದಲ್ಲಿ ಭಾರತದ ಕಥೆಯ ಮೊದಲ 10 ಪರ್ವಗಳಲ್ಲಿ ಮಾತ್ರ ರಚಿಸಿದ್ದಾನೆ . ಉಳಿದ 8 ಪರ್ವಗಳನ್ನು ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತಿಮ್ಮಣ್ಣ ಕವಿ ರಚಿಸಿದ್ದಾನೆ . ( ತಿಮ್ಮಣ್ಣ ಕವಿ ಕನ್ನಡ ಕೃಷ್ಣರಾಜ ಭಾರತ ಎಂಬ ಹೆಸರಿನಲ್ಲಿ ರಚಿಸಿದ್ದಾನೆ ) ಚತುರ್ಭಾಷಾ ಪಂಡಿತನಾದ ಕುಮಾರ ವ್ಯಾಸನು ತನ್ನನ್ನು ವ್ಯಾಸನ ಮಗನೆಂದೇ ಕರೆದು ಕೊಂಡಿದ್ದಾನೆ .

ಪಂಪನ ಕಾವ್ಯದ ನಾಯಕ ಅರ್ಜುನ , ರನ್ನನ ಗದಾಯುದ್ಧದ ಕುಮಾರವ್ಯಾಸನ ಕಾವ್ಯದ ನಾಯಕ ಶ್ರೀ ಕೃಷ್ಣ ಕುಮಾರವ್ಯಾಸನು ಶ್ರೀ ಕೃಷ್ಣನ ಮಹಿಮೆಯನ್ನು ಭಕ್ಕುತ್ಸಾಹಗಳಿಂದ ಬಣ್ಣಿಸಿದ್ದಾನೆ . ಅವನ ಪಾಲಿಗೆ ಇದು ಕೃಷ್ಣರಾಯನ ಚರಿತೆಯಾಗಿದೆ . * ನಾಯಕ ಭೀಮನಾದರೆ  ಕುಮಾರ ವ್ಯಾಸ ತನ್ನ ಕಾವ್ಯದಲ್ಲಿ ಹೆಚ್ಚು ರೂಪಕಗಳನ್ನು ಬಳಸಿದ್ದಾನೆ . ಆದ್ದರಿಂದ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಕರೆಯಲಾಗಿದೆ

ಕುಮಾರವ್ಯಾಸ ಬರೆದನೆಂದು ಹೇಳಲಾದ 8 ಸಂಧಿಗಳ ಕಾವ್ಯ – ಐರಾವತವಾಗಿದೆ . ತಿಳಿಯ ಹೇಳಿವೆ ಕೃಷ್ಣ ಕಥೆಯನ್ನು ಎಂದು ಕುಮಾರವ್ಯಾಸ ಹೇಳಿದ್ದಾರೆ .

 ಜನ್ನ : -1141 – 1173

ಕಲಿಯುಗ ಎಂದು ಕುವೆಂಪುರವರು > ಕವಿ ಚಕ್ರವರ್ತಿ ಎಂದು ಪ್ರಸಿದ್ಧನಾದ ಜನ್ನನು ಚಕ್ರವರ್ತಿ ವೀರಬಲ್ಲಾಳನ ಆಸ್ಥಾನದ ಹೊಯ್ಸಳ ಕವಿ.ಇವನು ಒಬ್ಬ ಜೈನ ಕವಿಯಾಗಿದ್ದಾನೆ . ಹೊಯ್ಸಳರ ನರಸಿಂಹನ ಓಲಗದಲ್ಲಿ “ ನಿಂದಿರೆ ದಂಡಾ ಧೀಶಂ , ಕುಳ್ಳಿರೆ ಮಂತ್ರಿ , ತೊಡಂಕೆ ಕವಿ ” ಆಗಿ ನಾವಿಭು ಜನಾರ್ಧನ ದೇವ ಎಂದು ಬಿರುದಾಂಕಿತನಾಗಿದ್ದಾನೆ .

ಜನ್ನನ ತಂದೆ ಸುಮನೋ ದಾಣನೆಂದು ಬಿರುದು ಪಡೆದ ಶಂಕರ , ತಾಯಿ- ಗಂಗಾ ಮಾತೆ , ಸೂಕ್ತಿ ಸುಧಾರ್ಣವ’ದ ಕರ್ತೃ ಮಲ್ಲಿಕಾರ್ಜುನ ಇವನ ಭಾವ ಹಾಗೂ ಶಬ್ದಮಣಿ ದರ್ಪಣ ರಚಿಸಿದ ಕೇಶಿರಾಜ ಇವನ ಸೋದರಳಿಯ ಜನ್ನನು ಮೊದಲು ಶಾಸನಗಳನ್ನು ರಚಿಸಿದನು . ನಂತರ ಈ ಎರಡೂ * ಅನಂತನಾಥ ಪುರಾಣ & ಯಶೋಧರ ಚರಿತೆ ಎಂಬ 2 ಕಾವ್ಯಗಳನ್ನು ರಚಿಸಿದ್ದಾನೆ .

ಈ ಎರಡೂ ಕಾವ್ಯಗಳಲ್ಲಿ ಉದ್ದೇಶ ಜೈನ ಧರ್ಮದ ಪ್ರತಿಪಾದನೆ .. ಕಾವ್ಯಗಳಲ್ಲಿ ಜನ್ನನು ಮನುಷ್ಯನ ಮೂಲಭೂತ ಆಶಾ ಪ್ರವೃತ್ತಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಾನೆ .ಅನಂತನಾರ ಪುರಾಣವು ಜೈನರ 14 ನೇ ತೀರ್ಥಂಕರನ ಕಥೆಯಾಗಿದೆ . ಹಾಗೂ ಯಶೋಧರ ಚರಿತ್ರೆಯು ಜೈನ ಧರ್ಮದ ಅಹಿಂಸಾ ತತ್ವವನ್ನು ಪ್ರತಿಪಾದಿಸುವ ಶ್ರೇಷ್ಠ ಕಾವ್ಯವಾಗಿದೆ . ಅರಯ ದಜೆ ಕುಮಾರಂ ಮಾರಿದತ್ತನಿಗೆ ಹಿಂಸಾರವನ ಮತಿಗೆ ಸೈಪಂ ಪೇಳ್ವು ಧರ್ಮಕ್ಕೆ ತಂದ ಈ ಕಾವ್ಯದ

ಹಿಟ್ಟಿನ ಕೋಳಿಯ ಸಂಕಲ್ಪ , ಹಿಂದೆ ಮಾತ್ರದಿಂದ ಯಶೋಧರ ಮತ್ತು ಅವನ ತಾಯಿ ಚಂದ್ರಮತಿಯರು ನಾನಾ ಜನಗಳನ್ನು ಎತ್ತಿರುವ ಪ್ರಸಂಗ ಅಮೃತ ಮತಿಯ ಕುರುಡು ಕಾಮ ಇತ್ಯಾದಿಗಳು ಕಾವ್ಯದಲ್ಲಿ ಬರುವ ಮಾರಿಗುಡಿಯ ದೃಶ್ಯವಂತೂ ಓದುಗರ ಕಣ್ಣಿನಲ್ಲಿ ಅಚ್ಚಳಿಯದೆ , ನಿಲ್ಲುವ ರುದ್ರ ಭಯಂಕರ ದೃಶ್ಯ ಹೀಗೆ ಅನೇಕ ದೃಶ್ಯಗಳು ಜನರ ಮನಸ್ಸಿನಲ್ಲಿ ಮರೆಯದೇ ಉಳಿಯುವ ದೃಶಗಳಾಗಿವೆ

ಅಂಬಿಗರ ಚೌಡಯ್ಯ

12 ನೇ ಶತಮಾನದ ವಚನಕಾರರಲ್ಲಿ ಅತ್ಯಂತ ವಿಶಿಷ್ಟನಾದವನು . ವೃತ್ತಿಯಿಂದ ಅಂಬಿಗ ಪ್ರವೃತ್ತಿಯಲ್ಲಿ ಅನುಭಾವಿ ಹಾಗೂ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಭೂಮಿಕೆಯ ಸಮ್ಮೇಳನದಲ್ಲಿ ಕಾಯಕ ಮತ್ತು ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ” ಎಂಬುದೇ ಸೇರಿ ಕೊಂಡನು . ಇವನ ಈತನ ವಚನಗಳ ಅಂಕಿತ .

ಈತನ ವಚನಗಳು ಸರಳವಾಗಿದ್ದರೂ ಲೋಕ ನೀತಿ ಮತ್ತು ಸಾಮಾಜಿಕ ಕಳಕಳಿ ಹೊಂದಿ ನೇರ & ನಿಷ್ಠುರ ಪ್ರಕೃತಿ ಪ್ರೇಮಿಯಾದ ಇವನು ಶಿವಾನುಭವ ಪರವಾದ ವಚನಗಳಿದ್ದರೂ ಸಮಾಕಾಲೀನ ಸಮಾಜ ವಿಡಂಬನೆಯ ವ್ಯಾಘ್ರ ದೃಷ್ಟಿ ಬೇರೆಯವರಲ್ಲಿ ವಿರಳವಾಗಿದೆ . ಎಂಬುದನ್ನು ಹೇಳಬಹುದು . ಈತನ ವಚನಗಳಲ್ಲಿ ಮುಖ್ಯವಾಗಿ ಜ್ಞಾನದ ಸ್ವರೂಪ , ಜ್ಞಾನ ಸಂಪಾದನೆಯ ರೀತಿ , ಲಿಂಗ ಪೂಜೆಯ ರೀತಿ ಮನುಷ್ಯರ ವರ್ತನೆ ಇತ್ಯಾದಿಗಳನ್ನು ವಿವರಿಸಲಾಗಿದೆ .

ಈತನು ನ್ಯಾಯ ನಿಷ್ಠರ ದಯಾದಾಕ್ಷಿಣ್ಯ ಪರನಲ್ಲ . ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಟೀಕಿಸದೆ ಬಿಡುವುದಿಲ್ಲ , ಮಾತಿನ ಬಹು ಭಾಗ ಹರಿತವಾದದ್ದು ಇವನ ವಚನಗಳಲ್ಲಿ ಕಂಡುಬರುವ ಸಮಾಜದಲ್ಲಿ ಅವ್ಯವಸ್ಥೆಯ ಚಿತ್ರ ಬೇರೆಯವರಲ್ಲಿ ಇಷ್ಟರ ಮಟ್ಟಿಗೆ ನಮಗೆ ಕಾಣದು . ಮನುಷ್ಯ ಬರೀ ಲೌಖಿಕ ಚಿಂತನೆಯಲ್ಲಿರುವುದರ ಬಗ್ಗೆ ಮುಜುಗರ ನೋವಿನ ದನಿಯನ್ನು ಮತ್ತೆ ಆಸೆಗೆ ಸಿಲುಕಿದವ , ವಿಷಯ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ . “ ಬಡತನಕ್ಕೆ ಉಣ್ಣುವ ಉಡುವ ಚಿಂತೆ , ಉಣ್ಣಲಾದರೆ ಚಿಂತೆ , ಉಡಲಾದರೆ ಇಡುವ ಚಿಂತೆ , ಇಡಲಾದರೆ ಹೆಂಡಿರ ಚಿಂತೆ , ಹೆಂಡಿರಾದರೆ ಮಕ್ಕಳ ಚಿಂತೆ , ಮಕ್ಕಳಾದರೆ ಬದುಕಿನ ಚಿಂತೆ , ಬದುಕಾದರೆ ಕೇಡಿನ ಚಿಂತೆ , ಕೇಡಾದರೆ ಮರಣದ ಚಿಂತೆ ” ಸದಾ ಸಾವಿನ ಚಿಂತೆಯಲ್ಲಿ ಇದ್ದೆವೆ ಹೊರತು ಶಿವನ ಚಿಂತೆಯಲ್ಲಿಲ್ಲವೆಂದು ವ್ಯಾಘ್ರಿಸಿದ್ದಾನೆ .


0 Comments

Leave a Reply

Avatar placeholder

Your email address will not be published. Required fields are marked *