ಲೋಕಸಭೆ ( LOKA SABHA )

LOKA SABHA , ಲೋಕಸಭೆ ,samsatt , loka sabha of india , lok sabha and rajya sabha ,loksabha and rajyasabha, mainpuri lok sabha

LOKA SABHA , ಲೋಕಸಭೆ ,samsatt , loka sabha of india , lok sabha and rajya sabha ,loksabha and rajyasabha, mainpuri lok sabha

ಲೋಕಸಭೆಯು ಸಂಸತ್ತಿನ ಕೆಳಮನೆಯಾಗಿದೆ . ಇದನ್ನು 1954 ರ ಮೊದಲು ` ಹೌಸ್ ಆಫ್ ಪೀಪಲ್ಸ್ ‘ ಎಂದು ಕರೆಯುತ್ತಿದ್ದರು . ಆಗಸ್ಟ್ .23 , 1954 ರಲ್ಲಿ ಹೌಸ್ ಆಫ್ ಪೀಪಲ್ಸ್ ಎಂಬ ಪದವನ್ನು ಬದಲಾಯಿಸಿ ಹಿಂದಿ ಭಾಷೆಯಲ್ಲಿ ‘ ಲೋಕ ಸಭಾ ‘ ಎಂಬ ಪದವನ್ನು ಅಳವಡಿಸಿ ಕೊಳ್ಳಲಾಯಿತು .

ಲೋಕಸಭೆಗೆ ರಾಜ್ಯಗಳ ಮತ ಕ್ಷೇತ್ರಗಳಿಂದ ನೇರ ಚುನಾವಣೆ ಮೂಲಕ ಆರಿಸಿ ಬರುವುದರಿಂದ ಇದನ್ನು ಜನಸಾಮಾನ್ಯರ ಸದನ , ಜನಪ್ರಿಯ ಸದನ ಎನ್ನುವರು .

ಏಕೆಂದರೆ ಇದು ಭಾರತದ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತದೆ . ವಿವಿಧ ದೇಶಗಳಲ್ಲೂ ಕೂಡ ಕೆಳಮನೆಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ .

ಲೋಕಸಭೆ ಸಂರಚನೆ

ವಿಧಿ , 81. ಲೋಕಸಭೆಯ ರಚನೆ  ಲೋಕಸಭೆಯ ಗರಿಷ್ಟ ಸ್ಥಾನಗಳು : 552 ಇರಬೇಕೆಂದು ಭಾರತದ ಸಂವಿಧಾನವು ನಿಗಧಿಪಡಿಸಿದೆ .

552 ಸದಸ್ಯರಲ್ಲಿ 530 ಮಂದಿ ವಿವಿಧ ರಾಜ್ಯಗಳಿಂದ ಮತದಾರರ ಚುನಾವಣೆ ಮೂಲಕ ಆಯ್ಕೆ ಯಾಗಬೇಕೆಂದು ಸಂವಿಧಾನದ 81 ( ಎ ) ವಿಧಿಯು ತಿಳಿಸುತ್ತದೆ .

ಕೇಂದ್ರಾಡಳಿತ ಪ್ರದೇಶಗಳಿಂದ 20 ಮಂದಿ ಆಯ್ಕೆಯಾಗಬೇಕೆಂದು ಸಂವಿಧಾನದ 81 ( ಬಿ ) ನೇ ಉಳಿದ ವಿಧಿ ತಿಳಿಸುತ್ತದೆ . ಲೋಕಸಭೆಯ ಎರಡೂ ಸ್ಥಾನಗಳನ್ನು ಆಂಗ್ಲೋ ಇಂಡಿಯನ್ಸ್‌ಗಳನ್ನು ಸಮುದಾಯದಿಂದ ರಾಷ್ಟ್ರ ಪತಿಗಳು ನಾಮಕರಣ ಮಾಡಬೇಕೆಂದು ತಿಳಿಸುತ್ತದೆ .

ವಿವಿಧ ರಾಜ್ಯಗಳಿಂದ ಲೋಕಸಭೆ ಸ್ಥಾನಗಳು

ದೇಶದ 29 ರಾಜ್ಯಗಳಲ್ಲಿ ಜನಸಂಖ್ಯೆಯ ಆಧರಿಸಿ ಸ್ಥಾನಗಳನ್ನು ನಿಗಧಿಪಡಿಸಲಾಗಿದೆ . ಉತ್ತರ ಪ್ರದೇಶವು ದೇಶದಲ್ಲಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು , 80 ಲೋಕಸಭಾ ಸ್ಥಾನಗಳನ್ನು ಒಳಗೊಂಡಿದೆ .

ಅದೇ ರೀತಿ ಚಿಕ್ಕ ರಾಜ್ಯಗಳು ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದು , ಕಡಿಮೆ ಸ್ಥಾನಗಳನ್ನು ಹೊಂದಿವೆ . ಆದುದ್ದ ರಿಂದ ಲೋಕಸಭಾ ಸ್ಥಾನಗಳನ್ನು ಜನಸಂಖ್ಯೆಯ ಅನುಪಾತದ ಅನುಗುಣವಾಗಿ ಹಂಚಲಾಗಿದೆ .

ಕೆಲವು ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ 3 ರಿಂದ 4 ಲಕ್ಷವಿದ್ದರೆ ಕೆಲವು ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ 10 ಲಕ್ಷ ಇರುವುದನ್ನು ಕಾಣಬಹುದು .

ಸಂವಿಧಾನ ಜಾರಿಗೆ ಬಂದಾಗ ಲೋಕಸಭಾ ಸದಸ್ಯರ ಸಂಖ್ಯೆ 500 ಕ್ಕಿಂತ ಹೆಚ್ಚಿರಬಾರದೆಂದು ನಿಗಧಿಪಡಿಸಿದ್ದರು .

1962 ರಲ್ಲಿ ಕ್ಷೇತ್ರ ಪುನರ್‌ ವಿಂಗಡನಾ ಕಾಯ್ದೆ ಅನುಸಾರ ಲೋಕಸಭೆಯ ಒಟ್ಟು ಸಾನಗಳನ್ನು 520 ಕ್ಕೆ ಹೆಚ್ಚಿಸಲಾಯಿತು .

ಕಾಲಕಾಲಕ್ಕೆ ಜನಗಣತಿ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನು ನಿರ್ಧರಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ 1962 ರ ಕ್ಷೇತ್ರ ಮರು ವಿಂಗಡನಾ ಕಾಯ್ದೆಯು ಅಧಿಕಾರ ನೀಡಿದೆ .

16 ನೇ ಲೋಕಸಭೆಯಲ್ಲಿನ ಆಂಗ್ಲೋ ಇಂಡಿಯನ್ಸ್ ಪ್ರೊ || ರಿಚರ್ಡ್ ಹೇ ಮತ್ತು ಜಾರ್ಜ್‌ಬೇಕರ್ 2015 ಜುಲೈ ನಲ್ಲಿ ಭಾರತದ ರಾಷ್ಟ್ರಪತಿಗಳು 2 ಆಂಗ್ಲೋ ಇಂಡಿಯನ್ಸ್‌ಗಳನ್ನು ಭಾರತದ 16 ನೇ ಲೋಕಸಭೆಗೆ ನಾಮಕರಣ ಮಾಡಿದರು . ಕೇರಳ ಮೂಲದ ರಿಚರ್ಡ್ ಹೈ ಮತ್ತು ಪ . ಬಂಗಾಳದ ಜಾರ್ಜ್‌ಬೇಕರ್‌ ಅವರು ಆಗಸ್ಟ್ 6 , 2015 ರಂದು ಪ್ರಮಾಣವಚನ ಸ್ವೀಕರಿಸಿದರು . ಸಂವಿಧಾನದ 331 ನೇ ವಿಧಿಯನ್ವಯ 2 ಆಂಗ್ಲೋ ಇಂಡಿಯನ್ಸ್‌ನ್ನು ಲೋಕಸಭೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ . (2021

 

ಲೋಕಸಭಾ ಕ್ಷೇತ್ರ ವಿಂಗಡಣೆ

ವಿಧಿ , 82 . ಪ್ರತಿಸಲದ ಜನಗಣತಿಯ ತರುವಾಯ ಮರು ಹೊಂದಾಣಿಕೆ

ಸಂವಿಧಾನದ 82 ನೇ ವಿಧಿಯು ಪ್ರತಿಸಲದ ಜನಗಣತಿಯು ಪೂರೈಸಿದ ಮೇಲೆ , ಲೋಕಸಭೆಯಲ್ಲಿ ಸ್ಥಾನಗಳನ್ನು ರಾಜ್ಯಗಳಿಗೆ ಹಂಚಲು ಪ್ರತಿಯೊಂದು ರಾಜ್ಯವನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಲು ಸಂಸತ್ತು ಮೂಲಕ ನಿರ್ಧರಿಸಬಹುದಾದಂಥ ಸಂಸತ್ತು ಕಾನೂನು ಪ್ರಾಧಿಕಾರವು ನಿರ್ಧರಿಸಬಹುದಾದಂಥ ರೀತಿಯಲ್ಲಿ ಮರು ಹೊಂದಾಣಿಕೆ ಮಾಡಬಹುದಾಗಿದೆ .

ಭಾರತದ ಸಂಸತ್ತು ಈ ಉದ್ದೇಶಕ್ಕಾಗಿ ಕ್ಷೇತ್ರ ಮರುವಿಂಗಡನಾ ಕಾಯ್ದೆಯನ್ನು 1952 , 1962 , 1972 , 2002 ರಲ್ಲಿ ಜಾರಿಗೆ ತಂದು ಕ್ಷೇತ್ರಗಳನ್ನು ಮರು ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸಿತು .

ಸಂಸತ್ ಸದನಗಳ ಅಧಿಕಾರವಧಿ

ವಿಧಿ .83 . ಸಂಸತ್ತಿನ ಸದನಗಳ ಅವಧಿ ರಾಜ್ಯ ಸಭೆಯ ಅಧಿಕಾರವಧಿ ಎರಡು ಇದೊಂದು ಶಾಶ್ವತ ಸದನವಾಗಿದೆ . ಇದು ವಿಸರ್ಜನೆ ಯಾಗುವುದಿಲ್ಲ . ಇದು 1952 ರಲ್ಲಿ ಅಲ್ಲಿಂದಲೂ ವಿಸರ್ಜನೆಗೊಂಡಿಲ್ಲ . ವರ್ಷಗಳಿಗೊಮ್ಮೆ ಮೂರನೇ ಒಂದು ( 1/3 ) ಭಾಗದಷ್ಟು ಸದಸ್ಯರು ನಿವೃತ್ತರಾಗುತ್ತಾರೆ . ಸಂವಿಧಾನದಲ್ಲಿ ರಾಜ್ಯ ಸಭಾ ಸದಸ್ಯರ ಅಧಿಕಾರಾವಧಿಯನ್ನು ನಿಗದಿಪಡಿಸಿಲ್ಲ . ಸಂಸತ್ತಿನ ಪ್ರಜಾಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಅಧಿಕಾರವಧಿ 6 ವರ್ಷಗಳಾಗಿವೆ . ರಾಜ್ಯ ಸಭೆಯಲ್ಲಿ ಮೊದಲ ಎರಡು ವರ್ಷದ ನಂತರ 1 / 3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ . ಆ ಸ್ಥಾನಗಳಿಗೆ ಸಾಧ್ಯವಾದಷ್ಟು ಚುನಾವಣೆಗಳನ್ನು ನಡೆಸಬೇಕಾಗುತ್ತದೆ . ನಂತರದ ಎರಡು ವರ್ಷ ಉಳಿದ 1 / 3 ರಷ್ಟು ಸದಸ್ಯರು ನಿವೃತ್ತರಾಗುತ್ತಾರೆ . ನಂತರದ ಎರಡು ವರ್ಷದಲ್ಲಿ 1/3 ರಷ್ಟು ಜನ ನಿವೃತ್ತರಾಗುತ್ತಾರೆ . ಹೀಗೆ ನಿವೃತ್ತರಾದ ಸ್ಥಾನಕ್ಕೆ ಹೊಸಬರನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾ ಅಥವಾ ನಾಮಕರಣ ಸದಸ್ಯರಾದರೆ ಬೇಗ ನಾಮಕರಣ ಮಾಡುತ್ತಾ ರಾಜ್ಯಸಭೆಯನ್ನು ಶಾಶ್ವತ ಸದನವನ್ನಾಗಿ ಉಳಿಸಿಕೊಳ್ಳಲಾಗಿದೆ . 1952 ರಲ್ಲಿ ಎಲ್ಲಾ ಸ್ಥಾನಗಳನ್ನು ಭರ್ತಿಮಾಡಿ ಮೊದಲ ಎರಡನೇ ವರ್ಷದ ನಂತರ ಅ೦ ದರೆ 1954 ಕ್ಕೆ ಯಾರು ನಿವೃತ್ತರಾಗಬೇಕು ಎಂಬುದನ್ನು , 1956 ಕ್ಕೆ ಯಾರು ನಿವೃತ್ತರಾಗಬೇಕು ಎಂಬುದನ್ನು ಲಾಟರಿ ಎತ್ತಿ ನಿರ್ಧರಿಸಲಾಯಿತು . ಒಬ್ಬ ಸದಸ್ಯನು ಆಕಸ್ಮಿಕವಾಗಿ ನಿಧನರಾದರೆ ಅಥವಾ ಯಾವುದಾದರೂ ನಿವೃತ್ತ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಹೊಸ ಸದಸ್ಯರು ಆಯ್ಕೆಯಾದರೆ ಅವರ ಅಧಿಕಾರವಧಿಯು ಹೊಂದಿದ ಅಥವಾ ಮರಣ ಹೊಂದಿ ತೆರವಾದ ಸ್ಥಾನದ ಉಳಿದ ಅವಧಿಯಾಗಿರುತ್ತದೆ .

 

ಲೋಕಸಭೆ ಅವಧಿ

ಲೋಕಸಭೆಯು ಮೊದಲ ಅಧಿವೇಶನ ಗೊತ್ತು ಮಾಡಿದ ದಿನದಿಂದ 5 ವರ್ಷದ ಅವಧಿಯನ್ನು ಹೊಂದಿರುತ್ತದೆ . ಆದರೆ ಅದಕ್ಕಿಂತ ಹೆಚ್ಚಿನ ಕಾಲ ಮುಂದುವರೆಯುವಂತಿಲ್ಲ ಎಂದು ಸಂವಿಧಾನದ 83 ( 2 ) ನೇ ವಿಧಿ ತಿಳಿಸುತ್ತದೆ . ಕೆಲವೊಮ್ಮೆ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಒಂದು ವರ್ಷದವರೆಗೆ ಲೋಕಸಭಾ ಅವಧಿಯನ್ನು ಹೆಚ್ಚಿಸಬಹುದು . ತುರ್ತು ಪರಿಸ್ಥಿತಿಯನ್ನು ವಜಾಗೊಳಿಸಿದ ನಂತರ 6 ತಿಂಗಳಿಗಿಂತ ಹೆಚ್ಚು ಅವಧಿಗೆ ಲೋಕಸಭೆಯನ್ನು ಹೆಚ್ಚುವರಿ ಅವಧಿಗೆ ವಿಸ್ತರಿಸುವಂತಿಲ್ಲ .ರಾಷ್ಟ್ರಪತಿಗಳು ಲೋಕಸಭೆಯನ್ನು 5 ವರ್ಷದ ಒಳಗೆ ಯಾವುದೇ ಸಂದರ್ಭದಲ್ಲಿ ವಿಸರ್ಜಿಸಬಹುದು . ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ .

5 ನೇ ಲೋಕಸಭೆಯ ಅವಧಿಯನ್ನು 1 ವರ್ಷ ಹೆಚ್ಚಿಸಲಾಗಿದ್ದು ಇದರ ಅವಧಿಯು 1971 ರ ಮಾರ್ಚ್ 15 ರಿಂದ 1976 ರ ಮಾರ್ಚ್ 18 ಕ್ಕೆ ಮುಕ್ತಾಯಗೊಳ್ಳುತ್ತಿತ್ತು . ಆದರೆ , ಇದರ ಅವಧಿಯನ್ನು ಸಂಸತ್ತಿನಲ್ಲಿ The House of the People ( Extension Of Dura tion ) Act , 1976 ತಂದು ವಿಸ್ತರಿಸಲಾಯಿತು . ಈ ಹಿನ್ನೆಲೆಯಲ್ಲಿ 5 ನೇ ಲೋಕಸಭೆಯು 1977 ರ ಜನವರಿ 18 ರವರೆಗೆ ವಿಸ್ತರಿಸಲಾಯಿತು .

ಸಂಸತ್ ಸದಸ್ಯರ ಅರ್ಹತೆ

ವಿಧಿ .84 . ಸಂಸತ್ತಿನ ಸದಸ್ಯತ್ವಕ್ಕೆ ಅರ್ಹತ ರಾಜ್ಯ ಸಭೆಯ ಸದಸ್ಯರಾಗಲು ಅರ್ಹತೆ

ಸಂವಿಧಾನದ 84 ನೇ ವಿಧಿಯು ರಾಜ್ಯ ಸಭಾ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆಗಳನ್ನು ನಿಗಧಿಪಡಿಸಿದೆ .

1 ) ಭಾರತದ ನಾಗರೀಕನಾಗಿರಬೇಕು .

2 ) ಕನಿಷ್ಟ 30 ವರ್ಷ ವಯಸ್ಸಾಗಿರಬೇಕು .

3 ) ಸಂಸತ್ತು ನಿಗಧಿಪಡಿಸಿದ ಆರ್ಹತೆಗಳನ್ನು ಹೊಂದಿರಬೇಕು .

ಲೋಕಸಭೆ ಸದಸ್ಯರಾಗಲು ಅರ್ಹವೆ

ಲೋಕಸಭೆ ಸದಸ್ಯನಾಗಲು ಪ್ರತಿಯೊಬ್ಬ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು .

1 ) ಭಾರತದ ನಾಗರೀಕನಾಗಿರಬೇಕು ಎಂದು 84 ( ಎ ) ನೇ ವಿಧಿ ತಿಳಿಸುತ್ತದೆ .

2 ) ಲೋಕಸಭೆಗೆ ಸ್ಪರ್ಧಿಸಲು ಕನಿಷ್ಟ 25 ವರ್ಷ ಗಳಾಗಿರಬೇಕು ಎಂದು ಸಂವಿಧಾನದ 84 ( ಬಿ ) ನೇ ವಿಧಿ ತಿಳಿಸುತ್ತದೆ .

3 ) ಲೋಕಸಭೆಯು ಕಾನೂನಿನ ಮೂಲಕ ಕಾಲಕಾಲಕ್ಕೆ ನಿಗಧಿಪಡಿಸುವ ಅರ್ಹತೆಗಳನ್ನು ಹೊಂದಿರಬೇಕೆಂದು ಸಂವಿಧಾನದ 84 ( ಸಿ ) ನೇ ವಿಧಿ ತಿಳಿಸುತ್ತದೆ .

ಮೇಲಿನ ಅರ್ಹತೆಗಳೊಂದಿಗೆ 1951 ರ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಈ ಕೆಳಕಂಡ ಅರ್ಹತೆಗಳನ್ನು ನಿಗಧಿಪಡಿಸಿದೆ .

1 ) ದೇಶದ ಯಾವುದಾದರೂ ಒಂದು ಲೋಕಸಭಾ ಕ್ಷೇತ್ರದ ಮತದಾರನಾಗಿರಬೇಕು .

2 ) ಈ ಕಾಯ್ದೆ ಅನ್ವಯ ಧರ್ಮ , ಜಾತಿ , ಭಾಷೆ ಮುಂತಾದ ಆಧಾರದ ಮೇಲೆ ವಿವಿಧ ಜನಾಂಗಗಳಲ್ಲಿ ದ್ವೇಷವನ್ನು ಉಂಟು ಮಾಡುವವರು , ಅಸ್ಪೃಶ್ಯತೆ ಮತ್ತು ಅಪರಾಧಿಗಳೆಂದು ಸಾಭೀತಾದರೆ ಅಂತಹವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ .

ಸಂಸತ್ ಅಧಿವೇಶನ

ವಿಧಿ .85 , ಸಂಸತ್ತಿನ ಅಧಿವೇಶನಗಳು , ಅಧಿವೇಶನದ ಮುಕ್ತಾಯ ಮತ್ತು ವಿಸರ್ಜನೆ ತಿಂಗಳಿಗಿಂತ ರಾಷ್ಟ್ರಪತಿಗಳು ಕಾಲಕಾಲಕ್ಕೆ ಪ್ರತಿ ಸದನವನ್ನು ಅಧಿವೇಶನಕ್ಕಾಗಿ ಕರೆ ನೀಡುತ್ತಾರೆ . ವರ್ಷಕ್ಕೆ ಕನಿಷ್ಟ 2 ಬಾರಿ ಅಧಿವೇಶನ ಕರೆಯುತ್ತಾರೆ . ಒಂದು ಅಧಿವೇಶನಕ್ಕೂ ಮತ್ತೊಂದು ಅಧಿವೇಶನಕ್ಕೂ ಹೆಚ್ಚು ಅವಧಿ ಮೀರುವಂತಿಲ್ಲ . ಸಾಮಾನ್ಯವಾಗಿ ವರ್ಷಕ್ಕೆ 3 ಬಾರಿ ಅಧಿವೇಶನ ಕರೆಯುತ್ತಾರೆ .

ಅಧಿವೇಶನ ಕರೆಯುವ ಅಧಿಕಾರ ರಾಷ್ಟ್ರಪತಿಗೆ ಇದ್ದರೂ ಅಧಿವೇಶನ ಕರೆಯುವುದು ಸರ್ಕಾರವೇ . ಸಂಸದೀಯ ವ್ಯವಹಾರಗಳ ಇಲಾಖೆ ಅಧಿವೇಶನವು ಪ್ರಾರಂಭವಾಗ ಬೇಕಾದ ದಿನಾಂಕವನ್ನು ಹಾಗೂ ಅಧಿವೇಶನದ ಅವಧಿಯನ್ನು ರಾಜ್ಯ ಸಭೆ ಮತ್ತು ಲೋಕಸಭೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ತಿಳಿಸುತ್ತದೆ .

ಆತ್ಮೀಯರೇ …

ನಮ್ಮ samagratv.com ವೆಬ್ಸೈಟ್ ನಲ್ಲಿ  ಭಾರತದ ಸಂವಿಧಾನ ( constitution of india  ),ಭಾರತದ ಇತಿಹಾಸ (indan history),ಕನ್ನಡ ವ್ಯಾಕರಣ , ವಿಜ್ಞಾನ ಹಾಗೂ  KSP ,KPSC ,PSI ,KAS ಪುಸ್ತಕ ನೋಟ್ಸ್ ಸಂಪೂರ್ಣ ವಿವರಣೆ ಇದೆ .

ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ samagratv.com ಟೆಲಿಗ್ರಾಮ್ ಗೆ ಜಾಯಿನ್ ಆಗಿ,ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ .

ಟೆಲಿಗ್ರಾಮ್ ಲಿಂಕ್ 

samagratv.com

ಇತರೆ ವಿಷಯಗಳ ಲಿಂಕ್ 

ಸ್ವಾತಂತ್ರ್ಯದ ಹಕ್ಕು

ಶೋಷಣೆ ವಿರುದ್ಧದ ಹಕ್ಕು

ಬಾಲಕಾರ್ಮಿಕ ನಿಷೇಧ

ಕೇಂದ್ರಮಂತ್ರಿ ಮಂಡಲ

ಅಟಾರ್ನಿ ಜನರಲ್

ರಾಜ್ಯ ಸಭೆ

 


0 Comments

Leave a Reply

Avatar placeholder

Your email address will not be published. Required fields are marked *